ಸಹಕಾರ ಚಳುವಳಿ ಉಗಮ ಮತ್ತು ಯಶಸ್ವಿ ಕಾರ್ಯಾಚರಣಿ ಆರಂಭವಾದದ್ದು ‘ಬಳಕೆದಾರರ ಸಹಕಾರ ಸಂಘಗಳ ಮೂಲಕ ಇದಕ್ಕೆ ಕಾರಣರಾದವರು ರಾಕ್ ಡೇಲ್ ಅಗ್ರಗಾಮಿಗಳು, ಇಂಗ್ಲೆಂಡ್ನಲ್ಲಿ ಆರಂಭವಾದ ಈ ಚಳುವಳಿ ಕಾರ್ಮಿಕರ ಆರ್ಥಿಕ ಹಿತಾಸಕ್ತಿ ಕಾಪಾಡಿದ್ದಲ್ಲದೇ ಶೈಕ್ಷಣಿಕ , ಸಾಮಾಜಿಕ , ಬೆಳವಣಿಗೆಗೂ ಕಾರಣವಾಗಿದ್ದು ಈಗ ಇತಿಹಾಸ. ಸಹಕಾರ ಚಳುವಳಿ ಬಳಕೆದಾರ ವಲಯ ಅಲ್ಲದೆ ಕೃಷಿ ಪತ್ತು, ಕೃಷಿ ಪತ್ತೇತರ , ಕೃಷಿಉತ್ಪನ್ನ , ಹೈನುಗಾರಿಕೆ , ಇತರೆ ಕೃಷಿ ಅವಲಂಭಿತ ಉತ್ಪನ್ನ ಮಾರಾಟ , ಕೈಗಾರಿಕೆ ಹೀಗೆ ಎಲ್ಲ ವಲಯಗಳಿಗೂ ಕ್ರಮೇಣ ಪಸರಿಸಿದ್ದನ್ನು ಕಾಣುತ್ತಲಿದ್ದೇವೆ. ಆರಂಭಿಕವಾಗಿ ಯೂರೋಪ್ ಖಂಡದಾಂತ್ಯ ಹರಡಿದ ಈ ಚಳುವಳಿ ಭಾರತದಲ್ಲಿಯೂ ನೆಲೆಗೊಂಡಿತು. ಭಾರತದಲ್ಲಿ 1904ರಲ್ಲಿ ಕಾಯ್ದೆಯಾತ್ಮಕವಾಗಿ ಆರಂಭಗೊಂಡು ಸ್ವಾತಂತ್ಯ ಪೂರ್ವದಲ್ಲಿಯೇ ಎಲ್ಲಾ ವಲಯಗಳಲ್ಲಿಯೂ ತನ್ನ ಛಾಪು ಮೂಡಿಸಿತು. ಎರಡನೇ ಮಹಾಯುದ್ಧ ಎಲ್ಲ ರಾಷ್ಟ್ರಗಳಲ್ಲಿಯೂ ಒಂದಲ್ಲ ಒಂದು ತರಹೆಯ ಪರಿಣಾಮ ಬೀರಿದೆ. ಭಾರತದಲ್ಲಿ ಆಹಾರ ಕೊರತೆ ಉಂಟಾಗಿ ಎಲ್ಲರಿಗೂ ಆಹಾರ ತಲುಪುವಂತೆ ಮಾಡಲು ಸರ್ಕಾರವು ‘ಬಳಕೆದಾರರ’ (ಗ್ರಾಹಕರ) ಸಹಕಾರ ಸಂಘಗಳ ಸ್ಥಾಪನೆಗೆ ಪ್ರೊತ್ಸಾಹ ದೊರೆಯಿತು. ‘ಪಡಿತರ ‘ ವಿತರಣೆಗೆ ಈ ಸಹಕಾರ ಸಂಘೆಗಳು ‘ವಾಹಕ’ಗಳಾಗಿ ಕರ್ತವ್ಯ ನಿರ್ವಹಿಸಿದವು. ಸ್ವಾತಂತ್ರ್ಯ ನಂತರ ಸರ್ಕಾರ ಬೆಂಬಲವಾಗಿ ನಿಂತು ನಾಲ್ಕು ಹಂತದ ವ್ಯವಸ್ಥೆ ರೂಪಿಸಿ ಯಶಸ್ವಿಯಾಗಿ ಕಾರ್ಯಚರಣೆ ನಡೆಯಿತು. ಪ್ರಾಥಮಿಕ, ಜಿಲ್ಲ ಸಗಟು ಮಾರಾಟ ಸಹಕಾರ ಸಂಘಗಳು , ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ, ರಾಷ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್.ಸಿ.ಸಿ. ಎಫ್ ) ಸ್ಥಾಪನೆಯಾದವು.
