1958 ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (NDC) ರಾಷ್ಟ್ರೀಯ ಸಹಕಾರಿ ಕಾರ್ಯತಂತ್ರವನ್ನು ರಚಿಸುವಂತೆ ಮತ್ತು ಅದರ ಮುಖಾಂತರ ಸಿಬ್ಬಂದಿ ತರಬೇತಿ ಮತ್ತು ಸಹಕಾರಿ ಮಾರುಕಟ್ಟೆ ಸಂಘಗಳ ರಚನೆಗೆ ಶಕ್ತಿ ತುಂಬುವಂತಾಗಬೇಕು ಎಂಬ ಉದ್ದೇಶವನ್ನೂ ಸೂಚಿಸಿತು ಪರಿಣಾಮವಾಗಿ 1963 ರಲ್ಲಿ ಸಂಸತ್ ಕಾಯಿದೆಯ ಮೂಲಕ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಆರಂಭವಾಯಿತು.
ಇಂದು ಸಹಕಾರ ಆಧಾರಿತ ಉತ್ಪಾದನೆ, ಕಡಿಮೆ ಸಂಸ್ಕರಣೆ, ಮಾರುಕಟ್ಟೆ, ಸಂಗ್ರಹಣೆ, ರಫ್ತು ಮತ್ತು ಕೃಷಿ ಉತ್ಪನ್ನಗಳು, ಜಾನುವಾರು ಮತ್ತು ಇತರ ಉತ್ಪನ್ನಗಳಿಗೆ ಆಮದು ಕಾರ್ಯಕ್ರಮಗಳನ್ನು ಭಾರತದಲ್ಲಿ ಕೃಷಿ ಮತ್ತು ಸಹಕಾರಿ ಕ್ಷೇತ್ರದ ಮೂಲಕ ತೊಡಗಿಸಿಕೊಂಡಿರುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ಬೆಳೆದು ನಿಂತಿದೆ
ಸಹಕಾರ ಸಂಘಗಳ ಮೂಲಕ ಆರ್ಥಿಕ ಅಭಿವೃದ್ಧಿಗಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ರೈತ, ಕುಶಲಕರ್ಮಿಗಳು, ನೇಕಾರರು, ಬುಡಕಟ್ಟು ಸೇರಿದಂತೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಜೀವನೋಪಾಯವನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಕೈಗೊಂಡಿದೆ ಮತ್ತು ವಿವಿಧ ಸಹಕಾರಿ ಚಟುವಟಿಕೆಗಳ ಮೂಲಕ ಆಯಾ ಜಿಲ್ಲೆಯ ಸಾಮರ್ಥ್ಯವನ್ನು ಹೊರತಂದು ಜಿಲ್ಲೆಗಳಲ್ಲಿ ಸಮಗ್ರ ಸಹಕಾರ ಅಭಿವೃದ್ಧಿ ಯೋಜನೆ (ICDP) ಯಂತಹ ಪ್ರದೇಶ ಆಧಾರಿತ ಯೋಜನೆಗಳನ್ನು NCDC ಉತ್ತೇಜಿಸುತ್ತದೆ.
NCDC ಯುವ ಜನತೆಗೆ ಸಹಕಾರಿ ಕ್ಷೇತ್ರದ ಬಗ್ಗೆ ಯುವ ವೃತ್ತಿಪರರಿಗೆ ಕಲಿಕೆಯ ಅನುಭವವನ್ನು ಒದಗಿಸಲು ಮತ್ತು ಆಧುನಿಕ▪️ ಪರಿಹಾರಗಳನ್ನು ಹೊರತರಲು,ಸಹಕಾರ ಮಿತ್ರ ಯೋಜನೆ (SIP) ಎಂಬ ಬೇಸಿಗೆ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಆಯೋಜಿಸಿದೆ.ಇದನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಆಯೋಜಿದ್ದು (ಇದನ್ನು ಸ್ಕೀಮ್
ಆನ್ ಇಂಟರ್ನ್ಶಿಪ್ ಪ್ರೋಗ್ರಾಂ ಕರೆಯಲಾಗುತ್ತದೆ ) ಇಂಟರ್ನಿಗಳು ಸ್ವಾವಲಂಬಿಗಳಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನುಭವವನ್ನು ಪಡೆಯುತ್ತಾರೆ. ಇದು ಯುವ ವೃತ್ತಿಪರರಿಗೆ ಪ್ರಾಯೋಗಿಕ ಮಾನ್ಯತೆ ,ಎನ್.ಸಿ.ಡಿಸಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಇಂಟರ್ನ್ನಂತೆ ಕೆಲಸ ಮಾಡುವ ಅವಕಾಶವನ್ನು ಒದಗಿಸುತ್ತದೆ. ಇದು ಶೈಕ್ಷಣಿಕ ಸಂಸ್ಥೆಗಳ ವೃತ್ತಿಪರರಿಗೆ ನಾಯಕತ್ವ ಮತ್ತು ಉದ್ಯಮಶೀಲತೆಯ ಪಾತ್ರಗಳನ್ನು ಸಹಕಾರಿಗಳ ಮೂಲಕ ರೈತ ಉತ್ಪಾದಕರ ಸಂಸ್ಥೆಗಳನ್ನು (FPO) ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸುತ್ತದೆ.
ಸಹಕಾರಿ ಸಂಸ್ಥೆಗಳು ಮತ್ತು ಯುವ ವೃತ್ತಿಪರರು (ಇಂಟರ್ನ್ಗಳು) ಇಬ್ಬರಿಗೂ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿರುವ ಯೋಜನೆಯನ್ನು ನಡೆಸುವ ಜವಾಬ್ದಾರಿಯುತ ಪ್ರಾಧಿಕಾರವಾಗಿದೆ.
ಸ್ವಾವಲಂಬಿ ಭಾರತದ ಕಲ್ಪನೆಯನ್ನು ಮುಂದಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ದ ಕರೆಯಂತೆ ಅದರ ಅನುಗುಣವಾದ Vocal for local ಪ್ರಾಮುಖ್ಯತೆಯ ಮೇಲೆ ಈ ಸಂಸ್ಥೆಗೆ ಕೇಂದ್ರೀಕರಿಸುತ್ತದೆ.