ಪತ್ತಿನ ಸಹಕಾರ ಸಂಘಗಳು ಮತ್ತು ವಿವಿದೋದ್ದೇಶ ಸಹಕಾರ ಸಂಘಗಳು ಸದಸ್ಯರಿಂದ ಠೇವಣಿ ಸಂಗ್ರಹಿಸುವುದು ಮತ್ತು ಸದಸ್ಯರಿಗೆ ಸಾಲ ನೀಡುವ ಮತ್ತು ಇತರೆಡೆ ಹೂಡಿಕೆ ಮಾಡುವ ಚಟುವಟಿಕೆಯಲ್ಲಿ ಕೊಡಗಿನ ಕೊಂಡಿವೆ. ಅಂದರೆ, ಇದೂ ಕೂಡ ಸಂಘದೊಳಗಿನ ಬ್ಯಾಂಕಿಂಗ್ ಚಟುವಟಿಕೆ. ಭ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪರವನಾಗಿ ಪಡೆಯುವುದರಿಂದ ಸಾರ್ವಜನಿಕರಿಂದ ರೇವಣಿಸ್ವೀಕರಿಸಲು ಮತ್ತು ಸಾರ್ವಜನಿಕರಿಗೆ ಸಾಲ ನೀಡಲು ಅರ್ಹತೆ ಪಡೆದರುತ್ತವೆ.
ಇದರಿಂದ ಸಂಸ್ಥೆಯು ಮುಂದೆ ಕಾಣಲಾರದ ನಷ್ಟಗಳು ‘ತೊಡಕುಗಳು ಬಂದಾಗ ಅದನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದ ಠೇವಣಿದಾರರ, ಸಾಲ ನೀಡುವವರ ವಿಶ್ವಾಸಕ್ಕೆ ಪಾತ್ರರಾಗಬಹುದು. ಆದುದರಿಂದ ಈ ನೀತಿಯನ್ನು ಪತ್ತಿನ ಸಹಕಾರ ಸಂಘಗಳು ಮತ್ತು ವಿವಿದೋದ್ದೇಶ ಸಹಕಾರ ಸಂಘಗಳು ಅಳವಡಿಸಿಕೊಳ್ಳುವುದು ತಮ್ಮ ಉತ್ತಮ ಕಾರ್ಯಾಚರಣೆ ದೃಷ್ಟಿಯಿಂದ ಅಗತ್ಯ. ಹಾಗಾದರೆ ಸಮರ್ಪಕ ಬಂಡವಾಳ ಅಥವ ‘ಕ್ಯಾಪಿಟಲ್ ಅಡಿಕ್ವೆಸಿ ‘ಅಥವ ಸಿ.ಆರ್.ಎ.ಆರ್. ಎಂದರೇನು? ಎಂಬ ಪ್ರಶ್ನೆ ಮೂಡುವುದು. ಸಹಜ. ಪ್ರಾ.ಕೃ.ಪ.ಸ.ಸಂ. ಗಳ, ಪ್ರಾ.ಸ. ಕ್ರ. ಮತ್ತು ಗ್ರಾ. ಅ. ಬ್ಯಾಂಕಗಳ ಲೆಕ್ಕ ಪರಿಶೋಧನ ವರದಿಗಳಲ್ಲಿ ಆಯ ಆರ್ಥಿಕ ವರ್ಷ ದ ಅಂತಿಮ ಲೆಕ್ಕ ಆಧರಿಸಿ. ಇದು ಶೇ. ಎಷ್ಟಿದೆ ಎಂದು ನಮೂದಿಸಲಾಗುತ್ತದೆ. ಅದರಂತೆ, ಸಹಕಾರ ಬ್ಯಾಂಕ್ ಗಳ ಲೆಕ್ಕ ಪರಿಶೋಧನಾವರದಿಗಳಲ್ಲಿ ನಮೂದಿಸುವುದು ಕಡ್ಡಾಯ ವಾಗಿರುತ್ತದೆ. ಆದುದರಿಂದ ಇದರ ಅರ್ಥ ಅರಿಯುವುದು ಅಷ್ಟೇ ಮುಖ್ಯವಾಗಿರುತ್ತದೆ.
ಒಳಗೊಳ್ಳುತ್ತದೆ.
