ಭಾರತದ ಆರ್ಥಿಕತೆಯ ಬೆಳವಣೆಗೆ ಧರ ಇತರೆ ಆರ್ಥಿಕವಾಗಿ ಬಲಿಷ್ಟ ರಾಷ್ಟ್ರಗಳಿಗಿಂತ ಅಧಿಕವಾಗಿರುತ್ತದೆ. ವಿಶ್ವ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿರುತ್ತವೆ. ಬೆಳವಣಿಗೆ ಧರ ಹೆಚ್ಚಿಗೆ ಇರುವುದರಿಂದ ಇಷ್ಟರಲ್ಲೇ ಮೂರನೇ ಸ್ಥಾನ ತಲುಪುತ್ತೇವೆ. ‘ ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುತ್ತೇವೆ. ‘ ಎಂಬ ಆಶಯವನ್ನು ಹೊಂದಿರುತ್ತೇವೆ. ಭಾರತದ ಆರ್ಥಿಕ ಸಚಿವರು ಲೋಕ ಸಭೆಯಲ್ಲಿ ಇತ್ತೀಚೆಗೆ ನೀಡಿರುವ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ. ಕೆಲವು ಸಮೀಕ್ಷೆಗಳು ನಾವು ಈಗಾಗಲೇ ನಾಲ್ಕು ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಿರುವವಾಗಿತಿಳಿಸುತ್ತಿವೆ. ಭಾರತದ ಆರ್ಥಿಕ ಸಚಿವರು ಇತ್ತೀಚೆಗೆ ಇದನ್ನು ತಿಳಿಯಪಡಿಸಿರುತ್ತಾರೆ.ಏನೇ ಆದರೂ ಇದರಲ್ಲಿ ಸಹಕಾರದ ಪಾತ್ರ ಏನು? ಸಹಕಾರದ ಪಾಲು ಎಷ್ಟಿದೆ? ಎ೦ದು ಆತ್ಮ ವಿಶ್ಲೇಷಣೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಸಹಕಾರಿಗಳ ದಾಗಿರುತ್ತದೆಯಲ್ಲವೇ?
ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಭಾರತದ ಆರ್ಥಿಕತೆ ಕೇವಲ ರೂ 2.7 ಲಕ್ಷ ಕೋಟಿ ರೂಪಾಯಿ ಇದ್ದು ವಿಶ್ವದ ಆರ್ಥಿಕತೆಯ ಶೇಕಡಾ 03 ಪಾಲನ್ನು ಮಾತ್ರ ಹೊಂದಿತ್ತು. ಈಗ 3.73 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಿರುತ್ತೇವೆ (ರೂ. 298.4 ಟ್ರಿಲಿಯನ್ ರೂಪಾಯಿಗಳು ). 1991 ರಲ್ಲಿ ಭಾರತದ ಪಾಲು ಶೇ.1.1 ಇದ್ದದ್ದು 2023ರಲ್ಲಿ ಶೇ 3.5 ಆಗಿರುತ್ತದೆ. ಭಾರತದ ಹಾಲಿ ಆರ್ಥಿಕತೆಯಲ್ಲಿ ಕೃಷಿ ಮತ್ತು ಕೃಷಿ ಪೂರಕ ವಲಯದ ಪಾಲು ಶೇ.20.19, ಕೈಗಾರಿಕೆ ವಲಯ ದ ಪಾಲು ಶೇ.25.92 ಸೇವಾ ವಲಯ ದ ಪಾಲು ಶೇ 53.89 ಆಗಿರುತ್ತದೆ. ಇದರಿಂದ ನಮ್ಮ ಸಹಕಾರ ವಲಯದ ಚಟುವಟಿಕೆಗಳು ಎಷ್ಟು ಪಾಲು ಹೊಂದಿದೆ ಎಂಬುದರ ಅಂದಾಜು ಅರಿಯಬೇಕಾಗಿದೆ. ನಿಖರವಾದ ಅಂಕಿ ಅಂಶಗಳ ದತ್ತಾಂಶ ದೊರೆಯುತ್ತಿಲ್ಲ. ಜಾಲತಾಣಗಳಲ್ಲಿ ಖಾಸಗಿ ವಲಯದ್ದೇ ಕಾರುಬಾರು. 90ರ ದಶಕದಿಂದ ಸಹಕಾರ ವಲಯ ಹೇಗೆ ಕೃಷವಾಯಿತು. ಖಾಸಗಿ ವಲಯ ಹೇಗೆ ಬೆಳೆಯುತ್ತಿದೆ. ಇದರ ಸ್ಪರ್ಧೆಯಲ್ಲಿ ಸಹಕಾರ ವಲಯ ಸೋತಿದೆಯೇ ಎಂಬುದನ್ನು ಗಮನಿಸಬಹುದು.
