ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪರಿಶೋಧನಾ ಶುಲ್ಕ ನಿರ್ಧರಣೆ.|ಶ್ರೀ. ಉದಯ.ಆರ್.

ಲೆಕ್ಕಪರಿಶೋಧನೆ :
ಒಂದು ಸಂಸ್ಥೆಯಲ್ಲಿ ನಿಗದಿ ಪಡೆಸಿರುವ ಅವಧಿಯಲ್ಲಿ ನಡೆದಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಪುರಾವೆಗಳೊ೦ದಿಗೆ ವಿಮರ್ಷನಾತ್ಮಕವಾಗಿ ವಿಶ್ಲೇಷಿಸಿ, ಕುಂದು ಕೊರತೆಗಳನ್ನು ಪಟ್ಟಿ ಮಾಡಿ, ಸಂಸ್ಥೆಯ ಆರ್ಥಿಕ ಸ್ಥಿತಿ-ಗತಿ ಮತ್ತು ಲಾಭ-ನಷ್ಟಗಳನ್ನು ನಿಖರವಾಗಿ ಅಂದಾಜಿಸುವ ಎಲ್ಲಾ ಪ್ರಕ್ರಿಯೆಯನ್ನು ಲೆಕ್ಕ ಪರಿಶೋಧನೆ ಎಂದು ಕರೆಯಬಹುದು.

ಲೆಕ್ಕ ಪರಿಶೋಧನೆ ನಡೆಸುವಾಗ ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳನ್ನು ಪರಾಂಬರಿಸಿ, ಅವ್ಯವಹಾರಗಳನ್ನು ಕಂಡು ಹಿಡಿದು, ಸಂಸ್ಥೆಯ ನೈಜ ಆರ್ಥಿಕ ಪರಿಸ್ಥಿತಿ ಮತ್ತು ನಿಖರವಾದ ಲಾಭ-ನಷ್ಟ ಕಂಡು ಹಿಡಿಯುವಲ್ಲಿ ಲೆಕ್ಕ ಪರಿಶೋಧಕರ ಜ್ಞಾನ, ಜಾಣ್ಮೆ ಹಾಗೂ ನೈಪುಣ್ಯತೆ ಅತ್ಯಂತ ಪ್ರಮುಖವಾಗಿರುತ್ತದೆ.

ಲೆಕ್ಕ ಪರಿಶೋಧನೆಯಲ್ಲಿ ಅನೇಕ ವಿಧಗಳಿಗೆ, ಮುಖ್ಯವಾದವುಗಳೆಂದರೆ

1. ಅಂತಿಮ ಲೆಕ್ಕಪರಿಶೋಧನೆ
2. ಆಂತರಿಕ ಲೆಕ್ಕಪರಿಶೋಧನೆ
3. ನಿರಂತರ ಲೆಕ್ಕಪರಿಶೋಧನೆ
4. ಶಾಸನಬದ್ಧ ಲೆಕ್ಕಪರಿಶೋಧನೆ

1). ಅಂತಿಮ ಲೆಕ್ಕಪರಿಶೋಧನೆ:- ಇದು ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳಲ್ಲಿ ನಡೆಯುವ ಲೆಕ್ಕ ಪರಿಶೋಧನೆ ಆಗಿದ್ದು, ಆರ್ಥಿಕ ವರ್ಷಾಂತ್ಯದ ನಂತರ ಒಂದು ಆರ್ಥಿಕ ವರ್ಷದಲ್ಲಿ ಸಂಸ್ಥೆಯು ನಡೆಸಿರುವ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಪರಾಮರ್ಶಿಸಲು ಅಂತಿಮ ಲೆಕ್ಕ ಪರಿಶೋಧನೆ ನಡೆಸಲಾಗುವುದು.

