ಸಹಕಾರ ಸಂಘಟನೆ – ಸವಾಲುಗಳು.|ಶ್ರೀ.ಶಶಿಧರ ಎಲೆ

ಸಹಕಾರ  ಸಂಘ  ಒಂದು  ಸಂಘಟನೆ. ಅದರಲ್ಲಿ  ಸಂಘಟಕರ  ಪಾತ್ರ ಅತಿ ಮುಖ್ಯ. ಸಂಘ  ಎಂದರೆ  ಹೊಂದಿಕೆ, ಸಂಯೋಗ , ಜೋಡಣಿ , ಇದೇ  ಈ ದಿನದ  ಸಹಕಾರ  ಸಂಘಗಳ  ಮುಂದಿರುವ  ಅಥವ  ನೂತನ ಸಹಕಾರ ಸಂಘಗಳ  ಸ್ಥಾಪನೆಗೆ  ಸವಾಲಾಗಿದೆಯೇ ? ಎಂಬ  ಪ್ರಶ್ನೆ  ಈ ದಿನಗಳಲ್ಲಿ  ಅತೀವವಾಗಿ  ಕಾಡುತ್ತಿದೆ. ಸಹಕಾರ  ಸಂಘಗಳು  ‘ಸ್ವಾಯತ್ತ , ಸ್ವಾತಂತ್ರ್ಯ , ಪ್ರಜಾಸತ್ತಾತ್ಮಕ ಆಡಳಿತವಳ್ಳ ಸಂಸ್ಥೆಗಳು, ಇವುಗಳ ಪ್ರಮುಖ  ಉದ್ದೇಶ  ಸದಸ್ಯರ  ಆಸೆ , ಆಕಾಂಕ್ಷೆ , ನಿರೀಕ್ಷೆಗಳ ಪೂರೈಕೆ. ಇದರ  ಚುಕ್ಕಾಣಿ ಹಿಡಿದವರು  ಸದಸ್ಯರ  ‘ನಾಯಕರು ‘ ಅಂದರೆ  ಆಡಳಿತ ಮಂಡಳಿ  ಮತ್ತು ಅದರಲ್ಲಿನ ‘ಪದಾಧಿಕಾರಿಗಳು ‘ (ಅಧ್ಯಕ್ಷರು, ಉಪಾಧ್ಯಕ್ಷರು , …….), ಸದಸ್ಯರು  ತಮ್ಮ ನಿರೀಕ್ಷೆಗೆ  ತಕ್ಕಂತ  ನಾಯಕರನ್ನು  ಆರಿಸುತ್ತಿದ್ದಾರೆಯೇ ? ಈ  ಆಡಳಿತ  ಮಂಡಳಿ ತನ್ನ ಕರ್ತ್ಯವ್ಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆಯೇ? ಇದು  ಸದಸ್ಯರ ಅವಲೋಕನಕ್ಕೆ  ಒಳಗಾಗುತ್ತಿದೆಯೇ? ಎಂಬ  ಪ್ರಶ್ನೆಗಳು  ಕಾಡುತ್ತವೆ.   ಇವುಗಳಿಗಿಂತ  ಮಿಗಿಲಾಗಿ   ಪ್ರಜಾಸತತ್ಮಕ  ಈ  ಸಂಸ್ಥೆಗಳಲ್ಲಿ ಚುನಾವಣೆಗಳೇ  ಸವಾಲಾಗಿ  ಪರಿಣಮಿಸಿದೆಯೇ? ಈ  ಪರಿಸರ  ಸಹಕಾರ  ಸಂಘಗಳ  ಉದ್ದೇಶ  ಪೂರೈಕೆಯ  ಅನುಗುಣ ವಾಗಿರುತ್ತದೆಯೇ? ‘ಪರಿಸರ ‘ನೂತನ  ಸಹಕಾರ  ಸಂಘಗಳ ಸ್ಥಾಪನೆಗೆ  ಒಟ್ಟಾರೆ  ಸಹಕಾರ  ಚಳುವಳಿಯ  ಬೆಳವಣಿಗೆಗೆ  ಪೂರಕವಾಗಿದೆಯೇ?  ಎಂಬ ಪ್ರಶ್ನೆ  ಮೂಡುತ್ತದೆ.