ಸ್ವ ಸಹಾಯ ಕೌಂಟರ್ ಗಳ ( ಗ್ರಾಹಕರು ತಾವೇ ಸ್ವಯಂ ಆಗಿ ತಮಗೆ ಬೇಕಾದ್ದನ್ನು ಖುದ್ದು ತಾವೇ ಆರಿಸಿ ಖರೀದಿ ಮಾಡುವ ವ್ಯವಸ್ಥೆ ರೂಪು ಗೊಂಡಿದ್ದೆ ‘ಸಹಕಾರ ‘ ವ್ಯವಸ್ಥೆ ಅಡಿಯಲ್ಲಿ, ಇವುಗಳನ್ನು ಕರ್ನಾಟಕದಲ್ಲಿ ”ಜನತಾ ಬಜಾರ್ ‘
ಗಳೆಂದು ಕರೆಯಲಾಯಿತು. ಒಂದೊಂದು ರಾಜ್ಯದಲ್ಲಿ ಒಂದೊಂದು ನಾಮಧೇಯ ನೀಡಲಾಗಿತ್ತು. ಉದಾ: ಗುಜರಾತ್ ನಲ್ಲಿ ಅಪನಾ ಬಜಾರ್ ಎಂದು ಕರೆಯಲಾಯಿತು. 1990 ರ ದಶಕದಿಂದ ಆರಂಭಗೊಂಡ ‘ಜಾಗತೀಕರಣ ‘ ಪರಿಣಾಮ ಮತ್ತು ಸರ್ಕಾರದ ಆರ್ಥಿಕ ನೀತಿಯಲ್ಲಿ ಆದ ಬದಲಾವಣೆ ‘ ಸಹಕಾರ’ವೂ ಸ್ಪರ್ಧಾತ್ಮಕತೆಗೆ ಒಡ್ಡಿಕೊಳ್ಳ ಬೇಕಾದ ಸವಾಲು ಎದುರಿಸಬೇಕಾಯಿತು. ಖಾಸಗಿ ವಲಯದ ಸವಾಲು ಎದುರಿಸಲಾಗದೆ ಸರ್ಕಾರದ ಬೆಂಬಲವೂ ಇಲ್ಲದೆ ಈ ಸಹಕಾರ ವಲಯವು ಭಾರತದಲ್ಲಿ ಪೂರ್ಣ ಅವಸಾನದ ಅಂಚಿಗೆ ತಲುಪಿರುವುದನ್ನು ಕಾಣುತ್ತಲಿದ್ದೇವೆ. ಇದಕ್ಕೆ ಕಾರಣಗಳೇನು? ನಮ್ಮ ದೌರ್ಬಲ್ಯ ಗಳಾವುವು? ಹೋಗಲಾಡಿಸುವ ಬಗೆ ಹೇಗೆ? ಭಾರತದಲ್ಲಿ ಈ ವಲಯ ಪುನಶ್ಚೇತನಗೊಳಿಸಬಹುದೇ ಎಂಬ ಪ್ರಶ್ನೆ ಮೂಡುತ್ತದೆ ಕಾರಣ ಈ ಲೇಖಕನ ಜರ್ಮನಿಯಲ್ಲಿ ” ರೆವೆ ” ಬಳಕೆದಾರರ ( ಗ್ರಾಹಕರ) ಸಹಕಾರ ಸಂಘ ದಲ್ಲಿನ ಖರೀದಿ ಅನುಭವ.
