ಸಹಕಾರಿ ಸಂಸ್ಥೆಗಳಲ್ಲಿ ನಿರ್ದೇಶಕರ ಸಹ–ಆಯ್ಕೆ.|ಶ್ರೀ. ಶಂ.ನಾ.ಖಂಡಿಗೆ.

 

ಕೆಲವೊಂದು ಸಹಕಾರಿ ಸಂಸ್ಥೆಗಳಿಗೆ ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ಚುನಾಯಿತ ನಿರ್ದೇಶಕರು ರಾಜೀನಾಮೆ ಕೊಟ್ಟರೆ, ಮರಣ ಹೊಂದಿದರೆ ಆಡಳಿತದ ಅವಧಿ ಎರಡೂವರೆ ವರ್ಷ ಮಿರಿದ  ನಿರ್ದೇಶಕರ ಸಹ – ಆಯ್ಕೆ  ಮಾಡಬಹುದು. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ೧೯೫೯ರ ಸೆಕ್ಷನ್ (೪ಂ) ಮತ್ತು ಭಾರತದ ಸಂವಿಧಾನದ ೯೭ನೇ ತಿದ್ದುಪಡಿಯ ಅನ್ವಯ ಈ ಪ್ರಕ್ರೀಯೆ ಮಾಡಬಹುದು. ಚುನಾಯಿತ ನಿರ್ದೇಶಕರು ಇರುತ್ತಾರೆ ಆದರೆ ಆಡಳಿತದ ಓಘ ಬಹಳ ಶೋಚನೀಯವಾಗಿರುತ್ತದೆ. ಕೆಲವೊಮ್ಮೆ ನಿರ್ದೇಶಕರ ಬಳಗದೊಳಗೆ ಗುಂಪುಗಾರಿಕೆ, ಸ್ವಜನ ಪಕ್ಷಪಾತದಂತಹ ಘಟನೆಗಳು ಆಡಳಿತ ಮಂಡಳಿಯನ್ನು ದುರ್ಬಲಗೊಳಿಸುತ್ತವೆ. ಅನುಭವವಿಲ್ಲದ ಅಧ್ಯಕ್ಷ ಅಥವ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ನಡುವೆ ಹೊಂದಾಣಿಕೆಗಳಿಲ್ಲದ ಸ್ಥಿತಿಗಳು ಸಹಕಾರಿ ಸಂಸ್ಥೆಯ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ.

ತಜ್ಞರು, ಅನುಭವಿಗಳು

ಈ ರೀತಿ ಸಹ – ಆಯ್ಕೆ ಮಾಡುವಾಗ ಕೇವಲ ಇಬ್ಬರನ್ನು ಮಾಡಬಹುದಷ್ಟೆ. ಸಹಕಾರಿ ಸಂಸ್ಥೆಯ ವ್ಯವಹಾರ, ಕಾರ್ಯಚಟುವಟಿಕೆಗಳನ್ನು ಗಮನಿಸಿ ಆ ಕ್ಷೇತ್ರದಲ್ಲಿ ತಜ್ಞತೆಯನ್ನು ಹೊಂದಿದವರನ್ನು, ವಿಶೇಷ ಪರಿಣತರನ್ನು ಆಯ್ಕೆ ಮಾಡಬಹುದು. ಕೆಲವೊಂದು ಸಹಕಾರಿ ಸಂಸ್ಥೆಗಳನ್ನು ಅವಲೋಕಿಸುವಾಗ ಚುನಾವಣೆಯಲ್ಲಿ ವಿಜಯಗಳಿಸಿರುವುದೇನೊ ಹೌದು ಮುಂದಿನ ಐದು ವರ್ಷ ಇದುವರೆಗೆ ಆ ಸಂಸ್ಥೆ ಗಳಿಸಿದ ಲಾಭ, ಸದಸ್ಯರ ಪ್ರೀತಿ, ಸದಸ್ಯರಿಗೆ ಕೊಡುವ ಸೇವೆಗಳಿಗೆ ಆದ್ಯತೆ ಕೊಡದೆ ಬಹಳ ಪೇಲವ ಸ್ಥಿತಿಯಲ್ಲಿದ್ದರೆ ಒಂದೆರಡು ಅನುಭವಿಗಳನ್ನು ನಿರ್ದೇಶಕ ಮಂಡಳಿಗೆ ಸಹ – ಆಯ್ಕೆ ಮಾಡುವುದು ಅನಿವಾರ್ಯ ಆಗುತ್ತದೆ. ಈ ರೀತಿ ಆಯ್ಕೆ ಆದ ನಿರ್ದೇಶಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಹೊಂದುವAತಿಲ್ಲ. ಆಡಳಿತ ಮಂಡಳಿಯೊಳಗೆ ಮತದಾನದ ಪರಿಸ್ಥಿತಿ ಬಂದಾಗ ವೋಟು ಮಾಡುವ ಹಾಗಿಲ್ಲ.

