ಮೂರು ವರ್ಷ ಮೊದಲೇ ಋತುಚಕ್ರ ರಜೆ ನೀತಿ ಪ್ರಕಟಿಸಿದ್ದ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್‌.

  • ರಾಜ್ಯ ಸರ್ಕಾರದ ನೀತಿಗೆ ಮೊದಲೇ ಈ ಕ್ರಮ ಅನುಷ್ಠಾನ.
  • ಸಹಕಾರಿ ರಂಗದಲ್ಲಿ ಉದ್ಯೋಗಿಗಳಿಗೆ ಮಹಿಳಾ ಸ್ನೇಹಿ ವಾತಾವರಣ.

ಮಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಗಾರ್ಮೆಂಟ್ಸ್‌, ಬಹುರಾಷ್ಟ್ರೀಯ ಕಂಪನಿ, ಐಟಿ ಮತ್ತಿತರ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ -2025ನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಬಗ್ಗೆ ಕಾನೂನು ಸಚಿವ ಎಚ್‌.ಕೆ ಪಾಟೀಲ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಆದರೆ ರಾಜ್ಯ ಸರ್ಕಾರ ಋತುಚಕ್ರ ರಜೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲೇ ಸಹಕಾರಿ ಬ್ಯಾಂಕೊಂದು ಮುಟ್ಟಿನ ರಜೆಯನ್ನು ತಮ್ಮ ಮಹಿಳಾ ಉದ್ಯೋಗಿಗಳಿಗೆ ನೀಡುತ್ತ ಬಂದಿದೆ. ಬಳ್ಳಾರಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ಲಿಮಿಟೆಡ್ ಋತುಚಕ್ರದ ರಜೆಯನ್ನು ಮೂರು ವರ್ಷಗಳ ಹಿಂದೆಯೇ ಜಾರಿ ಮಾಡಿತ್ತು. ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಇಂಥ ಕ್ರಾಂತಿಕಾರಿ ನೀತಿಯನ್ನು ಈ ಮೊದಲೇ ಜಾರಿ ಮಾಡಿದ್ದ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕ್ ತನ್ನ ಮಹಿಳಾ ಉದ್ಯೋಗಿಗಳಿಗೆ ಅರ್ಧ ದಿನದ ಮುಟ್ಟಿನ ರಜೆಯನ್ನು ಪರಿಚಯಿಸಿತ್ತು.

ಸುಕೋ ಸಹಕಾರಿ ಬ್ಯಾಂಕಿನಲ್ಲಿ 2022ರ ಆಗಸ್ಟ್ 13ರಿಂದ ಜಾರಿಗೆ ಬಂದ ಈ ನೀತಿಯು, ಮಹಿಳಾ ಉದ್ಯೋಗಿಗಳು ತಮ್ಮ ಅನುಕೂಲ ಮತ್ತು ಕೆಲಸದ ಅವಶ್ಯಕತೆಗಳನ್ನು ಅವಲಂಬಿಸಿ ಕೆಲಸದ ದಿನದ ಮೊದಲಾರ್ಧ ಅಥವಾ ದ್ವಿತೀಯಾರ್ಧವನ್ನು ಮುಟ್ಟಿನ ರಜೆಯಾಗಿ ಪಡೆಯಲು ಅನುಮತಿ ನೀಡಿರುತ್ತದೆ. ಬ್ಯಾಂಕಿನ ಈ ಉಪಕ್ರಮವು ಮುಟ್ಟಿನ ಸಮಯದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಸವಾಲುಗಳನ್ನು ಗುರುತಿಸಿ, ಬ್ಯಾಂಕಿನ ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದೆ.

ಕರ್ನಾಟಕ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಈ ಉಪಕ್ರಮವನ್ನು ಜಾರಿಗೆ ತರುವ ಮೊದಲೇ ಈ ಮಹಿಳಾ ಕಲ್ಯಾಣ ಕ್ರಮವನ್ನು ಪರಿಚಯಿಸಿದ್ದ ಸುಕೋ ಬ್ಯಾಂಕ್ ಲಿಂಗ ಸಂವೇದನೆ ಮತ್ತು ಉದ್ಯೋಗಿಗಳ ಆರೈಕೆಯ ವಿಷಯದಲ್ಲಿ ಬ್ಯಾಂಕಿನ ಕಾರ್ಯಶೈಲಿಯನ್ನು ತೋರಿಸಿದೆ. ಮಾನವೀಯ, ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಂಡ ಕೆಲಸದ ಸಂಸ್ಕೃತಿಯನ್ನು ಬೆಳೆಸಲು ಮಹಿಳಾ ಉದ್ಯೋಗಿಗಳ ನಿರ್ದಿಷ್ಟ ಅಗತ್ಯಗಳನ್ನು ಗುರುತಿಸುವುದು ಅತ್ಯಗತ್ಯ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ನಂಬಿಕೆಯಾಗಿದೆ.

