ಭಾರತೀಯರ ಕೌಟುಂಬಿಕತೆಯ ನಿತ್ಯ ಜೀವನ ಪದ್ಧತಿಯಲ್ಲಿ ಶ್ರೀಮಂತ ಮೌಲ್ಯಾಧಾರಿತ ಸಹಕಾರ ಮತ್ತು ಸಮನ್ವಯವು ಹಾಸು ಹೊಕ್ಕಾಗಿದೆ. ಭಾರತೀಯರ ಸಾಂಪ್ರಾದಾಯಿಕ ಕುಟುಂಬ ವ್ಯವಸ್ಥೆಯು “ವಸುದೈವ ಕುಟುಂಬಕಂ’ನ ಮೂಲ ತತ್ವದ ಆಧಾರದ ಮೇಲೆ ನಿರ್ಮಾಣವಾಗಿದ್ದು ಭೂಮಿಯ ಮೇಲಿರುವ ಸಕಲ ಮಾನವರು, ಮಾನವ ಜೀವ ಜಂತುಗಳು ಒಂದೇ ಕುಟುಂಬದವರು ಎಂಬ ನಂಬಿಕೆಯ ಮೇಲೆ, ಗಟ್ಟಿಯಾದ ವಿಶ್ವಾಸದ ತಳಹದಿಯ ಮೇಲೆ, ಭಾಂಧವ್ಯಗಳಿಂದ ಬೆಸೆದ ಬಳ್ಳಿಗಳ ಒಟ್ಟೂ ಗುಜ್ಜಿಗಳ ಸಮೂಹದಿಂದ ನಿರ್ಮಾಣವಾಗಿದೆ. ವಸು ಎಂದರೆ ಭೂ ಧರೆ, ಭೂ ಮಾತೆ ಎಂದು ಅರ್ಥ ಕೂಡ. ಪೃಥ್ವಿಯ ಮೇಲಿರುವ ಯಾವುದೇ ನಾಗರೀಕ ಸಮಾಜದಲ್ಲಿ ಈ ರೀತಿಯ “ವಸುದೈವ ಕುಟುಂಬಕಂ’ನ ಪರಿಕಲ್ಪನೆಯ ಸಧೃಡ ಆಧಾರದ ಮೆಲೆ ನಿರ್ಮಿತವಾಗಿಲ್ಲ. ಈ ಬಲಿಷ್ಠ ತಳಹದಿಯ ಮೇಲಿನ ಸಮಾಜದ ಮೂಲ ವ್ಯವಸ್ಥೆಯಾದಕೌಟುಂಬಿಕ ಗೃಹಸ್ಥಶ್ರಾಮದನಿರ್ಮಾಣತೆಯ ಪರಿಕಲ್ಪನೆ, ಅವಿಭಕ್ತ ವಿಸ್ತ್ರತ ಕುಟುಂಬ ವ್ಯವಸ್ಥೆಯ ನಿರ್ಮಾಣ, ಅದರ ಅನುಷ್ಠಾನ ಮತ್ತು ಆಚರಣೆ ಭಾರತದ ಅತ್ಯನ್ನತ ನಾಗರೀಕ ಪರಂಪರೆಯಲ್ಲಿ ಮಾತ್ರ ಕಂಡು ಬರುತ್ತದೆ. ಈ ಮಣ್ಣಿನಿಂದಲೇ ಭೂಧರೆಯ ಇಂದಿನ ಇತರೆ ಖಂಡಾಂತರಗಳಲ್ಲಿ ಮಾನವತೆಯ ನಾಗರೀಕತೆ ಪ್ರಚಲಿತವಾಗಿದೆ.
ಇತ್ತೀಚಿನ ದಿನಗಳಲ್ಲಿ ಭೂಮಂಡಲದ ಯಾವುದೇ ಭಾಗದಲ್ಲಿ ಉತ್ಪನನಗಳು ನಡೆದರೆ ಅಲ್ಲಿ ಭಾರತೀಯ ನಾಗರೀಕತೆಯ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಕುರುಹುಗಳೇ ಕಾಣಬರುತ್ತಿದೆ. ಪ್ರಾಯಶಃ ಸಹಸ್ರ, ಸಹಸ್ರ ಶತಮಾನಗಳ ಹಿಂದೆ ಭೂಮಿಯ ಎಲ್ಲಾ ಖಂಡಗಳು ಕೂಡ ಒಟ್ಟಿಗೆ ಇದ್ದವೋ ಎಂಬ ಅನಿಸಿಕೆ ಮೂಡುವುದು ಸಹಜವಾಗಿದೆ.
ಭಾರತೀಯರ”ವಸುದೈವ ಕುಟುಂಬಕಂ” ನ ಜೀವನ ಪದ್ಧತಿಯ ಆಧಾರದಲ್ಲಿ, ಭೂಮಿಯ ಮೇಲಿನ ಎಲ್ಲಾ ಮಾನವ ಜೀವಿಗಳು ಅಂದರೆ ಮನುಷ್ಯರು ಒಂದೇ ಕುಟುಂಬದವರು ಎಂಬ ಆಲೋಚನೆ ಮೂಡಿದ ಕೂಡಲೇ ಅವರೆಲ್ಲರ ನಡುವೆ ನೈಸರ್ಗಿಕವಾಗಿ ಮತ್ತು ಸ್ವಾಭಾವಿಕವಾಗಿ ಆತ್ಮೀಯತೆಯ ಭಾವನೆ. ಬಂಧು-ಬಾಂದವರ ಭಾಂಧವ್ಯಗಳು ಮೂಡುವುದು ಸಹಜವಾಗಿರುತ್ತದೆ.ಎಲ್ಲರೂ ನಮ್ಮವರೇ ಎಂದ ಕೂಡಲೇ ನಮ್ಮಗಳ ನಡುವೆ ಅವಿನಾಭಾವದ ನವಿರಾದ ಪ್ರೀತಿ, ವಿಶ್ವಾಸ ಮೂಡಿ ಆನಂದತೆಯ ಹೊಸ್ತಿಲಿಗೆ ತಂದು ನಿಲ್ಲಿಸುತ್ತದೆ. ಎಲ್ಲಿ ಪ್ರೀತಿ, ವಿಶ್ವಾಸ ಇರುತ್ತದೋ ಅಲ್ಲಿ ಸಹಕಾರ. ಸೌಹಾರ್ದ ಮತ್ತು ಸಮನ್ವಯವು ಹೇಳದಿದ್ದರು ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ. ಮತ್ತು ಅಲ್ಲಿ ಶಾಂತಿ, ಸಹಭಾಳ್ವೆಯಿಂದ ನೆಮ್ಮದಿಯಾಗಿ, ಕಷ್ಟ ಸುಖಗಳಲ್ಲಿ ಎಲ್ಲರೂ ಸಹಭಾಗಿಯಾಗಿ, “ಒಬ್ಬರಿಗಾಗಿ ಎಲ್ಲರೂ ಮತ್ತು ಎಲ್ಲರಿಗಾಗಿ ಪ್ರತಿಯೊಬ್ಬರು/ ಒಬ್ಬರು ” ನಿರ್ಮಲವಾದಧೃಡವಾದ ನಂಬಿಕೆಯ ಮನಸ್ಥಿತಿಯಿಂದ, ನಿರಾಳವಾದ ಪರಿಸರದಲ್ಲಿ ನಿರಾಮಯವಾದಂತಹ ಬದುಕನ್ನು ಕಟ್ಟಿಕೊಂಡುಜೀವಿಸುತ್ತಾರೆ.ಎಲ್ಲೆಡೆಯು ಶಾಂತಿ ಮತ್ತು ಸೌಹಾರ್ದತೆ ಪಸರಿಸಿರುತ್ತದೆ.
