ಸಹಕಾರಿ ಚಳುವಳಿ ಎಂಬುದು ಜನರನ್ನು ಒಟ್ಟಿಗೆ ಉತ್ಪಾದಿಸಲು,ಖರೀದಿಸಲು,ಮಾರಾಟ ಮಾಡಲು ಮತ್ತು ಅದರ ಲಾಭವನ್ನು ಹಂಚಿಕೊಳ್ಳಲು ಉತ್ತೇಜನ ನೀಡುವ ಗುರಿ ಯನ್ನು ಹೊಂದಿರುವ “ಅಂತರಾಷ್ಟ್ರೀಯ ಆಂದೋಲನ “.
ಈ ಅಂತಾರಾಷ್ಟ್ರೀಯ ಆಂದೋಲನ ಭಾರತದಲ್ಲಿ ಸುಮಾರು 19 ನೇ ಶತಮಾನದಲ್ಲಿ ಜಾರಿಯಾಗಿ, ಅಂದಿನಿಂದ ಇಂದಿನವರೆಗೂ ಅನೇಕ ಏಳು ಬೀಳುಗಳನ್ನು ಕಂಡು ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಯುಗವನ್ನೇ ಪ್ರಾರಂಭಿಸಿತು. ಹಾಗಾದರೆ, ಈ ಮಾಹಿತಿ ಯುಗದಲ್ಲಿ ಸಹಕಾರಿ ಚಳುವಳಿಯ ಅಭಿವೃದ್ಧಿ ಮಾಹಿತಿ ತಂತ್ರಜ್ಞಾನದಿಂದ ಹೇಗೆ ಸಾಧ್ಯ ಎಂದು ಗಮನಹರಿಸಿದರೆ, ಈ ಮಾಹಿತಿ ತಂತ್ರಜ್ಞಾನವೆಂಬುವುದು ಸಹಕಾರಿ ಚಳುವಳಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಮಾಹಿತಿ ತಂತ್ರಜ್ಞಾನವು ಉತ್ತಮ ನಿರ್ವಹಣೆ, ಉತ್ತಮ ಆಡಳಿತ ಮತ್ತು ಉತ್ತಮ ಸಂವಹನೆಯ ಮೂಲಕ ಸಾಹಕಾರಿ ಚಳುವಳಿಯ ಅಭಿವೃದ್ಧಿ ಮಾತ್ರವಲ್ಲದೆ ಹೊಸ ಸಹಕಾರಿ ಸಂಘಗಳನ್ನು ಸೃಷ್ಟಿಸುವಲ್ಲೂ ಸಫಲವಾಗಿದೆ.
•ಈ ಸಹಕಾರಯುತ ಜೀವನ ಪ್ರತಿಯೊಬ್ಬರ ಬದುಕಿನ ಮೂಲಭೂತ ಅಂಶ, ಇದು ಒಗ್ಗಟ್ಟು, ಸ್ವಾವಲಂಬನೆ, ಪರಸ್ಪರ ಸಹಾಯ,ಪ್ರಜಾಪ್ರಭುತ್ವವನ್ನು ಪ್ರತಿಬಿಂಬಿಸುವ ಕೈಗನ್ನಡಿಯಾಗಿದೆ.
•ಇದರಿಂದ ಬಡತನ ನಿರ್ಮೂಲನೆ, ಸಾಮಾಜಿಕ ಅಭಿವೃದ್ಧಿ, ಜ್ಞಾನಾಭಿವ್ರದ್ಧಿ ಹೀಗೆ ಅನೇಕ ವಿಚಾರಗಳನ್ನವು ಬಹಳ ಸುಲಭವಾಗಿ ಸಾಧಿಸಬಹುದು.
•ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಜನರ ನಡುವಿನ ಸಂಪರ್ಕ ಹೆಚ್ಚಿ, ತಮ್ಮಲ್ಲಿರುವ ವಿಚಾರಗಳನ್ನು ಅನುಭವಗಳನ್ನು, ಹಲವಾರು ಜನರಿಗೆ ತಲುಪಿಸಬಹುದು.
