
ಕಿರು ಹಣಕಾಸು ಈಗ ಸುದ್ದಿಯಲ್ಲಿದೆ. ಸುದ್ದಿಯಾಗಲು ಕಾರಣ , ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು ಮತ್ತು ಸಂಸ್ಥೆಗಳು ಸಾಲ ವಸೂಲಾತಿಗೆ ಅನುಸರಿಸುತ್ತಿರುವ ಬಲವಂತದ ಕ್ರಮಗಳು. ಇದುವರೆಗೆ ಕರ್ನಾಟಕದಲ್ಲಿ ಕಂಡರಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಆಂಧ್ರಪದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಸಂಸ್ಥೆಗಳು ಲಾಭವನ್ನೇ ಗುರಿಯಾಗಿಸಿಕೊಂಡು ಕಾರ್ಯವೆಸಗುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಅತಿಯಾಗಿ ವಿಧಿಸುವ ಬಡ್ಡಿದ್ದರ , ಸಾಲ ಪಡೆಯುವ ಶಕ್ತಿ ಮಿಾರಿ ಬಲವಂತದ ಅತಿ ಹೆಚ್ಚಿನ ಸಾಲವಿತರಣೆ. ಸಾಲ ಬಳಕೆಯ ಉದ್ದೇಶ ಉತ್ಪಾದಕತೆಯಲ್ಲಿ ತೊಡಗದಿರುವುದು. ಈ ಕಾರಣಗಳಿಂದ ಸಾಲಗಾರರು ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾಲ ಮರುಪಾವತಿಸಿದವರು ಶೋಷಣೆಗೆ ಒಳಗಾಗಿರುತ್ತಾರೆ. ಈ ಸನ್ನಿವೇಶ ನಿರ್ಮಾಣದ ಹಿನ್ನೆಲೆಯ ವಿಮರ್ಶೆಗೆ ಇದು ಸಕಾಲ.
ನಿಗದಿತ ಸ್ಥಳದಲ್ಲಿ ಸಭೆ ಸೇರಬೇಕು. ಸಭೆಯ ಎಲ್ಲ ನಡುವಳಿಕೆಗಳು ನಡವಳಿಕೆ ಪುಸ್ತಕದಲ್ಲಿ ದಾಖಲಾಗಬೇಕು. ಬ್ಯಾಂಕ್ ಗುಂಪಿನ ಖಾತೆ ತೆರೆಯಲು ಅವಕಾಶ ನೀಡಬೇಕು. ಗುಂಪಿನ ಉಳಿತಾಯ ವನ್ನು ಈ ಖಾತೆಯಲ್ಲಿ ಇರಿಸಲು , ಹಿಂತೆಗೆಯಲು ಪ್ರತಿ ನಿಧಿಗಳಿಗೆ ನಡುವಳಿಕೆ ಮೂಲಕ ಗುಂಪು ಅನುಮತಿಸಬೇಕು. ಗುಂಪು ಕನಿಷ್ಟ ಆರು ತಿಂಗಳು ಕಾರ್ಯನಿರ್ವಹಿಸಿ ಫಲಿತಗೊಂಡ ನಂತರ ಅದರ ‘ನಿಧಿ’ ಆಧಾರಿತವಾಗಿ ಬ್ಯಾಂಕ್ ಗುಂಪಿಗೆ ಸಾಲ ಒದಗಿಸುವುದು.
