ಸಹಕಾರಿ ಸಂಸ್ಥೆಗಳಲ್ಲಿ ಗಣಕೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಯ ಮೂಲಕ ವಿತ್ತೀಯ ಒಳಗೊಳ್ಳುವಿಕೆಯ ಸಾಧನೆಯ ಪ್ರಯತ್ನಗಳು.

66 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ದಿನಾಂಕ 20 ನವೆಂಬರ್ 2019ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅಧಯಾಪಕ ಶ್ರೀ ಯತವಂತ ಡೋಂಗ್ರೆಯವರು ನೀಡಿದ ಉಪನ್ಯಾಸ.)

ಅಭಿವೃದ್ಧಿಯ ಪ್ರಕ್ರಿಯೆಯು ಸಮಾಜದ ಎಲ್ಲ ಸ್ಥರಗಳನ್ನೂ ಒಳಗೊಂಡಿರಬೇಕೆಂಬ ನಿಲುವು (ಇನ್ನು ಸಿವ್ ಡೆವೆಲಪ್‌ಮೆಂಟ್) ಈಗ ಅತ್ಯಂತ ಚಾಲ್ತಿಯಲ್ಲಿರುವ ಅಭಿವೃದ್ಧಿಯ ಪರಿಕಲ್ಪನೆಯಾಗಿದೆ. ಈ ಪರಿಕಲ್ಪನೆ ಅತ್ಯಂತ ವಿಶಾಲವಾದುದಾಗಿದ್ದು, ಅಭಿವೃದ್ಧಿ ಎನ್ನುವುದನ್ನು ಕೇವಲ ಆರ್ಥಿಕ ಅಭಿವೃದ್ಧಿ ಎಂದೋ, ಕೇವಲ ಮನುಷ್ಯರ ಅಭಿವೃದ್ಧಿ ಎಂದೋ ಅರ್ಥೈಸುವುದಾಗಿರದೆ, ಪಶು, ಪ್ರಾಣಿಗಳು, ನೆಲ, ಜಲ, ಅರಣ್ಯ, ವಾಯು ಹೀಗೆ ಎಲ್ಲದರ ರಕ್ಷಣೆ, ಬೆಳವಣಿಗೆ ಮತ್ತು ಶ್ರೇಯೋಭಿವೃದ್ಧಿಯನ್ನು ಒಳಗೊಂಡಿದೆ. ಈ ಅರ್ಥದಲ್ಲಿ ನೋಡಿದಾಗ ‘ಎತ್ತೀಯಒಳಗೊಳ್ಳುವಿಕೆ’ (ಫಿನಾನ್ಸಿಯಲ್/ಎಕೊನೊಮಿಕ್ ಇನ್ನೂ_ಶನ್) ಎನ್ನುವುದು ಒಟ್ಟಾರೆ ಇನ್ನು ಸಿವ್ ಡೆವೆಲೊಪ್‌ಮೆಂಟ್ ನ ಒಂದು ಪ್ರಮುಖ ಭಾಗವಾಗಿದೆ.

