‘ಸಾರ್ವಜನಿಕ -ಖಾಸಗಿ-ಸಹಕಾರಿ  – ಸಹ ಭಾಗಿತ್ವ’  ವನ್ನು  ಬಲಪಡಿಸುವುದು.

 

ಸಹಕಾರ  ಸಂಘಗಳು ಸದಸ್ಯರ ಮಾಲಿಕತ್ವವನ್ನು  ಹೊಂದಿರುತ್ತವೆ. ಪ್ರಜಾಸತ್ತಾತ್ಮಕ  ಆಡಳಿತ ವ್ಯವಸ್ಥೆಯನ್ನು  ಹೊಂದಿದ್ದು,  ವ್ಯವಹಾರಿಕ  ಔದ್ಯೋಗಿಕ  ಸಂಸ್ಥೆಗಳಾಗಿದ್ದು,  ಪ್ರಥಮ  ಅಧ್ಯತೆ  ಸದಸ್ಯರ  ಆಶಯ, ಆಕಾಂಕ್ಷೆ, ನಿರೀಕ್ಷೆ , ಅವಶ್ಯಕತೆಗಳನ್ನು  ಪೂರೈಸುವುದಾಗಿರುತ್ತದೆ. ಆಡಳಿತ ಮಂಡಳಿಯು  ಸದಸ್ಯರಿಗೆ  ಹೊಣೆಗಾರರು. ಆದುದರಿಂದ  ಆಡಳಿತ ಮಂಡಳಿ ಸಹಕಾರ ಸಂಘವನ್ನು ಒಂದು ಯಶಸ್ವಿ  ಔದ್ಯೋಗಿಕ  ಸಂಸ್ಥೆಯಾಗಿ  ನಡೆಸಬೇಕಾದುದು  ಇಂದಿನ  ಅವಶ್ಯಕತೆ. 21ನೇ ಶತಮಾನದ  ಮೂರನೇ ದಶಕದಲ್ಲಿ ಭಾರತವು ವಿಶ್ವದ  ಅತಿ ವೇಗ  ಆರ್ಥಿಕ ಬೆಳವಣಿಗೆಯ  ರಾಷ್ಟ್ರ ಎಂದೆನಿಕೊಂಡಿದೆ. ಮೂರು  ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ  ಐದು ಟ್ರಿಲಿಯನ್  ಆರ್ಥಿಕತೆ ಯತ್ತ  ದಾಪುಗಾಲು ಇಡುತ್ತಿರುವ  ಈ ಸಮಯದಲ್ಲಿ  ಸುಸ್ಥಿರ  ಅಭಿವೃದ್ಧಿ ಗುರಿಗಳ  ಸಾಧನೆಯ  ಜವಾಬ್ದಾರಿಯೂ  ನಮ್ಮ  ಮೇಲಿದೆ. ಈ ಸಾಧನೆಯಲ್ಲಿ ‘ಸಹಕಾರ’ ದ ಪಾಲನ್ನು ಅಧಿಕ  ಗೊಳಿಸುವುದು  ತನ್ಮೂಲಕ  ಆರ್ಥಿಕ  ಅಭಿವೃದ್ಧಿಯೊಡನೆ  ಸಾಮಾಜಿಕ ನ್ಯಾಯವನ್ನು  ಒದಗಿಸುವ ಜವಾಬ್ದಾರಿ ‘ಸಹಕಾರ ಆಂದೋಲನ ‘ದ್ದಾಗಿದೆ.

ಭಾರತದಲ್ಲಿ     ಉದಾರೀಕರಣದ    ಆರ್ಥಿಕ ನೀತಿಯ   ಪಾಲನೆಯಿಂದ ಆರ್ಥಿಕತೆಯ  ಬೆಳವಣಿಗೆಯಾಗುತ್ತಿದೆ. ಈಗಿನ  ಬೆಳವಣಿಗೆ ಧರದಲ್ಲಿ ಇದೇ  ರೀತಿಯಲ್ಲಿಯೇ  ಮುಂದುವರಿಕೆಯಾದಲ್ಲಿ  ಭಾರತವು ವಿಶ್ವದಲ್ಲಿಯೇ   2050 ಕ್ಕೆ  ಅತ್ಯಂತ  ಅಸಮತೋಲನ  ದೇಶವಾಗುತ್ತದೆ (ಕಳೆದ  ಐದು ವರ್ಷಗಳಲ್ಲಿ  ಭಾರತದ ಅತ್ಯಂತ ಸಿರಿವಂತ ಶೇ 01 ಜನತೆ ಯ   ಶ್ರೀಮಂತಿಕೆಯು ಶೇ 40  ಇದ್ದದ್ದು ಶೇ 60 ಕ್ಕೆ  ಏರಿಕೆಯಾಗಿದೆ. ಭಾರತದ  ಶೇ 10  ಶ್ರೀಮಂತರು  ಉಳಿಕೆ  ಶೇ 90 ಜನರ  ಶ್ರೀಮಂತಿಕೆಯ  ನಾಲ್ಕು ಪಟ್ಟು  ಶ್ರೀಮಂತಿಕೆಯನ್ನು ಹೊಂದಿರುತ್ತಾರೆ ಎಂದು  ಅಂದಾಜಿಸಲಾಗಿದೆ. ಇದರಿಂದ  ಸಾಮಾಜಿಕ  ಮತ್ತು ರಾಜಕೀಯ  ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತದೆ. ಇದನ್ನು  ತಡೆಗಟ್ಟುವುದು  ಎಲ್ಲರ  ಕರ್ತವ್ಯವಾಗಿರುತ್ತದೆ ಮತ್ತು ‘ ಸಹಕಾರ  ಆಂದೋಲನ ‘ ಈ ದಿಸೆಯಲ್ಲಿ  ಪ್ರಮುಖ  ಸಾಧನವಾಗಬಲ್ಲದು.

