ಪ್ರಾಥಮಿಕ  ಕೃಷಿ  ಪತ್ತಿನ  ಸಹಕಾರ ಸಂಘಗಳು- ಸವಾಲುಗಳು. ಹಿನ್ನೆಲೆ| ಶ್ರೀ. ಶಶಿಧರ. ಎಲೆ.


ಪ್ರಾಥಮಿಕ  ಕೃಷಿ ಪತ್ತಿನ  ಸಹಕಾರ  ಸಂಘಗಳು  ಎಂದರೆ  ಗ್ರಾಮೀಣ  ಪ್ರದೇಶದಲ್ಲಿ  ಕೃಷಿ ಗಾಗಿ  ಅಗತ್ಯ  ‘ದುಡಿಯುವ  ಬಂಡವಾಳ’  ಒದಗಿಸುವ  ಉದ್ದೇಶದಿಂದ  ಆರಂಭವಾದ  ಸಹಕಾರ ಸಂಘಗಳು, 1904ರ ಭಾರತದ  ಪತ್ತಿನ  ಸಹಕಾರ  ಸಂಘಗಳ  ಕಾಯ್ದೆ  ಜಾರಿಗೆ ಬಂದದ್ದೆ  ಗ್ರಾಮೀಣ  ಪ್ರದೇಶದ  ರೈತರಿಗೆ  ಕೃಷಿ  ಅಗತ್ಯ  ದುಡಿಯುವ  ಬಂಡವಾಳ  ಅಗತ್ಯತೆ  ಪೂರೈಸುವುದಕ್ಕಾಗಿ  ಎಂದರೆ  ತಪ್ಪಾಗುವುದಿಲ್ಲ. ಈ ಕಾಯ್ದೆ  ಜಾರಿಯಿಂದಾಗಿ  ಗ್ರಾಮೀಣ ಪ್ರದೇಶಗಳಲ್ಲಿ ‘ಸೇವಾ  ಸಹಕಾರ ಸಂಘಗಳು ‘ಆರಂಭವಾದವು. ಇದರ  ಮುಖ್ಯ ಉದ್ದೇಶ  ‘ಸದಸ್ಯರಲ್ಲಿ  ಥ್ರಿಫ್ಟ್  (ಕಡ್ಡಾಯ  ಸಣ್ಣ  ಉಳಿತಾಯ ) ಅಭ್ಯಾಸವನ್ನು  ರೂಢಿಗೊಳಿಸುವುದಾಗಿತ್ತು. ಅಲ್ಲದೆ  ಈ  ಉಳಿತಾಯದಲ್ಲಿ  ಅಗತ್ಯವಿದ್ದ  ರೈತರಿಗೆ  ‘ಬೆಳೆ ಸಾಲ ‘(ಪತ್ತು) ( ದುಡಿಯುವ ಬಂಡವಾಳ ಸಾಲ ) ಒದಗಿಸುವುದಾಗಿತ್ತು.  ಈ ಬಂಡವಾಳ  ಸಾಲದೇ ಇದ್ದುದರಿಂದ  ಸರ್ಕಾರವೇ  ‘ಠಕಾವಿ’ ಸಾಲವಾಗಿ  ಈ  ಸಹಕಾರ ಸಂಘಗಳ ಮೂಲಕ  ವಿತರಿಸುತ್ತಿತ್ತು. ಕ್ರಮೇಣ  ಅನೇಕ  ಬದಲಾವಣೆಗಳನ್ನು  ಕಾಣುತ್ತ ಇದ್ದೇವೆ.

ಸ್ವಾತಂತ್ರ್ಯ ನಂತರ  ಎ. ಡಿ. ಗೋರವಾಲ  ಸಮಿತಿ  ಶಿಫಾರಸ್ಸು  ಅನುಷ್ಠಾನ  ಒಂದು  ಮೈಲಿಗಲ್ಲು. ಈ  ಅಲ್ಪಾವಧಿ ಕೃಷಿ  ಸಾಲ  ವಿತರಣೆಗೆ  ಅತಿ ಹೆಚ್ಚಿನ  ಪ್ರಾಮುಖ್ಯತೆ  ದೊರೆಯಿತು.  ಅದರಿಂದ  ರಾಷ್ಟ್ರಾದ್ಯಂತ  ಈ  ಉದ್ದೇಶದ    ಈಡೇರಿಕೆಗಾಗಿ  ಮೂರು  ಹಂತದ  ವ್ಯವಸ್ಥೆ  ಯನ್ನು  ಸುಸಜ್ಜಿತವಾಗಿ  ರಚಿಸಲಾಯಿತು. ಗ್ರಾಮ  ಮಟ್ಟದಲ್ಲಿ ವ್ಯವಸಾಯ  ಸೇವಾ ಸಹಕಾರ  ಸಂಘಗಳು, ಜಿಲ್ಲಾ ಮಟ್ಟದಲ್ಲಿ  ಜಿಲ್ಲಾ ಕೇಂದ್ರ  ಸಹಕಾರ ಬ್ಯಾಂಕ್ ಗಳು  ಮತ್ತು  ರಾಜ್ಯ  ಮಟ್ಟದಲ್ಲಿ  ರಾಜ್ಯ ಸಹಕಾರ ಬ್ಯಾಂಕ್ ಗಳು. ಆರ್. ಬಿ. ಐ . ನ  ಕೃಷಿ ಸಾಲ  ವಿಭಾಗವನ್ನು  ಪ್ರತ್ಯೇಕ  ನಿಗಮ ವನ್ನಾಗಿ  ಪರಿವರ್ತಿಸಲಾಯಿತು.  ತದ ನಂತರದಲ್ಲಿ  ಅದು  ನಬಾರ್ಡ್  ಕಾಯ್ದೆ  ಅನ್ವಯ  ನಬಾರ್ಡ್ ಆಯಿತು. ಇದು  ಸಹಕಾರ  ಬ್ಯಾಂಕ್ ಗಳಿಗೆ  ಪುನರ್ಧನ  ಸೌಲಭ್ಯವನ್ನು  ಒದಗಿಸುತ್ತಾ  ಬಂದಿದೆ.