ವಿತ್ತೀಯ ಸೇರ್ಪಡೆಯ ಪರಿಕಲ್ಪನೆ: ಆರ್ಥಿಕ ವ್ಯವಸ್ಥೆಯಲ್ಲಿ ಲಭ್ಯವಿರುವ ಸಾಂಸ್ಥಿಕ ಹಣಕಾಸು ಸಂಸ್ಥೆಗಳ ಸೇವೆಯಿಂದ ವಂಚಿತರಾಗಿರುವ ಮತ್ತು ಆರ್ಥಿಕವಾಗಿ ಹಿಂದಿಳಿದಿರುವ ಜನರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಿ ಅವರುಗಳು ಅಗತ್ಯ ಹಣಕಾಸು ಪರಿಕರಗಳನ್ನು ಹೊಂದಿಸಿಕೊಂಡು ತಮ್ಮ ದಿನಿ ನಿತ್ಯದ ಮತು ಔದ್ಯೋಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಅನುವ ಮಾಡಿಕೊಡುವ ಪ್ರಕ್ರಿಯೆಯನ್ನು ವಿತ್ತೀಯ ಸೇರ್ಪಡೆ ಎನ್ನಬಹುದು. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆಯ ಸುಮಾರು ಶಕಡ 35 ರಷ್ಟು ಜನರಿಗೆ ಮಾತ್ರ ಬ್ಯಾಂಕಿಂಗ್ ಸೇವೆಗಳು ಸಭ್ಯವಿದ್ದು, ಈ ಸೇವೆಯಿಂದ ವಂಚಿತರಾದವರ ಸಂಖ್ಯೆ ಸುಮಾರು 130 ಮಿಲಿಯನ್‌ಗಳೆಂದು ಅಂದಾಜು ಮಾಡಲಾಗಿದೆ. ಅಂತೆಯೇ ವಿತ್ತೀಯ ಸೇರ್ಪಡೆಗೆ ದೊಡ್ಡ ಅವಕಾಶವಿದೆ ಮತ್ತು ಈ ಪ್ರಕ್ರಿಯೆಗೆ ಬೇಡಿಕೆ (ಡಿಮ್ಯಾಂಡ್) ಮತ್ತು ಸರಬರಾಜು (ಸಪ್ಪೆ) ಈ ಎರಡು ಮುಖವೂ ಇದೆ.

