“ನ್ಯಾಯಾಂಗ ವ್ಯವಸ್ಥೆ ಹೇಗೆ ಸಹಕಾರಿ ಕ್ಷೇತ್ರಕ್ಕೆ ಬಲ ಕೊಡ ಬಹುದು “.

ಈ ಲೇಖನ ಬರೆಯಲು ಹಿನ್ನೆಲೆ,ತಮಗೆಲ್ಲರಿಗೂ (ಸಹಕಾರಿಗಳಿಗು) ಹಾಗೂ ಜನ ಸಾಮಾನ್ಯರೆಲ್ಲರಿಗು , ಜಗತ್ ಜಾಹೀರು ಆಗಿರುವ ವಿಷಯವೇನೆಂದರೆ, ಹೆಚ್ಚಿನ ಹಣವಂತರಿಗೆ ಮತ್ತು ಅಧಿಕಾರದ ಲ್ಲಿರುವ ವರಿಗೆ ಮಾತ್ರ ನ್ಯಾಯವು ತ್ವರಿತವಾಗಿ ಸಿಗಬಲ್ಲದು. ಇದು ವಾಸ್ಥವ ಹೊರತಾಗಿದೆ. ಮತ್ತೊಂದು, ನಮಗೆಲ್ಲರಿಗೂ ನಮ್ಮ ಹಿರಿಯರು ಹೇಳಿ ಹೋಗಿರುವ , ನಮ್ಮ ತಲೆಯಲ್ಲಿ ಕೂತಿರುವ ” ( Justice Delayed is Justice Denied ” ಹಳೆಯ ನಾನ್ನುಡಿ ” ಅತ್ಯಂತ ವಿಳಂಬವಾಗಿ ಕೊಟ್ಟ ನ್ಯಾಯವು , ನ್ಯಾಯವನ್ನು ಕೊಡದಂತೆಯೇ ” ) ಇದು ಕೂಡ ವಾಸ್ತವತೆಗೆ ಹೊರತಾಗಿದೆ. ಈಗ ನಮ್ಮ ನ್ಯಾಯಾಂಗ ವ್ಯವಸ್ಥೆಯ ಕೇಂದ್ರ ಮೂಲ ಸಿದ್ಧಾಂತಕ್ಕೆ ಬರೋಣ ಅಲ್ಲಿ ನ್ಯಾಯವನ್ನು ಕೇಳಿಕೊಂಡು ಬರುವ ಪ್ರತಿ ಅರ್ಜಿದಾರನಿಗೆ ( ಸಾಲ ಕೊಟ್ಟ ಸಹಕಾರಿ ಸಂಸ್ಥೆ ಅಥವ ಸುಸ್ತಿ ಆಗಿರುವ ಸಾಲ ಪಡೆದ ಸದಸ್ಯ ಆಗಿರಬಹುದು ) ತನ್ನ ವಾದವನ್ನು ಮಂಡಿಸಲು ” ಸಾಕಷ್ಟು ಸಮಯದ ಅವಕಾಶ ವನ್ನ ಕೊಡಬೇಕು” ಎಂಬ ಅನೇಕರ ಅಭಿಪ್ರಾಯ ನ್ಯಾಯಾಂಗದ  ಮೂಲ ತತ್ವಕ್ಕೆ ದುರುಪಯೋಗವಾಗುತ್ತಿದೆ.

ಉದಾಹರಣೆಗೆ – ಸುಸ್ತಿದಾರನಿಗೆ , ಪ್ರಥಮವಾಗಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಧೀಶರು ಹೊರಡಿಸಿದ ಶೋ ಕಾಸ್ ನೊಟೀಸ್ ಸರ್ವ ಆಗಲು 6 ರಿಂದ 9 ತಿಂಗಳು ತೆಗೆದು ಕೊಂಡಿರುವುದು ಊರಲ್ಲೇ ಎಲ್ಲರ ಮುಂದೆ ಓಡಾಡಿ ಕೊಂಡಿರುವ ಸುಸ್ತಿ ದಾರನಿಗೆ ಕೋರ್ಟ್ ನಿಯೋಜಿಸಿದ ಅಧಿಕೃತ ವ್ಯಕ್ತಿ ಇಂದ ನೊಟೀಸ್ ತಲುಪಲು 6 ರಿಂದ 9 ತಿಂಗಳು ತೆಗೆದು ಕೊಳ್ಳುವುದು ನ್ಯಾಯವೇ?

