ಕರ್ನಾಟಕದ ವೈಶಿಷ್ಠಪೂರ್ಣ ಸಹಕಾರ ಸಂಸ್ಥೆಗಳು.|ಶ್ರೀ. ರಘುನಂದನ.ಕೆ.

ಸಹಕಾರವೆನ್ನುವುದು ಮಾನವನ ಜೀವನದಲ್ಲಿ ತಲತಲಾಂತರಗಳಿಂದಲೂ ರೂಢಿಯಲ್ಲಿರುವ ನಡೆದುಕೊಂಡು ಬಂದಿರುವ ವಿಷಯ. ಈ ಸಹಕಾರ
ಮನೋಭಾವನೆಗೆ ಸಾಂಘಿಕ ರೂಪವನ್ನು, ತತ್ವವನ್ನು ಅಳವಡಿಸಿಕೊಂಡು ಪರಸ್ಪರ ನೆರವಿನೊಂದಿಗೆ ಬದುಕುವ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ಸಾಧಿಸಲು ಸರ್ವರಿಗೂ ಅವಕಾಶ ಒದಗಿಸುವ ಉದ್ದೇಶದಿಂದ ಸಹಕಾರ ಸಂಸ್ಥೆಗಳು ಪ್ರಾರಂಭಗೊಂಡವು. ಮೊದಲಿಗೆ ಆರ್ಥಿಕ ಸಬಲತೆಯನ್ನೇ ಮಾನದಂಡವಾಗಿಟ್ಟುಕೊಂಡು ಬೆಳೆದುಬಂದ ಸಹಕಾರ ಕ್ಷೇತ್ರ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಅವಶ್ಯಕತೆಗನುಗುಣವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವೈಶಿಷ್ಠಪೂರ್ಣ ಉದ್ದೇಶಗಳನ್ನು ಹೊಂದುತ್ತ ಬೆಳೆದು ಬಂದಿತು. ದೇಶದ ಮೊದಲ ಸಹಕಾರ ಸಂಘ ಕರ್ನಾಟಕದಲ್ಲಿ ನೋಂದಣಿ ಯಾಗುವುದರೊಂದಿಗೆ ಭಾರತದ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ವಿಶಿಷ್ಠ ಸ್ಥಾನ ಪಡೆಯಿತು.ಸಂವಿಧಾನದಲ್ಲಿ ಸಹಕಾರ ವಿಷಯವನ್ನು ರಾಜ್ಯಪಟ್ಟಿಯ ವಿಷಯವನ್ನಾಗಿಸಿದಕಾರಣ ಎಲ್ಲ ರಾಜ್ಯಗಳು ತಮ್ಮದೇ ಆದ ಸಹಕಾರ ಕಾಯ್ದೆಗಳನ್ನುಹೊಂದುವಂತಾಯಿತು. ಪ್ರಸ್ತುತ ಕರ್ನಾಟಕದಲ್ಲಿ ೧೯೫೯ರ ಸಹಕಾರ
ಸಂಘಗಳ ಕಾಯ್ದೆ ಹಾಗೂ ಸ್ವತಂತ್ರ ಕಾಯ್ದೆಯಾಗಿ ಜಾರಿಗೆ ಬಂದ ೧೯೯೭ರ ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆಗಳು ಜಾರಿಯಲ್ಲಿವೆ. ೪೩೦೦೦ಕ್ಕೂ ಅಧಿಕ ಸಹಕಾರ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕ್ರೆಡಿಟ್ ಹಾಗೂ ಪ್ರಾಥಮಿಕ ಸಹಕಾರ
ಸಂಸ್ಥೆಗಳಲ್ಲದೆ,ವಿವಿಧ ರೀತಿಯ ವೈಶಿಷ್ಠö್ಯಪೂರ್ಣ ಉದ್ದೇಶಗಳನ್ನು ಹೊಂದಿರುವ ಪ್ರವಾಸೋದ್ಯಮ, ಮಾರುಕಟ್ಟೆ ಕೇಂದ್ರಿತ, ನೌಕರರ,
ಮಹಿಳಾ ಪ್ರಧಾನ, ಸ್ವ ಸಹಾಯ, ಗ್ರಾಹಕ ಕೇಂದ್ರಿತ, ವ್ಯವಸಾಯಾಧಾರಿತ, ಶೈಕ್ಷಣಿಕ, ಕಾರ್ಮಿಕರ, ಕೈಗಾರಿಕಾ ಹಾಗೂ ವಿವಿಧ ಉದ್ದೇಶಗಳ
ಹೊಸತನಗಳನ್ನು ಹೊಂದಿರುವ ಸಹಕಾರ ಸಂಸ್ಥೆಗಳಿವೆ.ಹೊಸತನಗಳ ಹೊಂದಿದ ಕೆಲವು ಸಹಕಾರಿ ಸಂಸ್ಥೆಗಳ ಸಂಕ್ಷಿಪ್ತ
ಪರಿಚಯ ಇಲ್ಲಿದೆ.

ಸಹಕಾರ ಸಂಘಗಳ ಕಾಯ್ದೆಯಲ್ಲಿನ ವಿಶಿಷ್ಠ ಸಹಕಾರ ಸಂಘಗಳುದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ ನಿಯಮಿತ,
ಪುತ್ತೂರು :

