ಸಂಕ್ರಮಣ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ
ಸಹಕಾರಿ ಸಂಘಗಳ ಅವಕಾಶಗಳು ಮತ್ತು ಸವಾಲುಗಳು
ಡಾ| ಜಯವಂತ ನಾಯಕ್
ಸಹಾಯಕ ಪ್ರಾಧ್ಯಾಪಕರು
ಅರ್ಥಶಾಸ್ತç ವಿಭಾಗ
ವಿಶ್ವಾವಿದ್ಯಾಲಯ ಕಾಲೇಜು
ಮಂಗಳೂರು
ಶ್ರೀಮತಿ ಶಮಾ ಸಂಶೋಧನಾ ವಿದ್ಯಾರ್ಥಿ ಅರ್ಥಶಾಸ್ತç ವಿಭಾಗ ಮಂಗಳೂರು ವಿಶ್ವವಿದ್ಯಾಲಯ
ಸಾರಾಂಶ:-
ಸಹಕಾರ ಸಂಸ್ಥೆ ಎಂದರೆ ಒಂದು ವಿನೂತನ ವ್ಯವಹಾರ ಕ್ರಮವಾಗಿದ್ದು ವ್ಯಾಪಾರಿಗಳು/ ಉದ್ದಿಮೆದಾರರು ಹಾಗೂ ಜನರ ಪರಸ್ಪರ ಪ್ರಯೋಜನದ ಉದ್ದೇಶಕ್ಕೆ ಇರುವುದಾಗಿದೆ. ಸಹಕಾರಿ ಸಂಸ್ಥೆಗಳು ಸಮುದಾಯ ಹಾಗೂ ಪ್ರಜಾಪ್ರಭುತ್ವದ ತಳಹದಿಯಲ್ಲಿ ಸ್ಥಾಪಿತಾಗಿದ್ದು ಸಮುದಾಯಗಳ ಒಳಗೊಳ್ಳುವಿಕೆ ಹಾಗೂ ಸಹಕಾರ ಇರುವ ಕಾರಣ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತವೆ. ನಮ್ಮ ಈ ಆಧುನಿಕ ಜಗತ್ತಿನಲ್ಲಿ ಆರ್ಥಿಕತೆಯು ಕೇವಲ ಒಂದೇ ವಿಧದ ವ್ಯವಹಾರ ಮಾದರಿಯನ್ನು ಅವಲಂಬಿಸಿ ಇರಲು ಸಾಧ್ಯವಿಲ್ಲ. ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಿಕೊಳ್ಳಲು ಹಾಗೂ ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸಲು, ಸಹಕಾರ ಸಂಸ್ಥೆಗಳು ಗಮನಾರ್ಹನೂ ವಿನೂತನವೂ ಆದ ಕೊಡುಗೆ ಯನ್ನು ನೀಡಿ, ಆ ಮೂಲಕ ಮನುಕುಲವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕಾಗುತ್ತದೆ.
೧೯೯೦ನೇ ದಶಕದ ಆರ್ಥಿಕ ಸುಧಾರಣೆಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದ್ದರೂ ಇಂದಿಗೂ ಬಡತನ ಹಾಗೂ ನಿರುದ್ಯೋಗ ಭಾರತದಲ್ಲಿ ಹೆಚ್ಚುತ್ತಲೇ ಇದೆ. ಖಾಸಗಿ ವಲಯ ಹಾಗೂ ಸಾರ್ವಜನಿಕ ವಲಯ ಎರಡರಲ್ಲೂ ಅಭಿವೃದ್ಧಿ ಸೂಚ್ಯಂಕ ಕಡಿಮೆಯಾಗುತ್ತಿದೆ. ಹಾಗೂ ಈ ನಿಟ್ಟಿನಲ್ಲಿ ಸಹಕಾರ ವಲಯದ ಸುಧಾರಣೆಗಳು ಅವಶ್ಯಕವಾಗಿವೆ.
