ತ್ರಿವಿಧ ದಾಸೋಹದ ಹರಿಕಾರ. ಶ್ರೀಮತಿ. ಸವಿತ. ಎನ್. ಇ

ಮಂತ್ರ ಹೇಳಲಿಲ್ಲ ಮಾಟ ಮಾಡಲಿಲ್ಲ ಬೂದಿ ಎರಚಲಿಲ್ಲ ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಿದ ನಡೆದಾಡಿದ ದೇವರಿಗೆ ಲೇಖನ ನಮನಗಳು

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಕರ್ನಾಟಕದ ಹೆಮ್ಮೆ ಹಾಗೂ ಮಾನವತೆಯ ಪ್ರತೀಕವಾಗಿದ್ದರು. ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪರಮ ಪೂಜ್ಯ ಗುರುಗಳಾಗಿ, ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಅರ್ಪಿಸಿದ್ದರು. 1907ರಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯದಲ್ಲೇ ವಿದ್ಯಾಭ್ಯಾಸ ಮತ್ತು ಧಾರ್ಮಿಕ ಮೌಲ್ಯಗಳಲ್ಲಿ ಆಸಕ್ತಿ ತೋರಿದರು. ನಂತರ ಅವರು ಸಿದ್ದಗಂಗಾ ಮಠದ ಗುರುಗಳಾಗಿ ಹೊಣೆ ಹೊತ್ತು. ಅದನ್ನು ಒಂದು ಮಹತ್ತರ ಸೇವಾ ಕೇಂದ್ರವಾಗಿ ಅಭಿವೃದ್ಧಿಪಡಿಸಿದರು. ಸ್ವಾಮೀಜಿಯವರ ಅತ್ಯಂತ ಮಹತ್ವದ ಕಾರ್ಯವೆಂದರೆ “ಅನ್ನದಾನ” ಮತ್ತು “ವಿದ್ಯಾದಾನ”, ದಿನವೂ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಆಹಾರ ಮತ್ತು ಶಿಕ್ಷಣ ನೀಡುವ ಮೂಲಕ ಅವರು ಲಕ್ಷಾಂತರ ಜನರ ಜೀವನವನ್ನು ಬೆಳಗಿಸಿದರು. ಅವರ ಮಠದಲ್ಲಿ ಜಾತಿ, ಧರ್ಮ, ಬಡ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತಿತ್ತು.

ಅವರ ಸರಳ ಜೀವನ ಶೈಲಿ, ನಿಯಮಬದ್ಧತೆ ಮತ್ತು ಸೇವಾಭಾವ ಎಲ್ಲರಿಗೂ ಪ್ರೇರಣೆಯಾಗಿದೆ.ಪುಣ್ಯಪ್ರಯಾಣದ 11 ವರ್ಷಗಳಲ್ಲಿ ಅವರು ಸಾಧಿಸಿರುವ ಸೇವೆ ಮತ್ತು ಕೊಡುಗೆಗಳು ಲಕ್ಷಾಂತರ ಜನರ ಜೀವನವನ್ನು ಬೆಳಗಿಸಿದೆ. ದೀರ್ಘ ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸೇವೆಯನ್ನು ಗೌರವಿಸಿ ಭಾರತ ಸರ್ಕಾರವು ಅವರಿಗೆ “ಭಾರತ ರತ್ನ” ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿದೆ. ಇಂದಿಗೂ ಅವರ ತತ್ವಗಳು ಮತ್ತು ಆದರ್ಶಗಳು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಿವೆ.