ಸೇವ  ಸಹಕಾರ  ಸಂಘಗಳು  ಬೆಳೆಸಾಲ  ಒದಗಿಸುವುದಲ್ಲದೆ  ಎರಡನೆ  ಮಹಾಯುದ್ಧ  ಕಾಲದಲ್ಲಿ  ಆಹಾರದ  ಕೊರತೆ  ಉಂಟಾದಾಗ  ಗ್ರಾಮೀಣ  ಪ್ರದೇಶದಲ್ಲಿ  ಪಡಿತರ  ವಿತರಣೆಗಾಗಿ  ಈ  ಸಹಕಾರ ಸಂಘಗಳನ್ನು  ಸರ್ಕಾರ  ಅವಲಂಭಿಸಿತು. ಮುಂದುವರೆದು  ಸ್ವಾತಂತ್ಯ ನಂತರ  ಈ  ಸಂಘಗಳನ್ನು  ಸಬಲ ಗೊಳಿಸಿ  ಗ್ರಾಮಾಂತರ  ಪ್ರದೇಶದ  ಜನರಿಗೆ  ಅದರಲ್ಲಿ  ಕೃಷಿಗೆ  ಅಗತ್ಯ  ಪೂರೈಕೆಗಳನ್ನು  ಒದಗಿಸುವುದೇ ಆಗಿದ್ದು  ಇವುಗಳನ್ನು  ವ್ಯವಸಾಯ  ಸೇವ  ಸಹಕಾರ  ಸಂಘಗಳಾಗಿ  ಪರಿವರ್ತಿಸಲಾಯಿತು. ಸಬಲತೆ  ಆಧಾರದ ಮೇರೆಗೆ  ಕಾರ್ಯಕ್ಷೇತ್ರ ಎಸ್ತರಿಸಿದ್ದಲ್ಲದೆ  ಉದ್ದೇಶಗಳಲ್ಲಿ  ಅಲ್ಪಾವಧಿ  ಕೃಷಿಸಾಲ  ಒದಗಿಸುವುದಲ್ಲದೇ  ಕೃಷಿ  ಉಪಕರಣಗಳು , ಕೃಷಿಗೆ  ಅಗತ್ಯ ವಸ್ತುಗಳು(inputs) ಉದಾ:  ರಸಗೊಬ್ಬರ, ಉತ್ತನ ಬೀಜ , ಕ್ರಿಮಿನಾಶಕಗಳ  ಮಾರಾಟ  . ಪಡಿತರ ವಿತರಣೆ  ಮಾತ್ರ ಅಲ್ಲದೆ  ಕಿರಾಣಿ, ದಿನ ಬಳಕೆ ವಸ್ತುಗಳ  ಮಾರಾಟ  ಹೀಗೆ  ಹಲವು  ಚಟುವಟಿಕೆಗಳಿಗೆ  ಅವಕಾಶ  ಕಲ್ಪಿಸಲಾಯಿತು.  ಕೃಷಿ ಉತ್ಪನ್ನ  ಈದಿನ ಸಾಲ , ಕೃಷಿ ಉತ್ಪನ್ನ ಖರೀದಿ ಮಾರಾಟ , ಕೃಷಿ  ಕೊಯ್ಲ  ಪೂರ್ವ  ಮತ್ತು  ನಂತರದ  ಅವಶ್ಯ  ಉಪಕರಣಗಳ  ಮಾರಾಟ  ಮತ್ತು ಬಾಡಿಗೆಗೆ  ಒದಗಿಸುವ  ಕಾರ್ಯಗಳನ್ನು  ಕೈಗೊಳ್ಳಲು ಆಯಿತು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು  ವೈದ್ಯಕೀಯ  ಮತ್ತು  ಪಶುಸಂಗೋಪನ  ಇಲಾಖೆ, ರೇಷ್ಮೆ ಇಲಾಖೆ  ಹೀಗೆ ಅಭಿವೃದ್ಧಿ  ಇಲಾಖೆಗಳೆಲ್ಲವೂ  ಈ  ಸಹಕಾರ ಸಂಘ (ವಿ. ಎಸ್. ಎಸ್.ಎನ್) ಮೂಲಕವೇ  ರೈತರನ್ನ  ತಲುಪುತಿತ್ತು. ಗ್ರಾಮ ಸಹಾಯಕರು, ಕೃಷಿ  ವಿಸ್ತರಣಾಧಿಕಾರಿಗಳು  ಪಧನಿಮಿತ್ತ  ನಿರ್ದೇಶಕರಾಗಿ  ಕಾರ್ಯನಿರ್ವಹಿಸುತ್ತಿದ್ದರು. ತದನಂತರದಲ್ಲಿ ರೈತ ಸೇವಾ  ಸಹಕಾರ ಸಂಘಗಳರಚನೆಯಾಗಿ  ಕಾರ್ಯಕ್ಷೇತ್ರ  ಮತ್ತಷ್ಟು ವಿಸ್ತೀರ್ಣ ಅಲ್ಲದೆ  ಮಧ್ಯಮಾವಧಿ  ಸಾಲಗಳನ್ನು (ಉದಾ: ಹೈನುಗಾರಿಕೆ, ರೇಷ್ಮೆ, ಕುರಿ, ಕೋಳಿ  ಸಾಕಾಣಿಕೆ,  ನೀರಾವರಿ, ಬಾವಿ ನಿರ್ಮಾಣ, ಟ್ರಾಕ್ಟರ್ ಖರೀದಿ, ಪವರ್  ಟಿಲ್ಲರ್  ಖರೀದಿ ) ನೀಡಲು ಉದ್ದೇಶಿಸಲಾಯಿತು. ಇದಕ್ಕೆ ಅವಶ್ಯ  ಸಂಪನ್ಮೂಲ  ಒದಗಿಸುವ ಸಲುವಾಗಿ  ವಾಣಿಜ್ಯ  ಬ್ಯಾಂಕ್ ಗಳಿಗೆ ಹೊಂದಿಸಲಾಯಿತು. ದೊಡ್ಡ ಪ್ರಮಾಣದ  ವ್ಯವಸಾಯ  ಸೇವ  ಸಹಕಾರ  ಸಂಘ, ವಿವಿದೋದ್ದೇಶ ಸಹಕಾರ ಸಂಘ  ಗಳನ್ನು  (ಎಲ್.ಎಸ್ ಸಿ.ಎಸ್ )  ರಚಿಸಲಾಗಿತ್ತು.  ಹೀಗೆ ಅಲ್ಪಾವಧಿ  ಕೃಷಿ ಸಾಲ  ವಲಯ  ವಿವಿಧ  ರೀತಿಯಲ್ಲಿ  ಬದಲಾಗುತ್ತಾ  ಬಂದಿದೆ.  ಅಲ್ಪಾವಧಿ  ಕೃಷಿ ಸಾಲ  ಪುನಶ್ವೇತನ  (ಪ್ರೊ. ವೈದ್ಯನಾಥನ್  ವರದಿ ) ಸಮಯದಲ್ಲಿ  ಇದು ಯಾವುದೇ  ಹೆಸರಿನಲ್ಲಿ  ಕರೆದರೂ  ಪ್ರಾಥಮಿಕ  ಕೃಷಿ  ಪತ್ತಿನ ಸಹಕಾರ ಸಂಘ  ಎಂದು  ರಾಷ್ಟಾದ್ಯಂತ  ಕರೆಯಲಾಯಿತು.