ರೆವೆ REWE- Revisionsverband der westkauf genossen schaften.1927 ರಲ್ಲಿ 17 (ಹದಿನೇಳು) ಬಳಕೆದಾರರ (ಗ್ರಾಹಕರ ) ಖರೀದಿ ಸಹಕಾರ ಸಂಘಗಳು ಒಗ್ಗೂಡಿ ನಿರ್ಮಾಣ ಮಾಡಿಕೊಂಡಿರುವ ಒಕ್ಕೂಟ. ಇದು ಕಲೋನ್ (Cologne) ನಲ್ಲಿ ಕಾರ್ಯಾರಂಭ ಮಾಡಿತು. ಈಗಲೂ ಈ ಪಟ್ಟಣವನ್ನೇ ಕೇಂದ್ರ ಸ್ಥಾನವಾಗಿ ಹೊಂದಿರುತ್ತದೆ. ಇಲ್ಲಿ ಸದಸ್ಯ ಸಂಸ್ಥೆಗಳು ಒಟ್ಟುಗೂಡಿ
ಖರೀದಿ ಮಾಡಿ ತಮ್ಮ ಚಿಲ್ಲರೆ ಅಂಗಡಿ ಮೂಲಕ ಮಾರಾಟ ಆರಂಭಿಸಿದವು. ಇದರ ಯಶಸ್ವಿ ಕಾರ್ಯಚರಣೆ ಕಂಡು 1940ಕ್ಕೆ 106 ಸಹಾರ ಸಂಘಗಳು ಸದಸ್ಯರಾಗಿ ವ್ಯಕ್ತಿಗತ ಸದಸ್ಯತ್ಯ 8000ಕ್ಕು ಮೀರಿತು.
ಈ ಸಂಸ್ಥೆಯು ಹಾಲಿ ಚಿಲ್ಲರೆ ಮತ್ತು ಸಗಟು ಮಾರಾಟದಲ್ಲಿ ತೊಡಗಿಸಿ ಕೊಂಡಿರುವುದಲ್ಲದೇ ಉತ್ಪನ್ನ ಮತ್ತು ಪ್ರವಾಸ ವ್ಯವಹಾರಗಳಲ್ಲಿಯೂ ತೊಡಗಿಸಿಕೊಂಡಿದೆ. ಅಲ್ಲದೇ ಅನೇಕ ಉಪಸಂಸ್ಥೆ(subsidiaries) ಗಳನ್ನು ಹೊಂದಿದೆ. ಇತರೆ ಸಂಸ್ಥೆಗಳೊಡನೆ ಪಾಲುಗಾರಿಕೆಯಲ್ಲಿಯೂ ತೊಡಗಿ ಸಿಕೊಂಡಿದೆ. 84.4 ಬಿಲಿಯನ್ ಯೂರೋಗಳ ವ್ಯವಹಾರ ನಡೆಸಿರುತ್ತದೆ. ಜರ್ಮನಿ ಒಂದರಲ್ಲಿ
ದಿನ ನಿತ್ಯ 08 ದಶಲಕ್ಷ ಗ್ರಾಹಕರನ್ನು ಹೊಂದಿರುತ್ತದೆ. ಯುರೋಪ್ ನಲ್ಲಿ ಜರ್ಮನಿ ಅಲ್ಲದೆ ಇತರೆ 21 ದೇಶಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿರುತ್ತದೆ. ಒಟ್ಟು 1598 ಬೃಹತ್ ಸೂಪರ್ ಮಾರ್ಕೆಟ್ ಗಳನ್ನು ಸ್ಥಾಪಿಸಿರುತ್ತದೆ. ಅಲ್ಲದೆ 2803 ಚಿಲ್ಲರೆ ಮಳಿಗೆಗಳು , 16 ರೆವೆ ಟು ಗೋ ಮಳಿಗೆಗಳನ್ನು ಜರ್ಮನಿಯಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಸ್ಥಾಪಿಸಿದೆ. ಒಟ್ಟು 3,84,000 ನೌಕರರು ಕಾರ್ಯನಿರ್ವಹಿಸುತ್ತಿರುತ್ತಾರೆ.
ಇದರಲ್ಲಿ ಜರ್ಮನಿಯಲ್ಲಿಯೇ 2,80, 000 ಸೌಕರರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಷ್ಟು ಬೃಹತ್ ಗಾತ್ರದ ಗ್ರಾಹಕ ವ್ಯವಹಾರ ನಡೆಸುವ ಸಂಸ್ಥೆಯ ಯಶಸ್ಸು ಇತರ ಸಹಕಾರಿ ಗಳಿಗೆ ಸ್ಪೂರ್ತಿದಾಯಕ.
ಆಡಳಿತ ವ್ಯವಸ್ಥೆ;
1. ಮೇಲ್ವಿಚಾರಣೆ ಮಂಡಳಿ; ತಂತ್ರಗಾರಿಕೆ ದಿಸೆ ಮತ್ತು ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುತ್ತದೆ.