ಜೇನುನೊಣಗಳಿಂದ ಜೇನನ್ನು ತೆಗೆಯುವ ಕೆಲಸಕ್ಕೆವೃತ್ತಿಪರತೆಯನ್ನು ನೀಡಲು ಹುಟ್ಟಿಕೊಂಡಿರುವ ಸಂಸ್ಥೆ ಇದು. ಮೇ
೧೯೩೮ಲ್ಲಿ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆ, ಶಾಸ್ತಿçÃಯ ರೀತಿಯ ಜೇನು ಕೃಷಿಕುರಿತು ಮಾಹಿತಿ ನೀಡುವುದು, ಜೇನುಕೃಷಿಗೆ ಅವಶ್ಯಕವಾದ ಎಲ್ಲಾ
ಉಪಕರಣಗಳನ್ನೊದಗಿಸಿ, ಕ್ರಮಬದ್ಧವಾಗಿ ಸಂಗ್ರಹಿಸಿದ ಜೇನನ್ನು ಖರೀದಿಸಿಮಾರಾಟದ ವ್ಯವಸ್ಥೆಗೊಳಿಸುವುದನ್ನು ಪ್ರಮುಖ ಉದ್ಧೇಶವಾಗಿ ಹೊಂದಿದೆ.
೧೯೮೧ ರಿಂದ ಜೇನು ಕೃಷಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ “ಮಧು ಪ್ರಪಂಚ” ಎಂಬ ತ್ರೆöÊಮಾಸಿಕ ಪತ್ರಿಕೆಯನ್ನು ಹೊರತರಲಾಗುತ್ತಿದೆ. ತನ್ನ ಸದಸ್ಯರಿಗೆ ಜೇನು ಕೃಷಿಗೆ ಅವಶ್ಯಕವಾದ ಜೇನು ಪೆಟ್ಟಿಗೆ, ಜೇನುಮೇಣ, ಜೇನು ಕೃಷಿ ಉಪಕರಣಗಳನ್ನು ಒದಗಿಸಿ
ಜೇನು ಕೃಷಿಗೆ ಉತ್ತೇಜನ ನೀಡುತ್ತದೆ. ತನ್ನ ಸದಸ್ಯರು ಬೆಳೆಯುವ ಜೇನನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಅದನ್ನು ಸಂಘದಲ್ಲಿರುವ
ಆಧುನಿಕ ಸುಸಜ್ಜಿತ ಸಂಸ್ಕರಣಾ ಘಟಕಗಳ ಮೂಲಕ ಸಂಸ್ಕರಿಸಿ,ವರ್ಗೀಕರಿಸಿ, ಪ್ಯಾಕಿಂಗ್ ಮಾಡಿ ಉತ್ತಮ ಗುಣಮಟ್ಟದ ಆಗ್ ಮಾರ್ಕ್ನ್ನು
ಹೊಂದಿರುವ “ಮಾಧುರಿ” ಜೇನನ್ನು ಗ್ರಾಹಕರಿಗೆ ಒದಗಿಸುತ್ತದೆ.ಜೇನುತುಪ್ಪದ ಜೊತೆಗೆ ಮಾಧುರಿ ಹನಿ ಜಾಮ್, ಮಾಧುರಿ ಕೋಕಮ್
ಸಿರಪ್‌ನ್ನು ಗ್ರಾಹಕರಿಗೆ ಒದಗಿಸುತ್ತದೆ.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ,
ಪುತ್ತೂರು :

ಕುಂಬಾರಿಕೆಯು ಒಂದು ಸಾಂಪ್ರದಾಯಿಕ ವೃತ್ತಿಯಾಗಿದ್ದು,ಇಂತಹ ಸಾಂಪ್ರಾದಾಯಿಕ ವೃತ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ
ಹುಟ್ಟಿಕೊಂಡಿರುವ ಸಂಸ್ಥೆ ಇದು. ೧೯೫೮ರಲ್ಲಿ ಗ್ರಾಮೀಣ ಪ್ರದೇಶ ಅರಿಯಡ್ಕಗ್ರಾಮದ ಕೌಡಿಚಾರಿನಲ್ಲಿ ಆ ಗ್ರಾಮದ ಕುಂಬಾರ ಕುಶಲಕರ್ಮಿಗಳನ್ನು
ಸೇರಿಸಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಅಸಂಘಟಿತಕುಶಲಕರ್ಮಿಗಳನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗೆ ಸ್ಪಂದಿಸುವುದು,
ಕುಂಬಾರರು ತಯಾರಿಸಿದ ಕರಕುಶಲ ವಸ್ತುಗಳನ್ನು ಸಹಕಾರಿ ಸಂಘವೇ ಮಾರುಕಟ್ಟೆ ಬೆಲೆಗೆ ಖರೀದಿಸಿ ತಲೆಹೊರೆಯ ಅಲೆದಾಟಕ್ಕೆ ವಿರಾಮ
ನೀಡುವುದು, ಕಚ್ಚಾವಸ್ತುಗಳಾದ ಆವೆಮಣ್ಣು ಮತ್ತು ಮಡಿಕೆ ಸಂಸ್ಕರಣೆಗೆ ಸೌದೆಯನ್ನು ಒದಗಿಸಲು ಸಹಕರಿಸುವುದು, ಸದಸ್ಯರಿಗೆ ಸಾಲ
ಸೌಲಭ್ಯವನ್ನು ಒದಗಿಸುವುದು ಇವೇ ಮೊದಲಾದ ಉದ್ದೇಶಗಳನ್ನು ಹೊಂದಲಾಗಿದೆ. ತನ್ನ ಸದಸ್ಯರಾದ ಕುಂಬಾರ ಕುಶಲಕರ್ಮಿಗಳಿಗೆ
ಕಚ್ಚಾವಸ್ತುಗಳಾದ ಆವೆಮಣ್ಣು, ಸೌದೆ, ಸಂಸ್ಕರಣಾ ಶೆಡ್‌ಗಳನ್ನು ಒದಗಿಸಿ, ಅವರು ತಯಾರಿಸಿದ ಮಡಿಕೆಗೆ ಅದರ ಗುಣಮಟ್ಟಕ್ಕೆ ಅನುಗುಣವಾಗಿ ಸಹಕಾರ
ಸಂಘವೇ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡುತ್ತಿದೆ. ಸಂಘವು ನವನವೀನ ಮಾದರಿಯ ಕಲಾತ್ಮಕ ಹೂವಿನ ಕುಂಡಗಳು, ಅಲಂಕಾರಿಕ
ಮಣ್ಣಿನ ಹೂದಾನಿಗಳು, ಗೃಹಪಯೋಗಿ ಮಣ್ಣಿನ ಪಾತ್ರೆಗಳ ಉತ್ಪಾದನೆ ಮತ್ತು ಮಾರಾಟವನ್ನು ಮಾಡುತ್ತಿದೆ.

ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿ.,
ಭೀಮನಕೋಣೆ :

ಮಲೆನಾಡಿನ ಜನರಿಗೆ ಕೃಷಿಗೆ ಪರ್ಯಾಯವಾದ ಹಾಗೂಪರಿಸರ ಸ್ನೇಹಿಯಾದ ಉದ್ಯೋಗವಕಾಶ ಕಲ್ಪಿಸಬೇಕೆಂಬ ಕನಸಿನೊಂದಿಗೆ
೧೯೯೪ರಲ್ಲಿ ಕವಿ-ಕಾವ್ಯ ಟ್ರಸ್ಟಿನ ಅಂಗಸAಸ್ಥೆಯಾಗಿ ಆರಂಭವಾದ ಚರಕಗ್ರಾಮೋದ್ಯೋಗ ಘಟಕವು ೧೯೯೬ರ ಅಕ್ಟೋಬರ್ ೦೪ ರಂದು
ನೋಂದಾಯಿಸಲ್ಪಟ್ಟಿತು. ಆರಂಭದಲ್ಲಿ ಕೇವಲ ಎರಡು ಕೈಮಗ್ಗ ಮತ್ತು ಎರಡು ಹೊಲಿಗೆ ಯಂತ್ರಗಳ ಮೂಲಕ ಆರಂಭವಾದ ಈ ಸಂಸ್ಥೆ
ಪ್ರಸ್ತುತ ೪೦೦ಕ್ಕೂ ಹೆಚ್ಚು ಜನರಿಗೆ ಕೆಲಸ ಒದಗಿಸಿರುವುದಲ್ಲದೇ ರಾಜ್ಯದ ಹಲವೆಡೆ ಮಾರಾಟ ಕೇಂದ್ರಗಳನ್ನೂ ಆರಂಭಿಸಿದೆ. ಚರಕ ಸಂಸ್ಥೆ ಕೇವಲ
ನೇಯ್ಗೆ ಘಟಕ ಮಾತ್ರವಾಗಿರದೆ ನೂಲಿಗೆ ಬಣ್ಣ ಹಾಕುವುದು, ಬ್ಲಾಕ್ ಪ್ರಿಂಟಿಂಗ್, ಸ್ಕಿನ್ ಪ್ರಿಂಟಿಂಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ, ತರಬೇತಿ, ವಿನ್ಯಾಸ ಹೀಗೆ ಹಲವಾರು ಕೌಶಲ್ಯಗಳನ್ನೊಳಗೊಂಡ ಸಂಕೀರ್ಣ ಘಟಕವಾಗಿದೆ. ಗಂಡಸರ ಉಡುಪುಗಳು, ಮಹಿಳೆಯರ ಸಿದ್ಧ ಉಡುಪುಗಳು
ಚೂಡಿದಾರ, ಕೌದಿ, ಡಿಸೈನ್ ಪೈಲ್, ಬೆಡ್‌ಸ್ಪೆçಡ್ ಮೊದಲಾದ ೧೫೯ಕ್ಕೂ ಹೆಚ್ಚು ಉತ್ಪನ್ನಗಳನ್ನು ಇಂದು ಚರಕ ತಯಾರಿಸುತ್ತಿದೆ.
ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿ), ಉಜಿರೆ : ೧೯೮೫ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆ ಕಳೆದ
೨೫ ವರ್ಷಗಳಲ್ಲಿ ಹಿನ್ನಡೆ ಕಾಣದೆ ರಾಜ್ಯದಲ್ಲೇ ಪ್ರಥಮ ರಬ್ಬರು ಬೆಳೆಗಾರರ ಸಹಕಾರಿ ಸಂಘವಾಗಿ ಹಲವು ಪ್ರಥಮಗಳನ್ನು ದಾಖಲಿಸಿದೆ. ೮೦೦
ಟನ್ ರಬ್ಬರು ದಾಸ್ತಾನು ಮಾಡುವ ಅವಕಾಶವಿರುವ ಗೋದಾಮು ಸೌಲಭ್ಯದೊಂದಿಗೆ ಸಂಘದ ಸ್ವಂತ ಜಾಗದಲ್ಲಿ ಸುಸಜ್ಜಿತ ರಬ್ಬರು
ನರ್ಸರಿಯನ್ನು ಸ್ಥಾಪಿಸಲಾಗಿದೆ. ರಬ್ಬರು ಉತ್ಪಾದಕರ ಸಂಘಗಳಿಗೆ ಏಜೆನ್ಸಿ ನೀಡಿ ರಬ್ಬರು ಖರೀದಿ ಮಾಡುವಂತೆ ಉತ್ತೇಜನ ಹಾಗೂ ಸಹಕಾರ ನೀಡುತ್ತಿದೆ.
ರಾಜ್ಯದ ರಬ್ಬರು ಕೃಷಿಕರನ್ನು ಹಲವು ಬಾರಿ ಸಂಘಟಿಸಿ ರಾಜ್ಯ ಮಟ್ಟದ ಸಮ್ಮೇಳನಗಳನ್ನು ಏರ್ಪಡಿಸಿದೆ. ಇದು ಕರ್ನಾಟಕದ ಪ್ರಪ್ರಥಮ ರಬ್ಬರ್
ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ, ಕರ್ನಾಟಕದಲ್ಲಿ ಅತೀ ಹೆಚ್ಚಿನ ದರದಲ್ಲಿ ಎಲ್ಲಾ ದರ್ಜೆಯ ರಬ್ಬರು, ಸ್ಕಾçಪ್ ರಬ್ಬರು
ಖರೀದಿಸುತ್ತಿರುವ ಏಕಮಾತ್ರ ಸಂಸ್ಥೆ, ರಬ್ಬರ್ ಸಂಬAಧಿ ಎಲ್ಲಾ ರಾಸಾಯನಿಕ, ರಸಗೊಬ್ಬರ, ಕೃಷಿ ಸಲಕರಣೆ ಮಾರಾಟ ಮಾಡುತ್ತಿರುವ ಏಕಮಾತ್ರ ಸಂಸ್ಥೆ, ಸದಸ್ಯರ ಉತ್ಪನ್ನಗಳನ್ನು ಕಾಪಿಡಲು ದಾಸ್ತಾನು ಸೌಲಭ್ಯ ಒದಗಿಸುತ್ತಿರುವ ಏಕಮಾತ್ರ ಸಹಕಾರಿ ಸಂಘ, ರಬ್ಬರು ಮೌಲ್ಡೆಡ್ ವಸ್ತುಗಳ ತಯಾರಿಕಾ ಘಟಕವನ್ನು ಹೊಂದಿರುವ ಏಕೈಕ ಸಹಕಾರಿ ಸಂಘ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಸಹಕಾರಿ ಆಸ್ಪತ್ರೆ ಸೊಸಾಯಿಟಿ
ನಿಯಮಿತ, ಘಟಪ್ರಭಾ :