ಇದಕ್ಕೆ ಟಯರ್ – 1, ಬಂಡವಾಳ ಎನ್ನಲಾಗುತದೆ. ಪಾವತಿಯಾದ ಷೇರು ಬಂಡವಾಳ ನಮ್ಮದೇ ಆಗಿರುತ್ತದೆ. ನಿಧಿಗಳು ನಮ್ಮ ಲಾಭದಿಂದ ಭವಿಷ್ಯಕ್ಕೆ ತೆಗೆದಿರ ಸಲಾದ ನಿಧಿಗಳು,ಅದು ಮೀಸಲು ನಿಧಿ (ಆಪದ್ಧನ ನಿಧಿ, ರಿಸರ್ವ್ ಫಂಡ್) ಆಗಿರುತ್ತದೆ. ಇದರ ಮೇಲೆ ಯಾವುದೇ ಋುಣ ಭಾರ ವಿರ ಬಾರದು.”ಆನ್ ಎನ್ ಕಂಬರ್ಡ್ ರಿಸರ್ವ ‘ಇದನ್ನು ಮಾತ್ರ ‘ಸ್ವಂತ ಬಂಡವಾಳ’ ಎಂದು ಪರಿಗಣಿಸಲಾಗುತ್ತದೆ. ಇದರ ಅನುಪಾತ (ರೇಶಿಯೋ) ವನ್ನು ಈ ಕೆಳಕಂಡ ಕೋಷ್ಟಕದಂತೆ ಲೆಕ್ಕ ಹಾಕಲಾಗುವುದು.
ಸಮರ್ಪಕ ಬಂಡವಾಳ= ಸ್ವಂತ ಬಂಡವಾಳ ×100 (ಸಿ.ಆರ್.ಎ. ಆರ್) ತೂಕ ಸಹಿತ ಆಸ್ತಿಯ ಒಟ್ಟು ಮೊತ್ತ ಸ್ವಂತ.
ಬಂಡವಾಳ= ಪಾವತಿಯಾದ ಷೇರು ಬಂಡವಾಳ+ ಋುಣ ಭಾರ ರಹಿತ ನಿಧಿಗಳು- ಕ್ರೋಡಿ ಕೃತ ನಷ್ಟಗಳು.
ಸಹಕಾರ ಸಂಸ್ಥೆಗಳು ಸಮರ್ಪಕ ಬಂಡವಾಳ ಹೊಂದಲು ಅಳವಡಿಸ ಕೊಳ್ಳಬೇಕಾದ ಅವಶ್ಯ ತಂತ್ರಗಾರಿಕೆ:
ಇದು ಕನಿಷ್ಟ ಶೇ 9. ಎಂದು ನೀರೀಕ್ಷಿಸಲಾಗಿದೆ. ಈ ಸಮರ್ಪಕ ಬಂಡವಾಳ ಹೊಂದ ಬೇಕಾದರೆ ಸಂಘದ ಜವಾಬ್ದಾರಿ ಕಡೆಯಲ್ಲಿ ನ ಸಂಗತಿಗಳು ,ಸಂಪನ್ಮೂಲ ಗಳೂ ಆದ ಪಾವತಿಯಾದ ಷೇರು ಬಂಡವಾಳವು ಅಧಿಕವಾಗಿರಬೇಕಾಗುತ್ತದೆ. ಇದರ ಹೆಚ್ಚಳಕ್ಕಾಗಿ ಸಂಘವು ಅವಶ್ಯ ತಂತ್ರಗಾರಿಕೆಯನ್ನು ಅನುಸರಿಸಬೇಕಾಗುತ್ತದೆ. ಮೂಲವಾಗಿ ಷೇರು ಬಂಡಾಳದ ಮೊತ್ತ ಕಡಿಮೆ ಇದ್ದಲ್ಲಿ ಉಪನಿಯಮ ತಿದ್ದು ಪಡೆಯೊಂದಿಗೆ ಅದನ್ನು ಅಧಿಕ ಗೊಳಿಸುವುದು, ಸದಸ್ಯತ್ವವನ್ನು ಹೆಚ್ಚಿಸುವುದು.
