ಸ್ವಾಭಿಮಾನದ ಕಿಚ್ಚು-ಛತ್ರಪತಿ ಶಿವಾಜಿ ಮಹಾರಾಜ್.| ಶ್ರೀಮತಿ.ಸವಿತ ಎನ್ ಇ.

ನಮ್ಮ ಭಾರತ ದೇಶದ ಇತಿಹಾಸದ ವೀರಾಧಿವೀರ ಮತ್ತು ಶೂರಾಧಿಶೂರರ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರು ಅಗ್ರಪಂತಿಯಲ್ಲಿ ಕಾಣಸಿಗುತ್ತದೆ. ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಜನ ಮಾನಸವಲ್ಲದೇ ಅನೇಕ ಇತಿಹಾಸಕಾರರು ಇದನ್ನೇ ನಮೂದಿಸಿದ್ದಾರೆ. ಇಡೀ ದೇಶ ಮುಸಲ್ಮಾನರ ಆಕ್ರಮಣಕ್ಕೆ ಒಳಗಾಗಿದ್ದಾಗ ಬಹುಸಂಖ್ಯಾತ ಹಿಂದೂಗಳ ಪರವಾಗಿ ಮಹಾರಾಷ್ಟ್ರದಲ್ಲಿ ಸ್ವಸಾಮರ್ಥ್ಯದಿಂದ ತನ್ನ ಹದಿನಾರನೇಯ ವಯಸ್ಸಿನಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ, ಬಹುಶಃ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನಾಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರು ಹಿಂದೂಗಳ ಹೃದಯದಲ್ಲಿ ಶಾಶ್ವತವಾಗಿ ಸಾಮ್ರಾಟರೆನಿಸಿಕೊಂಡರು. ಹಿಂದೂ ದಿನಚರಿಯ ಪ್ರಕಾರ ಅವರ ಹುಟ್ಟಿದ್ದು ಇಂದಿಗೆ 390 ವರ್ಷಗಳ ಹಿಂದೆ 1630 ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಕೃಷ್ಣಪಕ್ಷದ ತೃತೀಯದಂದು. ಅಂತಹ ಪ್ರಾತಃಸ್ಮರಣೀಯರನ್ನು ಮತ್ತು ಹಿಂದೂ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳನ್ನು ನೆನಪಿಸಿಕೊಡುವ ಸಣ್ಣ ಪ್ರಯತ್ನ.