ಮತ್ತು ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ನಡೆಸಲೇಬೇಕು. ಸಭೆಯಲ್ಲಿ ನಿಗದಿತ ಕಾರ್ಯಸೂಚಿಯನ್ನು ಕ್ರಮಬದ್ಧವಾಗಿ ತೀರ್ಮಾನಗಳನ್ನು ತೆಗೆದುಕೊಂಡು ಎಲ್ಲವನ್ನೂ ನಡೆವಳಿಕೆ ಪುಸ್ತಕದಲ್ಲಿ ದಾಖಲು ಮಾಡುವುದು. ಸಭೆಯ ಅಧ್ಯಕ್ಷತೆಯನ್ನು ಸಭೆಯಲ್ಲಿರುವ ಸದಸ್ಯರು ಒಬ್ಬರು ಸರತಿಯಂತೆ ಅಧ್ಯಕ್ಷತೆ ವಹಿಸಿಕೊಳ್ಳುವುದು. ಪ್ರತಿನಿಧಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಬದಲಾವಣೆ ಮಾಡುವುದು. ಸಭೆಯ
ಕಾರ್ಯಸೂಚಿ ಈ ಮುಂದಿನ ತರಹೆಯಲ್ಲಿ ಇರುತ್ತದೆ . ಇದನ್ನು ನಡೆಸಿಕೊಡುವವರು ಕೂಡ ಸರತಿಯಂತೆ ಬದಲಾವಣೆಯಾಗಬೇಕು. ಸಭೆ ನಡೆಸುವಾಗ ಸದಸ್ಯರು ವೃತ್ತಾಕಾರದಲ್ಲಿ ಕೂಡುವುದು. ಇದರಿಂದ ಒಬ್ಬರ ಮುಖವನ್ನು ಮತ್ತೊಬ್ಬರು ನೇರವಾಗಿ ನೋಡಿಕೊಂಡು ಸಂಭಾಷಿಸಬಹುದಾಗಿದೆ. ಇಲ್ಲಿ ಎಲ್ಲರೂ ಸಮಾನರು ಯಾರೂ ಹೆಚ್ಚು ಅಥವ ಕಡಿಮೆ ಸಮಾನರಲ್ಲ. ಕಾರ್ಯಸೂಚಿಯಲ್ಲಿ ಕ್ರಮವಾಗಿ ಪ್ರಾರ್ಥನೆ, ಸ್ವಾಗತ, ಉಳಿತಾಯ, ಸಾಲ ವಸೂಲಿ, ಸಾಲ ವಿತರಣೆ , ಇತರೆ ಚಟುವಟಿಕೆ, (ಉತ್ಪಾದನೆ, ಸಾಮಾಜಿಕ ಅಥವ ಸಾಂಸ್ಕೃತಿಕ ) ಇತರೆ ವಿಷಯಗಳು , ವಂದಾನರ್ಪಣಿ. ನಡವಳಿಕೆ ಪುಸ್ತಕದಲ್ಲಿ ಎಲ್ಲ ವಿವರ ಸದಸ್ಯವಾರು ದಾಖಲಿಸುವುದು. ನಗದು ಪುಸ್ತಕ ‘ಜನರಲ್ ಲೆಡ್ಜರ್ , ಸದಸ್ಯರ ಸಾಲಖಾತೆ , ಉಳಿತಾಯ ಖಾತೆಯನ್ನು (ಕನಿಷ್ಟ) ಲೆಕ್ಕಗಳನ್ನು ನಿರ್ವಹಿಸಬೇಕಾಗುತ್ತದೆ. ಸದಸ್ಯರು ಶಿಸ್ತನ್ನು ಪಾಲಿಸಬೇಕು. ಶಿಸ್ತು ಪಾಲಿಸದಿದ್ದಲ್ಲಿ , ಉಲ್ಲಂಘನೆಯಾದಲ್ಲಿ ತೆಗೆದುಕೊಳ್ಳಬೇಕಾದ ಕ್ರಮ ಉದಾ: ದಂಡ ವಿಧಿಸುವಿಕೆ, ಉಚ್ಛಾಟನೆ, ಅಮಾನತ ,ನಿರ್ಧಾರಗಳನ್ನು ಗುಂಪು ತೆಗೆದುಕೊಳ್ಳುತ್ತದೆ. ಶಿಸ್ತು ಪಾಲನೆ ಎಂದರೆ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವುದು. ನಿಗದಿತ ಉಳಿತಾಯ ಸಂದಾಯ ಮಾಡುವುದು, ಸಾಲ ತೆಗೆದುಕೊಂಡಿದ್ದಲ್ಲಿ ನಿಗದಿತ ಬಡ್ಡಿ ಧರದಲ್ಲಿ ಕಂತು ಮರುಪಾವತಿಸುವುದು. ಉಳಿತಾಯ ಮೊತ್ತ , ಸಾಲ ಪ್ರಮಾಣ ಉದ್ದೇಶ , ಕಂತು ಇವುಗಳನ್ನು (Loan appraisal ) ಗುಂಪೇ ಮಾಡುತ್ತದೆ. ಆರಂಭಿಕವಾಗಿ ಸಾಲಗಳು ಬಳಕೆ ಉದ್ದೇಶಗಳು ( ಹಿಂದಿನ ಇತರೆಡೆ ಸಾಲ ತೀರಿಸಲು, ದಿನಬಳಕೆ ವಸ್ತು ಖರೀದಿಸಲು, ಮಕ್ಕಳ ಶಾಲ ಶುಲ್ಕ ಪಾವತಿಸಲು ಇತರೆ ಉಪಯೋಗಿಸ್ಪಾಟ್ಟರೆ ಕಾಲಕ್ರಮೇಣ ಉತ್ಪಾದನೆ ಚಟುವಟಿಕೆಗೆ ಬಳಕೆಯಾಗುತ್ತದೆ ಕೋಳಿ, ಕುರಿ, ಮೇಕೆ ಕೊಳ್ಳಲು , ಹೈನುಗಾರಿಕೆ, ರೇಷ್ಮೆ ಇತರೆ ಚುಟುವಟಿಕೆಗಳಿಗೆ ಬಳಕೆಯಾಗುತ್ತದೆ. ಇದು ಅನುಭವ ವೇದ್ಯ?
ಒಡಗೂಡಿ ಮಹಿಳಾ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದವು. ಸ್ವಸಹಾಯ ಸಂಘಗಳು ಪುರುಷರು, ಮಹಿಳೆಯರು , ಮತ್ತು ಪುರುಷರು ಮತ್ತು ಮಹಿಳೆಯರು ಮಿಶ್ರ ಗುಂಪುಗಳು ರಚನೆಯಾದರೂ ಅತ್ಯಂತ ಯಶಸ್ವಿಯಾಗಿ ಗುಂಪು ನಿಷ್ಕ್ರಿಯವಾಗದೆ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿ ನಿರ್ವಹಿಸಿದ ಗುಂಪುಗಳೆಂದರೆ ಮಹಿಳಾ ಸ್ವ.ಸ. ಗುಂ . ಹೀಗಾಗಿ ಈ ಚಳುವಳಿ ಮಹಿಳಾ ಸ್ವ.ಸ. ಗುಂಪುಗಳ ಚಳುವಳಿಯಾಗಿ ರೂಪುಗೊಂಡಿತು. ಸರ್ಕಾರವು ಅನುದಾನಗಳನ್ನು ಕೊಡಲು ಆರಂಭಿಸಿತು. ಸಬ್ಸಿಡಿ ಸಾಲ ಯೋಜನೆಗಳನ್ನು ಆರಂಭಿಸಿತು.
ಸ್ವಸಹಾಯ ಸಂಘದ ಕಾರ್ಯಾಚರಣಿಯಲ್ಲಿ ಇದು ಸಾಧ್ಯ ಕಾರಣ ಇದರಲ್ಲಿನ ಸೀಮಿತ ಸಂಖ್ಯೆ. 90ರ ದಶಕದ ಅಂತ್ಯದೊಳಗೆ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್ ಗಳು ‘ನಬಾರ್ಡ್’ ನ ಉತ್ತೇಜನದ ಮೇರೆಗೆ ಸ್ವಸಹಾಯ ಗುಂಪುಗಳ ರಚನೆಯಲ್ಲಿ ತೊಡಗಿ ಕೊಂಡಿದ್ದು ಅವುಗಳಿಗೆ ಸಾಲಗಳನ್ನು ನೀಡಲು ಆರಂಭಿಸಲಾಯಿತು. ಅದರಂತೆ ಸ್ವ. ಸ. ಸಂ. ಗಳ ರಚನೆಯಿಂದ ಸಂಘಗಳಿಗೆ ಇವುಗಳ
ಉಳಿತಾಯವು ಠೇವಣಿ ರೂಪದಲ್ಲಿ ಸಂಪನ್ಮೂಲವಾಯಿತು. ಸಾಲ ನೀಡುವಿಕೆಯಿಂದ ಆದಾಯ ಗಳಿಕೆಯ ಮೂಲವಾಯಿತು. ಅದರಂತೆ “ವ್ಯಾಪಾರ ಅಭಿವೃದ್ಧಿ ಯೋಜನೆ”ಯ ಭಾಗವಾಗಿ ಯಶಸ್ವಿಯಾಯಿತು.
ಅದರಂತೆ ಜಿಲ್ಲ ಕೇಂದ್ರ ಸಹಕಾರ ಬ್ಯಾಂಕ್ ಗಳು ಈ ದಿಸೆಯಲ್ಲಿ ಶ್ಲಾಘನೀಯ ಕಾರ್ಯವೆಸಗಿದವು. ನಬಾರ್ಡ್ ಶೇ100 ಪ್ರವರ್ಧನ ನೀಡಿ ಪ್ರೊತ್ಸಾಹ , ಅಲ್ಲದೆ ಜಿ.ಕೆ.ಸ ಬ್ಯಾಂಕ್ ಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ನಿಧಿ ಸ್ಥಾಪಿಸಿ ಅದರಿಂದ ವ್ಯವಸ್ಥಾಪನ ವೆಚ್ಚ , ಪ್ರೊತ್ಸಾಹ ಧನ ನೀಡಿತು. ಸಹಕಾರ ಕಾಯ್ದೆಯಡಿಯಲ್ಲಿ ತಿದ್ದುಪಡಿ ಮಾಡಿ ಸಹಕಾರ ಸಂಘಗಳಲ್ಲಿ ಸ್ವ.ಸ.ಗುಂಪುಗಳಿಗೆ ನಾಮಮಾತ್ರ/ಸದಸ್ಯತ್ವ
ನೀಡಲು ಅವಕಾಶ ಕಲ್ಪಿಸಲಾಯಿತು. ಸಾಲ ವಸೂಲಾತಿ ಶೇ100 ರಷ್ಟು ಆಗುತ್ತಿತ್ತು.
ಜಂಟಿ ಭಾದ್ಯತಾ ಗುಂಪುಗಳು (Joint Liability Groups): ಗುತ್ತಿಗೆ ರೈತರು , ದಾಖಲೆ ರಹಿತ ಭೂಹಿಡುವಳಿ ದಾರ ರೈತರು ಇವರಿಗೂ ಬೆಳೆಸಾಲ (ಕಿಸಾನ್ ಕ್ರೆಡಿಟ್ ಸಾಲ) ಒದಗಿಸಲು ಅನುವಾಗುವಂತೆ 4-5 ರೈತರ ಗುಂಪು ರಚಿಸಿ ಒಬ್ಬರು ಮತ್ತೊಬ್ಬರಿಗೆ ಬಾಧ್ಯಸ್ಥ ರಾಗಿ ಸಾಲ ನೀಡಲು (2010) ಲು ನವಾರ್ಡ್ ಪ್ರೊತ್ಸಾಹ ನೀಡಿ ನಿರ್ದೇಶನಗಳನ್ನು ನೀಡಿತು. ಅದರಂತೆ ಸಹಕಾರ ಸಂಘಗಳಲ್ಲಿ, ಜಿ. ಕೇ. ಸ.ಬ್ಯಾಂಕ್