ಬಹು ಮುಖ್ಯವಾಗಿ ಈ ಹಂದರದಲ್ಲಿ ಎಲ್ಲರೂ ಕೂಡ ಇದೇ ರೀತಿಯ ಮಾನಸಿಕತೆಯ ಆಸ್ಥಿತೆಯನ್ನು ಹೊಂದಿರಬೇಕು. ಇಲ್ಲದಿದ್ದರೆ ನಂಬಿಕೆಗೆ ಹೊಡೆತ ಬೀಳುತ್ತದೆ. ಮೋಸವು ಆಗುತ್ತದೆ. ಈ ರೀತಿಯ ಸಾಂಪ್ರದಾಯಿಕತೆಯ ಉತ್ತುಂಗತೆಯ ಜೀವನ ಶೈಲಿಯಲ್ಲಿ ಬೆಳೆದಿರುವವರ ಮಧ್ಯೆ ಮಾತ್ರ ಇದು ಹಸನಾಗಿ ಹೊಂದಿಕೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿರುವಂತಹ ಮನಸ್ಥಿತಿಯವರ ನಡುವೆ ಇದರ ಹೊಂದಾಣಿಕೆ ಯಾವುದೇ ಮಾತ್ರಕ್ಕೂ ಕೂಡ ಸಲ್ಲದು.
ಇಲ್ಲಿ ಎಲ್ಲರೂ ಸಾವಧಾನವಾಗಿ ಕುಳಿತು ಸಂವಹನ, ಸಂಭಾಷಣೆಯಿಂದ ಸಮಸ್ಯೆಗಳನ್ನು ಅರಿತು ಅದನ್ನು ಬಗೆಹರಿಸಿಕೊಳ್ಳುವ ಮನೋಸಂಕಲ್ಪ, ಮಾನಸಿಕ ಸ್ಥಿತಿ ಮತ್ತು ಅಲ್ಲಿನ ಸಭಾ ನಿರ್ಣಯಗಳಿಗೆ ಮತ್ತು ಅಲ್ಲಿನ ಸಭಾ ನಿರ್ಣಯಗಳಿಗೆ ಅದನ್ನು ಅಳವಡಿಸಿಕೊಳ್ಳುವ ಮುಕ್ತ ವೈಚಾರಿಕತೆ ఎల్లರಲ್ಲೂ ಇದ್ದರೆ ಮಾತ್ರ ಅದು ಸಮೃದ್ಧವಾದ ಸಾಂಸಾರಿಕ ವ್ಯವಸ್ಥೆ. ಆದರೆ ಎರಡು ವಿರುದ್ಧ ವೈಚಾರಿಕತೆಯ ಸಿದ್ದಾಂತಗಳಿದ್ದರೆ, ಅಲ್ಲಿ ಹೊಂದಾಣಿಕೆಯಾಗದಂತಹ ಭಿನ್ನ ಅಭಿಪ್ರಾಯಗಳಿದ್ದರೆ, ಅಲ್ಲಿ ಸಕಾರಕ್ಕಿಂತ ಅಸ ಅಸಹಕಾರವೇ ಏರ್ಪಟ್ಟು ಆಘಾತವೇ ಆಗುವುದು ಸಹಜ ಪ್ರಕ್ರಿಯೆಯಾಗಿರುತ್ತದೆ.
ಸಕಲ ಜೀವ ರಾಶಿಗಳಲ್ಲೂ ಕೂಡ ಸಹಕಾರ ಮತ್ತು ಸೌಹಾರ್ದಯುತವಾದ ಜೀವನ ಪದ್ಧತಿಯನ್ನು ವಿಶ್ವದ ಮೊದಲ ಮತ್ತು ಆದಿ ದಂಪತಿಗಳಾದ ಶಿವ, ಪಾರ್ವತಿ ಮತ್ತ ಉತ್ತು ಬ್ರಮಣ್ಯ ಹಾಗು ಸದಸ್ಯರಾದ ಪ್ರಥಮಾಧಿಪ ಗಣಪ, ಕಾರ್ತಿಕೇಯ ಸುಬ್ರ ಕುಟುಂಬದ ಸದಸ್ಯರಾದ ವಾಹನಗಳಾದ ಮೂಷಿಕ, ಸರ್ಪ, ನವಿಲು, ನಂದಿ ಮತ್ತು సింಹಗಳು ಹೇಗೆ ತಮ್ಮ ನೈಸರ್ಗಿಕ, ಸ್ವಾಭಾವಿಕ. ದ್ವೇಷವನ್ನು ಮರೆತು ಒಟ್ಟಿಗೆ ಸೌಹಾರ್ದಯುತವಾಗಿ ಒಂದಾಗಿ ಬಾಳುವದನ್ನು ನಾವುಗಳು ಶಿವಪುರಾಣ, ದೇವಿಪುರಾಣಗಳ ಮೂಲಕ ಓದಿ, ಅರ್ಥೈಸಿಕೊಂಡು ಅದನ್ನು ನಮ್ಮ ಪೂರ್ವಜರು ಬಾಳಿ. ಬದುಕಿರುವುದನ್ನು ಅರಿತಿದ್ದೇವೆ. ಒಂದು ಸುಭದ್ರ ದೇಶ ಅಥವಾ ರಾಷ್ಟ್ರ ಅಥವಾ ಸಮಾಜದ ಮೂಲವೆಂದರೆ ಸಾಂಪ್ರಾದಾಯಿಕವಾದ ವಿಸ್ತ್ರತ ಕೌಟುಂಬಿಕ ವ್ಯವಸ್ಥೆಯು, ಇಂಥಹ ನಂಬಿಕೆಯ ತಳಹದಿಯ ಅಡಿಪಾಯದ ಮೇಲೆಸಮಾಜವು ನಿರ್ಮಿತವಾದರೆ ಅದು ಕಲ್ಯಾಣ ರಾಜ್ಯ ಸುಭದ್ರ ದೇಶ, ಅಖಂಡ ರಾಷ್ಟ್ರ ಮತ್ತು ಕಲ್ಯಾಣಸಮಾಜ ಆಗುವುದರಲ್ಲಿ ಸಂಶಯವೇ ಇಲ್ಲ.
