ಸಹಕಾರ ಮತ್ತು ಸಹಕಾರ ಕ್ಷೇತ್ರ ಸಂಬಂಧಿತ ವಿಷಯಗಳಲ್ಲಿ ಪದವಿ ಶಿಕ್ಷಣದ ಕೆಲವು ಆಯ್ಕೆಗಳು | ವಾಣಿಶ್ರೀ.ಬಿ.

“There are many things in life that will catch your eye, but only a few will catch your heart”

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಕೆಲವೇ ಬೆರಳೆಣಿಕೆಯ  ಆಯ್ಕೆಗಳಲ್ಲದೆ, ಆಧುನಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡೇ ಪ್ರಕೃತಿಯೊಡನೆ ಸೇರಿಕೊಂಡು, ಅದರ ಪ್ರಾಥಮಿಕ ಅಂಶಗಳೊಡನೆ ವ್ಯವಹರಿಸುತ್ತ, ಅಥವಾ ಇದಕ್ಕೆ ಪೂರಕವಾಗಿರುವ ಉದ್ಯೋಗ ನಡೆಸುವ ಹಲವಾರು ಅವಕಾಶಗಳಿವೆ. ಮತ್ತು ಈ ನಿಟ್ಟಿನಲ್ಲಿ ಹಲವು ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳು ಇಂದು ವಿದ್ಯಾರ್ಥಿಗಳಿಗಾಗಿ ತೆರೆದಿವೆ.
ಅಂತಹ ಕೆಲವು ಕಾಲೇಜು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 

A.ಯುನಿವರ್ಸಟಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ಬೆಂಗಳೂರು.

ಕ್ಯಾಂಪಸ್ ಗಳು : ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರು (GKVK) ಬಳ್ಳಾರಿ ರೋಡ್-ಬೆಂಗಳೂರು, ಹೆಬ್ಬಾಳ-ಬೆಂಗಳೂರು, ಮಂಡ್ಯ, ಹಾಸನ, ಚಿಂತಾಮಣಿ, ಮತ್ತು ಚಾಮರಾಜನಗರ.

1.ಮುಖ್ಯ ಆಡಳಿತ ಕೇಂದ್ರ: ‘ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK).

ಪದವಿ ಕೋರ್ಸ್‌ಗಳು:

ಬಿ.ಟೆಕ್ (ಅಗ್ರಿ. ಇಂಜಿನಿಯರಿಂಗ್)
ಅಧ್ಯಯನ ಅವಧಿ : 4 ವರ್ಷಗಳು.

ಪ್ರಸ್ತುತ ಈ ಕಾಲೇಜು 3 ವಿಭಾಗಗಳಲ್ಲಿ ಇಂಜಿನಿಯರ್ ಪದವಿಯನ್ನು ನೀಡುತ್ತಿದೆ.
i)   ಡಿಪಾರ್ಟ್ಮೆಂಟ್ ಆಫ್ ಸಾಯಿಲ್ ಆಂಡ್ ವಾಟರ್ ಇಂಜಿನಿಯರಿಂಗ್.
ii)  ಡಿಪಾರ್ಟ್ಮೆಂಟ್ ಆಫ್ ಪ್ರೋಸೆಸ್ಸಿಂಗ್ ಆಂಡ್ ಫುಡ್ ಇಂಜಿನಿಯರಿಂಗ್.
iii) ಡಿಪಾರ್ಟ್ಮೆಂಟ್ ಆಫ್ ಫಾರ್ಮ್ ಮೆಷಿನರಿ ಆಂಡ್ ಪವರ್ ಇಂಜಿನಿಯರಿಂಗ್.

ಮೇಲೆ ತಿಳಿಸಿದ ಮೂರು ವಿಭಾಗಗಳು, ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಬಿ .ಎಸ್ಸಿ (ಹಾನರ್ಸ್)ಅಗ್ರಿ. ಮತ್ತು ಬಿ .ಎಸ್ಸಿ . (ಅಗ್ರಿ. MaCo.) ಪದವಿ ಅಧ್ಯಯನ ಸೌಲಭ್ಯವನ್ನು ನೀಡುತ್ತಿದೆ.

ಶೈಕ್ಷಣಿಕ ಶುಲ್ಕ : ಅಂದಾಜು 1.08 ಲಕ್ಷ (4 ವರ್ಷಗಳಿಗೆ)

ಶೈಕ್ಷಣಿಕ ಅರ್ಹತೆ : ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಜೀವ ಶಾಸ್ತ್ರ, ಕೃಷಿಗೆ ಸಂಬಂಧಿಸಿದ ವಿಭಾಗದ ಅಧ್ಯಯನ ಮತ್ತು CUET ಅಥವಾ KCET ಅಥವಾ Indian Council of Agricultural Research (ICAR) ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು.

E-mail: registrar@uasbangalore.edu.in. , deanagben@uasbangalore.edu.in.

2. ರೇಷ್ಮೆ ಕೃಷಿ ಮಹಾವಿದ್ಯಾಲಯ ಚಿಂತಾಮಣಿ.

ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದಿಂದ ಕೋಲಾರದ ಕಡೆಗೆ 7 ಕಿ.ಮೀ.ದೂರದಲ್ಲಿದೆ.

ಇದು ಎಷ್ಯಾದಲ್ಲಿ, ರೇಷ್ಮೆಕೃಷಿಯ ವಿಷಯದಲ್ಲಿ 4 ವರ್ಷಗಳ ಕೋರ್ಸ್ ಸೌಲಭ್ಯವಿರುವ ಏಕೈಕ ಸಂಸ್ಥೆ.

i) ಬಿ.ಎಸ್ಸಿ (ಹಾನರ್ಸ್) ಅಗ್ರಿಕಲ್ಚರ್

ii) ಬಿ.ಎಸ್ಸಿ (ಹಾನರ್ಸ್)

iii) ಸೆರಿಕಲ್ಚರ್(4 ವರ್ಷಗಳು)

ಇಲ್ಲಿಯ ದಾಖಲಾತಿ ಪ್ರಕ್ರಿಯೆಗಳು ICAR ನಿಯಮಗಳಿಗನುಸಾರವಾಗಿ CUET,

KCET ಇತ್ಯಾದಿ ಪ್ರವೇಶ ಪರೀಕ್ಷೆಗಳೊಂದಿಗೆ ನಡೆಯುತ್ತವೆ. ಕೃಷಿ ಹಿನ್ನಲೆಯುಳ್ಳ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ.

ಅಂದಾಜು ಶುಲ್ಕ : 1.08 ಲಕ್ಷ.

E-mail: disericulture@gmail.com, deanseri@uasbangalore.edu.in

 

3.ಕಾಲೇಜ್ ಆಫ್ ಅಗ್ರಿಕಲ್ಚರ್ಹಾಸನ.

ಈ ಕೃಷಿ ವಿಶ್ವವಿದ್ಯಾಲಯವು, ರಾಷ್ಟೀಯ ಹೆದ್ದಾರಿ – 48ರ ಕರೆಕೆರೆ ಎಂಬಲ್ಲಿ ಸ್ಥಾಪಿತವಾಗಿದೆ. ಇದು ಹಾಸನ ಮುಖ್ಯ ಪಟ್ಟಣದಿಂದ 19 ಕಿ.ಮೀ. ದೂರದಲ್ಲಿದೆ.

ಯು.ಎ. ಎಸ್. ಹಾಸನವು, ಕೃಷಿ(Agriculture), ಜೈವಿಕ ತಂತ್ರಜ್ಞಾನ (Dept.of AgrI.Biotechnology), ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ (Dept of food science and  Technology) ವಿಭಾಗಗಳಲ್ಲಿ  ಪದವಿ ಶಿಕ್ಷಣವನ್ನು (UG) ನೀಡುತ್ತಿದೆ.

ಶೈಕ್ಷಣಿಕ ಕಾರ್ಯಕ್ರಮಗಳು:

  • ಬಿ.ಎಸ್ಸಿ. (ಕೃಷಿ).
  • ಬಿ.ಎಸ್ಸಿ.  (ಕೃಷಿ- ಜೈವಿಕ ತಂತ್ರಜ್ಞಾನ)
  • ಬಿ.ಟೆಕ್. – ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ

 ಪದವಿ ಶುಲ್ಕ – 53460/ ಒಂದು ವರ್ಷಕ್ಕೆ.

ಮೇಲೆ ತಿಳಿಸಿದ ಪದವಿಗಳ ಪ್ರವೇಶಕ್ಕೆ ಅರ್ಹತೆ KCET ಮತ್ತು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ.

E-mail: registrar@uasbangalore.edu.in

 

4.ಕಾಲೇಜ್ ಆಫ್ ಅಗ್ರಿಕಲ್ಚರ್, ಚಾಮರಾಜನಗರ.