ಕಾರಣ , ದಿನ  ನಿತ್ಯದ  ವಾರ್ತೆಗಳು  ನಕಾರಾತ್ಮಕ  ಅಂಶಗಳಿಂದ  ಕೂಡಿರುವುದೇ  ಆಗಿದೆ. ಚುನಾವಣೆಗಳಲ್ಲಿ  ಭ್ರಷ್ಟಾಚಾರ. ನೇಮಕಾತಿಯಲ್ಲಿ  ಭ್ರಷ್ಟಾಚಾರ, ಸಂಬಂಧಿಸಿದ  ಅಧಿಕಾರಿಗಳಿಂದ  ಭ್ರಷ್ಟಾಚಾರ. ಸಹಕಾರ  ಸಂಘಗಳಲ್ಲಿ  ದುರುಪಯೋಗಗಳು , ದುರ್ನಡತೆಗಳು , ದುರಾಡಳಿತ. ಈ  ವಾರ್ತೆಗಳಿಂದ  ಸಕಾರಾತ್ಮಕ  ಅಂಶಗಳು  ಪೂರ್ಣ ಗೌಣವಾಗಿ  ಮುಸುಕಿದಂತಾಗಿದೆ. ಸಾರ್ವಜನಿಕ  ಜೀವನದಲ್ಲಿ ‘ಸಹಕಾರ ‘ದ  ಜಿಗುಪ್ಸೆ  ಉಂಟು ಮಾಡುವ  ಪರಿಸರ  ನಿರ್ಮಾಣ ವಾಗುತ್ತದೆಯೇ  ಎಂಬ  ಅನುಮಾನ  ಮೂಡುತ್ತಿದೆ. ಈ  ಪರಿಸರ  ಭಾರತದ  ಆರ್ಥಿಕತೆಯ  ಮೇಲೆ , ಸಮತಾ  ಸಮಾಜ ನಿರ್ಮಾಣ ಆಶಯದ  ಮೇಲೆ  ದುಷ್ಟರಿಣಾಮ  ಬೀರುತ್ತದೆ  ಎಂಬುದನ್ನು  ಗಂಭೀರ ವಾಗಿ  ಪರಿಗಣಿಸುವುದು  ಈ  ದಿನದ  ಅವಶ್ಯಕತೆ  ಯಾಗಿರುತ್ತದೆ.

ಭಾರತ  ಇತರೆ  ರಾಷ್ಟ್ರಗಳಿಗಿಂತ  ವಿಭಿನ್ನ  ಪರಿಸ್ಥಿತಿಯನ್ನು  ಎದುರಿಸುತ್ತಿದೆ. ಐದನೆಯ  ದೊಡ್ಡ  ಆರ್ಥಿಕತೆ, ಮೂರನೆ  ದೊಡ್ಡ  ಆರ್ಥಿಕತೆ  ಆಗಲಿದ್ದೇವೆ  ಯಾದರೂ , ಆಧಾಯ ಮತ್ತು ವಿನಿಯೋಗದ ದೃಷ್ಟಿಯಿಂದ  ಜನತೆಯನ್ನು  ಮೂರು  ಭಾಗ ಗಳಾಗಿ  ವಿಂಗಡಿಸಬಹುದು. (1)  ತಿಂಗಳಿಗೆ  ಒಂದು  ಲಕ್ಷ ರೂಪಾಯಿ ಆದಾಯ ವಿರುವ  ಮೂರು  ಕೋಟಿ  ಕುಟುಂಬಗಳು ಒಟ್ಟು  ಹನ್ನೆರಡು ಕೋಟಿ (2) ತಿಂಗಳಿಗೆ  ರೂ ಇಪ್ಪತ್ತು ಸಾವಿರ ಆದಾಯ ವಿರುವ ಏಳು  ಕೋಟಿ  ಕುಟುಂಬಗಳು ಒಟ್ಟು  30 ಕೋಟಿ  ಜನರು  (3) ತಿಂಗಳಿಗೆ  ಸರಾಸರಿ  ಆರು ಸಾವಿರದಿಂದ  ಏಳು ಸಾವಿಂದವರೆಗೆ  ಆದಾಯವಿರುವ  ಅಂದಾಜು ಇಪ್ಪತ್ತೈದು ಕೋಟಿ ಕುಟುಂಬಗಳ  ನೂರು  ಕೋಟಿ ಜನರಿರುತ್ತಾರೆ.  ಇದು  ಆ ಸಮಾನತೆಯ  ಅಗಾತತೆಯನ್ನು  ಎತ್ತಿ ತೋರಿಸುತ್ತದೆ. ತಮ್ಮ  ತಲಾ  ಆದಾಯವನ್ನು  ವರ್ಗ (3)  ಮತ್ತು  (2) ರವರು  ಏರಿಸಿಕೊಂಡು  ತಾವು ಘನತೆಯ ಜೀವನವನ್ನು  ನಡೆಸ ಬೇಕಾದೆಂದರೆ  ‘ಸಂಘಟಿತ  ಕಾಯಕ  ಪ್ರಜ್ಞೆ ‘ ಮೂಲಕವೇ  ಸಾಧ್ಯ ಹೊರತು  ಅನ್ಯ ಮಾರ್ಗವಿಲ್ಲ. ಇದು  ‘ಸಹಕಾರ ‘ ಮಾರ್ಗದಿಂದಲೇ  ಸಾಧ್ಯ ಮತ್ತು  ಇದರ  ಇಂದಿನ  ಅಗತ್ಯತೆ  ಅತ್ಯುತ್ತಮ ನಾಯಕತ್ವ , ಅತ್ಯುತ್ತಮ  ಆಡಳಿತ, ದಕ್ಷ , ಪ್ರಾಮಾಣಿಕ  ನಡತೆವುಳ್ಳ  ಮಾನವ ಸಂಪನ್ಮೂಲ  ಮತ್ತು  ಇದಕ್ಕೆ  ತಕ್ಕ’  ಪರಿಸರ’. ಸೂಕ್ತ  ಪರಿಸರ  ನಿರ್ಮಾಣ  ದಲ್ಲಿ    ಅನೇಕ  ಸವಾಲುಗಳನ್ನು  ಎದುರಿಸಬೇಕಿದೆ.

ಅರಿವು ಮೂಡಿಸುವ  ಸವಾಲು :

ಸಹಕಾರ  ಸಂಘದ  ಅವಶ್ಯಕತೆ ಇರುವವರಿಗೆ ಉದಾ : ಅಸಂಘಟಿತ  ಕಾರ್ಮಿಕರು, ಮಹಿಳೆಯರು, ಅಬಲ ವರ್ಗದವರು, ಕಾರ್ಮಿಕರು , ಕೃಷಿಕರು , ಸಣ್ಣ ಅತಿ ಸಣ್ಣ  ರೈತರು.
ತಮ್ಮ  ವೃತ್ತಿಯನ್ನು  ಸಮೂಹ ವಾಗಿ  ಒಂದು ಗೂಡಿ ಸಂಘಟಿತರಾಗಿ  ಸಹಕಾರ  ಸಂಘ  ಸ್ಥಾಪಿಸಿ  ತಮ್ಮ ಅವಶ್ಯಕತೆಗಳ ಪೂರೈಕೆಗೆ ,  ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲು  ಸ್ವತಃ  ತಾವೇ ತಮ್ಮ  ತಮ್ಮ  ಕುಟುಂಬದ  ಅಭ್ಯುದಯಕ್ಕಾಗಿ  ಈ  ಮಾರ್ಗ  ಯೋಗ್ಯ ಎಂಬ  ತಿಳುವಳಿಕೆ  , ಜಾಗೃತಿ ಮೂಡಿಸುವ  ಕಾರ್ಯವಾಗ  ಬೇಕಿದೆ . ಇವರಲ್ಲಿ  ಅಭಿಪ್ರಾಯ  ಮೂಡಿಸಬಲ್ಲ (opinion makers ) ನಾಯಕತ್ವ ಗುಣವುಳ್ಳ ಸಂಘಟಕರ  ಅವಶ್ಯಕತೆ . ಸಹಕಾರ  ಮೌಲ್ಯ, ತತ್ವಗಳಲ್ಲಿ ನಂಬುಗೆ. ಸಹಕಾರದ ಬಗ್ಗೆ  ಸದಭಿಪ್ರಾಯ  ಮೂಡಿಸುವ  ಸವಾಲು.