ಪೀಠಿಕೆ:
ಸ್ವಾತಂತ್ರö್ಯದ ಸಂದರ್ಭದಲ್ಲಿ ಭಾರತ ಒಂದು ಕೃಷಿ ಆಧಾರಿತ ಆರ್ಥಿಕತೆಯಾಗಿದ್ದು ೩/೫ ರಷ್ಟು ಆದಾಯ ಕೃಷಿಯಿಂದಲೇ ಉತ್ಪಾದಿಸಲ್ಪಡುತ್ತಿತ್ತು. ಸ್ವಾತಂತ್ರö್ಯ ಲಭಿಸಿದ ೭೩ ವರ್ಷಗಳಲ್ಲಿ ಕೃಷಿಯೇತರ ಆಥಿüðಕತೆಯಲ್ಲಿ ಗಮನಾರ್ಹ ಪರಿವರ್ತನೆಯಾಗಿದೆ. ಇದೀಗ ಸೇವೆ ಹಾಗೂ ಉತ್ಪಾದನಾ ವಲಯದಲ್ಲಿ ಹೆಚ್ಚಳವಾಗಿದೆ. ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತೂ ಒಂದಾಗಿದ್ದು ೧೯೯೧ ನೇ ಇಸವಿಯ ಆರ್ಥಿಕ ಸುಧಾರಣೆಗಳು ಇದಕ್ಕೆ ಕಾರಣವಾಗಿದೆ ಆರ್ಥಿಕ ವಲಯದ ಸುಧಾರಣೆಗಳು ಹೆಚ್ಚುತ್ತಿರುವ ಜಾಗತೀಕರಣ, ಆರ್ಥಿಕ ಮಾರುಕಟ್ಟೆಗಳ ವಿಸ್ತಾರ ಹೀಗೆ ಆರ್ಥಿಕ ವಲಯದಲ್ಲಿ ಅಭಿವೃದ್ಧಿಗೊಂಡಿದ್ದರೂ ಈ ಸುಧಾರಣೆಗಳು ಸಮಾಜದ ಎಲ್ಲಾ ಸ್ತರಗಳಲ್ಲಿ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ಜಾಗತೀಕರಣದಿಂದಾಗಿ ಭಾರತದ ಆರ್ಥಿಕತೆಯ ದೃಷ್ಟಿಕೋನವು ಸಂಪೂರ್ಣ ಬದಲಾಗಿದೆ.
ಹಾಗಿದ್ದರೂ , ಇತ್ತೀಚೆಗೆ ಭಾರತದ ಆರ್ಥಿಕತೆ ಒಂದು ಹಿಮ್ಮಖ ಚಲನೆ ತೋರಿಸುತ್ತಿದೆ. ಸ್ವತಂತ್ರö್ಯ ಭಾರತನ ಅಸ್ತಿತ್ವದ ೭೩ ವರ್ಷಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಈ ಮಟ್ಟದ ಹಿನ್ನಡೆ ಇದೇ ಮೊದಲು ಎಂದೇ ಹೇಳಬಹುದು. ಕೋವಿಡ್ ೧೯ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಅಧ್ಯಯನ ಮಾಡುವ ಪ್ರಯತ್ನ ಇದೆ.
ಮೊದಲೇ ಹೇಳಿದಂತೆ ಸಹಕಾರ ಸಂಸ್ಥೆಗಳ ವಾಣಿಜ್ಯೋದ್ದೇಶಗಳಿಗಾಗಿ ಜನರ ಪರಸ್ವರ ಸಹಕಾರ ಹಾಗೂ ಲಾಭಕ್ಕೋಸ್ಕರ ಸ್ಥಾಪಿತವಾಗಿರುತ್ತವೆ. ಹಾಗೂ ಈ ಉದ್ದೇಶಗಳನ್ನು ಅವುಗಳು ಪೂರೈಸಬೇಕಾಗುತ್ತದೆ.
ಅಧ್ಯಯನದ ಉದ್ದೇಶಗಳು:-
೧. ಭಾರತದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರದ ಚೌಚಿತ್ರವನ್ನು ಪರಿಶೀಲಿಸುವುದು.
೨. ಜಾಗತೀಕರಣದ ಹಿನ್ನೆಲೆಯಲ್ಲಿ ಸಹಕಾರಿ ಸಂಸ್ಥೆಗಳಿರುವ ಅವಕಾಶಗಳನ್ನು ಚರ್ಚಿಸುವುದು.
೩. ಭಾರತದಲ್ಲಿ ಸಹಕಾರಿ ಸಂಘಗಳ ಸವಾಲುಗಳನ್ನು ಅಧ್ಯಯನ ಮಾಡುವುದು.