೧೩ ಅಕ್ಟೋಬರ್ ೧೯೫೧ರಲ್ಲಿ ಮುಂಬಯಿ ಸಹಕಾರ ಸಂಘ ಕಾಯ್ದೆಯಲ್ಲಿ ನೋಂದಾಯಿತವಾಗಿ ೧೯೫೯ರಿಂದ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಇದು. ಈ ಸಹಕಾರಿ ಆಸ್ಪತ್ರೆಯೊಂದಿಗೆ ಇದರ ನೇತೃತ್ವದಲ್ಲೇ ನಡೆಯುತ್ತಿರುವ ಅಂಗ ಸಂಸ್ಥೆಗಳಾದ ಆಯುರ್ವೇದ ಕಾಲೇಜು, ಸ್ನಾತಕೋತರ ಕೇಂದ್ರ, ನಿಸರ್ಗೊಪಚಾರ ಮತ್ತು ಯೋಗ ಕೇಂದ್ರ, ಹಾಗೂ ನರ್ಸಿಂಗ ಕಾಲೇಜುಗಳು ಇಂದು ಅನೇಕ ಸೇವಾ ಚಟುವಟಿಕೆಗಳನ್ನು ನೀಡುವ ಮುಖಾಂತರ ಗ್ರಾಮೀಣ
ಭಾಗದಲ್ಲಿ ಆರೋಗ್ಯ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ್ದು ಗಮನಾರ್ಹವಾದದ್ದು. ಗ್ರಾಮೀಣ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ವೈದ್ಯಕೀಯ ಉಪಚಾರ ನೀಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಈ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಎಲ್ಲ ಹೆರಿಗೆ ಮತ್ತು ಕೆಲ ಬಡ ರೋಗಿಗಳಿಗೆ ಉಚಿತ ಸೌಲಭ್ಯ ಮತ್ತು ಊಟ ಉಪಚಾರ ಸೌಲಭ್ಯಗಳನ್ನು ಸಹಕಾರ ಸಂಘದಿಂದಲೇ ಒದಗಿಸುತ್ತಿರುವುದು ಉಲ್ಲೇಖಾರ್ಹವಾದದ್ದು. ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ದಿ ಸಹಕಾರ ನಿಯಮಿತ, ಚಂದರಗಿ : ಗ್ರಾಮೀಣ ಕ್ರೀಢೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಹಾಗೂ ಅಭಿವೃದ್ಧಿಯೆಡೆಗೆ ನಡೆಸುವ ಉದ್ದೇಶದಿಂದ ಬೆಳಗಾವಿಯ ಚಂದರಗಿಯಲ್ಲಿ ದಿನಾಂಕ:೨೫.೦೨.೧೯೮೩ರಲ್ಲಿ ನೋಂದಾಯಿತವಾದ ಸಹಕಾರ ಸಂಸ್ಥೆ ಇದು. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೊಭಾವನೆ ಬೆಳಸುವುದು ಹಾಗೂ ಆಸಕ್ತಿ ಹುಟ್ಟಿಸುವುದು, ಯಾವುದೇ ಜಾತಿ ಮತ ಭೇಧ ಭಾನೋಡದೇ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಕ್ರೀಡಾಳುಗಳಿಗೆ ಸ್ಪೂರ್ತಿ
ತುಂಬುತ್ತಾ ಹೆಚ್ಚಿನ ಅವಕಾಶ ಒದಗಿಸುವುದು ಮತ್ತು ಕ್ರೀಡಾ ಉತ್ತೇಜನ ಮಾಡುವುದು ಸಹಕಾರಿಯ ಪ್ರಾಥಮಿಕ ಉದ್ದೇಶವಾಗಿದೆ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನಿ., ಹುಕ್ಕೇರಿ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಭಾರತ ದೇಶದಲ್ಲಿ ಪ್ರಥಮ ಮತ್ತು ಕರ್ನಾಟಕ ರಾಜ್ಯದಲ್ಲಿ ಏಕೈಕ ವಿದ್ಯುತ್ ಸಹಕಾರಿ ಸಂಘವಾಗಿರುತ್ತದೆ. ಈ ಸಂಘವು ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ೧೯೫೯ರಡಿ ದಿನಾಂಕ:೨೧.೦೭.೧೯೬೯ರಂದು ಗ್ರಾಮೀಣ ವಿದ್ಯುತ್ ಮಹಾಮಂಡಳ ಹೊಸದಿಲ್ಲಿ ಇವರಿಂದ ಸ್ಥಾಪಿಸಲ್ಪಟ್ಟ ೫ ಪ್ರಾಯೋಗಿಕ ಸಹಕಾರಿ ವಿದ್ಯುತ್ ಸಂಘಗಳಲ್ಲಿ ಒಂದು.
ಗ್ರಾಮೀಣ ಭಾಗದಲ್ಲಿ ಜನರಿಗೆ ಸಹಕಾರಿ ತತ್ವಗಳ ಅಡಿ ಸಹಕಾರಿ ಸಂಸ್ಥೆಗಳಿಂದ ಕಡಿಮೆ ದರಗಳಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಉತ್ತಮವಾಗಿ
ಅಳವಡಿಸಲು ಭಾರತ ಸರಕಾರ ಹೊಂದಿದ ಧ್ಯೇಯದ ಅನ್ವಯ ಈ ಸಂಘವು ತನ್ನ ಕಾರ್ಯಕ್ಷೇತ್ರದಲ್ಲಿ ವಾಸಿಸುವ ಎಲ್ಲ ನಾಗರಿಕರಿಗೆ,
ಉದ್ಯಮಿಗಳಿಗೆ, ವ್ಯಾಪಾರ ಸಂಸ್ಥೆಗಳಿಗೆ, ಸಂಘ ಸಂಸ್ಥೆಗಳಿಗೆ ಯೋಗ್ಯ ದರದಲ್ಲಿ ನಿಯಮಿತವಾಗಿ ವಿದ್ಯುತ ಪೂರೈಸುವುದು ಸೇರಿದಂತೆ ವಿದ್ಯುತ್ ಕ್ಷೇತ್ರಕ್ಕೆ ಸೇರಿದ ಎಲ್ಲ ಕಾರ್ಯಗಳನ್ನು ಮಾಡುತ್ತಿದೆ. ರೈತರಿಗೆ ನೀರಾವರಿ ಪಂಪಸೇಟಗಳನ್ನು ಕೂಡಿಸಲು, ತಾಲೂಕಿನಲ್ಲಿ ಉದ್ಯೋಗ, ವಾಣಿಜ್ಯ ಕೇಂದ್ರ ಹಾಗೂ ಉದ್ಯಮೆಗಳನ್ನು ಸ್ಥಾಪಿಸಲು, ವಿದ್ಯುತ ಕಂಬ, ಟ್ರಾನ್ಸ್ಫಾರ್ರಮರ್ ಹಾಗೂ ಇತರ ಉಪಕರಣಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಸದಸ್ಯರಿಗೆ ಅವರ ಅವಶ್ಯಕತೆ ಅನುಸಾರ ಪೂರೈಸುವುದು ಹಾಗೂ ವಿದ್ಯುತ ಶಕ್ತಿಯ ಬಳಕೆಯ ಬೇರೆ ವಿಧಾನಗಳ ಬಗ್ಗೆ ವಿವರಗಳನ್ನು ಸದಸ್ಯರಿಗೆ ಒದಗಿಸುವುದು ಸೇರಿದಂತೆ ಅನೇಕ ಉದ್ದೇಶವನ್ನು ಹೊಂದಿದೆ.