ವಿಶ್ವದ ಇತಿಹಾಸದ ಶ್ರೇಷ್ಠ ಸಂಘಟಕರಲ್ಲಿ ಶಿವಾಜಿ ಮಹಾರಾಜರೂ ಒಬ್ಬರೆಂದೇ ಪರಿಗಣಿಸಲಾಗಿದೆ. ಮರಾಠರನ್ನು ಪ್ರಬಲ ರಾಷ್ಟ್ರ ಪ್ರೇಮಿಗಳನ್ನಾಗಿ ಎತ್ತಿ ಕಟ್ಟಿದ ವ್ಯಕ್ತಿ . ಆತ ಅತ್ಯುತ್ತಮ ಮಿಲಿಟರಿ ತಂತ್ರಜ್ಞ, ಗೆರಿಲ್ಲ ಯುದ್ಧದಲ್ಲಿ ಚಾಣಾಕ್ಷ , ನುರಿತ ರಾಜತಾಂತ್ರಿಕ ಮತ್ತು ಪ್ರಬುದ್ಧ ಆಡಳಿತಗಾರ. ತನ್ನ ಶತ್ರುಗಳನ್ನು ತನ್ನ ವಿರುದ್ಧ ಒಗ್ಗೂಡಿಸಲು ಅವನೆಂದಿಗೂ ಬಿಡಲೇ ಇಲ್ಲ . ರಾಜತಾಂತ್ರಿಕತೆಯ ಕಾರಣದಿಂದ ಅವನು ತನ್ನ ತಂದೆಯನ್ನು ಬಿಜಾಪುರದ ಸುಲ್ತಾನನಿಂದ ಮುಕ್ತಗೊಳಿಸಿದವನು. ಅಂದಿನ ಕಾಲದಲ್ಲಿ ಪ್ರಭಲನಾಗಿದ್ದ ಮತ್ತು ಶಿವಾಜಿಯ ಪ್ರಮುಖ ಶತ್ರುವಾಗಿದ್ದ ಔರಂಗಜೇಬನಂತಹವನೇ ಶಿವಾಜಿಯ ಶೌರ್ಯವನ್ನು ಪ್ರಶಂಸಿಸುತ್ತಿದ್ದ ಎಂದರೆ ಅವನ ಸಾಮರ್ಥ್ಯ ಹೇಗಿತ್ತು ಎಂಬುದರ ಅರಿವಾಗುತ್ತದೆ ಸತತ ಹತ್ತೊಂಬತ್ತು ವರ್ಷಗಳಿಂದ ಶಿವಾಜಿಯ ವಿರುದ್ಧ ಕಾದಾಡಿದರೂ ಶಿವಾಜಿಯನ್ನು ಆತ ಬಗ್ಗು ಬಡಿಯಲಾಗಲೇ ಇಲ್ಲ. ಅದಕ್ಕೆ ತದ್ವಿರುದ್ಧವಾಗಿ ಶಿವಾಜಿಯು ತನ್ನ ರಾಜ್ಯದ ಗಡಿಯನ್ನು ವಿಸ್ತರಿಸುತ್ತಲೇ ಬಂದಿದ್ದ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ನಗರದ ಬಳಿ ಶಹಾಜಿ ಭೋಸಲೆ ಮತ್ತು ಜೀಜಾಬಾಯಿ ದಂಪತಿಗಳ ಮುದ್ದಿನ ಮಗನಾಗಿ ಶಿವಾಜಿ ಫಲ್ಗುಣ ಮಾಸದ ಕೃಷ್ಣ ಪಕ್ಷದ ತೃತೀಯ ವಿಕ್ರಮ ಸಂವತ್ಸರ 1686ದಂದು ಜನಿಸಿದರು.

ಶಿವಾಜಿಯು ಮೂಲತಃ ಮರಾಠಿಗನಾದರೂ, ಶಿವಾಜಿಗೂ ಬೆಂಗಳೂರಿಗೂ ಬಹಳ ನಂಟಿತ್ತು ಎಂಬುದು ನಿಜಕ್ಕೂ ಅಚ್ಚರಿಯ ವಿಷಯವೇ ಸರಿ. ಶಿವಾಜಿಯ ತಂದೆ ಷಹಾಜೀ ಬೋಂಸ್ಲೆ ಬಿಜಾಪುರದ ಸುಲ್ತಾನರ ಬಳಿ ಅಧಿಕಾರಿಯಾಗಿ 1632ರಲ್ಲಿ ಬೆಂಗಳೂರಿಗೆ ವರ್ಗವಾಗಿ ಬರುತ್ತಾರೆ ಮತ್ತು ಸುಮಾರು 25 ವರ್ಷಗಳಷ್ಟು ವರ್ಷ ಇಲ್ಲೇ ಇರುತ್ತಾರೆ ಹಾಗಾಗಿ ಶಿವಾಜಿಯೂ ಸಹಾ ಅನೇಕ ಬಾರಿ ಬೆಂಗಳೂರಿಗೆ ಬಂದಿರುತ್ತಾರೆ. ಅವರ ಬಾಲ್ಯಾದ ಶಸ್ತ್ರಾಭ್ಯಾಸವೂ ಇಲ್ಲಿಯೇ ನೆಡೆದಿತ್ತು ಮತ್ತು ಬೆಂಗಳೂರಿನ ಇಂದಿನ ಚಿಕ್ಕ‌ಪೇಟೆ ಪ್ರದೇಶದ ಗೌರಿ ಮಹಲ್ ಅರಮನೆಯಲ್ಲಿಯೇ 12 ವರ್ಷದ ಶಿವಾಜಿಯ ಮದುವೆ ಸಹೀಬಾಯಿ ಎಂಬುವರೊಂದಿಗೆ ವಿವಾಹವೂ ಅಯಿತು. ಇಂದಿನ ಚಿಕ್ಕಪೇಟೆಯ ವಿಜಯಲಕ್ಷ್ಮೀ ಚಿತ್ರಮಂದಿರವೇ ಆ ಗೌರಿ ಅರಮನೆಯಾಗಿತ್ತು ಎನ್ನುತ್ತಾರೆ ಇತಿಹಾಸಕಾರರು.