ನಮ್ಮ ಅಭಿಪ್ರಾಯ, ನ್ಯಾಯಾಲಯವು ಕೊಡುವ ಅಂತಿಮ ತೀರ್ಪು ಆದ ನಂತರ ಮತ್ತಷ್ಟು ಸಮಯ ಅವಕಾಶ ಕೊಡುವುದರಲ್ಲಿ  ಸಹಕಾರಿ ಸoಸ್ಥೆಗೆ ಅಭ್ಯಂತರವಿಲ್ಲ, ಅದು ನ್ಯಾಯ ಕೊಟ್ಟಂತೆ ಆಗುವುದು ಆದರೆ  ಈ ವಿಳಂಬ ವ್ಯವಸ್ಥೆಯನ್ನೂ ಸರಿಪಡಿಸಿದರೆ ಸಹಕಾರಿ ಸoಸ್ಥೆಗಳಿಗೂ ಮತ್ತು ಸಾರ್ವಜನಿಕರಿಗೋ ನ್ಯಾಯಾಂಗ ದ ಮೇಲೆ ವಿಶ್ವಾಸ ಹೆಚ್ಚಾಗುವುದು.,

ಪರಿಹಾರ –

ನಮ್ಮ Refuse to Receive , ಅನ್ನುವ ವ್ಯವಸ್ಥೆ ಗೆ ಹೆಚ್ಚು ಬಲ ಕೊಡುವ ವ್ಯವಸ್ಥೆ ಆಗಬೇಕಿದೆ.

ಉ. ದಾ. – 1. ಕೋರ್ಟು ನಿಯೋಜಿತ ಅಧಿಕೃತ ವ್ಯಕ್ತಿ ಇಂದ ಮಾಡಿದ ಫೋನ್ ಕರೆಯನ್ನು , ಮಾತನಾಡಿದ ಮಾತುಗಳನ್ನು ದಾಖಲೆ ಎಂದೂ ಪರಿಗಣಿಸುವುದು.

2) ವಿಡಿಯೋ call: ಸ್ಥಳ ದಲ್ಲಿ ಮಾಡಿದ ವಿಡಿಯೋ ಕರೆ, ಮತ್ತು ಸ್ವಂತ ಹೆಂಡತಿ ಮಕ್ಕಳಿಗೆ ನೊಟೀಸ್ ಸರ್ವ ಮಾಡುವುದು. ಅಧಿಕೃತ ದಾಖಲೆ ಎಂದು ಪರಿಗಣಿಸಿ ,Refuse to Receive ಆಗಿ ಪರಿಗಣಿಸುವುದು.

ಹಾಗೂ ಸಹಕಾರಿ ಸoಸ್ಥೆ ಇಂದ ಸರ್ವ ಆಗಬೇಕಿರುವ ನೊಟೀಸ್ ಗು ಕೂಡ ಈ ಮೇಲಿನ ಮಾದರಿಯನ್ನು ಸುಸ್ತಿದಾರನಿಗೆ ತಲುಪಿದ ದಾಖಲೆ ಎಂದು ಪರಿಗಣಿಸಲೂ ಕೋರ್ಟ್ ಮಾನ್ಯ ಮಾಡುವುದು, ಸಹಕಾರಿ ಸoಸ್ಥೆಗೆ ಮತ್ತು ಸಹಕಾರಿ ಕ್ಷೇತ್ರಕ್ಕೆ ಅತ್ಯಂತ ಬಲ ಕೊಡುವ ಸಂಗತಿ ಆಗಿರುತ್ತದೆ.

ಈ ಲೇಖನವನ್ನು ಬರೆಯುವಾಗ ನಾನು ಅತ್ಯಂತ ಸಣ್ಣ ಸಹಕಾರಿ ಸಂಘ ಸoಸ್ಥೆಗಳನ್ನು ಮತ್ತು ಜನ ಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಅವರು ಗಳಿಗೆ ನಾಡಿನ ನ್ಯಾಯಾಂಗ ವ್ಯವಸ್ಥೆ ಯ ಬಗೆಗೆ ವಿಶ್ವಾಸ, ಧೈರ್ಯ ಮತ್ತು ಗೌರವ ಹೆಚ್ಚಾಗ ಬೇಕೆಂದೂ ಕಳಕಳಿ ಧನ್ಯ ವಾದ ಗಳು.

ಶ್ರೀಧರ ನೀಲಕಂಠ ರಾವ್.

ಅಧ್ಯಕ್ಷ , ಜ್ಞಾನ ಶಾಲೆ ಸೌಹಾರ್ದ ಕೊ ಆಪರೇಟಿವ್ ನಿಯಮಿತ, ಬೆಂಗಳೂರು.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More