ಭಾರತದಲ್ಲಿ ಸುಮಾರು 475 ದಶಲಕ್ಷ ಕಾರ್ಮಿಕರು ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಒಟ್ಟು ಕಾರ್ಮಿಕರ ಶೇ91. ಭಾಗವಾಗುತ್ತದೆ. ಎ೦ದು ಒಂದು ಅಧ್ಯಯನ ವರದಿ ತಿಳಿಸುತ್ತದೆ. ಅಲ್ಲದೇ ವೇತನದಾರರು ಗಳಲ್ಲಿ ಶೇ.52 ಜನರು ಯಾವುದೇ ಸಾಮಾಜಿಕ ಭದ್ರತೆ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ , ಎಂದು ಮತ್ತೊಂದು ವರದಿ ತಿಳಿಸುತ್ತದೆ. ಇಂತಹ ಕಾರ್ಮಿಕ ವಲಯ ರಾಷ್ಟ್ರದ ಆರ್ಥಿಕ ಶಕ್ತಿ ಯಾಗಿರುವುದಲ್ಲದೇ ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುತ್ತದೆ. ಅನೇಕ ಸರ್ಕಾರದ ಸವಲತ್ತುಗಳನ್ನು ಅವರಿಗೆ ನೇರವಾಗಿ ತಲುಪಿಸುವುದು ಕಷ್ಟಸಾಧ್ಯವಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಪರಿಹಾರವೆಂದರೆ ಅವರದೇ ಆದ ಸಹಕಾರ ಸಂಘಗಳನ್ನು ರಚಿಸಿಕೊಂಡು ಪರಿಹಾರ ಕಂಡುಕೊಳ್ಳುವುದಾಗಿದೆ.
ಈ ಹಿಂದೆ ‘ಕಾರ್ಮಿಕ ಒಪ್ಪಂದ ಸಹಕಾರ ಸಂಘಗಳು ‘ (Labour contract co-operative societies) ಮಂಡಿಗಳಲ್ಲಿ, ಕಾಖ೯ನೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವು. ಕನಿಷ್ಟ ವೇತನ ಸೌಲಭ್ಯ, ಕೆಲಸ ದೊರೆಸಿಕೊಳ್ಳುವ ಕೆಲಸಗಳನ್ನು ನಿರ್ವಹಿಸುತ್ತಿದ್ದವು. ಕ್ರಮೇಣ ಅವು ಇಲ್ಲವಾಗಿವೆ. ಆಧುನಿಕ ಭಾರತದಲ್ಲಿ ನಗರೀಕರಣ ಹೆಚ್ಚಾದಂತೆ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಜನತೆ ಪಟ್ಟಣಗಳಿಗೆ ವಲಸೆ ಬರುತ್ತಿದೆ. ಕಾರ್ಮಿಕರು ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಉದಾ: ಕಟ್ಟಡ ನಿರ್ಮಾಣ ವಲಯ, ಹೋಟೆಲ್ ಗಳು, ವಿವಿಧ ಸಣ್ಣ ಸಣ್ಣ ಮಧ್ಯಮ ಕಾರ್ಖಾನೆಗಳು, ಸೇವಾ ವಲಯಗಳಲ್ಲಿ ವಾಹನ ಚಾಲಕರು, ವಸ್ತು, ಆಹಾರ, ಮನೆ ಬಾಗಿಲಿಗೆ ತಲುಪಿಸುವುದು (ಸ್ವಿಗ್ಗಿ , ಜೊಮಾಟೋ, ಪೋರ್ಟರ್’, ಉಬರ್, ಓಲೋ, ಅಮೇಜಾನ್, ಪ್ಲಿಪ್ ಕಾರ್ಟ್ ……… delivery boys, shipping agents)., ಮನೆಗೆಲಸ , ಅಡಿಗೆ ,ನಿರತ ಮಹಿಳಾ ಕಾರ್ಮಿಕರು, ಈ ದಿಶೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಂತ್ರಿ ಯಾಗಿದ್ದು ಅನೇಕ ‘ ಆಫ್ ‘ ಗಳು ಲಭ್ಯವಿದ್ದು ಮನೆ ಬಾಗಿಲಲ್ಲೆ ಸೇವೆ ಲಭ್ಯತೆ ವಾಗುವಂತೆ ಮಾಡಿದೆ. ಆದರೆ ಇದು ಅಸಂಘಟಿತ ಕಾರ್ಮಿಕರ ನೆಲೆಯಾಗಿದೆ. ಅನೇಕ ವೇಳೆ ಗ್ರಾಹಕರನ್ನು ಸೇವೆ ನೀಡುತ್ತಿರುವವರನ್ನು ಶೋಷಣೆ ಮಾಡಲಾಗುತ್ತಿದೆ. ಇದರ ಹೋಗಲಾಡಿಕೆಗೆ ಇರುವ ಮಾರ್ಗ ‘ಸಹಕಾರ ‘ ಮಾರ್ಗ. ಆದರೆ ಈ ವಲಯದಲ್ಲಿ ಸಂಘಟನೆ ಅತ್ಯಂತ ಕಷ್ಟಕರವಾಗಿರುತ್ತದೆ. ಧೀಮಂತ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಮೀರಿ ಸಂಘಟನಾ ಚತುರತೆಯಿಂದ ತಮ್ಮದೇ ‘ ಸಹಕಾರ ಸಂಘಗಳ ‘ ಸ್ಥಾಪನೆಯಿಂದ ಹಾಲಿ ಕಾರ್ಯಾಚರಣೆಯಲ್ಲಿ ‘ ಚೌಕಾಶಿ’ ಶಕ್ತಿ ಹೆಚ್ಚಿಸಿ ಕೊಳ್ಳುವುದರ ಒಟ್ಟಿಗೆ ಆರ್ಥಿಕ, ಪರಿಕರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಮುಂದೆ ಭವಿಷ್ಯದಲ್ಲಿ ಅಗತ್ಯ ಸಾಮಾಜಿಕ ಭದ್ರತೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ಸಹಕಾರ ಸಂಘವು ಒಂದು ಕಾರ್ಯವ್ಯಾಪ್ತಿಯನ್ನು ನಿಗದಿ ಪಡಿಸಿಕೊಂಡು (ಉದಾ : ಬೆಂಗಳೂರು ನಗರ) , ಸದಸ್ಯತ್ವದ ಅರ್ಹತೆ, ಮಾನದಂಡಗಳನ್ನು ನಿಗದಿ ಪಡಿಸಿ ಉದ್ದೇಶಗಳನ್ನು ಸ್ಪಷ್ಟ ಪಡಿಸಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಕೊಳ್ಳಬಹುದಾಗಿದೆ. ಸಂಘಟಿತ ಪ್ರಯತ್ನದಿಂದ ‘ಸ್ವಸಹಾಯ ಪರಸ್ಪರ ಸಹಾಯ ‘ ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ತತ್ವವನ್ನು ಅರಿಯ ಬೇಕಾಗಿದೆ. ಷೇರು ಬಂಡವಾಳ ಸಂಗ್ರಹಣೆ, ತಮ್ಮ ಉಳಿತಾಯ ವನ್ನು (ಪಿಗ್ಮಿ , ರಿಕರಿಂಗ್ ಠೇವಣಿ) ಸಣ್ಣ ಅಗತ್ಯತೆಗೆ ಸಣ್ಣ ಸಾಲಗಳು. ತಾವು ಸಲ್ಲಿಸುತ್ತಿರುವ ಸೇವಾ ಸಂಸ್ಥೆ ಯಿಂದ ತಾವು ಪಡೆಯ ಬೇಕಾದ ಮೊತ್ತವನ್ನು ಸಹಕಾರ ಸಂಘದ ಮೂಲಕ ಪಡೆಯುವುದು. ಅಲ್ಪ ಮೊತ್ತವನ್ನು ಸಹಕಾರ ಸಂಘದ ವ್ಯವಸ್ಥಾಪನೆಯ ಸೇವಾ ಶುಲ್ಕವಾಗಿ ಪಾವತಿಸುವುದು. ಸಂಘವೇ ಅಗತ್ಯ’ ಸಾಫ್ಟ್ ವೇರ್ ಪ್ಲಾಟ್ ಫಾರಂ’ ನಿರ್ಮಿಸುವುದು , ನಿರ್ವಹಣೆ ಮಾಡುವುದು. ಸದಸ್ಯರಿಗೆ ವಾಹನ ಕೊಳ್ಳಲು , ದುರಸ್ತಿಗೆ , ಸಾಲದ ವ್ಯವಸ್ಥೆ ಮಾಡುವುದು, ಸಾಲ ನೀಡುವುದು. ಆರ್ಥಿಕ ಭದ್ರತೆಗಾಗಿ ವಾಹನ, ಜೀವ, ವೈದ್ಯಕೀಯ ವಿಮೆ ಸೌಲಭ್ಯಗಳನ್ನು ಒದಗಿಸುವುದು. ಗುಂಪು ವಿಮೆ, ‘ ಯಶಸ್ಸಿನಿ’ ಸಹಕಾರ ವೈದ್ಯಕೀಯ ವಿಮಾ ಯೋಜನೆಯ ಅನುಷ್ಠಾನ. ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ, ಭವಿಷ್ಯದ ಒಳಿತಿಗಾಗಿ ಭವಿಷ್ಯ ನಿಧಿ , ಪಿಂಚಣಿ ಸೌಲಭ್ಯಗಳು, ಮರಣ ನಿಧಿ, ಮಕ್ಕಳ ಓದಿಗೆ, ಸದಸ್ಯರೇ ಬಿಡುವಿನ ಸಮಯದಲ್ಲಿ ವಿಧ್ಯಾರ್ಜನೆಗಾಗಿ ವಿದ್ಯಾರ್ಥಿ ವೇತನ , ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸದಸ್ಯರ, ಅಗತ್ಯತೆಗಳಿಗನುಸಾರವಾಗಿ ಹಾಕಿ ಕೊಳ್ಳಬಹುದಾಗಿದೆ. ಸಂಘಟಿತ ಪ್ರಯತ್ನದಿಂದ ಸಾಧ್ಯವಾಗದಂತಹ ಯಾವುದೇ ಕಾರ್ಯವಿಲ್ಲ. ಈ ಅಸಂಘಟಿತ ಕಾರ್ಮಿಕರ ಸಂಘಟನೆಗೆ ನಾಯಕತ್ವ ಗುರುತಿಸುವ, ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಸಬಲತೆಯ ಸಾಧ್ಯತೆ ಬಗ್ಗೆ ತಿಳುವಳಿಕೆ, ಶಿಕ್ಷಣ ನೀಡಬೇಕಾಗಿರುವುದು ಈ ದಿನ ಅವಶ್ಯಕತೆ. ಇದರ ಬಗ್ಗೆ’ ಸಹಕಾರಿ’ ಗಳು ಆದ್ಯತೆಯಾಗಿ ಪರಿಗಣಿಸಿ ಮಾರ್ಗದರ್ಶನ ನೀಡಬೇಕಾಗಿದೆ.
ಅಗೆದು ಗೊಬ್ಬರ ವಿಕ್ಕಿ ನೀರೆರೆದು ತೋಟಿಗನು |
ಜಗಿವ ಮುಳ್ಳಿರಿತಗಳ ಸೈರಿಸಿ ಗುಲಾಬಿ I
ನಗುವುದೊಂದರೆ ನಿಮಿಷ; ನಗಲು ಬಾಳ್ಮುಗಿಯುವುದು |
ಮುಗುಳು ದುಡಿತಕೆ ತಣಿಸು – ಮಂಕು ತಿಮ್ಮ II
ಡಿ.ವಿ. ಜಿ.
ಶಶಿಧರ. ಎಲೆ.
ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ನಂ. 281, ನೇಸರ, ಬಾಲಾಜಿ ಹೆಚ್.ಬಿ. ಸಿ.ಎಸ್ ಲೇಔಟ್ ‘ ವಾಜರಹಳ್ಳಿ ಕನಕಪುರ ರಸ್ತೆ, ಬೆಂಗಳೂರು 560 109