
ಬಡತನ ಶಾಪವಲ್ಲವೇ? ದಿನವೊಂದಕ್ಕೆ ಕೇವಲ ಒಂದು ಡಾಲರ್ ಗಿಂತ ಕಡಿಮೆ ದುಡಿಮೆ ಯಲ್ಲಿ ಜೀವನ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ 45 ರಿಂದ 77 ರವರೆಗೆ ನಗರ ಪ್ರದೇಶದಲ್ಲಿ ಶೇ 52 ರಿಂದ 74 ಆಹಾರಕ್ಕಾಗಿಯೇ ಬಳಕೆಯಾಗುತ್ತದೆ. ಇದರಲ್ಲಿ ಹಸಿವು ನೀಗಿಸಲು ಸಾಧ್ಯವಾಗುತ್ತದೆಯೇ ? ಪೌಷ್ಠಿಕ ಆಹಾರ ದೊರೆಯ ಬಲ್ಲದೇ ? ಇತರೆ ಜೀವನಾವಶ್ಯಕ ವಸ್ತುಗಳನ್ನು, ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವೇ ? ‘ಬಡತನ ಬಲೆ’ಯಿಂದ ಹೊರಬರುವುದೆಂತು? ವಿಶ್ವ ಸಂಸ್ಥೆ ಸುಸ್ಥಿರ ಅಭಿವೃದ್ಧಿ ಯೊಡನೆ ‘ಹಸಿವು , ಬಡತನ’ ಮುಕ್ತ ವಿಶ್ವವನ್ನು ನಿರ್ಮೂಲನೆ ಮಾಡ ಬೇಕೆಂದು ಗುರಿ ಹೊಂದಿದ್ದು ಈ ದಿಶೆಯಲ್ಲಿ ಎಲ್ಲ ರಾಷ್ಟ್ರಗಳು ಇದರಲ್ಲಿ ಕೈ ಜೋಡಿಸಬೇಕೆಂದು ಕರೆಕೊಟ್ಟಿದೆ. ವಿಶ್ವದ ಆರ್ಥಿಕ ತಜ್ಞರು ಈ ವಿಷಯದಲ್ಲಿ ಅನೇಕ ಅಧ್ಯಯನಗಳನ್ನು ನಡೆಸುತ್ತಿರುತ್ತಾರೆ.
ಅಂತರರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ ಯು ಸಹಕಾರ ಚಳುವಳಿಯು ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ ನೀಡಿದೆ. ಭಾರತದ ನವದೆಹಲಿಯಲ್ಲಿ ನಡೆದ 2024 ರ ಸಮ್ಮೇಳನ 2025 ನ್ನು ‘ಅಂತರಾಷ್ಟ್ರೀಯ ಸಹಕಾರ ವರ್ಷ’ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ‘ಸಹಕಾರ ಚಳುವಳಿ ‘ ಬಡತನ ನಿರ್ಮೂಲನೆಗೆ ಯಾವ ರೀತಿಯಲ್ಲಿ ತನ್ನ ಕೊಡುಗೆ ನೀಡಬಲ್ಲದು ಎಂಬ ಚಿಂತನೆ ಈ ದಿನದ ಅವಶ್ಯಕತೆ.
ಬಡವರ ಪ್ರಪಂಚವು ಅವಕಾಶ ವಂಚಿತವಾಗಿದೆ. ಅವಕಾಶಗಳನ್ನು ಪಡೆಯುವುದಾದರು ಎಂತು? ಅವಕಾಶಗಳಾದರು ಎಲ್ಲಿದೆ? ಪರಿಸರ ಇದಕ್ಕೆ ಪೂರಕವಾಗಿದೆಯೇ? ಸರ್ಕಾರದ ಅನೇಕ ಕಾರ್ಯಕ್ರಮಗಳಾಗಲಿ, ಸರ್ಕಾರೇತರ ಸಂಸ್ಥೆಗಳ ಅನೇಕ ಕಾರ್ಯಮಗಳು ವಿಫಲವಾಗಿವೆ ಎಂದು ಹೇಳಲಾಗದಿದ್ದರು ನಿರೀಕ್ಷಿತ ಫಲಿತಾಂಶವಂತೂ ದೊರೆತಿಲ್ಲ. ಬಡತನದ ಬಲೆಯಿಂದ ಹೊರಬರಲು ಸಾಧ್ಯವಿಲ್ಲವೇಕೆ? ಅವರು ತಮ್ಮ ಜೀವನ ಮಟ್ಟದಲ್ಲಿ ಸುಧಾರಣೆ ಹೊಂದುವುದು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗಳು ಮೂಡುವುದು ಸಹಜ.