ಸರ್ಕಾರ ಮತ್ತು ಅಸಹಕಾರ.
1918 – 1919ರ ಆಸು ಪಾಸಿನಲ್ಲಿ ಗುಜರಾತಿನ ಖೇಡಾ ವಿಭಾಗವು ತಿವ್ರವಾದ ಕ್ಷಾಮದಿಂದ, ಬರಗಾಲದಿಂದ ತತ್ತರಿಸುತ್ತಾ ಇತ್ತು. ಇಂತಹ ಸಂಧರ್ಭದಲ್ಲೂ ಕೂಡ ಬ್ರಿಟಿಷರ ಕುತ್ಸಿತ ಮನೋಭಾವದ ಅಧಿಕಾರಿಗಳು ದುರಾಲೋಚನೆಯಿಂದ ಆ ಪ್ರಾಂತ್ಯದಲ್ಲಿ ಕರ ಮತ್ತು ತೆರಿಗೆಯನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡಿ ಭಾರತೀಯರನ್ನು ಶೋಷಿಸಲು ಮುಂದಾದರು.ಇವರ ದುರಾಡಳಿತ ವಿರುದ್ದವಾಗಿ ಒಂದು ಸಂಘಟಿತ ಹೋರಾಟವನ್ನು ಮುನ್ನಡೆಸಲು ಓರ್ವ ಸಮರ್ಥ ನಾಯಕರ ಅಗತ್ಯವಿದ್ದ ಸಂಧರ್ಭದಲ್ಲಿ ಅಲ್ಲಿನ ಸಾಮಾನ್ಯ ವ್ಯಕ್ತಿ ಮುಂದೆ ಉಕ್ಕಿನ ಮನಷ್ಯ ಎಂದೇ ಪ್ರಚಲಿತರಾದಂತಹ ಸರ್ದಾರ್ ವಲ್ಲಭಾಭಾಯಿ ಪಟೇಲ್‌ರವರು ಜನರ ಅಶೋತ್ತರಗಳಿಗೆ ಧ್ವನಿಯಾಗಿ, ಅವರ ಹೋರಾಟಕ್ಕೆ ದಿಕ್ಕೂಚಿಯಾಗಿ ನಿಂತರು. ಆ ಪ್ರದೇಶದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಎಲ್ಲರ ಸಹಕ ಸಹಕಾರವನ್ನು ಯಾಚಿಸಿ, ಎಲ್ಲಾ ನಾಗರೀಕ ಬಂಧುಗಳ ಸಹಕಾರದಿಂದ, ಎಲ್ಲರೂ ಒಂದುಗೂಡಿ ತಮ್ಮ ಶಾಂತಿ ಮತ್ತು ಸೌರ್ಹಾದಯುತ ನಡೆಯಿಂದ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿಯನ ಯನ್ನು ಆರಂಭಿಸಿದರು. ಎಲ್ಲಾ ದೇಶ ಬಂಧುಗಳು ಸರ್ಕಾರಕ್ಕೆ ಪರಿಪೂರ್ಣವಾದ ಅಸಹಕಾರವನ್ನು ತೋರುವ ನಡೆಯನ್ನು ತಮ್ಮ ಪರಿಮಿತಿಯಲ್ಲಿ ಅನುಷ್ಠಾನಕ್ಕೆ ತಂದರು. ಪರಿಪೂರ್ಣವಾದ ಅಸಹಕಾರ ಎಂದರೆ, ಸರ್ಕಾರಕ್ಕೆ ತೆರಬೇಕಾದ ಖರ ನಿರಾಕರಣೆ, ಸರ್ಕಾರದ ಅಧಿಕಾರಿಗಳು ಬಂದರೆ ಅವರೊಟ್ಟಿಗೆ ಅಸಹಕಾರ, ಅವರ ಜೊತೆ ಶೂನ್ಯ ವ್ಯವಹಾರ, ಕನಿಷ್ಠ ಸಂವಹನ, ಸಂಪರ್ಕ ನಿರಾಕರಣೆ, ಸರ್ಕಾರದ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಿಕೆಗೂ ಅಸಹಕಾರ, ಆಹಾರ, ನೀರು, ವಸತಿ ಹಾಗು ಗ್ರಾಮ ಸಂಪರ್ಕಗಳಿಗೂ ಕೂಡ ಅವರೊಟ್ಟಿಗೆ ಸಹಕಾರಿ. ಯಾವುದೇ ವ್ಯಕ್ತಿ ಅಥವಾ ಸಮುದಾಯ ಅಥವಾ ಗ್ರಾಮಗಳು ಇದನ್ನು ಪಾಲಿಸದಿದ್ದರೆ. ಅಧಿಕಾರಿಗಳಿಗೆ ಸಹಕರಿಸಿ ಮತ್ತು ಅವರಿಗೆ ಸವಲತ್ತು ನೀಡಿದ್ದರೆ, ಅಂತಹ ವ್ಯಕ್ತಿ ಅಥವಾ ಸಮುದಾಯ ಅಥವಾ ಗ್ರಾಮಗಳೊಂದಿಗೆ ಪೂರ್ಣ ಬಹಿಷ್ಕಾರ ಮತ್ತು ಅವರಿಗೂ ಕೂಡ ಅಸಹಕಾರ.