ಕೃಷಿಗೆ ಪೂರಕವಾದ ಹವಾಮಾನ ಮತ್ತು ಹಳ್ಳಿ ಪ್ರದೇಶಗಳಲ್ಲಿ ಕೃಷಿ ಶಿಕ್ಷಣದ ಮಹತ್ವವನ್ನು ಗುರುತಿಸಿ, ಕರ್ನಾಟಕ ಸರಕಾರ ಮತ್ತು ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಬೆಂಗಳೂರು, ಕಾಲೇಜ್ ಆಫ್ ಅಗ್ರಿಕಲ್ಚರ್ , ಚಾಮರಾಜನಗರವನ್ನು, ಹರದನಹಳ್ಳಿ ಎಂಬಲ್ಲಿ 2018ರಲ್ಲಿ ಪ್ರಾರಂಭಿಸಿತು.

ಇದು ಚಾಮರಾಜನಗರ ಮುಖ್ಯ ಪಟ್ಟಣದಿಂದ 4 ಕಿ.ಮೀ. ದೂರದಲ್ಲಿದೆ.

ಬಿ. ಎಸ್ಸಿ.(hons) ಅಗ್ರಿಕಲ್ಚರ್ (ನಾಲ್ಕು ವರ್ಷಗಳು)

ಅರ್ಹತೆ : ICAR/ Kcet.

E-mail:  kvkchnagara@gmail.com

 

5.ವಿಶ್ವೇಶ್ವರಯ್ಯ ಕೆನಲ್ (V.C) ಫಾರ್ಮ್ / ಕಾಲೇಜ್ ಆಫ್ ಅಗ್ರಿಕಲ್ಚರ್ ಮಂಡ್ಯ.

 

         

ಇದು ಮಂಡ್ಯ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. ಇದರ ಬಿ.ಎಸ್ಸಿ .ಅಗ್ರಿಕಲ್ಚರ್ ವಿಭಾಗವು,
ಬೆಳೆ ಉತ್ಪಾದನೆ (Crop production),ಬೆಳೆ ರಕ್ಷಣೆ (Crop protection) ಬೆಳೆ ಅಭಿವೃದ್ಧಿ, (Crop improvement) ಮತ್ತು ಸಮಾಜ ವಿಜ್ಞಾನ ವಿಷಯಗಳ ಅಧ್ಯಯನವನ್ನು ಒಳಗೊಂಡಿದೆ.

UAS ಬೆಂಗಳೂರು ಮತ್ತು ಸಂಬಂಧಿಸಿತ ಕಾಲೇಜುಗಳು, ಕೃಷಿ ವಿಜ್ಞಾನ (Agriculture),ತೋಟಗಾರಿಕೆ (Horticulture), ರೇಷ್ಮೆ ಕೃಷಿ (Sericulture), ಸಹಕಾರ (Co-operation), ಕೃಷಿ ಉತ್ಪನ್ನಗಳ ಮಾರುಕಟ್ಟೆ (Agricultural Marketing), ಮತ್ತು ಅಗ್ರಿಕಲ್ಚರಲ್ ಇಂಜಿನಿಯರಿಂಗ್ ವಿಷಯಗಳಲ್ಲಿ 2 ವರ್ಷಗಳ ಸ್ನಾತಕೋತ್ತರ ಪದವಿಯನ್ನು ನೀಡುತ್ತದೆ.

ಅರ್ಹತೆ : Kcet / ICAR.

E-mail:   deanpgs@uasbangalore.ed.in 

 

ಉದ್ಯೋಗದ ಉದ್ದೇಶ ಈಡೇರಿಕೆಗಾಗಿ UAS ಬೆಂಗಳೂರು ನೀಡುವ ಪದವಿಯೇತರ ಕೋರ್ಸ್ ವಿವರಗಳು

 

 

The Bakery Training Unit-  ‘ಬೇಕರಿ ತಂತ್ರಜ್ಞಾನ’ ವಿಷಯದಲ್ಲಿ 14 ವಾರಗಳ ಸರ್ಟಿಫಿಕೇಟ್ ಕೋರ್ಸ್

  • ಎರಡು ಅಥವಾ ನಾಲ್ಕು ವಾರಗಳ ಬೇಕರಿ  ಉತ್ಪನ್ನಗಳ ತಯಾರಿಕಾ ತರಬೇತಿ ಕೋರ್ಸ್.
  • ಆಯ್ದ ವೃತ್ತಿಪರರಿಗೆ ಒಂದು ವಾರದ ತರಬೇತಿ.
  • ಮೂರು ದಿನಗಳ ಹೋಮ್ ಬೇಕರಿ ಕೋರ್ಸ್ – ಮಹಿಳೆಯರಿಗಾಗಿ.
  • ವಿದ್ಯಾಭ್ಯಾಸ ಹೊಂದಿರುವ ಕೃಷಿಕರಿಗೆ ‘ಭತ್ತದ ಕೃಷಿ’, ‘ವೈಜ್ಞಾನಿಕ ಹಿಪ್ಪು ನೇರಳೆ ಕೃಷಿ’ ಮತ್ತು ರೇಷ್ಮೆ ಸಾಕಣೆ’ ವಿಷಯಗಳಲ್ಲಿ ಕರೆಸ್ಪಾ0ಡೆನ್ಸ್ ಕೋರ್ಸ್ (ಪತ್ರ ವ್ಯವಹಾರದ ಶಿಕ್ಷಣ) ನೀಡುತ್ತಿದೆ.
  • UAS ಸಂಸ್ಥೆಯು, ವಿಸ್ತರಣಾ ಶಿಕ್ಷಣ ಜಾಲದ ಮೂಲಕ ರೈತರು, ಗ್ರಾಮೀಣ ಯುವಜನರು, ಮಹಿಳೆಯರು, NGO.ಗಳು ಮತ್ತು ಇತರ        ಸಂಬಂಧಿತ ಸಂಸ್ಥೆಗಳ ಉದ್ಯೋಗಿಗಳಿಗೆ ಪ್ರಾಯೋಜಿತ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತದೆ.

ರೈತ ತರಬೇತಿ ಸಂಸ್ಥೆ, ಜಿಕೆವಿಕೆ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ  ನಿರ್ದೇಶನಾಲಯದ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ.
ರೈತರಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ನೀಡುವಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿ ನೀಡುವುದು ಸಂಸ್ಥೆಯ ಉದ್ದೇಶ. ರೈತರಿಗಾಗಿ ಕೃಷಿಯ ನೂತನ ತಾ0ತ್ರಿಕತೆಗಳು, ಸಮಗ್ರಕೃಷಿ, ತೋಟಗಾರಿಕಾ ಬೆಳೆಗಳ ತಾ0ತ್ರಿಕತೆ, ಸಾವಯವ ಕೃಷಿ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ಮತ್ತು ಮಣ್ಣು ಆರೋಗ್ಯ ಅಭಿಯಾನ, ಭೂ ಚೇತನ, ಕಿರುಧಾನ್ಯ ಉತ್ತೇಜನ ಮೊದಲಾದ ಕಾರ್ಯಕ್ರಮಗಳನ್ನು ಕುರಿತು ಸಾಂಸ್ಥಿಕ ತರಬೇತಿಗಳನ್ನು ಆಯೋಜಿಸುತ್ತದೆ.
E-mail:   shivannafti@gmail.com, chandregowdakn@gmail.com

B)ಕೃಷಿ ವಿಶ್ವವಿದ್ಯಾಲಯ ಧಾರವಾಡ. UAS Dharwad.

 

ವಿಶ್ವವಿದ್ಯಾಲಯದ ಮುಖ್ಯ ಆವರಣವು ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4ಕ್ಕೆ ಹೊಂದಿಕೊಂಡಿರುವುದು.

ಈ ವಿಶ್ವವಿದ್ಯಾಲಯವು 5 ಕಾಲೇಜುಗಳನ್ನು, 30 ಸಂಶೋಧನಾ ಕೇಂದ್ರಗಳನ್ನು, 6 ವಿಸ್ತರಣಾ ಘಟಕಗಳನ್ನು, 5 ಕೃಷಿ ವಿಜ್ಞಾನ ಕೇಂದ್ರಗಳನ್ನು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದೆ.

ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ ಹಾವೇರಿ, ಮತ್ತು ಉತ್ತರ ಕನ್ನಡ  ಇವುಗಳಲ್ಲಿ ಇದರ ಕಾರ್ಯವ್ಯಾಪ್ತಿ ಹೊಂದಿದೆ.

ಕೃಷಿ ವಿಶ್ವವಿದ್ಯಾಲಯ ಧಾರವಾಡ.

ಇದು ಪದವಿ, ಸ್ನಾತಕೋತ್ತರ ಮತ್ತು ಪಿ. ಹೆಚ್. ಡಿ ಹಂತದ ಕೋರ್ಸ್‌ಗಳನ್ನು ,5 ಕ್ಯಾಂಪಸ್ಗಳಲ್ಲಿ ನೀಡುತ್ತಿದೆ.

1. ಕಾಲೇಜ್ ಆಫ್ ಅಗ್ರಿಕಲ್ಚರ್ , ಧಾರವಾಡ.