ಭಾರತದಲ್ಲಿ ಸಹಕಾರ ಆಂದೋಲನ ಸರ್ಕಾರದ ಶ್ರೀರಕ್ಷೆ ಯಲ್ಲಿಯೇ ಬೆಳೆದು ಬಂದಿದೆ. ‘ ಹಸಿರು ಕ್ರಾಂತಿ’ ‘ಶ್ವೇತ ಕ್ರಾಂತಿ’ ‘ನೀಲಿ ಕ್ರಾಂತಿ’ ‘ಹಳದಿ ಕ್ರಾಂತಿ’ ಗೆ ‘ ಸಹಕಾರ ‘ ವಾಹಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. 90ರ ದಶಕದಿಂದ ಈಚೆಗೆ ಸರ್ಕಾರ ಪಂಚವಾರ್ಷಿಕ ಯೋಜನೆಗಳಲ್ಲಿ ನೀಡುತ್ತಿದ್ದ ಆರ್ಥಿಕ ನೆರವುಗಳನ್ನು ನಿಲ್ಲಿಸಿದೆ. ‘ ಸಹಕಾರ ಸಂಸ್ಥೆ ‘ಗಳು ಸ್ಪರ್ಧಾತ್ಮಕ ಯುಗದಲ್ಲಿ ಸ್ವಾವಲಂಭನೆಯಿಂದ ನಡೆಯ ಬೇಕು ಎಂಬದು ಆಶಯ. ಸ್ಪರ್ಧೆಯಲ್ಲಿ ‘ಮಾಡು ಅಥವ ಮಡಿ’ ‘ ಸಮೃದ್ಧ ಹೊಂದು ಅಥವ ನಶಿಸು’ (DO or Die, Flourish or Perish ) ವಾತಾವರಣ ನಿರ್ಮಾಣವಾಗಿದೆ.

ಉದಾ ಹರಣೆಗೆ ಕರ್ನಾಟಕದಲ್ಲಿ 508 03 ಸಹಕಾರ ಸಂಘಗಳಿದ್ದು ಒಟ್ಟು 2,43,95000 ಸದಸ್ಯರಿದ್ದಾರೆ. ರೂ 6300 ಕೋಟಿ ಷೇರು ಬಂಡವಾಳ ವಿದೆ. ಅದರಲ್ಲಿ ಲಾಭದಲ್ಲಿರುವವು 260 40 ಸ.ಸಂಘಗಳು. ಇದರಲ್ಲಿಯೂ ಗೋಚರವಾಗುವ ವಲಯ ಗಳೆಂದರೆ ಅಲ್ಪಾವಧಿ ಕೃಷಿ ಪತ್ತು ಮತ್ತು ಹಾಲು ಉತ್ಪಾದಕ ವಲಯಗಳು . ಈ ವಲಯಗಳು ಪರೋಕ್ಷವಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅವಲಂಭಿಸಿವೆ.

