ಪರಂಪರೆಯಲ್ಲಿ ಅಭಿವೃದ್ಧಿ ಬದುಕು.|ಕು.ಪೆನಜ

ಪರಂಪರೆಯು ಕ್ರಿಯಾತ್ಮಕ, ಮನುಷ್ಯನ ಜೀವನದಂತೆ ಸಂರ್ಕಿಣವಲ್ಲ. ಮತ್ತು ನಾವು ಅದನ್ನು ನಿರಂತರವಾಗಿ ವಿಕಸನಗೊಳಿಸಿ ಪ್ರಸ್ತುತಪಡಿಸಬೇಕು, ಆನೆಗುಂದಿ ಗ್ರಾಮಸ್ಥರು ತಮ್ಮ ಐತಿಹಾಸಿಕ ಗ್ರಾಮವನ್ನು ಬಾಳೆ ನಾರಿನ ಕರಕುಶಲ ಉಪಕ್ರಮದ ಮೂಲಕ ಸುಸ್ಥಿರ ಅಭಿವೃದ್ಧಿಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ಈ ತತ್ವವನ್ನು ನಿರೂಪಿಸಿದ್ದಾರೆ.

ಆನೆಗುಂದಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸಮೀಪವಿರುವ ಒಂದು ಪ್ರಾಚೀನ ಗ್ರಾಮವಾಗಿದೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿದೆ. ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾಗಿದ್ದ ಆನೆಗುಂದಿ 14ನೇ ಶತಮಾನಕ್ಕೂ ಹಳೆಯದಾದ ಕನ್ನಡ ಪದದ ಆನೆಯ ಹೊಂಡ ಎಂಬ ಒಳ ಅರ್ಥವನ್ನು ಹೊಂದಿದೆ. ರಾಜಮನೆತನದ ಆನೆಗಳಿಗೆ ಇಲ್ಲಿ ಸ್ನಾನ ಮಾಡಿಸುತ್ತಿದ್ದರು ಎಂದು ನಂಬಲಾಗಿದೆ.

ಈ ಅದ್ಭುತ ಸ್ಥಳದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಅವಯವಗಳು ಹರಡಿವೆ. “ಆನೆಗುಂದಿ ಸುತ್ತಮುತ್ತಲಿನ ಪ್ರದೇಶವು ಬಾಳೆ ತೋಟಗಳಿಗೆ ಹೆಸರುವಾಸಿಯಾಗಿದೆ, ಈ ಗ್ರಾಮದ ಮಹಿಳೆಯರು ಈ ಹಿಂದೆ ಕೃಷಿ ತ್ಯಾಜ್ಯವಾದ ಬಾಳೆ ಬೇರುಗಳನ್ನು ನೈಸರ್ಗಿಕ ನಾರುಗಳಾಗಿ ಪರಿವರ್ತಿಸುವ ಮೂಲಕ ಸುಸ್ಥಿರ ಉತ್ಪನ್ನಗಳಾಗಿ ಪರಿವರ್ತಿಸುತ್ತಾರೆ. ಬಾಳೆ ತೋಟದ ತ್ಯಾಜ್ಯ ಕಾಂಡಗಳನ್ನು ಜೋಡಿಸಿ ಹಗ್ಗ ಅಥವಾ ರಬ್ಬರ್ ಶೀಟ್‌ಗೆ ಸುತ್ತಿಕೊಳ್ಳಲಾಗುತ್ತದೆ. “ನೈಸರ್ಗಿಕ ಹೊಳಪನ್ನು ಸಂರಕ್ಷಿಸಲು ಮತ್ತು ಪರಿಸರ ಸ್ನೇಹಿಯಾಗಿಸಲು ಅವರು ತಯಾರಿಸುವ ಕರಕುಶಲ ವಸ್ತುಗಳಿಗೆ ಯಾವುದೇ ಬಣ್ಣ ಮಾಡಲಾಗುವುದಿಲ್ಲ”.

ಕಿಷ್ಕಿಂದಾ ಟ್ರಸ್ಟ್ (TKT) “ಬನಾನಾ ಫೈಬರ್ ಕಾಟೇಜ್ ಇಂಡಸ್ಟ್ರಿಯು” ಬಾಳೆ ನಾರಿನ ಕರಕುಶಲತೆಯ ಉಪಕ್ರಮವನ್ನು ಮುನ್ನಡೆಸುತ್ತ, ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ಮಹಿಳಾ ಕಾರ್ಮಿಕರ ಮೂಲಕ ಸುಸ್ಥಿರ ಅಭಿವೃದ್ಧಿಯ ನೈಜ ದೃಷ್ಟಿಕೋನವನ್ನು ನೀಡುತ್ತದೆ. ಹರಿ ಧರ್ತಿ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯನ್ನು 2016 ರಲ್ಲಿ ಕಿಷ್ಕಿಂದಾ ಟ್ರಸ್ಟ್‌ನಡಿಯಲ್ಲಿ ನೊಂದಾಯಿಸಲಾಗಿದೆ. ಈ ವ್ಯವಸ್ಥೆಯು ಈ ಪ್ರದೇಶದಲ್ಲಿ ಸಣ್ಣ ವ್ಯಾಪಾರಗಳಿಗೆ ವಾತಾವರಣ ಸೃಷ್ಟಿಸಿ ಅದರ ಮಹಿಳಾ ಸದಸ್ಯರನ್ನು ಸ್ವತಂತ್ರ ಉದ್ಯಮಿಗಳನ್ನಾಗಿಸಿ ಮತ್ತು ಮುಖ್ಯವಾಗಿ, ಪ್ರಾಚೀನ ಪರಿಸರವನ್ನು ಸಂರಕ್ಷಿಸಲಾಗಿದೆ.