ಕೋರ್ಸ್ ವಿವರಗಳು :

  • ಬಿ.ಎಸ್ಸಿ(4 ವರ್ಷಗಳು)

ಆಯ್ಕೆ ವಿಷಯಗಳು

i.ಕೃಷಿ ಉತ್ಪನ್ನಗಳ ಮಾರುಕಟ್ಟೆ

ii.ಸಹಕಾರ ವಿಷಯದ ಅಧ್ಯಯನ.

  • ಬಿ.ಟೆಕ್ – ಆಹಾರ ತಂತ್ರಜ್ಞಾನ(4 ವರ್ಷಗಳು)
  • ಬಿ. ಎಸ್ಸಿ. – ಅಗ್ರಿಕಲ್ಚರ್(4 ವರ್ಷಗಳು)
  • ಎಂ.ಎಸ್ಸಿ – ಅಗ್ರಿಕಲ್ಚರ್(2 ವರ್ಷಗಳು).
  • ಪಿ.ಹೆಚ್.ಡಿ. – ಕೃಷಿ ವಿಜ್ಞಾನ (6 ವರ್ಷಗಳು)

2.ಕಾಲೇಜ್ ಆಫ್ ಅಗ್ರಿಕಲ್ಚರ್ , ಹನುಮನಹಟ್ಟಿ.

 

ಬಿ. ಎಸ್ಸಿ. ಅಗ್ರಿಕಲ್ಚರ್(4 ವರ್ಷಗಳು)

 

3.ಕಾಲೇಜ್ ಆಫ್ ಫಾರೆಸ್ಟ್ರಿ,ಸಿರ್ಸಿ. (College of Forestry, Sirsi)

 

 

ಇದು ICAR ಮಾನ್ಯತೆ ಪಡೆದಿದೆ.

ಬಿ.ಎಸ್ಸಿ.- ಅರಣ್ಯ ವಿಜ್ಞಾನ (4 ವರ್ಷಗಳು)

ಅರ್ಹತೆ : ಪಿ. ಯು. ಸಿ ವಿಜ್ಞಾನ ವಿಭಾಗ – 50% ಮತ್ತು KCET/ICAR AIEEA.

ಎಂ.ಎಸ್ಸಿ – ಅರಣ್ಯ ವಿಜ್ಞಾನ (2 ವರ್ಷಗಳು)

ಅರ್ಹತೆ : ಪದವಿ ಮತ್ತು ICAR ನಿಯಮಗಳಿಗನುಸಾರವಾಗಿ.

 

4.ಕಾಲೇಜ್ ಆಫ್ ಅಗ್ರಿಕಲ್ಚರ್ ವಿಜಯಪುರ.

 

  • ಬಿ.ಎಸ್ಸಿ.- ಅಗ್ರಿಕಲ್ಚರ್(4 ವರ್ಷಗಳು)
  • ಎಂ.ಎಸ್ಸಿ. – ಜೆನೆಟಿಕ್ಸ್ ಆಂಡ್ ಪ್ಲಾಂಟ್ ಬ್ರೀಡಿಂಗ್(2 ವರ್ಷಗಳು)
  • ಎಂ.ಎಸ್ಸಿ. : ಕೃಷಿ ಅರ್ಥಶಾಸ್ತ್ರ (Agricultural Economics) (2 ವರ್ಷಗಳು)
  • ಎಂ.ಎಸ್ಸಿ.– ಕೃಷಿ ಶಾಸ್ತ್ರ (2 ವರ್ಷಗಳು)
  • ಎಂ.ಎಸ್ಸಿ.– ಕೀಟಶಾಸ್ತ್ರ (Agricultural Entomology) (2 ವರ್ಷಗಳು)
  • ಎಂ.ಎಸ್ಸಿ– ಸಸ್ಯರೋಗ ಶಾಸ್ತ್ರ (Plant Pathology)(2 ವರ್ಷಗಳು)

 

5.ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ. College of community science, Dharwad.

 

 

ಬಿ. ಎಸ್ಸಿ.(ಹಾನರ್ಸ್) – ಸಮುದಾಯ ವಿಜ್ಞಾನ.

ಬಿ.ಟೆಕ್ – ಆಹಾರ ವಿಜ್ಞಾನ (4 ವರ್ಷಗಳು)

ಅರ್ಹತೆ : ಪಿ.ಯು.ಸಿ – ವಿಜ್ಞಾನ ಮತ್ತು KCET.

ಧಾರವಾಡ ಕೃಷಿ ವಿಶ್ವವಿದ್ಯಾಲಯವು, ಆರು ಕ್ಯಾಂಪಸ್ಗಳಲ್ಲಿ ಕೃಷಿ ವಿಷಯದಲ್ಲಿ ಡಿಪ್ಲೋಮ ಕೋರ್ಸ್ ಸೌಲಭ್ಯ ಹೊಂದಿದೆ.

ಈ ಕ್ಯಾಂಪಸ್ಗಳು ಧಾರವಾಡ, ವಿಜಯಪುರ, ಜಮಖಂಡಿ, ನಿಪ್ಪಾಣಿ, ಅಕ್ಕಿ ಆಲೂರು ಮತ್ತು ಕುಮಟಾದಲ್ಲಿವೆ.

ಸ್ನಾತಕೋತ್ತರ ಪದವಿ ಮತ್ತು ಪಿ. ಹೆಚ್.ಡಿ. :

25 ಆಯ್ಕೆ ವಿಷಯಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು 18 ಆಯ್ಕೆಗಳೊಂದಿಗೆ ಪಿ.ಹೆಚ್.ಡಿಯನ್ನು ನೀಡುತ್ತದೆ.

E-mail:   deanrhsc@uasd.in, registrar@uasdi.in

3. ಕೃಷಿ ವಿಶ್ವ ವಿದ್ಯಾಲಯ, ರಾಯಚೂರು. University of Agricultural Sciences, Raichur.

 

 

ಕೋರ್ಸ್ ವಿವರಗಳು :

ಬಿ.ಎಸ್ಸಿ. : 5 ಸಂಯೋಜನೆಗಳ ಆಯ್ಕೆ ಇದೆ.

ಅರ್ಹತೆ : ಪಿ. ಯು. ಸಿ : 50% ಮತ್ತು KCET / ICAR AIEEA.

ಬಿ.ಇ./ ಬಿ. ಟೆಕ್.

ಅರ್ಹತೆ : ಪಿ. ಯು. ಸಿ : 50% ಮತ್ತು KCET / ICAR AIEEA.

ಬಿ. ಎಸ್ಸಿ. (ಹಾನರ್ಸ್)

ಅರ್ಹತೆ : ಪಿ. ಯು. ಸಿ : 50% ಮತ್ತು KCET / ICAR AIEEA.

ಎಂ.ಎಸ್ಸಿ.(2 ವರ್ಷಗಳು) : 15 ಸಂಯೋಜನೆಗಳ ಆಯ್ಕೆ ಇದೆ.

ಪದವಿ ಶುಲ್ಕ : ಅಂದಾಜು 18.39ಸಾವಿರ.

ಅರ್ಹತೆ : ಪದವಿ – 60% ಮತ್ತು ICAR AIEEA.

ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಶ್ವವಿದ್ಯಾಲಯ ಭೀಮರಾಯನಗುಡಿ ಮತ್ತು ಕೃಷಿ ವಿಶ್ವವಿದ್ಯಾಲಯ ಕಲ್ಬುರ್ಗಿ ಇವುಗಳನ್ನು ಒಳಗೊಂಡಿದ್ದು, ಇಲ್ಲಿಯೂ ಕೃಷಿ ಸಂಬಂಧಿಸಿದ ವಿಷಯಗಳಲ್ಲಿ ಪದವಿ ಕೋರ್ಸ್ ಪೂರೈಸಬಹುದು.

E-mail: deanacr@uasraichur.edu.in

4. ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು.

 

 

ಬಿ.ಎಸ್ಸಿ. – ತೋಟಗಾರಿಕಾ ವಿಜ್ಞಾನ.(4 ವರ್ಷಗಳು)

ಅರ್ಹತೆ : ಪಿ ಯು ಸಿ (PCMB), KCET.

E-mail: dean.cohmysore@uhsbagalkot.edu.in

5. ತೋಟಗಾರಿಕಾ ಮಹಾ ವಿದ್ಯಾಲಯ ಮೂಡಿಗೆರೆ.

 

ಇದು  ಕೃಷಿ ಮತ್ತು ತೋಟಗಾರಿಕಾ ಮಹಾವಿದ್ಯಾಲಯ ಶಿವಮೊಗ್ಗದೊಂದಿಗೆ ಸಂಯೋಜಿಸಲ್ಪಟ್ಟಿದೆ.