ಪಾರಂಪರಿಕ ಬ್ಯಾಂಕಿಂಗ್ ಸೇವೆಯಿಂದ ದೇಶದ ಬಹುಭಾಗ ಜನರು ಹೊರಗಿರುವ ಪರಿಸ್ಥಿತಿಯನ್ನು ಎರಡು ದೃಷ್ಟಿಯಿಂದ ನೋಡಬಹುದು. ಮೊದಲನಯದಾಗಿ ಈ ಜನರಿಗೆ ನಿಲುಕುವ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಅಭಿವೃದ್ಧಿ ಪಡಿಸಿ ಅವರುಗಳನ್ನು ಆರ್ಥಿಕ ಮುಖ್ಯವಾಹಿನಿಗೆ ತರುವ ಕರ್ತವ್ಯದ ಆಯಾಮವಾದರೆ, ಎರಡನೆಯದು ಬ್ಯಾಂಕಿಂಗ್ ಸಂಸ್ಥೆಗಳಿಗೆ ಹೊಸಮಾರುಕಟ್ಟೆಯನ್ನು, ಈ ವರೆಗೆ ತಲುಪಲು ಪ್ರಯತ್ನಿಸದಿರುವ ಮತ್ತು ಹಾಲಿ ಲಭ್ಯವಿರುವ ಮಾರುಕಟ್ಟೆಗಿಂತ ಬಹುಪಾಲು ವಿಸ್ತಾರವಾಗಿರುವ ಮಾರುಕಟ್ಟೆಯ ಅನ್ವೇಶಣೆಗೆ ಇರುವ ಮತ್ತು ಈ ಮೂಲಕ ಬ್ಯಾಕಿಂಗ್ ಸಂಸ್ಥೆಗಳ ಅಗಾಧ ಬಳವಣಿಗೆ ಸಾಧ್ಯವೆನ್ನುವ ದೃಷ್ಟಿಕೋನ. ಅಂತೆಯೇ ವಿತ್ತೀಯ ಸೇರ್ಪಡೆಯ ಪ್ರಕ್ರಿಯೆ ಕೇವಲ ಸಾಮಾನ್ಯಜನರ ಒಳಿತನ್ನು ಸಾಧ್ಯವಾಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳ ಅಭಿವೃದ್ಧಿಯನ್ನೂ ಸಾಧ್ಯವಾಗಿಸುವ ಪ್ರಕ್ರಿಯೆಯಾಗಿದೆ ಎನ್ನಬಹುದು. ಯಾವುದೇ ವ್ಯಕ್ತಿಗೆ ಸ್ವತ್ತುಗಳನ್ನು ಪಡೆದುಕೊಳ್ಳಲು. ಔದ್ಯೋಗಿಕ ಹೂಡಿಕೆಗಳನ್ನು ಮಾಡಲು ಮತ್ತುಅದಕ್ಕಿಂತ ಮೂಲಭೂತ ಅಗತ್ಯಗಳಾದ ಶಿಕ್ಷಣ, ಆರೋಗ್ಯ ಸೇವೆ ಮುಂತಾದುವುಗಳನ್ನು ಪಡೆಯಲು ಹಣಕಾಸು ಬಹು ಅಗತ್ಯ ಆದರೆ ಈ ಹಣಕಾಸಿನ ನೆರವನ್ನು ನಿಗದಿತ ಸಂಸ್ಥೆಗಳಿಂದ ಪಡೆಯಬೇಕಾದರೆ ನಿರ್ದಿಷ್ಟ ಪ್ರಮಾಣದ ಸ್ವತ್ತುಗಳು ಅಥವಂತರಯಾವುದೇರೀತಿಯಗ್ಯಾರಂಟಿಯ (ಕೊಲಾಟರಲ್) ಅಗತ್ಯವಿರುತ್ತದೆ. ಆದರೆಅಂಚಿನಲ್ಲಿರುವ (ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದಿಳಿದಿರುವ, ಬಡವರಾದ, ಅಶಿಕ್ಷಿತರಾದ) ಜನರಿಗೆ ಈ ಗ್ಯಾರಂಟಿಯನ್ನು ನೀಡುವ ಸಾಮರ್ಥ್ಯವಿರುವುದಿಲ್ಲ. ಆದುದರಿಂದ ಅವರುಗಳು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುತ್ತಾರೆ ಮತ್ತು ತಮ್ಮ ಬಡತನದ ವರ್ತುಲದಿಂದ ಹೊರಬರುವ ಒಂದುಉತ್ತಮ ಮಾರ್ಗ ಅವರಿಗೆ ದೊರೆಯದಂತಾಗುತ್ತದೆ. ಇದನ್ನು ಸಾಧ್ಯವಾಗಿಸುವುದುಯವುದೇ ಅಭಿವೃದ್ಧಿಶೀಲ ದೇಶದತುರ್ತು ಅಗತ್ಯಗಳಲ್ಲೊಂದು. ಅಂತೆಯೇ ಈ ದಿಕ್ಕಿನಲ್ಲಿ ನಮ್ಮದೇಶವೂ ಹಲವು ಉಪಕ್ರಮಗಳನ್ನು ಆರಂಭಿಸಿದೆ. ಒಂದೆಡೆಯಿಂದ ಸರಕಾರೀ ಕಾರ್ಯಕ್ರಮಗಳೂ ಇನ್ನೊಂದೆಡೆಯಂದ ಬ್ಯಾಂಕಿಂಗ್ ಸಂಸ್ಥೆಗಳೇ ರೂಪಿಸುತ್ತಿರುವ ಯೋಜನೆಗಳು ಜಾರಿಯಲ್ಲಿರುವಂತೆಯೇ ಹಲವು ರೀತಿಯ ಸ್ವಯಂಸೇವಾ ಸಂಸ್ಥೆಗಳು, ಸ್ವಸಹಾಯ ಕಾರ್ಯಕ್ರಮಗಳೂ ಚಾಲ್ತಿಯಲ್ಲಿದೆ. ಇವುಗಳಲ್ಲಿ ಸಹಕಾರ ಸಂಘಗಳ ಪಾತ್ರ ಮತ್ತು ಅವುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆಮಾಡಿಕೊಳ್ಳುವುದು ಬಹು ಅಗತ್ಯ.

ಸಹಕಾರ ಸಂಘಗಳ ಪಾತ್ರ;