ಗಳಲ್ಲಿ ಗುಂಪುಗಳನ್ನು ರಚಿಸಿ ಸಾಲ ನೀಡಲು ಆರಂಭಿಸಲಾಯಿತು. ಇದು ಚಟುವಟಿಕೆ ಆಧಾರಿತ ಸಾಲ ನೀಡುವ ಗುರಿ ಹೊಂದಿದೆ. ಸಾಲ ಕೇಂದ್ರಿತ ಗುಂಪು ಆದರೂ ಉಳಿತಾಯಕ್ಕೆ ನಿಷೇದವಿಲ್ಲ. ಈ ಪ್ರಯೋಗವು ಮಂಡ್ಯ ಜಿ.ಸ.ಕೇ. ಬ್ಯಾಂಕ್ ನಿಂದ ಮಂಡ್ಯ ಜಿಲ್ಲೆ ಯಲ್ಲಿ ಯಶಸ್ಸು ಪಡೆಯಿತು. ಇಲ್ಲಿ ಉಳಿತಾಯವು ಇದ್ದು ಚಟುವಟಿಕೆಯು ವ್ಯವಸಾಯ ಅಲ್ಲದೇ ಗ್ರಾಮಗಳಲ್ಲಿನ ಇತರೆ ಚಟುವಟಿಕೆಯನ್ನು ಒಳಗೊಂಡು ಗುಂಪುಗಳು ರಚನೆಯಾದವು. ಉದಾ: ಕಲ್ಲು ಕುಟಿಕರ, ಮರಗೆಲಸ , ವಿಶ್ರ ಸ್ವ ಉದ್ಯೋಗಿಗಳ ಉದಾ: ಗಾರೆ ಕೆಲಸ, ಕ್ಷೌರಿಕ, ಎಲೆಕ್ಟ್ರೀಷಿಯನ್, ಕ್ರಿರಾಕ್ಸ್ ಮೆಷಿನ್, ಪಾನಿ ಪೂರಿ ವ್ಯಾಪಾರ, ಬ್ಯೂಟಿಶಿಯನ್ , ದರ್ಜಿ, ಅಕ್ಕಸಾಲಿಗ, ರೇಷ್ಮೆ, ಹೈನುಗಾರಿಕೆ,ಹೀಗೆ ಹತ್ತು ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡವರು 4-5 ಯುವಜನತೆ(ಪುರುಷರು, ಮಹಿಳೆಯರು ) ಇದರಲ್ಲಿ ಅವರ ಗೆಳೆತನ ಮುಖ್ಯ ಪಾತ್ರ (ವೃತ್ತಿಯಲ್ಲ) . ಇಂತಹ ಗುಂಪು ರಚನೆ ಮಾಡಿ ಅವರ ವೃತ್ತಿಗೆ ಬೇಕಾದ ದುಡಿಯುವ ಬಂಡವಾಳದ ಸಾಲ ಒದಗಿಸಲಾಯಿತು. ಗುಂಪುಗಳು ಅತಿ ಯಶಸ್ವಿಯಾಗಿ ನಡೆದು ಸಾಲ ವಸೂಲಾತಿ ಶೇ 100ರ ವಸೂಲಾತಿ ಯಾಯಿತು. ನಬಾರ್ಡ ಇದನ್ನು ‘ಮಂಡ್ಯ ಮಾದರಿ’ ಎಂದು ಗುರುತಿಸಿತು. ಭಾರತಾದ್ಯಂತ ನಬಾರ್ಡ , ರಾಜ್ಯ ಸ.ಬ್ಯಾಂಕ್, ಜಿ. ಕೇ. ಸ.ಬ್ಯಾಂಕ್ ಗಳ ಸಿಬ್ಬಂದಿ ಮಂಡ್ಯ ದಲ್ಲಿ ತರಬೇತಿ ಪಡೆದರು.