ಪದವಿ ಕೋರ್ಸ್ ವಿವರಗಳು :

ಬಿ.ಎಸ್ಸಿ. (ತೋಟಗಾರಿಕೆ)

ಅವಧಿ : 4 ವರ್ಷಗಳು

ಪದವಿ ಕೋರ್ಸ್, ಹೂವಿನ ಕೃಷಿ ಮತ್ತು ಭೂ-ದೃಶ್ಯ  ತೋಟಗಾರಿಕಾ ವಿನ್ಯಾಸ (Floriculture & landscape architecture), ಫಲ ವಿಜ್ಞಾನ (Fruit science – pomology), ತೋಟಗಾರಿಕೆ (Plantation), Spices(ಮಸಾಲೆ ಬೆಳೆಗಳು),ಗಿಡಮೂಲಿಕೆಗಳು ಮತ್ತು ಸುಗಂಧ ಬೆಳೆಗಳು (medicinal and aromatic crops), ಕೀಟ ಶಾಸ್ತ್ರ (Horticulture entomology),ತರಕಾರಿ ಕೃಷಿಯ ವಿಜ್ಞಾನ(Vegetable science- Olericulture), ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ  (Crop improvement and biotechnology), ಕೊಯ್ಲಿನ ನಂತರದ ತಂತ್ರಜ್ಞಾನ (Post harvest technology), ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ (Natural resource management) ವಿಷಯಗಳನ್ನು ಒಳಗೊಂಡಿದೆ.

ಅರ್ಹತೆ : ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (Indian Council of Agricultural Research) ಅಗತ್ಯಗಳಿಗೆ ಅನುಗುಣವಾಗಿ ಪದವಿ ದಾಖಲಾತಿ ನಿಯಮಗಳನ್ನು ರೂಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪಿ.ಯು. ಸಿ. ವಿಜ್ಞಾನ ವಿಭಾಗದಲ್ಲಿ PCMB ಸ0ಯೋಜನೆ ಅಧ್ಯಯನ ಮಾಡಿರಬೇಕು.

ಗ್ರಾಮೀಣ ಮತ್ತು ಕೃಷಿ ಹಿನ್ನಲೆಯಿರುವ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ  ನೀಡಲಾಗುತ್ತದೆ.

ಸ್ನಾತಕೋತ್ತರ ಪದವಿ(2 ವರ್ಷಗಳು)

ಈ ಪದವಿಯು, Floriculture and landscape architecture, Fruit science-pomology,Plantation, Spices, medicinal and aromatic crops, Horticulture entomology, Genetics and Plant Breeding (ಸಸಿ ತಳಿ), Vegetable science (olericulture)ವಿಷಯಗಳನ್ನು ಒಳಗೊಂಡಿದೆ.

ಅರ್ಹತೆ : ಜೂನಿಯರ್ ರಿಸರ್ಚ್ ಫೆಲೋ ಅರ್ಹತೆ ಅಥವಾ PGCET ರಾಜ್ಯ ಪ್ರವೇಶ ಪರೀಕ್ಷೆ  ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

E-mail: deanmudigere2011@gmail.com

6. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ.

 

 

ಈ ಕೃಷಿ ವಿಶ್ವವಿದ್ಯಾಲಯವು,ಶಿವಮೊಗ್ಗ ಜಿಲ್ಲೆಯ, ಸಾಗರ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಇರುವಕ್ಕಿಯಲ್ಲಿದೆ.

ಪದವಿ ಕೋರ್ಸ್ ವಿವರಗಳು

  • ಬಿ.ಎಸ್ಸಿ.-ಅರಣ್ಯ ವಿಜ್ಞಾನ (B.Sc.Forestry)
  • ಬಿ.ಎಸ್ಸಿ.-ತೋಟಗಾರಿಕೆ (B.Sc. Horticulture)
  • ಬಿ.ಎಸ್ಸಿ.- ಕೃಷಿ (B.Sc. Agriculture)

ಅರ್ಹತೆ : ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ನಡೆಸಿ ಉತ್ತೀರ್ಣರಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (KCET) ಉತ್ತೀರ್ಣರಾಗಿರಬೇಕು.

ಶೈಕ್ಷಣಿಕ ಶುಲ್ಕ : 22,000/ (ಮೊದಲ ವರ್ಷಕ್ಕೆ)

ಬಿ.ಎಸ್ಸಿ. (2 ವರ್ಷಗಳು) (Lateral Entry)

ವಿಷಯಗಳು : ಕೃಷಿ ಮತ್ತು ತೋಟಗಾರಿಕೆ

ಶೈಕ್ಷಣಿಕ ಶುಲ್ಕ : 22,000/ (ಮೊದಲ ವರ್ಷಕ್ಕೆ )

ಅರ್ಹತೆ :  ಕರ್ನಾಟಕದ ಯಾವುದೇ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಅಥವಾ ತೋಟಗಾರಿಕಾ ವಿಷಯದಲ್ಲಿ ಡಿಪ್ಲೋಮ ಪಡೆದಿರಬೇಕು.

ಶಿವಮೊಗ್ಗ ಕೃಷಿ ವಿದ್ಯಾಲಯವು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಕೃಷಿ ಸಂಬಂಧಿತ ವಿಷಯಗಳಲ್ಲಿ ಪಿ.ಹೆಚ್.ಡಿ. ಮತ್ತು ಡಿಪ್ಲೋಮ ಕೋರ್ಸ್ ಗಳನ್ನು ನೀಡುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳು  ಇಲ್ಲಿ ಕ್ಯಾಂಪಸ್ ಉದ್ಯೋಗ ಸಂದರ್ಶನಗಳ ಮೂಲಕ ಉದ್ಯೋಗವಕಾಶಗಳನ್ನು ನೀಡುತ್ತವೆ.

E-mail:    registrar@uahs.edu.in

7. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ.

 

ಇದು ಕರ್ನಾಟಕ ಸರಕಾರದಿಂದ ಸ್ಥಾಪಿತವಾದ ಸರಕಾರಿ ವಿಶ್ವವಿದ್ಯಾಲಯ.

ಪದವಿ ಕೋರ್ಸ್ಗಳು:

ಬಿ.ಎಸ್ಸಿ – ತೋಟಗಾರಿಕಾ ವಿಜ್ಞಾನ.(Horticulture)

ಈ ಪದವಿಯು, ಹಣ್ಣಿನ ವಿಜ್ಞಾನ (Fruit Science), ತರಕಾರಿ ಕೃಷಿ ವಿಜ್ಞಾನ (Vegetable Science), ಹೂವಿನ ಕೃಷಿ ಮತ್ತು ಭೂ ದೃಶ್ಯ ತೋಟಗಾರಿಕಾ ವಿನ್ಯಾಸ (Floriculture and Landscape Architecture), ಕೊಯ್ಲಿನ ನಂತರದ ತಂತ್ರಜ್ಞಾನ (Post-Harvest Technology), ತೋಟಗಾರಿಕೆ (Plantation), ಮಸಾಲೆ, ಔಷಧೀಯ ಮತ್ತು ಸುಗಂಧ ಬೆಳೆಗಳು (Spices, Medicinal and Aromatic Crop), ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಅಭಿವೃದ್ಧಿ (Biotechnology and Crop Improvement), ಕೀಟ ಶಾಸ್ತ್ರ (Entomology), ಸಸ್ಯ ರೋಗಶಾಸ್ತ್ರ(Plant pathology) ಮಣ್ಣಿನ ವಿಜ್ಞಾನ (Soil Science) ಮತ್ತು ಕೃಷಿ ರಸಾಯನ ಶಾಸ್ತ್ರ (Agricultural Chemistry) ಅಧ್ಯಯನ ವಿಷಯಗಳನ್ನು ಒಳಗೊಂಡಿದೆ.

ಅರ್ಹತೆ :ಪಿ.ಯು.ಸಿ. PCMB ಸ0ಯೋಜನೆಯಲ್ಲಿ ಉತ್ತೀರ್ಣರಾಗಿದ್ದು, ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (KCET)ಯಲ್ಲಿ ಅಪೇಕ್ಷಿತ ಶ್ರೇಣಿ ಪಡೆದಿರಬೇಕು.

ಕೃಷಿ ಕೋಟಾ : KEAಯು PCMB ಸ0ಯೋಜನೆಯ 25% ಮತ್ತು KCETಯ 50% ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಸುತ್ತದೆ.

ಶೈಕ್ಷಣಿಕ ಶುಲ್ಕ : 39,385/ (ಮೊದಲ ವರ್ಷಕ್ಕೆ)

ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ.

9 ವಿಷಯಗಳಲ್ಲಿ ಎಂ.ಎಸ್ಸಿ. ಮತ್ತು  ಪಿ.ಹೆಚ್.ಡಿ. ಸೌಲಭ್ಯವಿದೆ.

E-mail:   registrar@uhsbagalkot.edu.in

ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ವಿಜ್ಞಾನ ಪದವೀಧರರ ವೇತನ ಶ್ರೇಣಿ ಮತ್ತು ಉದ್ಯೋಗ ಆಯ್ಕೆಗಳು.