ಸುಕೋ ಬ್ಯಾಂಕಿನ ಉದ್ಯೋಗಿಗಳಲ್ಲಿ ಮಹಿಳೆಯರು ಪ್ರಮುಖ ಭಾಗವಾಗಿದ್ದಾರೆ, ಒಟ್ಟು ಉದ್ಯೋಗಿಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನ ಮಹಿಳಾ ಉದ್ಯೋಗಿಗಳೇ ಇದ್ದಾರೆ. ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಮಹಿಳಾ ಸಿಬ್ಬಂದಿಗಳ ಸಮಗ್ರ ಯೋಗಕ್ಷೇಮದ ನಿಟ್ಟಿನಲ್ಲಿ ಬ್ಯಾಂಕ್ ಹಲವಾರು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಗಮನಾರ್ಹವಾದವುಗಳು:

● ಬ್ಯಾಂಕಿನ ಮಾನವ ಸಂಪನ್ಮೂಲ ನೀತಿಯ ಅವಿಭಾಜ್ಯ ಅಂಗವಾಗಿ ಮಾತೃತ್ವ ಪ್ರಯೋಜನಗಳ ಅನುಷ್ಠಾನ.

● ಮಹಿಳಾ ಉದ್ಯೋಗಿಗಳಿಗೆ ನಿಯಮಿತ ಆರೋಗ್ಯ ತಪಾಸಣಾ ಶಿಬಿರಗಳು.

● ಸುರಕ್ಷಿತ ಮತ್ತು ಗೌರವಾನ್ವಿತ ಕೆಲಸದ ಸ್ಥಳವನ್ನು ನಿರ್ವಹಿಸಲು POSH (ಲೈಂಗಿಕ ಕಿರುಕುಳ ತಡೆಗಟ್ಟುವಿಕೆ) ನೀತಿಯ ಪರಿಣಾಮಕಾರಿ ಅನುಷ್ಠಾನ.

● ಮಹಿಳಾ ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಆವರ್ತಕ ಕೆಲಸ-ಜೀವನ ಸಮತೋಲನ ಅವಧಿಗಳು.

● ವಿವಾಹಿತ ಮಹಿಳಾ ಉದ್ಯೋಗಿಗಳಿಗೆ ಕುಟುಂಬ ಜವಾಬ್ದಾರಿಗಳನ್ನು ವೃತ್ತಿಪರ ಬದ್ಧತೆಗಳೊಂದಿಗೆ ಸಮತೋಲನಗೊಳಿಸುವಲ್ಲಿ ಬೆಂಬಲ ನೀಡಲು ಅರೆಕಾಲಿಕ ಕೆಲಸದ ವ್ಯವಸ್ಥೆಗಳ ಪರಿಚಯ, ಆ ಮೂಲಕ ಅವರಿಗೆ ಗಳಿಸುವ ಅವಕಾಶಗಳನ್ನು ಒದಗಿಸುವುದು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಬೆಳೆಸುವುದು.

 

ಸಾಂಸ್ಥಿಕ ಬೆಳವಣಿಗೆ ಮತ್ತು ಉದ್ಯೋಗಿಗಳ ಕಲ್ಯಾಣಕ್ಕೆ ಪೂರಕ ಕಾರ್ಯಕ್ರಮಗಳು 

ಮಹಿಳಾ ದಿನಾಚರಣೆ: 

ಮಹಿಳಾ ಸಬಲೀಕರಣ ಕುರಿತ ತಮ್ಮ ಆಶಯದಂತೆ ಸುಕೋ ಬ್ಯಾಂಕ್ ಮಾರ್ಚ್ 9, 2024ರಂದು ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ “ಅವಿಯನ್ನಾ” ಎಂಬ ವಿಷಯದ ಅಡಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ 2024 ಅನ್ನು ಆಚರಿಸಿತು. ಈ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನ ಜನರಲ್‌ ಮ್ಯಾನೇಜರ್‌ (ಸಹಕಾರಿ ವಿಭಾಗ) ಮೀನಾಕ್ಷಿ ಗಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಟ್ಯಾಗ್‌ಲೈನ್, ಛಾಯಾಗ್ರಹಣ ಮತ್ತು ಬರವಣಿಗೆ ಸ್ಪರ್ಧೆಗಳನ್ನು ಒಳಗೊಂಡಿತ್ತು, ಬ್ಯಾಂಕಿನ ಈ ಕಾರ್ಯಕ್ರಮಕ್ಕೆ ಮಹಿಳಾ ಉದ್ಯೋಗಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಹೆಚ್ಚಿನ ಮಹಿಳಾ ಇದರಲ್ಲಿ ಪಾಲ್ಗೊಂಡಿದ್ದರು.

