ಸಂಕ್ರಮಣ ಕಾಲದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು.

ಹಿನ್ನೆಲೆ: ಭಾರತ ಕೃಷಿ ಪ್ರಾಧಾನ್ಯ ರಾಷ್ಟ್ರ. ಸ್ವಾತಂತ್ರ್ಯದ ಹೊಸ್ತಿನಲ್ಲಿ ಕೃಷಿಗೆ ಸಾಂಸ್ಥಿಕ ಬಂಡವಾಳ ದೊರೆಯುತ್ತಿದ್ದದ್ದು ‘ಅಲ್ಪಾವಧಿ ಕೃಷಿ ಸಾಲ ರಚನೆ’ ಯಾದ ಸೇವಾ ಸಹಕಾರ ಸಂಘಗಳು, ಜಿಲ್ಲ ಕೇಂದ್ರ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್. ಸರ್ಕಾರ/ಭಾರತೀಯ ರಿಸರ್ವ್ ಬ್ಯಾಂಕ್ ನ ‘ಕೃಷಿ ಪುನರ್ಧನ ವಿಭಾಗ (ARD-Agricultral refinance division) ಇವುಗಳ ಮೂಲಕ ‘ ಬೆಳೆಸಾಲ ‘ ವನ್ನು ರೈತರಿಗೆ ಒದಗಿಸಲಾಗುತ್ತಿತ್ತು. ರಿಸರ್ವ ಬ್ಯಾಂಕ್ ರಚಿಸಿದ ‘ಅಖಿಲ ಭಾರತ ಗ್ರಾಮೀಣ ಪತ್ತು ಸಮೀಕ್ಷ ಸಮಿತಿ (All india Rural Credit survey Committee -AIRDC,A.D.Gorwala committee)ನೀಡಿದ ವರದಿ

ಭಾರತದ ಸಹಕಾರ ಚರಿತ್ರೆಯಲ್ಲಿ ಒಂದು ‘ಮೈಲಿಗಲ್ಲು’ .’ ಭಾರತದ ರೈತರು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಸಾಯುತ್ತಿದ್ದಾರೆ’ ‘ಭಾರತದಲ್ಲಿ ಸಹಕಾರ ವಿಫಲವಾಗಿ ಆದರೆ ಅದು ಯಶಸ್ಸು ಗಳಿಸಲೇ ಬೇಕು’ ಎಂಬ ಈ ವರದಿಯಲ್ಲಿನ ಘೋಷ ವಾಕ್ಯಗಳು ಅಂದಿನ ಪರಿಸ್ಥಿತಿಯನ್ನು ಪ್ರತಿಬಿಂಭಿಸುತ್ತದೆ. ಈ ವರದಿಯ ಅನುಷ್ಠಾನ ‘ಕೃಷಿ ಪತ್ತು, ಉತ್ಪಾದನೆ, ಮಾರಾಟ ‘ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಉಂಟು ಮಾಡಿತು. ‘ಹಸಿರು ಕ್ರಾಂತಿಕ್ರಾಂತಿ’ಗೆ ತನ್ನದೇ ಆದ ಕೊಡುಗೆಯನ್ನು ಸಹಕಾರ ವಲಯ ಸರ್ಕಾರದ ಬೆಂಬಲದೊಡನೆ ನೀಡಿದ್ದು ಈಗ ಇತಿಹಾಸ.