ಇದರಿಂದ ವಿಚಲಿತರಾದ ಬ್ರಿಟಿಷ್ ಅಧಿಕಾರಿಗಳು ಗ್ರಾಮದ ನಿವಾಸಿಗಳ, ಜಾನುವಾರುಗಳು, ಆಸ್ತಿ, ಮನೆ, ಜಮೀನು ಮತ್ತು ಸಾಕುಪ್ರಾಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆರಂಭಿಸಿತು. ಇದಕ್ಕೆ ಜಗ್ಗದ ದೇಶಬಂಧುಗಳು ಶಾಂತಿ ಮತ್ತು ಸಹನೆಯಿಂದ ಸರ್ಕಾರದೊಂದಿಗೆ ಅಸಹಕಾರವನ್ನು ಮುಂದುವರೆಸಲು, ಬ್ರಿಟಿಷರು ಸಾಮೂಹಿಕವಾಗಿ ಗ್ರಾಮ ನಿವಾಸಿಗಳನ್ನು ಬಂಧಿಸ ತೊಡಗಿದರು. ಬಂಧಿತ ವ್ಯಕ್ತಿಗಳಿಗೆ ಜನರೇ ಆಹಾರ ಮತ್ತು ಬಟ್ಟೆಗಳನ್ನು ಒದಗಿಸಿದರು. ಆದರೆ ಅಧಿಕಾರಿಗಳೊಂದಿಗೆ ಅಸಹಕಾರವನ್ನು ಮುಂದುವರೆಸಿದರು. 1919ರಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಅಂದಿನ ಸರ್ಕಾರ ಈ ಒಗ್ಗಟಿನ ಮುಂದೆ ಬೇರೆ ದಾರಿ ಕಾಣದೆ ಮಣಿದು ಸೊಲೊಪ್ಪಿಕೊಂಡು ತೆರಿಗೆ ಅಥವ ಖರದ ಬಗ್ಗೆ ತನ್ನ ನಿಲುವನ್ನು ಬದಲಿಸಿಕೊಂಡಿತು. ಇದೊಂದು ಅಭೂತಪೂರ್ವ ಯಶಸ್ಸು, ಜನರ ಸಂಘಟಿತ ಸಹಕಾರದಿಂದ – ಸರ್ಕಾರದೊಂದಿಗೆ ಅಸಹಕಾರಚಳುವಳಿಯ ಯಶಸ್ವಿಮಾದರಿಯಾಗಿ ಇತಿಹಾಸದ ಪುಟಗಳನ್ನು ವೈಭವೀಕರಿಸಿತು.
ಸರ್ಕಾರ ಮತ್ತು ಸಹಕಾರ
ಮೇಲಿನ ಪ್ರಸಂಗಕ್ಕೆ ವ್ಯತಿರಿಕ್ತವಾದ ಕೌತುಕದ ಪ್ರಸಂಗ, ಭಾರತದ ಎರಡನೇ ಪ್ರಧಾನಿಗಳಾದ ಆದರಣೀಯ ಲಾಲ್ ಬಹುದ್ದೂರ್ ಶಾಸ್ತ್ರಿಯವರು ನೀಡಿದ “ಜೈ ಜವಾನ್, ಜೈ ಕಿಸಾನ್” ಕರೆಗೆ ಭಾರತ ದೇಶದ ಸಕಲ ದೇಶ ಪ್ರೇಮಿಗಳು, ದೇಶ ಬಂಧುಗಳು ಪರಿಪೂರ್ಣವಾಗಿ ಸರ್ಕಾರದೊಂದಿಗೆ ಸಹಕರಿಸಿದ ಒಂದು ಸಂಸ್ಕಾರಭರಿತ, ಸುಸಂಕೃತ, ಸನ್ನಡತಯ ಸ್ಪಷ್ಟ ಉದಾಹರಣೆಯು ಈ ಪ್ರಸಂಗವು, ಚಿರಿತ್ರೆಯ ಪುಟಗಳಲ್ಲಿ ಎದೆಂದಿಗೂ ಸ್ಮರಿಸಲ್ಪಡುವ, ಮರೆಯಲಾಗದಂತಹ ಘಟನೆಗೆ ಸಾಕ್ಷಿಯಾದಂತಹ, ಸಾಂರ್ಧಭಿಕವಾಗಿ ಅವಶ್ಯಕವಾದ ಸಹಕಾರ ಒದಗಿಸಿ ದ್ಯೋತಕವಾಗಿ ಗೆಲುವನ್ನು ಪಡೆದ ಚಳುವಳಿ ಇದು. ಯಾವುದೇ ಒತ್ತಡಗಳಿಲ್ಲದೇ ಸ್ವತಂತ್ರ ಭಾರತದ ಜನರೆಲ್ಲರು ಸ್ಪಂದಿಸಿಂತಹ ಅದ್ಭುತ ಸುಸಂರ್ಧಭ.
