ಸಾರಾಂಶ : ಈ ಸಂಶೋಧನಾ ಪೇಪರ್ ಮಹಿಳೆಯರ ಸಾಮಾಜಿಕ – ಆರ್ಥಿಕ ಸಬಲೀಕರಣದ ಕುರಿತಾಗಿದೆ. ಇಪ್ಪತ್ತೊಂದನೇ ಶತಮಾನದ ಮಹಿಳಾ ಸಬಲೀಕರಣ ಒಂದು ಮಹತ್ವದ ವಿಷಯವಾಗಿದ್ದು ಕೌಶಲ್ಯರಹಿತರಿಗೆ ಸಾಲ ಹಾಗೂ ತರಬೇತಿ ನೀಡುವ ಮೂಲಕ ಹಳ್ಳಿಯ ಬಡ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಆ ಮೂಲಕ ಅವರನ್ನು ಸಬಲಗೊಳಿಸುತ್ತವೆ.
ಪೀಠಿಕೆ : ಮಹಿಳೆಯರ ಸಬಲೀಕರಣ 21ನೇ ಶತಮಾನದ ಅತಿ ಪ್ರಮುಖ ಗುರಿಗಳಲ್ಲೊಂದಾಗಿದ್ದು ಹೆಣ್ಣು ಮಕ್ಕಳ ಸಬಲೀಕರಣವಾದಲ್ಲಿ ಸಮಾಜವೇ ಸಶಕ್ತವಾದಂತೆ ಹಾಗಿದ್ದರೂ ಮಹಿಳಾ ಸಬಲೀಕರಣವೆನ್ನುವುದೊಂದು ಮರೀಚಿಕೆಯೇ ಆಗಿದೆ. ಮಹಿಳೆಯರು ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು.
ಪ್ರಸುತ್ತ ಹಲವಾರು ಮಹಿಳೆಯರ ವ್ಯವಹಾರ, ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದು ಸತಂತ್ರವಾಗಿ ಉದ್ಯಮಶೀಲರೂ ಆಗಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳು ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಪೂರಕವಾಗುತ್ತವೆ.
ಉದ್ದೇಶಗಳು :
ಭಾರತದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರರ ಮಹತ್ವದ್ದಾಗಿದೆ . ಮಹಿಳಾ ಸಬಲೀಕರಣ ಕುರಿತು ಹಲವಾರು ಅಧ್ಯಯನಗಳು ನಡೆದುದ್ದವು. ಸಹಕಾರಿ ಕ್ಷೇತ್ರದ ದೃಷ್ಟಿಕೋನಗಳಿಂದ ಬಹಳ ಕಡಿಮೆ ಅಧ್ಯಯನಗಳು ನಡೆದಿವೆ. ಈ ನಿಟ್ಟಿನಲ್ಲಿ ಈ ಸಂಶೋಧನಾ ಲೇಖನವು ಕೆಳಗಿನ ಉದ್ದೇಶಗಳನ್ನು ಹೊಂದಿದೆ.
- ಮಹಿಳಾ ಸಬಲೀಕರಣದ ಅಗತ್ಯವನ್ನು ತಿಳಿದುಕೊಳ್ಳುವುದು
- ಸಹಕಾರಿ ಸಂಘಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಬಗ್ಗೆ ಪರಿಶೀಲಿಸುವುದು
- ಮಹಿಳಾ ಸಬಲೀಕರಣದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಪರಿಶೀಲಿಸುವುದು
- ಸಬಲೀಕರಣ ಎಂದರೇನು ?