ದಿ ತೋಟಗಾರ್ಸ್ ಕೋಪರೇಟಿವ್ ಸೇಲ್ಸ್ ಸೋಸಾÊಟಿ ಲಿ., ಶಿರಸಿ :

ಸಾಮಾನ್ಯವಾಗಿ ಟಿಎಸ್‌ಎಸ್ ಎಂದೇ ಸ್ಥಳೀಯವಾಗಿ ಪ್ರಸಿದ್ದಿ. ೨೧.೦೯.೧೯೨೩ರಲ್ಲಿ ಈ ಸಂಸ್ಥೆ ಆರಂಭವಾಯಿತು. ಬೆಳೆಗಳ ಸಂಸ್ಕರಣ ಮಾಡುವುದು, ಸದಸ್ಯರಿಗೆ ಸಾಲ ಮತ್ತು ಠೇವಣಿ ಸೌಲಭ್ಯ ಒದಗಿಸುವುದು. ಉತ್ತಮ ಗುಣಮಟ್ಟದ ಮಾರುಕಟ್ಟೆ ಸೌಲಭ್ಯ, ಆರ್ಥಿಕ ಸಹಕಾರ, ಕಡಿಮೆ ದರದಲ್ಲಿ ಸಾಗಾಣಿಕೆ ಸೌಲಭ್ಯ, ಉಗ್ರಾಣ ಸೌಲಭ್ಯ, ೨೪*೭ ಎಟಿಎಂ ಸೌಲಭ್ಯ, ಕಡಿಮೆ ದರದಲ್ಲಿ ವಸತಿಗೃಹ ಸೌಲಭ್ಯ, ಶೀತಲೀಕರಣ ಸೌಲಭ್ಯ, ಜನೌಷಧಿ ಮಾರಾಟ, ಸೂಪರ್ ಮಾರ್ಕೆಟ್ ಸೇವೆಗಳನ್ನು ಸದಸ್ಯರಿಗೆ ಒದಗಿಸುತ್ತಿದೆ. ಐಎಸ್‌ಒ ಪ್ರಮಾಣ ಪತ್ರ ಪಡೆದಿರುವುದಲ್ಲದೆ ಸಾರ್ವಜನಕ ಸೇವಾ ಪ್ರಶಸ್ತಿ, ಉತ್ತಮ ಸಹಕಾರ ಸಂಘ, ಉತ್ತಮ ಮಾರಾಟ ಸಹಕಾರಿ, ಇಫ್ಕೋ ಕ್ಯಾಶ್ ಅವಾರ್ಡ್ ಇತ್ಯಾದಿ ಪ್ರಶಸ್ತಿಗಳು ಇದರ ಸಾಧನೆಯಗರಿಗಳಾಗಿವೆ.

“ಟ್ರಾನ್ಸ್ಪೋರ್ಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್”, ಕೊಪ್ಪ :
ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಾವಣಗೆರೆಗಳಲ್ಲಿ ಸಹಕಾರ ಸಾರಿಗೆ ಎಂದೇ ಕರೆಯಲ್ಪಡುವ ಈ ಸಂಸ್ಥೆ ಸಾರಿಗೆಯ ವಾಣಿಜ್ಯಾತ್ಮಕ
ಬಳಕೆಯ ಇತಿಹಾಸವನ್ನು ಹೊಂದಿದ್ದು ದಿನಾಂಕ:೦೮.೦೩.೧೯೯೧ರಿಂದ ಕಾರ್ಯಾರಂಭ ಮಾಡಿದೆ. ಸಂಘದ ನೌಕರರಾದವರೆಲ್ಲರೂ ಸದಸ್ಯತ್ವ
ಹೊಂದಲೇಬೇಕೆಂಬ ನಿಯಮದನ್ವಯ, ನೌಕರರೇ ಸಹಕಾರಿಯ ಸದಸ್ಯರಾಗಿಯೂ ಇರುವ ವೈಶಿಷ್ಟ ಹೊಂದಿರುವ ಹಾಗೂ ನೌಕರರೇ ನಿರ್ದೇಶಕರಾಗಲು ಅವಕಾಶವಿರುವ ಕಾರಣದಿಂದ ಹಾಗೂ ನೌಕರರ ಕಾರ್ಯನಿರ್ವಹಣೆಯ ಆಧಾರದಲ್ಲಿ ಹುದ್ದೆಗಳನ್ನು, ಬಡ್ತಿಗಳನ್ನು ನೀಡಲಾಗುವುದರಿಂದ ಹಾಗೂ ಸದಸ್ಯತ್ವದ ಸ್ವರೂಪವು ಹುದ್ದೆಗಳ ಮೂಲಕ ನಿರ್ಣಯಿಸಲ್ಪಡುವುದರಿಂದ ಸಹಕಾರ ಕ್ಷೇತ್ರದಲ್ಲೇ ವಿಭಿನ್ನವೆನಿಸುವ ಆಡಳಿತ ನಿರ್ವಹಣಾ ಪದ್ದತಿ ಈ ಸಂಸ್ಥೆಯ ವಿಶೇಷ. ಪ್ರಥಮದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಪ್ರಾರಂಭಗೊಂಡ ಈ ಸಂಘವು ಮುಂದೆ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಯತ್ತ ನಡೆಯಿತು. ಸುತ್ತಲಿನ ವಿದ್ಯಾವಂತ
ನಿರುದ್ಯೋಗಿಗಳ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುತ್ತಾ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಾ ತನ್ನಉದ್ಯಮವನ್ನು ವಿಸ್ತರಿಸುತ್ತಿದ್ದ ಈ ಸಂಸ್ಥೆ ಸಮಾಪನೆಯತ್ತ ಸಾಗುತ್ತಿರುವುದು ವಿಷಾದನೀಯ.