ಭಾರತದ ಪ್ರಧಾನ ಮಂತ್ರಿಯವರ ಕರೆಗೆ ಓಗೊಟ್ಟು ದೇಶಕ್ಕೆ ದೇಶವೆ ಅವರ ಜೊತೆ ನಿಂತಿತು ಹಾಗು ಹಸಿರು ಕ್ರಾಂತಿಗೆ ಎಲ್ಲರೂ ಸಹಕರಿಸಿ, ಅದರಲ್ಲೂ ಯುವ ಜನತೆ, ಪ್ರೌಡ ಜನತೆ ಕೃಷಿ ಕ್ಷೇತ್ರಕ್ಕೆ ಆಗಮಿಸಿ ತನು, ಮನದಿಂದ ಸಹಕರಿಸಿ. ಆಹಾರ ಕ್ಷೇತ್ರದಲ್ಲಿ ಸ್ವಾವಲಂಬಿತರಾಗಲು ದುಡಿದು ಶ್ರಮಿಸಿ ದೇಶವನ್ನು ಹಾಗು ದೇಶದ ಆರ್ಥಿಕತೆಯನ್ನು ಪರಾವಲಂಬಿಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಹೊರಗೆ ತಂದು ಸ್ವಾವಲಂಬಿಯಾಗಿಸಿದಂತಹ ಭೂಮಿಯ ಮೆಲಿನ ಏಕೈಕ ಪ್ರಜಾಪ್ರಭುತ್ವ ದೇಶ ಅಥವಾ ರಾಷ್ಟ್ರ ಎಂದರೆ ಅದು ಭಾರತ ಮಾತ್ರ. ಅಭಿವೃದ್ಧಿ ಹೊಂದಿದ ಮತ್ತು ಮುಂಚೂಣಿಯಲ್ಲಿರುವ ದೇಶಗಳು ಕೂಡ ಅಂದಿನ ಬಡ ಭಾರತದ ಬಲಿಷ್ಠ ಮನೋ ಸಂಕಲ್ಪದ ಸಹಕಾರದ ಶಕ್ತಿಗೆ ಸೋತು ನಮ್ಮನ್ನು ಬೆದರಿಸುವ, ಹೆದರಿಸುವ, ತಮ್ಮ ಆರ್ಥಿಕ ದಿಗ್ಧಂಧನದ ಒತ್ತಡ ತಂತ್ರವನ್ನು ಹಿಂಪಡೆಯುವ ಹಾಗೆ ಮಾಡಿದ ನಾಗರೀಕರುಗಳ ಮುಂದುವರೆದ ಜನಾಂಗವು ನಾವುಗಳು. ಬ್ರಿಟಿಷರು ಕುತಂತ್ರ ಮತ್ತು ಕುಶ್ಚಿತ ಸಂಚಿನಿಂದ ನಮ್ಮ ಸಂಪತ್ತನ್ನು ಲೂಟಿಗೈದು, ದೇಶವನ್ನು ವಿಭಜಿಸಿ, ನಮ್ಮ ಅಖಂಡತೆಯ ಮೇಲೆ ನಮ್ಮಿಂದಲೇ ವಿಭಜಿತವಾದದೇಶದಿಂದ; ಆ ವಿಭಜಿತ ಶತ್ರು ದೇಶದ ಹಿನ್ನಲೆಯಲ್ಲಿ ನಿಂತು ಅವರಿಗೆ ಯುದ್ಧ ಸಾಮಾಗ್ರಿಗಳನ್ನು ಮತ್ತು ಆರ್ಥಿಕ ಸಹಾಯವನ್ನು ನೀಡಿ ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡಿಕೊಳ್ಳಬೇಕೆಂಬ ಹುಂಬತನದ ಸಂಚಿಗೆ, ಏಕತೆಯ, ಏಕಾತ್ಮತೆಯ ಸಹಕಾರದಿಂದ ಭಾರತ ದೇಶದ ದೇಶ ಪ್ರೇಮಿಗಳಿಂದ, ಸಕಲ ದೇಶಬಂಧುಗಳಿಂದ ಅಖಂಡ ಭಾರತ ದೇಶಕ್ಕಾಗಿ ತೋರಿದ ಸಹಕಾರ ಚಳುವಳಿ.ಅದೆ 1919ರಲ್ಲಿ ಬ್ರಿಟೀಷರ ವಿರುದ್ಧ ಅಸಹಕಾರ ಚಳುವಳಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ದೇಶ ಅಂದರೆ ಅದು ಈ ದೇಶವೆ ಸರಿ. ದೇಶ ಪ್ರೇಮಿಗಳು, ದೇಶಬಂಧುಗಳು, ರಾಷ್ಟ್ರ ಪ್ರೇಮಿಗಳು, ರಾಷ್ಟ್ರೀಯವಾದಿಗಳು, ದೇಶದ ಅಭ್ಯುಧ್ಯಯವೇ ಎಲ್ಲಕ್ಕಿಂತ ಪ್ರಥಮ ಮತ್ತು ದೇಶವೇ ಮೊದಲು ಎಂದು ಕೃತಿಯಲ್ಲಿ ಸಾಧಿಸಿ ತೋರಿಸಿದ ದೇಶಭಕ್ತ ಜನರನ್ನು ಹೊಂದಿದ್ದ. ಅಂಥಹ ಪೂರ್ವಜರನ್ನು, ಅಣ್ಣ, ತಮ್ಮಂದಿರನ್ನು, ಅಕ್ಕ, ತಂಗಿಯರನ್ನು, ಬಂಧುಗಳನ್ನು, ಸಂಬಂಧಿಗಳನ್ನು ಮತು ಅಂಥಹ ಇತಿಹಾಸವನ್ನು ಹೊಂದಿರುವ ಏಕೈಕ ರಾಷ್ಟ್ರ ಧರ್ಮ, ಸಂಸ್ಕಾರ, ಸಂಸ್ಕೃತಿ, ಸನಾತನ ಪರಂಪರೆಯನ್ನು ಹೊಂದಿರುವ ಈ ಭರತ ಖಂಡದ ಭವ್ಯ ಭಾರತ ದೇಶದ ಪ್ರಜೆಗಳಾದ, ನಿವಾಸಿಗಳಾದ ನಾವೇ ಪುಣ್ಯವಂತರು.
ಇದು ರಾಷ್ಟ್ರೀಯತೆಯಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಹಕಾರ ಮತು ಅಸಹಕಾರವನ್ನು ಅನುಸರಿಸಿ, ಅದರ ಯಶಸ್ಸನ್ನು ಜಗತ್ತಿಗೆ ತೋರಿದ ಕಲಿಗಳು ನಾವುಗಳು. ಪ್ರಾಯಶಃ ಐರೋಪ್ಯ ರಾಷ್ಟ್ರಗಳಿಗೆ ಈ ವಿಧಾನದ ಬದುಕು, ಸಮಾಜ, ಸಾಮಾಜಿಕ ಪರಿಕಲ್ಪಿತ ಜೀವನಅವರಿಗೆ ಅಸಾಧ್ಯವೇ ಸರಿ. ಕೇವಲ ಬಡ ಆಂಗ್ಲ ಭಾಷೆಯ ಕೊಡುಗೆ ಬಿಟ್ಟು ಪ್ರಾಯಶಃ ಅವರಿಂದ ಮತ್ತೇನು ಕೂಡ ಇಲ್ಲಿನವರು ಪಡೆದಿಲ್ಲ. ಐರೋಪ್ಯ ರಾಷ್ಟ್ರಗಳ ಜೀವನ ಶೈಲಿಯು ಭೌತಿಕ ಜೀವನದ ಆನಂದಗಳಲ್ಲಿ ಅನುಸಂಧಾನಿಸಿದ ಜೀವನ ಶೈಲಿ, ಅದೇ ಈ ದೇಶದಲ್ಲಿ ಪ್ರಥಮವಾಗಿ ಮಾನಸಿಕ ಆನಂದಗಳಲ್ಲಿ ಸಮ್ಮಿಳಿತವಾದ ಭೌತಿಕ ಜೀವನ ಶೈಲಿ. ಆದ್ದರಿಂದ ಸಹಕಾರಮಯವಾದ ಜೀವನ ವ್ಯವಸ್ಥೆಯು ಕೂಡ ಈ ದೇಶದ ಕೊಡುಗೆಯೇ.