ಮಹಿಳೆಯರ ಸಬಲೀಕರಣ ಎಂದರೆ ಅವರಿಗೆ ಸಂಬಂಧಿಸಿದ ರಾಜಕೀಯ, ಆರ್ಥಿಕ ವಿಚಾರಗಳಲ್ಲಿ ಸಶಕ್ತವಾದ ತೀರ್ಮಾನಗಳನ್ನು ಕೈ ಗೊಳ್ಳಲು ಶಕ್ತರಾಗುವುದು. ಮಹಿಳೆಯರನ್ನು ದೇವತೆಯರಿಗೆ ಹೋಲಿಸುತ್ತಾರಾದರೂ ನಿಜವಾಗಿಯೂ ಅವರು ಸಬಲರಾಗಿಲ್ಲ. ಆದರೂ ಹಳ್ಳಿಪ್ರದೇಶಗಳಲ್ಲಿ ಕೃಷಿ ಪಶುಸಂಗೋಪನೆಯಂತಹ ವಿಷಯಗಳಿಗೆ ಮಹಿಳೆಯರು 90% ಕೊಡುಗೆಯನ್ನು ಶ್ರಮದ ರೂಪದಲ್ಲಿ ಕೊಡುತ್ತಾರೆ.
ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಾಗಿದ್ದು 2/3 ರಷ್ಟು ಕೆಲಸದ ಗಂಟೆಗಳನ್ನು ಕಳೆಯುತ್ತಿದ್ದರೂ ಕೇವಲ 1/10 ಆಸ್ತಿ ಅವರದ್ದಾಗಿದೆ ಬಡತನದಲ್ಲಿರುವ 70% ಜನರು ಮಹಿಳೆಯರೇ ಆಗಿರುತ್ತಾರೆ. ದೇಶದ ಕ್ಯಾಬಿನೆಟ್ನಲ್ಲಿ ಕೇವಲ 6% ಮಹಿಳೆಯರಿದ್ದಾರೆ.
ಸಹಕಾರಿ ಸಂಸ್ಥೆಗಳು ಹಾಗೂ ಸಬಲೀಕರಣ
ಸಹಕಾರಿ ಸಂಸ್ಥೆಗಳು ಸುರಕ್ಷಿತವಾದ ವಾತಾವರಣ ಒದಗಿಸುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿ ಅವರು ತಮ್ಮ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತವೆ. ಅದೂ ಅಲ್ಲದೆ ಸಹಕಾರಿ ಸಂಸ್ಥೆಗಳು ಲೀಂಗ ಸಮಾನತೆ , ಜವಾಬ್ದಾರಿಗಳ ಹಂಚಿಕೆ , ದೌರ್ಜನ್ಯಗಳ ಬಗ್ಗೆ ಮಹಿಳೆಯರ ಗಮನ ಸೆಳೆದು ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ಧೈರ್ಯ ತುಂಬುತ್ತವೆ.
ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ
ಆರ್ಥಿಕ ಸಬಲೀಕರಣ ಮಹಿಳೆಯರ ಸಂಪನ್ಮೂಲ ಹಾಗೂ ಅವಕಾಶಗಳನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಪುರುಷರಷ್ಟೇ ಸಂಪನ್ಮೂಲಗಳು ದೊರೆತಲ್ಲಿ ಜಗತ್ತಿನ ಬಡತನ ನಿರ್ಮೂಲನೆಗೆ ಅವರು ಪರಿಣಾಮಕಾರಿಯಾಗಿ ಕೊಡುಗೆ ನೀಡಬಲ್ಲರು ಹಾಗಿದ್ದರೂ ಅಭಿವೃದ್ಧಿ ಹೋದುತ್ತಿರುವ ದೇಶಗಳಲ್ಲಿ ಅವರಿಗೆ ಹಲವಾರು ಸಾಮಾಜಿಕ ಒತ್ತಡಗಳಿರುತ್ತವೆ.