2. ವ್ಯವಸ್ಥಾಪನಾ ಮಂಡಳಿ ; ದೈನಂದಿನ ವ್ಯವಹಾರಗಳ ಜವಾಬ್ದಾರಿ ಮತ್ತು ಸಂಸ್ಥೆಯ ತಂತ್ರಗಾರಿಕೆ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತದೆ.
ಕಾರ್ಯಚರಣೆ ಯಶಸ್ಸಿನ ಸೂತ್ರಗಳು;
1. ನಿರ್ಧಾರ ತೆಗೆದುಕೊಳ್ಳುವಲ್ಲಿ ಅಧಿಕಾರ ವಿಕೇಂದ್ರಿಕರಣ .
2. ಬಿಗಿಯಾದ ಆಂತರಿಕ ನಿಯಂತ್ರಣ ವ್ಯವಸ್ಥೆ ಮತ್ತು ಅನುಪಾಲನೆ, ನೀತಿ ನಿಯಮಗಳ ಉಲ್ಲಂಘನೆಯಾಗದಂತೆ ತಕ್ಷಣ ತಿಳಿದು ಬರುವಂತೆ ಮತ್ತು ಪರಿಹರಿಸುವ
ವ್ಯವಸ್ಥೆ.
3. ಇದಕ್ಕೆ ಪೂರಕವಾದ ವೈಯಕ್ತಿಕ ಜವಾಬ್ದಾರಿ , ಗ್ರಾಹಕ ಮೊದಲು ಎಂಬ ನೀತಿ , ವಿನೂತನ ಅವಿಷ್ಕಾರಗಳಿಗೆ ಪ್ರಾಧಾನ್ಯತೆ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ,
ಪರಸ್ಪರ ಗೌರವ .
ಕಾರ್ಯವೆಸುಗುವಲ್ಲಿ ಮತ್ತು ಇತರೆ ಸಂಸ್ಥೆಗಳು ಅದರಲ್ಲಿಯೂ ಸರಬರಾಜುದಾರರೊಡನೆ ವ್ಯವಹರಿಸುವಲ್ಲಿ ಆಡಳಿತ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಮಾರ್ಗದರ್ಶಿ ಸೂತ್ರಗಳು ;
1.ಅಧಿಕಾರ ವರ್ಗ ಮತ್ತು ಸಿಬ್ಬಂದಿ ವರ್ಗ ನಡವಳಿಕೆ ನೀತಿ ನಿಯಮಗಳನ್ನು ಹೊಂದಿದ್ದು ಅದರಂತೆ
ಪಾಲನೆ ಮಾಡುವುದು
2. ಸರಬರಾಜು ದಾರರಿಗೆ ; ಮಾನದಂಡಗಳ ನಿಗದಿ ಪಡಿಸುವಿಕೆ ಇವುಗಳು ಸಾಮಾಜಿಕ ಮತ್ತು ಪರಿಸರಾತ್ಮತ ಅಂಶಗಳನ್ನು ಪರಿಗಣಿಸಲಾಗಿದೆ.
3. ಸಿಬ್ಬಂದಿ ವರ್ಗ ಕಾರ್ಮಿಕರಿಗೆ;
ಜೀವನಕ್ಕೆ ಅವಶ್ಯ ಕನಿಷ್ಟ ವೇತನ ಮತ್ತು ಜವಾಬ್ದಾರಿಗೆ ತಕ್ಕಂತ ವೇತನ.
ಸಂಸ್ಥೆಯು ಈ ಕೆಳಕಂಡಂತೆ ಘೋಷಿಸಿ ಕೊಂಡಿದೆ; ನಮ್ಮ ಗುರಿ; ” ಅತ್ಯುತ್ತಮ ಸೇವೆ – ಗ್ರಾಹಕರಿಗೆ , ಚಿಲ್ಲರೆ ವ್ಯಾಪಾರಿಗಳಿಗೆ , ಮತ್ತು ನೌಕರರಿಗೆ ”
* ಸಮಾಜದ ಹಿತಾಸಕ್ತಿ ಕಾಪಾಡಲು ನಾವು ಜವಾಬ್ದಾರ ರಾಗಿರುತ್ತೇವೆ.
