ಸಹಕಾರ ಸಂಸ್ಥೆಗಳು ರಾಷ್ಟ್ರದ ಪ್ರತಿಯೊಂದು ರಾಜ್ಯಗಳಲ್ಲಿ ಕೃಷಿ,ಹಣಕಾಸು, ವಸತಿ ಮತ್ತು ದಿನನಿತ್ಯದ ಸಮಾಜಿಕ ವಹಿವಾಟಗಳ್ಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಾರುಕಟ್ಟೆಯಲ್ಲಿ ಇಂದು ಗುಣಮಟ್ಟದ ಉತ್ಪನ್ನ ಮತ್ತು ಸೇವೆಯಿಂದ ಹಿಡಿದು ಉತ್ತಮ ಬೆಲೆ ಮತ್ತು ಸೇವೆಯನ್ನು ಪೂರೈಸುತ್ತಿವೆ.
ಜನರು ಸಹಕಾರ ಸಂಸ್ಥೆಗಳಿಂದ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ದೇಶದ ಅನೇಕ ಸಂಸ್ಥೆಗಳು (ಸಹಕಾರಿ ನಿಗಮಗಳು) ವಿವಿಧ ಯೋಜನೆಗಳನ್ನು ಹಾಕಿಕೊಂಡು ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ.
ಈ ಪೈಕಿ ರಾಷ್ಡ್ರೀಯ ಸಹಕಾರಿ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.
ನಂದಿನಿ ಸಹಕಾರ್
ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಧೃಡಗೊಳಿಸುವ ಉದ್ದೇಶವನ್ನಿಟ್ಟುಕೊಂಡು, ಸಹಕಾರಿ ಸಂಸ್ಥೆಗಳ ಮೂಲಕ ಆತ್ಮನಿರ್ಭರ ಭಾರತದ ಪರಿಕಲ್ಪನಗೆ ಪೂರಕವಾಗಿ ಮಹಿಳೆಯರು ಸ್ವ-ಉದ್ಯಮವನ್ನು ಮಾಡುವಂತೆ ಪ್ರೋತ್ಸಾಹಿಸುವುದನ್ನು ನಿಗಮವು ʼನಂದಿನಿ ಸಹಕಾರ್ʼ ಮೂಲಕ ಮಾಡುತ್ತಿದೆ.ಈ ಯೋಜನೆಯಡಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಸಾಲಾ ಪಡೆಯುವಲ್ಲಿ ಕನಿಷ್ಠ ಅಥವಾ ಗರಿಷ್ಠ ಮಿತಿಯನ್ನು ವಿಧಿಸಿಲ್ಲ ಬದಲಾಗಿ ತಾವು ಆರಂಭಿಸಲು ಉದ್ದೇಶಿಸಿರುವ ಉದ್ಯಮದ ಯೋಜನೆಯ ಆಧಾರದಲ್ಲಿ ಸಾಲ, ಸಬ್ಸಿಡಿ ಮತ್ತು ಅದಕ್ಕೆ ತಕ್ಕ ಕೌಶಲ್ಯವನ್ನು ನೀಡುವತ್ತ ಪ್ರಯತ್ನಿಸಲಾಗುತ್ತಿದೆ.
ಯೋಜನೆಯನ್ನು ಪಡೆಯಲು ಬೇಕಾದ ಅರ್ಹತೆಗಳು:
- ಯಾವುದೇ ರಾಜ್ಯ/ ಬಹು ರಾಜ್ಯ ಸಹಕಾರಿ ಸಂಘಗಳ ಕಾಯ್ದೆ ಅಡಿಯಲ್ಲಿ ನೋಂದಾಯಿತ ಮಹಿಳಾ ಸಹಕಾರ ಸಂಘಗಳು ಅರ್ಹತೆಯನ್ನು ಹೊಂದಿರುತ್ತದೆ.
- ಕನಿಷ್ಠ 50% ಮಹಿಳಾ ಸದಸ್ಯರನ್ನು ಪ್ರಾಥಮಿಕ ಹಂತದಲ್ಲಿ ಹೊಂದಿರುವ ಯಾವುದೇ ಸಹಕಾರ ಸಂಘ ಅರ್ಹತೆಯನ್ನು ಹೊಂದಿರುತ್ತದೆ.
- NCDC ಯ ಮಾರ್ಗಸೂಚಿಯಂತೆ ಯಾವುದೇ ಮಹಿಳಾ ಅಬಲೀಕರಣದ ಉದ್ದೇಶವನ್ನಿಟ್ಟುಕೊಂಡು ಕನಿಷ್ಠ ಮೂರು ತಿಂಗಳಿನಿಂದ ಕಾರ್ಯನಿರ್ಹಿಸುತ್ತಿರುವ ಸಹಕಾರಿ ಸಂಸ್ಥೆಗಳು ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
- ಅಪೇಕ್ಷಿತ ಮಹಿಳಾ ಸಹಕಾರ ಸಂಸ್ಥೆಗಳು NCDC ವೆಬ್‌ಸೈಟ್ ಲಭ್ಯವಿರುವ ಮಾದರಿ ಯೋಜನ ವರಧಿಯನ್ನು Download ಮಾಡಿಕೊಳ್ಳಬಹುದು ಮತ್ತು NCDC ವೆಬ್‌ಸೈಟ್ ಲ್ಲಿ (https://nandini.ncdc.in) ʼನಂದಿನಿ ಸಹಕಾರ್ʼ ಯೋಜನೆಯ ಅಡಿಯಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನು ನೀಡುವ ವೀಡಿಯೊ ಲಭ್ಯವಿದೆ.
- NCDC ಯ ಪ್ರಾದೇಶಿಕ ಕಛೇರಿಗಳಲ್ಲಿ ಈ ಯೋಜನೆಯ ಕುರಿತಾದ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ https://www.ncdc.in/documents/other/Nandini-Sahakar-Scheme-Eng-01.11.2021.pdf ಈ ಮೇಲಿನ ಲಿಂಕ್ ಅನ್ನು ಒತ್ತಿ.
ಜಿತಿನ್ ಜಿಜೋ
ಕಾರ್ಯದರ್ಶಿ,
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ,
ಮಂಗಳೂರು