ಸೇವ ಸಹಕಾರ  ಸಂಘಗಳು  ಎಂದು ಆರಂಭಗೊಂಡು  ಸಂಪನ್ಮೂಲ ಕೊರತೆ  ನೀಗಿಸಲು  ಸರ್ಕಾರವೇ  ಈ ಸಂಘಗಳ  ಮೂಲಕ ‘ಠಕಾವಿ’ ಸಾಲಗಳನ್ನು  ವಿತರಣೆ  ಮಾಡಲಾಗುತ್ತಿತ್ತು. ಬಿಡಿ ಸಹಕಾರ  ಸಂಘಗಳು  ಕೊರತೆ  ನೀಗಲು  ಅವುಗಳ  ಶೃಂಗ ಸಂಸ್ಥೆಯಾಗಿ  ಜಿಲ್ಲಾ  ಕೇಂದ್ರ ಸಹಕಾರ ಬ್ಯಾಂಕ್  ಸ್ಥಾಪನೆಗೊಂಡವು. ಕ್ರಮೇಣ  ರಾಜ್ಯ ಸಹಕಾರ  ಬ್ಯಾಂಕ್ ಗಳು  ಸ್ಥಾಪನೆಗೊಂಡವು. ಎ, ಡಿ, ಗೊರವಲ ಸಮಿತಿ ಆಧಾರದಲ್ಲಿ  ಸೇವ ಸಹಕಾರ ಸಂಘಗಳನ್ನು  ‘ವ್ಯವಸಾಯ  ಸೇವ ಸಹಕಾರ  ಸಂಘಗಳಾ’ಗಿ ( ವಿ.ಎಸ್. ಎಸ್. ಎನ್)  ಪರಿವರ್ತಿಸಲಾಯಿತು. ಕೇವಲ ಬೆಳೆಸಾಲ , ಸಾರ್ವಜನಿಕ  ಪಡಿತರ  ವಿತರಣೆಯಲ್ಲದೆ  ಕೃಷಿಗೆ  ಅಗತ್ಯ ಪರಿಕರಗಳಾದ  ಗೊಬ್ಬರ, ಬೀಜ ಕ್ರಿಮಿನಾಶಕ  ಮತ್ತಿತರೆ  ಅಗತ್ಯತೆಗಳನ್ನು ಈ ಸಂಘಗಳು  ಪೂರೈಸಿದವು. ರೈತರ  ಪೂರ್ಣ ಅಗತ್ಯತೆಗಳನ್ನು  ಇವುಗಳು  ಪೂರೈಕೆ  ಮಾಡಲು  ಸಾಧ್ಯವಿಲ್ಲ ದಾದಾಗ  ಇವುಗಳನ್ನು  ಕೃಷಿ ಸಾಮರ್ಥ್ಯ ಅಧಿಕ  ವಿರುವ  ಪ್ರದೇಶಗಳಲ್ಲಿ  ರೈತ ಸೇವಾ ಸಹಕಾರ ಸಂಘಗಳು (ಆರ್.ಎಸ್.ಎಸ್ ಎನ್ – ಎ ಫ್ ಎಸ್.ಎಸ್) ಎಂದು  ರೇಷ್ಮೆ  ಬೆಳೆಯುವ  ಪ್ರದೇಶಗಳಲ್ಲಿ  ರೇಷ್ಮೆ ಬೆಳೆಗಾರರ ಮತ್ತು  ರೈತ ಸೇವಾ ಸಹಕಾರ  ಸಂಘಗಳಾಗಿ  (ಎಸ್.ಎಫ್.ಎಸ್.ಎಸ್) ಗಳಾಗಿ  ಪರಿವರ್ತಿಸಿ  ಇವುಗಳ ಮೂಲಕ  ಮಧ್ಯಮಾವಧಿ  ಸಾಲಗಳನ್ನು  ವಿತರಿಸಲು  ಅವಕಾಶ  ಕಲ್ಪಿಸಿ  ಈ  ಸಂಘಗಳನ್ನು  ವಾಣಿಜ್ಯ
ಬ್ಯಾಂಕ್ ಗಳಿಗೆ  ಸಂಯೋಜಿಸಲಾಯಿತು. ಇವುಗಳಲ್ಲಿ  ಈಗ  ಅನೇಕ  ಸಹಕಾರ ಸಂಘಗಳು  ತೊಂದರೆ  ಅನುಭವಿಸಿ  ‘ಗ್ಯಾಪ್ ‘ ನಿರ್ಮಾಣ  ಆಗಿ ‘  ಒಂದು  ಭಾರಿ  ತೀರುವಳಿ’ ಮಾಡಿ  ಪುನಃ ಜಿ. ಕೇ.ಸ.ಬ್ಯಾಂಕ್ ಗೆ ಸಂಯೋಜಿಸಲಾಗಿದೆ.

‘ಅಲ್ಪಾವಧಿ  ಕೃಷಿ ಪತ್ತಿನ  ರಚನೆ’ ಯ ಸುಧಾರಣೆಗೆ  ಭಾರತ ಸರ್ಕಾರ  ‘ಪ್ರೊವೈದ್ಯನಾಥನ್ ‘ ರವರ  ಅಧ್ಯಕತೆಯಲ್ಲಿ ‘ ಪುನಶ್ವೇತನ  ಸಮಿತಿ’ ಯನ್ನು  ರಚಿಸಿತು. ಈ ಸಮಿತಿ’ ನಬಾರ್ಡ್ ‘ ನೇತ್ರತ್ವದಲ್ಲಿ  ರಾಷ್ರ್ರಾಂಧ್ಯಂತ  ಈ  ವಲಯವನ್ನು  ಅಧ್ಯಯನ್ನು  ಮಾಡಿ  ವರದಿ ಸಲ್ಲಿಸಿತು. ಕೆಲವು  ಮಾರ್ಪಾಡುಗಳೊಡನೆ  ಭಾರತ ಸರ್ಕಾರ  ಈ  ವರದಿಯನ್ನು  ಅಂಗೀಕರಿಸಿ  ರಾಷ್ಟ್ರದ  ಎಲ್ಲ ರಾಜ್ಯಗಳಿಗೆ  ಅನುಷ್ಠಾನಗೊಳಿಸಲು  ತಿಳಿಸಲಾಯಿತು. ಕೇರಳ ರಾಜ್ಯ ಹೊರತುಪಡಿಸಿ  ಮತ್ತೆಲ್ಲ  ರಾಜ್ಯಗಳು  ಈ ವರದಿಯನ್ನು  ಅನುಷ್ಠಾನ ಗೊಳಿಸಲು  ಒಪ್ಪಿದವು. ಬೇರೆ  ಬೇರೆ ಅವಧಿಗಳಲ್ಲಿ  ರಾಜ್ಯಗಳು  ಅನುಷ್ಠಾನಕ್ಕೆ  ತಂದವು. ಕರ್ನಾಟಕದಲ್ಲಿಯೂ  ಇದರ ಅಂಗೀಕಾರ  ತಡವಾಯ್ತು. 2010 – 13 ನ್ನು  ಅನುಷ್ಠಾನ  ವರ್ಷಗಳಾಗಿ  ಪರಿಗಣಿಸಲಾಯ್ತು. ಇದು  ಅಲ್ಪಾವಧಿ ಕೃಷಿ  ಪತ್ತಿನ  ಕ್ಷೇತ್ರದಲ್ಲಿ  ಒಂದು ‘  ಮೈಲಿಗಲ್ಲು ‘ ಎಂದೇ  ಪರಿಗಣಿಸಬೇಕು. ಈ ವರದಿಯಂತೆ ಆರ್ಥಿಕ, ಆಡಳಿತಾತ್ಮಕ (ಕಾಯ್ದೆಯಾತ್ಮಕ ) ಮತ್ತು   ಸಾಂಸ್ಥಿಕ   ಸುಧಾರಣೆಗಳಿಗೆ  ಯೋಜನೆಗಳನ್ನು  ಹಮ್ಮಿ ಕೊಳ್ಳಲಾಯಿತು. ಈ  ವರದಿಯಂತೆ  ಅಲ್ಪಾವಧಿ ಕೃಷಿ ಪತ್ತಿನ  ಉದ್ದೇಶವುಳ್ಳ  ಮೇಲೆ  ವಿವರಿಸಿದ ಎಲ್ಲ  ಸಹಕಾರ  ಸಂಘಗಳನ್ನು  ‘ಪ್ರಾಥಮಿಕ  ಕೃಷಿ ಪತ್ತಿನ  ಸಹಕಾರ ಸಂಘ’  (ಅದು  ಯಾವುದೇ  ಹೆಸರಿನಲ್ಲಿ  ಕರೆಯಲ್ಪಟ್ಟರೂ ) ಎಂದು  ವಿಂಗಡಿಸಿ  ಕರೆಯಲಾಯಿತು (ಹೆಸರಿಸಲಾಯಿತು.)

