ಸಹಕಾರ ಕ್ಷೇತ್ರ ಭಾರತದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಇಲ್ಲಿಯ ಜೀವನ ಪದ್ಧತಿ, ಅವಿಭಕ್ತ ಕುಟುಂಬದ ಒಳಗಿನ ಕೆಲಸಗಳ ವಿಂಗಡಣೆ ಮತ್ತು ಸಹಜೀವನದ ಶ್ರೇಷ್ಠತೆ, ಹಳ್ಳಿಗಳಲ್ಲಿ ಇಂದೂ ಇರುವ ಕೊಡುಕೊಳ್ಳುವಿಕೆಯ ಬಾಂಧವ್ಯ ಇವೆಲ್ಲ ಸಹಕಾರ ತತ್ವದ ಮಾನಬಿಂದುಗಳು. ಭಾರತದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಯ ಹಿಂದೆ ಸಹಕಾರದ ಕೊಡುಗೆಯೇ ಅತಿ ದೊಡ್ಡದು. “ಆಡು ಮುಟ್ಟದ ಸೊಪ್ಪಿಲ್ಲ” ಎಂದಂತೆ ಸಹಕಾರಿ ಕ್ಷೇತ್ರವಿಂದು “ ತೊಟ್ಟಿಲಿನಿಂದ ಚಟ್ಟದ ತನಕ” ವ್ಯಾಪಿಸಿದೆ. ದೇಶದ ಕೊಟ್ಟ ಕೊನೆಯ ವ್ಯಕ್ತಿ ತನಕ ಸಹಕಾರಿ ಕ್ಷೇತ್ರ
ಸಹಕಾರ ಸಂಘ ಒಂದು ಸಂಘಟನೆ. ಅದರಲ್ಲಿ ಸಂಘಟಕರ ಪಾತ್ರ ಅತಿ ಮುಖ್ಯ. ಸಂಘ ಎಂದರೆ ಹೊಂದಿಕೆ, ಸಂಯೋಗ , ಜೋಡಣಿ , ಇದೇ ಈ ದಿನದ ಸಹಕಾರ ಸಂಘಗಳ ಮುಂದಿರುವ ಅಥವ ನೂತನ ಸಹಕಾರ ಸಂಘಗಳ ಸ್ಥಾಪನೆಗೆ ಸವಾಲಾಗಿದೆಯೇ ? ಎಂಬ ಪ್ರಶ್ನೆ ಈ ದಿನಗಳಲ್ಲಿ ಅತೀವವಾಗಿ ಕಾಡುತ್ತಿದೆ. ಸಹಕಾರ ಸಂಘಗಳು ‘ಸ್ವಾಯತ್ತ , ಸ್ವಾತಂತ್ರ್ಯ , ಪ್ರಜಾಸತ್ತಾತ್ಮಕ ಆಡಳಿತವಳ್ಳ ಸಂಸ್ಥೆಗಳು, ಇವುಗಳ ಪ್ರಮುಖ ಉದ್ದೇಶ ಸದಸ್ಯರ ಆಸೆ , ಆಕಾಂಕ್ಷೆ , ನಿರೀಕ್ಷೆಗಳ ಪೂರೈಕೆ. ಇದರ
“ದೇಶದ ಜನಸಂಖ್ಯೆಯ ಶೇ.20ರಷ್ಟು ಸಹಕಾರಿಗಳಿರುವ ಕ್ಷೇತ್ರಕ್ಕೆ ಯುನಿವರ್ಸಿಟಿಯ ಅಗತ್ಯ: ಒಂದು ಚಿಂತನೆ” ಕೃಷಿ, ಗ್ರಾಮೀಣ ಅಭಿವೃದ್ಧಿಯಂತಹ ಚಟುವಟಿಕೆಗಳಲ್ಲಿ ತಳಮಟ್ಟದಲ್ಲೇ ಬೇರೂರಿರುವ ಸಹಕಾರ ಕ್ಷೇತ್ರ ಭಾರತದ ಆರ್ಥಿಕತೆಯ ಬಹುಪಾಲು ಅಂಶವನ್ನು ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಸಹಕಾರ ಕ್ಷೇತ್ರ ವ್ಯಾಪಿಸದ ಜಾಗವೇ ಇಲ್ಲ. ಕೃಷಿ, ಹಾಲು, ರಸಗೊಬ್ಬರ, ಗ್ರಾಮೀಣ ಚಟುವಟಿಕೆಗಳು, ಗುಡಿ ಕೈಗಾರಿಕೆ, ವಿದ್ಯಾರ್ಥಿ, ಉದ್ಯೋಗ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಸಹಕಾರ ಕ್ಷೇತ್ರ ಹರಡಿಕೊಂಡಿದೆ. ಆದರೆ ಇಂಥ
ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ. ವಿಶ್ವದ ಸಹಕಾರ ಚಳುವಳಿಗೆ 175 ವರ್ಷಗಳ ಇತಿಹಾಸ. ನಮ್ಮ ದೇಶದ ಸಹಕಾರ ಚಳುವಳಿಗೆ 105 ವರ್ಷಗಳ ಇತಿಹಾಸ. ಕಳೆದ 66 ವರ್ಷಗಳಿಂದ ರಾಷ್ಟ್ರೀಯ ಸಹಕಾರ ಯೂನಿಯನ್ ನವದೇಹಲಿಯಿವರ ಮಾರ್ಗದರ್ಶದಲ್ಲಿ ಸಹಕಾರ ಸಪ್ತಾಹವನ್ನು ಆಚರಿಸುತ್ತ, ಸಾರ್ವಜನಿಕರಿಗೆ, ಸಹಕಾರಿಗಳಿಗೆ ಮತ್ತು ಸರಕಾರಗಳಿಗೆ ಸಹಕಾರ ಕ್ಷೇತ್ರದ ಸಾಧನೆ, ಪ್ರಗತಿ, ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ತಿಳಿಯಪಡಿಸುವ ಕಾರ್ಯವನ್ನು ನಿರ್ವಹಿಸುತ್ತ ಬಂದಿದೆ. ಸಹಕಾರ ಸಂಸ್ಥೆಗಳು ಉತ್ತಮ
ಭಾರತ ಸರ್ಕಾರದಿಂದ ನಿಶ್ಚಿತ ಬಂಡವಾಳಕ್ಕೆ ನಿಶ್ಚಿಂತೆಯ ಭದ್ರ ಬುನಾದಿ. ಮೊದಲನೆಯದಾಗಿ ಇನ್ನು ಮುಂದೆ ಕೋ-ಆಪರೇಟಿವ್ ಬ್ಯಾಂಕುಗಳು ಕೂಡ ಜನಸಾಮಾನ್ಯರಿಂದ ಬಂಡವಾಳವನ್ನು ನಿಶ್ಚಿತ ಅವಧಿಗೆ Debentures ಡಿಬೆಂಚರ್ ಮುಖೇನ ಪಡೆದುಕೊಳ್ಳಬಹುದು.Fixed Deposit – ಫಿಕ್ಸೆಡ್ ಡಿಪಾಸಿಟ್ ಹಾಗೂ Debentures – ಡಿಬೆಂಚರುಗಳಿಗೆ ಇರುವ ಮೂಲ ವ್ಯತ್ಯಾಸವೇನೆಂದರೆ, ಫಿಕ್ಸೆಡ್ ಡಿಪಾಸಿಟ್-ನಲ್ಲಿ ಗ್ರಾಹಕ ಯಾವಾಗಬೇಕಾದರೂ ಡಿಪಾಸಿಟ್ ಹಣವನ್ನು ವಾಪಾಸು ಪಡೆದುಕೊಳ್ಳಬಹುದು, ಆದರೆ ಡಿಬೆಂಚರ್-ಗಳಲ್ಲಿ ನಿಶ್ಚಿತ ಮತ್ತು ಸೀಮಿತ ಅವಧಿಗೆ ಮುನ್ನ ಹಣವನ್ನ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ. ಇದರಲ್ಲೂ ಕೂಡಾ Convertible Debentures