ವ್ಯಾಪಾರ ಅಭಿವೃದ್ಧಿ ಯೋಜನೆ :  1990 ರ  ದಶಕದಲ್ಲಿ  ಕರ್ನಾಟಕದಲ್ಲಿ  ‘ ಪತ್ತು’ ಮತ್ತು ‘ಪತ್ತೇತರ ‘ ವ್ಯವಹಾರ  ವಾಗಿ  ಪ್ರಾ.ಕೃ.ಪ.ಸ.ಸಂಘಗಳಲ್ಲಿ  ಅನುಷ್ಠಾನ  ಗೊಳಿಸಲಾಯಿತು. ಪ್ರೊ. ವೈದ್ಯನಾಥನ್  ವರದಿ ಅನುಷ್ಟಾನ  ಅಂಗವಾಗಿ  ವ್ಯವಸ್ಥಿತವಾದ  ವ್ಯಾ. ಅ.ಯೋ. ರಾಷ್ಟ್ರ ದ್ಯಂತ ಅನುಷ್ಠಾನ ಗೊಳಿಸಲಾಯಿತು.  ನಷ್ಟ ದಲ್ಲಿದ್ದ  ಸಂಘಗಳಿಗೆ  ಮರು ಬಂಡವಾಳ (Re capitalisation ) ಸಹಾಯ  ಒದಗಿಸಲಾಯಿತು.  2010 ರಿಂದ  ಕರ್ನಾಟಕದಲ್ಲಿ  ವ್ಯಾಪಾರ  ಅಭಿವೃದ್ಧಿ  ಯೋಜನೆ , ಜಿ.ಕೇ.ಸ.ಬಾಂಕ್ ಗಳಲ್ಲಿ  ಅಭಿವೃದ್ಧಿ  ಕ್ರಿಯಾ ಯೋಜನೆ  ಅನುಷ್ಠಾನ ಗೊಳಿಸಲಾಯಿತು. ಸಹಕಾರ  ಸಂಘಗಳು  ತನ್ನ  ಸ್ವಂತ  ಸಂಪನ್ಮೂಲಗಳನ್ನು ವೃದ್ಧಿಗೊಳಿಸಿಕೊಳ್ಳಲು, ಸಾಲಗಳಲ್ಲಿ  ವೈವಿಧ್ಯಮಯತೆ  ಹೊಂದಲು ‘, ಖರೀದಿ  ಮಾರಾಟ  ವ್ಯವಹಾರಗಳಲ್ಲಿ ಲಾಭ  ಗಳಿಸುವಂತೆ  ರೂಪಿಸಲು  ಮಾರ್ಗ ದರ್ಶನ, ಮೇಲ್ವಿ ಚಾರಣೆ  ನಡೆಸಲಾಯಿತು. ಅಲ್ಲದೆ  ಕಾಯ್ದೆಯಾತ್ಮಕ ಮತ್ತು  ಸಾಂಸ್ಥಿಕ  ಸುಧಾರಣೆಗಳನ್ನು  ತರಲಾಯಿತು. ಸಾಂಸ್ಥಿಕ ಸುಧಾರಣಿ  ಅಂಗವಾಗಿ  ಕಂಪ್ಯೂಟರೀಕರಣ , ಸಾಮಾನ್ಯ ಲೆಕ್ಕ ಪದ್ಧತಿಗಳನ್ನು  ಜಾರಿಗೆ  ತರಲಾಯಿತು. ಪ್ರಾ.ಕೃ.ಪ.ಸ.ಸಂ. ಸ್ವಾಯತ್ತತೆ ಸ್ವಾತಂತ್ರೆಯೊಂದಿಗೆ  ಸದಸ್ಯ  ಚಾಲಿತ  ಸಹಕಾರ  ಸಂಘಗಳಾಗಿ  ಸಬಲವಾಗಿ  ಆರಂಭದಲ್ಲಿ  ಚಾಲ್ತಿ ಸೈರಣೆ  ಹಂತ  ತಲುಪಿ  ತದ ನಂತರ  ಸ್ಥಿರ ಸೈರಣೆ  ಹಂತ  ತಲುಪುವ ಗುರಿ ಹೊಂದಲಾಗಿತ್ತು. ಆರ್ಥಿಕ ನೆರವು ಕೇವಲ  ಒಂದು ಭಾರಿ  ಎಂದು ಘೋಷಿಸಲಾಗಿತ್ತು. ಸಹಕಾರ ಸಂಘ ಸಬಲವಾಗಿದ್ದರೆ  ‘ಉಳಿಯುತ್ತದೆ’ ಇಲ್ಲವೇ ‘ಅಳಿಯುತ್ತದೆ ‘ Either ‘Flourish’ or ‘Perish’. ಎಂಬುದು  ಘೋಷವಾಕ್ಯ. ಇತ್ತೀಚೆಗಿನ ಬೆಳವಣಿಗೆಗಳು : ಕೇಂದ್ರ  ಸರ್ಕಾರದಲ್ಲಿ  ಕೃಷಿ ಇಲಾಖೆ ಯಿಂದ   ಬೇರ್ಪಡಿಸಿ  ಸಹಕಾರ ಇಲಾಖೆ  ಆರಂಭವಾದ  ನಂತರ  ಈ  ವಲಯಕ್ಕೆ  ಅನೇಕ  ಉಪಕ್ರಮಗಳನ್ನು  ಕೇಂದ್ರ ಸರ್ಕಾರ  ಉದ್ದೇಶಿಸಿದೆ.