ಆರ್ಥಿಕ ಸುಧಾರಣಿಗಳು: ಅಲ್ಪಾವಧಿ ಕೃಷಿ ಪತ್ತಿನ ರಚನೆಯ ಮೂರು ಹಂತಗಳಾದ ಪ್ರಾ.ಕೃ.ಪ.ಸ.ಸಂಘಗಳು, ಜಿ. ಕೇ.ಸ ಬ್ಯಾಂಕ್, ರಾಜ್ಯ ಸಹಕಾರ ಬ್ಯಾಂಕ್ ಗಳನ್ನು ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸಿ ಪ್ರತಿ ಹಂತದಲ್ಲಿ ಕೃಷಿ ಸಾಲ ವಿತರಣೆಯಿಂದ ಆದ ನಷ್ಟವನ್ನು ಕೇಂದ್ರ ಸರ್ಕಾರ, ಇತರೆ ಕಾರಣ (ಪಡಿತರ ವಿತರಣಿ ) ಗಳಿಂದ ಆದ ನಷ್ಟ ವನ್ನು ರಾಜ್ಯ ಸರ್ಕಾರ, ಹಣ ದುರುಪಯೋಗ ದಾಸ್ತಾನು ನಷ್ಟ ಇಂತಹವನ್ನು ಸಂಘವೇ ಭರಿಸಬೇಕೆಂದು , ನಿರ್ಧರಿಸಿ ಹಣಕಾಸಿನ ನೆರವನ್ನು ಮತ್ತು ಸಿ.ಆರ್.ಎ. ಆರ್. ಶೇ 7 ಕ್ಕಿಂತ ಕಡಿಮೆ ಇದ್ದಲ್ಲಿ ಅದನ್ನು ಮುಟ್ಟಲು ಅಗತ್ಯ ಹಣಕಾಸಿನ ನೆರವನ್ನು ಒದಗಿಸಲಾಯಿತು. ಕರ್ನಾಟಕದಲ್ಲಿ ರೂ. 750 ಕೋಟಿ ಯಷ್ಟು ಬಂಡವಾಳ ಒದಗಿಸಲಾಯಿತು. ಇದು ಒಂದು ಸಲ ದ ‘ನೆರವು’ (ಪ್ಯಾಕೇಜ್) ಎಂದು ಘೋಷಿಸಲಾಯಿತು.

ಆಡಳಿತಾತ್ಮಕ ಸುಧಾರಣಿಗಳು: ಸಹಕಾರ ಸಂಘಗಳು ‘ಸ್ವಾಯತ್ತತೆ’ ‘ಸ್ವಾತಂತ್ರ್ಯ’ ದಿಂದ ಕಾರ್ಯನಿರ್ವಸ ಬೇಕು. ಆಡಳಿತ ಮಂಡಳಿ ಸಂಪೂರ್ಣ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅವರು ಸಂಘದ ಸದಸ್ಯರಿಗೆ ಹೊಣೆಗಾರರಾಗಿರಬೇಕು. ಇದರಿಂದ ಸಹಕಾರ ಸಂಘಗಳು ಅಭಿವೃದ್ಧಿ ಗೊಳ್ಳಬಲ್ಲವು. ಸಹಕಾರ ಸಂಘದ ‘ ಅಳಿವು’ ‘ಉಳಿವು’ ತನ್ನದೇ ಹೊಣೆಗಾರಿಕೆ ಆಗಿರುತ್ತದೆ. ಸದಸ್ಯರು ಸಂಪನ್ಮೂಲ ಕ್ರೌಡೀಕರಣದಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸ ಬೇಕು. ಎಂಬ ಆಶಯ ಗಳೊಡನೆ ರಾಜ್ಯ ಸಹಕಾರ ಕಾಯ್ದೆಗಳಲ್ಲಿ ವಿಶೇಷ ಅಧ್ಯಾಯ ಸೇರಿಸಿ ತಿದ್ದು ಪಡಿಗಳನ್ನು ತರಲಾಯಿತು.