೪. ಭಾರತದಲ್ಲಿ ಸಹಕಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಲಹೆಗಳನ್ನು ನೀಡುವುದು.
ಸಹಕಾರಸ ಅರ್ಥ:-
‘ಸಹಕಾರ’ ಎಂಬ ಶಬ್ಧದ ಅರ್ಥ ಒಟ್ಟಿಗೆ ಕೆಲಸ ಮಾಡುವುದು. ಸಾಧಾರಣವಾಗಿ ಸಹಕಾರಿ ಸಂಸ್ಥೆಗಳು ಅಲ್ಪ ಆದಾಯದ ವ್ಯಕ್ತಿಗಳ ಉನ್ನತಿಗೋಸ್ಕರ ಸಹಕಾರಿ ತತ್ವದಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ಮುನ್ನಡೆಯುತ್ತವೆ. ಆರ್ಥಿಕವಾಗಿ ಸಬಲರಲ್ಲದ ವ್ಯಕ್ತಿಗಳು ಅಲ್ಪ ಸಂಪನ್ಮೂಲ ಹೊಂದಿದ್ದರೂ ಅವೆಲ್ಲವನ್ನು ಕ್ರೋಢೀಕರಸಿದಾಗ ಅವರ ಈ ಬಲಹೀನತೆಗಳು ಶಕ್ತಿಯಾಗಿ ಪರಿವರ್ತಿತವಾಗುತ್ತದೆ.
ಸಣ್ಣ ರೈತರು, ಕುಶಲಕಾರ್ಮಿಗಳು ಗುಡಿಕೈಗಾರಿಕೆ ಹಾಗೂ ಸಣ್ಣ ಉದ್ದಿಮೆದಾರರು ಸಹಕಾರಿ ವ್ಯವಸ್ಥೆಯಲ್ಲಿ ಶಿಸ್ತುಬದ್ಧವಾಗಿ ಪಾಲ್ಗೊಳುವಿಕೆಯಿಂದ ಸಶಕ್ತಿರಾಗುತ್ತಾರೆ. ಸಹಕಾರಿ ಸಂಸ್ಥೆಗಳ ಪ್ರಮುಖ ಪಾತ್ರವಿರುವುದು ಹಳ್ಳಿಗಳ ಅಭಿವೃದ್ಧಿಯಲ್ಲಿ, ಈ ಮೂಲಕ ಬಂದಿಡೀ ಪ್ರದೇಶದ ಅಭಿವೃದ್ಧಿಯಲ್ಲಿ ನಗರದ ಬಂಡವಾಳ ಶಾಹಿಗಳು ಹಾಗೂ ಉದ್ದಿಮೆದಾರರು ಅಲಕ್ಷಿಸುತ್ತಿರುವ ಹಳ್ಳಿಗಳು ಸಹಕಾರಿ ತತ್ವದಿಂದ ವಿಕಾಸವಾಗಬಲ್ಲವು.
ಸಹಕಾರಿ ಸಂಸ್ಥೆಗಳು ದೇಶದ ಸಮಾಜೋ- ಆರ್ಥಿಕ ಬದುಕನ್ನೇ ಹೊಸದಾಗಿ ಸೃಷ್ಟಿಸ್ಠಲು ಸಾಧ್ಯತೆ ಇರುವ ಪ್ರಮುಖ ಮಾಧ್ಯಮ ಮಾರ್ಗರೆಟ್ ಡಿಗ್ಟಿ ಅವರ ವಾಕ್ಯಗಳಲ್ಲಿ “ಸಹಕಾರಿ ಸಂಸ್ಥೆಗಳ ಮುಖಾಂತರ ಮಾತ್ರವೇ ಸಾಮಾನ್ಯ ಮನುಷ್ಯನು ಸಾಮಾಜಿಕ ಹಾಗೂ ಅರ್ಥಿಕ ಬದಲಾವಣೆಯ ದಿಕ್ಕನ್ನು ಪ್ರಭಾವಿಸಲು ಸಾಧ್ಯ. ಭಾರತದಲ್ಲಿ ಸಹಕಾರ ಪದ್ಧತಿಯು ಭಾರತೀಯ ಸಮಾಜವಾದದ ವಿನ್ಯಾಸವೇ ಆಗಿದ್ದು ಹಳ್ಳಿಗಳನ್ನು ಉದ್ಧರಿಸುತ್ತದೆ. (ಒಚಿಡಿgಚಿಡಿeಣ ಆigbಥಿ ೧೯೮೧).