ಮೀನುಗಾರಿಕೆ ವಲಯ ಸರ್ಕಾರದ ನೀತಿಯನ್ನು ಅವಲಂಭಿಸಿದೆ. ಕೃಷಿಯೇತರ ಪತ್ತು ವಲಯ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವು ಹಗರಣಗಳು ಇಡೀ ಕ್ಷೇತ್ರಕ್ಕೆ ಕಳಂಕ ತರುತ್ತಿದೆ. ಇತರೆ ಕೃಷಿ , ತೋಟಗಾರಿಕೆ, ಕೃಷಿ ಪೂರಕ , ಪಶು ಸಂಗೋಪನ ವಲಯಗಳು ಬಹು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಲಾಗದು. ನೇಕಾರಿಕೆ, ಕೈಗಾರಿಕೆ, ಗುಡಿಕೈಗಾರಿಕೆ , ಸಕ್ಕರೆ ವಲಯಗಳು ನೇಪಥ್ಯಕ್ಕೆ ಸೇರಿವೆ ಎಂದರೆ ತಪ್ಪಾಗಲಾರದು. ಈ ಪರಿಸರದಲ್ಲಿ ಸಹಕಾರ ಸಂಘಗಳು ತಮ್ಮ ವ್ಯಾಪಾರ, ವ್ಯವಹಾರಗಳನ್ನು ಹಿಗ್ಗಿಸಿಕೊಂಡು ಸದಸ್ಯರ ಆಶೋತ್ತರಗಳನ್ನು ಈಡೇರಿಸುವ ಬಗೆ ಹೇಗೆ? ಎಂಬ ಚಿಂತನೆ ಮಾಡುವುದರ ಸಹಜ. ಪುನಃ ನಾವು ಎ.ಡಿ.ಗೊರವಾಲ ರವರು 1950ರ ದಶಕದಲ್ಲಿ ತಿಳಿಸಿದಂತೆ ‘ಸಹಕಾರ ಸಂಘಗಳು ವಿಫಲವಾಗಿವೆ, ಆದರೆ ಯಶಸ್ವಿಯಾಗಲೇ ಬೇಕು’ ಎಂಬ ಕಾಲಘಟ್ಟಕ್ಕೆ ತಲುಪಿದ್ದೇವೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಪರಿಹಾರವಾಗಿ ಸರ್ಕಾರಗಳು ಹೇಗೆ ‘ಖಾಸಗಿ ಸಹಭಾಗಿತ್ವದಲ್ಲಿ ‘ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದೆಯೋ ಹಾಗೆ ‘ಉದಾ; ರಸ್ತೆ, ಕೆರೆ, ವಿಮಾನ ನಿಲ್ದಾಣ, ರೈಲು, ಸಾರಿಗೆ . ಸಹಕಾರ ಸಂಘಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಯೋಗ ದೊಂದಿಗೆ ಯಶಸ್ವಿ ಕಾರ್ಯಾಚರಣಿ ನಡೆಸಿ ಸದಸ್ಯರಿಗೆ ಸೇವೆ , ಸವಲತ್ತು ಗಳನ್ನು ಒದಗಿಸಬಹುದಾಗಿದೆಯಲ್ಲವೇ? ಇದರ ಬಗ್ಗೆ ಸಹಕಾಾರಿ ಗಳು ಚಿಂಥನ – ಮಂಥನ ನಡೆಸಿ ಕಾರ್ಯೊನ್ಮುಖ ವಾಗುವುದು ಈ ದಿನ ಅವಶ್ಯಕತೆಯಲ್ಲವೇ?

ಈ ಚಿಂತನೆಗಳನ್ವಯ ಕ.ರಾ.ಸ.ಸಂ. ಕಾಯ್ದೆ 1959 ರಲ್ಲಿ 2003 – 04 ರಲ್ಲಿ ಆದ ತಿದ್ದು ಪಡಿಯಂತೆ ಕಲಂ 26 A , ಸಹಕಾರ ಸಂಘಗಳು ವ್ಯವಹಾರಿಕೆ ಪಾಲುದಾರಿಕೆ ಮಾಡಿಕೊಳ್ಳಲು, ಕಲಂ 26 B ಇತರೆ ಸಂಸ್ಥೆಗಳೊಡನೆ ಸಹೋಧ್ಯಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಲ್ಪಾವಧಿ ಕೃಷಿ ರಚನೆ : ಪ್ರಾ.ಕೃ.ಪ.ಸ.ಸಂಘಗಳು; ಇತ್ತೀಚೆಗಿನ ಸರ್ಕಾರದ ನೀತಿಯಂತೆ , ಗ್ರಾಮೀಣ ಜನತೆಯ ಕಟ್ಟ ಕಡೆಯ ವ್ಯಕ್ತಿಯನ್ನು ಮುಟ್ಟಬಲ್ಲ ಸಾಂಸ್ಥಿಕ ವ್ಯವಸ್ಥೆ ಎಂದರೆ ಈ ಸಹಕಾರ ಸಂಘಗಳು.