ಸಾಂಸ್ಥಿಕ ಸುಧಾರಣಿಗಳು: ಸಂಸ್ಥೆಯಲ್ಲಿನ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ’ ಏಕ ಲೆಕ್ಕ ರೂಪ ಪದ್ಧತಿ’ (Common Accounting System-CAS) ಪರಿಚಯಿಸಲಾಯಿತು. ಇದಕ್ಕೆ ತಕ್ಕ ‘ಸಾಫ್ಟವೇರ್’ ಸೃಜಿಸಲಾಯಿತು. ಇದರಿಂದ ಸಂಘದ ಲೆಕ್ಕ ಪತ್ರಗಳು ಆಧುನಿಕವಾಗಿ ಪಾರದರ್ಶಕವಾಗಿ ನಿರ್ವಹಣೆ ಮಾಡಬಹುದಲ್ಲದೇ ಸೋರಿಕೆ, ದುರುಪಯೋಗಗಳನ್ನು ತಡೆಗಟ್ಟಬಹುದಾಗಿದೆ. ಮೊದಲ ಎರಡು ವರ್ಷ ಕೈಬರಹ ರೂಪದಲ್ಲಿ ನಿರ್ವಹಣೆ ಮತ್ತು ಮುಂದಕ್ಕೆ ಕಂಪ್ಯೂಟರೀಕರಣ. ಕಂಪ್ಯೂಟರೀಕರಣ ಪೂರ್ಣ ಉಚಿತ. ಕೇಂದ್ರ ಸರ್ಕಾರವೇ ವೆಚ್ಚ ಭರಿಸುತ್ತದೆ. ಆದರೆ ಕರ್ನಾಟಕದಲ್ಲಿ ಅನುಷ್ಠಾನದಲ್ಲಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ತಡವಾದುದರಿಂದ ‘ಉಚಿತ ಕಂಪ್ಯೂಟರೀಕರಣ’ ದಿಂದ ವಂಚಿತವಾಯಿತು. ‘ವ್ಯಾಪಾರ ಅಭಿವೃದ್ಧಿ ಯೋಜನೆ ‘ ಅಭಿವೃದ್ಧಿ ಕ್ರಿಯಾ ಯೋಜನೆ ‘ ವಿವಿಧ ಹಂತಗಳಲ್ಲಿ ಇದಕ್ಕಾಗಿ ಒಪ್ಪಂದದ (ಎಂ. ಓ ಯು-Memorandum of Understanding) ಮಾಡಿಕೊಳ್ಳಲಾಯಿತು. ಇದರಿಂದ ಎಲ್ಲ ಹಂತಗಳಲ್ಲೂ ನಿಧಿಗಳ ನಿರ್ವಹಣೆ, ಲಾಭದಾಯಕ ವ್ಯವಹರಣೆ , ಆಸ್ತಿ- ಜವಾಬ್ದಾರಿಗಳ ನಿರ್ವಹಣೆೆ ಯಲ್ಗು ಣಾತ್ಮಕ ಬದಲಾವಣೆಗಳನ್ನು ಕಾಣಲು ಸಾಧ್ಯವಾಯಿತು.

ಇವುಗಳ ಬಗ್ಗೆ ಸತತವಾಗಿ ಎರಡು ವರ್ಷ ಚುನಾಯಿತ ಆಡಳಿತ ಮಂಡಳಿ ಸದಸ್ಯರಿಗೆ , ಮುಖ್ಯ ಕಾರ್ಯನಿರ್ವಾಹಕರಿಗೆ , ಲೆಕ್ಕಿಗರಿಗೆ ‘ಸಾಮರ್ಥ್ಯ ಭಿ ವೃದ್ಧಿ’ (ತರಭೇತಿ) ಕಾರ್ಯಕ್ರಮಗಳನ್ನು ನ ಬಾರ್ಡ್ ನೆರವಿನಿಂದ ಕೈಗೊಳ್ಳಲಾಯಿತು. ಕರ್ನಾಟಕದಲ್ಲಿ ಕ.ರಾ.ಸ. ಅಪೆಕ್ಸ ಬ್ಯಾಂಕ್ ನ ‘ಎ.ಸಿ. ಎಸ್.ಟಿ.ಐ , ಈ ದಿಸೆಯಲ್ಲಿ ತೆಗೆದುಕೊಂಡ ಕಾರ್ಯಕ್ರಮಗಳು ಸ್ತುತ್ಯಾರ್ಹ ಮತ್ತು ಚರಿತ್ರೆ ಯಲ್ಲಿ ದಾಖಲಿಸುವಂತದು.

ಈ ದಿಸೆಯಲ್ಲಿ ಪುನಃ ಪ್ರಾ. ಕೃ.ಪ. ಸ.ಸಂಘಗಳ ಮಹತ್ವವನ್ನು ಅವುಗಳ ಪ್ರಾಮುಖ್ಯವನ್ನು ಗುರುತಿಸಿ ಕೇಂದ್ರ ಸರ್ಕಾರ ಉತ್ತೀಚಿಸುತ್ತಿರುವುದು ಶ್ಲಾಘನೀಯ. ಮೇಲಿನ ಹನ್ನೆಲೆಯಲ್ಲಿ ಮುಂದೆ ಉದ್ದೇಶಿತ ಕ್ರಮಗಳ ಬಗ್ಗೆ ಸಹಕಾರಿಗಳು ತಾವು ಈ ವಲಯದ ಅಭಿವೃದ್ಧಿ, ಅಂತಿಮವಾಗಿ ಸದಸ್ಯರಿಗೆ ರೈತರಿಗೆ ನೆರವಾಗುವ ಬಗ್ಗೆ ಚಿಂತಿಸಬೇಕಿದೆ.