ರಾಜ್ಯ ಸರ್ಕಾರದ ಸಹಾಯ : ರಾಜ್ಯ ಸರ್ಕಾರವು ಸ್ವಸಹಾಯ ಗುಂಪುಗಳ ಸಾಲಗಳ ಮೇಲಿನ ಬಡ್ಡಿಯನ್ನು ಭರಿಸಿಕೊಡುತ್ತಿದೆ. ಆದರೆ ಜಂಟಿ ಬಾಧ್ಯತಾ ಗುಂಪುಗಳಿಗೆ ಇದನ್ನು ವಿಸ್ತರಿಸಲಿಲ್ಲ.
ಸಂಸ್ಥೆಗಳಿಗೆ ತಾವೇ ಕಿರು ಹಣ ಕಾಸಿನ ಸಾಲ ವಿತರಣೆಗೆ ಅವಕಾಶ ನೀಡಿರುವುದು. ಕಂಪನಿಗಳಿಗೆ ಬಂಡವಾಳ ಒದಗಿಸಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಬಹು ಏಜೆನ್ಸಿಗಳು ಕಿರು ಹಣಕಾಸು ಒದಗಿಸಲು
ಕಾರಣವಾಗಿದೆ.
ಈ ಕಿರು ಹಣಕಾಸು ಸಂಸ್ಥೆಗಳು ಅಧಿಕ ಬಡ್ಡಿದರ ವಿಧಿಸುತ್ತಿರುವುದು. ಕಂತುಗಳನ್ನು ಸರಿಯಾಗಿ ನಿಗದಿಪಡಿಸದೆ ವಸೂಲಾತಿಯಾದ ಮೊತ್ತವನ್ನು ಕೇವಲ ಬಡ್ಡಿಗೆ ಜಮಾ ಮಾಡಿಕೊಳ್ಳುತ್ತಿರುವುದು, ಅಸಲಿಗೆ ಒಂದಿಷ್ಟು ಜಮಾ ಆಗದೇ ಕೇವಲ ಬಡ್ಡಿಗೆ ಜಮಾ ಆಗುವುದರಿಂದ ನಿರಂತರವಾಗಿ ಅಸಲು ಹಾಗೆಯೇ ಉಳಿಯುತ್ತದೆ. ಸಾಲ ನೀಡುವಾಗ ಅವರ ಸಾಲ ಮರುಪಾವತಿ ಶಕ್ತಿ ಪರಿಶೀಲನೆಗೆ ಒಳಪಡುತ್ತಿಲ್ಲ. ಮೂರು ನಾಲ್ಕು ಮೂಲ ಗಳಿಂದ ಏಕ ವ್ಯಕ್ತಿಗೆ ವಿವಿಧ ಸಂಸ್ಥೆಗಳು ಸಾಲ ಹಂಚುತ್ತಿವೆ. ಗುಂಪುಗಳು ‘ಗುಂಪು ‘ಗಳಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಸಾಲ ಪಡೆಯಲು ಗುಂಪುಗಳು ರಚನೆಯಾಗುತ್ತಿವೆ. ಸರ್ಕಾರದ ಆರ್ಥಿಕ ಸಹಾಯ ಪಡೆಯಲು ಗುಂಪುಗಳು ರಚನೆಯಾಗುತ್ತವೆ. ಈ ಹಿಂದೆ ಇದ್ದ ಶಿಸ್ತಿನ ಕಾರ್ಯಾಚರಣೆ ಇಲ್ಲವಾಗಿದೆ. ಏಜೆಂಟರು ಗಳೇ ಅಮಾಯಕ ವ್ಯಕ್ತಿಗಳ ದಾಖಲೆಗಳನ್ನು ಪಡೆದು ಹಣ ಅವರಿಗೆ ವಿತರಿಸದೇ ದುರುಪಯೋಗ ಪ್ರಕರಣಗಳು ವರದಿಯಾಗಿವೆ.