ಉಧ್ಯಮ ಮತ್ತು ಹಣಕಾಸು ಕ್ಷೇತ್ರದಲ್ಲಿ ಸಂಘಟಿತ ಸಹಕಾರ.
ಉಧ್ಯಮ ಕ್ಷೇತ್ರವು ಸರ್ಕಾರಿ ನಿಯಂತ್ರಿತ ಕ್ಷೇತ್ರವಾಗಿದ್ದು ಸರ್ಕಾರದ నిತಿ ನಿಯಮಗಳು ಅನ್ವಯಿಸುತ್ತದೆ. ಅದೇ ರೀತಿ ಹಣಕಾಸು ಕ್ಷೇತ್ರವು ಕೂಡ ನಿಯಂತ್ರಿತ ಕ್ಷೇತ್ರವಾಗಿದ್ದು ಇಲ್ಲೂ ಕೂಡ ಹಲವಾರು ನಿಯಂತ್ರಕರು ಮತ್ತು ಹಲವಾರು ನಿಯಂತ್ರಕರಹಲವಾರು ನೀತಿ ನಿಯಮಗಳು ಇಲ್ಲಿಯೂ ಕೂಡ ಅನ್ವಯಿಸುತ್ತದೆ. ಕೊಡುವ ಮತ್ತು ಕೊಳ್ಳುವ ವ್ಯವಸ್ಥೆಯಲ್ಲಿ ಸರ್ಕಾರದಿಂದ ಮುದ್ರಿತವಾದ ಅಥವಾ ಅಂಕಿಸಿದ ನಾಣ್ಯಗಳು ಮತ್ತು ಮುದ್ರಿತ ಕಾಗದದ ನೋಟುಗಳ ವಿನಿಮಯವು ಮಾರಾಟ ಕ್ಷೇತ್ರವನ್ನು ಸಂಪೂರ್ಣವಾಗಿ ನಿಯಂತ್ರಿತ ಕ್ಷೇತ್ರವನ್ನಾಗಿಸಿದೆ. ಸರ್ಕಾರದಿಂದ ಮುದ್ರಿತವಾದ ತಮ್ಮ ಅಥವಾ ಅಂಕಿಸಿದ. ನಾಣ್ಯಗಳು ಮತ್ತು ಮುದ್ರಿತ ಜೈ ಕಾಗದದ ನೋಟುಗಳನ್ನು ಸರ್ಕಾರದಿಂದ, ಸರ್ಕಾರದ ಖಜಾನೆಯಿಂದ, ಜನ ಸಾಮಾನ್ಯರಿಗೆ 10 ತಲುಪಿಸಲು ಸರ್ಕಾರದಿಂದ ಸ್ಥಾಪಿತವಾದ ಸಂಸ್ಥೆಗಳು ಅಥವಾ ಸರ್ಕಾರದಿಂದ ಪರವಾನಗಿ ಮತ್ತು ಅನುಮತಿಯನ್ನು ಪಡೆದಿರುವ ಸಂಸ್ಥೆಗಳು ಈ ಅಂಕಿತ ಮತ್ತು ಮುದ್ರಿತ ಹಣದ ವಿನಿಮಯ ಮತ್ತು ಸರಬರಾಜನ್ನು ಮಾಡುವ ಹೊಣೆಗಾರಿಕೆಯ ಕೆಲಸವನ್ನು ಮಾಡುತ್ತಿದೆ. ಹೊಣೆಗಾರಿಕೆಯನ್ನು ನಿಭಾಯಿಸುವ ಸಂಸ್ಥೆಗಳನ್ನು ಪ್ರಾರಂಭಿಸಲು ಬಂಡವಾಳದ ಅವಶ್ಯಕತೆ ಇದ್ದು ಅದನ್ನು ಕೆಲವರು ಸೇರಿ ಹೂಡಿಕೆ ಮಾಡಿ ಆರಂಭಿಸುಬಹುದು, ಅಥವಾ ಸಮಾಜದಲ್ಲಿ ಸಮಾನ ಮಾನಸಿಕತೆಯುಳ್ಳ ಹಲವರು ಸೇರಿ ಮೂಲ ಬಂಡವಾಳದ ಕೊರತೆಯನ್ನು ನೀಗಿಸಿ ಬಂಡವಾಳಿ ಹೂಡಿಕೆಯನ್ನು ಮಾಡಿ ಆರಂಭಿಸಬಹುದು. ಯಾವುದೇ ರೀತಿಯ ಬಂಡವಾಳದ ಮುಖೇನ ಸಂಸ್ಥೆಯನ್ನು ಆರಂಭಿಸಿದರು ಅದನ್ನು ಸರ್ಕಾರದ ನೀತಿ, ನಿಯಮಾವಳಿಗಳ ಮಾರ್ಗದರ್ಶನದ ಅನುಸಾರಿತವಾಗಿಯೇ ನಡೆಸಬೇಕು. ಕೆಲವು ವ್ಯಕ್ತಿಗಳು ಹೂಡಿಕ ಮಾಡಿ ಪ್ರಾರಂಭಿಸಿದ ಸಂಸ್ಥೆಯಾದಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆಯನ್ನು ಆ ಕೆಲವು ವ್ಯಕ್ತಿಗಳೇ, ಅಥವ ಅವರ ಸಹಮತಿಯಿಂದ, ಸಹಕಾರದಿಂದ ಆರಿಸಿದ ವ್ಯಕ್ತಿಗಳು ಅಥವ ವ್ಯಕ್ತಿಯು ನಡೆಸುತ್ತಾರೆ. ಆದರೆ ಬಹಳಷ್ಟು ಜನರು ಸೇರಿ ಬಂಡವಾಳವನ್ನು ಹೂಡಿ ಆರಂಭಿಸಿದ ಸಂಸ್ಥೆಗಳಲ್ಲಿ ಅಲ್ಲಿನ ಹೂಡಿಕೆದಾರರು ಕೆಲವರನ್ನು ಚುನಾವಣೆಯ ಮೂಲಕ ತಮ್ಮ ಸಹಮತವನ್ನು ವ್ಯಕ್ತಪಡಿಸಿ ಆರಿಸಿ ಕಳಿಸಿ ಆಡಳಿತವನ್ನು ಒಂದು ನಿರ್ದಿಷ್ಟ ಗುರಿಯಿಂದ ಮಾಡುತ್ತಾರೆ. ಈ ರೀತಿಯ ಅನುಬಂಧಗಳಲ್ಲೂ ಕೂಡ ಒಂದು ನಿರ್ದಿಷ್ಟ ಗುಂಪು ಅಥವಾನಿರ್ದಿಷ್ಟ ಸಮುದಾಯ, ಅಥವಾ ನಿರ್ದಿಷ್ಟ ಜನಾಂಗ, ಅಥವಾ ನಿರ್ದಿಷ್ಟ ಭೂ ಪ್ರದೇಶ, ಅಥವಾ ನಿರ್ದಿಷ್ಟ ಸಮಾನ ಮನಸ್ಕರು ಅಥವಾ ನಿರ್ದಿಷ್ಟ ಸಮೂಹಗಳು ಅಥವಾ ನಿರ್ದಿಷ್ಟ ಸಂಸ್ಥೆಗಳು ಅಥವಾ ಪ್ರಚಲಿತ ಉದ್ಯಮದಲ್ಲಿರುವರು ಸೇರಿ ತಾವೇ ಬಂಡವಾಳವನ್ನು ಹೂಡಿ ಹಾಗು ತಾವೇ ಆಡಳಿತವನ್ನು ನಡೆಸುವ ಪದ್ಧತಿಯನ್ನು ಸಹಕಾರಿ ಸಂಸ್ಥೆಯೆಂದು, ಆ ಕ್ಷೇತ್ರವನ್ನು ನಡೆಸಲು ಮಾರ್ಗದರ್ಶನಗಳನ್ನು ಸರ್ಕಾರವು ಕರಡು ನೀತಿ ನಿಯಮಗಳ ಮೂಲಕ ಅನುವು ಮಾಡಿಕೊಟ್ಟಿದೆ.