2). ಆಂತರಿಕ ಲೆಕ್ಕಪರಿಶೋಧನೆ:- ಸಂಸ್ಥೆಯ ಸಿಬ್ಬಂದಿಗಳಿಂದಲೇ ಸಂಸ್ಥೆಯ ಲೆಕ್ಕ ಪರಿಶೋಧನೆ ನಡೆಸುವುದನ್ನು ಆಂತರಿಕ ಲೆಕ್ಕ ಪರಿಶೋಧನೆ ಎಂದು ಕರೆಯಬಹುದು.

3). ನಿರಂತರ ಲೆಕ್ಕ ಪರಿಶೋಧನೆ:- ಕೆಲವು ಸಂಸ್ಥೆಗಳಲ್ಲಿ ಇದು ಚಾಲನೆಯಲ್ಲಿದ್ದು, ಅವ್ಯವಹಾರಗಳನ್ನು ತಡೆಗಟ್ಟಲು ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಲೆಕ್ಕಪರಿಶೋಧನೆ ನಡೆಸಲಾಗುತ್ತದೆ. ಇದನ್ನು ನಿರಂತರ ಲೆಕ್ಕ ಪರಿಶೋಧನೆ ಎಂದು ಕರೆಯಲಾಗುವುದು.

4). ಶಾಸನಬದ್ಧ ಲೆಕ್ಕ ಪರಿಶೋಧನೆ:- ಯಾವುದೇ ಸಂಸ್ಥೆಯ ವ್ಯವಹಾರಗಳನ್ನು ಕಾನೂನು ಪ್ರಕಾರ ಲೆಕ್ಕ ಪರಿಶೋಧನೆ ನಡೆಸುವ ವಿಧಾನವನ್ನು ಶಾಸನ ಬದ್ಧ ಲೆಕ್ಕ ಪರಿಶೋಧನೆ ಎಂದು ಕರೆಯಲಾಗುವುದು.

ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋಧನೆ:-

ಸಹಕಾರ ಸಂಘಗಳಲ್ಲಿ ಅಂತಿಮ, ಆಂತರಿಕ, ನಿರಂತರ ಹೀಗೆ ಎಲ್ಲಾ ರೀತಿಯ ಲೆಕ್ಕ ಪರಿಶೋಧನೆಗಳು ಸಾಮಾನ್ಯವಾಗಿ ಜಾರಿಯಲ್ಲಿದ್ದರೂ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಮತ್ತು ನಿಯಮಗಳ ಪ್ರಕಾರ ಲೆಕ್ಕ ಪರಿಶೋಧನೆ ನಡೆಸಬೇಕಾಗಿರುವುದರಿಂದ ಶಾಸನ ಬದ್ಧ ಲೆಕ್ಕ ಪರಿಶೋಧನೆ ನಡೆಯುತ್ತದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಕಲಂ 63 ರ ಪ್ರಕಾರ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಯುತ್ತದೆ. ಅದೇ ರೀತಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಡೆಸುವಾಗ ಲೆಕ್ಕ ಪರಿಶೋಧಕರು ಆಡಳಿತಾತ್ಮಕ ವಿಷಯಗಳ ಬಗ್ಗೆ ಪರಿಶೋಧನೆ ನಡೆಸುವ ಅಧಿಕಾರ ಹೊಂದಿರುತ್ತಾರೆ. ಆಡಳಿತಾತ್ಮಕ ಲೆಕ್ಕ ಪರಿಶೋಧನೆಯು ಸಹಕಾರಿ ಸಂಘಗಳಲ್ಲಿ ಕಂಡು ಬರುವ ವಿಶೇಷ ಪದ್ಧತಿಯಾಗಿದೆ. ಲೆಕ್ಕಪರಿಶೋಧಕರು ಲೆಕ್ಕ ಪರಿಶೋಧನೆಗೆ ಅಗತ್ಯವೆಂದು ಕಂಡು ಬರುವ ಎಲ್ಲಾ ದಾಖಲಾತಿಗಳು, ವ್ಯವಹಾರಗಳು, ರಿಜಿಸ್ಟರುಗಳನ್ನು ಪರಿಶೀಲಿಸುವ ಹಾಗೂ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳನ್ನು ಪ್ರಶ್ನಿಸುವ, ಉತ್ತರ ಪಡೆಯುವ ಅಧಿಕಾರವನ್ನು ಹೊಂದಿರುತ್ತಾರೆ.