ಆಡಳಿತ ಮಂಡಳಿಯ ಒಳಗೆ ವಿಶೇಷ ಪರಿಣತರು ಇರಬೇಕಾದ್ದು ಮುಖ್ಯ. ಅವರಿಗೆ ಕೆಲವೊಂದು ನಿರ್ಬಂಧಗಳು ಇದ್ದರೂ ಒಟ್ಟು ಆಡಳಿತ ಚುಕ್ಕಾಣಿ ಆಮೆಗತಿಯಲ್ಲಿ ಚಲಿಸುತ್ತಿರುವಾಗ ಅದಕ್ಕೆ ಹೊಸ ಹುರುಪನ್ನು, ಹೊಸತನವನ್ನು ಒದಗಿಸಲು ಮುತುವರ್ಜಿ ವಹಿಸಿದರೆ ಸಾಕು.

ಆಯ್ಕೆಯಲ್ಲಿ ಗೊಂದಲ

ಕೆಲವೊಂದು ಸಹಕಾರಿ ಸಂಸ್ಥೆಯ ಚುನಾವಣೆ ಸಂದರ್ಭದಲ್ಲಿ ನಿರ್ದೇಶಕರಾಗಲು ಸೂಚಿಸುವ ವ್ಯಕ್ತಿಗಳು ಗೆಲ್ಲುವುದೇನೊ ಗೆಲ್ಲುತ್ತಾರೆ. ಆದರೆ ಅವರು ಮುಂದೆ ಆಡಳಿತ ನಡೆಸುವ ಸಮಯದಲ್ಲಿ ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸುತ್ತಾರೆ. ಇತ್ತೀಚೆಗೆ ಗಮನಿಸಿದ ಹಾಗೆ ಸಂಸ್ಥೆಯ ಅಧ್ಯಕ್ಷರನ್ನೆ ಸಿಬ್ಬಂದಿಗಳ ಒಂದು ಗುಂಪು ನಿಯಂತ್ರಿಸಿ ಅಧ್ಯಕ್ಷರ ಸ್ವಂತಿಕೆಯನ್ನೆ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ನೋಡಿದೆ. ಅಲ್ಲಿಯ ನಿರ್ದೇಶಕರು ಕೂಡ ಈ ಸಿಬ್ಬಂದಿಗಳ ಮುಷ್ಠಿಯಲ್ಲಿ ಸಿಕ್ಕಿರುವುದು ದೊಡ್ಡ ದುರಂತ. ನಿರಂತರ ಲಾಭದಲ್ಲಿದ್ದ ಒಂದು ಸಹಕಾರಿ ಸಂಸ್ಥೆ ಆಡಳಿತ ಮಂಡಳಿ ಬದಲಾದ ಮೇಲೆ ಲಾಭ ಇಲ್ಲದಿದ್ದರೂ ಅದು ಇದೆ ಎಂದು ತೋರಿಸುವ ಹಂತಕ್ಕೆ ಬಂದಿದೆಯೆಂದಾದರೆ  ಅದು ಅಪಾಯಕಾರಿ ಸ್ಥಿತಿ. ನಾನು ಗಮನಿಸಿದಂತಹ ಸಂಸ್ಥೆಗಳು ಹಲವಾರಿರಬಹುದು. ಆಡಳಿತ ಮಂಡಳಿಗೆ ನಿರ್ದೇಶಕರನ್ನು ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡುವಾಗ ದಾರಿಯಲ್ಲಿ ಹೋಗುವವರನ್ನು ಹಿಡಿದು ಲೆಕ್ಕ ಭರ್ತಿಗೆ ನಾಮಪತ್ರ ಸಲ್ಲಿಸುವಂತಾದರೆ ಇಂತಹ ಪರಿಸ್ಥಿತಿಗಳು ಬರುತ್ತವೆ.