ಅನ್ನೋನ್ಯ ಸಹಕಾರಿ ಮಂಡಳಿಯು ಅಂದಿನ ಬರೋಡ ರಾಜ್ಯದಲ್ಲಿ ವಿಥಲ್ ಲಕ್ಷ್ಮಣ ಅಥವಾ ಬಾಹುಸಾಹೇಬ್ ಕಥೇವಕರ್ ಅವರ ಮಾರ್ಗದರ್ಶನದಲ್ಲಿ 1889 ರಂದು ಸ್ಥಾಪಿತವಾಯಿತೆಂದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕೃತ ಮಾಹಿತಿಗಳ ಪ್ರಕಾರ ತಿಳಿದು ಬಂದಿರುತ್ತದೆ. 1904ರಂದು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆಕ್ಟ್ ಜಾರಿಗೆ ಬಂದಿದ್ದು ಅದರ ಅಡಿಯಲ್ಲಿ ಪ್ರಥಮ ಕೋ ಆಪರೇಟಿವ್ ಸೊಸೈಟಿಆಗಿ ಅಂದಿನ ಮದ್ರಾಸು ಪ್ರಾಂತದ ಕಾಂಜೀವರಮ್ ಪ್ರದೇಶದಲ್ಲಿ ಮೊಟ್ಟ ಮೊದಲನೊಂದಾಯಿತ ನಗರ(ಅರ್ಬನ್) ಕ್ರೆಡಿಟ್ ಸೊಸೈಟಿಯು ಆರಂಭವಾಯಿತು.
ಸ್ವತಂತ್ರ ಪೂರ್ವ ಮತ್ತು ನಂತರ ಹಲವಾರು ಬದಲಾವಣೆಗಳನ್ನು ಕಂಡ ಕೋ ಆಪರೇಟಿವ್ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ ಆಗಮನದ ನಂತರ ಒಂದು ಸುಸ್ಥಿರತೆಯನ್ನು ಕಾಣತೊಡಗಿದವು. అల్లిಯ ತನಕ ಹಲವಾರು ಮಗ್ಗುಲುಗಳಲ್ಲಿ, ವೇದಿಕೆಗಳಲ್ಲಿ ಬೆಳೆಯುತ್ತಾ ಬಂದಿದ್ದ ಸಹಕಾರಿ ಕ್ಷೇತ್ರವು, ಭಾರತೀಯರಿಸರ್ವ್ ಬ್ಯಾಂಕಿನ ಆಗಮನದಿಂದ ಸಹಕಾರಿ ಕ್ಷೇತ್ರದ ಬವಣೆಗಳಿಗೆ, ಬದಲಾವಣೆಗಳಿಗೆ ಒಂದು ಸಾಮಾನ್ಯ ಮತ್ತು ನಿರ್ದಿಷ್ಟ ವೇದಿಕೆಯಾಗಿ ಒಟ್ಟಾಗಿ ಒಮದುಗೂಡಿ ಚರ್ಚಿಸಲು ಮತ್ತು ನಿರ್ಣಯಗಳನ್ನು ಕೊಳ್ಳಲು ಸಹಕಾರಿಯಾಯಿತು. ಹಲವು ಆಯಾಮಗಳಲ್ಲಿ ಹಲವಾರು ಬದಲಾವಣೆಗಳಿಂದ ಕ್ಷಿಪ್ರ ಬೆಳವಣಿಗೆಗೆ ಕಾರಣವಾಯಿತು. ಕೇಂದ್ರ ಮತ್ತು ರಾಜ್ಯಗಳ ದ್ವಿ-ಪಕ್ಷೀಯ ನಿಯಂತ್ರಣ ಹಾಗು ಸಹಕಾರ ಮತ್ತು ಮಾರ್ಗದರ್ಶನದ ನೀತಿಯ ಫಲವಾಗಿ ಕರ್ನಾಟಕದಲ್ಲಿ 1959ರಲ್ಲಿ ದಿ ಕರ್ನಾಟಕ ಕೋ ಆಪರೇಟಿವ್ ಸೊಸೈಟಿ ಆಕ್ಟ್ ಜಾರಿಗೆ ಬಂದಿತು. ಇದರ ಫಲವಾಗಿ ನಿಧಾನವಾಗಿ ಆದರೆ ಸಧೃಡವಾಗಿ ಸಹಕಾರಿ ಬ್ಯಾಂಕುಗಳು ನಗರ, ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೂರ ತೊಡಗಿದವು ಮತ್ತು ಅಲ್ಲಿನ ಭೌಗೋಳಿಕ ಆಶೋತ್ತರಗಳಿಗೆ ಮುಖ್ಯವಾಹಿನಿಯಾಗಿ ಹಣಕಾಸು ಸೌಲಭ್ಯಗಳಿಗೆ ನೇರವಾಗಿ ಸ್ಪಂದಿಸಿ ಆರ್ಥಿಕ ಬೆಳವಣಿಗೆಗೆ ಕಾರಣವಾಗತೊಡಗಿದವು. ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯವರು ಈ ಬೆಳವಣಿಗೆಗೆ ಬೇಗನೆ ತಮ್ಮನ್ನು ಒಡ್ಡಿಕೊಂಡು ಹಲವಾರು ಸಹಕಾರಿ ಬ್ಯಾಂಕುಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಾಪನೆಗೆ ಅನುವಾದರು .