ಮುಟ್ಟಿನ ರಜೆಯ ಇತಿಹಾಸ

ಮಹಿಳಾ ಕಾರ್ಮಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಮತ್ತು ಅವರಲ್ಲಿ ಸಂತಾನೋತ್ಪತ್ತಿಯ ಸಾಮರ್ಥ್ಯಕ್ಕೆ ಎದುರಾಗಬಹುದಾದ ಹಾನಿಯನ್ನು ತಡೆಯಲು 1920ರಲ್ಲಿ ಮುಟ್ಟಿನ ರಜೆ ನೀಡುವ ಕ್ರಮ ಮೊದಲ ಬಾರಿಗೆ ಸೋವಿಯಟ್‌ ರಷ್ಯಾದಲ್ಲಿ ಆರಂಭವಾಯಿತು. ಆದರೂ ಮಹಿಳಾ ನೇಮಕಾತಿಯಲ್ಲಿ ಹೆಚ್ಚಳವೂ ಆಗಲಿಲ್ಲ ಮತ್ತು ಕಾರ್ಮಿಕರ ಮಧ್ಯೆ ತಾರತಮ್ಯಕ್ಕೆ ಕಾರಣವಾಗಿದ್ದರಿಂದ 1927ರಲ್ಲಿ ಈ ಕ್ರಮವನ್ನು ಅಲ್ಲಿನ ಸರ್ಕಾರ ಕೈಬಿಟ್ಟಿತು. 1947ರಲ್ಲಿ ಜಪಾನ್‌ ಸರ್ಕಾರ ಈ ಕ್ರಮವನ್ನು ತಮ್ಮಲ್ಲಿ ಅಳವಡಿಸಿಕೊಂಡಿತು. ಮುಂದೆ ಇಂಡೋನೇಷ್ಯಾ, ತೈವಾನ್‌, ದಕ್ಷಿಣ ಕೊರಿಯಾ, ಫಿಲಿಪ್ಪೈನ್ಸ್‌, ಜಾಂಬಿಯಾ, ಸ್ಪೇನ್‌, ವಿಯೆಟ್ನಾಂ ಮೊದಲಾದ ದೇಶಗಳು ಈ ನೀತಿಯನ್ನು ತಮ್ಮಲ್ಲಿ ಅಳವಡಿಸಿಕೊಂಡಿತು.

 

ಋತುಚಕ್ರ ನೀಡುತ್ತಿರುವ ರಾಜ್ಯಗಳು

ಋತುಚಕ್ರ ರಜೆಯ ನೀತಿಯನ್ನು ಅನುಸರಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೇ ಮೊದಲಲ್ಲ. ಕರ್ನಾಟಕಕ್ಕೂ ಬಹಳಷ್ಟು ಹಿಂದೆಯೇ ಈ ನೀತಿಯನ್ನು ಬೇರೆ ಬೇರೆ ರಾಜ್ಯಗಳು ಜಾರಿಗೆ ತಂದಿವೆ. ಮಹಿಳಾ ಸರ್ಕಾರಿ ನೌಕರರಿಗೆ ಮಾಸಿಕ ಎರಡು ವೇತನ ಸಹಿತ ರಜೆ ನೀಡುವ ಕ್ರಮವನ್ನು ಬಿಹಾರದಲ್ಲಿ 1992ರಲ್ಲೇ ಅಂಗೀಕರಿಸಲಾಗಿದೆ. ಕೇರಳದಲ್ಲಿ ವಿದ್ಯಾರ್ಥಿನಿಯರಿಗೆ ಹಾಜರಾತಿ ವಿನಾಯಿತಿಯೊಂದಿಗೆ ಮುಟ್ಟಿನ ರಜೆ ನೀಡಲಾಗುತ್ತಿದೆ. ಒಡೀಶಾದಲ್ಲಿ 2024ರಿಂದ ಸರ್ಕಾರಿ ಹಾಗೂ ಖಾಸಗಿ ವಲಯದ ಮಹಿಳಾ ಉದ್ಯೋಗಿಗಳಿಗೆ ಈ ರಜೆ ನೀಡಲಾಗುತ್ತಿದೆ. ಸಿಕ್ಕಿಂನಲ್ಲಿ ನ್ಯಾಯಾಂಗ ವಲಯದ ಮಹಿಳಾ ಸಿಬ್ಬಂದಿಗೆ ಈ ರಜೆ ದೊರೆಯುತ್ತಿದೆ.

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More