ಸೇವಾ ವಲಯದಲ್ಲಿ ಸಹಕಾರ ವಲಯದ ಅಸ್ತಿತ್ವದಲ್ಲಿಲ್ಲ, ಇದ್ದರೂ ಅತ್ಯಲ್ಪ ಎಂಬುದನ್ನು ಒಪ್ಪಲೇ ಬೇಕು. ವಿಮಾ ವಲಯದಲ್ಲಿ ಯುರೋಪ್ ಖಂಡದಲ್ಲಿ ಬಹಳಷ್ಟು ಪಾಲು ಸಹಕಾರ ವಲಯದಲ್ಲಿದೆ. ಭಾರತದಲ್ಲಿ ‘ ಇಫ್ಕೋ ಟೊಕಿಯೋ’ ಈ ವಲಯದಲ್ಲಿ ದ್ದರೂ ಒಟ್ಟು ಮಾರುಕಟ್ಟೆಯಲ್ಲಿ ಇದರ ಪಾಲು ಎಷ್ಟು ಎಂಬುದನ್ನು ಅಧ್ಯಯನ ದಿಂದ ತಿಳಿಯು ಬೇಕಿದೆ. ಕರ್ನಾಟಕದಲ್ಲಿ ರಾಜ್ಯಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಿ ದಶಕಗಳು ಕಳೆದರೂ ಇನ್ನೂ ಶೈಶವಾವಸ್ಥೆ ಯಲ್ಲಿಯೇ ಇದೆ. ಪ್ರವಾಸಿ, ಆರೋಗ್ಯ, ವಲಯಗಳಲ್ಲಿ ಕೆಲವು ಸಹಕಾರ ಸಂಘಗಳು ಸ್ಥಾಪನೆಯಾಗಿದ್ದು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಮಾರುಕಟ್ಟೆ ಯಲ್ಲಿ ಇವುಗಳ ಕೊಡುಗೆ ಎಷ್ಟಿದೆ? ಅಧ್ಯಯನ ದಿಂದ ತಳಿಯ ಬೇಕ ಗಾಗಿದೆ. ಮೇಲ್ನೋಟಕ್ಕೆ ಇದು ಅತ್ಯಲ್ಪ ಎಂದು ಗೋಚರ ವಾಗುತ್ತದೆ. ಇತರೆ ಸೇವಾ ವಲಯ ಅದರಲ್ಲಿಯೂ ‘ಸಾಪ್ಟವೇರ್ ‘ವಲಯದಲ್ಲಿ ಸಹಕಾರ ಸಂಘಗಳು ಖಾಸಗಿಯನ್ನೇ ಅವಲಭಿಸಿರುತ್ತೇವೆ. ಈ ವಲಯದಲ್ಲಿ ಭಾರತವೇ ವಿಶ್ವದ ರಾಜಧಾನಿಯಾಗಿದ್ದು ಭಾರತೀಯರ ಅದರಲ್ಲಿಯೂ ಯುವ ಜನತೆಯ ಪಾಲು ಶ್ಲಾಘನೀಯ. ಇದರಿಂದಲೇ ರಾಷ್ಟ್ರದ ಆರ್ಥಿಕತೆಗೆ ಬಲ ಬಂದಿದೆ. ಕೆಲವು ಸಹಕಾರ ಬ್ಯಾಂಕ್ ಗಳು ತಮ್ಮದೇ “ಸಾಫ್ಟ್ ವೇರ್” ಅಭಿವೃದ್ಧಿ ಗೊಳಿಸಿಕೊಂಡಿರುತ್ತವೆ. ಇದನ್ನು ಅಲ್ಲಗಳೆಯುವಂತಿಲ್ಲ.