* ಗ್ರಾಹಕರಿಗಾಗಿ ನಾವು – ನಾವು ಮಾರುಕಟ್ಟೆಯ ಹೃದಯ ದಲ್ಲಿದ್ದೇವೆ.
* ನಾನು ನೂತನ ನಿರ್ದೇಶನಗಳನ್ನು ಸ್ವಾಗತಿಸುತ್ತೇವೆ. ನಿಂತಲ್ಲೇ ನಿಂತಿದ್ದಲ್ಲಿ ಹಿಂದಕ್ಕೆ ಕ್ರಮಿಸಿದಂತೆಯೇ !
* ನಾವು ನಿಷ್ಠೆ ಯಿಂದ ವರ್ತಿಸುತ್ತೇವೆ. ಪ್ರತಿಯೊಬ್ಬರನ್ನೂ ಗೌರವಿಸುತ್ತೇವೆ. ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ.
* ನಾವು ಅತ್ಯುತ್ತಮ ಪರಿಹಾರ ಕಂಡುಕೊಳ್ಳುತ್ತೇವೆ. ಒಪ್ಪಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ದೃಡತೆಯಿಂದ ನಡೆದುಕೊಳ್ಳುತ್ತೇವೆ.
* ನಾವು ನಮ್ಮ ಜವಾಬ್ದಾರಿಗಳನ್ನು ಅಂತಿರುತ್ತವೆ. ಸುಸ್ಥಿರತೆಯಿಂದ ನಡೆದು ಕೊಳ್ಳುತ್ತೇವೆ.
ಈ ಹಿನ್ನೆಲೆಯಲ್ಲಿ ಇಲ್ಲಿನ ‘ರೆವೆ’ ಸೂಪರ್ ಮಾರ್ಕೆಟ್ ಗೆ ಹೋಗಿ ಮನೆಗೆ ಬೇಕಾದ ಪಡಿತರ, ತರಕಾರಿ , ಹಣ್ಣು ಖರೀದಿಸಿ ತರುವಾಗ ಸಹಕಾರ ವಲಯ ಯಶಸ್ವಿಯಾಗಿ ನಡೆಯುತ್ತಿರುವುದು ಹೆಮ್ಮೆ ಎನಿಸುತ್ತದೆ. ಇಲ್ಲಿ ಇವುಗಳ ಒಪ್ಪ ಓರಣದ ಜೋಡಣೆ ಪ್ರದರ್ಶನ ‘, ಆಧುನಿಕ ಕಂಪ್ಯೂಟರ್ ಆಧಾರಿತ ತ್ವರಿತ ಸೇವೆ ಬಿಲ್ಲಿಂಗ್ ಸೇವೆ ಅಪರೂಪದ ಹಿತಾನುಭವ ನೀಡುತ್ತದೆ. ಐದು ದಶಕಗಳ ಹಿಂದೆ
ಬೆಂಗಳೂರಿನ ಬಸವನಗುಡಿ ಸಹಕಾರ ಸಂಘದ ಜಯ ನಗರ ಶಾಖೆಯಿಂದ ಪಡಿತರ ತರುತ್ತಾ ಇದ್ದದ್ದು ನಾಲ್ಕು ದಶಕಗಳ ಹಿಂದೆ ಕೆ.ಸಿ.ಸಿ.ಎಫ್ ನ ಜನತಾ ಬಜಾರ್ ಬೆಂಗಳೂರು ಜಯನಗರ ಶಾಖೆಯಿಂದ ಗೃಹ ಬಳಕೆ ಮತ್ತು ಇತರೆ ವಸ್ತುಗಳನ್ನು ನಾವೇ ಆರಿಸಿ ಖರೀದಿಸಿದ ಪ್ರಪ್ರಥಮ ಹಿತಾನುಭವ ನೆನಪಿಗೆ ಬರುತ್ತಿದೆ.
ಸಹಕಾರ ಸಂಘಗಳ ಅಪರ ನಿಬಂಧಕರು ( ನಿವೃತ್ತ )
c/o ವಿಶ್ವಾಸ್ .ಎಲೆ , ಥೊಮಸ್ ರಾಯ್ಟರ್ ಎಸ್ ಟಿ ಆರ್ 36 63263 ನಯ ಐಸನ್ ಬರ್ಗ್ ಫ್ರಾಂಕ್ ಫರ್ಟ ಜರ್ಮನಿ