ಕಿಷ್ಕಿಂಧಾ ಟ್ರಸ್ಟ್, ಉತ್ಪಾದನಾ ಘಟಕಗಳನ್ನು ಸ್ವತಃ ನಡೆಸಲು ತಳಮಟ್ಟದ ಮಹಿಳೆಯರನ್ನು ಶಕ್ತಿಯನ್ನಾಗಿಸಿದೆ ಮತ್ತು ಹರಿಧಾರ್ತಿ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯು, ಘಟಕಗಳನ್ನು ಕುಶಲಕರ್ಮಿಗಳ ಮಾಲಿಕತ್ವ ಮತ್ತು ನಿರ್ವಹಣೆಗೆ ಪರಿವರ್ತಿಸಲು ಸಹಾಯ ಮಾಡುತ್ತದೆ. ಉತ್ಪನ್ನ ಮಾರಾಟದಿಂದ ಬರುವ ಎಲ್ಲಾ ಆದಾಯವು ಈ ಜೀವನೋಪಾಯದ ಉಪಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ಹಳ್ಳಿಯ ಮಹಿಳೆಯರು ಸ್ವತಂತ್ರ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ, ಜೊತೆಗೆ ಅವರು ಒಟ್ಟಿಗೆ ಕೆಲಸ ಮಾಡಲು, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಒಂದೆ ಕುಟುಂಬವಾಗಿ ಪರಸ್ಪರ ಕಲಿಯಲು ಅವಕಾಶವನ್ನು ಸೃಷ್ಟಿಸುತ್ತದೆ.

ಶಮಾ ಪವಾರ್ ಅವರು 1998 ರಲ್ಲಿ ಪ್ರಾರಂಭಿಸಿದ ಬಾಳೆ ನಾರಿನ ಕರಕುಶಲ ಉಪಕ್ರಮವು ಆರಂಭದಲ್ಲಿ ಎಂಟು ಮಹಿಳೆಯರು ಮಾತ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳು ಮತ್ತು ಕೌಶಲ್ಯಗಳನ್ನು ಬಳಸಿಕೊಂಡು, ಘಟಕವು ಸುಮಾರು 150 ಮಹಿಳೆಯರ ಜೀವನೋಪಾಯಕ್ಕೆ ಬೆಂಬಲವಾಗಿ ಬೆಳೆದಿದೆ. ಅವರಲ್ಲಿ ಅನೇಕರು ಎರಡನೇ ತಲೆಮಾರಿನ ನೇಕಾರರು ಮತ್ತು ಸಂಸ್ಥೆಯೊಂದಿಗೆ ಕೆಲಸ ಮಾಡುವ ಕುಶಲಕರ್ಮಿಗಳು. ಇಲ್ಲಿ ಬಾಳೆ ಸಮೃದ್ಧವಾಗಿ ಬೆಳೆಯುತ್ತಿತ್ತು. ಆದ್ದರಿಂದ ನಾವು ಅದನ್ನು ಕಚ್ಚಾ ವಸ್ತುವಾಗಿ ಬಳಸಲು ನಿರ್ಧರಿಸಿದ್ದೇವೆ ಎಂದು ಶಮಾ ಹೇಳುತ್ತಾರೆ.