ಖಾಸಗಿ ವಲಯ ದ  ಸ್ಪರ್ಧೆ, ಸರ್ಕಾರದ  ನೀತಿಯಲ್ಲಿ  ಆಧ್ಯತೆ :  ಮಿಶ್ರ  ಆರ್ಥಿಕ  ನೀತಿಯಿಂದ  ಖಾಸಗಿ  ವಲಯದ  ಕಡೆಗೆ  ಸರ್ಕಾರದ  ಒಲವು . ಸಹಕಾರ  ವಲಯವೂ  ಸ್ಪರ್ಧೆಯಲ್ಲಿ  ಭಾಗವಹಿಸ  ಬೇಕಾದ ಅನಿವಾರ್ಯತೆ. ಸರ್ಕಾರವೇ  ರೈತ  ಉತ್ಪಾದನೆ  ಕಂಪನಿ ಗಳಿಗೆ  ಉತ್ತಜಿಸುತ್ತದೆ. ಸಹಕಾರ  ಸಂಘಗಳು  ಕಂಪನಿ / ಸಂಸ್ಥೆಗಳನ್ನು   ಸ್ಥಾಪಿಸಲು  ತಿಳಿಸಲಾಗುತ್ತಿದೆ.  ಸಹಕಾರ  ಸಂಘಗಳು  ಉತ್ಪಾದನಾ / ಮಾರಾಟ/ ಸಂಸ್ಕರಣಿ / ಸಾಗಾಣಿ/ಚಿಲ್ಲರೆ  ಮಾರಾಟ  ಮಾಡಲು  ಸಾಧ್ಯತೆ , ಅವಕಾಶ ಗಳಿದ್ದರೂ  ಯಶಸ್ವಿಯಾಗುತ್ತಿಲ್ಲ/ ಪ್ರಯತ್ನಿಸಿಲ್ಲ. (ಅಪವಾದಗಳು  ಇಲ್ಲದಿಲ್ಲ ಉದಾ: ಹಾಲು ) ಸರ್ಕಾರದ ಬೆಂಬಲವಿದ್ದಾಗ  ಯಶಸ್ವಿಯಾಗಿ
ನಡೆದ  ಸಹಕಾರ  ಸಂಘಗಳು  ಈಗ  ನಿಷ್ಕೃಯ  ಗೊಂಡಿವೆ. ಉದಾ: ತಾ. ವ್ಯಉ. ಮಾ.ಸ.ಸಂಘಗಳು , ಸಹಕಾರ ಸಕ್ಕರೆ  ಕಾರ್ಖಾನೆಗಳು, ಸಹಕಾರ ಹತ್ತಿಗಿರಣಿ ಸಂಸ್ಥೆಗಳು . ನೂತನವಾಗಿ  ಯಾವುದೂ  ಸ್ಥಾಪನೆ ಆಗುತ್ತಿಲ್ಲ. ಖಾಸಗಿ  ವಲಯ  ನೀಡುವ ಸ್ಪರ್ಧೆ. ಯಶಸ್ವಿ ಸಹಕಾರ ಸಂಘಗಳ ಕಾರ್ಯಚರಣಿಯ  ಹಾಳು ಗೆಡಹುವ  ಪ್ರಯತ್ನಗಳು . ಸಹಕಾರ  ವ್ಯವಸ್ಥೆಯಲ್ಲಿನ  ದೌರ್ಬಲ್ಯಗಳನ್ನು  ಹಿಗ್ಗಿಸಿ  ತನ್ನ ಬೆಳವಣಿಗೆಗೆ  ಉಪಯೋಗಿಸಿಕೊಳ್ಳುವುದು. ಆಡಳಿತ ಮಂಡಳಿ / ಮುಖ್ಯ ಕಾರ್ಯನಿರ್ವಾಹಕರು / ಸಿಬ್ಬಂದಿ  ನಡುವೆ  ಹಿತಾಸಕ್ತಿ ಸಂಘರ್ಷಗಳನ್ನು ಹುಟ್ಟು ಹಾಕುವುದು (ಉದಾ: ಹೈನು ಸಹಕಾರ ವಲಯ ). ಒಗ್ಗಟ್ಟು  ಮುರಿಯುವುದು. ಆಮಿಷಗಳನ್ನು  ಒಡ್ಡುವುದು. ಇದರೊಡನೆ  ಸರ್ಕಾರದ  ನೀತಿಯು  ಸಹಕಾರಕ್ಕೆ  ಉತ್ತೇಜನಕಾರಿಯಾಗಿಲ್ಲ  ಎಂಬುದು ಇತ್ತೀಚೆಗೆ ನಬಾರ್ಡ್ ಕಡಿಮೆ  ಬಡ್ಡಿದರದ  ಪ್ರನರ್ಧನ  ಸೌಲಭ್ಯ  ಅರ್ಧಕ್ಕಿಂತ
ಹೆಚ್ಚಿಗೆ  ಕಡಿತಗೊಳಿಸಿರುವುದು  ಸಾಬೀತು ಪಡಿಸಿದೆ. ಸಹಕಾರ  ಸಂಘಗಳು  ತಮ್ಮದೇ  ಸಂಪನ್ಮೂಲಗಳನ್ನು  ಅದರಲ್ಲಿಯೂ  ಕಡಿಮೆ  ವೆಚ್ಚದ  ಸಂಪನ್ಮೂಲ (ಠೇವಣಿ) ಸಂಗ್ರಹಣೆ  ಅನಿವಾರ್ಯವಾದೀತು. ಇದು ಅಳಿವು  ಉಳಿವಿನ  ಪ್ರಶ್ನೆಯಾಗಿದೆ.