ಸಹಕಾರ ಸಂಘಗಳು ಜನರುತಮ್ಮ ಆಗತ್ಯಗಳಿಗಾಗಿ ತಾವೇ ಸವಯಂಸ್ಪೂರ್ಥಿಯಿಂದ ಆರಂಭಿಸುವ ಸಂಸ್ಥೆಗಳು. ನಗರ, ಗ್ರಾಮಗಳೆಂಬ ಭೇದವಿಲ್ಲದೆ, ಸಾಮಾನ್ಯಜನರುತಮ್ಮ ಸಮಾನ್ಯ ಅಗತ್ಯಗಳ ಪೂರೈಕೆಗಾಗಿ ಸಹಕಾರ ಸಂಘಗಳನ್ನು ದಟ್ಟಿತಕೊಳ್ಳುತ್ತಾರೆ. ಆದುದರಿಂದಎಲ್ಲ ಸಾಮಾನ್ಯಜನರುಅರ್ಥ ವ್ಯವಸ್ಥೆಯ ಮುಖ್ಯವಾಹಿನಿಗೆ ಬರಲು ಸಹಾಯಕವಾಗುವ ಸಂಸ್ಥೆಗಳಲ್ಲಿ ಸಹಜವಾಗಿಯೇ ಸಹಕಾರ ಸಂಘಗಳು ಮೊದಲಿಗರಾಗಬೇಕು. ವಿತ್ತೀಯ ಸೇರ್ಪಡೆಯ ಪ್ರಕ್ರಿಯೆಯಲ್ಲಿಯೂ ಇವುಗಳ ಪಾತ್ರ ಪ್ರಧಾನವಾಗಿರಬೇಕಾಗಿದೆ. ಆದರೆ ಈ ಬಗೆಗೆ ಹೆಚ್ಚು ವಸ್ತುನಿಷ್ಠ ವಿಶ್ಲೇಶಣೆ ಮಡುವುದೊಳ್ಳೆಯದು. ಅಂತೆಯೇ ವಿತ್ತೀಯ ಸೇರ್ಪಡೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಸಹಕಾರ ಸಂಸ್ಥೆಗಳ ಶಕ್ತಿ (ಸ್ವಂತ್) ಮತ್ತು ಮಿತಿಗಳನ್ನು (ವೀಕ್‌ನೆಸ್) ಪರಿಶೀಲಿಸೋಣ.

ಶಕ್ತಿ: ವಿತ್ತೀಯ ಸೇರ್ಪಡೆಯನ್ನು ಸಾಧ್ಯವಾಗಿಸುವಲ್ಲಿ ಸಹಕಾರ ಸಂಘಗಳಿಗೆ ಖಂಡಿತವಾಗಿಯೂ ಆಗತ್ಯ ಶಕ್ತಿ ಇದೆ. ಇದನ್ನು ಈ ಕೆಳಗಿನ ಅಂಶಗಳ ಮೂಲಕ ಶೃತಪಡಿಸಬಹುದು.

ಆ. ಸಹಕಾರ ಸಂಘಗಳು ದೇಶದಎಲ್ಲ ಭಾಗಗಳಲ್ಲಿ ಹರಡಿರುವ ವಿಕಮಾತ್ರಆರ್ಥಿಕ ಸಂಸ್ಥೆಗಳು. ಯಾವ ಬ್ಯಾಂಕಿಂಗ್ ಸಂಸ್ಥೆಯೂತಲುಪದಿರುವ ಕುಗ್ರಾಮಗಳನ್ನೂ ತಲುಪಿರುವ ಸಹಕಾರ ಸಂಸ್ಥೆಗಳು ಸಅಮಾನ್ಯಜನರಿಗೆತೀರ ಹತ್ತಿರದ ಸಂಸ್ಥೆಗಳು

ಆ. ಬ್ಯಾಂಕಿಂಗ್ ಮತ್ತು ಇತರೆ ಹಣಕಾಸು ಸೇವೆಗಳಲ್ಲಿ ಸಹಕಾರ ಸಂಘಗಳು ಈಗಾಗಲೇ ಅಪಾರ ಅನುಭವ ಹೊಂದಿವೆ. ನಗರ ಪ್ರದೇಶಗಳಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ವಿಸ್ತ್ರತವಾಗಿ ಹರಡಿದ್ದರೆಗಾಮೀಣ ಪ್ರದೇಶಗಳಲ್ಲಿ 1,50,000ಕ್ಕೂ ಹೆಚ್ಚಿನ ಕೃಷಿ ಪತ್ತಿನ ಸಹಕಾರ ಸಂಘಗಳು ಇದ್ದು ಎಲ್ಲರೀತಿಯಜನರನ್ನು ತಲುಪುವ ಶಕ್ತಿ ಇದೆ