ನೊಬೆಲ್ ಪಾರಿತೋಷಕ ವಿಜೇತ ಮಹಮದ್ ಯುನೂಸ್ ‘ಕಿರು ಹಣಕಾಸಿ’ ನ ಪಿತಾಮಹ ‘ಬಡವರು ಪ್ರಾಕೃತಿಕವಾಗಿ ಉದ್ಯಮಿಗಳು ‘, ‘ಬಡವರು ಕೂಡ ಬ್ಯಾಂಕಬಲ್”. ಎಂದಿರುತ್ತಾರೆ. ವ್ಯವಹಾರ ಕ್ಷೇತ್ರದ ‘ಗುರು’ ಎಂದೆನಿಸಿಕೊಂಡಿರುವ ಬಿ.ಕೆ. ಪ್ರಹ್ಲಾದ್ ರವರು, ಆರ್ಥಿಕ ಬೆಳವಣಿಗೆ ‘ತ್ರಿಭುಜಾ ಕೃತಿಯ ತಳಹದಿಯಿಂದ (bottom of the pyramid) ಎಂಬಂದನ್ನು ಪ್ರತಿಪಾದಿಸಿರುತ್ತಾರೆ. ಈ ಎರೆಡೂ ಪ್ರತಿಪಾದನೆಗಳನ್ನು ಸಹಕಾರ ಚಳುವಳಿ ಅಳವಡಿಸಿಕೊಂಡು ಯಶಸ್ವಿಗೊಳಿಸಿದೆ. ಹೀಗೆ ನೋಡಿದಲ್ಲಿ ಈ ರೀತಿಯ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದ್ದೇ ಸಹಕಾರ ಚಳುವಳಿ. ಎಲ್ಲರನ್ನೂ ಒಳಗೊಳ್ಳುವ , ಥ್ರಿಫ್ಟ್ ಮನೋಭಾವನೆ ರೂಡಿ ಗೊಂಡಿದ್ದೇ ಸಹಕಾರ ಪತ್ತಿನ ಚಳುವಳಿಯಲ್ಲಿ. ಬಡವರ , ಮಧ್ಯಮ ವರ್ಗದ ಔದ್ಯೋಗಿಕ ಅವಶ್ಯಕತೆಗಳಿಗೆ ‘ಬಂಡವಾಳ ‘ ಹೂಡಿಕೆ ಮತ್ತು ದುಡಿಯುವ ಬಂಡವಾಳ ಒದಗಿಸಲು ಸಹಕಾರ ಚಳುವಳಿಯಿಂದ ಸಾಧ್ಯವಾಯಿತು. ಕಿರು ಹಣಕಾಸು ಪರಿಕಲ್ಪನೆ ಮೂಡಿದಾಗಲು ಸಹಕಾರ ಪತ್ತಿನ ವಲಯ ಅದನ್ನು ಅಳವಡಿಸಿಕೊಂಡು ‘ಗುಂಪು ‘ ಸಾಲಗಳಿಗೆ ಪ್ರಾಧಾನ್ಯತೆ ನೀಡಿತು.
ಅತ್ಯಂತ ಯಶಸ್ವಿಯೂ ಆಗಿದೆ.ಆದರೆ ಒಟ್ಟಾರೆ ಬೃಹತ್ ಅವಶ್ಯಕತೆಯ ಪೂರೈಕೆಗಾಗಿ ‘ ಕಿರು ಹಣಕಾಸು ಸಂಸ್ಥೆ’ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದು ಬಡತನ ನಿರ್ಮೂಲನೆ ಅಲ್ಲದೆ ಸಂಸ್ಥೆಗಳು/ ಕಂಪನಿಗಳು ಲಾಭದಾಯಕ ಅವಕಾಶ ಎಂದು ಪರಿಗಣಿಸಿದ್ದರಿಂದ ಸಮಾಜ/ಸಮುದಾಯ
ದಲ್ಲಿ ಆದ ಅನಾಹುತಗಳನ್ನು ಗಮನಿಸಿದ್ದೇವೆ. ‘ಸ್ವಸಹಾಯ ಗುಂಪು’ ‘ಜಂಟಿ ಬಾಧ್ಯತಾ ಗುಂಪು ‘ ಗಳ ರಚನೆ/ಚಳುವಳಿಯಿಂದ ಸಾಧ್ಯವಾಗ ಬಲ್ಲ ‘ಆರ್ಥಿಕ’ಸುಧಾರಣೆ ಗಳೊಡನೆ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞಾವಂತಿಕೆ ಬೆಳವಣಿಗೆಗೂ ಕಾರಣವಾಗಿರುವುದು ಸಂತಸದ ಸಂಗತಿಯಾಗಿದೆ. ‘ ತ್ರಿಭುಜಾಕೃತಿಯ ತಳಹದಿಯಿಂದ ಆರ್ಥಿಕ ಅಭಿವೃದ್ಧಿ ‘ ಚಿಂತನೆ ಸಹಕಾರ ಚಳುವಳಿಯದೇ ಆಗಿರುತ್ತದೆ. ಸಹಕಾರ ದ ಮಹಾಮಂಡಳ ವ್ಯವಸ್ಥೆ (co-operative federalism ) ಇದನ್ನೇ ಪ್ರತಿಪಾದಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಅಮುಲ್’ ಮತ್ತು ಆ ಮಾದರಿಯಲ್ಲಿ ಸೃಜನೆ ಗೊಂಡ ಕರ್ನಾಟಕದ ಹೆಮ್ಮೆಯ ‘ನಂದಿನಿ ‘. ‘ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ’ ಎಂಬ ನಾಣ್ಣುಡಿ ಯನ್ನು ದಿಟ ಗೊಳಿಸಿರುವುದು ಈ ಸಹಕಾರ ಚಳುವಳಿ.