ಶಿವಾಜಿ ಕೆಲವು ವರ್ಷ ಬೆಂಗಳೂರಿನಲ್ಲಿಯೂ ಇದ್ದರು. ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ನಂತರ ಇಂದಿನ ಕರ್ನಾಟಕದಲ್ಲಿನ ಕೆಲವು ಪ್ರದೇಶವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಕನ್ನಡವೂ ಬರುತ್ತಿದ್ದ ಕಾರಣ, ಅವರು ಚಲಾವಣೆಗೆ ತಂದ ನಾಣ್ಯಕ್ಕೆ ಹೊನ್ನ ಮತ್ತು ಕೃಷಿಕರನ್ನು ರಯತ್ ಎಂದೇ ಕರೆಯುತ್ತಿದ್ದರು. . ಬೆಂಗಳೂರಿನಲ್ಲಿ ಗೌರಿಮಹಲ್, ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಗೋಸಾಯಿ ಮಠ ಮತ್ತು ಕಾಡುಮಲ್ಲೇಶ್ವರ ದೇವಸ್ಥಾನ ಇವೆಲ್ಲದರ ನಿರ್ಮಾಣಕ್ಕೆ ಶಿವಾಜಿ ಮಹಾರಾಜರ ಸಹಾಯವಿದೆ.

ಚಿಕ್ಕಂದಿನಿಂದಲೇ ಶಿವಾಜಿ ಬಹಳ ಚುರಾಗಿದ್ದ ಹುಡುಗನಾಗಿದ್ದ ಕಾರಣ ಅವರ ತಾಯಿ ಜೀಜಾಬಾಯಿಯವರು ಆತನಿಗೆ ಸಕಲ ರೀತಿಯ ಧಾರ್ಮಿಕ ವಿದ್ಯಾಭ್ಯಾಸಗಳಿಗೆ ಒತ್ತಿ ನೀಡುತ್ತಾ ವೀರ ಸಾಹಸಿಗರ ಶೌರ್ಯ ಪ್ರತಾಪಗಳ ಕಥೆಗಳನ್ನು ಹೇಳುತ್ತಾ ಶಿವಾಜಿಯಲ್ಲಿ ಧರ್ಮ ಮತ್ತು ದೇಶ ಪ್ರೇಮವನ್ನು ತುಂಬುತ್ತಾಳೆ.ಆದಕ್ಕೆ ತಕ್ಕಂತೆ ಆತನಿಗೆ ದಾದಾಜಿ ಕೊಂಡ ದೇವ ಅಂತಹವರು ಆತನ ಯುದ್ಧ ತರಬೇತಿಯ ಪ್ರಾಥಮಿಕ ತರಬೇತುದಾರರಾದ ಮೇಲಂತೂ ಶಿವಾಜಿಯ ಯುದ್ದ ಕಲೆಗಳು, ಕ್ಷಾತ್ರ ತೇಜಗಳು ಮತ್ತಷ್ಟೂ ಪ್ರಭಲವಾಗುತ್ತದೆ ಮತ್ತು ಪ್ರಖರವಾಗುತ್ತದೆ. ಶಿವಾಜಿಯವರ ತಂದೆ ಶಹಾಜಿ ಮಜೋಲಿ ಭೋಸಲೆ ಯವರು ಬಿಜಾಪುರದ ಆದಿಲ್ ಶಾಹಿ ನಿಜಾಮರ ಸಾಮಂತರಾಗಿದ್ದು ಕೊಂಡು ಪುಣೆಯ ಜಹಾಂಗೇರಿ, ಬರಾಹ್ ಮಾವಲ್ ಪ್ರಾಂತ್ಯದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ತಮ್ಮ ತಂದೆಯವರ ಈ ರೀತಿಯ ದಾಸ್ಯವನ್ನು ಒಪ್ಪದ ಶಿವಾಜಿ ತನ್ನ ಶಿವಾಜಿ ತನ್ನ ಮಾವಲ್ ಸ್ನೇಹಿತರೊಂದಿಗೆ ಸಹ್ಯಾದ್ರಿ ಶ್ರೇಣಿಯ ಬೆಟ್ಟಗಳು ಮತ್ತು ಕಾಡುಗಳಲ್ಲಿ ಪ್ರಯಾಣಿಸಿ, ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿಕೊಂಡು 1645 ರಲ್ಲಿ, ಕೇವಲ 15 ವರ್ಷದ ಶಿವಾಜಿ, ಬಿಜಾಪುರಿ ಕಮಾಂಡರ್ ಇನಾಯತ್ ಖಾನ್ ಅವರಿಂದ ತೋರಣ ಗಡವನ್ನು ಕಸಿದು ಕೊಳ್ಳುವ ಮೂಲಕ ತನ್ನದೇ ಆದ ಸ್ವತಂತ್ರ್ಯ ಹಿಂದೂ ರಾಷ್ಟ್ರವನ್ನು ಕಟ್ಟುವುದರಲ್ಲಿ ಮುಂದಾದನು.