ಸಹಕಾರ ಎನ್ನುವುದು ಭಾರತದಲ್ಲಿ ಹೊಸದೇನಲ್ಲ. ವೇದ, ಉಪನಿಷತ್ತು, ಕೌಟಿಲ್ಯನ ಅರ್ಥಶಾಸ್ತçದಲ್ಲೂ ಸಹಕಾರದ ಚಟುವಟಿಕೆಗಳ ಉಲ್ಲೇಖವಿದೆ. ಭಾರತದಲ್ಲಿ ಸಹಕಾರ ಚಳುವಳಿಗಳು ಎರಡು ವಿಧದಲ್ಲಿ ಇವೆ.
೧. ಸ್ವಾತಂತ್ರö್ಯಪೂರ್ವ ಸಹಕಾರಿ ಚಳವಳಿ
೨. ಸ್ವಾತಂತ್ರö್ಯ ನಂತರ ಸಹಕಾರಿ ಚಳವಳಿ
‘ಸಹಕಾರ ಸೊಸೈಟಿಗಳು’ ಪ್ರಥಮವಾಗಿ ಅಪ್ತಿತ್ಪಕ್ಕೆ ಬರಲು ಕಾರಣ ಪೂನಾ ಮತ್ತು
ಅಹಮದಾಬಾದ್ನಲ್ಲಿನ ರೈತರ ಬಂಡಾಯ ಅವರು ಅಧಿಕ ಬಡ್ಡಿ ದರದಿಂದ ಶೋಷಿಸುತ್ತಿದ್ದ ಭೂಮಾಲಿಕರ ವಿರುದ್ಧ ದಂಗೆ ಎದ್ದಿದ್ದರು. ಆಗಿನ ಬ್ರಿಟಿಷ್ ಸರಕಾರ ಮೂರು ಕಾಯಿದೆಗಳನ್ನು ಹೊರಡಿಸಿತು.
• ದಕ್ಷಿಣದ ಕೃಷಿ ಪರಿಹಾರ ಕಾಯಿದೆ(೧೮೭೯)
• ಭೂ ಸುಧಾರಣೆ ಸಾಲ ಕಾಯಿದೆ (೧೮೮೩)
• ಕೃಷಿ ಸಾಲ ಕಾಯಿದೆ (೧೮೮೪)
೧೯೧೯ನೇ ಇಸವಿಯಲ್ಲಿ ಸಹಕಾರ ಸ್ಥಳೀಯವಾದಿ ಕಾರ್ಯಪ್ರವೃತ್ತರಾಗಿ ತಮದೇ ಸಹಕಾರಿ ಕಾನೂನುಗಳನ್ನು ಒeಟಿಣಚಿge – ಅhಡಿmsಣeಜ ಸುಧಾರಣೆಗಳಡಿ ಹೊಂದಲು ಸಾಧ್ಯವಾಯಿತು.
ಸ್ವಾತಂತ್ರಾö್ಯನAತರದ ಸಹಕಾರಿ ಚಳವಳಿಗಳು:-
ಭಾರತದ ಮೊದಲು ಪ್ರಧಾನಿಯವರಾದ ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರಿ ಚಳವಳಿಯ ಬಗ್ಗೆ ಅಪಾರ ನಂಬಿಕೆ ಹೊಂದಿದ್ದರು. ಭಾರತದ ಭವಿಷ್ಯವು ಪ್ರಜೆಗಳ ಒಳಗೊಳ್ಳುವಿಕೆಯಿಂದಲೇ ಸಾಧ್ಯ ಎಂದು ಅವರು ನಂಬಿದ್ದರು. ಹೀಗಾಗೀ ಸ್ವಾತಂತ್ರö್ಯ ನಂತರ ಸಹಕಾರಿ ಸಂಸ್ಥೆಗಳು ಪಂಚವಾರ್ಷಿಕ ಯೋಜನೆಗಳ ಅವಿಭಾಜ್ಯ ಅಂಗಗಳಾದವು.