1. ಪ್ರಾ.ಕೃ.ಪ.ಸ. ಸಂ . ಗಳನ್ನು  ‘ ಬಹು ಸೇವ ಕೇಂದ್ರ’ ಗಳಾಗಿ  ಪರಿವರ್ತನೆ.  ಸಹಕಾರ ಸಂಘಗಳು  ತನ್ನ ಸ್ಥಳೀಯ  ಅವಶ್ಯಕತೆಯಂತೆ  ರೈತ  ಉತ್ಪನ್ನ , ಕೃಷಿ , ತೋಟಗಾರಿಕೆ  ಅಥವ  ಸ್ಥಳೀಯ  ಯಾವುದೇ  ಉತ್ಪನ್ನವನ್ನು  ಶೇಖರಿಸಿ  ಸಂಸ್ಕರಿಸಿ , ಪ್ಯಾಕೇಜ್ ಮಾಡಿ, ಬ್ರಾಂಡ್  ಆಗಿ ಮಾರಾಟ ಮಾಡುವ  ಸೌಲಭ್ಯ  ಕಲ್ಪಿಸಿ  ರೈತರ  ಮತ್ತು  ಸ್ಥಳೀಯ  ಯಾವುದೇ  ಉತ್ಪನ್ನಕ್ಕೆ  ನ್ಯಾಯ ಯತ  ಬೆಲೆಯನ್ನು  ಒದಗಿಸುವಂತೆ  ಮಾಡುವುದೇ ಆಗಿದೆ. ಇದಕ್ಕಾಗಿ  ನಬಾರ್ಡ, ಕಡಿಮೆ ಬಡ್ಡಿಯ ಸಾಲವನ್ನು  ಜಿ.ಕೇ.ಸ.ಬ್ಯಾಂಕ್ ಮೂಲಕ  ಸಾಲ  ಒದಗಿಸುತ್ತದೆ. ಸಹಕಾರ  ಸಂಘವು  ಸಾಲ  ಪಡೆಯುವ  ಸಬಲತೆಯನ್ನು  ಹೊಂದಿರಬೇಕು.  ಅಲ್ಲದೆ  ರಾಷ್ಟ್ರೀಯ ಸಹಕಾರ  ಅಭಿವೃದ್ಧಿ  ನಿಗಮವು  (ಎನ್.ಸಿ.ಡಿ.ಸಿ) ಸಹಕಾರ  ಸಂಘಗಳಿಗೆ  ಮೂಲ  ಸೌಕರ್ಯ ಅಭಿವೃದ್ಧಿಗಾಗಿ  ಸಾಲ ನೇರವಾಗಿ ನೀಡುತ್ತಿದೆ.

2. ಪ್ರಾ. ಕೃ. ಪ. ಸ. ಸಂ. ಕಂಪ್ಯೂಟ ರೀಕರಣ. ಸಾಂಸ್ಥಿಕ ಸುಧಾರಣೆ  ಅಂಗವಾಗಿ  ಮು.ಕಾ.ನಿ. , ಸಿಬ್ಬಂದಿ, ಅಧ್ಯಕ್ಷರು , ನಿರ್ದೇಶಕರುಗಳಿಗೆ  ಸಾಮಾರ್ಥ್ಯಭಿವೃದ್ಧಿ  ಕಾರ್ಯಕ್ರಮಗಳನ್ನು  ಅಲ್ಪಾವಧಿ ಕೃಷಿ ಸಾಲ  ಪುನಶ್ವೇತನ  ಕಾರ್ಯಕ್ರಮದಡಿಯಲ್ಲಿ  ಹಮ್ಮು ಕೊಳ್ಳಲಾಗಿತ್ತು  ಅಲ್ಲದೆ  ಮೊದಲ ಎರಡು ವರ್ಷಗಳು  ಸಾಮಾನ್ಯ  ಲೆಕ್ಕ ಪದ್ಧತಿಯಂತೆ ಕೈ ಬರಹದಲ್ಲಿ  ನಿರ್ವಹಣೆ ಮಾಡಿ  ತದನಂತರ  ಅದಕ್ಕಾಗಿ  ಸೃಜಿಸಿದ  ಸಾಫ್ಟ್ ವೇರ್ (ಮೃದು  ತಂತ್ರಾಂಶ ) ಅಳವಡಿಸಿ  ಕಂಪ್ಯೂಟರೀಕರಣ  ಗೊಳಿಸಲಾಯಿತು. ಕರ್ನಾಟಕದಲ್ಲಿ  ಇದು  ಯಶಸ್ವಿಯಾಗಲಿಲ್ಲ. ಈಗ  ಪುನಃ ಕಂಪ್ಯೂಟರೀಕರಣಕ್ಕಾಗಿ  ಕೇಂದ್ರ ಸರ್ಕಾರ  ಹಣಕಾಸು ನೆರವು ನೀಡಿ ಪ್ರಕ್ರಿಯೆ  ಮುಂದುವರೆಸಲು  ಉದ್ದೇಶಿಸಿದೆ. ರಾಷ್ಟ್ರದಲ್ಲಿ  63,000 ಪ್ರಾ.ಕೃ.ಪ.ಸ.ಸಂಘಗಳಲ್ಲಿ  ಈ ಕ್ರಮ  ಉದ್ದೇಶಿಸಲಾಗಿದೆ.

