ಸಹಕಾರ ಸಂಘಗಳಲ್ಲಿ ಸ್ಥಿರಾವೃದ್ಧಿ| ಡಾ.ಎಸ್.ಎ. ಸಿಧಾಂತಿ

ಪರಿಚಯ

ಸ್ಥಿರಾಭಿವೃದ್ಧಿ ಎಂದರೆ ಇಂದಿನ ಅಗತ್ಯಗಳನ್ನು ಪೂರೈಸುತ್ತಾ, ಭವಿಷ್ಯದ ಪೀಳಿಗೆಗಳ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಅಡ್ಡಿಗಟ್ಟದೇ ಅಭಿವೃದ್ಧಿಯನ್ನು ಸಾಧಿಸುವುದು. ಈ ಅಭಿವೃದ್ಧಿ ಪರಿಸರ, ಸಮಾಜ, ರಾಜಕೀಯ ಮತ್ತು ಆರ್ಥಿಕ ಮಿತಿಗಳನ್ನು ಪರಿಗಣಿಸಿ ಸಮಗ್ರ ಯೋಜನೆಯ ಮೂಲಕ ಕಾರ್ಯಗತಗೊಳ್ಳಬೇಕು. ಜಾಗತೀಕರಣದಿಂದಾಗಿ ಜನಸಂಖ್ಯೆ ವೃದ್ಧಿ, ಕೈಗಾರಿಕೀಕರಣ, ನಗರೀಕರಣ ಮತ್ತು ಹೆಚ್ಚಿದ ಬಳಕೆಯಿಂದ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಿದ್ದು, ಪ್ರತಿಯೊಂದು ರಾಷ್ಟ್ರದ ಆರ್ಥಿಕತೆಯು ಕೈಗಾರಿಕೆ, ಮೂಲಸೌಕರ್ಯ, ಉತ್ಪಾದನೆ ಮತ್ತು ಬಳಕೆ, ಜನಸಂಖ್ಯೆ ಮತ್ತು ಸಾರಿಗೆ, ಸಮುದಾಯ ಮತ್ತು ನಗರ, ಆರ್ಥಿಕತೆ ಮತ್ತು ಸಮಾಜ ಮುಂತಾದ ವಿಷಯಗಳಲ್ಲಿ ಸಮತೋಲನ ಸಾಧಿಸಲು ಪ್ರಯತ್ನಿಸಬೇಕು.

2015ರ ಸೆಪ್ಟೆಂಬರ್ 25ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 193 ರಾಷ್ಟ್ರಗಳು “Transforming Our World” ಎಂಬ ಶೀರ್ಷಿಕೆಯಲ್ಲಿ 17 ಸ್ಥಿರಾಭಿವೃದ್ಧಿ ಗುರಿಗಳನ್ನು 2030ರೊಳಗೆ ಸಾಧಿಸುವುದಾಗಿ ಉದ್ದೇಶಿಸಿತು. ಈ ಸಂದರ್ಭದಲ್ಲಿ ಸಹಕಾರ ಸಂಘಗಳನ್ನು ಈ ಗುರಿಗಳನ್ನು ಸಾಧಿಸಲು ಅತ್ಯುತ್ತಮ ಮಾದರಿಯೆಂದು ಗುರುತಿಸಲಾಯಿತು. ಸಹಕಾರ ಸಂಘಗಳು ಲೋಕಶಾಹಿ, ಸಮಾನತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಒಗ್ಗೂಡಿಕೆ, ಪರಿಸರದ ಮೇಲೆ ಕಾಳಜಿ ಇತ್ಯಾದಿಗಳನ್ನು ಉತ್ತೇಜಿಸುತ್ತವೆ.

ರೋಚ್ಡೇಲ್ ಪಯನಿಯರ್ಸ್ ಸಹಕಾರ ಸಂಘದ ಉದಾಹರಣೆ

1844ರ ಡಿಸೆಂಬರ್ 21ರಂದು ಇಂಗ್ಲೆಂಡ್‌ನ ರೋಚ್ಡೇಲ್‌ನಲ್ಲಿ 28 ಜನ ನೇಯ್ಗೆಯ ಕಾರ್ಮಿಕರು ಮೊದಲ ಗ್ರಾಹಕ ಸಹಕಾರ ಸಂಘವನ್ನು ಸ್ಥಾಪಿಸಿದರು. ಕೈಗಾರಿಕರಣದ ಪರಿಣಾಮ ಕಾರ್ಮಿಕರ ಶೋಷಣೆಯು ಬಡತನವನ್ನುಂಟುಮಾಡಿತು. ಇದಕ್ಕೆ ಸ್ಪಂದನೆ ನೀಡಲು ಅವರು ಅಕ್ಕಿ, ಗೋಧಿ ಹಿಟ್ಟು, ಬೆಣ್ಣೆ, ಸಕ್ಕರೆ, ಮೇಣದ ಬತ್ತಿ ಮೊದಲಾದ ಅವಶ್ಯಕ ವಸ್ತುಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿ ಮಾಡಿ ಸದಸ್ಯರಿಗೆ ಕಡಿಮೆ ದರದಲ್ಲಿ ನೀಡಲು ಅಂಗಡಿಯನ್ನು ತೆರೆಯಲಾಯಿತು. ಇದರ ಮೂಲಕ ಮಧ್ಯವರ್ತಿಗಳನ್ನು ತೊಡೆಯುವುದು ಮತ್ತು ಗ್ರಾಹಕರ ಹಿತವನ್ನು ರಕ್ಷಿಸುವುದು ಉದ್ದೇಶವಾಗಿತ್ತು.