ಇದರ ಬಲವರ್ಧನೆ ಯಿಂದ ಇದನ್ನು ಸಾಧಿಸಬಹುದಾಗಿದೆ. ಆದುದರಿಂದ ಕೇಂದ್ರದಲ್ಲಿ ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಸ್ಥಾಪನೆ ಯಾ ದಾಗಿನಿಂದ ಇದಕ್ಕೆ ಪ್ರಾಮುಖ್ಯ ದೊರೆತಿದೆ. ಕೇಂದ್ರದಲ್ಲಿ ರೂ 1 ಲಕ್ಷ ಕೋಟಿಯ ಕೃಷಿ ಪರಿಕರ ಅಭಿವೃದ್ಧಿ ನಿಧಿ ಸೃಷ್ಟಿಯಾಗಿದೆ. (ಇದರಲ್ಲಿ ಶೇ15 ಮಾತ್ರ ಉಪಯೋಗಿಸಲಾಗಿದೆ ಎಂದು ಒಂದು ವರದಿ ತಿಳಿಸುತ್ತದೆ.) ಸಹಕಾರ ಸಂಘಗಳು ‘ವಿವಿದೊದ್ದೇಶ ಸೇವಾ ಕೇಂದ್ರ (Multi service Centers -MSC’s) ಗಳಾಗಿ ಕಾರ್ಯನಿರ್ವಹಿಸಬೇಕು. ಅದಕ್ಕೆ ಅಗತ್ಯ ಪರಿಕರಗಳ (ಗೋದಾಮು,ಶೈತ್ಯಾಗಾರ, ಸಂಸ್ಕರಣ ಘಟಕ, ಯಂತ್ರೋಪಕರಣ, ಸಾಗಾಣಿ) ನಿರ್ಮಾಣಕ್ಕೆ ಅಗತ್ಯವಾದ ಹೂಡಿಕೆ ಮೆದು ಸಾಲ ಒದಗಿಸುವುದು (ಕರ್ನಾಟಕದಲ್ಲಿ 198 ಸ.ಸಂ. ಗಳು ಈ ಸೌಲಭ್ಯ ಪಡೆದಿವೆ ಎಂಬ ಮಾಹಿತಿ ಇದೆ.) ಆಗಿದೆ. ತದನಂತರದಲ್ಲಿ ಕೇಂದ್ರ ಸರ್ಕಾರ ಮಾದರಿ ಉಪನಿಯಮ (ಬೈಲಾ ) ತಯಾರಿಸಿ ರಾಜ್ಯಗಳಿಗೆ ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಅದರಲ್ಲಿನ ‘ ಕೃಷಿ’ ವ್ಯಾಖ್ಯಾನದಂತೆ ಕೃಷಿ ಅಲ್ಲದೆ ಇತರೆ ಕೃಷಿ ಪೂರಕ , ಪಶು ಸಂಗೋಪನೆ, ಮೀನುಗಾರಿಕೆ, ನೇಕಾರಿಕೆ, ಹೀಗೆ ಹಲವು ಗ್ರಾಮೀಣ ಚಟುವಟಿಕೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ಅಲ್ಲದೆ ‘ರೈತ’ ವ್ಯಾಖ್ಯಾನ ದೊಳಗೆ ಈ ವೃತ್ತಿ ಗಳನ್ನು ಕೈಗೊಳ್ಳುವ ಎಲ್ಲರನ್ನೂ ತರಲಾಗಿದೆ. ಅಲ್ಲದೆ ಇತರೆ ಖಾಸಗಿ, ಸರ್ವಾಜನಿಕ ಸಂಸ್ಥೆಗಳೊಡನೆ ಸಹೋಧ್ಯಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಸ.ಸಂ . ಗಳು ಯಾವುದೇ ಚಟುವಟಿಕೆಗಳಿಗೆ ಸೀಮಿತ ಗೊಳಿಸದೆ ಗ್ರಾಮೀಣ ಜನತೆಗೆ ಅಗತ್ಯ ಸೇವೆ , ಸೌಕರ್ಯಗಳು, ಪರಿಕರಗಳ ಮೂಲಕ ಗ್ರಾಮೀಣ ಪ್ರದೇಶದ ಎಲ್ಲ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ ನ್ಯಾಯಯುತ (remunerative price) ಬೆಲೆ ದೊರಕಿನ ಕೊಡಲು ಸಾಧ್ಯವಾಗುತ್ತದೆ. ಸಹಕಾರ ಸಂಘದಲ್ಲಿ ಚಟುವಟಿಕೆ ಕೈಗೊಳ್ಳಲು ಬಂಡವಾಳಕೊರತೆ, ಸ್ಥಿರ ಆಸ್ತಿಯ (ನಿವೇಶನ, ಪರಿಕರ, ಯಂತ್ರೋಪಕರಣ) ಮತ್ತು ಸಂಸ್ಕರಣ ಘಟಕಗಳು ಲಭ್ಯವಿದ್ದಲ್ಲಿ ಖಾಸಗಿ , ಬಹುರಾಷ್ಟ್ರೀಯ ಚಿಲ್ಲರೆ ಮಾರಾಟ ಕಂಪನಿಗಳೊಡನೆ ಒಡಂಬಡಿಕೆ ಮಾಡಿಕೊಂಡು ವ್ಯವಹಾರ ನಡೆಸುವುದರಿಂದ ಸಹಕಾರ ಸಂಘದ ಉದ್ದೇಶವನ್ನು ಈ ಡೇರಿಸಿ ಕೊಳ್ಳಬಹುದಾಗಿದೆ. ಆದರೆ ಈ ಚಟುವಟಿಕೆ ಮತ್ತು ಒಡಂಬಡಿಕೆಗಳು ಆರ್ಥಿಕವಾಗಿ ಕಾರ್ಯಸಾಧವಾಗ ಬೇಕು. ಸಂಘಕ್ಕೆ ಹೂಡಿಕೆಗೆ ತಕ್ಕ ಲಾಭ ತರುವಂತಿರ ಬೇಕು. ಯಾವುದೇ ಕಾರಣದಿಂದ ಈ ಒಡಂಬಡಿಕೆ , ಒಪ್ಪಂದ, ಕರಾರು, ಚಟುವಟಿಕೆಗಳು ಸಹಕಾರದ ಮೂಲ ತತ್ವ, ಸಹಕಾರದ ಮೂಲಭೂತ ಗುಣಗಳಿಗೆ ಧಕ್ಕೆ ತರುವಂತೆ ಇರಬಾರದು. ಠೇವಣಿ ಧಾರರಿಗೆ , ಆರ್ಥಿಕ ನೆರವು ನೀಡುವ ಬ್ಯಾಂಕಿನ ಹಿತಾಸಕ್ತಿಗೆ ವಿರುದ್ಧವಾಗಿರಬಾರದು ಮತ್ತು ಹಿತಾಸಕ್ತಿಗೆ ಪೂರಕವಾಗಿರುವಂತೆ ಎಚ್ಚರ ವಹಿಸತಕ್ಕದ್ದು, ಈ ದಿಸೆಯಲ್ಲಿ ಆಲೋಚಿಸಿ ಈ ಸಹಕಾರ ಸಂಘಗಳಿಗೆ ‘ಮಾದರಿ ಉಪನಿಯಮ ‘ ಗಳ ರೀತಿ ‘…….. ವಿವಿದೋದ್ದೇಶ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘ ‘ ಎಂದು ಹೆಸರಿಸಲಾಗಿದೆ.