3. ಮಾದರಿ ಬೈಲಾ  ಅಳವಡಿಕೆ: ಕೇಂದ್ರ ಸರ್ಕಾರವು  ‘ಮಾದರಿ  ಉಪನಿಯಮ’ ರಚಿಸಿ  ರಾಜ್ಯಗಳಿಗೆ ಆಳವಡಿಸಿಕೊಳ್ಳಲು  ತಿಳಿಸಿದೆ. ಅದರಂತೆ  ಹೆಸರನ್ನು ‘ಗ್ರಾಮೀಣ ವಿವಿದೋದ್ದೇಶ  ಅಭಿವೃದ್ಧಿ  ಸಹಣರ  ಸಂಘ ‘ ಎಂದು ತಿಳಿಸಿದೆ . ಅಲ್ಲದೆ  ‘ರೈತ’ ವಾಖ್ಯಾನವನ್ನು ವಿಸ್ತರಿಸಿ  ಕೃಷಿ ಅಲ್ಲದೆ ಕೃಷಿ ಅವಲಂಭಿತ  ವೃತ್ತಿ ಮತ್ತು ಇತರೆ  ವೃತ್ತಿ ನಡೆಸುವವರನ್ನು  ‘ರೈತ’ ವ್ಯಾಖ್ಯಾನ  ದ ಪರಿಧಿ ಒಳಗೆ ತಂದಿದೆ. ಅಲ್ಲದೆ  ಆ ವೃತ್ತಿಗಳನ್ನು  ಕೆ.ಸಿ.ಸಿ ವ್ಯಾಪ್ತಿಯಾಳಗೆ (ಉದಾ: ತೋಟಗಾರಿಕೆ,ರೇಷ್ಮೆ , ಹೈನುಗಾರಿಕೆ, ಮೀನು ಗಾರಿಕೆ, ನೇಕಾರಿಕೆ  ಹೀಗೆ ಇತರೆ  ಗ್ರಾಮೀಣ  ವೃತ್ತಿಗಳು ). ಇದರಿಂದ ಕೃಷಿ  ಅಲ್ಲದೇ ಇತರೆ  ಗ್ರಾಮೀಣ  ವೃತ್ತಿಗಳಿಗೆ ‘ದುಡಿಯುವ ಬಂಡವಾಳ’ ಒದಗಲಿ  ಎಂಬ  ಸದುದ್ದೇಶ ಹೊಂದಲಾಗಿದೆ.

ಹಾಲಿ  ಸವಾಲುಗಳು:  ಅಲ್ಪಾವಧಿ  ಕೃಷಿಸಾಲ  ರಚನೆ ಯ  ಪುನಶ್ಯೇತನ  ಸಮಯದಲ್ಲಿ  ಪುನಃ ಬಂಡವಾಳ  ಸಹಾಯ  (Re Capitalisation Assitance) ದೊರೆತು  ಅನೇಕ  ನಷ್ಟದಲ್ಲಿದ್ದ  ಸಹಕಾರ ಸಂಘಗಳು ಮತ್ತು  ಜಿ. ಕೇಸ್ ಬ್ಯಾಂಕ್ ಗಳು  ಸುಧಾರಣೆ  ಕಂಡವು. ಇದರ ಬಗ್ಗೆ  ವಿವರವಾದ ಅಧ್ಯಯನ  ವರದಿಗಳು  ಆಗಿದ್ದಲ್ಲಿ  ಒಳ್ಳೆಯದಿತ್ತು. ಪ್ರಾಥಮಿಕ ಕೃಷಿ  ಪತ್ತಿನ  ಸಹಕಾರ ಸಂಘಗಳು  ತಮ್ಮದೇ  ಬಂಡವಾಳ ಹೊಂದಿ ಕೃಷಿ ಸಾಲಗಳಲ್ಲದೇ  ಕೃಷಿಯೇತರ  ಸಾಲಗಳನ್ನು  ವಿತರಿಸಿ  ಲಾಭ  ಗಳಿಸಿ  ಸುಸ್ಥಿರತೆ ಗಳಿಸಿರುವುದು  ಕಂಡುಬರುತ್ತದೆ. ಆದರೆ  ವಿವರವಾದ  ಅಧ್ಯಯನ ವರದಿಗಳಲ್ಲ.  ಪರಿಸ್ಥಿತಿ  ಒಂದು  ಸಹಕಾರ ಸಂಘಕ್ಕೂ  ಮತ್ತೊಂದಕ್ಕು  ವ್ಯತ್ಯಾಸ, ತಾಲ್ಲೂಕು  ತಾಲ್ಲೂಕಿಗೂ , ಜಿಲ್ಲೆ  ಜಿಲ್ಲೆಗೂ , ರಾಜ್ಯ  ರಾಜ್ಯಕ್ಕೂ  ವಿಭಿನ್ನ  ಪರಿಸ್ಥಿಯನ್ನು  ಕಾಣುತ್ತಲಿದ್ದೇವೆ.