ಕೈಗಾರಿಕೆ ವಲಯದಲ್ಲಿ ಸಹಕಾರದ ಪಾಲು ಕ್ಷೀಣಿಸುತ್ತಿರುವವನ್ನು ಗಮನಿಸುತ್ತಿದ್ದೇವೆ. ಈ ಹಿಂದೆ ಇದ್ದ ಸಹಕಾರ ಕೈಗಾರಿಕೆ ವಲಯಗಳು ಖಾಸಗಿ ಪಾಲಾಗಿವೆ ಅಥವ ನಿಷ್ಕ್ರಿಯಗೊಂಡಿವೆ ಅಥವ ಸಮಾಪನೆಯಾಗಿವೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉತ್ತೇಜನ ದಿಂದ ಸ್ಥಾಪಿಸಲ್ಪಟ್ಟ ಕೆಲವೇ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತವೆ. ( ಖಾದಿ, ಉಣ್ಣೆ, ಜೇನು, ಚಾಪೆ, ಗುಡಿಗಾರ, ಕಮ್ಮಾರ , ಕುಂಬಾರಿಕೆ, ಮರಗೆಲಸ, ಕೈಮಗ್ಗ ಇತರೆ) ಆಧುನಿಕ ಯಂತ್ರಗಾರಿಕೆ ಯಿಂದ ‘ಸಣ್ಣದು ಸುಂದರ ‘ ಎಂಬ ಪರಿಕಲ್ಪನೆ ಮಾಯವಾಗಿದೆ. ಬೃಹತ್ ಉದ್ಯಮ , ಕೈಗಾರಿಕೆ ಸಹಕಾರ ವಲಯಕ್ಕೆ ಕನಸೇ ಆಗಿದೆ. ಈ ಪರಿಸ್ಥಿತಿಯಲ್ಲಿ ಸಹಕಾರದ ಪಾಲನ್ನು ಹೆಚ್ಚಳ ಗೊಳಿಸುವ ಮಾರ್ಗ ವಾದರೂ ಏನು?
ಕೃಷಿ ಮತ್ತು ಕೃಷಿ ಪೂರಕ ವಲಯ ದಲ್ಲಿ ಸಹಕಾರದ ಪಾಲು ನಿಖರವಾಗಿ ಲಭ್ಯವಾಗದಿದ್ದರೂ ಕೃಷಿ ಪತ್ತಿನ ವಲಯದಲ್ಲಿ ಅದು ಶೇ 19 ಹೈನುಗಾರಿಕೆ ಶೇ 35, ಧಾನ್ಯ, ದ್ವಿದಳ ಧಾನ್ಯ , ಎಣ್ಣೆ ಬೀಜ ಹಣ್ಣು , ತರಕಾರಿ, ಸಕ್ಕರೆ , ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು, ಕೋಕೋ, ರಬ್ಬರ್, ಕಾಫಿ, ಸಾಂಬಾರು ಪದಾರ್ಥಗಳಾದ ಏಲಕ್ಕಿ, ಮೆಣಸು, ಲವಂಗ, ಚಕ್ಕೆ ಇತರೆ ಉತ್ಪನ್ನ, ಸಂಸ್ಕರಣೆ ಮಾರಾಟದಲ್ಲಿ ಅನೇಕ ಸಹಕಾರ ಸಂಘಗಳು ಮತ್ತು ಅವುಗಳ ಶೃಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಯಾದರೂ ಒಟ್ಟಾರೆ ಮಾರುಕಟ್ಟೆಯಲ್ಲಿ ಇದರ ಪಾಲು ಎಷ್ಟು ಎಂಬದು ತಿಳಿಯುತ್ತಿಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ವಲಯದಲ್ಲಿ ಸಾಕಷ್ಟು ಕೊಡುಗೆ ಇದ್ದರೂ, ಬೆಳವಣಿಗೆಯಲ್ಲಿ ಸಾಧನೆ ಮಾಡಿದ್ದರೂ ಕೂಡ ಹೆಮ್ಮೆಯಿಂದ ತನ್ನ ಸಾಧನೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೃಷಿ ಪತ್ತಿನ ವಲಯ ಶೇ80 ಕ್ಕೂ ಮಿಲಿದ ಸಣ್ಣ ಮತ್ತು ಅತಿ ಸಣ್ಣ ರೈತರ ಅವಶ್ಯಕತೆ ಪೂರೈಸುತ್ತಿದೆ. ಕಿರುಹಣಕಾಸು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರಂತೆ ಕೃಷಿಯೇತರ ಪತ್ತು ವಲಯ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಉತ್ಪನ್ನಕ್ಕೆ ತನ್ನ ಕೊಡುಗೆ ನೀಡುತ್ತಲಿದೆ. ತೋಟಗಾರಿಕೆ ಉತ್ಪನ್ನ ಮಾರುಕಟ್ಟೆ ಮತ್ತು ಸಂಸ್ಕರಣೆ ಸಹಾರ ಸಂಘಗಳು (ಹಾಪ್ ಕಾಮ್ಸ್ ) ವಾಣಿಜ್ಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘಗಳು (ಕ್ಯಾಂಪ್ ಕೋ , ಮಾಮ್ಕೋಸ್, ಆಪ್ಸ್ ಕೋಸ್) ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ತನ್ನ ಪಾಲು ಎಷ್ಟು ಎಂಬುದು ತಿಳಿದುಬರುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು, ನೂಲಿನ ಗಿರಣಿಗಳು ಸಹಕಾರ ವಲಯದಲ್ಲಿ ಕ್ಷೀಣಿಸಿರುವುದು ಕೆಲವು ರಾಜ್ಯಗಳಲ್ಲಿ ಮಾತ್ರ ಕಾರ್ಯನಿವಾಹಿಸುತ್ತಿರುವುದು ಕಂಡುಬರುತ್ತದೆ. ಈ ವಲಯದಲ್ಲಿನ ಸಹಕಾರ ಸಂಘಗಳು ಇನ್ನೂ ಹೆಚ್ಚಿನ ಕಾರ್ಯಕ್ಷಮತೆ ಯಿಂದ ನಡೆದು (ಇದಕ್ಕೆ ಮಾದರಿಯಾಗಿರುವುದು ಹೈನುಗಾರಿಕೆ ವಲಯದ ‘ ಅಮುಲ್ ‘ ‘ನಂದಿನಿ’ ಎಂದರೆ ತಪ್ಪಾಗಲಾರದು) ಆರ್ಥಿಕತೆಯಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿನ ಕೊಳ್ಳುವಲ್ಲಿ ಸಾಕಷ್ಟು ಅವಕಾಶವಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಈ ದಿಸೆಯಲ್ಲಿ ಭಾರತ ಸರ್ಕಾರದ ಕ್ರಮಗಳು ಶ್ಲಾಘನೀಯ. ಪ್ರಾಕೃ. ಪ.ಸ.ಸಂ. ಗಳ ಕಂಪ್ಯೂಟ ರೀಕರಣ, ಬಹು ಸೇವಾ ಕೇಂದ್ರಗಳಾಗಿ ಪರಿವರ್ತನೆ ಅದಕ್ಕಾಗಿ ಮಾದರಿ ಬೈಲಾಗಳ ಅಳವಡಿಕೆ. ಕೇಂದ್ರದಲ್ಲಿ ಕೃಷಿ ಪರಿಕರಗಳ ಅಭಿವೃದ್ಧಿಗಾಗಿ ನಿಧಿ ಸೃಷ್ಠಿ. ರಾಷ್ಟ್ರಮಟ್ಟದಲ್ಲಿ ರಪ್ತು ಸಹಕಾರ ಸಂಘ, ಸಾವಯವ ಸಹಕಾರ ಸಂಘಗಳ ಸ್ಥಾಪನೆ. ನ್ಯಾಫೆಡ್ , ಮತ್ತು ಎಸ್ ಸಿ ಸಿ ಎಫ್, ಬಲವರ್ಧನೆ ಇವುಗಳಿಂದ ಸಾಕಷ್ಟು ಸಹಕಾರ ವಲಯದ ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ. ರಾಜ್ಯ ಸರ್ಕಾರಗಳ ಶೂನ್ಯ ಬಡ್ಡಿ ಧರ ಸಾಲ ವಿತರಣೆ, ಹಾಲಿನ ಉತ್ಪಾದನೆಗೆ ಪ್ರೊತ್ಸಾಹಧನ , ಈ ಉಪಕ್ರಮಗಳು ಸಾಕಷ್ಟು ಆರ್ಥಿಕತೆಗೆ ಚೇತರಿಕೆ ನೀಡುವ ಕ್ರಮಗಳಾಗಿರುತ್ತವೆ.