ಹಾಲು  ಉತ್ಪಾದನೆ (ಹೈನುಗಾರಿಕೆ ) : ವಲಯ; ಕರ್ನಾಟಕದಲ್ಲಿ  ಮೂರು ಹಂತದ ‘ ಅಮುಲ್ ‘  ಮಾದರಿ  ವ್ಯವಸ್ಥೆಯನ್ನು  ಯಶಸ್ವಿಯಾಗಿ  ಅನುಷ್ಠಾನಗೊಳಿಸಲಾಗಿದೆ. ಇದು  ಕರ್ನಾಟಕದ  ಹೆಗ್ಗಳಿಕೆ. ‘ನಂದಿನಿ’  ಎಂಬಂದು  ಒಂದು ‘ಬ್ರಾಂಡ್ ‘ ಆಗಿ  ತನ್ನದೇ  ಅಸ್ಮಿತೆಯನ್ನು  ಗಳಿಸಿದೆ. ವ್ಯವಹಾರ  ಗಾತ್ರದಲ್ಲಿಯೂ ಸಹಕಾರ  ವ್ಯವಸ್ಥೆಯಲ್ಲಿ  ‘ಅಮುಲ್ ‘ ಗುಜರಾತ್ ಹಾಲು  ಉತ್ಪಾದಕ ಮಹಾ ಮಂಡಳಿ ನಂತರದ  ಸ್ಥಾನವನ್ನು  ಪಡೆದಿದೆ. ಈ  ಮೂರು  ಹಂತದ  ವ್ಯವಸ್ಥೆಯಲ್ಲಿ ಇದರ  ತಳಹದಿ (ಬುನಾದಿ ) ಎಂದರೆ  ಪ್ರಾಥಮಿಕ  ಹಾಲು ಉತ್ಪಾದಕರ  ಸಹಕಾರ  ಸಂಘಗಳು . ಈ ಸಂಘಗಳ  ಬಹು ಮುಖ್ಯ  ಕರ್ತವ್ಯ

