
ಪೀಠಿಕೆ. : ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಮುಂತಾದ ಪದಮಂಜಗಳೇ ಸಾಂಘಿಕ ಬದುಕಿನ ಮೂಲ ಧ್ವನಿ. ಮನುಷ್ಯನ ಸಂಘ ಜೀವನಕ್ಕೆ ಈ ಮೂಲ ಧ್ವನಿಯೇ ಬುನಾದಿ.. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಮರಣವೇ ಮೊದಲಾದ ದುರಂತಗಳಲ್ಲಿ ಮಾನವ ಸಾಂಘಿಕ ಸಹಕಾರಿ ಬಗೆಯಲ್ಲಿ ಒಂದಾಗುತ್ತಿದ್ದ ಹಿಂದಿನ ಕಾಲದಲ್ಲಿ ಸಾಂಘಿಕ, ಸಹಕಾರಿ ತತ್ವ ಅಡಗಿತ್ತು ಎಂಬುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ತನ್ನ ಮೂಲ ಧ್ವನಿ ತತ್ವಗಳೊಂದಿಗೆ ಕಳೆದ ಶತಮಾನಕ್ಕೆ ಮುಂಚಿತವಾಗಿ ಆಸಂಘಟಿತ ರೂಪದಲ್ಲಿ ಪ್ರಚಲಿತವಾಗಿತ್ತು.
ಶ್ರೀ ಉಗಮ : ಸಾವಿರಾರು ವರ್ಷಗಳಿಂದ ಮಾನವ ಸಮಾಜ ಜೀವಿಯಾಗಿ ಪರಸ್ಪರ ಹೊಂದಾಣಿಕೆಯಿಂದ ತಮ್ಮ ತಮ್ಮ ಪುಟ್ಟ ಪರಿಧಿಯಲ್ಲಿಯೇ ಶಾಂತಿಯುತವಾಗಿ ಬದುಕುತ್ತಿದ್ದ. ಆದರೆ 18ನೇ ಶತಮಾನದ ಔದ್ಯೋಗಿಕ ಕ್ರಾಂತಿಯು ಶತಶತಮಾನಗಳ ಮನುಷ್ಯನ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿತು. ಯಂತ್ರಗಳ ಆಗಮನದಿಂದ ಸಾಮಾನ್ಯ ಜನ ತಮ್ಮ ಉದರ ಪೋಷಣೆಯ ಉದ್ಯೋಗಗಳನ್ನು ಕಳೆದುಕೊಂಡು ಕಾರ್ಖಾನೆಗಳಲ್ಲಿ ಕೂಲಿಕಾರರಾಗಿ ಸೇರಿಕೊಂಡರು. ಶ್ರೀಮಂತ ವ್ಯಕ್ತಿಗಳು ಕೇವಲ ಹಣದಾಸೆಗಾಗಿ ಮಾನವೀಯ ಮೌಲ್ಯಗಳನ್ನು ತ್ಯಜಿಸಿ ಬಡ ಜನರನ್ನು es ಶೋಷಣೆ ಮಾಡಲು ಪ್ರಾರಂಭಿಸಿದರು. ಈ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ನಶಿಸಿ ಹೋಯಿತು. ಆಗ ಉಗಮವಾದ ಸಹಕಾರ ಹೊಸ ರೂಪ ತಾಳಿ ಸಮಾಜಕ್ಕೆ ಬೆಳಕಾಗಿ ಮತ್ತು ದಾರಿ ದೀಪವಾಗಿ ಬಂತು.
ಯುರೋಪದಲ್ಲಿ ಸಹಕಾರದ ಉಗಮ : ಶೋಷಣಾರಹಿತ ಸಮಾಜದ ನಿರ್ಮಾಣಕ್ಕಾಗಿ ಹಲವಾರು ಚಿಂತಕ್ರು ಹೊಸ ಮಾರ್ಗಗಳನ್ನು ಶೋದಿಸಿದರು. ಅಂತಹ ಚಿಂತಕರಲ್ಲಿ ಪ್ರಖ್ಯಾತಗೊಂಡ ರಾಬರ್ಟ್ ಓವೆನ್ ಪ್ರಥಮರು. ಲಂಡನ್ ಸಮೀಪದ ರಾಕ್ ಡೇಲ ಎಂಬ ಊರಿನಲ್ಲಿ 28/10/1844 ರಂದು ರಾಕಡೇಲ ಪಯನಿಯರ್ಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಇದರ ಮುಖಾಂತರ ರಾಬರ್ಟ್ ಓವನ್ನರೇ ಆಧುನಿಕ ಸಹಕಾರಿ ವಿಚಾರಣಾ ಪ್ರಣಾಳಿಕೆಗೆ ತಳಹದಿಯನ್ನು ಹಾಕಿದರೆಂದು ಹೇಳಬಹುದು. ಹೀಗೆ 28-10-1844 ರಲ್ಲಿ ಜಗತ್ತಿನಲ್ಲಿ ಪ್ರಾರಂಭಗೊಂಡ ಸಹಕಾರ ಚಳುವಳಿ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು.