ಸ್ಪೆಸ್ ರೂಟ್ ಸೌಹಾರ್ದ ಸಹಕಾರಿ ನಿ., ಶಿರಸಿ :

೦೪ನೇ ಫೆಬ್ರವರಿ ೨೦೧೦ರಂದು ನೋಂದಣಿಗೊAಡ ಈ ಸಹಕಾರಿಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ಹೊಸ ಛಾಪನ್ನು ಮೂಡಿಸಿದೆ. ಸ್ವಾಭಾವಿಕ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ದೇಶದ ಯುವಜನರಿಗೆ ಕೆಲಸ ನೀಡಿ ದುಡಿಯುವ ಅವಕಾಶ ಒದಗಿಸಿ ಸಹಕಾರ ಕ್ಷೇತ್ರದ ಮೂಲಕ ದೇಶದ ಜನರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಅವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮವನ್ನು ಗ್ರಾಮದತ್ತ ಕೊಂಡೊಯ್ಯುವುದೇ ಇದರ ಸ್ಥಾಪನೆಗೆ ಕಾರಣ. ಸರಕಾರ ಹಾಗೂ ಸಾರ್ವಜನಿಕರು ಗುರುತಿಸಿರದ ಸೃಷ್ಟಿ ಸೌಂದರ್ಯಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವುದು. ಜೊತೆಗೆ ಭಾರತೀಯ ಸಂಸ್ಕೃತಿ, ಕಲೆ ಹಬ್ಬ ಹರಿದಿನಗಳ, ಜಾತ್ರೆಗಳ ಆಚಾರ ವಿಚಾರಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಮೂಲಕ ಗ್ರಾಮಮಟ್ಟದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸುವುದು, ಗ್ರಾಮದ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಆರ್ಥಿಕ ಹಾಗೂ ಸಾಮಾಜಿಕ
ಅಭಿವೃದ್ಧಿಯ ಕಾರ್ಯ ನಿರ್ವಹಿಸುವುದು ಮುಖ್ಯ ಉದ್ದೇಶಗಳಾಗಿವೆ. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ : ೦೭-ಜನವರಿ-೨೦೦೫ರಂದು
ನೋಂದಣಿಗೊಂಡ ಈ ಸಹಕಾರಿಯು ಸದಸ್ಯರ ಪರವಾಗಿ ಅವರ ತೋಟಗಾರಿಕಾ ಉತ್ಪನ್ನಗಳನ್ನು ಗ್ರಾಹಕ ಕೇಂದ್ರಗಳಲ್ಲಿ ಗ್ರಾಹಕರಿಗೆ ಅಥವಾ
ಗ್ರಾಹಕರ ಸಂಘ ಸಂಸ್ಥೆಗಳಿಗೆ ಮಾರಾಟ ಮಾಡುತ್ತದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ ಹಾಗೂ ಜೊಯಿಡಾ ತಾಲ್ಲೂಕುಗಳಲ್ಲಿ ವ್ಯವಸಾಯಗಾರರು ಬೆಳೆಯುವ ವ್ಯವಸಾಯೋತ್ಪನ್ನಗಳಾದ ಅಡಿಕೆ, ತೆಂಗು, ಕಾಳು ಮೆಣಸು, ವೆನಿಲಾ, ಯಾಲಕ್ಕಿ, ಶುಂಠಿ ಹಾಗೂ ಮತ್ತಿತರೆ ವಾಣಿಜ್ಯ, ಸಾಂಬಾರ ಪದಾರ್ಥ, ತೋಟಗಾರಿಕಾ ಮತ್ತು ನೆಡು ತೋಪು ಹಾಗೂ ಅರಣ್ಯ ಉತ್ಪನ್ನಗಳಾದ ಉಪ್ಪಾಗೆ, ಮುರಗಲು, ರಾಮಪತ್ರ, ದಾಲ್ಚಿನಿ, ನೆಲ್ಲಿ, ವಾಟೆ ಹಾಗೂ ಶೀಗೆಕಾಯಿ ಇತ್ಯಾದಿ ಉತ್ಪನ್ನಗಳನ್ನು ಉತ್ತಮ ಧಾರಣೆಗೆ ಮಾರಾಟ ಮಾಡುವ ಮೂಲಕ ಬೆಳೆಗಾಗರಿಗೆ ಅಗತ್ಯ ಸೇವೆ ಸಲ್ಲಿಸುವುದು ಹಾಗೂ ಅನಾನಸು, ಬಾಳೆ, ಚಿಕ್ಕು, ಮಾವು, ಕಲ್ಲಂಗಡಿ, ಹಲಸು ಹಾಗೂ ಗೇರು ಮುಂತಾದ ಹಣ್ಣುಗಳನ್ನು ಖರೀದಿಸುವುದು ಹಾಗೂ ಔಷದಿ ಸಸ್ಯಗಳ ಖರೀದಿ ಹಾಗೂ
ಮಾರಾಟ ಮಾಡುವುದು ಮತ್ತು ಆರ್ಕಿಡ್ ಹಾಗೂ ಪುಷ್ಪ ಕೃಷಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಶ್ರೀ ಜ್ಯೋತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ನಿ., ಎಕ್ಸಾಂಬಾ :