ಉದಾಹರಣೆಗೆ ಕೃಷಿ ಸಹಕಾರಿ ವ್ಯವಸ್ಥೆಯಲ್ಲಿ ಈ ಮಾಹಿತಿ ತಂತ್ರಜ್ಞಾನದಿಂದ ರೈತರು ಮಾರುಕಟ್ಟೆಯ ವಿಷಯಗಳನ್ನು, ತಾಂತ್ರಿಕ ತರಬೇತಿಗಳನ್ನು, ಕೃಷಿ ಆಡಳಿತ ವಿಚಾರಗಳನ್ನು ಆಯಾ ಕಾಲಕ್ಕೆ ಅನುಗುಣವಾಗಿ ತಿಳಿದುಕೊಳ್ಳಬಹುದು. ಇದಲ್ಲದೆ ನಮ್ಮ ಸಮಾಜದಲ್ಲಿರುವ ರೈತ ಸಹಕಾರಿ ಸಂಘಗಳು ರೈತರ ಅದಾ ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿಯೂ ಈ ತಂತ್ರಜ್ಞಾನವೆಂಬುದು ಸಹಕಾರಿಯಾಗಿದೆ.
” ಗಣಕೀಕ್ರತ ಲೆಕ್ಕಪತ್ರ ನಿರ್ವಹಣೆ, ದಾಖಲೆಗಳ ನಿರ್ವಹಣೆ ” ಸಹಕಾರಿ ಸಂಘಗಳ ಜವಾಬ್ದಾರಿ, ಪಾರದರ್ಶಕತೆ ಯನ್ನೂ ಹೆಚ್ಚಿಸಿ ಹೆಚ್ಚು ಜನರನ್ನು ತಮ್ಮೆಡೆಗೆ ಸೆಳೆಯುವುದರಲ್ಲಿಯೂ ಯಶಸ್ವಿಯಾಗಿದೆ. ಹಾಗಾಗಿ ಈ ಸಹಕಾರಿ ಚಳುವಳಿಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಪ್ರಭಾವದ ಪರಿಶೀಲನೆ ನಡೆಸಿದರೆ…
ಕೀನ್ಯ ದೇಶದಲ್ಲಿ MMT( Mobile phone based Money Transfer)ಯ ಮೂಲಕ ರೈತರು ತಮ್ಮ ಕೃಷಿಗಾಗಿ ಬಂಡವಾಳದ ಮೊತ್ತವನ್ನು ಪಡೆಯಲು ಸಾಧ್ಯವಾಗಿದೆ.
ಭಾರತದಲ್ಲಿಯೂ ಕೂಡ ಸ್ವಯಂ ಉದ್ಯೋಗಿ ಮಹಿಳಾ ಸಂಘ( SEWA)ಗಳ ಮೂಲಕ ಸಮುದಾಯ ಸಂಘಗಳನ್ನು ಸ್ಥಾಪಿಸಿ, ಜನರಿಗೆ ತಾಂತ್ರಿಕ ತರಬೇತಿ, ಕೌಶಲ್ಯಭಿವೃದ್ಧಿ ತರಬೇತಿ ಹೀಗೆ ಅನೇಕ ರೀತಿಯಲ್ಲಿ ಸಹಾಯಕವಾಗಿರುವುದು ಹೆಮ್ಮೆಯ ಸಂಗತಿ. ಇದರ ಜೊತೆಗೆ ಭಾರತದಲ್ಲಿ IFFCO ಮತ್ತು Airtel ನ ಜಂಟಿ ಆಶ್ರಯದಲ್ಲಿ ಹಸಿರು ಸಿಮ್ ಕಾರ್ಡ್ ಗಳನ್ನು ನೀಡಿ ಗ್ರಾಮೀಣ ಜನರಿಗೆ ಧ್ವನಿ ಆಧಾರಿತ ಕೃಷಿ ಮಾಹಿತಿಯನ್ನು ಒದಗಿಸುತ್ತದೆ. ಹೀಗಾಗಿ ಮಾಹಿತಿ ತಂತ್ರಜ್ಞಾನದಿಂದ ಯಾವುದೇ ಒಂದು ಮಾಹಿತಿಯಾದರೂ ಸರಿ ಮನೆ ಮನೆಗೂ ತಲುಪಿ ಜನರ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಲ್ಲೂ ಮಹತ್ತರ ಪಾತ್ರ ವಹಿಸುತ್ತಿರುವುದು ಸಹಕಾರಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.
ಭಕ್ತಿಶ್ರೀ
First year B.Sc agriculture
University of agricultural science, GKVK Bangalore.