ಇ. ಸಹಕಾಸ ಸಂಘಗಳು ಕಡಿಮೆ ವೆಚ್ಚದಲ್ಲಿ ವ್ಯವಹಾರ ನಿರ್ವಹಿಸುವ ಸಂಸ್ಥೆಗಳಾಗಿರುವುದರಿಂದ, ಸಾಮಾನ್ಯಜನರಿಗೆ ನಿಲುಕುವ ದರಗಳಲ್ಲಿ ಹಣಕಾಸಿನ ಸೇವೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿವೆ.

ಈ. ಸಹಕಾರ ಸಂಸ್ಥೆಗಳು ಜನಸಾಮಾನ್ಯರ ಸಂಸ್ಥೆಗಳು. ಸಹಜವಾಗಿಯೇತಮ್ಮ ಸದಸ್ಯ ಸಮುದಾಯದ ಬೇಕುಬೇಡಗಳನ್ನು ಅರಿಯುವ ಶಕ್ತಿ ಬೇರೆಲ್ಲ ಸಂಸ್ಥೆಗಳಿಗಿಂತ ಸಹಕಾರೀ ಸಂಸ್ಥೆಗಳಿಗೆ ಹೆಚ್ಚಿರುತ್ತದೆ.

ಉ. ಎಲ್ಲಕ್ಕಿಂತ ಮುಖ್ಯವಾದಅಂಶವೆಂದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಬ್ಯಾಂಕುಗಳು ಮತ್ತು ಸರಕಾರೀ ಸಂಸ್ಥೆಗಳಿಗೆ ಭೇಟಿನೀಡುವಲ್ಲಿ ಇರುವ ಹಿಂಜರಿಕೆ, ಭಯ, ಸಹಕಾರಸಂಘಗಳಿಗೆ ಹೋಗುವಾಗ ಕಾಣುವುದಿಲ್ಲ. ಸಹಕಾರ ಸಂಘಗಳೊಂದಿಗೆ ಈ ಜನ ಹೆಚ್ಚು ಸುಲಭವಾಗಿ ಹೊಂದಿಕೊಳ್ಳಬಲ್ಲರು.

ಮಿತಿ: ಮೇಲಿನ ಎಲ್ಲಾ ಶಕ್ತಿಗಳಿದ್ದರೂ ಎತ್ತೀಯ ಸೇರ್ಪಡೆಯನ್ನು ಸಾಧ್ಯವಾಗಿಸುವಲ್ಲಿ ಸಹಕಾರ ಸಂಘಗಳಿಗೆ ಕೆಲವು ಪ್ರಮುಖ ಮಿತಿಗಳಿವೆ.

ಅ. ಸಹಕಾರ ಸಂಘಗಳು ದೊಡ್ಡ ಸಂಖ್ಯೆಯಲ್ಲಿದ್ದರೂ, ಅವುಗಳಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯ ಸಂಘಗಳು ಆರ್ಥಿಕ ಕ್ಷಮತೆ ಹೊಂದಿಲ್ಲ. ಹೆಸರಿಗೆ ಮಾತ್ರ ಸಂಘವಿದ್ದು ಯಾವುದೇ ಚಟುವಟಿಕೆ ನಡೆಯದಿರುವ ಉದಾಹರಣೆಗಳೂ ದೊಡ್ಡಸಂಖ್ಯೆಯಲ್ಲಿರುವುದು ವಾಸ್ತವ.

ಆ. ಸಹಕಾರ ಸಂಘಗಳು ಪೂರ್ಣ ಸ್ವಾತಂತ್ರ ಮತ್ತು ಸ್ವಂತನೆಲೆಯಲ್ಲಿ ಸಧೃಢ ವ್ಯವಹಾರ ಹೊಂದಿಲ್ಲದಿರುವುದು ಇನ್ನೊಂದು ಮಿತಿ. ಒಂದೆಡೆ ಸರಕಾರದ ಮೇಲೆ ಅವಲಂಬನೆ ಇನ್ನೊಂದೆಡೆ ಸರಕಾರದ ಅನಗತ್ಯ ನಿಯಂತ್ರಣ ಇವೆರೆಡೂ ಸಹಕಾರ ಸಂಘಗಳ ಸಾಧ್ಯತೆಯನ್ನು ಮೊಟಕು ಮಾಡುತ್ತಿವೆ.