೩೧-ಮಾರ್ಚ್-೨೦೦೩ರಂದು ನೋಂದಣಿಗೊAಡ ಈ ಸಹಕಾರಿಯು ಜನತಾ ಬಜಾರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸಹಕಾರಿಯಾಗಿದೆ. ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಹಾಗೂ ಸ್ವಯಂ ಉದ್ಯೋಗದ ಅವಕಾಶವನ್ನು ಒದಗಿಸುವ ಸಲುವಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಪ್ರಿಂಟಿಂಗ್, ಸ್ಕಿನ್ ಪ್ರಿಂಟಿಂಗ್, ಜಾಹೀರಾತು ಸೇವೆ ಹಾಗೂ ಇನ್ನಿತರೆ ಕೈಗಾರಿಕಾ ಕಾರ್ಯಕ್ರಮಗಳನ್ನುಕೈಗೊಳ್ಳುವುದು, ಸ್ವಯಂ ಉದ್ಯೋಗ ಮತ್ತು ವೃತ್ತಿಪರ ಉದ್ಯೋಗಕ್ಕೆ ಅನುಕೂಲಕರವಾಗುವಂತಹ ಡಿಪ್ಲೊಮಾ ಕೋರ್ಸ್ಗಳನ್ನು ಜರುಗಿಸುವುದು, ಸ್ವ-ಉದ್ಯೋಗಸ್ಥರಿಗೆ ಸ್ವಂತ
ಉದ್ದಿಮೆ ಸ್ಥಾಪಿಸಿಕೊಳ್ಳಲು ಹಣಕಾಸಿನ ಮತ್ತು ತಾಂತ್ರಿಕ ಸಹಾಯವನ್ನು ಮಾಡುವುದು, ಟೇಲರಿಂಗ್, ಟೈಪಿಂಗ್ ಹಾಗೂ ಪ್ರಿಟಿಂಗ್ ಕ್ಲಾಸುಗಳನ್ನು
ತೆರೆಯುವುದು, ಟಿ.ವಿ ಹಾಗೂ ಟ್ರಾನ್ಸಿಸ್ಟರ್‌ಗಳ ಬಿಡಿಭಾಗಗಳನ್ನು ಹಾಗೂ ಜೋಡನೆ ಕಾರ್ಯವನ್ನು ಕೈಗೊಳ್ಳುವ ಘಟಕವನ್ನು ಸ್ಥಾಪಿಸುವುದು
ಮುಂತಾದ ಉದ್ದೇಶಗಳನ್ನು ಹೊಂದಿರುತ್ತದೆ. ಬಿಜಾಪುರ ತೋಟಗಾರಿಕಾ ಸೌಹಾರ್ದ ಸಹಕಾರಿ ನಿ., ಬಿಜಾಪುರ : ೧೯-ಜನವರಿ-
೨೦೦೨ರಂದು ನೋಂದಣಿಗೊಂಡ ಈ ಸಹಕಾರಿಯು ಕೃಷಿ, ತೋಟಗಾರಿಕೆ ಹಾಗೂ ಅವುಗಳಿಗೆ ಸಂಬಂಧಿಸಿದ ಇತರೆ ಪೂರಕ ವಸ್ತುಗಳಿಗೆ ಅಂದರೆ ಹಣ್ಣು,
ಹಣ್ಣಿನ ರಸ ಮತ್ತು ತರಕಾರಿಗಳು, ಸಂಸ್ಕರಿಸಿ ಒಣಗಿಸಿದ ಹಣ್ಣು/ತರಕಾರಿ ಹಾಗೂ ಆಹಾರ ಧಾನ್ಯ, ಬೀಜ, ಸಾಂಬಾರು ಪದಾರ್ಥ, ಔಷದೀಯ ಸಸ್ಯಗಳ
ಉತ್ಪನ್ನ, ಹೈನುಗಾರಿಕೆ ಇತ್ಯಾದಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮುಖ್ಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ವಾಹನ ಮಾಲೀಕರ ಸೌಹಾರ್ದ
ಸಹಕಾರಿ ನಿ., ಮೈಸೂರು :