ತ್ರಿವಿಧ ದಾಸೋಹ

ಸ್ವಾಮೀಜಿಯವರು ತಮ್ಮ ಜೀವನದಲ್ಲಿ ಮೂರು ಮುಖ್ಯ ಕ್ಷೇತ್ರಗಳಲ್ಲಿ ಸೇವೆ ಮಾಡಿದರು: ಅನ್ನದಾನ, ಅಕ್ಷರದಾನ ಮತ್ತು ಅಶ್ರಯ ದಾನ. ಈ ತ್ರಿವಿಧ ದಾಸೋಹವು ಅವರ ಜೀವನದ ತತ್ವಮೂಲವಾಗಿದೆ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನದ ಪ್ರಮುಖ ತತ್ವವೇ ತ್ರಿವಿಧ ದಾಸೋಹ, ದಾಸೋಹ ಎಂದರೆ ಸೇವೆ. ಅವರು ಮಾನವ ಸೇವೆಯನ್ನೇ ದೇವರ ಸೇವೆ ಎಂದು ನಂಬಿದ್ದರು.

ಮಹತ್ವ: ತ್ರಿವಿಧ ದಾಸೋಹವು ಕೇವಲ ಸೇವೆಯಲ್ಲ, ಅದು ಒಂದು ಜೀವನ ಮೌಲ್ಯ, ಇದು ಸಮಾಜದಲ್ಲಿ ಸಮಾನತೆ, ದಯೆ ಮತ್ತು ಸಹಾನುಭೂತಿ ಬೆಳೆಯಲು ಸಹಾಯ ಮಾಡುತ್ತದೆ.

ಅನ್ನದಾನ ಹಸಿದವರ ಹಸಿವನ್ನು ತಣಿಸುವುದು ಜೀವನದ ಅತ್ಯಂತ ಮಹತ್ವದ ಕಾರ್ಯವೆಂದು ಸ್ವಾಮೀಜಿಯವರು ನಂಬಿದರು. ಸಿದ್ದಗಂಗಾ ಮಠದಲ್ಲಿ ದಿನವೂ ಸಾವಿರಾರು ಜನರಿಗೆ ಉಚಿತ ಊಟ ನೀಡಲಾಗುತ್ತಿತ್ತು “ಯಾರಿಗೆ ಬೇಕಾದರೂ ಊಟ ದೊರಕಬೇಕು, ಯಾರೂ ಹಸಿಯಾಗಬಾರದು” ಎಂಬುದು ಅವರ ಆಶಯ.

ಅಕ್ಷರದಾನ : ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಅವರ ಇನ್ನೊಂದು ಮಹತ್ವದ ಸೇವೆ. ಅನೇಕ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸರಳತೆ, ಸನ್ಮಾರ್ಗ ಮತ್ತು ಶಿಸ್ತು ಬೆಳೆಸಲು ಪ್ರೇರಣೆಯಾಗಿದ್ದರು.

ಆಶ್ರಯ ದಾನ : ಅನಾಥರು, ಬಡವರು ಮತ್ತು ಬೇಡಿಕೆಯಲ್ಲಿರುವವರಿಗೆ ಆಶ್ರಯ ನೀಡುವುದು ತ್ರಿವಿಧ ದಾಸೋಹದ ಭಾಗ, ಮಠವು ಸಾವಿರಾರು ಮಕ್ಕಳಿಗೆ ಭದ್ರತೆಯ ಮನೆಯಾಗಿ, ಸುಂದರವಾದ ಪರಿಸರವನ್ನು ಒದಗಿಸುತ್ತಿತ್ತು.