ಸ್ವಂತ ನಿರ್ಧಾರಗಳಿಲ್ಲದ ಸ್ಥಿತಿ

ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಗೆ ಸ್ವಂತ ನಿಲುವುಗಳನ್ನು ತೆಗೆದುಕೊಳ್ಳಲು ಅನುಭವ ಸಾಲದಿರುವಾಗ ಸಹ – ಆಯ್ಕೆಯ ಅಗತ್ಯ ತುಂಬ ಇದೆ ಅನಿಸುತ್ತದೆ. ಐದು ವರ್ಷಗಳ ಆಡಳಿತಾವಧಿಯ ಆಡಳಿತ ಮಂಡಳಿ ಒಂದೆರಡು ವರ್ಷಗಳಲ್ಲಿ ಕೂಡ ಪಥಕ್ಕೆ ಬರದಿದ್ದರೆ ಮುಂದಿನ ವರ್ಷಗಳಲ್ಲಿ ಚೇತರಿಸುವುದು ಕಷ್ಟ. ಈ ಸಮಯದಲ್ಲಿ ಆಡಳಿತ ಮಂಡಳಿಗೆ ಎರಡೂವರೆ ವರ್ಷ ಪೂರೈಸಿದ ಕೂಡಲೆ ಸಹ – ಆಯ್ಕೆಯ ಯೋಚನೆ ಮಾಡಬಹುದು. ಎಷ್ಟೋ ಸಂಸ್ಥೆಗಳಲ್ಲಿ ಒಂದೆರಡು ಸಿಬ್ಬಂದಿಗಳೇ ಆಡಳಿತ ಮಂಡಳಿಯನ್ನು ಕುಣಿಸುವುದಿದೆ. ಆಡಳಿತಾತ್ಮಕ ನಿರ್ಧಾರಗಳಲ್ಲಿ ಆಡಳಿತ ನಡೆಸುವವರಿಗೆ ಅನುಭವ ಕಡಿಮೆಯಾದಾಗ ಇಂತಹ ಮಂದಿ ತಲೆ ಎತ್ತುತ್ತಾರೆ. ಇದು ಬಹಳ ಅಪಾಯಕಾರಿ ಸ್ಥಿತಿ. ಸಿಬ್ಬಂದಿಗಳೊಳಗೆ ಗುಂಪುಗಾರಿಗೆ, ಒಬ್ಬರ ಮೇಲೊಬ್ಬರು ಸವಾರಿ ಮಾಡುವುದು, ಪಕ್ಷಪಾತ ಕ್ರಮಗಳೆಲ್ಲ ಸಂಭವಿಸುವ ಸಾಧ್ಯತೆಗಳು ಇಂತಹ ವಾತಾವರಣದಲ್ಲಿ ಹೆಚ್ಚಿರುತ್ತವೆ.