ಬ್ಯಾಂಕುಗಳ ಕುಸ್ತಿ ಕಾಳಗದಲ್ಲಿ – ತಂತ್ರಜ್ಞಾನದ ಕಾಣದ ಪಟುಗಳು ಈ ಪೇಮೆಂಟ್ ಬ್ಯಾಂಕುಗಳಿಗೂ ಮೀರಿ ಮತ್ತೊಂದು ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದೆ ಹಾಗೂ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಫಿನ್ ಟೆಕ್ ಕಂಪೆನಿಗಳು ಅಥವಾ ಫೈನಾನ್ಸಿಯಲ್ ಟೆಕ್ನಾಲಜಜೀಸ್ ಎಂಬ ಕಂಪನಿಗಳ ಮುಖೇನ ಸೇವೆಯನ್ನಾಗಲಿ ಅಥವಾ ಕಾರ್ಯವನ್ನಾಗಲಿ ನಿರ್ವಹಿಸುತ್ತಾ ಸೇವೆಯನ್ನು ನೀಡುತ್ತಿದೆ.ಇವುಗಳನ್ನು ನಿಯೋ ಬ್ಯಾಂಕ್ – NEO Bank ಎಂದು ಕರೆಯುತ್ತಾರೆ. ಈ ನಿಯೋ ಬ್ಯಾಂಕುಗಳು ಹಣಕಾಸು ಸೇವಾ ಕ್ಷೇತ್ರದ ವಹಿವಾಟು ಸಂಸ್ಥೆಗಳಾಗಿದ್ದು ಇವುಗಳು ಸೇವೆಗಳನ್ನು ಇಂಟರ್ನೆಟ್ ತಂತ್ರಜ್ಞಾನ, ಡಿಜಿಟಲ್
ಹಿನ್ನೋಟ – ಮುನ್ನುಡಿ ಸಹಕಾರ ಕ್ಷೇತ್ರದಲ್ಲಿ ಅರವತ್ತರ ದಶಕದ ಆರಂಭ ಒಂದು ಹೊಸ ಪರ್ವದ ಆರಂಭಕ್ಕೆ ನಾಂದಿಯಾಯಿತು. ಸಹಕಾರಿ ಕ್ಷೇತ್ರಕ್ಕೆ ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಕರಡು ನಿಯಮಗಳನ್ನು ಭಾರತೀಯತೆಗೆ ತಕ್ಕ ಹಾಗೆ ರೂಪಿಸಿ ಪರಿಪೂರ್ಣ ಬಲವನ್ನು ನೀಡಿದಂತಹ ಸಂದರ್ಭ. ಸಹಕಾರ ಕ್ಷೇತ್ರಕ್ಕೆ ಪೂರಕವಾದ ಕಾನೂನು ನಿಯಮಾವಳಿಗಳು ಭಾರತದ ಮಧ್ಯಮವರ್ಗದ ಜನರಿಗೆ ಮಕರ ಸಂಕ್ರಾಂತಿಯ ಸೂರ್ಯನು ತನ್ನ ಪಥವನ್ನು ಬದಲಿಸಿದಂತೆ ಅನಿಸಿದ ಕ್ಷಣ. ಅಲ್ಲಿಯವರೆಗೂ ಬ್ಯಾಂಕುಗಳು ಕೇವಲ ಶ್ರೀಮಂತರಿಗೆ ಮಾತ್ರ, ಮಧ್ಯಮವರ್ಗದವರಿಗೆ ಮತ್ತು ಬಡಜನರಿಗೆ ಅದು ಗಗನ
‘ಸಹಕಾರ ದಿಂದ ಸಮೃದ್ಧಿ ‘ ಎಂಬುದು ಭಾರತ ಸರ್ಕಾರದ ಸಹಕಾರ ಇಲಾಖೆಯ ಧ್ಯೆಯ ವ್ಯಾಕ್ಯ . ಸಹಕಾರ ಮಾರ್ಗ ಆರ್ಥಿಕ ಅಭ್ಯುದಯ ಅಷ್ಟೇ ಅಲ್ಲದೆ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ. ಭಾರತ 2047 ಕ್ಕೆ ಸ್ವಾತಂತ್ಯದ ಶತಮಾನೋತ್ಸವ ಆಚರಿಸಲಿದೆ. ಅಷ್ಟರಲ್ಲಿ ವಿಶ್ವದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಮ್ಮ ಈಗಿನ ಆರ್ಥಿಕತೆ 3.4 ಟ್ರಿಲಿಯನ್ ಡಾಲರ್ ರ್ಆರ್ಥಿಕತೆ ಇದ್ದು ಅದು 30 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪ ಬೇಕೆಂಬುದು ಇದರ ಸದಾಶಯ. ಭಾರತದ ಪ್ರತಿ ಪ್ರಜೆಗೂ ಮೂಲಭೂತ
ನಮ್ಮ ದೇಶದಲ್ಲಿ ಸಹಕಾರ ಸಪ್ತಾಹವನ್ನು ಕಳೆದ 70 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.70 ವರ್ಷಗಳ ಹಿಂದೆ ರಾಷ್ಟ್ರೀಯ ಸಹಕಾರಿ ಯೂನಿಯನ್ ಸೂಚನೆ ಮೇರೆಗೆ ನವಂಬರ್ ತಿಂಗಳ ಪ್ರಥಮ ಶನಿವಾರವನ್ನು ಸಹಕಾರಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿತ್ತು. ಬಳಿಕ ಪ್ರತಿ ವರ್ಷ ನವಂಬರ್ 14ರಿಂದ ನವಂಬರ 20 ರ ತನಕ ಸಪ್ತಾಹವನ್ನು ದೇಶದಾದ್ಯಂತ ಆಚರಿಸಿಕೊಂಡು ಬರುತ್ತಿರುವುದು ಪದ್ದತಿ.ಅಂತರಾಷ್ಟ್ರೀಯ ಸಹಕಾರಿ ಮೈತ್ರಿ ಕೂಟ(ICA) ಸಹಕಾರಿ ಸಪ್ತಾಹದ ಪರಿಕಲ್ಪನೆಯನ್ನು ಜ್ಯಾರಿಗೆ ತಂದಿತು.ಮಾಜಿ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರೂರವರು ಸಹಕಾರಕ್ಕೆ ನೀಡಿದ ಪ್ರೋತ್ಸಾಹದ ದ್ಯೋತಕವಾಗಿ ಅವರ
ಭಾಗ – ೨ ಸಂಘದ ಒಳಗೆ ಕೆಲಸ ಆರಂಭ ಆದ ನಂತರ ಪರಸ್ಪರ ಹಾಳು ಹರಟೆ ಇರಬಾರದು. ಶಿಸ್ತು ಪ್ರತಿಯೊಂದು ನಡೆಯಲ್ಲಿ ನುಡಿಯಲ್ಲಿ ಕಾಣುತ್ತಿರಬೇಕು. ಹಾಗೆಂದು ಗಂಭೀರವಾಗಿರಬೇಕೆಂದಲ್ಲ. ಯಾವುದು ಎಲ್ಲಿ ಹೇಗೆ ಇರಬೇಕೊ ಹಾಗಿರಬೇಕು. ಸದಾ ವ್ಯವಹಾರ ನಡೆಸುತ್ತಿರುವ ಸದಸ್ಯರು ಬಂದಾಗ ಕೆಲಸ ಬದಿಗಿಟ್ಟು ಮಾತಾಡಿ. ಅಂತಹ ಸದಸ್ಯರೆ ಸಂಘದ ಆಸ್ತಿ ಎಂಬುದು ನಮಗೆ ನೆನಪಿರಬೇಕು. ಸಾಲ ಪಡೆದು ಸಮಯಕ್ಕೆ ಮರುಪಾವತಿ ಮಾಡುವವರು ಬಂದಾಗ, ಠೇವಣಿದಾರರು ಬಂದಾಗ ಅಂತಹ ಸದಸ್ಯರಿಗೆ ನಮ್ಮ ಗಮನ ಹೆಚ್ಚು ಕೊಡಬೇಕು. ಕಸಗಳ