೦೫-ಸೆಪ್ಟೆಂಬರ್-೨೦೦೨ರಂದು ನೋಂದಣಿಯಾಗಿರುತ್ತದೆ. ಸಾರಿಗೆ ವಾಹನಕ್ಕೆ ಸಂಬಂಧಪಟ್ಟಂತೆ ದಳ್ಳಾಳಿ ಹಂಚಿಕೆದಾರರಂತೆ ವರ್ತಿಸುವುದು, ಸಹಕಾರಿಯ ಸದ್ಯರಿಗೆ ಮೋಟಾರು ವಾಹನಗಳ ಬಿಡಿಭಾಗಗಳನ್ನು ಕೊಳ್ಳಲು ಮತ್ತು ಮಾರಾಟ ಮಾಡಲುಸಹಾಯ ಮಾಡುವುದು, ವಸ್ತುಗಳ ಆಯಾತ ಮತ್ತು ನಿರ್ಯಾತ ಮಾಡುವುದು, ಚಿಲ್ಲರೆ ಬಿಡಿ ಮಾರಾಟಗಾರರಾಗಿ ಮೋಟಾರು ವಾಹನಗಳು, ಬಿಡಿ ಭಾಗಗಳು, ಟೈರ್ ಮತ್ತು ಟ್ಯೂಬ್‌ಗಳನ್ನು ಸೇರಿದಂತೆ ಟಾರ್‌ಪಾಲುಗಳು, ವ್ಯವಸಾಯದ ವಾಹನಗಳು, ಮೃದು ಚಾಲಕ ಎಣ್ಣೆಗಳು, ಇತರ ಬಿಡಿ ಭಾಗಗಳ ವ್ಯಾಪಾರಕ್ಕೆ ಹಂಚಿಕೆದಾರರಾಗಿ ವರ್ತಿಸುವುದು, ಸಹಕಾರಿಯ ಸದಸ್ಯರಿಗೆ ಸರ್ವಿಸ್ ಸ್ಟೇಷನ್, ವೇಬ್ರಿಡ್ಜ್ ಮತ್ತು ಕಾರ್ಯಾಗಾರಗಳನ್ನು ಸಂಯೋಜಿಸಲು ಬಿಡಿ ಭಾಗಗಳನ್ನು ಸರಿಪಡಿಸಲು ಸಹಾಯ ಮಾಡುವುದು, ಡ್ರೆöÊವಿಂಗ್ ಸ್ಕೂಲ್ ಮತ್ತು ಪಲ್ಯೂಷನ್ ಟೆಸ್ಟಿಂಗ್ ಸೆಂಟರ್ ವ್ಯವಸ್ಥೆ ಮಾಡುವುದು ಮತ್ತು ನಿರ್ವಹಿಸುವುದು, ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ನಿರ್ಮಾಣ ನಿರ್ವಹಣೆ ಮಾಡುವುದು, ಪರಿಸರ ಪ್ರಜ್ಞೆ, ನೈರ್ಮಲ್ಯ, ವನಮಹೋತ್ಸವ, ಶುಭ್ರ ಪರಿಸರ, ಶುಭ್ರ ಜೀವನ, ರಕ್ತದಾನ ಕಾರ್ಯಕ್ರಮ, ನೇತ್ರದಾನ ಕಾರ್ಯಕ್ರಮ, ಆರೋಗ್ಯ ಶಿಬಿರ, ಕುಟುಂಬ ಯೋಜನಾ ಶಿಬಿರಗಳನ್ನು ವೈದ್ಯಕೀಯ ಸಲಹಾ ಕೇಂದ್ರಗಳನ್ನು ಹಾಗೂ ಉಚಿತ ಸಲಹಾ ಕೇಂದ್ರಗಳನ್ನು ಸ್ಥಾಪಿಸುವ ಹಾಗೂ ನಡೆಸುವ ವಿಶಿಷ್ಟ ಉದ್ದೇಶಗಳನ್ನು ಹೊಂದಿದ್ದು ಇದನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ ನಿ., ಗುಲ್ಬರ್ಗಾ : ೧೦-ಏಪ್ರಿಲ್-೨೦೦೨ರಂದು ನೋಂದಣಿಗೊAಡಿದ್ದ ಈ ಸಹಕಾರಿಯು ಮಿತಾಕ್ಷರ ಗ್ರಂಥಕರ್ತ
ವಿಜ್ಞಾನೇಶ್ವರನ ಜ್ಞಾಪಕಾರ್ಥವಾಗಿ, ವಿಜ್ಞಾನೇಶ್ವರನ ಕಾರ್ಯಕ್ಷೇತ್ರವಾಗಿದ್ದ ಗುಲ್ಬರ್ಗ ಜಿಲ್ಲೆಯ ಮರ್ತೂರಿನಲ್ಲಿ ಸ್ಮಾರಕ ಮಂದಿರ ಹಾಗೂ ಸಂಶೋಧನಾ ಭವನ ನಿರ್ಮಾಣ ಮಾಡುವುದು, ಪ್ರಾಚೀನ ಭಾರತದ ಕಾನೂನು ಇತಿಹಾಸದ ಬಗ್ಗೆ ಪುಸ್ತಕ ಭಂಡಾರವನ್ನು ಸ್ಥಾಪಿಸುವುದು, ಪ್ರಾಚೀನ ಭಾರತದ ವ್ಯವಹಾರ ಧರ್ಮ ಹಾಗೂ ರಾಜಧರ್ಮದ ಬಗ್ಗೆ ಸಂಶೋಧನೆ ಮಾಡುವುದು, ಭಾರತೀಯ ಸಂವಿಧಾನ, ಕಾನೂನು ಹಾಗೂ ನ್ಯಾಯಶಾಸ್ತçಗಳ ಬಗ್ಗೆ ಪುಸ್ತಕಗಳನ್ನು ನಿಯತಕಾಲಿಕೆಗಳನ್ನು ಪ್ರಕಟಿಸುವುದು ಮತ್ತು ವಿಚಾರ ಸಂಕಿರಣಗಳನ್ನು ಮತ್ತು ಸಮ್ಮೇಳನಗಳನ್ನು ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು, ನ್ಯಾಯ ಶಾಸ್ತ್ರ ಮತ್ತು ಭಾರತೀಯ ಮೌಲ್ಯಗಳ ಬಗ್ಗೆ ಸಂಶೋಧನೆ ಮಾಡುವ ಸಂಶೋಧಕರಿಗೆ ವಿದ್ಯಾರ್ಥಿ ವೇತನ ಮತ್ತು ಅವಶ್ಯಕ ಸೌಲಭ್ಯಗಳನ್ನು
ಒದಗಿಸುವುದು ಮುಂತಾದ ಉದ್ದೇಶಗಳನ್ನು ಹೊಂದಿತ್ತು. ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಇದಾಗಿದ್ದು
ವಿಜ್ಞಾನೇಶ್ವರ ಸಂಶೋಧನಾ ಪುಸ್ತಕ ಭಂಡಾರವನ್ನು ಕೂಡ ಹೊಂದಿತ್ತು. ಆದರೆ ಈ ಸಂಸ್ಥೆ ಸಮಾಪನೆಯಾಗುವ ಮೂಲಕ ಸಂಶೋಧನೆ, ಅಧ್ಯಯನದ ಕುರಿತ ವಿಶಿಷ್ಠ ಸಹಕಾರಿಯೊಂದನ್ನು ಸಹಕಾರ ಕ್ಷೇತ್ರ ಕಳೆದುಕೊಳ್ಳುವಂತಾಯಿತು. ಇಂತಹ ವಿಶಿಷ್ಠ ಸಹಕಾರಿಯ ಸ್ಥಾಪನೆಯಾಗಲೆನ್ನುವ ಆಶಯದಲ್ಲಿ ಈ ಸಹಕಾರಿಯನ್ನು ಇಲ್ಲಿ ಪರಿಚಯಿಸಿದೆ.

ಇಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳಲ್ಲದೇ ಅನೇಕ ವಿಶಿಷ್ಠ ಕಾರ್ಯಗಳನ್ನು ನಡೆಸುವ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅನೇಕ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳೆಡೆ ಚಿಂತನೆಯನ್ನು ಹುಟ್ಟುಹಾಕುವ ಪ್ರಯತ್ನವಾಗಿ, ಹೊಸತನಗಳೆಡೆ ತುಡಿವ ಮನಸ್ಸುಗಳ ಗಮನ ಸೆಳೆಯುವುದು ಈ ಲೇಖನದ ಆಶಯ. ರಾಜ್ಯದಲ್ಲಿ ಜನಸಾಮಾನ್ಯರ ಎಲ್ಲ ಅವಶ್ಯಕತೆಯನ್ನು ಪೂರೈಸುವ ಹಿಂದುಳಿದ ಹಾಗೂ ಉಪೇಕ್ಷಿಸಲ್ಪಟ್ಟ ಕ್ಷೇತ್ರವನ್ನು ಕೂಡ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಸಹಕಾರ ಕ್ಷೇತ್ರದಲ್ಲಾಗಲಿ, ವಿಶಿಷ್ಠ ಸಂಸ್ಥೆಗಳು ಹುಟ್ಟಿ ಈ ದಿಸೆಯತ್ತ ಕಾರ್ಯೋನ್ಮುಖವಾಗಲಿ. ಜೈ ಸಹಕಾರ್.

– ರಘುನಂದನ ಕೆ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More