ಭಾರತದ ಆರ್ಥಿಕತೆಯ ಬಗ್ಗೆ ಈ ಕೆಳಕಂಡಂತೆ ನೀಡಿರುವ ತಖ್ತೆ ಬೆಳಕನ್ನು ಚೆಲ್ಲುತ್ತದೆ.
ಭಾರತದ ಐದು ಟ್ರಿಲಿಯನ್ ಆರ್ಥಿಕತೆ ಯಲ್ಲಿ ವಲಯವಾರು ಪಾಲು ಈ ಮುಂದಿನಂತೆ ಅಂದಾಜಿಸಲಾಗಿದೆ. ಕೃಷಿ ಮತ್ತು ಕೃಷಿ ಪೂರಕ ವಲಯದಲ್ಲಿ 01 ಟ್ರಿಲಿಯನ್ ಡಾಲರ್, ಕೈಗಾರಿಕೆ
ಉತ್ಪಾದನೆ ವಲಯದಲ್ಲಿ 01 ಟ್ರಿಲಿಯನ್ ಡಾಲರ್ , ಮತ್ತು ಸೇವಾ ವಲಯದಲ್ಲಿ O3 ಟ್ರಿಲಿಯನ್ ಡಾಲರ್ ಆರ್ಥಿಕ ಉತ್ಪಾದನೆ ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಹಾಲಿ ಸರಾಸರಿ ವಾರ್ಷಿಕ ಆಧಾಯ 2400 ಡಾಲರ್ (ರೂ 192,000 ) , 2005 – 16 ರಿಂದ 2023 ಕ್ಕೆ ಆಹಾರದಲ್ಲಿ ತರಕಾರಿ ಬಳಕೆಯಲ್ಲಿ ಶೇ 19.4 , ಹಣ್ಣಿನ ಬಳಕೆ ಶೇ.38 ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಇದು ಸಂತೋಷದ ಸಂಭ್ರಮಿಸ ಬೇಕಾದ ಅಂಶವೇ ಆಗಿರುತ್ತದೆ. ಆದರೆ ಇದೇ ಸಮಯದಲ್ಲಿ, 82.5 ಕೋಟಿ ಜನಸಂಖ್ಯೆಗೆ ಆಹಾರ ಭದ್ರತೆಯನ್ನು ನೀಡಬೇಕಾಗಿದೆ. ಹಸಿವಿನ ಸೂಚ್ಯಂಕದಲ್ಲಿ 97ರಿಂದ 111 ನೇ ಸ್ಥಾನಕ್ಕೆ ಕುಸಿದಿದ್ದೇವೆ. ಪರಿಸರ ಸಂರಕ್ಷಣೆಯನ್ನುೂ ಒಳಗೊಂಡಂತೆ ”ಶೂನ್ಯ ಹಸಿವು ” ಸಾಧನೆ ಮಾಡಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳು ನಮ್ಮ ಮುಂದೆ ಇದೆ. ಈ ದ್ವಂದ್ವ ಗಳ ನಿವಾರಣೆಗೆ ‘ಸಾಮಾಜಿಕ ನ್ಯಾಯದೊಡನೆ ಆರ್ಥಿಕ ಪ್ರಗತಿ’ ಸಾಧಿಸಿ ಭಾರತದ ಆರ್ಥಿಕತೆಗೆ ತನ್ನ ಹೆಚ್ಚಿನ ಪಾಲನ್ನು ಒದಗಿಸಬೇಕಾದ ಜವಾಬ್ದಾರಿ ಸಹಕಾರ ವಲಯ.
“ಸಹಕಾರ ಚಳುವಳಿ ” ಯದಾಗಿರುತ್ತದೆ. ಆದಾಗ ಮಾತ್ರ ಭಾರತ ಸರ್ಕಾರದ “ಸಹಕಾರ ದಿಂದ ಸಮೃದ್ಧಿ ” ಘೋಷಣೆಯನ್ನು ಸಫಲ ಗೊಳಿಸಿದಂತಾಗುತ್ತದೆ.
ಶಶಿಧರ. ಎಲೆ.
ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ಸಂ 281 , “ನೇಸರ ” ಬಾಲಾಜಿ ಹೆಚ್ ಬಿ ಸಿ ಎಸ್. ಲೇ ಔಟ್ . ವಾಜರಹಳ್ಳಿ, ಕನಕಪುರ ರಸ್ತೆ, ಬೆಂಗಳೂರು 560 109