ವೆಂದರೆ ರೈತರಿಗೆ  ಹೈನುಗಾರಿಕೆಗೆ  ಸಂಬಂಧಿಸಿದಂತೆ  ಒಕ್ಕೂಟದಿಂದ  ಒದಗಿಸುವ  ಸಕಲ ಸೌಕರ್ಯ, ಸವಲತ್ತುಗಳನ್ನು  ರೈತರಿಗೆ ತಲುಪಿಸುವುದು  ಮತ್ತು ಹಾಲು  ಉತ್ಪಾದನೆಯನ್ನು  ಅಧಿಕಗೊಳಿಸಿ , ಶುದ್ಧ ಗುಣಾತ್ಮಕ ಹಾಲನ್ನು  ಸಂಗ್ರಹಿಸಿ  ಒಕ್ಕೂಟಕ್ಕೆ  ಸರಬರಾಜು  ಮಾಡುವುದಾಗಿದೆ. ಈ ಕರ್ತವ್ಯದಲ್ಲಿ ಕಿಂಚಿತ್ತು ಲೋಪ  ಬರುವಂತಿಲ್ಲ. ಬಂದರೆ  ಇಡೀ  ವ್ಯವಸ್ಥೆಯೇ  ಕುಸಿದು ಬಿದ್ದಂತಾಗುತ್ತದೆ. ನೆರೆಯ ರಾಜ್ಯಗಳಲ್ಲಿ  ಈಗಾಗಲೆ
ಈ ಅವಸ್ಥೆಯನ್ನು ಕಾಣುತ್ತಲಿದ್ದೇವೆ. ಖಾಸಗಿ ವಲಯ  ಈ ವ್ಯವಸ್ಥೆಯನ್ನು  ಹಾಳುಗೆಡಹಲು  ಹೊಂಚು  ಹಾಕುತ್ತಿದೆ. ಆದುದರಿಂದ ಈ  ಹಂತದಲ್ಲಿ  ಖಾಸಗಿಯೊಡನೆ  ಯಾವುದೇ  ರೀತಿಯ  ಒಡಂಬಡಿಕೆ   ಸ್ವಾಗತಾರ್ಹವಲ್ಲ. ಆದರೆ  ಒಕ್ಕೂಟದ  ಹಂತದಲ್ಲಿ  ಸಂಸ್ಕರಣೆ,  ಮಾರುಕಟ್ಟೆ  , ಸಾಗಾಣಿ   ಚಟು ವಟಿಕೆಗಳಿಗೆ  ಖಾಸಗಿ ಅಥವಾ ಇತರೆ ಸಹಕಾರ ಅಥವ  ಸಾರ್ವಜನಿಕ  ವಲಯಗಳೊಡನೆ  ಸಹೋಧ್ಯಮ , ಪಾಲುದಾರಿಕೆ, ಬಡಂಬಡಿಕೆಗಳು  ಸ್ವಾಗತಾರ್ಹ. ಈ  ವ್ಯವಸ್ಥೆ ಇಲ್ಲದಲ್ಲಿ ಗ್ರಾಹಕರನ್ನು  ಸೆಳೆಯಲು  ಸಾಧ್ಯವಾಗುವುದಿಲ್ಲ. ಹಾಗೆಯೇ ರಾಜ್ಯ ಮಹಾ ಮಂಡಳ (ಕೆ.ಎಂ.ಎಫ್) ಅಂತರ ಒಕ್ಕೂಟಗಳ ಸಮನ್ವಯ, ಅಂತರ ರಾಜ್ಯ ಮಾರಾಟ  , ರಪ್ತು  ಜವಾಬ್ದಾರಿಗಳನ್ನು ಹೊಂದಿದ್ದು  ಈ  ಕರ್ತವ್ಯಗಳ  ಸಾಧನೆಗೆ  ಖಾಸಗಿ, ಸಾರ್ವಜನಿಕ  ವಲಯ ಗಳೊಡನೆ ಸಹಬಾಗಿತ್ವ  ಹೊಂದುವ  ಅವಶ್ಯಕತೆ ಇದೆ. ಇತ್ತೀಚೆಗಿನ ವರದಿಯಂತೆ  ಕೆ.ಎಂ.ಎಫ್. ಸೌರಶಕ್ತಿ ತಯಾರಿಕೆಗೆ  ಖಾಸಗಿ  ಕಂಪನಿಯೊಡನೆ  ಸಹಭಾಗಿತ್ವ ವಹಿಸಲಿದೆ  ಎಂಬುದಾಗಿದೆ. ಈ ರೀತಿಯ ‘ಹಸಿರು’ ಉಪಕ್ರಮಗಳು  ಸ್ವಾಗತಾರ್ಹ. ಮೇಲಿನ  ಕಂಡಿಕೆಯಲ್ಲಿ  ವಿವರಿಸಿರುವಂತೆ  ಎಚ್ಚರಿಕೆ ಕ್ರಮಗಳನ್ನು  ಪಾಲಿಸುವುದು  ಸಹಹಾರ  ಚಳುವಳಿ ದೃಷ್ಟಿಯಿಂದ  ಒಳ್ಳೆಯದು. ಬೆಂಗಳೂರು  ಹಾಲು ಒಕ್ಕೂಟವು ‘ಅಮುಲ್ ‘ಗೆ  ಚೀಸ್  ಉತ್ಪನ್ನ ವನ್ನು ತಯಾರಿಸಿ ಕೊಡುತ್ತಿದೆ. ಇದು  ಸಹಭಾಗಿತ್ವಕ್ಕೆ ಅತ್ಯುನ್ನುತ ಉದಾಹರಣೆಯಾಗಿದೆ.

ತಾಲ್ಲೂಕ್ ವ್ಯವಸಾಯ ಉತ್ಪನ್ನ ಸಹಕಾರ ಸಂಘಗಳು; ತಾಲ್ಲೂಕಿಗೆ ಒಂದರಂತೆ (ಕೊಡಗು ಒಂದು ಅಪವಾದ ಪ್ರತಿ ನಾಡಿಗೆ ಒಂದು ಮಾರುಕಟ್ಟೆ ಸಹಕಾರ ಸಂಘವಿದೆ) ಈ ಸಹಕಾರ ಸಂಘಗಳನ್ನು ಸ್ಥಾಪಿಸಿದ್ದು ‘ಹಸಿರು ಕ್ರಾಂತಿ’ಗೆ ತಮ್ಮದೇ ಆದ ಕೊಡುಗೆ ನೀಡಿರುತ್ತವೆ. ಆದರೆ ಈಗ ಬಹುತೇಕ ತಮ್ಮ ಎಲ್ಲ ಚಟುವಟಿಕೆ ಕಳೆದುಕೊಂಡು ನಿಷ್ಕ್ರಿಯ ಗೊಳುತ್ತಿವೆ. ತಮ್ಮದೇ ಆದ ನಿವೇಶನ , ಗೋದಾಮುಗಳನ್ನು ಹೊಂದಿವೆ. ಇದರ ಸದ್ಭಳಕೆ ಬಹಳ ಮುಖ್ಯವಾಗಿದೆ. ಇವುಗಳನ್ನು ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣಿ, ಮಾರಾಟ, ಸಾಗಣಿಗೆ ಖಾಸಗಿ/ಸಹಕಾರ/ಸಾರ್ವಜನಿಕ ಸಂಸ್ಥೆಗಳ, ಸದಸ್ಯ ಪ್ರಾಕೃ.ಪ.ಸ.ಸಂ.

