ಕಲ್ಲತ್ತರು ನಾಡೆಂದು ಖ್ಯಾತಿ ಪಡೆದ ತುಮಕೂರು ಜಿಲ್ಲೆಯಲ್ಲಿ ನಗರ ಪತ್ತಿನ ಸಹಕಾರ ಸಂಘಗಳು ಸಧೃಡವಾಗಿ ಪ್ರಗತಿಹೊಂದುತ್ತಿದ್ದು ವಿಶೇಷತವಾಗಿ, ಪರಿಶಿಷ್ಟಪಂಗಡಗಳ ಆರ್ಥಿಕ ಹಾಗೂ ಸಮಾಜಿಕ ಸಬಲತೆಗಾಗಿ ಸಹಕಾರಿ ಸಂಸ್ಥೆಯನ್ನು ಹುಟ್ಟುಹಾಕಿ ಬೆಳಸಿದ ಶಿರ್ಶಿ ಶ್ರೀ ಬಿ ಜಿ ಕೃಷ್ಣಪ್ಪನವರಿಗೆ ಸಲ್ಲಬೇಕು. ದಿನಾಂಕ 07-08-1952ರಂದು ಜನಿಸಿದ ಬಿ.ಜಿ.ಕೃಷ್ಣಪ್ಪನವರು ಹೆಚ್ ಎಮ್ ಟಿ ಯಲ್ಲಿ ನಿವೃತ್ತ ನೌಕರರು. 1995ರಲ್ಲಿ ತುಮಕೂರಿನ ಗೋಕುಲ ಬಡವಾಣೆಯಲ್ಲಿ ಹಲವು ಸಮಾನ ಮನಸ್ಕರನ್ನು ಒಗ್ಗೂಡಿಸಿ ತುಮಕೂರು ವಾಲ್ಮೀಕಿ ಸಹಕಾರ ಸಂಘವನ್ನು ಶ್ರೀ ಕೃಷ್ಣಪ್ಪನವರ ನಾಯಕತ್ವದಲ್ಲಿ ಸ್ಥಾಪಿಸಿಕೋಳಲಾಯಿತು.
ಪ್ರಾರಂಭದಲ್ಲಿ 1,75,000 ಷೇರು ಬಂಡವಾಳ ಹಾಗೂ 150 ಸದಸ್ಯರೊಂದಿಗೆ ಗೋಕುಲ ಬಡಾವಣೆಯಲ್ಲಿ ಪ್ರಾರಂಭವಾಯಿತು ಪ್ರಸ್ತುತ 5000 ಸಾವಿರ ಸದಸ್ಯರೊಂದಿಗೆ 05 ಶಾಖೆಗಳನ್ನು ಹೊಂದಿದೆ ಹಾಗೂ 80 ಕೋಟಿ ಠೇವಣೆ ಹೊಂದಿದ್ದು 100 ಕೋಟಿಯಷ್ಟು ವಹಿವಾಟನ್ನು ಹೊಂದಿದೆ. ಹಾಗೂ ಸಹಕಾರಿ ಸ್ವಂತ ಕಟ್ಟಡವನ್ನು ಹೊಂದಿದೆ. ಒಟ್ಟು 6ಕೋಟಿಯಷ್ಟು ಸ್ಥಿರಾಸ್ತಿ ಮತ್ತು 2 ಕೋಟಿಯಷ್ಟು ಚರಾಸ್ಥಿ ಹೊಂದಿದೆ. ಸಹಕಾರಿಯಿಂದ ವ್ಯವಸಾಯೇತರ ಎಲ್ಲಾ ರೀತಿಯ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಲಾಗುತ್ತಿದೆ.
ಸಹಕಾರಿಯಿಂದ ಸದಸ್ಯರಿಗೆ ಆರೋಗ್ಯ ನಿಧಿ. ಸದಸ್ಯರ ವಿದ್ಯಾವಂತ ಮಕ್ಕಳಿಗೆ ಪುರಸ್ಕಾರ ಐಎಎಸ್ ಮತ್ತು ಕೆಎಎಸ್ ಮಾಡುವವರಿಗೆ ತರಬೇತಿ ವೆಚ್ಚವನ್ನು ನೀಡಲಾಗುತ್ತಿದೆ ಇಷ್ಟೆಲ್ಲಾ ಅಭಿವೃದ್ಧಿಯು ಇವರ ಅಧ್ಯಕ್ಷತೆಯಲ್ಲಿ ಆಗಿರುವುದು ಹೆಮ್ಮೆಯ ವಿಷಯ ಆಗಿರುತ್ತದೆ.
ಈ ಎಲ್ಲಾ ಆದ್ಭುತ ಸಾಧನೆಗಳ ಹಿಂದೆ ಶ್ರೀ ಕೃಷ್ಣಪ್ಪನವರ ಶ್ರಮ ಮತ್ತು ಪರಿಶ್ರಮ ಆಡಗಿದೆ. ಸತ್ತತ್ತವಾಗಿ ಇಪ್ಪತ್ತೆಂಟು ವರ್ಷಗಳ ಕಾಲ ಸಂಘದ ಸಾರಥ್ಯ ವಹಿಸಿಕೊಂಡು ಮುನ್ನಡೆಸುತ್ತಿರುವ ಶ್ರೀ ಕೃಷ್ಣಪ್ಪನವರಿಗೆ 2023ರ ಆಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕರ್ನಾಟಕ ಸರ್ಕಾರದಿಂದ ಸಹಕಾರಿ ರತ್ನ ಪ್ರಶಸ್ತಿ ಲಭಿಸಿದೆ.