ಶಿವಾಜಿಯ ಉದ್ಧಟತನವನ್ನು ತಾಳಲಾರದ ಚಿಜಾಪುರದ ಸುಲ್ತಾನ ತನ್ನಲ್ಲಿ ಸಾಮಂತನಾಗಿದ್ದ ಶಿವಾಜಿಯ ತಂದೆಯನ್ನು 1648 ರ ಜುಲೈ 25 ರಂದು ಘೋರ್ಪಡೆ ಜೈಲಿನಲ್ಲಿ ಬಂಧಿಸಿ ಸುಮಾರು ಒಂದು ವರ್ಷಗಳ ನಂತರ 1649 ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಹಾಗೆ ಬಿಡುಗಡೆಯಾದ ಷಹಾಜೀ ಬೋಂಸ್ಲೆಯವರು ತಮ್ಮ ಸಾರ್ವಜನಿಕ ಜೀವನದಿಂದ ನಿವೃತ್ತರಾಗಿ ನಂತರ 1665ರಲ್ಲಿ ಬೇಟೆಯ ಅಪಘಾತ ಒಂದರಲ್ಲಿ ನಿಧನರಾದರು. ತಂದೆಯವರ ಮರಣಾನಂತರ ಶಿವಾಜಿ ಮತ್ತಷ್ಟು ಚುರುಕಾಗಿ ಸದ್ದಿಲ್ಲದೆ ತನ್ನ ಸೈನ್ಯದ ಶಕ್ತಿಯನ್ನು ಬಲಪಡಿಸಿ ಶತ್ರುಗಳ ಮೇಲೆ ಮತ್ತೆ ದಾಳಿಯನ್ನು ಪ್ರಾರಂಭಿಸಿ, 1656 ರಲ್ಲಿ, ಬಿಜಾಪುರದ ಸಹ ಮರಾಠಾ ಊಳಿಗಮಾನ್ಯನಾದ ಚಂದ್ರರಾವ್ ಮೋರ್ನನ್ನು ಕೊಂದು, ಇಂದಿನ ಮಹಾಬಲೇಶ್ವರ ಬಳಿಯ ಜಾವಲಿ ಕಣಿವೆಯನ್ನು ಅವನಿಂದ ವಶಪಡಿಸಿಕೊಂಡನು. ಈ ಸೋಲಿಗೆ ಆದಿಲ್‌ಶಾ ಅಸಮಾಧಾನಗೊಂಡು ಶಿವಾಜಿಯನ್ನು ಬಂಧಿಸಲು ಇಲ್ಲವೇ ಸಾಧ್ಯವಾದರೇ ಅವನನ್ನು ಮುಗಿಸಿಯೇ ಬಿಡಲು ತನ್ನ ಅನುಭವಿ ಜನರಲ್ ಅಫ್ಜಲ್ ಖಾನ್‌ನನ್ನು ಕಳುಹಿಸಿದನು.