ರೈತ ಉತ್ಪಾದನೆ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಂಡು ಚಟುವಟಿಕೆ ಕೈಗೊಳ್ಳಬಹುದು. ಅನೇಕ ಬಹುರಾಷ್ಟ್ರೀಯ ಕಂಪನಿ (ಉದಾ: ವಾಲ್ ಮಾರ್ಟ್ ) ಖಾಸಗಿ ಕಂಪನಿಗಳು (ಉದಾ : ರಿ ಲೈನ್ಸ್ ) ಚಿಲ್ಲರೆ ಮಾರಾಟದಲ್ಲಿ ತೊಡಗಿಸಿಕೊಂಡಿವೆ. ಇವುಗಳೊಡನೆ ವ್ಯವಹರಿಸಿ ಒಡಂಬಡಿಕೆ ಮಾಡಿಕೊಂಡು ಸರಬರಾಜು ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ರೈತ ಉತ್ಪಾದಕ ಕಂಪನಿಗಳು, ಖಾಸಗಿಯವರು ಈ ಅವಕಾಶಗಳನ್ನು ಉಪಯೋಗಿನ ಕೊಳ್ಳುತ್ತಿದ್ದಾರೆ. ವಿಶಾಲವಾದ ಗೋದಾಮುಗಳು , ಪ್ರಾಂಗಣಗಳು ಈ ಸಂಘಗಳು ಹೊಂದಿದ್ದು ಸೌರಶಕ್ತಿ ಉತ್ಪಾದನೆ ಘಟಕಗಳ ಸ್ಥಾಪನ ಬಗ್ಗೆ ಆಲೋಚಿಸಬಹುದಾಗಿದೆ.

ವಾಣಿಜ್ಯ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳು: ಅಡಿಕೆ, ಕೋಕೋ, ರಬ್ಬರ್, ಕಾಫಿ, ಏಲಕ್ಕಿ , ಮೆಣಸು, ಮುಂತಾದ ಉತ್ಪನ್ನಗಳ ಮಾರುಕಟ್ಟೆ ಹೇರಳವಾಗಿದ್ದು, ಆಧುನಿಕ ಸಂಸ್ಕರಣಸಂ ಗ್ರಹಣೆ, ಮಾರಾಟಕ್ಕೆ ಈ ಸಹಕಾರ ಸಂಘಗಳು ಯೋಚಿಸಿ, ಯೋಜಿಸಬಹುದಾಗಿದೆ. ಇದಕ್ಕೆ ಖಾಸಗಿ ವಲಯದಲ್ಲಿ ಹೇರಳ ಅವಕಾಶಗಳಿವೆ. ‘ಕ್ಯಾಂಪ್ಕೊ ‘ ತನ್ನ ಚಾಕಲೇಟ್ ಘಟಕದಲ್ಲಿ ‘ ನೆಸ್ಲೆ ‘ ಗೆ ಚಾಕಲೇಟ್ ತಯಾರಿಸಿ ಕೊಡುತ್ತಿರುವುದು ಸಹವಾಗಿ ತ್ವ ಸಾಧನೆಗೆ ಉತ್ತಮ ಉದಾಹರಣೆಯಾಗಿದೆ.

ಕೃಷಿಯೇತರ ಪತ್ತಿನ  ಸಹಕಾರ ಸಂಘಗಳು/ಪಟ್ಟಣ  ಸಹಕಾರ  ಬ್ಯಾಂಕುಗಳು : ಈ ಸಂಸ್ಥೆಗಳು  ಪಾರಂಪರಿಕ  ಬ್ಯಾಂಕಿಂಗ್  ಚಟುವಟಿಕೆ  ಹೊರತು ಪಡಿಸಿ  ವಿಮೆ, ಆರ್ಥಿಕ ಯೋಜನೆ, ಹೂಡಿಕೆಗಳ ಸಲಹೆ, ಮತ್ತು  ಇತರೆ ಆರ್ಥಿಕ ಸೇವೆ ಮತ್ತು  ಉತ್ಪನ್ನಗಳನ್ನು  ಸದಸ್ಯರ ಬದಲಾಗುತ್ತಿರುವ ಅವಶ್ಯಕತೆಗಳನ್ನು  ಅನುಸರಿಸಿ  ಅವರಂತೆ  ಪೂರೈಕೆ ಮಾಡಲು  ಇತರೆ  ಸಂಸ್ಥೆ / ಬ್ಯಾಂಕ್ ಗಳ  ಮೊರೆ ಹೋಗುವುದು  ಸಹಕಾರ ಸಂಸ್ಥೆಗಳಿಗೆ ಅನಿವಾರ್ಯವಾಗಿದೆ. ಇದರಲ್ಲಿ ಆಧುನಿಕ ಮಾಹಿತಿ  ತಂತ್ರಜ್ಞಾನದ ಉಪಯುಕ್ತತೆ  ಅನಿವಾರ್ಯವಾಗಿದೆ. ಆಧುನಿಕ ಗೊಳ್ಳದಿದ್ದಲ್ಲಿ  ಅಸ್ತಿತ್ವ ವೇ ಇಲ್ಲದಂತಾಗುತ್ತದೆ. ಇ- ಸ್ಟಾಂಪ್ ವಿತರಣೆ ವ್ಯವಸ್ಥೆ, ಇತರೆ ನಗದು ವರ್ಗಾವಣೆ (ನೆಫ್ಟ್, ಆರ್ ಟಿ ಜಿ ಎಸ್ , ನೆಟ್ ಬ್ಯಾಂಕಿಂಗ್ ) ವ್ಯವಸ್ಥೆಗಳನ್ನು  ಇತರೆ ಬ್ಯಾಂಕ್/ ಸಂಸ್ಥೆಗಳ ಸಹಯೋಗದಲ್ಲಿ  ಈ ವಲಯದಲ್ಲಿ ಕೈಗೊಂಡಿರುವುದು  ಉತ್ತಮ  ಉದಾಹರಣೆಯಾಗಿದೆ.

