ಸಹಕಾರಿರಂಗದಲ್ಲಿ ಯುವಕರ ಕೊರತೆ. ಶ್ರೀ. ರಾಧಾಕೃಷ್ಣ ಕೋಟೆ

 

ಜನರಿಂದ ಸ್ವಯಂಪ್ರೇರಿತ ರಚನೆˌ ಸ್ವಾಯತ್ತಾ ವ್ಯವಸ್ಥೆ ಸಹಕಾರಿ ರಂಗದ ಮೂಲಉದ್ದೇಶ.ಜಗತ್ತಿನಲ್ಲಿ ಬಂಡವಾಳವಾದˌ ನೌಕರಶಾಹಿ ಜನರಿಗೆ ಹಿತವಾಗದೇ ಇದ್ದಾಗ ತಮ್ಮದೇ ತತ್ವ ಸಿದ್ದಾಂತದ ವ್ಯವಸ್ಥೆಯನ್ನು ಬಯಸಿದ ನಾಗರಿಕರು ಸಹಕಾರಿತತ್ವವನ್ನು ಹುಟ್ಟು ಹಾಕಿದರು. ಆರಂಭದಲ್ಲಿ ಯಾವುದೇ ಸರಕಾರೀ ಕಾನೂನುಗಳು ಸಹಕಾರಕ್ಕೆ ಇರಲಿಲ್ಲ. 1904ರ ತನಕವು ಸಹಕಾರ ದೇಶದ ಆಡಳಿತ ವ್ಯವಸ್ಥೆಯಲ್ಲಿ ಇರಲಿಲ್ಲ. ಜಗತ್ತಿನ ಬೇರೆ ದೇಶಗಳ ಸಹಕಾರದ ಪ್ರಗತಿಯನ್ನು ಕಂಡ ಅಂದಿನ ಬ್ರಿಟಿಷ್ ಸರಕಾರ ಇದಕ್ಕೊಂದು ಕಾನೂನು ಚೌಕಟ್ಟನ್ನು ರೂಪಿಸಿ ಬಲವರ್ಧನೆಗೆ ನಾಂದಿಹಾಡಿತು. ಅಂದಿನ ಸಹಕಾರದ ಪ್ರಸರಣˌ ಬೆಳವಣಿಗೆ ದೃಷ್ಟಿಯಿಂದ ಸಹಕಾರಿ ಕಾಯ್ದೆ ಅವಶ್ಯಕತೆಯಿತ್ತು.ˌ ಅದೇ ರೀತಿ ಹಂತಹಂತವಾಗಿ ಸಹಕಾರ ದೇಶದ ಅಷ್ಟ ಬಾಹುಗಳತ್ತ ಸಾಗಲು ಕಾನೂನು ಪೂರಕವಾಯಿತು. ಅಂದಿನಿಂದ ಇಂದಿನ ತನಕ ಬಲವರ್ಧನೆಗಾಗಿ ಕಾನೂನು ಬದಲಾವಣೆಯಾಗುತ್ತಾ ಸಾಗಿದೆ.

ಒಂದು ಶತಮಾನದ ಕಾಲ ಸಾಗಿದ ಸಹಕಾರಕ್ಕೆ ಯುವಕರು ಪ್ರಬಲ ಧ್ವನಿ ಯಾಗಿದ್ದರು.ಬಹುಪಾಲು ಯುವಕರು ಹಳ್ಳಿ ಯ ಕೃಷಿ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ನಗರದ ಯುವಕರು ಸಣ್ಣ ಪುಟ್ಟ ಉದ್ಯಮ ಅಥವಾ ವ್ಯಾಪಾರದಲ್ಲಿ ಜೀವನ ಸಾಗಿಸುತ್ತಿದ್ದರು. ಅಂತಹ ಕಾಲಘಟ್ಟದಲ್ಲಿ ಬಹಳ ಷ್ಟು ಯುವಕರು ಸಹಕಾರದಲ್ಲಿ ವಿಶೇಷ ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಿದ್ದರು.