ಈ ಹಿನ್ನೆಲೆಯಲ್ಲಿ 2019 ರ ಆರ್ಥಿಕ ಶಾಸ್ತ್ರ (ವಿಜ್ಞಾನ ) ಕ್ಕಾಗಿ ನೊಬೆಲ್ ಪಾರಿತೋಷಕ ವಿಜೇತರಾದ ಅಭಿಜಿತ್ ಭ್ಯಾನರ್ಜಿ ಮತ್ತು ಎಸ್ತರ್ ಡೂಪ್ಲೋ ದಂಪತಿಗಳ ‘ ಪೂರ್ ಎಕನ ಮಿಕ್ಸ್ ‘ ಪುಸ್ತಕದಲ್ಲಿ ಅವರು ವಿಶ್ವಾದ್ಯಂತ ಅನೇಕ ಬಡತನ ನಿರ್ಮೂಲನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅಧ್ಯಯನ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುತ್ತಾರೆ.
1. ಬಡವರು ಅವರ ಅವಶ್ಯಕತೆಗಳನುಸಾರ ತಾವೇ ನೂತನ ಅವಿಷ್ಕಾರ , ಉದ್ಯಮಗಳನ್ನು ಕಂಡು ಕೊಳ್ಳುತ್ತಾರೆ. ಅದಕ್ಕೆ ತಕ್ಕ ವಾತಾವರಣ ಸೃಷ್ಟಿ ಮಾಡಬೇಕಿದೆ.
2. ಹಾಲಿ ಮಾರುಕಟ್ಟೆ ವಾತಾವರಣ ಅವರನ್ನು ಕಡೆಗಣಿಸಿದೆ. ಆದುದರಿಂದ ಅವರ ಪ್ರಯತ್ನಗಳಿಗೆ ಉತ್ತಮ ಪ್ರತಿಫಲ ದೊರೆಯುತ್ತಿಲ್ಲ. ಪತ್ತು – ಅವರನ್ನು ಸಾಹುಕಾರರನ್ನಾಗಿ ಮಾಡಿಲ್ಲ , ಆದರೆ ಖಂಡಿತ ಅವರ ಔದ್ಯೋಗಿಕ ಆಸಕ್ತಿಯನ್ನು ಕೆರಳಿಸಿದೆ. ಉತ್ತುಂಗಕ್ಕೆ ಇರುವ ಅವಕಾಶಗಳ ಬಗ್ಗೆ ಭರವಸೆ ಮೂಡಿಸಿದೆ.
3.ತೀರ್ವ ಬಡತನದಿಂದ ಹೊರತಂದಿದೆ. ಅತಿ ಸಣ್ಣ ವ್ಯವಹಾರವಾದರೂ ಲಾಭದಾಯಕವಾಗಿದೆ. ಆದರೆ ಇತರರೊಡನೆ ಸ್ಪರ್ದೆ ಅಸಾಧ್ಯವಾಗುತ್ತದೆ. ಇದರಿಂದಾಗಿ ವಿಸ್ತರಣಿಗೆ ಅವಕಾಶ ವಿಲ್ಲವಾಗಿದೆ.