ಭಾರತದಲ್ಲಿ ಸಹಕಾರದ ಹುಟ್ಟು : ನಮ್ಮ ದೇಶದಲ್ಲಿ ಬ್ರಿಟೀಷ್ ಸರ್ಕಾರ ಪ್ರಥಮ ಸಹಕಾರ ಕಾಯ್ದೆಯನ್ನುಮಾರ್ಚ್ 25 1904 ರಲ್ಲಿ ಜಾರಿಗೆ ತಂದಿತು. ಭಾರತದಲ್ಲಿ ಸಹಕಾರ ಕ್ಷೇತ್ರವು ಸರ್ಕಾರದ ಕೃಪಾ ಪೋಷಿತವಾಗಿ ಹುಟ್ಟಿ ಬಂದಿದೆ. ಈಗಲೂ ಸಹ ಸ್ವಲ್ಪ ಮಟ್ಟಿಗೆ ಮುಂದುವರಿಯುತ್ತಿರುವುದು ಗಮನಾರ್ಹ ಸಂಗತಿ.08-05-1905ರಲ್ಲಿ ಗದಗ್ ಜಿಲ್ಲೆಯ ಕಣಗಿನ ಹಾಳ ಎಂಬ ಗ್ರಾಮದಲ್ಲಿ ದಿವಂಗತ ಎಸ್ । ಪಾಟೀಲ್ ಇವರ ಮಾರ್ಗದರ್ಶನದಲ್ಲಿ ಪ್ರಥಮ ಸಹಕಾರ ಸಂಘ ಕೃಷಿ ಪತ್ತಿನ ಸಹಕಾರ ಸಂಘವಾಗಿ ಜನ್ಮ ತಾಳಿರುವುದು ಕೃಷಿಗೆ ಮತ್ತು ಕೃಷಿಕರಿಗೆ ಈ ಚಳುವಳಿ ನಮ್ಮ ದೇಶದಲ್ಲಿ ಪ್ರಾರಂಭಗೊಂಡಿರುವುದು ಐತಿಹಾಸಿಕ ಸತ್ಯ. ತದ ನಂತರ 1912 ರ ಸಹಕಾರಿ ತಿದ್ದುಪಡಿ ಕಾಯ್ದೆ ವಿವಿಧ ರೀತಿಯ ಸಹಕಾರ ಸಂಘಗಳನ್ನು ಅಂದರೆ ಕೃಷಿ, ಮಾರಾಟ, ಗ್ರಾಹಕ, ಹೈನುಗಾರಿಗೆ ಮುಂತಾದ ಹಲವು ಗೀತೆಗಳಲ್ಲಿ ಸಹಕಾರಿ ಕ್ಷೇಪಗಳು ನೋಂದಣಿಗೊಂಡು ಹಲವು ಕ್ಷೇತ್ರಗಳಲ್ಲಿ ಆದ್ಭುತ ಸಾಧನೆಗಳನ್ನು ಮಾಡಿ ಯಶಸ್ವಿಯಾಗಿದೆ.