ಹಾಗೆ ದಂಡೆತ್ತಿ ಬಂದ ಅಘ್ಜಲ್, ಶಿವಾಜಿಯ ಕುಟುಂಬಕ್ಕೆ ಪವಿತ್ರವಾದ ತುಳಜಾ ಭವಾನಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಲ್ಲದೇ ಪಂಡರಾಪುರದ ವಿಠೋಬಾ ದೇವಸ್ಥಾನ ಮತ್ತು ಶಿವಾಜಿಯ ಪ್ರತಾಪಗಡ್ ಕೋಟೆಗೆ ಹಿಮ್ಮೆಟ್ಟಿದನು. ಸುಮಾರು ಎರಡು ತಿಂಗಳುಗಳ ಕಾಲ ಕೋಟೆಯನ್ನು ಸುತ್ತುವರಿದ ನಂತರ ಶಿವಾಜಿ ಸಂಧಾನಕ್ಕಾಗಿ ತನ್ನ ದೂತನೊಬ್ಬನನ್ನು ಅಫ್ಜಲ್ ಖಾನ್ ಬಳಿಗೆ ಕಳುಹಿಸುತ್ತಾನೆ, ಪ್ರತಾಪಗಡ್ ನ ತಪ್ಪಲಿನಲ್ಲಿರುವ ಶಾಮಿಯಾನದಲ್ಲಿ ಶಿವಾಜಿ ಮಹಾರಾಜ್ ಮತ್ತು ಅಫ್ಜಲ್ ಖಾನ್ ನಡುವೆ ಸಭೆ ಏರ್ಪಡಿಸಿ ಅವರಿಬ್ಬರೂ ತಲಾ ಹತ್ತು ವೈಯಕ್ತಿಕ ಅಂಗರಕ್ಷಕರನ್ನು ಮಾತ್ರ ಕರೆ ತರಬೇಕೆಂದು ಅವರೆಲ್ಲರೂ ನಿಶಸ್ತ್ರಧಾರಿಗಳಾಗಿರವೇಕೆಂದು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದ್ಯಾಗ್ಯೂ ವಿಶ್ವಾಸಘಾತುಕತನಕ್ಕೆ ಪ್ರಸ್ತಿದ್ಧನಾದ ಅಫ್ಜಲ್ ಖಾನ್ ತನ್ನ ಕೋಟ್‌ನಲ್ಲಿ ಕಟ್ಯಾರ್ (ಸಣ್ಣ ಬಾಕು) ವನ್ನು ಮರೆಮಾಚಿ ಇಟ್ಟುಕೊಂಡಿರುತ್ತಾನೆ. ಇದಕ್ಕೆ ಪ್ರತಿಯಾಗಿ ಶಿವಾಜಿಯೂ ತನ್ನ ಬಟ್ಟೆಯ ಒಳಗೆ ರಕ್ಷಾಕವಚವನ್ನು ಧರಿಸಿ, ಒಂದು ಕೈಯಲ್ಲಿ ಮರೆಮಾಚುವ ವಾಘ ನಖಾವನ್ನು ಹಿಡಿದು ಕೊಂಡು ಬಂದಿರುತ್ತಾನೆ.