೧೯೫೮ನೇ ಇಸವಿಯಲ್ಲಿ ರಾಷ್ಟೀಯ ಅಭಿವೃದ್ಧಿ ಸಮಿತಿ (ಓಆಅ) ಒಂದು ರಾಷ್ಟೀಯ ಪಾಲಿಸಿ ಹಾಗೂ ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳ ತರಬೇತಿ ಬಗ್ಗೆ ಯೋಜನೆ ರೂಪಿಸಿತು. ‘ಕ್ಷೀರಕ್ರಾಂತಿ’ಯು ಸಹಕಾರಿ ತತ್ವದ ಅತಿ ಯಶಸ್ವಿ ಕಾಂತ್ರಿಯಾಗಿದ್ದು ಅನೇಕ ಮಾದರಿ ಗ್ರಾಮಗಳು ರೂಪುಗೊಂಡವು.
೨೦೦೨ನೇ ಇಸವಿಯಲ್ಲಿ ಸಹಕಾರ ಸಂಸ್ಥೆಗಳ ರಾಷ್ಟಿçÃಯ ಯೋಜನೆಯ ಉದ್ದೇಶಗಳು ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡಿವೆ.
೧. ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಸಹಾಯ ನೀಡುವುದು.
೨. ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು.
೩. ಸಹಕಾರಿ ನೆಲೆಯಲ್ಲಿ ಮಾನವ ಸಂಪನ್ಮೂಲಗಳಿಗೆ ಅಭಿವೃದ್ಧಿಗೊಳಿಸುವುದು.
ಭಾರತದಲ್ಲಿ ಸಹಕಾರಿ ಸಂಸ್ಥೆಗಳ ಭವಿಷ್ಯ:-
೯೮% ಇದೀಗ ಭಾರತದಲ್ಲಿ ಸಹಕಾರಿ ಚಳವಳಿ ಗ್ರಾಮೀಣ ಭಾಗವನ್ನು ವ್ಯಾಪಿಸಿದೆ. ೮೩೫ ಲಕ್ಷ ಸಹಕಾರಿ ಸಂಘಗಳಿದ್ದು ೨೯೦ ಮಿಲಿಯಸ್ ಸದಸ್ಯರಿದ್ದಾರೆ. ಜಾಗೃತಿಕ ಸ್ಪರ್ಧೆಯಲ್ಲಿ ಆರ್ಥಿಕ ಗುರಿಗಳನ್ನು ಸಾಧಿಸುವ ಸಲಕರಣೆಗಳಂತೆ ಸಹಕಾರಿ ಸಂಘಗಳು ಪ್ರವರ್ತಿಸುತ್ತಿವೆ. ಗ್ರಾಮೀಣ ಸಹಕಾರಿ ಸಂಸ್ಥೆಗಳು ೧ರ ಕ್ರಾಂತಿಯಲ್ಲಿ ಅಭೂತಪೂರ್ವ ಸ್ವಾಯತ್ತತೆ ಸಾಧಿಸಿದ್ದೂ ಅಲ್ಲದೆ ಅತ್ಯಲ್ಪ ಸಮಯದಲ್ಲಿ ಕೃಷಿ ಕ್ಷೇತ್ರವನ್ನು ಮಿÆರಿ ಬೆಳೆದಿವೆ. ಗ್ರಾಮೀಣ ಸಹಕಾರಿ ಸಂಸ್ಥೆಗಳು ಇದೀಗ ರಿಯಲ್ ಎಸ್ಟೇಟ್, ಇಂಧನ, ಜೀವವಿದೆ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನೊತ್ತಿವೆ. ಸಹಕಾರಿ ಸಂಸ್ಥೆಗಳು ನಿರುದ್ಯೋಗ ನಿವಾರಣೆಯಲ್ಲಿ ಅಮೋಘ ಸೇವೆ ಸಲ್ಲಿಸಬಲ್ಲದು. ಭಾರತದಂತಹ ವಿಶಾಲ ಭೌಗೋಳಿಕ ವ್ಯಾಪ್ತಿಯ ದೇಶದಲ್ಲಿ ಸಹಕಾರಿ ಸಂಸ್ಥೆಗಳಿಗೆ ಬಹಳ ಮಹತ್ವವಿದೆ. ಯಾಕೆಂದರೆ
• ಇದು ಬಡ, ಅವಿದ್ಯಾವಂತ, ಕೌಶಲ್ಯರಹಿತ ಚನರಿಗೋಸ್ಕರ ಇರುವ ಸಂಸ್ಥೆ.