ಸ್ವಾಮೀಜಿಯವರು ಸಾಧಿಸಿದ ಪ್ರಮುಖ ಸೇವಾ ಕಾರ್ಯಗಳಲ್ಲಿ ಉಚಿತ ವಿದ್ಯಾಭ್ಯಾಸ, ಉಚಿತ ಅನ್ನ, ಆರೋಗ್ಯ ಹಾಗೂ ಆಶ್ರಯದ ವ್ಯವಸ್ಥೆ, ಮೌಲ್ಯಬೋಧನ ಮತ್ತು ಧಾರ್ಮಿಕ ಕಾರ್ಯಗಳು ಪ್ರಮುಖವಾಗಿವೆ. ಅವರ ಸರಳ ಜೀವನ ಶೈಲಿ, ತ್ಯಾಗ, ಮತ್ತು ಸೇವಾಭಾವ ಎಲ್ಲರಿಗೂ ಪ್ರೇರಣೆಯಾಗಿದೆ. ಮಠವು ಜಾತಿ, ಧರ್ಮ, ಸಂಪತ್ತು ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ನೀಡಿತು. ಅವರು ಸಾಧಿಸಿದ ಕಾರ್ಯಗಳಿಗೆ ಭಾರತ ಸರ್ಕಾರ ಮರಣೋತ್ತರವಾಗಿ “ಭಾರತ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ, ಸ್ವಾಮೀಜಿಯವರ ತತ್ವಗಳು ಮತ್ತು ಆದರ್ಶಗಳು ಇಂದಿಗೂ ನಮ್ಮ ಸಮಾಜಕ್ಕೆ ಮಾರ್ಗದರ್ಶಕವಾಗಿವೆ.

ಸ್ವಾಮೀಜಿಯವರ ಜೀವನವು ನಮಗೆ ಈ ಪಾಠವನ್ನು ನೀಡುತ್ತದೆ: ಸೇವೆ ಮತ್ತು ದಾನ ಜೀವನದ ಶ್ರೇಷ್ಠ ಗುರಿ, ಶಿಕ್ಷಣವೇ ಸಮಾಜವನ್ನು ಬೆಳಗಿಸುವ ಶಕ್ತಿ, ಅಹಂಕಾರ ಮತ್ತು ಸ್ವಾರ್ಥಕ್ಕಿಂತ ಪ್ರೀತಿಯ ಮತ್ತು ಸಹಾಯದ ಮೌಲ್ಯ ಹೆಚ್ಚಾಗಿದೆ. ಸ್ವಲ್ಪ ಸೇವೆ, ಸ್ವಲ್ಪ ದಯೆ, ಮತ್ತು ಸ್ವಲ್ಪ ಶಿಕ್ಷಣವೇ ಭವಿಷ್ಯವನ್ನು ರೂಪಿಸುತ್ತದೆ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನವು ಸಮಾಜಕ್ಕೆ ಅಮೂಲ್ಯ ಉಡುಗೊರೆ, ತ್ರಿವಿಧ ದಾಸೋಹದ ಮೂಲಕ ಅವರು ಬಡ, ಅನಾಥ, ಹಸಿದು ಅಶಿಕ್ಷಿತ ಎಲ್ಲರಿಗೂ ಬೆಳಕು, ಆಶ್ರಯ ಮತ್ತು ಪ್ರೇರಣೆಯನ್ನು ನೀಡಿದರು. ಅವರ ಜೀವನದ ತತ್ವಗಳನ್ನು ಅನುಸರಿಸುವುದರೇ ನಮ್ಮೆಲ್ಲರ ಶ್ರೇಷ್ಟ ಕರ್ತವ್ಯ ಅವರ ಸೇವೆ, ತ್ಯಾಗ ಮತ್ತು ಭಾವಪೂರ್ಣ ಜೀವನದ ನೆನಪಿನಿಂದ, ನಾವು ಕೂಡ ಸಮಾಜಸೇವೆ. ಧರ್ಮ ಮತ್ತು ಶ್ರೇಷ್ಠ ಮೌಲ್ಯಗಳನ್ನು ಅನುಸರಿಸುವುದಕ್ಕೆ ಸಿದ್ಧರಾಗಬೇಕು.

ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನವೇ ನಮಗೆ ಒಂದು ಮಹಾನ್ ಪಾಠ”ಸೇವೆಯೇ ಪರಮ ಧರ್ಮ”,

 

ಲೇಖಕಿ: ಸವಿತ ಎನ್ ಇ

ಬೆಂಗಳೂರು

 6360269205

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More