ಆಕ್ಟಿಂಗ್ ಪ್ರೆಸಿಡೆಂಟ್

ಅಧ್ಯಕ್ಷರು ತಾನು ತನ್ನ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡುವುದು ಕಷ್ಟ ಅಂತ ಅನಿಸಿದಾಗ ಅದೇ ಆಡಳಿತ ಮಂಡಳಿಯ ನಿರ್ದೇಶಕರು ಯೋಚನೆ, ಯೋಜನೆಗಳನ್ನು ರೂಪಿಸಿ ಅಧ್ಯಕ್ಷರನ್ನು ಮುಂಡಿಟ್ಟುಕೊಂಡು ಸಂಸ್ಥೆ ಚೆನ್ನಾಗಿ ನಡೆಯುವಂತೆ ಮಾಡುವುದಿದೆ. ಆ ನಿರ್ದೇಶಕರನ್ನು ಕೆಲವರು ‘ಆಕ್ಟಿಂಗ್ ಪ್ರೆಸಿಡೆಂಟ್’ ಅಂತ ಕರೆಯುವುದಿದೆ. ಒಂದು ರೀತಿಯ ತಮಾಶೆಯಾಗಿ ಹೀಗೆ ಕರೆಯುವುದು. ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡಿದವರಿಗೆ ಇದು ಅನಿವಾರ್ಯ ಅಂತ ತಿಳಿದೇ ತಿಳಿಯುತ್ತದೆ. ಯಾಕೆಂದರೆ ಮುಂದಿನ ದಿನಗಳಲ್ಲಿ ಸಂಸ್ಥೆ ಮುಂದಡಿಯಿಡಬೇಕಾದ ಹಜ್ಜೆಗಳನ್ನು ಗುರುತು ಹಾಕುವುದು, ನಷ್ಟವಾದ ವಿಶ್ವಾಸಗಳನ್ನು ಸದಸ್ಯರಲ್ಲಿ ಮತ್ತೆ ಬೆಳೆಸುವ ಉಪಕ್ರಮಗಳನ್ನು ಜೋಡಿಸುವುದು ಮುಂತಾದ ಕಾರ್ಯ ಯೋಜನೆಗಳನ್ನು ಅಂತಹ ‘ಆಕ್ಟಿಂಗ್ ಪ್ರೆಸಿಡೆಂಟ್’ ಮಾಡುತ್ತಾರೆ. ಅದೇನಿದ್ದರು ಸಂಸ್ಥೆಯನ್ನು ಮುಂದೆ ಹೋಗುವಂತೆ ಹಾಗೂ ಅಲ್ಲಿದ್ದ ಸಿಬ್ಬಂದಿಗಳನ್ನು ಜೊತೆಯಾಗಿ ಕರೆದುಕೊಂಡು ಹೋಗುವ ನಾಜೂಕುತನ ಅಳವಡಿಸಿಕೊಂಡರೆ ಸದಸ್ಯರ ಆತಂಕಗಳು ಸಾಕಷ್ಟು ಕಡಿಮೆಯಾಗುತ್ತದೆ.

ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸಹಕಾರಿ ಸಂಘದ ಆಧಾರ ಸ್ಥಂಭವಾದ ಸದಸ್ಯರು ಜೊತೆಯಾಗಿ ಇರದಿದ್ದರೆ ಏನಾದರೊಂದು ಅನಾಹುತ ಆ ಸಂಸ್ಥೆಯಲ್ಲಿ ಘಟಿಸದೆ ಹೋಗುವುದಿಲ್ಲ. ಒಬ್ಬ ಅಧ್ಯಕ್ಷ ಆದವನು ವಿನಾಕಾರಣ ಸಿಬ್ಬಂದಿಗಳ ಮುಖ್ಯಸ್ಥನಾದ ಸೆಕ್ರೆಟರಿ ಅಥವ ಸಿ.ಇ.ಒ.ವನ್ನು ದೂರವಿಟ್ಟು ಸಿಬ್ಬಂದಿಗಳಲ್ಲಿ ಭೇದ ಭಾವಗಳ ಬೀಜಬಿತ್ತುವುದು, ದ್ವೇಷ ಹುಟ್ಟುಹಾಕುವುದು, ಭೀತಿಯ ವಾತಾವರಣ ಬೆಳೆಸುವುದು, ಸಿಬ್ಬಂದಿಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಸಿಬ್ಬಂದಿಗಳ ಸಭೆ ನಡೆಸಿ ಕೈಗೊಳ್ಳುವುದೆಲ್ಲ ಒಂದು ಸಂಸ್ಥೆಯ ಅವನತಿಗೆ ದಾರಿ ಮಾಡಿಕೊಡುತ್ತದೆ. ಇಂತಹ ದುರ್ವರ್ತನೆಗಳನ್ನು ಹತೋಟಿಯಲ್ಲಿಟ್ಟು ಹಿರಿಯ ಸಹಕಾರಿಗಳು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಜೋಪಾನವಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಹ – ಆಯ್ಕೆಯ ದಾರಿಯನ್ನು ಬಳಕೆ ಮಾಡಿಕೊಳ್ಳಲೇ ಬೇಕು. ಮುಳುಗಿಸುವ ಬದಲು ದಡ ದಾಟಿಸುವ ಜಾಣ್ಮೆ ಅನುಸರಿಸಬೇಕು.

 

ಶಂ.ನಾ.ಖಂಡಿಗೆ.

 

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More