ಸಹಕಾರ ವಲಯ  ನಾಯಕತ್ವ  ನಿರ್ಮಾಣದ  ಚಿಮ್ಮು ಹಲಗೆಯಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಒಮ್ಮೆ ಯಶಸ್ವಿ ಯಾದ  ನಾಯಕರು  ಮುಂದೆ  ಈ  ವಲಯವನ್ನು  ಗಣನೆಗೆ  ತೆಗೆದುಕೊಳ್ಳದೆ  ಇರುವುದನ್ನು  ವಿಷಾದದಿಂದಲೇ  ಸ್ವೀಕರಿಸಬೇಕಾಗಿದೆ. ಎರಡನೇ  ಹಂತದ  ನಾಯಕರು  ಸಹಕಾರ ಸಂಘಗಳ ನಾಯಕತ್ವ ವಹಿಸಿಕೊಳಬಲ್ಲ  ಮತ್ತು ಪೀಳಿಗೆಯಿಂದ  ಪೀಳಿಗೆಗೆ ಕೊಂಡಯ್ಯುವ  ಅವಶ್ಯಕತೆ ಇದೆ. ಯುವ ನಾಯಕರು
ಈ ವಲಯದ ಒಲುವು ಬೆಳಸಿಕೊಳ್ಳುವುದಲ್ಲದೆ ‘ಪ್ರಾಮಾಣಿಕತೆ ‘ ದೂರದೃಷ್ಟಿ ‘ ‘ಸ್ವ ಹಿತಾಸಕ್ತಿ ಬಿಟ್ಟು ಸರ್ವ ಸದಸ್ಯರ  ಹಿತಾಸಕ್ತಿ ‘ ಕಾಪಾಡುವಲ್ಲಿ ಶ್ರಮಿಸುವ  ದೃಷ್ಟಿಕೋನದ  ಅಗತ್ಯತೆ ಇದೆ. ಇದು ಸವಾಲೇ  ಹೌದು. ಆದರೆ  ‘ಸಹಕಾರ’ದ  ಯಶಸ್ಸಿಗೆ  ಅನ್ಯಮಾರ್ಗವಿಲ್ಲ. ಭ್ರಷ್ಟ ಮಾರ್ಗಗಳನ್ನು ಹಿಡಿಯದೇ  ಇರುವ  ಛಲವನ್ನು  ಬೆಳಸಿಕೊಳ್ಳಬೇಕಿದೆ. ಸಹಕಾರ ಸಂಘಗಳ  ಆಡಳಿತದಲ್ಲಿ  ರಾಜಕೀಯ  ನುಸುಳದಂತೆ  ಎಚ್ಚರಿಕೆ ವಹಿಸಬೇಕಿದೆ. ಚುನಾವಣೆಗಳು  ರಾಜಕೀಯ  ಪಕ್ಷ  ರಹಿತವಾಗಿ  ನಡೆಯುವ  ಪ್ರಜ್ಞಾವಂತಿಕೆ  ಬೆಳೆಸಿಕೊಳ್ಳುವ  ಪ್ರಬಲ  ಸವಾಲು  ಸಹಕಾರ  ವಲಯ  ಎದುರಿಸ  ಬೇಕಿದೆ.