ಸಂಘವು ತನ್ನ ಸದಸ್ಯರ ಸಾಮಾಜಿಕ ಮತ್ತು ಗೃಹಾಯಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಕೆಳಗಿನ ಯೋಜನೆಗಳನ್ನು ರೂಪಿಸಿತು:

  • provisions, ಬಟ್ಟೆ ಮುಂತಾದ ವಸ್ತುಗಳ ಅಂಗಡಿ ಸ್ಥಾಪನೆ
  •  ಸದಸ್ಯರಿಗೆ ಮನೆಗಳನ್ನು ನಿರ್ಮಿಸಲು ಯೋಜನೆ.
    ಉದ್ಯೋಗವಿಲ್ಲದವರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕಾ ಘಟಕಗಳನ್ನು ಸ್ಥಾಪನೆ
  • ಉದ್ಯೋಗವಿಲ್ಲದವರಿಗಾಗಿ ಕೃಷಿ ಕಾರ್ಯಕ್ಕೆ ಜಮೀನು ಖರೀದಿ/ಬಾಡಿಗೆ
  • ಶಿಕ್ಷಣ, ಉತ್ಪಾದನೆ, ವಿತರಣಾ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆಯನ್ನು ನಿರ್ಮಿಸಿ ಸ್ವಾವಲಂಬಿ ಪ್ರದೇಶ ರೂಪಿಸುವುದು
  •  ಸದಸ್ಯರಿಗೆ ಅನುಕೂಲಕರ ಹೋಟೆಲ್ ಆರಂಭಿಸುವುದು

ಈ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ಮೂಲಕ ಸಂಘವು ಸದಸ್ಯರ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಿ, ಒಂದು ಕುಟುಂಬದಂತೆ ಏಕತೆ ನಿರ್ಮಿಸಿತು. ಇಂದು ಈ ಸಂಘದ ಸದಸ್ಯರು 5 ಲಕ್ಷಕ್ಕೂ ಅಧಿಕವಾಗಿದ್ದು, ವಾರ್ಷಿಕ 7 ಲಕ್ಷ ಪೌಂಡ್‌ಗಳ ವ್ಯವಹಾರವನ್ನು ನಡೆಸುತ್ತಿದ್ದಾರೆ. 21ಕ್ಕೂ ಹೆಚ್ಚು ಸೇವೆಗಳು ಒಟ್ಟಿಗೆ ಒದಗಿಸಲಾಗುತ್ತಿವೆ. ಈ ಯಶಸ್ಸಿಗೆ ಮುಖ್ಯ ಕಾರಣ ಸಂಘದಲ್ಲಿ ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ತಂಡ ಭಾವದಿಂದ ಕೆಲಸಮಾಡುವ ವ್ಯವಸ್ಥೆಯೇ.

ಸದಸ್ಯರು ಸಂಘದಿಂದ ಹೆಚ್ಚು ಖರೀದಿಸಿದಷ್ಟೂ ಹೆಚ್ಚು ಲಾಭಾಂಶವನ್ನು ಪಡೆಯುವ ಮೂಲಕ ಸದಸ್ಯರನ್ನು ಸಂಘದ ನಿಷ್ಠಾವಂತರಾಗಿ ರೂಪಿಸಿದರು. ಇದು ಸಂಘದ ಸ್ಥಿರಾಭಿವೃದ್ಧಿಗೆ ಸಹಾಯಮಾಡಿತು.