ಕಳೆದ 25_30 ವರ್ಷಗಳ ಇತಿಹಾಸದಲ್ಲಿ ಯುವಜನಾಂಗ ಉನ್ನತ ಶಿಕ್ಷಣದತ್ತ ಗಮನ ಹರಿಸಿ ಹೆಚ್ಚು ಆದಾಯ ತರುವ ಉದ್ಯೋಗವನ್ನು ಅರಸಲಾರಂಭಿಸಿದರು. ಹಿಂದೆ ಉನ್ನತ ಶಿಕ್ಷಣ ಅಂದರೆ ಮೆಡಿಕಲ್, ಸಿವಿಲ್, ಮೆಕ್ಯಾನಿಕಲ್, ,ಇಲೆಕ್ಟ್ರಿಕಲ್ ಇತ್ಯಾದಿ ಇಂಜಿನಿಯರಿಂಗ್ ಮಾತ್ರ ಸೀಮೀತವಾಗಿದ್ದು ಹಳ್ಳಿಯ ಯುವಕರು ಅಧ್ಯಯನದಲ್ಲಿ ಪ್ರತಿಭಾವಂತರಾಗಿದ್ದಲ್ಲಿ ಮಾತ್ರ ಉನ್ನತ ಶಿಕ್ಷಣ ಪಡೆದು ನಗರದತ್ತ ಸಾಗಿ ಉದ್ಯೋಗದಲ್ಲಿ ತೊಡಗಿದರೆ ಸಹಕಾರದತ್ತ ಗಮನ ನೀಡಲಾಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ಹಳ್ಳಿಯಲ್ಲಿ ಉಳಿದ ಯುವಕರು ಒಂದಷ್ಟು ಸಹಕಾರದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂದಿನ

ದಿನಗಳಲ್ಲಿ, ಪದವಿ ಶಿಕ್ಷಣ,ಉನ್ನತ ಪದವಿ ಹೊಂದಿದ ಸೀಮೀತ ಪ್ರಮಾಣದ ಯುವಕರು ಸಹಕಾರ ಸಂಘಗಳ ಉದ್ಯೋಗಾಕಾಂಕ್ಷೆಯಿಂದ ಸಹಕಾರದ ಬಾಗಿಲು ತಟ್ಟುತ್ತಾರೆ. ಆದರೆ ಅವರಿಗೆ ಉದ್ಯೋಗ ಲಭಿಸಿದರೂ ಮಾರ್ಗದರ್ಶನ,ತರಬೇತಿಯ ಕೊರತೆಯಿಂದಾಗಿ ಸಹಕಾರ ಸಂಘಗಳು ಸಮಾಜಕ್ಕೆ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ. ಇದಕ್ಕೆ ಆಡಳಿತ ಮಂಡಳಿಯಲ್ಲಿರುವ ಹಿರಿಯ ತಲೆಮಾರಿನ ವಯೋಸಹಜವಾದ ನಿಷ್ಕ್ರೀಯತೆಯು ಕಾರಣಗಳಲ್ಲೊಂದು.

ಸಾಪ್ಟವೇರ್ ಇಂಜಿನಿಯರಿಂಗ್,ಡಿಜಿಟಲ್ ಯುಗ ಬಂದ ಬಳಿಕ ಹೆಚ್ಚಿನ ಯುವಕರು ನಗರದ ಉದ್ಯೋಗ ದತ್ತ ಸಾಗಿ ಹಳ್ಳಿ ಯ ಯುವ ಸಮುದಾಯದ ಸಂಖ್ಯೆ ಬಹಳಷ್ಟು ಕಡಿಮೆ ಯಾಗಿದೆ. ಹಳ್ಳಿ ಯಲ್ಲಿ ವಾಸ್ತವ್ಯ ಇದ್ದರೂ ಸಹಕಾರದ ಗುಣಮಟ್ಟ ಕುಸಿದ ಕಾರಣ ಅದರದತ್ತ ಗಮನ ಹರಿಸುತ್ತಿಲ್ಲ. ಸಹಕಾರದಲ್ಲಿ ರಾಜಕೀಯದ ಲೇಪ, ಭ್ರಷ್ಟತೆ ಹಳ್ಳಿ ಯಲ್ಲಿ ಅಳಿದುಳಿದ ಸ್ವಚ್ಛ ಮನಸಿನ ಯುವಕರು ಅದರಿಂದ ದೂರ ಸರಿಯುವಂತೆ ಮಾಡಿದೆ.ಒಂದು ವೇಳೆ ತೊಡಗಿಸುವ ಮನಸ್ಸಿದ್ದರೂ ರಾಜಕೀಯ ಪಕ್ಷಗಳಿಂದ ದೂರವಿರುವವರಿಗೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಪ್ರವೇಶಿಸಲು ಅವಕಾಶ ದೊರೆಯುವುದಿಲ್ಲ.