ಸಹಕಾರ  ಸಂಘಗಳ   ಸ್ಥಾಪನೆಗೆ  ಇರುವ  ವಿಧಿವಿಧಾನಗಳಲ್ಲಿ  ಸರಳ ಗೊಳಿಸುವ  ಅವಶ್ಯಕತೆ ಇದೆ. ಆರಂಭದಲ್ಲೇ  ಸಂಕಷ್ಟಗಳನ್ನು  ಎದುರಿಸಬೇಕಾಗಿರುವುದರಿಂದ  ಸಹಕಾರದ  ಬಗ್ಗೆ  ಒಲವು  ಉಳ್ಳವರು ಹಿಂಜರಿಯುವ  ಪರಿಸ್ಥಿತಿ  ಇದ್ದಲ್ಲಿ  ಸಹಕಾರ  ಸಂಘಗಳು  ಸ್ಥಾಪನೆಯಾಗುವುದಾದರೂ  ಹೇಗೆ? ಸರಿಯಾದ  ಮಾರ್ಗದರ್ಶನ , ಉತ್ತೇಜನ  ನೀಡುವಂತೆ  ಇರುವ  ಪರಿಸ್ಥಿತಿ ನಿರ್ಮಾಣವಾಗಬೇಕಾಗಿದೆ. ಇದರಲ್ಲಿ
ಸಹಕಾರ  ಇಲಾಖೆ  ಮತ್ತು ಅಸ್ತಿತ್ವ ದಲ್ಲಿರುವ  ಶೃಂಗ ಸಂಸ್ಥೆಗಳ  ಪಾತ್ರ  ಅತಿ ಮುಖ್ಯ. ನಿಬಂಧಕರು  ಗೆಳೆಯ, ತತ್ವಜ್ಞಾನಿ, ಮಾರ್ಗದರ್ಶಕ  ರಂತೆ  ವರ್ತಿಸುವ  ಅವಶ್ಯಕತೆ  ಇದೆ.
ಸಹಕಾರ  ಸಂಘಗಳ  ಚುನಾವಣೆಗಳು, ನೇಮಕಾತಿ  ಇವುಗಳಿಗೆ  ಅನ್ವಯ   ವಾಗುವ  ಕಾಯ್ದೆ , ಕಾನೂನುಗಳ  ಅನುಷ್ಠಾನ  ಕೆಲವೊಂದು  ಸಣ್ಣ ಪ್ರಮಾಣದಲ್ಲಿ  ವ್ಯವಹರಿಸುತ್ತಿರುವ  ಸಹಕಾರ ಸಂಘಗಳಿಗೆ ತ್ರಾಸದಾಯಕ  ವಾಗಿ  ಪರಿಣಮಿಸಿ  ಬೆಳವಣಿಗೆಗೆ  ಧಕ್ಕೆ  ಯಾಗುತ್ತಿದೆ. ಉಲ್ಲಂಘನೆಗಳು  ಸರ್ವೇಸಾಮಾನ್ಯವಾಗಿದೆ. ಇದರಿಂದ  ಸಹಕಾರ ಚಳುವಳಿಯ ಮೇಲೆ  ದುಷ್ಟರಿಣಾಮ  ಉಂಟಾಗುತ್ತಿದೆ.