4. ಪತ್ತು ಪಡೆಯಲು ಸಾಧ್ಯವಿಲ್ಲದವರೂ ಉಳಿತಾಯ ಮಾಡುತ್ತಿದ್ದಾರೆ. ಅನೇಕರು ತಾವು ಉದ್ಯೋಗ ಮಾಡುತ್ತಿರುವುದಲ್ಲದೇ ಇತರರಿಗೂ ಉದ್ಯೋಗ ನೀಡಿರುತ್ತಾರೆ.
5. ಆದರೆ ‘ವ್ಯವಸ್ಥೆ ‘ಯಲ್ಲಿನ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ, ಅದಕ್ಷತೆ ನಕಾರಾತ್ಮಕವಾಗಿ ಪರಿಣಮಿಸಿದೆ. ಸಂಸ್ಥೆಗಳಲ್ಲಿ ಸಾಂಸ್ಥಿಕ ಸುಧಾರಣೆಗಳು , ಉತ್ತಮ ಆಡಳಿತ ನೀತಿಗಳನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
6. ಇವುಗಳನ್ನು ಅಳವಡಿಸಿಕೊಂಡು ಕಾರ್ಯಾಚರಣೆ ಗೊಳಿಸಿದಲ್ಲಿ ಬಡತನದ ಬೇಗೆ ಪರಿಹರಿಸುವಲ್ಲಿ , ಕ್ರಾಂತಿಯ ಕಹಳೆ ಊದುವುದರಲ್ಲಿ ಸಂಶಯವಿಲ್ಲ.
ಮುಂದುವರೆದು ಅಧ್ಯಯನದಿಂದ ಐದು ಅಂಶಗಳು ( ಪಾಠ / ಅಧ್ಯಾಯ ) ಹೊರ ಹೊಮ್ಳುತ್ತದೆ.
1.ಮೊದಲನೆಯದು ಬಡವರು ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ. ‘ ತಪ್ಪು’ಗಳನ್ನು ‘ಸರಿ ‘ ಎಂದು ತಿಳಿದಿರುತ್ತಾರೆ. ಮೂಡನಂಬಿಕೆಗಳನ್ನು ಹೊಂದಿರುತ್ತಾರೆ. ಅನವಶ್ಯಕ ಖರ್ಚುಗಳನ್ನು ತಪ್ಪಿಸ ಬಹುದಾಗಿರುತ್ತದೆ. ಸರಿಯಾದ ಮಾಹಿತಿ ಒದಗಿಸಿ ಸರಿ ಪಡಿಸುವುದು ಅತಿ ಮುಖ್ಯ ಚಾಣಾಕ್ಷ ಕೆಲಸವಾಗಿರುತ್ತದೆ.
2.ಎರಡನೆಯದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು, ನಿರ್ಧಾರ ತೆಗೆದುಕೊಳ್ಳದೇ ಮುಂದೂಡುವ ಪ್ರವೃತ್ತಿ . ಆರ್ಥಿಕತೆ ಉತ್ತಮಗೊಂಡಂತೆ ಈ ಪ್ರವೃತ್ತಿಯಲ್ಲಿ ಬದಲಾವಣೆ ಕಂಡುಬರುತ್ತದೆ.
3. ಮೂರನೆಯದು ಮಾರುಕಟ್ಟೆ ಯಲ್ಲಿ ವಂಚಿತ ರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಸಂಘಟಿತ ಪ್ರಯತ್ನ. ಸಹಕಾರ ಚಳುವಳಿ ಅನೇಕ ಯಶೋಗಾಥೆ ನಿರ್ಮಿಸಿದೆ. ‘ ಅಮುಲ್ ” ‘ನಂದಿನಿ ‘ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನ ಮಾರುಕಟ್ಟೆಗೆ ‘ಸಹಕಾರ ಒಕ್ಕೂಟ’ ಗಳನ್ನು ರಚಿಸಿಕೊಂಡಿವೆ. ಸರ್ಕಾರ, ಜಿಲ್ಲಾ ಪಂಚಾಯತ್ ಗಳು ಬೆಂಬಲವಾಗಿ ನಿಂತಿವೆ. ಬಡವರ ಖಾತೆ ತೆರೆಯಲು, ಸಣ್ಣ ಉಳಿತಾಯ, ನಕಾರಾತ್ಮಕ ವಾಗಿ ವರ್ತಿಸುತ್ತವೆ. ವಿಮೆ ಇರುವುದಿಲ್ಲ.
4.ಆದರೆ ಭಾರತದ ‘ ಆರ್ಥಿಕ ಸಾಕ್ಷರತೆ ‘ ‘ ಆರ್ಥಿಕ ಸೇರ್ಪಡೆ ‘ ಕಾರ್ಯಕ್ರಮಗಳು , ನೇರವಾಗಿ ಫಲಾನುಭವಿ ಖಾತೆಗೆ ಹಣ ಜಮಾ, ಕಾರ್ಯಕ್ರಮಗಳು
ಈ ಕೊರತೆಯನ್ನು ಬಹುಭಾಗ ನೀಗಿಸಿದೆ. ‘ ಸಹಕಾರ ಚಳುವಳಿ ‘ ಯೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದೆ.