ಕರ್ನಾಟಕದಲ್ಲಿ ವಿನೂತನವಾಗಿ 1997ರಂದು ಕರ್ನಾಟಕ ಸೌಹಾರ್ದ ಸಹಕಾರಿ ಆಕ್ಟ್ 1997/2000ರ ಹೊಸ ಅಧಿನಿಯಮದಲ್ಲೂ ಕೂಡ ನೊಂದಯಿಸಿಕೊಳ್ಳಲು ಹಾಗು ಸಹಕಾರಿ ಕ್ಷೇತ್ರದ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸಲು ಕರ್ನಾಟಕ ಸರ್ಕಾರವು ಅನುವು ಮಾಡಿಕೊಟ್ಟಿತು.
ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಗಮ:
ಈ ಸಂಸ್ಥೆಯ ಆಗಮನದಿಂದ ಇಂದು ಕರ್ನಾಟಕದಲ್ಲಿ ಸರಿ ಸುಮಾರು 7000 ಸೌಹಾರ್ದ ಬ್ಯಾಂಕುಗಳ ಸ್ಥಾಪನೆಗೆ ಕಾರಣವಾಗಿ ಕರ್ನಾಟಕದಲ್ಲಿನ ಆರ್ಥಿಕ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಕರ್ನಾಟಕದಲ್ಲಿ ಇಂದಿಗೆ ಸಹಕಾರಿ, ಸೊಸೈಟಿ ಮತ್ತು ಸೌಹಾರ್ದದ ಅಡಿಯಲ್ಲಿ ನೊಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು 50 ಸಾವಿರದ ಗಡಿಯನ್ನು ದಾಟಿದೆ ಹಾಗು ಸರಿ ಸುಮಾರು 1 ಕೋಟಿ 85 ಲಕ್ಷಕ್ಕೂ ಹೆಚ್ಚಿನ ನಾಗರೀಕರಿಗೆ ಸೇವೆಯನ್ನು ನೀಡುತ್ತಿದೆ. ಕರ್ನಾಟಕ ಹಾಲು ಉತ್ಪಾದಕರ ಸಂಘವು ಕರ್ನಾಟಕದಲ್ಲಿ ಅತಿ ದೊಡ್ಡ ಸಹಕಾರಿ ಸಂಸ್ಥೆಯಾಗಿರುತ್ತದೆ. ಸರಿ ಸುಮಾರು 13 ರಾಜ್ಯಗಳಲ್ಲಿ ಈ ರೀತಿಯ ಸಹಕಾರಿ ಕಾಯಿದೆಗಳು ಮತ್ತು ಸೌಹಾರ್ದ ಕಾಯಿದೆಗಳು ಪ್ರಚಲಿತದಲ್ಲಿವೆ.
ಎಲ್ಲಾ ರಾಜ್ಯಗಳು ಅವರ ಭೌಗೋಳೀಕ ಮತ್ತು ಸಾಂಸ್ಕೃತಿಕತೆಯ ತಳಹದಿಯ ಆಧಾರದ ಮೇಲೆ ಸಹಕಾರಿಮತ್ತು ಸೌಹಾರ್ದ ಕಾಯಿದೆಗಳನ್ನು ನಿರೂಪಿಸಿಕೊಂಡಿದೆ. ಈ ರೀತಿಯ ಹಲವಾರು ವೈರುಧ್ಯದ, ವೈವಿಧ್ಯತೆಯ ವಿಭಿನ್ನತೆಗಳಲ್ಲಿ ಏಕತೆಯನ್ನು ತಂದು ಅಖಂಡತೆಯನ್ನು ಮೂಡಿಸುವ ಸಲುವಾಗಿ ಘನವೆತ್ತ ಭಾರತ ಸರ್ಕಾರವು ಕೋ ಅಪರೇಷನ್ ಮಂತ್ರಾಲಯವನ್ನು ಜುಲೈ 6, 2021 ರಂದು ಸಾಂವಿಧಾನಿಕ ವಿಧಿ ವಿಧಾನಗಳ ಮೂಲಕ ವಿಧಿವತ್ತಾಗಿ ಸ್ಥಾಪಿಸಿ ಅನುಷ್ಠಾನಕ್ಕೆ ತಂದಿರುತ್ತದೆ. ಈ ಮಂತ್ರಾಲಯವು ಎನ್.ಸಿ.ಸಿ.ಟಿ. ಎನ್.ಸಿ.ಡಿ.ಸಿ. ಎನ್.ಸಿ.ಯು.ಐ, ಎಮ್.ಎಸ್.ಸಿ.ಎಸ್. ಎಮ್.ಎ.ಡಬ್ಲ್ಯು.ಎಫ್. ವೈಕುಂಠ ಮೆಹ್ತ ಎನ್.ಐ.ಸಿ.ಎಮ್. ಸಫೆಡಾ ಎಮ್.ಏ.ಎನ್.ಏ.ಜಿ- ಮ್ಯಾನೇಜ್ ಹೀಗೆ ಹತ್ತು ಹಲವಾರು ಸ್ವತಂತ್ರ ಸಂಸ್ಥೆಗಳನ್ನು ಒಂದುಗೂಡಿಸಿ ಒಟ್ಟಾಗಿ ಒಂದು ಸಮೂಹವಾಗಿ ಸಮೂಹಿತ ಸಾಮೂಹಿಕ ಬಲಿಷ್ಠ ವ್ಯವಸ್ಥೆಯಾಗಿ ರೂಪಿಸಿ ಹೊರಹೊಮ್ಮಿಸಲು ನಿರಂತರವಗಿ ಪ್ರಯತ್ನಿಸುತ್ತಿದೆ.
ಎಸ್.ಎಸ್. ಮೂರ್ತಿ.
ಅರ್ಥಂ ನಿರ್ದೇಶಕರು