ಕೋವಿಡ್- 19: ಅವಧಿ: ಈ ಅವಧಿಯಲ್ಲಿ ಕೇಂದ್ರ ಸರ್ಕಾರವು ಕೃಷಿ, ಕೃಷಿ ಉತ್ಪನ್ನ, ಆಹಾರ ಭದ್ರತೆ ಬಗ್ಗೆ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿತು. ರೂ 1 ಲಕ್ಷ ಕೋಟಿಯ ಕೃಷಿ ಸ್ಥಿರೀಕರಣ ನಿಧಿ ಸ್ಥಾಪಿಸಲಾಯಿತು. “ನಬಾರ್ಡ್” ಪ್ರಾ.ಕೃ.ಪ.ಸ.ಸಂಘ ಗಳನ್ನು ‘ಬಹು ಸೇವಾ ಕೇಂದ್ರ ‘ ಗಳಾಗಿ ಪರಿವರ್ತಿಸಬೇಕು. ಸಹಾರ ಸಂಸ್ಥೆಗಳಲ್ಲಿ ಗೋದಾಮುಗಳ, ಶಿಥಿಲೀಕರಣ ಘಟಕ, ಕೃಷಿ ಉತ್ಪನ್ನಗಳ , ಕೋಟಾಗಿರಿಕೆ ಉತ್ಪನ್ನಗಳ ಸಂಸ್ಕರಣೆ ಘಟಕ (ಮೌಲ್ಯ ವರ್ಧನೆ) ಸಾಗಾಣಿ ವಾಹನ, ಹೀಗೆ ಯೋಜನೆ ಗಳನ್ನು ತಯಾರಿಸಿ ನಬಾರ್ಡ್ ಅನುಮೋದನೆಯೊಂದಿಗೆ ನಬಾರ್ಡ್ ಜಿ. ಕೇ. ಸ.ಬ್ಯಾಂಕಿನ ಮೂಲಕ ಶೇ.4 ರ ಬಡ್ಡಿದರದಲ್ಲಿ ಸಾಲ ಒದಗಿಸಲು ಕ್ರಮ ಕೈಗೊಂಡಿತು. ಆಯ್ಕೆ ಮಾನದಂಡಗಳ ರೀತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತರುವ ಸಂಘಗಳಿಗೆ ಮಾತ್ರ ನೆರವು ದೊರಕಿದೆ. ಇದಕ್ಕಾಗಿ ಕ.ರಾ.ಸ. ಅಪೆಕ್ಸ ಬ್ಯಾಂಕಿನಲ್ಲಿ ಒಂದು’ಕೋಶ’ವನ್ನು ತೆರೆದು ಯೋಜನಾ ತಯಾರಿಗೆ ಮಾರ್ಗದರ್ಶನ. ಎ. ಸಿ.ಎಸ್.ಟಿ. ಐ ನಲ್ಲಿ ತರಭೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದುರ್ಬಲ ಸಂಘಗಳಿಗೆ ಪ್ರತೇಕ ಯೋಜನೆಗಳನ್ನು ಕೈಗೊಂಡಿದ್ದಲ್ಲಿ ಹೆಚ್ಚಿನ ಪ್ರಯೋಜನ ಗ್ರಾಮೀಣ ಜನತೆಗೆ ದೊರೆಯುತ್ತಿತ್ತು. ದುರ್ಬಲ ಮತ್ತು ನಷ್ಟದಲ್ಲಿರುವ ಸಹಕಾರ ಸಂಘಗಳು ತಕ್ಕ ‘ವ್ಯಾಪಾರ ಅಭಿವೃದ್ಧಿ ಯೋಜನೆ ‘ ರೂಪಿಸಿ ಕಾರ್ಯಗತಗೊಳಿಸುವ ಅವಶ್ಯಕತೆ ಇದೆ.