5. ನಾಲ್ಕನೆಯದು ಅನೇಕ ಬಡರಾಷ್ಟ್ರಗಳಲ್ಲಿ ತಪ್ಪು ಕೈಗಳಿಗೆ ಅನುಷ್ಠಾನದ ಜವಾಬ್ದಾರಿ ಇದೆ. ದುರದೃಷ್ಟವಶಾತ್ ಕೆಲವು ರಾಷ್ಟ್ರಗಳ ಚರಿತ್ರೆಯೂ ಕಾರಣವಾಗಿದೆ. ಸಾಂಸ್ಥಿಕ ಸುಧಾರಣಿಗಳಿಂದ ಇದನ್ನು ಸರಿ ಪಡಿಸಬೇಕಿದೆ.
6. ಅಂತಿಮವಾಗಿ ಸ್ವಯಂ ತಮಗೆ ತಾವು ಅರಿತು ಕೊಳ್ಳುವುದು ಪ್ರಮುಖ ವಾಗುತ್ತದೆ. ಯಾವುದನ್ನು ತಾವು ಮಾಡಬಹುದು. ಯಾವುದು ತಮ್ಮಿಂದಾಗುವುದಿಲ್ಲ ಎಂಬ ಅರಿವು ಬಹಳ ಮುಖ್ಯ. ಇದರ
ನಡುವೆ ಅನೇಕ ಆಶಾಕಿರಣಗಳು ಮಾಡಿ ಬಂದಿವೆ , ಮಹಿಳಾ ಸಬಲೀಕರಣ , ಇಡೀ ಕುಟುಂಬದ ಏಳಿಗೆಗೆ ಕಾರಣವಾಗಿದೆ. ಒಬ್ಬ ಅಪ್ಪ ತನ್ನ ಮಗಳೂ ಒಂದು ದಿನ ಸಹಕಾರ ಸಂಘದ ‘ಅಧ್ಯಕ್ಷ ‘ ರಾಗುತ್ತಾಳೆ , ಎಂಬ ಕನಸು ಕಾಣಲು ಅವಕಾಶವಿದೆ.
ಈ ಮೇಲಿನ ಅಂಶಗಳನ್ನು ವಿಶ್ಲೇಷಿಸಿದಾಗ ಕಂಡುಬರುವ ಅಂಶವೆಂದರೆ ‘ ಸಹಕಾರ ಚಳುವಳಿ ‘ ಎಲ್ಲರ ಮೂಲ ಮಂತ್ರವಾಗಬೇಕಾಗಿದೆ. ಬಡವರ ಆಶಾಕಿರಣ ‘ ಸಹಕಾರ ಸಂಘ’. ಉತ್ತಮ ನಿಸ್ವಾರ್ತ ,ಭ್ರಷ್ಟಾಚರ ರಹಿತ ಸಹಕಾರ ನಾಯಕತ್ವ ಈ ಪ್ರಜಾಸತ್ಮಾಕ ಸಂಸ್ಥೆ ಗಳಲ್ಲಿ ರೂಪುಗೊಂಡಲ್ಲಿ ಮಾತ್ರ ಚಳುವಳಿ ಯಶಸ್ವಿ ಯಾಗುವುದಲ್ಲದೇ ಮೇಲಿನ ಅಂಶಗಳನ್ನು ಗಮನದಲ್ಲಿರಿನ ಕೊಂಡು ಕಾರ್ಯವೆಸಗಿದಲ್ಲಿ ಬಡತನ ನಿರ್ಮೂಲನೆ ಕಾರ್ಯಸಾಧ್ಯ ಎಂಬುದರಲ್ಲಿ ಸಂಶಯವಿಲ್ಲ.

ಶಶಿಧರ.ಎಲೆ.
ಸ. ಸಂ. ಅಪರ ನಿಬಂಧಕರು ( ನಿವೃತ್ತ) C/0 ವಿಶ್ವಾಸ್ .ಎಲೆ ,
ಥೋಮಸ್ – ರೊಯಟರ್ – ಎಸ್‌ಟಿ ಆರ್ 36 ,636 23 ನಯ – ಇಸನ್ ಬುರ್ಗ್, ಫ್ರಾಂಕ್‌ಫರ್ಟ್ ಜರ್ಮನಿ