 

     

 

ವೇತನ ಶ್ರೇಣಿ, ಹುದ್ದೆಯ ದರ್ಜೆಯನ್ನು ಅವಲಂಬಿಸಿದೆ. ಅಂದಾಜು 7ಲಕ್ಷ – 9ಲಕ್ಷ.

ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR), ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳು (SAUs), ಕೃಷಿ ವಿಜ್ಞಾನ ಕೇಂದ್ರಗಳು (KVKs), ಕೃಷಿ ಇಲಾಖೆ, ಕರ್ನಾಟಕ ಸರಕಾರ, UPSC, ಬ್ಯಾಂಕಿಂಗ್ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (R&D), ಕಸ್ಟಮ್ ನೇಮಕಾತಿ ಕೇಂದ್ರಗಳು, NGO’s, John Deere, Netafim Irrigations, Jain Irrigation System ltd, ITC, Mahindra and Mahindra, VST Tillers & Tractors Ltd, Kirloskar Industries, ಇತ್ಯಾದಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ, Agri-preneur, Agriculture Research Scientist, Quality Assurance Officer, Rural Development Officer, Agricultural Technicians, Florist, Lawn Care Specialist, Horticulturist, Irrigation Technician, Horticulral Therapist, Landscape Architect, Agronomist, Arborist, Ecologist, Plant geneticist, Environmental Enginner ಆಗಿ ಸೇವೆ ಸಲ್ಲಿಸಬಹುದು.

ಬಿ.ಎಸ್ಸಿ. ಸೆರಿಕಲ್ಚರ್ ಪದವಿಯ ನಂತರದ ಉನ್ನತ ಶಿಕ್ಷಣ ಮತ್ತು ಉದ್ಯೋಗ ಅವಕಾಶಗಳು.

ರೇಷ್ಮೆ ಕೃಷಿ ಪದವಿ ಶಿಕ್ಷಣದ ನಂತರ, ಉನ್ನತ ಅಧ್ಯಯನವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳು ದೇಶಿಯ ಮತ್ತು ವಿದೇಶಿ ವಿಶ್ವ- ವಿದ್ಯಾನಿಲಯಗಳಲ್ಲಿ ರೇಷ್ಮೆ ಕೃಷಿ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪಿ.ಹೆಚ್.ಡಿ. ಅಧ್ಯಯನವನ್ನು ನಡೆಸಬಹುದು.

ಕರ್ನಾಟಕ, ತಮಿಳು ನಾಡು, ಆಂಧ್ರ ಪ್ರದೇಶ, ಓಡಿಶಾ ಮುಂತಾದ ರಾಜ್ಯಗಳಲ್ಲಿರುವ ಇತರ, ಸೆಂಟ್ರಲ್ ಸಿಲ್ಕ್ ಬೋರ್ಡ್ ವಿಭಾಗಗಳಲ್ಲಿ ಅಧ್ಯಯನ ನಡೆಸಬಹುದು.

ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಪದವೀಧರರು Sericulture Researcher, Sericulturist, Employment Officer ಆಗಿ ಸೇವೆ ಸಲ್ಲಿಸಬಹುದು.

 

C) ಹೈನು ವಿಜ್ಞಾನ ವಿಶ್ವವಿದ್ಯಾಲಯಗಳು.

1.ಡೈರಿ ಸೈನ್ಸ್ ಕಾಲೇಜು ಬೆಂಗಳೂರು

ಪದವಿ ಕೋರ್ಸ್:

  • ಡೈರಿ ತಂತ್ರಜ್ಞಾನ (Dairy technology) ವಿಷಯದಲ್ಲಿ B. E/B.Tech (4ವರ್ಷಗಳು)
    ಶೈಕ್ಷಣಿಕ ಶುಲ್ಕ : ಅಂದಾಜು 1.1 ಲಕ್ಷ
    ಅರ್ಹತೆ : ಪಿ. ಯು. ಸಿ ವಿಜ್ಞಾನ ವಿಭಾಗದಲ್ಲಿ 50% ಅಂಕಗಳು ಮತ್ತು KCET, (ICAR ನಿಯಮಗಳಿಗನುಸಾರವಾಗಿ.)

 

  • B.Tech – ಡೈರಿ ಟೆಕ್ನಾಲಜಿ.(2 ವರ್ಷಗಳು)
    ಶೈಕ್ಷಣಿಕ ಶುಲ್ಕ : ಅಂದಾಜು 15,910/-
    ಅರ್ಹತೆ : ಪದವಿಯಲ್ಲಿ 60% ಅಂಕಗಳು ಮತ್ತು ICAR AIEEA ನಿಯಮಗಳಿಗನುಸಾರವಾಗಿ.

E-mail:  deandch@gmail.com

 

2.ರಾಷ್ಟೀಯ ಹೈನು ಸಂಶೋಧನಾ ಸಂಸ್ಥೆ ಬೆಂಗಳೂರು (Southern Regional Station)

UG Diploma – ಡೈರಿ ಟೆಕ್ನಾಲಜಿ (3 ವರ್ಷಗಳು)

ಶುಲ್ಕ : ಅಂದಾಜು 14.7 ಸಾವಿರ (3 ವರ್ಷಗಳಿಗೆ )

ಅರ್ಹತೆ : 10+2 : 50%

ಎಂ.ಎಸ್ಸಿ.

Biotechnology, Dairy Science, Food and Nutrition, Genetics ಸೇರಿದಂತೆ ಒಟ್ಟು 14 ಕೋರ್ಸ್ ಗಳಿವೆ.

ಅರ್ಹತೆ : ಪದವಿ – 60% ಮತ್ತು ICAR AIEEA ಮಾರ್ಗಸೂಚಿಗೆ ಅನುಗುಣವಾಗಿ.

M.E./ಎಂ.ಟೆಕ್.
ಅರ್ಹತೆ : ಪದವಿ 60%,  ICAR AIEEA ನಿಯಮಗಳಿಗನುಸಾರವಾಗಿ.
ಆಯ್ಕೆ ವಿಷಯಗಳು : Dairy Technology, Dairy Chemistry, Dairy Engineering

ಮಾಸ್ಟರ್ ಆಫ್ ವೆಟರ್ನರಿ ಸೈನ್ಸ್ (MVSC)(2 ವರ್ಷಗಳು)

ಅಧ್ಯಯನ ವಿಷಯಗಳು :

  • ಪ್ರಾಣಿ ಪೋಷಣೆ (Animal Nutrition)
  • ಜಾನುವಾರು  ಉತ್ಪಾದನೆ ಮತ್ತು ನಿರ್ವಹಣೆ (Livestock production and Management)

E-mail: dir.ndri@gmail.com

3.ಹೈನು ವಿಜ್ಞಾನ ಮಹಾವಿದ್ಯಾಲಯ ಗುಲ್ಬರ್ಗ.

 

ಪದವಿ ಕೋರ್ಸ್.

ಬಿ.ಇ. / ಬಿ.ಟೆಕ್.(4 ವರ್ಷಗಳು)

ಶುಲ್ಕ : ಅಂದಾಜು 1.1 ಲಕ್ಷ(4ವರ್ಷಗಳಿಗೆ)

ಅರ್ಹತೆ : 10+2 : 50% ಮತ್ತು KCET, ICAR AIEEA.

E-mail:  deandcm@gmail.com

ಡೈರಿ ಸೈನ್ಸ್ ಅಧ್ಯಯನ ವಿಷಯಗಳು :

ಹೈನು ವಿಜ್ಞಾನ ಶಿಕ್ಷಣವು, Dairy  Farming in India (ಭಾರತದಲ್ಲಿ ಹೈನು ಉದ್ಯಮ), Animal Nutrition (ಪ್ರಾಣಿ ಪೋಷಣೆ), Animal Genetic and Reproduction, Forage Production (ಮೇವು ಉತ್ಪಾದನೆ), Feeds and Feeding(ಪಶು ಆಹಾರ ಮತ್ತು ಆಹಾರ ಒದಗಿಸುವಿಕೆ)Animal Breeding ಇತ್ಯಾದಿ ಅಧ್ಯಯನ ವಿಷಯಗಳನ್ನು ಒಳಗೊಂಡಿದೆ.

ಡೈರಿ ಸೈನ್ಸ್ ಪದವೀಧರರ ವೇತನ ಶ್ರೇಣಿ ಮತ್ತು ಉದ್ಯೋಗ ಆಯ್ಕೆಗಳು.