ಈ  ಸವಾಲುಗಳನ್ನು  ಮೀರಿ  ಸಹಕಾರ  ಮೌಲ್ಯ ಗಳಾದ (1)  ಸ್ವಸಹಾಯ  ಪರಸ್ಪರ ಸಹಾಯ (2) ಸ್ವಯಂ  ಜವಾಬ್ದಾರಿ  (3) ಪ್ರಜಾಪ್ರಭುತ್ವ  (4)  ಬಂಡವಾಳ, ಸಮಾನತೆ, ಒಗ್ಗಟ್ಟು  ಇವುಗಳನ್ನು  ಸಹಕಾರದ ಭಾಗೀದಾರರುಗಳಾದ  ಸದಸ್ಯರು, ಆಡಳಿತ  ಮಂಡಳಿ, ಸಿಬ್ಬಂದಿ  ಅಲ್ಲದೆ  ಅದರೊಡನೆ  ವ್ಯವಹರಿಸುತ್ತಿರುವ  ಸರಬರಾಜುವಾರರು, ಮಾರಾಟಗಾರರು, ಏಜೆಂಟರು ಇತರೆ  ಎಲ್ಲರೂ  ಪಾಲಿಸಿದಾಗ  ಸಹಕಾರ ವಲಯ  ಯಶಸ್ಸು ಗಳಿಸಲು  ಮತ್ತು  ಒಟ್ಟಾರೆ  ಭಾರತದ  ಆರ್ಥಿಕತೆಗೆ  ಗಣನೀಯ  ಕೊಡುಗೆ  ನೀಡಲು  ಸಾಧ್ಯವಾಗುತ್ತದೆ.  ಭಾರತದ  ಎರಡು  ಮತ್ತು  ಮೂರನೆಯ  ಆದಾಯ  ಗಳಿಸುತ್ತಿರುವ  ಸಮೂಹ ಆರ್ಥಿಕವಾಗಿ  ಸಬಲಗೊಳ್ಳಲು  ಸಾಧ್ಯ. ಅಸಮಾನತೆಯ  ಅಘಾದ  ಘೋರ  ಸಾಮಾಜಿಕ  ದುಷ್ಟರಿಣಾಮಗಳನ್ನು  ತನ್ಮೂಲಕ  ತಡೆಯಲು  ಸಾಧ್ಯವಾಗುತ್ತದೆ. ಈ  ಸ್ಥರಗಳಲ್ಲಿ  ಸಹಕಾರ  ನಾಯಕತ್ವ ಬೆಳೆದು ವಿನೂತನ  ಅಗತ್ಯತೆಗಳ  ಪೂರೈಕಾಗಿ  ಸಹಕಾರ  ಸಂಘಗಳು ,  ಸ್ಥಾಪನೆಯಾಗುವುದು, ಮತ್ತು  ಸಕ್ರಿಯವಾಗಿ  ಸದಸ್ಯರು  ಸಹಕಾರ  ಸಂಘಗಳ  ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ  ಮಾತ್ರ  ಸಹಕಾರ  ಚಳುವಳಿ ರಾಷ್ಟ್ರದ  ಒಟ್ಟಾರೆ  ಆರ್ಥಿಕತೆಗೆ   ತನ್ನ  ಕೊಡುಗೆಯನ್ನು  ಹೆಚ್ಚಿಸಿ  ಕೊಳ್ಳಬಹುದು.

                                                                                                                                             

 

ಶಶಿಧರ ಎಲೆ .

ಸಹಕಾರ ಸಂಘಗಳ  ಅಪರ  ನಿಬಂಧಕರು  (ನಿವೃತ್ತ )  ನಂ. 281, ನೇಸರ , ಬಾಲಾಜಿ  ಹೆಚ್. ಬಿ ಸಿ ಎಸ್  ಲೇ ಔಟ್,  ವಾಜರಹಳ್ಳಿ  ಕನಕಪುರ ರಸ್ತೆ,  ಬೆಂಗಳೂರು  560 109        

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More