ಇ. ವಿತ್ತೀಯ ಸೇರ್ಪಡೆದೊಡ್ಡ ಸಂಖ್ಯೆಯ, ಆದರೆಆರ್ಥಿಕವಾಗಿ ಸದೃಢವಾಗಿಲ್ಲದಜನರಿಗೆ ಹಣಕಾಸಿನ ನೆರವು ಒದಗಿಸುವ ದೊಡ್ಡಜವಾನ್ಸಾರಿಯ ಕೆಲಸ. ಈ ಜವಾಬ್ದಾರಿಯನ್ನು ನಿರ್ವಹಿಸಲು ಹೊಸ ಸಾಧ್ಯತೆಗಳ ಅನ್ವೇಶಣೆ (ಇನ್ನೊವೇಶನ್) ಮತ್ತು ಕಾರ್ಯಕ್ಷಮತೆ (ಪ್ರೊಫೆಶನಲಿಸಂ) ಅಗತ್ಯ ತಂತ್ರಜ್ಞಾನದ ಅಳವಡಿಕೆ ಮತ್ತು ಗಣಕೀಕರಣದ ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಳಿಸುವುದೂ ತುರ್ತು ಅಗತ್ಯ ಆದರೆ ಈ ಎರಡೂ ನಿಟ್ಟಿನಲ್ಲಿ ಸಹಕಾರ ಸಂಘಗಳು ಹಿಂದುಳಿದಿರುವುದು ದೊಡ್ಡ ಮಿತಿಯಾಗಿದೆ

ಈ. ಸಹಕಾರ ಸಂಘಗಳಲ್ಲಿ ಸದ್ಯರ ಭಾಗವಹಿಸುವಿಕೆಯ ಕೊರತೆ ನಮ್ಮ ದೇಶದ ಎಲ್ಲ ರೀತಿಯ ಸಹಕಾರ ಸಂಘಗಳ ದೊಡ್ಡ ಸಮಸ್ಯೆ. ಸದಸ್ಯರು ಸಂಘದ ವ್ಯವಹಾರ ಮತ್ತು ಆಡಳಿತ ಇವೆರಡರಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸಹಕಾರ ಸಂಘಗಳಿಗೆ ನಿಜವಾದ ಅಸ್ಥಿತ್ವವಿರುತ್ತದೆ. ಆದರೆ ಸಧ್ಯದ ಪರಿಸ್ಥಿತಿಯನ್ನು ಗಮನಿಸಿದಾಗ ಈ ನಿಟ್ಟಿನಲ್ಲಿಯೂ ನಮ್ಮ ಸಹಕಾರಿ ಕ್ಷೇತ್ರ ಹಿಂದುಳಿದಿದೆ ಎನ್ನಬೇಕಾಗಿದೆ.

ಉ. ಸದಸ್ಯರ ಅಗತ್ಯಗಳ ಆಧಾರದಲ್ಲಿ ವ್ಯವಹಾರವನ್ನು (ನೀಡ್ ಬೇಸ್ಟ ಬಿಸಿನೆಸ್) ಸಂಘಟಿಸುವ ಬದಲಿಗೆ ಮಾರುಕಟ್ಟೆ ಅಗತ್ಯಗಳ ಆಧಾರದಲ್ಲಿ ವ್ಯವಹಾರವನ್ನು ಸಂಘಟಿಸುವತ್ತ ಹೆಚ್ಚಿನ ಸಹಕಾರ ಸಂಘಗಳು ಒಲವು ತೋರುತ್ತಿರುವುದು ನಮ್ಮ ಸಹಕಾರ ಸಂಘಗಳ ಇನ್ನೊಂದು ಮಿತಿ. ಆದುದರಿಂದಲೇ ಇತರೆ ಹಣಕಾಸು ಸಂಸ್ಥೆಗಳಂತೆಯೇ ಬಹಳಷ್ಟು ಸಹಕಾರ ಸಂಘಗಳೂ ಕೂಡ ಸ್ಥಿತಿವಂತರಿಗೇ ಅನುಕೂಲ ಒದಗಿಸುವ ಮಿತಿಯನ್ನು ಹೊಂದಿವೆ.