 

ವೇತನ ಅಂದಾಜು, 8ಲಕ್ಷ -10ಲಕ್ಷ. (ಹುದ್ದೆಯ ದರ್ಜೆಯನ್ನು ಅವಲಂಬಿಸಿದೆ) ಡೈರಿ ಸೈನ್ಸ್ ವಿಷಯದಲ್ಲಿ ಶಿಕ್ಷಣ ಪೂರೈಸಿದವರು, ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (Agriculture and Rural Bank), ಉತ್ಪಾದನಾ ಘಟಕಗಳು(manufacturing Firms), ಹಾಲಿನ ಉತ್ಪನ್ನಗಳ ಸಂಸ್ಕರಣೆ(Milk Product Processing), ಡೈರಿ ಫಾರ್ಮ್ ಇತ್ಯಾದಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ Veterinarian, Dairy Technologist, Test Engineer, Dairy Scientist, Dairy Product Quality Advisor, Farm Manager, Educationist, Dairy Technologist, Micro-biologists, Nutritionists,Theologians, Dairy Scientist, Industry supervisor, Dairy Medical Officer ಆಗಿ ಸೇವೆ ಸಲ್ಲಿಸಲು ಅವಕಾಶವಿದೆ.

D)ಸಹಕಾರ ಮತ್ತು ಸಹಕಾರೀ ಪೂರಕ ವಿಷಯ ಶಿಕ್ಷಣಗಳ ವಿಶ್ವವಿದ್ಯಾಲಯಗಳು.

1.ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ.

On the ground learning- The New Indian Express

ಈ ಶಿಕ್ಷಣ ಸಂಸ್ಥೆಯು UGC ಮಾನ್ಯತೆಯನ್ನು ಪಡೆದಿದೆ.

ಸ್ನಾತಕೋತ್ತರ ಪದವಿ ಅಧ್ಯಯನದ ವಿಷಯಗಳು

i.M.Com(2 ವರ್ಷಗಳು)

ಆಯ್ಕೆ ವಿಷಯಗಳು

  • ಸಹಕಾರಿ ನಿರ್ವಹಣೆ (Co-operative Management)
  • ಉದ್ಯಮಶೀಲತೆ (entrepreneurship)

ಶೈಕ್ಷಣಿಕ ಶುಲ್ಕ : ಅಂದಾಜು 17270/ಒಂದು ವರ್ಷಕ್ಕೆ.

ii.ಎಂ.ಎಸ್ಸಿ.(2 ವರ್ಷಗಳು)

ಆಯ್ಕೆ ವಿಷಯಗಳು

  • ಕಂಪ್ಯೂಟರ್ ಸೈನ್ಸ್
  • ಫುಡ್ ಸೈನ್ಸ್ ಆಂಡ್ ಟೆಕ್ನಾಲಜಿ
  • Geoinformatics

ಶೈಕ್ಷಣಿಕ ಶುಲ್ಕ – ಅಂದಾಜು 21270/ಒಂದು ವರ್ಷಕ್ಕೆ.

iii.MBA (2 ವರ್ಷಗಳು)

ಆಯ್ಕೆ ವಿಷಯಗಳು

  • ಕೃಷಿ ವ್ಯವಹಾರ (Agribusiness)
  • ಗ್ರಾಮೀಣ ಅಭಿವೃದ್ಧಿ ಮತ್ತು ನಿರ್ವಹಣೆ (Rural Management)

ಶೈಕ್ಷಣಿಕ ಶುಲ್ಕ : ಅಂದಾಜು 37660/ ಒಂದು ವರ್ಷಕ್ಕೆ.

iv.Master of Public Health (MPH)(2 ವರ್ಷಗಳು)

ಶೈಕ್ಷಣಿಕ ಶುಲ್ಕ : ಅಂದಾಜು 21,270/ವರ್ಷಕ್ಕೆ.

v.MSW ಪದವಿ (2 ವರ್ಷಗಳು)

ಆಯ್ಕೆ ವಿಷಯಗಳು

  • ಸಮುದಾಯ ಅಭಿವೃದ್ಧಿ(Community Development)
  • ಗ್ರಾಮೀಣ ಪುನರ್-ನಿರ್ಮಾಣ (Rural Reconstruction)
  • ಸಮುದಾಯ ಆರೋಗ್ಯ (Community Health)

ಶೈಕ್ಷಣಿಕ ಶುಲ್ಕ : ಅಂದಾಜು 17270/ವರ್ಷಕ್ಕೆ.

vi.M.A ಪದವಿಯು (2ವರ್ಷಗಳು)

ಆಯ್ಕೆ ವಿಷಯಗಳು

  • ಅಭಿವೃದ್ಧಿ ಅರ್ಥಶಾಸ್ತ್ರ (Development Economics)
  • ಸಾರ್ವಜನಿಕ ಆಡಳಿತ (Public Administration)
  • ಸಹಕಾರಿ ನಿರ್ವಹಣೆ (Co operative Management)
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (Rural Development and Panchayat Raj)

ಶೈಕ್ಷಣಿಕ ಶುಲ್ಕ : ಅಂದಾಜು 14,270/ವರ್ಷಕ್ಕೆ.

ಸ್ನಾತಕೋತ್ತರ ಪದವಿಗಳ ದಾಖಲಾತಿ ಅರ್ಹತೆ : ಯಾವುದಾದರು ವಿಷಯದಲ್ಲಿ ಪದವಿ (UG) ಪಡೆದಿರಬೇಕು. ಮತ್ತು

ಅರ್ಹತಾ ಪರೀಕ್ಷೆಯಲ್ಲಿ 45% ಅಂಕಗಳನ್ನು ಪಡೆದಿರಬೇಕು.

E-mail: vcksrdpru2016@gmail.com

profvchat@gmail.com

2.ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್, ಆನಂದ್. ಗುಜರಾತ್.

IRMA ಶಿಕ್ಷಣ ಸಂಸ್ಥೆಯು AICTE, AIU ಮತ್ತು NAAC ಮಾನ್ಯತೆ ಹೊಂದಿದೆ.

ಸ್ನಾತಕೋತ್ತರ ಪದವಿ ವಿವರಗಳು

  •  MBA/PGDM– Rural Management (ಗ್ರಾಮೀಣ ಯೋಜನೆ ಮತ್ತು ಅಭಿವೃದ್ಧಿ)

          ಅವಧಿ : 2 ವರ್ಷಗಳು

          ಶೈಕ್ಷಣಿಕ ಶುಲ್ಕ : ಅಂದಾಜು 12.6 ಲಕ್ಷ ( 2 ವರ್ಷಗಳಿಗೆ )

          ಅರ್ಹತೆ : ಪದವಿ – 50% ಮತ್ತು XAT/CAT/IRMASAT.

  •  Exicutive MBA/PGDM  ಸ್ನಾತಕೋತ್ತರ ಪದವಿಯು ಗ್ರಾಮೀಣ ಅಭಿವೃದ್ಧಿ ಮತ್ತು ನಿರ್ವಹಣೆ (Rural Management) ವಿಷಯದ ವಿಶೇಷ ಅಧ್ಯಯನವನ್ನು ಒಳಗೊಂಡಿದೆ.
  • ರೂರಲ್ ಮ್ಯಾನೇಜ್ಮೆಂಟ್ ಕೋರ್ಸ್, ಗ್ರಾಮೀಣ  ಅಭಿವೃದ್ಧಿ, ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಅಭಿವೃದ್ಧಿ, ಗ್ರಾಮೀಣ ಮಾರುಕಟ್ಟೆ ನಿರ್ವಹಣೆ, ಸಮುದಾಯ ಸೇವೆ, ಸಾಮಾಜಿಕ ಭದ್ರತೆ, ಗ್ರಾಮೀಣ ಶಿಕ್ಷಣ, ಗ್ರಾಮೀಣ ನೈರ್ಮಲ್ಯ ಇತ್ಯಾದಿ ವಿಷಯಗಳ ಅಧ್ಯಯನವನ್ನು ಒಳಗೊಂಡಿರುತ್ತದೆ.

          ಅವಧಿ : 15 ತಿಂಗಳುಗಳು.

          ಶೈಕ್ಷಣಿಕ ಶುಲ್ಕ : ಅಂದಾಜು 9.95 ಲಕ್ಷ.

          ಅರ್ಹತೆ : ಪದವಿ – 50% ಮತ್ತು XAT/CAT/ CMAT/GMAT.

E-mail:  Info@irma.ac.in

 

3.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ಕಲಬುರಗಿ.

 

 

ಇದು UGC ಮಾನ್ಯತೆ ಪಡೆದಿದೆ.

CUK,  ಹ್ಯೂಮಾನಿಟಿಸ್ , ಅರ್ಥ್ ಸೈನ್ಸ್ , ಸೋಶಿಯಲ್ ಆಂಡ್ ಬಿಹೇವಿಯರಲ್ ಸೈನ್ಸ್, ಲೈಫ್ ಸೈನ್ಸ್ ಇತ್ಯಾದಿ ವಿಶೇಷ

ವಿಭಾಗಗಳಲ್ಲಿ ಶಿಕ್ಷಣ ನೀಡುತ್ತದೆ.

ಸ್ನಾತಕೋತ್ತರ ಪದವಿ : ಎಂ.ಎ – Public Administration and Governance(2 ವರ್ಷಗಳು)

ಶೈಕ್ಷಣಿಕ ಶುಲ್ಕ : ಅಂದಾಜು 14088/ ವರ್ಷಕ್ಕೆ

ಅರ್ಹತೆ : ಪದವಿ ಮತ್ತು CUET PG.