• ಪರಸ್ವರ ಸಹಕಾರ ಹಾಗೂ ಹಂಚಿಕೆಯ ಸಂಘ.
• ಸಾಮಾಜಿಕ ಅಂತಸ್ತು, ಸಂಘರ್ಷಗಳನ್ನು ಕಡಿಮೆಗೊಳಿಸಲು ಸಹಕಾರಿ.
• ಕೃಷಿ ಅಭಿವೃದ್ಧಿಯ ಮಿತಿಗಳನ್ನು ಮಿÆರಲು ಸಹಕಾರಿ.
• ಸಹಕಾರಿ ಸಂಸ್ಥೆಗಳು ರಾಷ್ಟಿçÃಯ ಆರ್ಥಿಕತೆಯಲ್ಲಿ.
ಹೀಗಿವೆ:-
ಹಳ್ಳಿಗಳ ನೆಟ್ವರ್ಕ್ – ೧೦೦%
ಸಹಕಾರಿ ಸಾಲ – ೪೬.೧೫%
ರಸಗೊಬ್ಬರ ವಿತರಣೆ – ೩೬.೨೨%
ರಸಗೊಬ್ಬರ ವಿತರಣೆ – ೨೭.೬೫%
ರಸಗೊಬ್ಬರ ವಿತರಣೆ
(೧೦.೪೦೦ ಮಿಲಿಯೇಟನ್) – ೨೭.೬೫%
ಸಕ್ಕರೆ ಕಾರ್ಖಾನೆ ಉತ್ಪನ್ನ – ೧೧.೫%
ಗೋಧಿ ಉತ್ಪನ್ನ – ೩೧.೮%
ಪಶು ಆಹಾರ ವಿತರಣೆ – ೫೦%
ನ್ಯಾಯ ಬೆಲೆ ಅಂಗಡಿ – ೨೨%
ಕ್ಷೀರ ಉತ್ಪಾದನೆ – ೭.೪೪%
ಐಸ್ ಕ್ರೀ ೧೦ ಉತ್ಪಾದನೆ – ೫೦%
ಹತ್ತಿ ಮಾರುಕಟ್ಟೆ – ೨೩%
ಕೈ ಮಗ್ಗ ಉತ್ಪಾದನೆ – ೫೫%
ಮುಕ್ತಾಯ:-
ಸ್ವಾತಂತ್ರಾö್ಯನAತರ ಅನೇಕ ಆರ್ಥಿಕ ಸುಧಾರಣೆಗಳು ಕಾರ್ಯಪ್ರವೃತ್ತವಾಗಿದ್ದರೂ, ಜಾಗತೀ ಕಾರಣದಿಂದ ಅರ್ಥಿಕತೆ ಪ್ರಗತಿಗೊಂಡಿದ್ದವು. ಸಮಾಜದ ಎಲ್ಲಾ ಸ್ತರಗಳಲ್ಲಿ ಆರ್ಥಿಕ ಸಮಾನತೆ ಇನ್ನೂ ಸಾಧ್ಯವಾಗಿದಲ್ಲ. ೧೯೯೦ರ ಆರ್ಥಿಕ ಸುಧಾರಣೆಗಳು ಹೊರತಾಗಿಯೂ ದೇಶದಲ್ಲಿ ಬಡತನ ಮತ್ತು ನಿರುದ್ಯೋಗ ಈಗಲೂ ಇದೆ. ಭಾರತದ ಅಭಿವೃದ್ಧಿ ಮಾದರಿಯು ದೇಶದ ಶ್ರೀಮಂತ ಮಾನವ ಸಂಪನ್ಮೂಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಕಡೆಗಣಿಸಿದರೆ ಯಶಸ್ವಿಯಾಗಲಾರದು ಭಾರತದಂತಹ ವಿಸ್ತಾರವಾದ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಹಳ್ಳಿಗಳ ಪರಿವರ್ತನೆ ಆದರೆ ಮಾತ್ರ ಸಮಗ್ರ ಸಬಲೀಕರನ ಸಾಧ್ಯ . ಖಾಸಗಿ ಸಾರ್ವಜನಿಕ ವಲಯ ಮಾತ್ರವಲ್ಲದೆ ಸಹಕಾರಿ ವಲಯದ ಅರ್ಧಪೂರ್ಣ ಪಾಲ್ಗೊಳ್ಳುವಿಕೆ ಇದ್ದಲ್ಲಿ ದೇಶದ ಅಭಿವೃದ್ಧಿ ಸಾಧ್ಯ .