ಅಲ್ಪಾವಧಿ ಕೃಷಿ  ಸಾಲ: ಶೇ80ಕ್ಕೂ  ಮೀರಿದ  ಸಣ್ಣ  ಮತ್ತು  ಅತಿ ಸಣ್ಣ ರೈತರು   ಸಹಕಾರ  ವಲಯ  ಅವಲಂಭಿಸಿರುತ್ತಾರೆ. ಸಹಕಾರ ವಲಯವು  ಪುನರ್ಧನ  ಸೌಲಭ್ಯವನ್ನು  ಅವಲಂಭಿಸಿರುತ್ತದೆ. ಪ್ರಾ.ಕೃ .ಪ.ಸ.ಸಂ ತನ್ನ   ಉನ್ನತ  ಸಂಸ್ಥೆಗಳಾದ  ಜಿ.ಕೇ. ಸ.ಬ್ಯಾಂಕ್, ಇದು  ರಾಜ್ಯ  ಸಹಕಾರ  ಬ್ಯಾಂಕ್  ಮತ್ತು ಇದು  ನಬಾರ್ಡ್ ನ್ನು  ಅವಲಂಭಿಸಿದೆ .ನಬಾರ್ಡ್  ಪುನರ್ಧನ ಒದಗಿಸುವ  ತನ್ನ ನೀತಿಯನ್ನು  ಕಾಲ ಕಾಲಕ್ಕೆ  ಬದಲಿಸುತ್ತಾ ಬರುತ್ತಿದೆ. ಹಾಲಿ  ಒಟ್ಟಾರೆ  ತಳಮಟ್ಟದ  ವಿತರಣೆಯ  (ಸಹಕಾರ  ಸಂಘಗಳಿಂದ  ಸದಸ್ಯರಿಗೆ  ವಿತರಿಸಿದ  ಮೊತ್ತ)  ಮೊತ್ತದ  ಶೇ 40  ಮಾತ್ರ  ಪುನರ್ಧನ ಒದಗಿಸುತ್ತದೆ. ಇದು  ಕಡಿಮೆ ಬಡ್ಡಿ  ಧರದ  ಸಾಲವಾಗಿರುತ್ತದೆ. ಈ  ವರ್ಷ ಇದನ್ನು  ಶೇ 20 ಕ್ಕೆ  ಕಡಿತಗೊಳಿಸಿದೆ. ಅಲ್ಪಾವಧಿ  ಕೃಷಿ ಸಾಲವನ್ನು  ಮೊದಲಿಗೆ  ತಳಮಟ್ಟದಲ್ಲಿ  ವಿತರಿಸಿ  ತದ ನಂತರ  ಪುನರ್ಧನ  ಪಡೆಯಬೇಕಾಗುತ್ತದೆ. ತಳಹಂತದ ವಿತರಣೆಗೆ ದ್ರವ್ಯ ಆಸ್ತಿ (liquidity)(ಹಣ) ಇರಬೇಕಾಗುತ್ತದೆ. ಸಹಕಾರ ಸಂಘ , ಜಿ.ಕೇ. ಸ.ಬ್ಯಾಂಕ್  ನಲ್ಲಿ  ಈ  ಸಂಪನ್ಮೂಲ  ಲಭ್ಯತೆ  ಇದ್ದಲ್ಲಿ  ಮಾತ್ರ  ವಿತರಣೆ ಮತ್ತು  ವಿತರಣೆಯನ್ನು  ಅಧಿಕಗೊಳಿಸುವ  ಸಾಧ್ಯತೆ  ಇರುತ್ತದೆ. ಅಲ್ಲದೆ  ಎಷ್ಟು ಮೊತ್ತವನ್ನು  ಈ  ವಲಯದಲ್ಲಿ  ತೊಡಗಿಸಬಹುದು  ಎಂಬುದು  ಪ್ರಮುಖ  ಅಂಶ. ಶೇ 40 ಪುನರ್ಧನ ದೊರೆಯುವಲ್ಲಿ  ಉಳಿಕೆ  ಶೇ 60  ಭಾಗ  ರಾ. ಸ. ಬ್ಯಾಂಕ್, ಜಿ. ಕೇ. ಸ.ಬ್ಯಾಂಕ್, ಪ್ರಾ.ಪ.ಸ.ಬ್ಯಾಂಕ್  ಹಂಚಿ  ಕೊಳ್ಳಬೇಕಾಗುತ್ತದೆ.  ಕರ್ನಾಟಕದಲ್ಲಿ  ಇದು  ಜಿಲ್ಲೆಯಿಂದ  ಜಿಲ್ಲೆಗೆ  ವ್ಯತ್ಯಾಸವಿದೆ. ಯಾವ ಜಿಲ್ಲೆಗಳಲ್ಲಿ  ಪ್ರಾ. ಕೃ .ಪ.ಸ.ಸಂ ಗಳಲ್ಲಿ ಠೇವಣಿ  ಅಧಿಕ ವಿದೆಯೋ (ಉದಾ: ಕೊಡಗು, ದ.ಕ . ಉಡುಪಿ, ಉತ್ತರ ಕನ್ನಡ , ಬೆಳಗಾಂ ) ಅಲ್ಲಿ ತನ್ನ ತೊಡಗಿಸುವಿಕೆ ಹೆಚ್ಚು, ಜಿ. ಕೇ.ಸ  .ಬ್ಯಾಂಕ್  ಸಾಮರ್ಥ್ಯ  ವಿದ್ದಲ್ಲಿ ಅದರ  ಇಲ್ಲದಿದ್ದಲ್ಲಿ  ಕ.ರಾ.ಸ. ಅಪೆಕ್ಸ್ ಬ್ಯಾಂಕ್  ನ  ಕೊಡಗಿಸುವಿಕೆ  ಅಧಿಕ  ವಿರುತ್ತದೆ. ಜಿಲ್ಲಾ ಕೇಂದ್ರ  ಸಹಕಾರ ಬ್ಯಾಂಕ್  ಸದೃಡ  ವಿಲ್ಲದೊಡೆ  ಮತ್ತು  ಪ್ರಾ. ಕೃ. ಪ. ಸ. ಸಂಘ  ಸಂಪನ್ಮೂಲಗಳನ್ನು  (  ಠೇವಣಾತಿ / ಪಡೆದ ಸಾಲಗಳು) ಇಲ್ಲದಿದ್ದಲ್ಲಿ  ತನ್ನ ಸಂಘದ  ಬೇಡಿಕೆ  ಪೂರೈಸಲು  ಸಾಧ್ಯವಾಗುವುದಿಲ್ಲ.ರಾಜ್ಯ  ಸರ್ಕಾರ  ಬಡ್ಡಿ  ರಿಯಾಯ್ತಿ  ಯೋಜನೆ  ಜಾರಿ  ಆದರನಂತರ , ಈಗ  ಅದು  ಸಕಾಲದಲ್ಲಿ  ಸಾಲ  ಮರುಪಾವತಿಸಿದವರೆಗೆ  ‘ಶೂನ್ಯ ‘ ಬಡ್ಡಿ  ಧರವಾಗಿರುತ್ತದೆ. ಸರ್ಕಾರ ನೀಡುವ  ಉದ್ದಧರ  ಕಡಿತಗೊಳಿಸಲಾಗಿರುತ್ತದೆ. ಕೇಂದ್ರ ಸರ್ಕಾರ  ನೀಡುವ  ‘ಪ್ರೊತ್ಸಾಹಧನ ‘ ಕಡಿತಗೊಳಿಸಲಾಗಿದೆ. ಬಿಲ್ ಸಲ್ಲಿಕೆ  ಕ್ರಮಗಳು  ‘ಕಠಿಣ’ವಾಗಿದೆ. ಸರ್ಕಾರದಿಂದ  ಮಂಜೂರಿಯಾಗುವುದು  ಬಿಡುಗಡೆಯಾಗುವುದು ಒಳಂಬವಾಗುತ್ತಿದೆ. ಅಲ್ಲದೆ  ಬಡ್ಡಿ ದರದಲ್ಲಿ  ಪ್ರಾ. ಕೃ. ಪತ್ತಿನ ಸಹಕಾರ  ಸಂಘಕ್ಕೆ  ದೊರೆಯುವುದು  ಅತ್ಯಲ್ಪವಾಗಿರುತ್ತದೆ.  ಆದುದರಿಂದ   ಸಹಕಾರ  ಸಂಘದ  ಪ್ರಮುಖ  ಉದ್ದೇಶ  ಸಾಧನೆಯಲ್ಲಿ  ಸಂಘವು
ನಷ್ಟ  ಹೊಂದುತ್ತದೆ.