MA in Folkloristics and Tribal Studies(2 ವರ್ಷಗಳು)

ಶೈಕ್ಷಣಿಕ ಶುಲ್ಕ : ಅಂದಾಜು 17600 ( 2 ಸೆಮಿಸ್ಟರ್ಗಳಿಗೆ)

ಅರ್ಹತೆ : PG CUET ಮತ್ತು ಯಾವುದೇ ಗುರುತಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಸರಾಸರಿ 50% ಅಂಕಗಳೊಂದಿಗೆ ಪದವಿ ಹಂತದ ಶಿಕ್ಷಣ ಪೂರೈಸಿರಬೇಕು.

E-mail:   admissions@cuk.ac.in

 

4.ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, (SVYM) ಮೈಸೂರು

     

 Vivekananda Institute for Leadership Development.

 ಸ್ನಾತಕೋತ್ತರ ಪದವಿ.

ಎಂ.ಎ. – ಅಭಿವೃದ್ಧಿ ನಿರ್ವಹಣೆ (MA in Development Management)

ಶೈಕ್ಷಣಿಕ ಅವಧಿ: 2 ವರ್ಷಗಳು

ಶುಲ್ಕ – ಅಂದಾಜು 31,560/

ಯೂತ್ ಫಾರ್ ಡೆವಲಪ್ಮೆಂಟ್ ಪ್ರೋಗ್ರಾಮ್.

 SVYM ಅಂಗ ಸಂಸ್ಥೆಯಾದ ವಿವೇಕ ರೂರಲ್ ಲೈವ್ಲಿಹುಡ್ ಸೆಂಟರ್ (ಗ್ರಾಮೀಣ ಜೀವನೋಪಾಯ ಕೌಶಲ್ಯ ತರಬೇತಿ ಸಂಸ್ಥೆ) ಗ್ರಾಮೀಣ ಮಹಿಳೆಯರು ಮತ್ತು ಯುವ ಅಭ್ಯರ್ಥಿಗಳಿಗೆ ವೃತ್ತಿಪರ ತರಬೇತಿಗಳನ್ನು ನೀಡುತ್ತಿದೆ. ಇದಲ್ಲದೆ ಕೃಷಿ ತಂತ್ರಜ್ಞಾನ, ಮತ್ತು ಜೀವನೋಪಾಯ ವಿಷಯಗಳ ಪ್ರೋತ್ಸಾಹವನ್ನು ನೀಡುವುದರ ಮೂಲಕ ಸ್ಥಳೀಯ ಅವಕಾಶಗಳನ್ನು ಸೃಷ್ಠಿಸುತ್ತಿದೆ.

ಈ ಶಿಕ್ಷಣ ಸಂಸ್ಥೆಯು ನೀಡುವ ಲಾಭೋದ್ಧೇಶ ರಹಿತ ಸಂಸ್ಥೆಗಳಿಗೆ (NPO-Non Profit Organization)ಸಂಬಂಧಿಸಿದ ವಿಶೇಷ ಸ್ನಾತಕೋತ್ತರ ಪದವಿ (Master in Development Management program) ಮೈಸೂರು ಯುನಿವರ್ಸಿಟಿಯಿಂದ ಗುರುತಿಸಿಸಲ್ಪಟ್ಟಿದೆ.

ವಿ-ಲೀಡ್ ಡಾಕ್ಟರಲ್ ರಿಸರ್ಚ್ ಸೆಂಟರ್ ತುಮಕೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆ. ಯುವ ಜನತೆಯನ್ನು ಅಭಿವೃದ್ಧಿ ಕ್ಷೇತ್ರಕ್ಕೆ ತರಬೇತಿಗೊಳಿಸುವುದು  V-LEADನ ಈ ಕೋರ್ಸ್‌ಗಳ ಮುಖ್ಯ ಉದ್ದೇಶ.

E-mail:  info@vild.edu.in

 

5. ಗಾಂಧಿಗ್ರಾಮ್ ರೂರಲ್ ಇನ್ಸ್ಟಿಟ್ಯೂಟ್ ದಿಂಡಿಗಲ್, ತಮಿಳುನಾಡು.

 

 

ಈ ವಿಶ್ವವಿದ್ಯಾಲಯವು UGC, AICTE, ICAR ಮತ್ತು  NCTE ಮಾನ್ಯತೆ ಪಡೆದಿದ್ದು, ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ, ಚಿನ್ನಲಪಟ್ಟಿ ಪಟ್ಟಣದಲ್ಲಿದೆ.

ಶೈಕ್ಷಣಿಕ ಕಾರ್ಯಕ್ರಮಗಳ ಮಾಹಿತಿ

ಪದವಿ ಕಾರ್ಯಕ್ರಮಗಳು (6 ಸೆಮಿಸ್ಟರ್)

B.Sc. Geology (ಭೂ-ವಿಜ್ಞಾನ )

ಶೈಕ್ಷಣಿಕ ಶುಲ್ಕ : ಅಂದಾಜು 36,910/

B.Sc. Home Science

ಶೈಕ್ಷಣಿಕ ಶುಲ್ಕ : ಅಂದಾಜು 36,910/

B.Com. (Cooperation)(ಸಹಕಾರ)

ಶೈಕ್ಷಣಿಕ ಶುಲ್ಕ : ಅಂದಾಜು 34,560/

B.A

ಆಯ್ಕೆ ವಿಷಯಗಳು

  • Gandhian Social Work
  • Social Work

B.Sc. Agriculture (Hons) (8 Semester)

ಶೈಕ್ಷಣಿಕ ಶುಲ್ಕ : ಅಂದಾಜು 2,99,730/

ವೃತ್ತಿಪರ ಶಿಕ್ಷಣ ಕೋರ್ಸ್‌ಗಳು

(AICTE/UGC/NCTE ಮತ್ತು ICAR ಮಾದರಿಯನ್ನು ಅನುಸರಿಸಲಾಗುತ್ತದೆ)

M.Tech.- Renewable Energy (ನವೀಕರಿಸಬಹುದಾದ ಇಂಧನ)(4 Semesters)

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು (4 Semesters)

M.B.A 

ಆಯ್ಕೆ ವಿಷಯಗಳು

Rural Development and Management

Small Business Management and Entreprenurship

Cooperative Management

ಶೈಕ್ಷಣಿಕ ಶುಲ್ಕ : ಅಂದಾಜು 53,190/

M.A. 

ಆಯ್ಕೆ ವಿಷಯಗಳು

Rural Development Studies (ಗ್ರಾಮೀಣ ಅಭಿವೃದ್ಧಿ ಅಧ್ಯಯನ)

Gandhian studies and Peace Science

Indigenous Culture Studies

ಶೈಕ್ಷಣಿಕ ಶುಲ್ಕ : ಅಂದಾಜು 26,890/

M.Com.

ಆಯ್ಕೆ ವಿಷಯಗಳು

Cooperative Management (ಸಹಕಾರ ನಿರ್ವಹಣೆ )

Rural Studies

ಶೈಕ್ಷಣಿಕ ಶುಲ್ಕ : ಅಂದಾಜು 25,890

M.Sc. – Food Science and Nutrition

ಶೈಕ್ಷಣಿಕ ಶುಲ್ಕ : ಅಂದಾಜು 42,190/

M.Sc. – Home Science Extension and Communication

ಶೈಕ್ಷಣಿಕ ಶುಲ್ಕ : ಅಂದಾಜು 42,190/

M.Sc. – Textiles and Fashion Designs

M.Sc. – Dairy Science

ಶೈಕ್ಷಣಿಕ ಶುಲ್ಕ : ಅಂದಾಜು 42,190/

M.Sc. – Applied Geology and Geomatics

ಶೈಕ್ಷಣಿಕ ಶುಲ್ಕ : ಅಂದಾಜು 42,190/

M.Sc. – Geo-informatics (ಭೌಗೋಳಿಕ ಮಾಹಿತಿ)

ಶೈಕ್ಷಣಿಕ ಶುಲ್ಕ : ಅಂದಾಜು 42,190/

5 ವರ್ಷಗಳ ಸ0ಯೋಜಿತ ಶಿಕ್ಷಣ ಕಾರ್ಯಕ್ರಮಗಳು (Integrated Courses)

  • M.A. – Development Administration (5 Years Integrated)
  • M.A. – Sociology (5 Years Integrated)

P.G.Diploma in Spatial Technologies (ಪ್ರಾದೇಶಿಕ ತಂತ್ರಜ್ಞಾನ)

P.G.Diploma in Sanitary Inspector’s Course (ನೈರ್ಮಲ್ಯ ನಿರೀಕ್ಷಕ ಪದವಿ ಕೋರ್ಸ್)

P.G.Diploma in Sustainable Social Development (ಸುಸ್ಥಿರ ಸಾಮಾಜಿಕ ಅಭಿವೃದ್ಧಿ)

Post Graduate Diploma Programmes (Two Semesters)

 