ಲೆಕ್ಕ ಪರಿಶೋಧನಾ ಶುಲ್ಕ ನಿರ್ಧರಣೆ:-

ಶಾಸನ ಬದ್ಧ ವಾರ್ಷಿಕ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರನ್ನು ಆಯಾ ಸಹಕಾರಿ ಸಂಘಗಳ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ಲೆಕ್ಕಪರಿಶೋಧಕರಿಗೆ ಲೆಕ್ಕಪರಿಶೋಧನೆ ನಡೆಸಿದ ನಂತರ ಒಂದು ನಿರ್ಧಿಷ್ಟ ಮೊಬಲಗನ್ನು ಸಂಘವು ಸಂಭಾವನೆ ರೂಪದಲ್ಲಿ ನೀಡಬೇಕಾಗುತ್ತದೆ. ಇದನ್ನು “ಲೆಕ್ಕ ಪರಿಶೋಧನಾ ಶುಲ್ಕ” ಎಂದು ಕರೆಯಲಾಗುತ್ತದೆ.

ಸಹಕಾರಿ ಸಂಘಗಳಲ್ಲಿ ಲೆಕ್ಕ ಪರಿಶೋಧನಾ ಶುಲ್ಕವನ್ನು ಆಯಾಯ ಸಂಘದ ದುಡಿಯುವ ಬಂಡವಾಳ ಯಾ ವ್ಯಾಪಾರ ವಹಿವಾಟಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

> ಸಂಘದ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟು ರೂ. 10 ಕೋಟಿಯ ವರೆಗೆ ಇದ್ದರೆ, ಪ್ರತಿ 100 ರೂಪಾಯಿ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟಿಗೆ 10 ಪೈಸೆಯಂತೆ ಗರಿಷ್ಟ ರೂ.75,000/- ಆಗಿರುತ್ತದೆ.

>ಸಂಘದ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟು ರೂ. 10 ಕೋಟಿಯಿಂದ ರೂ.50 ಕೋಟಿಗಳವರೆಗೆ ಇದ್ದರೆ, ರೂ. 75,000/- + ರೂ.10 ಕೋಟಿ ಮೀರಿದ ಪ್ರತಿ 100 ರೂಪಾಯಿ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟಿಗೆ 5 ಪೈಸೆಯಂತೆ ಗರಿಷ್ಟ ರೂ.1,50,000/- ಆಗಿರುತ್ತದೆ.

ಸಂಘದ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟು ರೂ. 50 ಕೋಟಿಯಿಂದ ರೂ.100 ಕೋಟಿ ಗಳವರೆಗೆ ಇದ್ದರೆ, ರೂ.1,50,000/- + ರೂ.50 ಕೋಟಿ ಮೀರಿದ ಪ್ರತಿ 100 ರೂಪಾಯಿ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟಿಗೆ 5 ಪೈಸೆಯಂತೆ ಗರಿಷ್ಟ ರೂ.2,50,000/- ಆಗಿರುತ್ತದೆ.ಸಂಘದ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟು ರೂ. 100 ಕೋಟಿಯಿಂದ ಮೇಲ್ಪಟ್ಟಿದ್ದರೆ, ರೂ.2,50,000/- + ರೂ.100 ಕೋಟಿ ಮೀರಿದ ಪ್ರತಿ 100 ರೂಪಾಯಿ ದುಡಿಯುವ ಬಂಡವಾಳ / ವ್ಯಾಪಾರ ವಹಿವಾಟಿಗೆ 2 ಪೈಸೆಯಂತೆ ಗರಿಷ್ಟ ರೂ.10,00,000/- ಆಗಿರುತ್ತದೆ.

✍️ ಉದಯ – ಆರ್

ಕಾರ್ಯದರ್ಶಿ

ಶ್ರೀ ಮಂಗಳಾ ಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಬಿಜೈ, ಮಂಗಳೂರು.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More