ಕಿರು ಸಾಲ :  ಸ್ಟ ಸಹಾಯ ಗುಂಪುಗಳು, ಜಂಟಿ ಭಾಧ್ಯತಾ  ಗುಂಪುಗಳಿಗೆ  ಸಾಲಿಗಳು : ಸಂಪನ್ಮೂಲಗಳು  ಅಧಿಕ  ವಿರುವ  ಸಂಘಗಳಲ್ಲಿ  ಮತ್ತು  ಗುಂಪು ರಚನೆಯಲ್ಲಿ  ಸರ್ಕಾರೇತರ , ಅಥವ  ಇದರ ಪರಿಣತರ ತಂಡವಿರುವ  ಜಿ. ಕೇ. ಸ.ಬ್ಯಾಂಕ್ ನಲ್ಲಿ  ಈ  ಚಟುವಟಿಕೆಯಲ್ಲಿ  ತೊಡಗಿಸಿಕೊಳ್ಳಬಹುದಾಗಿದೆ. ಕರ್ನಾಟಕದಲ್ಲಿ  ಇದಕ್ಕೂ( ಸ್ವ. ಸ. ಗುಂ) ಬಡ್ಡಿ ರಿಯಾಯ್ತಿ  ಯೋಜನೆ ಜಾರಿಯಲ್ಲಿದೆ. ನಬಾರ್ಡ್  ಶೇ100 ಪುನರ್ಧನ ಸೌಲಭ್ಯ  ಒದಗಿಸುತ್ತದೆ. ಆದರೆ  ಬಡ್ಡಿ ಧರ  ತುಸು  ಹೆಚ್ಚಿದೆ. ಈ  ಗುಂಪು ಚಳುವಳಿ  ಆರಂಭಗೊಂಡು  ನಾಲ್ಕು  ದಶಕಗಳೇ  ಕಳೆದಿವೆ. ರಾಷ್ಟ್ರೀಕೃತ (ವಾಣಿಜ್ಯ) ಬ್ಯಾಂಕ್ ಗಳು , ಗ್ರಾಮೀಣ  ಬ್ಯಾಂಕ್ ಗಳು, ಖಾಸಗಿ  ಬ್ಯಾಂಕ್ ಗಳು, ಎನ್. ಬಿ.ಎಫ್.ಸಿ ಗಳು , ಸರ್ಕಾರೇತರ  ಸಂಸ್ಥೆಗಳು  ನಬಾರ್ಡ್  ಆರ್ಥಿಕ  ಅಂಗ ಸಂಸ್ಥೆಗಳಿಂದಲೇ ಹಣ ಪಡೆದು  ಸಾಲವಿತರಿಸುತ್ತಿವೆ. ಒಬ್ಬರೇ  ಎರಡು  ಮೂರು ಗುಂಪುಗಳಲ್ಲಿ  ಸದಸ್ಯರಾಗಿರುವುದು. 2-3  ಸಾಲ ಮೂಲಗಳಿಂದ  ಸಾಲ ಪಡೆಯುವುದು. ಸಾಲ ಪಡೆಯುವ  ಶಕ್ತಿಗಿಂತ  ಹೆಚ್ಚಿನ  ಸಾಲ  ಪಡೆಯುವುದು. ಗುಂಪಿನ  ಸದಸ್ಯರಿಗೆ  ನೇರ ಸಾಲ  ಒದಗಿಸುವುದು.  ಈ  ಅನೇಕ  ವ್ಯತ್ಯಗಳಿಂದ  ವಾತಾವರಣ  ಕುಲ ಷಿತ  ಗೊಂಡಿರುವುದು .   ಕಿರು ಹಣಕಾಸು  ಸಂಸ್ಥೆಗಳ  ಇತ್ತೀಚೆಗಿನ  ಬಲವಂತ  ವಸೂಲಿ  ಕ್ರಮಗಳಿಂದ  ಸುದ್ದಿಯಲ್ಲಿದೆ. ಈ  ವಾತಾವರಣ  ವನ್ನು  ಸರಿಯಾದ  ಹಳಿಯ ಮೇಲೆ  ತರುವ  ಜವಾಬ್ದಾರಿ  ಇದೆ.

ಸಾರ್ವಜನಿಕ  ಪಡಿತರ  ವಿತರಣೆ:  ನ್ಯಾಯ  ಬೆಲೆ  ಅಂಗಡಿಗಳ  ಪರಮಾನಗಿ  ಖಾಸಗಿಯವರಿಗೂ  ನೀಡಿರುವುದು  ಸಹಕಾರ  ಸಂಘಗಳ  ಈ  ವ್ಯವಹಾರಗಳನ್ನು  ಕಡಿತ ಗೊಳಿಸಿದೆ  ಅಥವ  ಇಲ್ಲವಾಗಿಸಿದೆ. ಈ ವ್ಯವಹಾರವು ಲಾಭದಾಯಕ  ವ್ಯವಹಾರವಾಗಿರುವದಿಲ್ಲ. ಆದರೂ  ಸಹಾರ ಸಂಘದ  ‘ಅಸ್ಮಿತೆ'(identity) ಉಳಿಸಿಕೊಳ್ಳಲು  ಮತ್ತು  ನ್ಯಾಯಯುತ  ವಿತರಣಿ  ಸಹಕಾರ ಸಂಘದಿಂದ  ನಿಖರವಾದ  ವಿತರಣೆ ಸಾಧ್ಯವಾಗುತ್ತದೆ. ಇತರೆ ಖರೀದಿ  ಮಾರಾಟ  ವ್ಯವಹಾರಗಳು :  ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ, ಚಿತ್ತದ ಬೀಜ ಮಾರಾಟ, ಕೃಷಿ ಉತ್ಪನ್ನಗಳ  ಖರೀದಿ ಮಾರಾಟ, ಮೌಲ್ಯ ವೃದ್ಧಿಸಲು  (ಸಂಸ್ಕರಣೆ/ ರೂಪಾಂತರ) ಪ್ಯಾಕೇಜಿಂಗ್  ಮತ್ತು  ಬ್ರಾಂಡಿಂಗ್  ಮಾಡುವುದು. ಇದಕ್ಕೆ ಅಗತ್ಯ  ಬಂಡವಾಳ ಕ್ರೋಢೀಕರಣ . ಅಗತ್ಯ  ತಾಂತ್ರಿಕತೆ , ಕುಶಲತೆ. ಏಜೆನ್ಸಿ  ವ್ಯವಹಾರಗಳು:  ಸಹಕಾರ  ಸಂಘಗಳ  ನಡುವೆ  ಸಹಕಾರ  ಒಂದು  ಉತ್ತಮ  ಸಹಕಾರ  ತತ್ವ. ಇದರ  ಪಾಲನೆಯಿಂದ  ಬಂಡವಾಳ  ವೃದ್ಧಿ , ವ್ಯವಹಾರ  ಹೆಚ್ಚಳ ಸಾಧ್ಯ. ಕೆ. ಎಂ.ಎಫ್. ನ ‘ನಂದಿನಿ’ ಕೆ. ಓ.ಎಫ್. ನ  ‘ಸಫಲ್ ‘ ಉತ್ಪನ್ನಗಳ ಮಾರಾಟ.

  ಮೇಲಿನ  ಎಲ್ಲ  ವ್ಯವಹಾರಗಳು  ಉತ್ತಮವಾಗಿ  ಕಾರ್ಯನಿರ್ವಹಿಸುತ್ತಿರುವ  ಸಹಕಾರ ಸಂಘಗಳು  ಮಾತ್ರವೇ  ಕೈಗೊಳ್ಳಬಲ್ಲದು.  ನಬಾರ್ಡ್/ಎನ್.ಸಿ. ಡಿ.ಸಿ ಯು  ಬಂಡವಾಳ / ಸಾಲ  ಒದಗಿಸುವುದು  ಈಗಾಗಲೆಉತ್ತಮವಾಗಿ  ಕಾರ್ಯನಿರ್ವಹಿಸುತ್ತಿರುವ  ಸಹಕಾರ ಸಂಘಗಳಿಗೆ   ಲಭ್ಯವಾಗುತ್ತದೆ.  ನೂತನ ಸಹಕಾರ  ಸಂಘಗಳಿಗಾಗಲಿ  ನಷ್ಟದಲ್ಲಿರುವ  ಸಹಕಾರ ಸಂಘಗಳಿಗೆ  ಪುನಶ್ವೇತನ  ಕ್ರಮಗಳ ಬಗ್ಗೆ  ಯಾವುದೇಯೋಜನೆಗಳಿಲ್ಲ. ಪ್ರಾ. ಕೃ. ಪ.ಸ.ಸಂ. ತನ್ನ  ಸಾಮರ್ಥ್ಯ, ದೌರ್ಬಲ್ಯಗಳು, ಅವಕಾಶಗಳು  ಮತ್ತು  ಸವಾಲುಗಳು/ಬೆದರಿಕೆಗಳು  (SWOT-analysis) ಮಾಡಿ  ತನ್ನ ಸಾಮರ್ಥ್ಯಗಳನ್ನು  ವೃದ್ಧಿಗೊಳಿಸಬೇಕು. ದೌರ್ಬಲ್ಯಗಳನ್ನು  ಹೋಗಲಾಡಿಸಬೇಕು. ಅವಕಾಶಗಳನ್ನು  ಉಪಯೋಗಿಸಿಕೊಳ್ಳಬೇಕು. ಅದಕ್ಕಾಗಿ  ಮಾರ್ಗೋಪಾಯಗಳನ್ನು  ಕಂಡುಕೊಳ್ಳಬೇಕು. ಸವಾಲುಗಳು/ಬೆದರಿಕೆ  ಗಳನ್ನು  ಎದುರಿಸುವ ಸಾಮರ್ಥ್ಯ  ಬೆಳಸಿಕೊಳ್ಳಬೇಕು. ಪ್ರಾ. ಕೃ ಪ. ಸ.ಸಂಘಗಳು  ಸದೃಡ  ಗೊಳ್ಳದಿರುವ  ಜಿಲ್ಲೆಗಳಲ್ಲಿ  ವಿಶೇಷ ಕಾರ್ಯಕ್ರಮ  ರೂಪಿಸಿ  ಸರ್ಕಾರವು  ನೆರವು  ನೀಡಲು  ಕ್ರಮಕೈಗೊಳ್ಳುವುದು  ಆಯಾ  ಜಿಲ್ಲೆಯ  ವಿಶೇಷವಾಗಿ  ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಕಾರ್ಮಿಕರ  ಹಿತಾಸಕ್ತಿ ಯನ್ನು  ಕಾಪಾಡಿದಂತಾಗುತ್ತದೆ.


ಶಶಿಧರ. ಎಲೆ. 

ಸಹಕಾರ ಸಂಘಗಳ  ಅಪರ ನಿಬಂಧಕರು ( ನಿವೃತ್ತ ) ನಂ 281,

ನೇಸರ  ಬಾಲಾಜಿ  ಹೆಚ್ ಬಿ ಸಿ ಎಸ್  ಲೇಔಟ್ , ವಾಜರಹಳ್ಳಿ  ಬೆಂಗಳೂರು   560 109    

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More