ಅವರಿಬ್ಬರೂ ಆ ಗುಡಾರದೊಳಗೆ ಬಂದಾಗ 6 ಅಡಿ 7 ಇಂಚು ಎತ್ತರದ ದೈತ್ಯ ಅಫ್ಜಲ್ ಸಾಧಾರಣ ಎತ್ತರದ ಶಿವಾಜಿಯನ್ನು ಸ್ನೇಹದ ಪ್ರತೀಕವಾಗಿ ಅಪ್ಪಿಕೊಳ್ಳುತ್ತಾರೆ . ಸಂದರ್ಭದಲ್ಲಿ ದುತರಾಷ್ಟ್ರಾಲಿಂಗನದಂತೆ ದೈತ್ಯ ಕಾಯ ಅಪ್ಜಲ್, ಕೃಶಕಾಯ ಶಿವಾಜಿಯನ್ನು ತನ್ನ ಹಿಡಿತದಿಂದ ಬಂಧಿಸಿ ಮತ್ತೊಂದು ಕೈಯಿಂದ ಅಡಗಿಸಿಟ್ತು ಕೊಂಡಿದ್ದ ಬಾಕುವಿನಿಂದ ಶಿವಾಜಿಯನ್ನು ಬೆನ್ನಿಗೆ ಇರಿಯಲು ಪ್ರಯತ್ನಿಸುತ್ತಾನೆ. ಆದರೆ ಮಂಜಾಗೃತಾ ಕ್ರಮವಾಗಿ ಬಟ್ಟೆಯ ಒಳಗೆ ಧರಿಸಿದ್ದ ರಕ್ಷಾಕವಚವು ಅವನ ಪ್ರಾಣವನ್ನು ಉಳಿಸಿದರೆ, ಇದಕ್ಕೆ ಪ್ರತೀಕಾರದಂತೆ ಶಿವಾಜಿಯೂ ಸಹಾ ತನ್ನ ಕೈಯಲ್ಲಿದ್ದ ವಾಘಾ ನಖದಿಂದ (ಲೋಹದಿಂದ ಮಾಡಿದ ಹುಲಿ ಉಗುರಿನಂತಹ ಆಯುಧ) ಅಫ್ಜಲ್ ಖಾನಿನ ಹೊಟ್ಟೆಯನ್ನು ಸೀಳಿಬಿಡುತ್ತಾನೆ. ನಂತರ ತನ್ನ ಭಟರಾದ ಸಂಭಾಜಿ ಕಾವ್ಜಿ ಕೊಂಧಲ್ಕರ್ ಮುಖಾಂತರ ಅಫ್ಜಲ್ ಖಾನ್ ಶಿರಚ್ಛೇದನ ಮಾಡಿ ಅವನ ರುಂಡವನ್ನು ಸೆರೆಯಲ್ಲಿದ್ದ ತಂದೆಯನ್ನು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದರ ಪ್ರತೀಕಾರವಾಗಿ ಶಿವಾಜಿಯ ತಾಯಿ ಜಿಜಾಬಾಯಿಗೆ ತೋರಿಸಲು ರಾಜ್ಗಡ್ಗೆ ಕಳುಹಿಸಲಾಯಿತು. ಹೀಗೆ ತಮ್ಮ ನಾಯಕನ ಹತ್ಯೆಯಾಗುತ್ತಿದ್ದಂತೆ ಆದಿಲ್‌ಶಾಹಿ ಪಡೆಗಳೂ ದಿಕ್ಕಾಪಾಲಾಗಿ ಚೆಲ್ಲಾಪಿಲ್ಲಿಯಾವುದರ ಮೂಲಕ ಶಿವಾಜಿ ಯುಕ್ತಿಯಿಂದ ತನ್ನ ಶತೃಗಳನ್ನು ಧಮನ ಮಾಡುತ್ತಾನೆ.