ಈ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆಗಳು ನೀಡುವ ಸಾಲ ತರಬೇತಿಗಳು ಮಹಿಳೆಯರನ್ನು ಸಶಕ್ತರಾಗಿಸಿ ಅವರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಹಳ್ಳಿಗಳಲ್ಲಿ ಕೃಷಿಯೇ ಮೊದಲಾಗಿ ಮಹಿಳೆಯರು ತೊಡಗಿಸಿಕೊಳ್ಳುವ ಕೆಲಸಗಳೀಂದ ಅವರಿಗೆ ಆದಾಯ ಇರುವುದಿಲ್ಲ ಸಹಕಾರ ಸಂಸ್ಥೆಗಳು ಅವರಿಗೆ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಕಂಡುಕೊಳ್ಳಲು , ವಿತರಿಸಲು , ಆದಾಯವನ್ನು ಹೂಡಿಕೆ ಮಾಡಲು ಮಾರ್ಗದರ್ಶನ ನೀಡುವುದರಿಂದ ಅವರ ಸಮ್ಯಸೆಗಳನ್ನು ಬಗೆಹರಿಸಬಹುದು.
ಸಲಹೆಗಳು
- ಮೊತ್ತಮೊದಲನೆಯದಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಲಭಿಸಬೇಕು.
- ಸಮಾಜದ ತಳವರ್ಗದ ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವುಮೂಡಿಸುವ ಕಾರ್ಯಕ್ರಮಗಳು ಜರಗಬೇಕು.
- ಹೆಣ್ಣು ಮಕ್ಕಳಿಗೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಗಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೆತನ ಸಿಗಬೇಕು.
- ಸಮಾಜದಲ್ಲಿನ ಸಾಂಸ್ಕೃತಿಕ ಕಟ್ಟುಪಾಡುಗಳು, ಕಂದಾಚಾರಗಳನ್ನು ಹೆಣ್ಣುಮಕ್ಕಳಿಗೆ ನೀಡಲು ಸಾಧ್ಯವಾಗಬೇಕು.
ಮುಕ್ತಾಯ
ಸಹಕಾರಿ ಸಂಸ್ಥೆಗಳು ಸಾಲ ನೀಡುವುದರಿಂದ ಹಲವಾರು ಬಡ ಮಹಿಳೆಯರಿಗೆ ಬಂಡವಾಳ ಸಿಕ್ಕಂತಾಗುತ್ತದೆ. ನಿಶ್ಚಿತ ಹಣದ ಹರಿಮೆ, ಸಂಘಟನೆಯ ಬಲ, ಸ್ವಂತ ಉದ್ದಿಮೆಗೆ ಪೋತ್ಸಾಹ, ಬ್ಯಾಂಕ್ನಲ್ಲಿ ಖಾತೆ ತೆರೆಯುವುದು ಆರ್ಥಿಕ ಶಿಸ್ತು ಮತ್ತು ಜವಾಬ್ದಾರಿಯಿಂದ ಮಹಿಳೆಯರು ಸಬಲರಾಗಿ ತಮ್ಮ ಕುಟುಂಬವನ್ನು ಆಮೂಲಕ ಸಮುದಾಯವನ್ನು ಸಬಲಗೊಳಿಸಲು ಶಕ್ತರಾಗುತ್ತಾರೆ.
ಕಾವ್ಯ ಎಂ. ಬಿ
ಸಂಶೋಧನಾ ವಿದ್ಯಾರ್ಥಿ, ಸ್ನಾತಕೋತ್ತರ ವಿಭಾಗ, ಅರ್ಥಶಾಸ್ತ್ರ, ಷೀಲ್ಸ್ ಮಾರ್ಷಲ್ ಕಾರಿಯವ, ಕಾಲೇಜು ಮಡಿಕೇರಿ
ಡಾ. ಇ. ತಿಪ್ಪೇಸ್ವಾಮಿ
ಸಂಶೋಧನಾ ಮಾಗದರ್ಶಕರು, ಅಸೋಸಿಯೇಟ್ ಪ್ರೊಫೆಸರ್, ಎಫ್ ಎಮ್ ಕೆ ಎಮ್ ಸಿ, ಮಡಿಕೇರಿ
Translated by,
– Dr . Jayashree B
Assistant Professor of English
Dr .Dayananda Pai-P-Satish Pai
Government Frist Grade College,
Car Street, Mangalore