ಸಾಲ ವಿತರಿಸುವಲ್ಲಿ ತಪ್ಪದೇ ಹೆಚ್ಚು ವರಿ ಷೇರು ಸಂಗ್ರಹಿಸುವುದು. ನಿಧಿಗಳ ಸೃಷ್ಠಿಗೆ ಪ್ರಾಧಾನ್ಯತೆ ನೀಡಬೇಕು. ಕಾಯ್ದೆ ಪ್ರಕಾರ ಶೇ 25 ಕ್ಕೆ ಕಡಿಮೆ ಇಲ್ಲದಂತೆ ಮೀಸಲು ನಿಧಿಗೆ ಲಾಭದಲ್ಲಿ ತೆಗೆದಿರಿಸುವುದು ಎಂದಿದೆ. ಇದು ಸರ್ವ ಸದಸ್ಯರ ಸಭೆ ಅಧಿಕಾರರವಾಗಿದ್ದು, ಆಡಳಿತ ಮಂಡಳಿ ಯೂ ಶೇ 25 ಕ್ಕಿಂತ ಹೆಚ್ಚಿಗೆ ಮೀಸಲು ನಿಧಿ ಸೃಜಿಸಲು ಅವಕಾಶ ವಿದ್ದು ಸರ್ವಸದಸ್ಯರ ಅನುಮೋದನೆಗೆ ಮಂಡಿಸಲು ಆಲೋಚಿಸಿ ಕ್ರಮ ವಿಡುವುದು ಸಂಸ್ಥೆಯ ಆರ್ಥಿಕ ಆರೋಗ್ಯದಷ್ಟಿಯಿಂದ ಅಗತ್ಯ . ಈ ಕ್ರಮ ನಿಧಿಗಳ ಮೇಲಿನ ವೆಚ್ಚವನ್ನು. ಕಡಿಮೆ ಗೊಳಿಸುತ್ತದೆ.
‘ಆಡಳಿತ ಆಸ್ತಿಯ ತೊಡಕು ತೂಕ ಸಹಿತ ಮೊತ್ತ ಕಡಿಮೆಗೊಳಿಸಿಕೊಳ್ಳಬೇಕು. ಎಂದರೆ ಆಸ್ತಿಯ ಆರೋಗ್ಯದ ಗುಣಮಟ್ಟ ಉತ್ತಮ ವಾಗಿರಬೇಕು. ಹೂಡಿಕೆಗಳು ಗಳಿಕೆ ತರುವಂತಹ, ತರುತ್ತಿರುವ ಹೂಡಿಕೆಗಳಾಗ ಬೇಕು. ಸಾಲ ಮತ್ತು ಮುಂಗಡಗಳ ವಲಯವು ಪತ್ತಿನ ಸಹಕಾರ ಸಂಘಗಳ, ಪತ್ತಿನ ವ್ಯವಹಾರ ನಡೆಸುತ್ತಿರುವ ವಿವಿದೋದ್ದೇಶ ಸಹಕಾರ ಸಂಘಗಳ ಪ್ರಮುಖ ಆಸ್ತಿಯಾಗಿರುವುದರಿಂದ ಇದರ ಆರೋಗ್ಯ ಅತಿ ಮುಖ್ಯ. ಎಂದರೆ ಸಾಲದ ಸೂಲಾತಿಅತ್ಯುತ್ತಮ ವಾಗಿರಬೇಕು. ಕಾರ್ಯ ನಿರ್ವದಲ್ಲದ ಆಸ್ತಿ (ಎನ್.ಪಿ.ಎ) ಅತಿ ಕಡಿಮೆ ಇರಬೇಕು. ಅದಕ್ಕೆ ಅಗತ್ಯದಷ್ಟು ಅಕಾಶವನ್ನು ಕಲ್ಪಿಸಿರ ಬೇಕು. ಈ ಕ್ರಮಗಳಿಂದ ಸಂಘವು ಸಮರ್ಪಕ ಬಂಡವಾಳ ಹೊಂದಿ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗುತ್ತದೆ.
ತೊಡಕು ತೂಕ ಆಸ್ತಿ ಕೋಷ್ಟಕ.
ಶಶಿಧರ.ಎಲೆ
ಸಹಕಾರ ಸಂಘಗಳ ಅಪರ ನಿಬಂಧಕರು (ನಿವ್ರೃತ್ತ). Additional Registrar of co-operative societies (RTD).