ಸಹಕಾರ ಸಂಘಗಳ ವೈಶಿಷ್ಟ್ಯೆ: ಸಾಮಾನ್ಯ ಜನರು ಸಹಕಾರ ಸಂಘ ವೆಂದರೆ ಸಾರ್ವಜನಿಕ ಸಂಘವೆಂದು ತಿಳಿದಿದ್ದಾರೆ. ಸಹಕಾರಿ ಸಂಘವು ಸಾರ್ವಜನಿಕ ಸಂಸ್ಥೆಯಲ್ಲ, ಸಂಘವು ಕೆಲವೊಂದು ಉದ್ದೇಶಗಳನ್ನು ಇಟ್ಟುಕೊಂಡು. ಆ ಉದ್ದೇಶಗಳಲ್ಲಿ ಆಸಕ್ತಿ ಹೊಂದಿದ ವ್ಯಕ್ತಿಗಳು ಆ ಸಂಘದ ಸದಸ್ಯರಾಗಿ, ఆ సంభణి ముఖాంశర ಉದ್ದೇಶವನ್ನು ಈಡೇರಿಸಿಕೊಳ್ಳವರು. ಮೂಲೋದ್ದೇಶು ತನ್ನ ಸದಸ್ಯರ ಆರ್ಥಿಕ ಉನ್ನತಿಯನ್ನು ಹೊಂದುವುದಾಗಿರುತ್ತದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಕೆಲಸಗಳನ್ನು ತಮ್ಮ ಪರಿದಿಯಲ್ಲಿ ಕೈಗೊಳ್ಳಬಹುದು. ಸಹಕಾರಿ ಸಂಘದ ಎಲ್ಲ ಸದಸ್ಯರು ಸಮಾನ ಹಕ್ಕುದಾರರು. ಅವರು. ಇಚಿಸಿಕೊಂಡ ಸಂಘದ ಏಳು ಬೀಳಿಗೆ ಸದಸ್ಯರೇ ಹೊಣೆಗಾರರಾಗುತ್ತಾರೆ. ಸಹಕಾರಿ ಸಂಘ ಒಂದು ಅವಿಭಕ್ತ ಕುಟುಂಬ ಇದ್ದ ಹಾಗೆ. ಸಂಘದ ಲಾಭ ಹಾನಿಗೆ ಸದಸ್ಯರಷ್ಟೇ ಹೊಣೆಗಾರರು. ಸದಸ್ಯರಲ್ಲದವರಿಗೆ ಸಂಘದ ವ್ಯವಹಾರಗಳನ್ನು ಪ್ರಶ್ನೆ ಮಾಡುವ ಹಕ್ಕು ಇರುವುದಿಲ್ಲ.
ಉಪಸಂಹಾರ : ಪ್ರಜಾಸತ್ತಾತ್ಮಕ ಪದ್ಧತಿಯನ್ನು ಅನುಸರಿಸಿ ಸದಸ್ಯರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳು ಆಡಳಿತ ನಡೆಸುತ್ತಿರುವ ಸಹಕಾರ ಚಳುವಳಿ ಮಹಾತ್ಮ ಗಾಂಧೀಜಿರವರು ಹೇಳಿದಂತೆ “ಆರ್ದಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು” ಎಂಬುದು ಐತಿಹಾಸಿಕ ಸತ್ಯ. ಅನೇಕ ಸಲ ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ರಾಜಕೀಯ ಹಸ್ತಕ್ಷೇಪ ಮುಂತಾದವುಗಳು ಅಲ್ಲಲ್ಲಿ ಪವಿತ್ರವಾದ ಸಹಕಾರ ಚಳುವಳಿಯ ಬೆಳವಣಿಗೆಯಲ್ಲಿ ಪ್ರವೇಶಿಸಿದರು ಸಹ ಸಹಕಾರ ಸಂಘಗಳು ಒಂದು ಉತ್ತಮ ಆರ್ಥಿಕ ಪದ್ಧತಿಯಾಗಿ ಸಾಮಾನ್ಯ ಜನತೆಯ ಆರ್ಥಿಕ, ಸಾಮಾಜಿಕ ಉನ್ನತಿಗಾಗಿ ಶ್ರಮಿಸುತ್ತಿವೆ. ಒಟ್ಟಿನಲ್ಲಿ ಹೇಳಬೇಕಾದರೆ ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ದಕ್ಷತೆ, ಮಾನವೀಯ ಗುಣಗಳಿಂದ ಮಾತ್ರ ಸಹಕಾರದ ಮೂಲ ಉದ್ದೇಶದ ಗುರಿಗಳನ್ನು ಸಾಧಿಸಲು ಸಾಧ್ಯವೆಂದು ಹೇಳಬಹುದು.
“ಸಹಕಾರಂ ಗೆಲ್ಗೆ ಸಹಕಾರ ಬಾಳ್ಗೆ “
ಶಂಕರ ಹೆಗಡೆ
ಸಹಕಾರ ಸಲಹೆಗಾರರು.