ಕೇಂದ್ರ ಸರ್ಕಾರದಲ್ಲಿ ‘ ಸಹಕಾರ ಸಚಿವಾಲಯ ‘ ಸ್ಥಾಪನೆ ನಂತರದ ಬದಲಾವಣೆಗಳು: ಭಾರತದಲ್ಲಿ 96000 ಪ್ರಾ.ಕೃ.ಪ. ಸಂಘಗಳು ಕಾರ್ಯನಿರ್ವಹಿಸುತ್ತವೆ. ಈ ಸಂಖ್ಯೆಯನ್ನು 03 ಲಕ್ಷ ಕ್ಕೆ ಏರಿಸಬೇಕೆಂಬುದು ಕೇಂದ್ರ ಸರ್ಕಾರದ ಆಶಯ. ಇದರಿಂದ ಭಾರತದ ಪ್ರತಿ ಗ್ರಾಮಸ್ಥರಿಗೂ ಸಂಘದ ಸೇವೆ ಸೌಲಭ್ಯಗಳು ನಿಲುಕುತ್ತವೆ ಎಂಬುದು ಮಹದಾಶಯ. ಈಗಲೂ ಪ್ರತಿ ಗ್ರಾಮ ಯಾವುದಾದರೂೂ ಪ್ರಾ.ಕೃ.ಪ.ಸ.ಸಂಘದ ವ್ಯಾಪ್ತಿಯಲ್ಲಿದ್ದರೂ ಕಾರ್ಯಕ್ಷೇತ್ರ ವಿಸ್ತಾರವಾಗಿರುವುದರಿಂದ ಅನೇಕ ಗ್ರಾಮೀಣ ಜನತೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಸತ್ಯವನ್ನು ಒಪ್ಪಬೇಕು . ಇದಕ್ಕಾಗಿ ಕರ್ನಾಟಕದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಪ್ರಾ. ಕೃ.ಪ.ಸ.ಸಂಘವನ್ನು ಸ್ಥಾಪಿಸ ಬೇಕೆಂದು ನಿಬಂಧಕರು ಸುತ್ತೋಲೆ ನಿರ್ದೇಶನ ನೀಡಿರುತ್ತಾರೆ. ಇದರ ಅನುಷ್ಠಾನದ ಬಗ್ಗೆ ಅನುಮಾನ ಮೂಡುವುದು ಸಹಜ. ಏಕೆಂದರೆ ಈ ಹಿಂದೆ ಕೂಡ ಈ ಪ್ರಯತ್ನಗಳು ವಿಫಲವಾಗಿವೆ. ಅಸ್ತಿತ್ವದಲ್ಲಿರುವ ಸಹಕಾರ ಸಂಘಗಳು ತನ್ನದೇ ಆದ ಚಾರಿತ್ರ್ಯ , ಸಾಮರ್ಥ್ಯಗಳನ್ನು ಹೊಂದಿವೆ. ಅಲ್ಲಿಯ ಸಾಮಾನ್ಯ ನಿಕಾಯದ ಅನುಮೋದನೆ ಅಗತ್ಯ. ಈ ಹಿಂದೆ ಕ.ರಾ.ಸ. ಸಂಘ ಕಾಯ್ದೆ ಯಲ್ಲಿ ‘ ಕಡ್ಡಾಯ ಒಗ್ಗೂಡಿಸುವಿಕೆ, ಬೇರ್ಪಡೆ (ಕಲಂ 14) ರಲ್ಲಿ ಈಗ ಅವಕಾಶವಿಲ್ಲ. ಕಲಂ 121 ರ ನಿರ್ದೇಶನದ ಊರ್ಜಿತದ ಬಗ್ಗೆ ಪರಿಶೀಲಿಸಬೇಕು.

1976 ರಲ್ಲಿವ್ಯವಸಾಯ ಸೇವೆ ಸಹಕಾರ ಸಂಘಗಳ ಸ್ಥಾಪನೆಯನ್ನು ಭಾರತೀಯ ರಿಸರ್ವ ಬ್ಯಾಂಕ್ ಮಾರ್ಗ ದರ್ಶನ ಗಳ ಅನ್ವಯ ‘ ಸಂಘದ ಬೈಲಾ, ಪಧಾಧಿಕರಿಗಳ ಪಟ್ಟಿಯನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ್ಯ ಪತ್ರದಲ್ಲಿ ಪ್ರಕಟಿಸಲಾಗಿತ್ತು. ಅನೇಕ ಜಿಲ್ಲೆ (ಉದಾ : ಅಖಂಡ ಧಾರವಾಡ ಜಿಲ್ಲೆ) ತಾಲ್ಲೂಕುಗಳು (ಉದಾ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕ್ ) ಗಳಲ್ಲಿ ನ್ಯಾಯಾಲಯದ ಆದೇಶದಂತೆ ಸೇವ ಸಹಕಾರ ಸಂಘಗಳು ಹಾಗೆಯೇ ಉಳಿದುಕೊಂಡವು. ಆದುದರಿಂದ ಯೋಜನೆ ಬದ್ಧ ವಾದ ‘ ಕ್ರಿಯಾ ಯೋಜನೆ ‘ ಯನ್ನು ತಯಾರಿಸಿ ಅನುಷ್ಟಾನಗಳಿಸಿ, ಗ್ರಾಮೀಣ ಜನತೆ’ ಸಹಕಾರಿಗಳು, ಸಹಕಾರಿ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಗತ ಗೊಳಿಸಿದಲ್ಲಿ ಮಾತ್ರ ಈ ಆಶಯಕ್ಕೆ ಯಶಸ್ಸು ದೊರೆಯುತ್ತದೆ.

ಮಾದರಿ ಬೈಲಾ(ಉಪ ವಿಧಿ/ ಉಪನಿಯಮ: ಕೇಂದ್ರ ಸರ್ಕಾರವು ಪ್ರಾ.ಕೃ.ಪ. ಸ ಸಂಘಗಳು ‘ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತ ‘ ವಾಗಿ ಪರಿವರ್ತನೆ ಹೊಂದುವಂತೆ ಮಾದರಿ ಉಪನಿಯಮ ಗಳನ್ನು ರಚಿಸಿ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ನಿರ್ದೇಶನಗಳೊಡನೆ ಕಳುಹಿಸಿ ಕೊಟ್ಟಿದೆ. ಕರ್ನಾಟಕದಲ್ಲಿ ಅದನ್ನು ಕನ್ನಡದಲ್ಲಿ ಕ.ರಾ.ಸ. ಕಾಯ್ದೆ ಅನುಗುಣವಾಗಿ ಅಳವಡಿಸಿ ಕ.ರಾ.ಸ.ಸಂ.ಕಾಯ್ದೆ ಕಲಂ 129 A ರೀತಿ ನಿಬಂಧಕರು ಆದೇಶ ಹೊರಡಿಸಿರುತ್ತಾರೆ. ಇದರ ಪ್ರಮುಖ ಅಂಶಗಳು ಈ ಮುಂದಿನಂತಿವೆ. ಕೃಷಿ ಎಂದರೆ ಕೇವಲ ಕೃಷಿಯಲ್ಲದೆ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿಸಾಕಾಣಿ , ಇತರೆ ಪಶು ಸಂಗೋಪನೆ , ರೇಷ್ಮೆ ಸಾಕಾಣಿ ಹೀಗೆ ಗ್ರಾಮೀಣ ಪ್ರದೇಶದ ಎಲ್ಲ ಬಡುವಿಕೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಈ ಚಟುವಟಿಕೆ ಗಳನ್ನು ನಡೆಸುವ ಪ್ರತಿ ವ್ಯಕ್ತಿಯೂ ‘ರೈತ’ ಎಂದೆನಿಸಕೊಳ್ಳುತ್ತಾನೆ. ವಾಸದ ದೃಡೀಕರಣ ( ಆಧಾರ್ ) ಎಲ್ಲೇ ಇದ್ದರೂ ಸಂಘದ ಕಾರ್ಯವ್ಯಾಪ್ತಿಯಲ್ಲಿ ಈ ಮೇಲಿನ ಚಟುವಟಿಕೆಗಳನ್ನು ಕೈಗೊಳ್ಳುವ ವ್ಯಕ್ತಿ ಸದಸ್ಯರಾಗಬಹುದು.

ಇದರಿಂದ ಈಗ ‘ಕಿಸಾನ್ ಕ್ರೆಡಿಟ್ ಕಾರ್ಡ್ ‘ ವ್ಯಾಪ್ತಿಯಲ್ಲಿ ತಂದಿರುವ ಅಲ್ಪಾವಧಿ ಬೆಳೆಸಾಲ ಅಲ್ಲದೇ ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿ ನೇಕಾರಿಕೆ , ಇತರೆ, ಗಳ ಸಾಲ ಸೌಲಭ್ಯವನ್ನು ಪಡೆಯಲುು ಸಾಧ್ಯವಾಗುತ್ತದೆ. ಅಲ್ಲದೇ ಸಂಘವು ರೈತರಿಗೆ ತಮ್ಮ ಉತ್ಪನ್ನಗಳ ಮಾರುಕಟ್ಟೆ, ಸಂಸ್ಕರಣೆ ಅನುಕೂಲ ಒದಗಿಸಿ ನ್ಯಾಯಯುತ ಬೆಲೆ ಒದಗಿಸಲು ಅವಕಾಶವಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಅವಶ್ಯ ಪೆಟ್ರೋಲ್ .ಡೀಸೆಲ್, ಅಡುಗೆ ಅನಿಲ ಸರಬರಾಜು ಮಾಡಲು, ಏಜೆನ್ಸಿ ಪಡೆಯಲು ಅವಾಶವಿರುತ್ತದೆ. ಸಂಘಗಳು ಉದ್ದೇಶಿತ ಈ ಕೆಲಸ ಕಾರ್ಯಗಳನ್ನು ಯೋಜನ ಬದ್ಧವಾಗಿ ನಿರ್ವಹಿಸಿದಲ್ಲಿ ಇವು ಗ್ರಾಮೀಣ ಜನತೆಗೆ ಉಜ್ವಲ ಭವಿಷ್ಯವನ್ನು ನೀಡಬಲ್ಲವು ಎಂಬದರಲ್ಲಿ ಅನುಮಾನವಿಲ್ಲ.

ಕಂಪ್ಯೂಟರೀಕರಣ: ಭಾರತ ಸರ್ಕಾರವು ಪ್ರಾ. ಕೃ.ಪ.ಸ.ಸಂಘಗಳ ಕಂಪ್ಯೂಟರೀಕರಣಕ್ಕೆ ಅಧ್ಯತೆ ನೀಡುತ್ತಿದೆ. ಈ ವರ್ಷದಲ್ಲಿ 63,000 ಸಂಘಗಳಿಗೆ ಉಚಿತವಾಗಿ ಸೌಲಭ್ಯ ಒದಗಿಸುವ ವಾಗ್ಧಾನ ನೀಡಿದೆ. ಈ ಸೌಲಭ್ಯ ವಂಚಿತ ಸಂಘಗಳಿಗೆ ಇದು ಪರ ಆಗಲಿದೆ. ಸಾಂಸ್ಥಿಕ ಸುಧಾರಣೆಗೆ, ತನ್ನ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಿ ವ್ಯವಹಾರ ವಿಸ್ತರಣೆಗೆ ಅನುಕೂಲವಾಗುತ್ತದೆ.