ರೋಚ್ಡೇಲ್ ಪಯನಿಯರ್ಸ್‌ನ ಸಾಧನೆಗಳು

  •  1919ರಲ್ಲಿ ರೋಚ್ಡೇಲ್ ಮೂಲದ ಪ್ರೊ. ಫ್ರೆಡ್ ಹಾಲ್ ಮೊದಲ ಪ್ರಾಂಶುಪಾಲರಾಗಿ ಸಹಕಾರ ಕಾಲೇಜು ಸ್ಥಾಪನೆ
    ಸಹಕಾರ ಮಾದರಿಯ ಶಾಲೆಗಳ ಬೆಳವಣಿಗೆ (300ಕ್ಕೂ ಹೆಚ್ಚು ಶಾಲೆಗಳು)
  •  ಮೊದಲ ಮಹಿಳಾ ಸದಸ್ಯೆ ಎಲಿಸಾ ಬ್ರಿಯರ್ಲಿ 1846ರಲ್ಲಿ ಸೇರಿದ್ದರು 1895ರಲ್ಲಿ ಅಂತರರಾಷ್ಟ್ರೀಯ ಸಹಕಾರ ಅಲಯನ್ಸ್ ಸ್ಥಾಪನೆಯ ಮೂಲಕ ಜಾಗತಿಕ ಸಹಕಾರ ಚಳವಳಿ1864ರಲ್ಲಿ ಸಹಕಾರ ಹೋಲ್‌ಸೇಲ್ ಸೊಸೈಟಿ ಸ್ಥಾಪನೆಯೊಂದಿಗೆ ಬ್ಯಾಂಕಿಂಗ್, ವಿಮೆ, ಕೃಷಿ, ನೈತಿಕ ವ್ಯಾಪಾರ ಮೊದಲಾದ ಸೇವೆಗಳ ಪ್ರಾರಂಭ.
  • ವಿಶ್ವದಾದ್ಯಾಂತ 53,000 ಕ್ರೆಡಿಟ್ ಯೂನಿಯನ್‌ಗಳಲ್ಲಿ 183 ಮಿಲಿಯನ್ ಸದಸ್ಯರಿಗೆ ಹಣಕಾಸಿನ ಸೇವೆಗಳು
    ಸಾಮೂಹಿಕ ಗೃಹ ನಿರ್ಮಾಣ, ಆರೋಗ್ಯ ಸೇವೆ, ವಿದ್ಯುತ್ ಹಾಗೂ ಇತರ ಮೂಲಸೌಕರ್ಯಗಳಲ್ಲಿ ಸಹಕಾರ ಸಂಘಗಳ ಮಹತ್ವ.
  • ಇಟಲಿಯಲ್ಲಿ 39,600 ಸಹಕಾರ ಸಂಘಗಳು 10 ಲಕ್ಷ ಉದ್ಯೋಗ, 1.2 ಕೋಟಿ ಸದಸ್ಯರು ಮತ್ತು 15,000 ಕೋಟಿ ಡಾಲರ್ ವ್ಯವಹಾರವನ್ನು ನಡೆಸುತ್ತಿವೆ
    ಜಪಾನ್‌ನ JCCU ಸಹಕಾರ ಸಂಘದ ಮಹಿಳಾ ಸದಸ್ಯರಿಂದ ಮಕ್ಕಳ ನೆರವಿಗೆ ನಿಧಿ ಸಂಗ್ರಹ, ಆಹಾರ ಬ್ಯಾಂಕ್ ಯೋಜನೆಗಳು, ಮಕ್ಕಳ ಕಾಫೆಟೇರಿಯಾ, ಆರೈಕೆ ಕೇಂದ್ರಗಳು, ಸಹಕಾರ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಆರೋಗ್ಯ ಸೇವೆಗಳ ಜಾಲ, ಗ್ರೀನ್‌ಹೌಸ್ ಅನಿಲ ನಿವಾರಣಾ ಯೋಜನೆಗಳು

ಭಾರತದಲ್ಲಿ ಸ್ಥಿರಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ

ಭಾರತದಲ್ಲಿ ಅಮೂಲ, ಐಎಫ್‌ಎಫ್‌ಸಿಒ, ಕ್ರಿಬ್ಕೋ, ಕ್ಯಾಮ್ಕೋ, ಮಾಮ್ಕೋ, ಸರಸ್ವತ್ ಸಹಕಾರ ಬ್ಯಾಂಕ್, ಅನುದಾನ ಕ್ರೆಡಿಟ್ ಸೊಸೈಟಿಗಳು, ಹಾಲು ಉತ್ಪಾದಕರ ಸಂಘಗಳು, ಮಾರ್ಕೆಟಿಂಗ್ ಸಂಘಗಳು, ದ್ವಿತೀಯ ಸಹಕಾರ ಬ್ಯಾಂಕ್‌ಗಳು, ರೈತರ ಸಹಕಾರ ಸಂಘಗಳು, ಸಾರಿಗೆ ಸಹಕಾರ ಸಂಘಗಳು, ಸೂಪರ್ ಬಜಾರ್‌ಗಳು ಮುಂತಾದವುಗಳು ಸ್ಥಿರಾಭಿವೃದ್ಧಿಯ ಮಾದರಿಯಾಗಿವೆ. ಸಹಕಾರ ಚಳವಳಿಯು ಪರಿಸರ, ಆರ್ಥಿಕತೆ, ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ.

ನಿಷ್ಕರ್ಷೆ

ಸ್ಥಿರಾಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಕಾರ ಸಂಘಗಳು ಅತ್ಯಂತ ಪರಿಣಾಮಕಾರಿ ಮಾದರಿಯಾಗಿದೆ. ಏಕತೆಯ ಬಳಕೆಯೊಂದಿಗೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಸಹಕಾರ ಸಂಘಗಳು ವಿಶಿಷ್ಟ ಮಾದರಿಯನ್ನು ರೂಪಿಸುತ್ತಿವೆ. ಸ್ಥಿರಾಭಿವೃದ್ಧಿಗೆ ಸಹಕಾರ ಸಂಘಗಳ ಕೊಡುಗೆ ಅನನ್ಯವಾಗಿದೆ.

-ಡಾ.ಎಸ್.ಎ. ಸಿಧಾಂತಿ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More