ಜಗತ್ತು ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಜಾಗತೀಕರಣದ ಅನಂತರವಂತೂ ಬಹುರಾಷ್ಟ್ರೀಯ ಕಂಪನಿಗಳು ವ್ಯಾಪಾರದ ಎಲ್ಲ ಕ್ಷೇತ್ರಗಳಿಗೂ ಪ್ರವೇಶಿಸಿ ಸಣ್ಣ ಉದ್ದಿಮೆಗಳು ಹಾಗೂ ವ್ಯಾಪಾರಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ.
ಸೂಕ್ತ ಬಂಡವಾಳ, ವೃತ್ತಿಪರತೆಯಿಂದ ಸಣ್ಣ-ಸಣ್ಣ ಕ್ಷೇತ್ರಗಳು ಇಂದು ಬಹುರಾಷ್ಟ್ರೀಯ ಕಂಪನಿಗಳಿಂದ ಹಿನ್ನಡೆ ಕಾಣುತ್ತಿವೆ. ಇದರಿಂದ ಸಹಕಾರ ಕ್ಷೇತ್ರವೂ ಹೊರತಾಗಿಲ್ಲ. ಬ್ಯಾಂಕಿಂಗ್, ಕೃಷಿ, ಗುಡಿಕೈಗಾರಿಕೆ, ಉತ್ಪಾದನೆ, ಗ್ರಾಹಕ, ಮಾರುಕಟ್ಟೆ, ಸಂಸ್ಕರಣೆ… ಹೀಗೆ ವಿಶಾಲವಾಗಿ ವ್ಯಾಪಿಸಿರುವ ಸಹಕಾರಕ್ಷೇತ್ರವೂ ಜಾಗತೀಕರಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಜಾಗತೀಕರಣದ ಎಲ್ಲ ಸವಾಲುಗಳನ್ನೂ ಸಹಕಾರಿಕ್ಷೇತ್ರ ಮೆಟ್ಟಿ ನಿಲ್ಲಬೇಕಿದೆ ಕೂಡ. ಈ ಹಿನ್ನೆಲೆಯಲ್ಲಿ ಸಹಕಾರ ಶಿಕ್ಷಣ ಮತ್ತು ನಿರಂತರ ತರಬೇತಿ ಅಗತ್ಯವಿದೆ. ತನ್ಮೂಲಕ ವೃತ್ತಿಪರತೆಯನ್ನು ಕಂಡುಕೊಳ್ಳಬೇಕಾದರೆ ಸೂಕ್ತ ಮಾನವಸಂಪನ್ಮೂಲ ಅಭಿವೃದ್ಧಿ ನೀತಿಯನ್ನು ಸಹಕಾರ ಸಂಘಗಳು ಅಳವಡಿಸಿಕೊಳ್ಳಬೇಕಿದೆ. ಕ್ರಿಯಾಶೀಲ ಮಾನವಸಂಪತ್ತು ವೃತ್ತಿಕೌಶಲತೆಗೆ ಕಾರಣವಾಗಿ ಅದರಿಂದ ಯಾವುದೇ ಕ್ಷೇತ್ರ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ.
ನಿರಂತರ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳು ಎಲ್ಲ ವಲಯಗಳನ್ನೂ ಅತಿಅಗತ್ಯ. ಸಾಮಾನ್ಯವಾಗಿ ಮೂರು ಮುಖ್ಯ ಕಾರಣಗಳಿಗಾಗಿ ಶಿಕ್ಷಣ ಮತ್ತು ತರಬೇತಿಗಳು ಅಗತ್ಯ. ಸಾಮಾನ್ಯವಾಗಿಮೂರು ಮುಖ್ಯ ಕಾರಣಗಳಿಗಾಗಿ ಶಿಕ್ಷಣ ಮತ್ತು ತರಬೇತಿಯ ಅವಶ್ಯಕತೆ ಇದೆ. ಮೊದಲನೇಯದಾಗಿ ಕೌಶಲಾಭಿವೃದ್ಧಿಯ ಬೆಳವಣಿಗೆ ಸೂಕ್ತ ತರಬೇತಿಯಿಂದ ಸಾಧ್ಯವಾಗುತ್ತದೆ. ಹಾಗೆಯೇ ಕಾಲಕ್ಕೆ ತಕ್ಕಂತೆ ಜ್ಞಾನದ ಶಾಖೆಗಳ ವಿಸ್ತರಣೆಯ (knowledge updation) ಕಾರ್ಯವನ್ನುತರಬೇತಿಯು ಮಾಡುತ್ತದೆ. ಬಹಳಮುಖ್ಯವಾಗಿ ನಿರಂತರ ಒಂದೇ ರೀತಿಯ ಕೆಲಸಗಳನ್ನು ಮಾಡುತ್ತಿರುವುದರಿಂದ ಸಿಬ್ಬಂದಿಗಳಲ್ಲಿ ಏಕತಾನತೆ ಮೂಡುತ್ತದೆ. ಪರಿಣಾಮವಾಗಿ ಕೆಲಸ ಕಾರ್ಯಗಳಲ್ಲಿ ಉದಾಸೀನತೆ ಕಂಡುಬರಬಹುದು. ಇದರಿಂದಹೊರಬರಲು ಸೂಕ್ತ ಪ್ರೇರಣೆ (motivation) ಉತ್ಸಾಹ, ಹುಮ್ಮಸ್ಸನ್ನು ಸೂಕ್ತ ತರಬೇತಿಯು ನೀಡುವುದರಿಂದ ಸಹಕಾರಕ್ಷೇತ್ರದಲ್ಲಿಯೂ ವೃತ್ತಿಪರತೆಯನ್ನು ಮೂಡಿಸಲು ಸಾಧ್ಯವಾಗುತ್ತದೆ.
ವೃತ್ತಿಪರತೆಯಿಂದ ಯಾವುದೇ ಕ್ಷೇತ್ರದ ಪಗತಿ ಸಾಧಿಸಬಹುದು. ಸಹಕಾರಕ್ಷೇತ್ರವೂ ಇದರಲ್ಲಿ ಪ್ರಮುಖ. ಸಹಕಾರಕ್ಷೇತ್ರದ ಸಿಬ್ಬಂದಿ ವರ್ಗ ವೃತ್ತಿಪರತೆ, ಕಾರ್ಯತತ್ಪರತೆಯಿಂದ ಕೆಲಸ ನಿರ್ವಹಿಸಿದರೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತು ಅಭಿವೃದ್ಧಿ ಪಥದಲ್ಲಿ ಮುನ್ನಡೆಬಹುದು. ಸಹಕಾರಕ್ಷೇತ್ರದ ಸಿಬ್ಬಂದಿವರ್ಗ ಪ್ರಗತಿಪಥದ ವೃತ್ತಿಪರತೆ ರೂಢಿಸಿಕೊಳ್ಳಬೇಕಾದ್ದು ಆಶಯ.
– ಶ್ರೀ ಹರೀಶ್ ಆಚಾರ್ಯ
ಅಧ್ಯಕ್ಷರು,
ಸಹಕಾರ ಅಧ್ಯಯನ ಮತ್ತುಅಭಿವೃದ್ಧಿಸಂಸ್ಥೆ