Bachelor of Vocational Studies (B.VOC) / ಕೌಶಲ್ಯ- ಆಧಾರಿತ ವೃತ್ತಿ ಶಿಕ್ಷಣ ಕಾರ್ಯಕ್ರಮಗಳು (B.Voc./Diploma/Certificate – 6 Semisters)

(UGC/AICTC ಮಾನ್ಯತೆ ಹೊಂದಿದೆ)

  • B.Voc – Farm Equipment Operation and Maintenance (ಕೃಷಿ ಉಪಕರಣ ಕಾರ್ಯಾಚರಣೆ ಮತ್ತು ನಿರ್ವಹಣೆ)
  • B.Voc – Footwear and Accessories Design
  • B.Voc – Renewable Engery
  • B.Voc – Food processing (ಆಹಾರ ಸಂಸ್ಕರಣೆ)
  • B.Voc – Food Testing and Quality Evaluation (ಆಹಾರ ಮತ್ತು ಗುಣಮಟ್ಟ ಪರೀಕ್ಷೆ)
  • B.Voc – Dairy Production and Technology
  • B.Voc – Organic Agriculture and Enterprises Development

ಶೈಕ್ಷಣಿಕ ಶುಲ್ಕ : ಅಂದಾಜು 45,610/

Diploma in Textile Technology (4 Semesters)

Diploma in Agriculture (4 Semesters)

ಶೈಕ್ಷಣಿಕ ಶುಲ್ಕ : ಅಂದಾಜು 38,690/

Master of Philosophy in Arts
ಆಯ್ಕೆಯ ವಿಷಯಗಳು
  • Women Studies
  • Development Administration
  • Research and Development (ಸಂಶೋಧನೆ ಮತ್ತು ಅಭಿವೃದ್ಧಿ )
  • Development Sociology
  • Micro Level Planning
ಶೈಕ್ಷಣಿಕ ಶುಲ್ಕ: ಅಂದಾಜು 28,950/ (3 ವರ್ಷಗಳಿಗೆ)
Doctor of Philosophy in Arts Ph. D.D ಆರ್ಟ್ಸ್ – 3 ವರ್ಷಗಳು)
 
ಆಯ್ಕೆಯ ವಿಷಯಗಳು
  • Co-operation (ಸಹಕಾರ)
  • Women Studies
  • Rural Development (ಗ್ರಾಮೀಣ ಅಭಿವೃದ್ಧಿ )
  • Development Studies(ಅಭಿವೃದ್ಧಿ ಅಧ್ಯಯನ)
  • Geoinformatics
  • Gandhian Studies
  • Energy And Power(ಇಂಧನ ಮತ್ತು ಶಕ್ತಿ )
  • Rural Health (ಗ್ರಾಮೀಣ ಆರೋಗ್ಯ)

E-mail: grucc@ruraluniv.ac.in

 

ಮಾನವ ಶಾಸ್ತ್ರ.(Anthropology)

           

 ಮಾನವಶಾಸ್ತ್ರವು ಮಾನವತೆ ಮತ್ತು ಅದರ ವಿಕಾಸವನ್ನು ಅಧ್ಯಯನ ಮಾಡುತ್ತದೆ. ಇದು ಪ್ರಾಚೀನ, ಸಮಕಾಲೀನ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದೆ.

ಮಾನವ ಶಾಸ್ತ್ರದ ಒಂದು ಮುಖ್ಯ ವಿಷಯವಾದ ಸಾಮಾಜಿಕ ಮಾನವ ಶಾಸ್ತ್ರದ ಅಧ್ಯಯನವು ಸಮಾಜದ ಮೂಲ ರಚನೆ, ಸಮಾಜದಲ್ಲಿ  ಬದಲಾವಣೆಗಳು ಸಂಭವಿಸುವ ರೀತಿ ಮತ್ತು ಕಾರಣಗಳು, ಹಾಗೂ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳು – ಇವುಗಳ ಕುರಿತಾದ ಅಧ್ಯಯನವನ್ನು ಒಳಗೊಂಡಿದೆ.

ಮಾನವ ಶಾಸ್ತ್ರ (Anthropology) ಪದವಿ ಕಾಲೇಜುಗಳು:

1.ಯೂನಿವರ್ಸಿಟಿ ಆಫ್ ಮೈಸೂರು.

2.ಕರ್ನಾಟಕ ಯೂನಿವರ್ಸಿಟಿ ಧಾರವಾಡ.

3.ಕನ್ನಡ ಯೂನಿವರ್ಸಿಟಿ ಹಂಪಿ.

ಉನ್ನತ ಶಿಕ್ಷಣವನ್ನು ಆಯ್ಕೆ ಮಾಡುವ ಮಾನವ ಶಾಸ್ತ್ರ ಪದವೀಧರರು, ಪುರಾತತ್ವ  ಶಾಸ್ತ್ರ(Archaeogy), ಪ್ರಾಣಿ ಶಾಸ್ತ್ರ(Primatology), ಜನಾಂಗ ಶಾಸ್ತ್ರ(Ethnology), ಪ್ರಾಗ್ಜೀವ ಶಾಸ್ತ್ರ(Palaeontology) ಇತ್ಯಾದಿ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಬಹುದು. ಮಾನವ ಶಾಸ್ತ್ರ ಪದವೀಧರರಿಗೆ ಸರಕಾರಿ, ವಾಣಿಜ್ಯ, ಶೈಕ್ಷಣಿಕ, NGOಗಳು ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಅವಕಾಶಗಳಿವೆ.

ಸಹಕಾರಿ ಶಿಕ್ಷಣ ಭವನ, ಭರೂಚ್ ಗುಜರಾತ್ 

ಗುಜರಾತ್‌ನ ಭರೂಚ್ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್‌ನಲ್ಲಿ ‘ಸಹಕಾರಿ ಶಿಕ್ಷಣ ಭವನ’ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಜೂನ್-3-2022ರಂದು ಶಂಕು ಸ್ಥಾಪನೆ ಮಾಡಲಾಗಿದೆ. ನಿರ್ಮಾಣ ಹಂತದಲ್ಲಿರುವ ಈ ತರಬೇತಿ ಕೇಂದ್ರವು ‘ಸಹಕಾರಿ ಕ್ಷೇತ್ರದಲ್ಲಿ ಆಡಳಿತ’ ವಿಷಯದಲ್ಲಿ ತರಬೇತಿ ನೀಡಲು ಸಹಾಯ ಮಾಡುತ್ತದೆ.
ಸಹಕಾರಿ ಕ್ಷೇತ್ರದ ಬಗ್ಗೆ ಪ್ರಾಥಮಿಕ ಮಾಹಿತಿಗಳು ಮತ್ತು ಅದರ ರೀತಿ-ನೀತಿಗಳನ್ನು ಜನರಿಗೆ ತಲುಪಿಸುವುದು, ಸಹಕಾರಿ ಶಿಕ್ಷಣ ಭವನದ ಪ್ರಮುಖ ಉದ್ದೇಶ.

ವೇತನ ಶ್ರೇಣಿ ಮತ್ತು ಉದ್ಯೋಗ ಆಯ್ಕೆಗಳು.

ವೇತನ ಶ್ರೇಣಿ ಅಂದಾಜು, 4ಲಕ್ಷ – 6 ಲಕ್ಷ. (ಉದ್ಯೋಗ ದರ್ಜೆಯನ್ನು ಅವಲಂಬಿಸಿದೆ)

ಉದ್ಯೋಗ ಆಯ್ಕೆಗಳು, Rural DevelopmentOfficersr, Folklorists, Feild Researchers and Ethnographers, Folk and tribal policy advocates, Community Development Specialists, Heritage Preservation Officer, Cultural tourism manager. ಇದಲ್ಲದೆ, ಸರಕಾರಿ ವಿಭಾಗಗಳು, NGOಗಳು, ಪಂಚಾಯತಿಗಳು, ಶಿಕ್ಷಣ ಸಂಸ್ಥೆಗಳು, Amazon, TCS, Wipro, HCL  ಇತ್ಯಾದಿ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬಹುದು. ಇಲ್ಲಿ ಸಂಬಂಧಿತ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಅವಕಾಶಗಳ ಕಿರುಪರಿಚಯವನ್ನು ಮಾತ್ರ ನೀಡಲಾಗಿದ್ದು, ಇಂತಹ ಇನ್ನೂ ಹಲವಾರು ಅವಕಾಶಗಳು ರಾಜ್ಯ ಮತ್ತು ರಾಷ್ಟ್ರದಾದ್ಯoತ ಲಭ್ಯವಿದೆ.

 

ಸಂಗ್ರಹ: ವಾಣಿಶ್ರೀ ಬಿ.

ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ‘ಸ್ಪಂದನ’, ಮಂಗಳೂರು.

ಕೃಪೆ: ಸಂಬಂಧಿಸಿದ ಕಾಲೇಜುಗಳ ಅಧಿಕೃತ ಜಾಲತಾಣ.

 

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More