ಪ್ರಸ್ತುತ ಬಾಳೆ ನಾರಿನ ಉತ್ಪಾದನೆಯ ಮೂರು ಘಟಕಗಳಿವೆ, ಇದರಲ್ಲಿ “ಹಗ್ಗ-ತಯಾರಿಕೆ ಘಟಕ”, “ದೇಶೀಯ ಮಾರುಕಟ್ಟೆ ಕ್ರಾಫ್ಟ್ ಘಟಕ” ಮತ್ತು “ಫಿನ್‌ಲ್ಯಾಂಡ್‌ನ ಮಾರುಕಟ್ಟೆ” ಸಂಪರ್ಕ ಪಾಲುದಾರರೊಂದಿಗೆ ಕೆಲಸ ಮಾಡುವ ರಫ್ತು ಘಟಕ ಸೇರಿವೆ.
ಬಾಳೆ ನಾರಿನ ಕರಕುಶಲ ಕಾರ್ಯಾಗಾರವು ಪ್ರಾಸಂಗಿಕವಾಗಿ ಸ್ಥಳೀಯ ಮಹಿಳೆಯರನ್ನು ಸಬಲಿಕರಣಗೋಳಿಸುವದಲ್ಲದೆ, ನೈಸರ್ಗಿಕ ಸಂಪನ್ಮೂಲಗಳನ್ನು ಮರುಬಳಕೆ ಮಾಡಲು ಸಹಾಯ ಮಾಡುತ್ತದೆ. ಸಾವಯವ ಕೃಷಿ, ಪ್ರದರ್ಶನ ಕಲೆಗಳ ಶಿಕ್ಷಣ ಮತ್ತು ಪ್ರವಾಸಿಗರಿಗೆ ಸಾಹಸ ಕ್ರೀಡೆಗಳ ಮಾರುಕಟ್ಟೆ ಕಾರ್ಯಕ್ರಮಗಳು ಜನರಿಗೆ ಸಾಕಷ್ಟು ಕೆಲಸದ ಅವಕಾಶಗಳನ್ನು ನೀಡಿದ ಇತರ ಯಶಸ್ವಿ ವ್ಯವಹಾರಗಳಾಗಿವೆ. ಮಹಿಳೆಯರು ರಚಿಸಿದ ಕರಕುಶಲ ವಸ್ತುಗಳನ್ನು ಕಿಷ್ಕಿಂದಾ ಟ್ರಸ್ಟ್‌ನ “ಹೂವಾ ಕೆಫೆ” ಮತ್ತು “ಕ್ರಾಫ್ಟ್ ಶಾಪ್‌ನಲ್ಲಿ” ಮಾರಾಟ ಮಾಡಲಾಗುತ್ತದೆ ಮತ್ತು ಗಳಿಸಿದ ಹಣವನ್ನು ಮತ್ತೆ ಟ್ರಸ್ಟ್‌ಗೆ ಉಳುಮೆ ಮಾಡಲಾಗುತ್ತದೆ. “ಈ ಗುಡಿ ಕೈಗಾರಿಕೆಯು ಈಗ ರಿಪಲ್ ಎಫೆಕ್ಟ್ ಬೀರಿದೆ ಮತ್ತು ಹೆಚ್ಚು ಹೆಚ್ಚು ಸಮುದಾಯಗಳು ಈ ಮಾದರಿಯನ್ನು ಸ್ವತಂತ್ರವಾಗಿ ಪುನರಾವರ್ತಿಸುತ್ತಿವೆ, ಆನೆಗುಂದಿಯಲ್ಲಿ ಮಾತ್ರವಲ್ಲ, ಇತರ ಹಳ್ಳಿಗಳಲ್ಲಿಯೂ ಸಹ.

“ನಾವು ಮರುಕೃಷಿ ಯಶಸ್ಸಿನ ಸಂಕೇತವಾಗಿ ಪರಿಗಣಿಸುತ್ತೇವೆ. “ನಾನು 1997 ರಲ್ಲಿ ಇಲ್ಲಿಗೆ ಮೊದಲ ಬಾರಿಗೆ ಬಂದಾಗ, ಅಪರೂಪಕ್ಕೆ ಕೆಲವು ಮಹಿಳೆಯರು ಹೊರಾಂಗಣದಲ್ಲಿ ತಿರುಗಾಡುವುದನ್ನು ಕಾಣುತ್ತಿದ್ದೆವು. ಈಗ ಅವರು ತಲೆ ಎತ್ತಿ ನೆಡೆಯುವ ತಮ್ಮ ಕುಟುಂಬದ ಮೌಲ್ಯಯುತ ಸದಸ್ಯರು ಮಾತ್ರವಲ್ಲ, ಹಳ್ಳಿ, ಜಿಲ್ಲೆ ಮತ್ತು ಅಂತಿಮವಾಗಿ ರಾಷ್ಟ್ರದ ಸದಸ್ಯರಾಗಿದ್ದಾರೆಂದು “ಪವಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Banana future in Karnataka. https://www.thenationalnews.com/lifestyle/banana-futures-in-karnataka-1.495732

Banana fiber craft https://www.deccanherald.com/india/karnataka/handicraft-banana-fibre-2018482

This little village in Karnataka is becoming the paradigm of sustainability

https://www.google.com/amp/s/www.lifestyleasia.com/ind/travel/india/this-little-village-in-karnataka-is-becoming-the-paradigm-of-sustainability/amp/

ಪೆನಜ.                                                                          ಸ್ನಾತಕೋತ್ತರ ವಿದ್ಯಾರ್ಥಿ.                                                    ಮಂಗಳೂರು ವಿಶ್ವವಿದ್ಯಾಲಯ.

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More