ಮಿನೂಗಾರಿಕೆ ಸಹಕಾರಿ ಸಂಸ್ಥೆಗಳು -೨೧%
ರಬ್ಬರ್ ಸಂಸ್ಕರಣೆ ಹಾಗೂ ಮಾರುಕಟ್ಟೆ -೧೫%
ಅಡಿಕೆ ಸಂಸ್ಕರಣೆ ಹಾಗೂ ಮಾರುಕಟ್ಟೆ -೫೬%
ನೇರ ಉದ್ಯೋಗ ಸೃಷ್ಟಿ-೧.೦೭ ಮಿಲಿಯನ್
ಸ್ವೋದ್ಯೋಗ ಸೃಷ್ಟಿ-೧೪.೩೯ ಮಿಲಿಯನ್
ಉಪ್ಪು ಉತ್ಪಾದನೆ -೧೮.೨೬ ಮಿಲಿಯನ್
ಸವಾಲುಗಳು
ಶೀಘ್ರವಾದ ಬೇಳವಣಿಗೆಯ ಹೊರತಾಗಿಯೂ ಸಹಕಾರಿ ಚಳವಳಿಗೆ ಅನೇಕ ಸವಾಲುಗಳಿವೆ.ಸಹಕಾರಿ ಸಂಸ್ಥೆಗಳನ್ನು ವೃತ್ತಿಪರವಾಗಿ ಮುನ್ನಡೆಸಬೇಕಾದ ಅಗತ್ಯವಿದೆ. ಸಹಕಾರಿ ಚಳುವಳಿಯ ಯಶಸ್ಸು ಪ್ರಚಲಿತ ಭೌಗೋಳಿಕ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ತಳಕುಹಾಕಿಕೊಂಡಿರುವುದು ಇನ್ನೊಂದು ಗಮನಾರ್ಹ ವಿಷಯ.
ಸಲಹೆಗಳು
೧ ಸಹಕಾರಿ ಸೊಸೈಟಿಗಳು ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸಿ ಪ್ರಾರಂಭಗೊಳ್ಳಬೇಕು.
೨ ಕೆಲಸಗಾರರ ಪ್ರಯತ್ನಗಳಿಗೆ ಉತ್ತೇಜನ ಲಭಿಸಬೇಕು.
೩ ೧ ಕೋಟಿಗೀಂತ ಮಿಗಿಲಿನ ವಹಿವಾಟಿನ ಮೇಲ್ವಿಚಾರಣೆ ಚಾರ್ಟರ್ಡ್ ಅಕಾಂಟೆAಟ್ಗಳಿAದ ಮಾಡಿಸಬೇಕು
೪ ಹಣ್ಣು ತರಕಾರಿ ಇತ್ಯಾದಿ ಕೃಷಿ ಉತ್ಪನ್ನಗಳಿಗೆ ಬ್ರಾಂಡ್ ಹೆಸರು ಇಡಬೇಕು
೫ ಸಹಕಾರಿ ಸಂಸ್ಥೆಗೆ ಅದರದ್ದೇ ಆದ ಸಂಪನ್ಮೂಲ ಇರಬೇಕು.
೬ ಸಹಕಾರಿ ಸಂಸ್ಥೆಗಳು ವ್ಯವಹಾರಗಳಲ್ಲಿ ವೈವಿಧ್ಯತೆ ಹೊಂದಬೇಕು.
೭ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರನ್ನು ಕೃಷಿಸಂಸ್ಕರಣಾ ಚಟುವಟಿಕೆಗಳಿಗೆ ಪ್ರೇರೇಪಿಸಬೇಕು .
ಅನುವಾದ:-
Translated by :-
Dr . Jayashree B
Assistant Professor of English
Dr .Dayananda Pai-P-Satish Pai
Government Frist Grade College,
Car Street, Mangalore