ಸಹಕಾರ ಸಂಘಗಳ ಉಸ್ತುವಾರಿಯಲ್ಲಿ ಗುಂಪು ರಚನೆ ಯಾವಗಲೂ ಸುಸ್ಥಿರವಾಗಿ ಕಾರ್ಯವೆಸಗ ಬಲ್ಲದು ಏಕೆಂದರೆ ಸಹಕಾರ ಸಂಘಕ್ಕೆ ತನ್ನ ಜನರ/ಸದಸ್ಯರ ಪರಿಚಯವಿರುತ್ತದೆ. ಗುಂಪು ಕಾರ್ಯಾಚರಣೆಗೆ ತಕ್ಕ ಮಾರ್ಗದರ್ಶನ ಒದಗಿಸಲು ಅದು ಸಶಕ್ತವಾಗಿರುತ್ತದೆ. ಗುಂಪಿನ ಕಣ್ಣಗಾವಲು , ಮೇಲ್ವಿಚಾರಣೆ ಯಿಂದ ಗುಂಪಿನ ಶಿಸ್ತಿನ ಕಾರ್ಯಚರಣೆ ಸಾಧ್ಯವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಗಳ
ಶಾಖೆಗಳು ಗುರಿ ತಲುಪಲು ಅಳತೆ ಮೀರಿ ಸಾಲ ನೀಡಿ ವಸೂಲಾತಿಯಾಗದೆ ನಷ್ಟ ಅನುತ್ಪಾದಕ ಆಸ್ತಿ ಎಂದು ಪರಿಗಣಿಸಿ (loss Asset) ಎಂದು ಪರಿಗಣಿಸಿ ಅವಕಾಶ ಕಲ್ಪಿಸಿ ಮನ್ನ (write off) ಮಾಡುತ್ತದೆ.
ಸಹಕಾರ ಬ್ಯಾಂಕ್ ಗಳು / ಸಹಕಾರ ಸಂಘಗಳು ಆ ತೆರನಾದ ತೊಡಕು ( Risk) ತೆಗೆದುಕೊಳ್ಳಲು ಸಶಕ್ತರಲ್ಲ ಆದುದರಿಂದ ಗುಂಪು ನಡವಳಿಕೆಯನ್ನು , ಅದರ ಮೌಲ್ಯ ಮಾಪನ ಮಾಡಿ ಸಾಲ ನೀಡಿಕೆ ಮಾಡಿ ಸಾಲಮರು ಪಾವತಿಯನ್ನು ಖಾತ್ರಿ ಪಡಿಸಿಕೊಳ್ಳ ಬಹುದು. ಸ್ವಸಹಾಯ ಗುಂಪು / ಕಿರು ಸಾಲ ನೀಡಿಕೆ (ಅಲ್ಪಮೊತ್ತ ಮತ್ತು ಭದ್ರತೆ ರಹಿತ ಸಾಲ ) ಆರಂಭವಾಗಿ ನಾಲ್ಕು ದಶಕಗಳ ಹತ್ತಿರ ಬಂದಿದೆ. ಅಷ್ಟರಲ್ಲಿ
‘ ಹೊಳೆಯಲ್ಲಿ ಸಾಕಷ್ಟು ನೀರು ಹರಿದಿದೆ ‘. ಸಾಲ ವಸೂಲಾತಿ’ ಪರಿಸರ ‘ ಸಾಕಷ್ಟು ಕುಲಷಿತ ಗೊಂಡಿದೆ. ಸಾಲ ಮರು ಪಾವತಿ ಶಿಸ್ತು ರೂಪಿಸುವುದೇ ಸರಿಯಾದ ಮಾರ್ಗ. ಸಾಲವಿತರಣೆಗೆ ನಿಖರವಾದ ಮಾನದಂಡಗಳು, ಮಾನದಂಡಗಳು ಉಲ್ಲಂಘನೆ ಯಾಗದಂತೆ ಖಾತ್ರಿ ಪಡಿಸಿಕೊಳ್ಳುವುದು, ಆಂತರಿಕ ಉತ್ತಮ ನಿಯಂತ್ರಣ ಕ್ರಮಗಳು , ಸಾಲ ಸದುಪಯೋಗ ಖಾತ್ರಿ, ಅವಶ್ಯವಿದ್ದಷ್ಟು ಮಾತ್ರ ಸಾಲ, ಸಕಾಲದಲ್ಲಿ ಸಾಲ, ಗುಂಪಿನ ಕಾರ್ಯಾಚರಣೆ ಖಚಿತ ಗೊಳಿಸಿಕೊಳ್ಳುವುದು. ಲೆಕ್ಕ ಪರಿಶೋಧನೆ , ನಿಖರ ಮೌಲ್ಯಮಾಪನ (ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪ್ರತಿ ಹಂತಗಳಿಗೆ ಅಂಕಗಳನ್ನು ನಿಗದಿಪಡಿಸಿ ಎ,ಬಿ,ಸಿ,ಡಿ. ಎಂದು ವಿಂಗಡಿಸಲಾಗುವುದು )’ ಎ ‘ವರ್ಗದಲ್ಲಿದ್ದರೆ ಮಾತ್ರ ಸಾಲ ವಿತರಿಸಲಾಗುವುದು. ಗುಂಪು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಅದಕ್ಕೆ ಬ್ಯಾಂಕ್ / ಸ. ಸಂಘ ಸೂಕ್ತ ಮಾರ್ಗದರ್ಶನ ಒದಗಿಸಬೇಕು.
ನೋಡಿಕೊಂಡು ಸಂಪನ್ಮೂಲ ಕ್ರೋಢೀಕರಣ ಗೊಂಡಲ್ಲಿ ಕಿರುಹಣಕಾಸು ವಲಯದಲ್ಲಿ ಏಕಸ್ವಾಮ್ಯ ಸ್ಥಾಪಿಸುವಲ್ಲಿ ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ. ಇಂತಹ ಶೋಷಣೆ , ಕಿರುಕಳ, ಆತ್ಮಹತ್ಯೆ ಅಂತಹ ಪ್ರಕರಣಗಳಿಗೆ ಇತಿಶ್ರೀ ಹಾಡಬಹುದು. ಸ್ವಸ್ತ ಸಮಾಜ ಕಟ್ಟುವಲ್ಲಿ ಸಹಕಾರಿಗಳು ಯಶಸ್ಸು ಗಳಿಸಬಹುದು. ಸಮಾಜವಾದದ ಶಿಶುವೇ ಸಹಕಾರ ಚಳುವಳಿ ಎಂದು ಹೇಳಲಾಗಿದೆ.ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ , ದೇಹವೇ ದೇಗುಲ
ಶಿರ ಹೊನ್ನ ಕಳಸವಯ ಕೂಡಲಸಂಗಮ ದೇವಾ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
( ಸ್ವಸಹಾಯ ಗುಂಪು, ಜಂಟಿ ಬಾಧ್ಯುತಾ ಗುಂಪುಗಳು, ಸಹಕಾರ ಸಂಘಗಳೇ ಬಡವರಿಗೆ ಕೊಡಲಸಂಗಮದೇವ – ಬಸವಣ್ಣ ನವರ ಕ್ಷಮೆಕೋರಿ , ವೈ. ವಿ. ಗುಂಡೂರಾವ್ ನಬಾರ್ಡ ಡಿ. ಜಿ. ಎಂ .(ನಿವೃತ್ತ) ಸಹಕಾರ ಸಂಪನ್ಮೂಲ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ )

ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ ) ನಂ281, ನೇಸರ , ಬಾಲಾಜಿ ಹೆಚ್. ಬಿ. ಸಿ, ಎಸ್ ಲೇಔಟ್ , ವಾಜರಹಳ್ಳಿ , ಕನಕಪುರ ರಸ್ತೆ ಬೆಂಗಳೂರು 560109