ಈ  ಸ್ಪರ್ಧಾತ್ಮಕ ಪ್ರಪಂಚದಲ್ಲಿ  ಉಳಿಯಬೇಕಾದಲ್ಲಿ, ಅಗತ್ಯ ಬಂಡವಾಳ  ಕ್ರೋಡಿಕರಣ, ಅದರ ಸದ್ಭಳಕೆ ಅವರಿಂದ  ಸದಸ್ಯರಿಗೆ  ಸೇವೆ  ಸೌಲಭ್ಯಗಳನ್ನು  ಒದಗಿಸಬೇಕಾದಲ್ಲಿ  ಸಹಕಾರ  ಸಂಘಗಳು ಇತರೆ ವಲಯ/ಸಂಸ್ಥೆಗಳೊಡನೆ  ಕೈ ಜೋಡಿಸಲೇ  ಬೇಕಾಗುತ್ತದೆ. ಎರಡೂ ಸಂಸ್ಥೆಗಳಲ್ಲಿ ಕೊಡು- ಕೊಳ್ಳು(win-win situation) ವ  ರಾಜಿ, ಸಂಧಾನ  ಒಡಂಬಡಿಕೆ , ಒಪ್ಪಂದಗಳನ್ನು  ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಯಾವುದೇ  ಕಾರಣದಿಂದ ಸ್ವಹಿತಾಸಕ್ತಿ , ಅಪ್ರಮಾಣಿಕತೆ  ಸೋಂಕ ಬಾರದು. ಅನೇಕ ವೇಳೆಯಲ್ಲಿ  ಸಂಘರ್ಷಗಳಲ್ಲಿ  ಒಳಗೊಂಡು  ಶಾಶ್ವತವಾಗಿ  ತನ್ನ  ಸ್ಥಿರ ಆಸ್ತಿ ಕಳೆದುಕೊಂಡ ಉದಾಹರಣೆಗಳು  ನಮ್ಮ ಮುಂದಿವೆ. ಆದುದರಿಂದ  ಅತಿ ಎಚ್ಚರಿಕೆಯಿಂದ  ಕಾಯ್ದೆ ಯಾತ್ಮಕವಾಗಿ, ಲಾಭದಾಯಕವಾಗಿ , ದೂರಾಲೋಚನೆಯಿಂದ  ನಿರ್ಧಾರಗಳನ್ನು  ಕೈಗೊಂಡು  ತಮ್ಮ  ಸಹಕಾರ ಸಂಘದ  ತನ್ಮೂಲಕ ಅದರ ಸದಸ್ಯರ
ಹಿತಾಸಕ್ತಿಯಂತೆ  ವರ್ತಿಸಿ  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುವುದು  ಈ ದಿನಗಳ  ತುರ್ತು  ಅವಶ್ಯಕತೆ.

ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ |

ನಿಲ್ಲು ವೇ ಕಾತ್ಮತೆಯ ಬಾಳ್ಳೆಯಿಂ ಕಲಿಯಲ್ II

ಸಲ್ಲುವು ಪಕರಣಗಳು ಮನೆ ರಾಜ್ಯ ಸಂಸಾರ |

– ವಲ್ಲ ಗಳೆಯದಿರವನು – ಮಂಕುತಿಮ್ಮ II.

ಡಿ.ವಿ.ಜಿ.

ಶಶಿಧರ. ಎಲೆ. 

ಸಹಕಾರ  ಸಂಘಗಳ  ಅಪರ  ನಿಬಂಧಕರು  (ನಿವೃತ್ತ) .ನಂ. 281, ‘ ನೇಸರ’  ಬಾಲಾಜಿ  ಹೆಚ್ ಬಿ ಸಿ ಎಸ್  ಲೇಔಟ್  . ವಾಜರಹಳ್ಳಿ  ಕನಕಪುರ ರಸ್ತೆ  ಬೆಂಗಳೂರು  560109     

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More