ಭಾರತದಲ್ಲಿ ಡಚ್ ಮತ್ತು ಪೋರ್ಚುಗೀಸರು ತಮ್ಮ ನೌಕಾಬಲದ ಮೂಲಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದದ್ದನ್ನು ಗುರುತಿಸಿದ ಶಿವಾಜಿ ಮಹಾರಾಜರು 5ನೇ ಡಿಸೆಂಬರ್ 1664ರಲ್ಲಿ ಕೊಂಕಣ ಸಮುದ್ರದಲ್ಲಿ ಸಿಂಧುದುರ್ಗ ಸ್ಥಾಪನೆಮಾಡಿ ನೌಕಾಪಡೆಗಳನ್ನು ಸ್ಥಾಪಿಸಿ ತಮ್ಮ ಸೈನಿಕರಿಗೆ ಸೂಕ್ತ ತರಭೇತಿಗಳನ್ನು ನೀಡುವ ಮೂಲಕ ಭಾರತದ ಕಡಲ ಶಕ್ತಿಯನ್ನು ಹೆಚ್ಚಿಸುವಂತೆ ಮಾಡಿದ್ದಲ್ಲದೇ ಅದಕ್ಕೆ ಪೂರಕವಾಗಿ ವಿಜಯ ದುರ್ಗ, ಸುವರ್ಣದುರ್ಗ, ಕಲ್ಯಾಣ್ ಮುಂತಾದ ಕೋಟೆಗಳನ್ನು ನಿರ್ಮಿಸುವ ಮೂಲಕ ಕಡಲ ತೀರ ಪ್ರದೇಶವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.ಇವು ಮರಾಠ ನೌಕಾದಳಕ್ಕೆ ರಕ್ಷಣೆ ಕೊಡಲು ಮತ್ತು ಶತ್ರುಗಳ ದಾಳಿ ಸಮುದ್ರದ ಮೂಲಕ ಹಿಮ್ಮೆಟ್ಟಿಸಲು ಸಹಾಯಕವಾಗಿತ್ತು. ಕೊಂಕಣದ ಪ್ರಮುಖ ಬಂದರಾಗಿದ್ದ ಬಸ್ರೂರಿನ ಮೇಲೆ ಧಾಳಿ ಮಾಡಿ ಅದನ್ನು ವಶಪಡಿಸಿಕೊಳ್ಳುತ್ತಾರೆ.

ಹೀಗೆ ನೌಕಾದಳದಲ್ಲಿ ತಮ್ಮ ಸಾಮಥ್ಯವನ್ನು ಹೆಚ್ಚಿಸಿಕೊಂಡು 1664 ರಲ್ಲಿಯೇ ಶಿವಾಜಿ ಮೊಘಲ್ ವ್ಯಾಪಾರ ಕೇಂದ್ರವಾದ ಬಂದರು ನಗರ ಸೂರತ್ ಅನ್ನು ವಶ ಪಡಿಸಿಕೊಳ್ಳುತ್ತಾನೆ. ಇದರಿಂದ ಕೋಪೋದ್ರಿಕ್ತನಾದ ಔರಂಗಜೇಬ್ ಶಿವಾಜಿಯನ್ನು ಬಗ್ಗು ಬಡಿಯಲು ರಜಪೂತ ಮಿರ್ಜಾ ರಾಜ ಜೈ ಸಿಂಗ್ ರನ್ನು ಸುಮಾರು 15,000 ಸೈನ್ಯದೊಂದಿಗೆ ಕಳುಹಿಸಿಕೊಡುತ್ತಾನಾದರೂ ಶಿವಾಜಿಯ ಸೈನ್ಯದ ಮಂದೆ ಅವರ ಆಟವೇನು ನಡೆಯಲಿಲ್ಲ. ಅದಕ್ಕಾಗಿ 1666 ರಲ್ಲಿ, ಔರಂಗಜೇಬ್ ಶಿವಾಜಿಯನ್ನು ತನ್ನ ನ್ಯಾಯಾಲಯಕ್ಕೆ ಕರೆಸಿಕೊಂಡು ಅನಾಗರೀಕವಾಗಿ ಶಿವಾಜಿಯನ್ನು ಬಂಧಿಸಿ ಆಗ್ರಾದ ಕೊತ್ವಾಲ್ ಫೌಲಾದ್ ಖಾನ್ ಅವರ ಕಾವಲಿನಲ್ಲಿ ಗೃಹಬಂಧನದಲ್ಲಿ ಇರಿಸುತ್ತಾನಾದರೂ ಬುದ್ದಿವಂತ ಶಿವಾಜಿ ತನ್ನ ಚಾಕಚಕ್ಯತೆಗಳಿಂದ ಹಣ್ಣುಗಳ ಬುಟ್ಟಿಯೊಳಗೆ ಅಡಗಿಟ್ಟು ಕೊಂಡು ಆಗ್ರಾದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. 1670 ರಲ್ಲಿ ಎರಡನೇ ಬಾರಿಗೆ ಸೂರತ್‌ನನ್ನು ವಶಪಡಿಸಿಕೊಳ್ಳುತ್ತಾನೆ.