ತಂತ್ರಜ್ಞಾನ ಮತ್ತು ಗಣಕೀಕರಣ (ಟೆಕ್ನಾಲಜಿ ಮತ್ತು ಡಿಜಿಟಲೈಜೇಶನ್)

ಸಹಕಾರ ಸಂಸ್ಥೆಗಳು ವಿತ್ತೀಯ ಸೇರ್ಪಡೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿತಂತ್ರಜ್ಞಾನದ ಅಳವಡಿಕೆ ಮತ್ತುಗಣಕೀಕರಣಒಂದು ಪ್ರಮುಖ ಹೆಜ್ಜೆಯಾಗಿದೆ.ಯಾವುದೇ ಸದಸ್ಯ/ಗ್ರಾಹಕನಿಗೆಉತ್ತಮ ಮಟ್ಟದ ಸೇವೆಯನ್ನುತ್ತುಪ್ತ ಸಮಯದಲ್ಲಿ, ಕೈಗೆಟಕುವದರದಲ್ಲಿ ನೀಡಬೇಕೆಂದಾದರೆ, ಈ ಎರಡೂ ಅತ್ಯಗತ್ಯ. ಒಂದು ಸಹಕಾರಿ ಸಂಘವು ಬ್ಯಾಂಕಿಂಗ್, ಚಿಲ್ಲರೆ ವ್ಯಾಪಾರ, ಮಾರಾಟ, ಉತ್ಪಾದನೆ ಹೀಗೆ ಯಾವುದೇ ಸೇವೆಯನ್ನು ನೀಡುವುದಾದರೂತಂತ್ರಜ್ಞಾನದ ಅಳವಡಿಕೆ ಬೇಕಾಗುತ್ತದೆ. ಹೊಸ ತಂತ್ರಜ್ಞಾನಗಳು ಇಂದುಎಲ್ಲಕ್ಷೇತ್ರಕ್ಕೂ ಲಭ್ಯವಿದ್ದು, ಸೇವೆಯಒಟ್ಟಾರೆಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುವುದರಿಂದ, ಸಹಕಾರ ಸಂಘಗಳು ಹಂತಹಂತವಾಗಿ ಇಂತಹತಂತ್ರಜ್ಞಾನವನ್ನು ತಮ್ಮ ವ್ಯವಹಾರದಲ್ಲಿ ಅಳವಡಿಸಿಕೊಳ್ಳಬೇಕಿದೆ. ಉದಾಹರಣೆಗೆ ಮೊಬೈಲ್ ತಂತ್ರಜ್ಞಾನವು ಬಹತೇಕ ಎಲ್ಲರೂ ಉಪಯೋಗಿಸುವ ಸಾಧನವಾಗಿರುವುದರಿಂದ. ಈ ತಂತ್ರಜ್ಞಾನವನ್ನು ಸದಸ್ಯರ ವಿವಿಧ ಅಗತ್ಯಗಳ ಪೂರೈಕೆಗಾಗಿ ಬಳಸುವ ಕುರಿತು ಸಹಕಾರ ಸಂಘಗಳು ಗಂಭೀರವಾಗಿ ಪ್ರಯತ್ನಿಸಬೇಕಿದೆ. ಹೀಗೆಯೇ ಕಛೇರಿ ಕೆಲಸಗಳಲ್ಲಿ ಪೂರ್ಣವಾಗಿ ಇ-ಗೌರೈನ್ಸ್ ಬಳಸುವುದು, ತಂತ್ರಜ್ಞಾನ ಆಧಾರಿತ ಪ್ಯಾಕಿಂಗ್, ದಾಸ್ತಾನು, ರಕ್ಷಣೆ ಹೀಗೆ ಪ್ರತಿಯೊಂದು ಚಟುವಟಿಕೆಗೂ ತಂತ್ರಜ್ಞಾನದ ಸಹಾಯ ಪಡೆಯತ್ತಾ ಬಂದರೆ ಸಹಕಾರ ಸಂಘಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗು ಸದಸ್ಯರಿಗೆ ಉತ್ತಮ ಸೇವೆ ದೊರೆಯುತ್ತದೆ.