ಯುವಕರು ಸಹಕಾರಕ್ಕೆ ಬನ್ನಿ ಅನ್ನುವ ಕರೆ ಎಲ್ಲಾ ವೇದಿಕೆ ಗಳಿಂದ ಕೇಳಿ ಬರುತ್ತಿದೆ. ಇಂತಹ ಕರೆಗಳು ವೇದಿಕೆಗೆ ಸೀಮೀತವಾಗಿದ್ದು ಕರೆ ನೀಡಿದವರು ಮೂರು- ನಾಲ್ಕು ದಶಕಗಳಿಂದ ಸಹಕಾರ ಸಂಘದ ಸ್ಥಾನ ದಲ್ಲಿ ಇದ್ದರೂ ಅತಿಯಾದ ಸ್ವಹಿತಾಸಕ್ತಿ ಯಿಂದಾಗಿ ಯುವಕರಿಗೆ ಬಿಟ್ಟು ಕೊಡಲು ಸಿದ್ದರಿಲ್ಲ. ಇಂದು ರಿಸರ್ವ್ ಬ್ಯಾಂಕು ಆಪ್ ಇಂಡಿಯಾ ಬ್ಯಾಂಕಿಂಗ್ ಸಹಕಾರ ಸಂಘದಲ್ಲಿ ಹತ್ತು ವರ್ಷ ಕ್ಕಿಂತ ಮೇಲ್ಪಟ್ಟು ನಿರ್ದೇಶಕ ನಾಗಿದ್ದವ ಸ್ಥಾನ ತೆರವು ಗೊಳಿಸಬೇಕೆಂಬ ನಿಯಮ ಜ್ಯಾರಿಗೆ ತಂದರೂ ಅಂತಹವರು ಆ ನಿಯಮ ಪಾಲಿಸಲು ಸ್ಪಂದಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ

ಮುಂದಿನ ದಿನಗಳಲ್ಲಿ ಸಹಕಾರ ಉಳಿದು ಮುಂದೆ ಯಶಸ್ವಿಯಾಗಿ ಮುನ್ನಡೆಯಲು ಯುವ ಜನಾಂಗ ಪ್ರವೇಶಿಸಲೇ ಬೇಕು. ಹಿರಿಯ ತಲೆಮಾರು ಹಲವರು ಅಲ್ಲಿ ಇದ್ದರೆ ವಯೋಸಹಜತೆಯಿಂದ ಹುರುಪಿನ ಶಕ್ತಿಯ ಕೊರತೆ ಎದ್ದು ಕಾಣುವುದು ಸ್ವಾಭಾವಿಕ. ಇದರಿಂದ ಸಮಾಜದ ಅತೀ ಅವಶ್ಯಕತೆಯ ಈ ರಂಗ ದುರ್ಬಲವಾಗುವುದರಲ್ಲಿ ಸಂಶಯವಿಲ್ಲ.ಸಹಕಾರ ರಂಗ ನಿಂತ ನೀರಾಗಬಾರದು. ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಬಂದಾಗ ಸಹಕಾರ ನಿರಂತರ ಬೆಳವಣಿಗೆ ಕಾಣಬಹುದು. ಪಂಚಾಯತ್, ಶಾಲೆ

ಸಹಕಾರ ಗ್ರಾಮೀಣ ಅಭಿವೃದ್ಧಿ ಯಲ್ಲಿ ಪ್ರಮುಖ ಕೇಂದ್ರಬಿಂದುಗಳು. ಖಾಸಗಿ ಶಾಲೆಗಳ ಆಕರ್ಷಣೆ, ಸರಕಾರದ ನಿರ್ಲಕ್ಷ್ಯ ದಿಂದಾಗಿ ಹಲವಾರು ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುಗಡೆಯ ಹಂತ ತಲಪಿವೆ. ಅದೇ ರೀತಿ ಸಹಕಾರಿ ರಂಗದಲ್ಲಿ ಯುವ ಜನಾಂಗದ ಆಸಕ್ತಿ ಕುಂದಿದರೆ ಸಹಕಾರ ವು ನಷ್ಟದ ಹಾದಿ ಹಿಡಿದು ಮುಚ್ಚುಗಡೆಯ ಚಿತ್ರಣ ಕಂಡಲ್ಲಿ ಆಶ್ಚರ್ಯ ವಿಲ್ಲ.

 

ರಾಧಾಕೃಷ್ಣ ಕೋಟೆ

ಅಂಚೆ, ಕಳಂಜ, ಸುಳ್ಯ, ದ., ಕ. 574212

9448503424

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More