ಸವಾಲುಗಳು: ಈ ಬಹುತೇಕ ಸಹಕಾರ ಸಂಘಗಳು ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿವೆ. ಗ್ರಾಮೀಣ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ. ಠೇವಣಿಗಳು ವಾಣಿಜ್ಯ, ಗ್ರಾಮೀಣ ಖಾಸಗಿ ಬ್ಯಾಂಕ್ ಗಳ ಪಾಲಾಗುತ್ತಿದೆ. ಅಲ್ಪಾವಧಿ ಕೃಷಿ ಸಾಲ ನೆಲ ಮಟ್ಟದಲ್ಲಿ ಹಂಚಿಕೆಯಾದ ನಂತರ ನಬಾರ್ಡ್ (ಶೇ 40 ಮಾತ್ರ) ಜಿ. ಕೇ. ಸ ಬ್ಯಾಂಕ್, ಕೆ. ರಾ.ಸ. ಅಪೆಕ್ಸಬ್ಯಾಂಕ್ ತನ್ನ ನಿಧಿಯೊಂದಿಗೆ ಸೇರಿಸಿ ಕೊಡುವ ಪನರ್ಧನವನ್ನು ಅವಲಂಭಿಸಿರುತ್ತದೆ. ನೆಲ ಹಂಚಿಕೆಗೆ ದ್ರವ್ಯ ಆಸ್ತಿ (ನಗದು) ಲಭ್ಯತೆ ಇರುವುದಿಲ್ಲ. ಮಧ್ಯಮಾವಧಿ , ಗುಂಪು ಸಾಲಗಳಿಗೆ ಮಾತ್ರ ಪೂರ್ಣ ಪುನರ್ಧನ ಸೌಲಭ್ಯದೊರೆಯುತ್ತದೆ. ಆದರೆ ನೆಲ ಹಂಚಿಕೆಗೆ ಸಂಪನ್ಮೂಲ ಕೊರತೆಯಿಂದ ಪೂರ್ಣ ಬೇಡಿಕೆ ಈಡೇರಿಸಲು ಸಾಧ್ಯವಾಗುವುದಿಲ್ಲ. ಇತರೆ ಉತ್ಪನ್ನ ಮಾರುಕಟ್ಟೆ ಮೌಲ್ಯವರ್ಧನೆಗೂ ಸಂಪನ್ಮೂಲ ಕೊರತೆ ಎದುರಿಸುತ್ತವೆ. ಕರ್ನಾಟಕ ಸರ್ಕಾರವು’ ಶೂನ್ಯಬಡ್ಡಿ’ ಧರದಲ್ಲಿ ಸಾಲ ವಿತರಣೆ ಯೋಜನೆ , ಮಧ್ಯಾವಧಿ ಸಾಲಗಳಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಸಾಲವಿತರಣೆ ಯೋಜನೆ ಹಮ್ಮಿಕೊಂಡಿದೆ. ಗರಿಷ್ಟ ಮೊತ್ತವನ್ನು ಹೆಚ್ಚಳಗೊಳಿಸಿದೆ. ಸರ್ಕಾರ ಭರಿಸುವ ಬಡ್ಡಿಯಲ್ಲಿ  ಸಂಘಕ್ಕೆ  ದೊರೆಯುವ ಅಂತರ  ಬಹಳ ಕಡಿಮೆ ಇದೆ. ಇದರಲ್ಲಿ  ವ್ಯವಸ್ಥಾಪನಾ ವೆಚ್ಚ ನಿರ್ವಹಣೆ  ಕಷ್ಟಕರ. ಸರ್ಕಾರದ  ನೀತಿಯಂತೆ  ಕೃಷಿ  ಸಾಲಗಳ ಮೇಲೆ  ವಸೂಲಿಗೆ  ಕಾಯ್ದೆಯಾತ್ಮಕ  ಕ್ರಮ ಕೈಗೊಳ್ಳಲು  ಸಾಧ್ಯವಾಗುತ್ತಿಲ್ಲ. ಈ  ಪರಿಣಾಮ  ಇತರೆ  ಸಾಲಗಳ  ವಸೂಲಿಗೂ  ದಕ್ಕೆ  ತರುತ್ತಿದೆ. ಈ  ಎಲ್ಲ ಸವಾಲುಗಳನ್ನು  ಮೆಟ್ಟಿ  ನಿಂತು  ಸಂಘಗಳು   ಕಾರ್ಯನಿರ್ವಹಿಸ ಬೇಕಿದೆ. ಸದಸ್ಯರ  ಸಕ್ರಿಯ  ಪಾಲ್ಗೊಳ್ಳುವಿಕೆ ,  ಈ ಸಹಕಾರ  ಸಂಘ  ತಮ್ಮದು  ಎಂಬ  ಭಾವನೆ, ಜವಾಬ್ದಾರಿಯುತ  ಆಡಳಿತ ಮಂಡಳಿ, ಕ್ರಿಯಾತ್ಮಕ  ಸಿಬ್ಬಂದಿ  ಸಂಘವನ್ನು  ಯಶಸ್ಸಿನತ್ತ   ಕೊಂಡಯ್ಯ ಬಲ್ಲದು.

   ಬಿದ್ದುದನು  ನಿಲ್ಲಿಪುದೆ   ನರನ  ಮೃತ್ಯುಂಜಯತೆ  | 

ಶುದ್ಧಿ  ಸದೆ  ನಭ  ಧರೆಯ  ಮರ ಮರಳಿ  ಮಳೆಯಿಂ ? I 

ಗದ್ದೆ  ಕೊಯ್ಲಾಗೆ  ಮಗುಳ್ದ ದು  ಬೆಳೆಯ  ಕುಡದಿಹುದೆ ?

“Iಬಿದ್ದ  ಮನೆಯನು   ಕಟ್ಟೊ –  ಮಂಕುತಿಮ್ಮ.

ಶಶಿಧರ. ಎಲೆ.

ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ)

ನಂ. 281, ‘ ನೇಸರ ‘ ಬಾಲಾಜಿ ಹೆಚ್.ಬಿ. ಸಿ .ಎಸ್ ಲೇಔಟ್ ವಾಜರಹಳ್ಳಿ ಕನಕಪುರ ರಸ್ತೆ, 

ಬೆಂಗಳೂರು 560 109   

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More