ಗಣಕೀಕರಣವು ಇನ್ನೊಂದು ಪ್ರಮುಖ ಅಗತ್ಯ. ಆನ್‌ಲೈನ್ ಸೇವೆಗಳನ್ನು ಒದಗಿಸುವುದು. ಎಲ್ಲ ಪಾವತಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನಡೆಸುವುದು, ದಿನನಿತ್ಯದ ಸಂವಹನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮವನ್ನು ಉಪಯೋಗಿಸುವುದು, ಸಾಧ್ಯವಾದ ಕಡೆಯಲ್ಲಿ ಗ್ರಾಹಕರು/ಸದಸ್ಯರು ಮನೆಯಲ್ಲಿ ಕುಳಿತೇ ಸಂಘದೊಡನಿನ ತಮ್ಮ ಕೆಲಸಗಳನ್ನು ನಡೆಸುವಂತೆ ಗಣಕೀಕೃತ ವ್ಯವಸ್ಥೆ ಜಾರಿಮಾಡುವುದು, ಹೀಗೆ ಡಿಜಿಟಲ್ ಮಾಧ್ಯಮದ ಮೂಲಕ ಉತ್ತಮ ಹಾಗು ಸುರಕ್ಷಿತ ಸೇವೆ ಒದಗಿಸಲು ಸಹಕಾರಿ ಸಂಘಗಳು ಪ್ರಯತ್ನಿಸಬಹುದು.

ತಂತ್ರಜ್ಞಾನ ಮತ್ತು ಗಣಕೀಕರಣಗಳು ಸಹಕಾರಿ ಸಂಘದ ಕಾರ್ಯಭಾರದಲ್ಲಿ ಪರಾರದರ್ಷಕತೆ ಮತ್ತು ಉತ್ತರ ದಾಯಿತ್ವವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಸಂಘದ ಸದಸ್ಯರಿಗೆ ಸಂಘದ ಮೇಲಿನ ಭರವಸೆ, ನಂಬಿಕೆ ಹೆಚ್ಚುತ್ತದೆ. ಇವುಗಳಿಂದಾಗಿ ಸಹಜವಾಗಿಯೇ ಸಂಘದ ಸೇವೆಗಳನ್ನು ಪಡೆಯುವ ಸದಸ್ಯರ ಸಂಖ್ಯೆಯೂ ಹೆಚ್ಚುತ್ತದೆ ಮತ್ತು ಸಂಘದ ಆರ್ಥಿಕ ಶಕ್ತಿಯೂ ಬಲವಾಗುತ್ತದೆ.

ಆದುದರಿಂದಲೇ ತಂತ್ರಜ್ಞಾನದ ಅಳವಡಿಕೆ ಹಾಗೂ ಗಣಕೀಕರಣಗಳು ಸಹಕಾರಿ ಸಂಘಗಳು ಗ್ರಾಮೀಣ ಪರಿಸರದ, ಹೆಚ್ಚಿನ ವಿದ್ಯಾಭ್ಯಾಸವಿಲ್ಲದೆ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಾಮಾನ್ಯ ಸದಸ್ಯ/ಗ್ರಾಹಕನಿಗೂ ಸೇವೆಗಳನ್ನು ತಲುಪಿಸಲು ಮತ್ತು ಇದರಿಂದಾಗಿ ವಿತ್ತೀಯ ಒಳಗೊಳ್ಳುವಿಕೆಯನ್ನು ಸಾಧ್ಯವಾಗಿಸಲು ಅನುಕೂಲಕರವಾಗುತ್ತದೆ.

ಮರು ಪ್ರಕಟಣೆ.

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More