ಸಹಕಾರಿ ಕ್ಷೇತ್ರಕ್ಕೆ ತನ್ನನ್ನು ತರುವಲ್ಲಿ ಅಲ್ಲದೆ ಕಾಲಕಾಲಕ್ಕೆ ಧೀರ ಧೀಮಂತ ಮಾರ್ಗದರ್ಶನ ಸಲಹೆ ನೀಡುತ್ತ ಪ್ರೋತ್ಸಾಹಿಸುತ್ತಿರುವ ನಮ್ಮ ರಾಜ್ಯದ ಮಾನ್ಯ ಸಹಕಾರ ಸಚಿವರು ಹಾಗೂ ಸಹಕಾರಿ ದಿಗ್ಗಜ ಶ್ರೀ ಕೆ ಎನ್ ರಾಜಣ್ಣನವರನ್ನು ತಮ್ಮ “ಸಹಕಾರಿ ಗುರು” ಸ್ಥಾನದಲ್ಲಿ ಇಟ್ಟುಕೊಂಡಿರುವದನ್ನು ಶ್ರೀ ಕೃಷ್ಣಪ್ಪನವರು ಸಾವ5) ನಮ್ರತೆಯಿಂದ ಹೇಳುತ್ತಾರೆ.
ಸಹಕಾರಿ ಕ್ಷೇತ್ರ ಅಲ್ಲದೆ ಧಾರ್ಮಿಕ, ಕಾರ್ಮಿಕ ಹಾಗೂ ಇತರ ಕ್ಷೇತ್ರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿ ನಗರದ ಗೋಕುಲ ಬಡವಾಣೆಯಲ್ಲಿ ಶ್ರೀ ವಿದ್ಯಾಗಣಪತಿ ಸೇವಾಸಮಿತ್ತಿಯನ್ನು ರಚಿಸಿಕೊಂಡು ದೇವಸ್ಥಾನದ ಸಂಸ್ಥಾಪಕ ಅಧ್ಯಾಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಒಂದು ಸುದಂರವಾದ ಶ್ರೀ ವಿದ್ಯಾಗಣಪತಿ ದೇವಸ್ಥಾನವನ್ನು ನಿರ್ಮಾಣ ಮಾಡಿರುವುದು ಇವರ ಪರಿಶ್ರಮದ ಫಲವಾಗಿರುತ್ತದೆ.
ತುಮಕೂರು ಮಹಾ ನಗರ ಪಾಲಿಕೆಯ ಸದ್ಯಸರಾಗಿ 2018ರಲ್ಲಿ ಆಯ್ಕೆಗೊಂಡು ತದನಂತರ ಮಹಾನಗರ ಪಾಲಿಕೆಯ ಮಹಾಪೌರರಾಗಿ ಪಟ್ಟವನ್ನು ಅಲಂಕರಿಸಿ ಆನೇಕ ವಿಧಾಯಕ ಕಾರ್ಯಗಳನ್ನು ನಗರದಲ್ಲಿ ಕೈಗೊಂಡು ಒಬ್ಬ ಮಾದರಿ ಮಾಹ ಪೌರರಾಗಿರುವುದು ಇಲ್ಲಿ ಉಲ್ಲೇಖನೀಯ.
ಹೀಗೆ ಸಾರ್ವಜನಿಕ ರಂಗದಲ್ಲಿ ಇರಲ್ಲಿ, ಸಾಮಾಜಿಕ ರಂಗದಲ್ಲಿ ಇರಲಿ, ವೈಯಕ್ತಿಕ ವ್ಯವಹಾರದಲ್ಲಿರಲಿ ಉಗ್ರವಲ್ಲದ ಗಾಂಭೀರ್ಯ ಹಗುರಾಗದ ಹಾಸ್ಯ, ದೌರ್ಬಲ್ಯವೆನಿಸದ ಸೌಜನ್ಯ, ಚಾಲಾಖು ಅನಿಸದ ಚಾತುರ್ಯ, ಕೃತ್ರಿಮವಾಗಿ ಕಾಣದ ಸಂಯಮ, ಪ್ರದರ್ಶನಕ್ಕೆ ಹೊರಡದ ವೈಚಾರಿಕತೆ, ಆಢತೆಗೆ ಹಾಯದ ಮಾರ್ಗದರ್ಶಿತನ, ದುರಹಂಕಾರವಾಗದ ಸ್ವಾಭಿಮಾನ, ಇದು ಕೃಷ್ಣಪ್ಪನವರ ವ್ಯಕ್ತಿತ್ವದ ವಿಶೇಷತೆ. ಇವರುಗೆ ಉಜ್ವಲ ಸಹಕಾರಿ ಭವಿಷ್ಯವಿದೆ ಎಂದು ಬೇರೆ ಹೇಳಬೇಕಾಗಿಲ್ಲ.
ಶಂಕರ ಹೆಗೆಡೆ.
ಸಹಕಾರಿ ಸಲಹೆಗಾರರು ತುಮಕೂರು
№: 8095595512