 

ಅಧಿಕೃತವಾಗಿ ಮಹಾರಾಜ ಪಟ್ಟಾಭಿಷೇಕವಾದ ನಂತರ 1674 ರಿಂದ ಶಿವಾಜಿಯ ದಂಡು ಆಕ್ರಮಣಕಾರಿ ಅಭಿಯಾನವನ್ನು ಕೈಗೊಂಡು , ದಕ್ಷಿಣ ಭಾರತವನ್ನು ಪರಕೀಯರ ಆಕ್ರಮಣದಿಂದ ರಕ್ಷಿಸಬೇಕಾದದ್ದು ತನ್ನ ಕರ್ತವ್ಯ ಎಂದು ಭಾವಿಸಿ ಶಿವಾಜಿ ವೆಲ್ಲೂರು ಮತ್ತು ಜಿಂಗೀ ಕೋಟೆಗಳನ್ನು ವಶಪಡಿಸಿಕೊಂಡರು. ಇಷ್ಟೆಲ್ಲಾ ತೀವ್ರತರನಾದ ಸತತವಾದ ಧಾಳಿಗಳಲ್ಲಿಯೇ ನಿರತನಾಗಿದ್ದ ಶಿವಾಜಿ ಮಹಾರಾಜ ತಮ್ಮ 52 ನೇ ವಯಸ್ಸಿನಲ್ಲಿ 1680 ಏಪ್ರಿಲ್ 3 ರಂದು ರಾಯ್ ಗಢದಲ್ಲಿ ವಿಷಮ ಜ್ವರ ಮತ್ತು ಭೇದಿಯ ಕಾರಣದಿಂದಾಗಿ ನಿಧನ ಹೊಂದುತ್ತಾರೆ.

ಶಿವಾಜಿಯ ನಂತರ ಅವರ ಮಕ್ಕಳಾದ ಅದ್ಭುತ ಹೋರಾಟಗಾರ ವೀರ ಸಾಂಬಾಜಿ (ಲಿಂಕ್ ಮೇಲೆ ಕ್ಲಿಕ್ ಮಾಡಿ) ಮತ್ತು ರಾಜಾರಾಂ ತಂದೆಯಂತೆಯೇ ಕ್ಷಾತ್ರ ತೇಜರಾಗಿದ್ದು ಹಿಂದವೀ ರಾಷ್ಟ್ರವನ್ನು ಮುಂದುವರೆಸಿ ಕೊಂಡು ಹೋಗುವುದರಲ್ಲಿ ಸಫಲರಾಗಿ ಹಿಂದೂಸ್ಥಾನದಲ್ಲಿ ಹಿಂದೂಗಳೂ ತಲೆಯೆತ್ತಿ ನಿಲ್ಲುವಂತಹ ಪರಿಸ್ಥಿತಿಯನ್ನು ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

ಬ್ರಿಟಿಷರ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ನಮ್ಮ ಅನೇಕ ಸ್ವಾತಂತ್ಯ್ರ ಹೋರಾಟಗಾರರಿಗೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆಯಾಗಿತ್ತು ಆತನ ಸಾಹಸಗಾಥೆಯ ಕುರಿತಂತೆ ಜನಮಾನಸದಲ್ಲಿ ಪ್ರಚಲಿತವಾಗಿದ್ದ ಲಾವಣಿಗಳು ಮತ್ತು ಜಾನಪದ ಗೀತೆಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಒಂದು ಗೂಡಿಸುವುದರಲ್ಲಿ ಸಹಕಾರಿಯಾಗಿದ್ದವು. ಲಕ್ಷಾಂತರ ಜನರ ಎದೆಯಲ್ಲಿ ಸ್ವಾಭಿಮಾನದ ಕಿಚ್ಚನ್ನು ಹರಿಸಿದೆ.

ಸವಿತ ಎನ್ ಇ.
ಬೆಂಗಳೂರು
6360269205

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More