ಭಾರತದಲ್ಲಿ ಹಾಲು ಉತ್ಪಾದನೆ | ದಿ ಜರ್ನಿ ಆಫ್ ಇಂಡಿಯನ್ ಡೈರಿ ಸೆಕ್ಟರ್ | ಕು.ಪೆನಜ ವಿ. ರೆಡ್ಡಿ

ಭಾರತ; ಹಾಲಿನ ಕೊರತೆಯನ್ನು ಎದುರಿಸುತ್ತಿದ್ದ ರಾಷ್ಟ್ರದಿಂದ ಇಂದು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರವಾಗಿ ಬೆಳೆದು ಬಂದ ದಾರಿ…

Outlook for 2020: Emerging opportunities in the Indian dairy industry

ಭಾರತವು ಸುಮಾರು ಎರಡೂವರೆ ದಶಕಗಳಿಂದ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಡೀ ವಿಶ್ವದಲ್ಲಿ ಇಂದು ಹಾಲಿನ ಉತ್ಪಾದನೆಯು ಶೇಕಡಾ ಎರಡರಷ್ಟು ದರದಲ್ಲಿ ಬೆಳೆಯುತ್ತಿದ್ದರೆ ಭಾರತದಲ್ಲಿ ಅದರ ಬೆಳವಣಿಗೆಯ ದರವು ಶೇಕಡಾ ಆರಕ್ಕಿಂತ ಹೆಚ್ಚಿದೆ. ಆದರೆ 1950 ಮತ್ತು 60 ರ ದಶಕದಲ್ಲಿ ಹಾಲಿನ ಕೊರತೆಯಿಂದಾಗಿ ಭಾರತ ಆಮದುಗಳ ಮೇಲೆ ಅವಲಂಬಿತವಾಗಿತ್ತು ಮತ್ತು ವಾರ್ಷಿಕ ಉತ್ಪಾದನೆಯ ಬೆಳವಣಿಗೆಯು ಹಲವಾರು ವರ್ಷಗಳಿಂದ ನಷ್ಟ ಅನುಭವಿಸುತ್ತಿತ್ತು. ಸ್ವಾತಂತ್ರದ ನಂತರ ಭಾರತದಲ್ಲಿ ಡೈರಿ ಕ್ಷೇತ್ರದ ವಿಕಸನವು ʼಆಪರೇಷನ್ ಫ್ಲಡ್ʼ ಮತ್ತು ʼಸಹಕಾರಿ ಸಂಸ್ಥೆಗಳುʼ ವಹಿಸಿದ ಅದ್ಬುತ ಪಾತ್ರದಿಂದ ಪ್ರಸ್ತುತ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರವಾಗಿ, ಜಾಗತಿಕ ಹಾಲು ಉತ್ಪಾದನೆಯಲ್ಲಿ 23% ರಷ್ಟು ಕೊಡುಗೆ ನೀಡುತ್ತಿದೆ.

ಸ್ವಾತಂತ್ರ್ಯದ ನಂತರದ ಮೊದಲ ದಶಕದಲ್ಲಿ ಹಾಲು ಉತ್ಪಾದನೆಯ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು 1.64% ಇತ್ತು, ಇದು 1960 ರ ದಶಕದಲ್ಲಿ 1.15% ಕ್ಕೆ ಮತ್ತೆ ಕುಸಿಯಿತು. 1950-51ರಲ್ಲಿ ದೇಶದಲ್ಲಿ ತಲಾವಾರು ಹಾಲಿನ ಬಳಕೆಯು ದಿನಕ್ಕೆ 124 ಗ್ರಾಂ ಮಾತ್ರ ಇತ್ತು. 1970 ರ ಹೊತ್ತಿಗೆ, ಈ ಅಂಕಿ ಅಂಶವು ದಿನಕ್ಕೆ 107 ಗ್ರಾಂ ಗೆ ಕಡಿತಗೊಂಡಿತು. ಭಾರತ ಪ್ರಪಂಚದಲ್ಲಿ ಅತಿ ಹೆಚ್ಚು ಜಾನುವಾರುಗಳ ಜನಸಂಖ್ಯೆಯನ್ನು ಹೊಂದಿದ್ದರೂ ವರ್ಷಕ್ಕೆ 21 Mt ಕಡಿಮೆ ಹಾಲು ಉತ್ಪಾದನೆಯಿಂದಾಗಿ ಭಾರತದ ಡೈರಿ ಉದ್ಯಮವು ಬದುಕಲು ಹೆಣಗಾಡಿತು.

1964 ರಲ್ಲಿ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗುಜರಾತ್‌ನ ಆನಂದ್ ಜಿಲ್ಲೆಗೆ ಭೇಟಿ ನೀಡಿದ ನಂತರ, 1965 ರಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು (NDDB) ದೇಶಾದ್ಯಂತ ‘ಆನಂದ್ ಮಾದರಿ’ ಯಂತಹ ಸಹಕಾರಿ ಹಾಲಿನ ಡೈರಿಗಳನ್ನು ರಚಿಸುವ ಉದ್ದೇಶದೊಂದಿಗೆ ಆರಂಭಿಸಿ, ʼಆಪರೇಷನ್ ಫ್ಲಡ್ʼ (OF) ಕಾರ್ಯಕ್ರಮದ ಮೂಲಕ ಹಂತ ಹಂತಗಳಲ್ಲಿ ಹಾಲಿನ ಉತ್ಪನ್ನವನ್ನು ಪ್ರೋತ್ಸಾಹಿಸಿದರು.ಭಾರತದಲ್ಲಿ “ಶ್ವೇತ ಕ್ರಾಂತಿಯ ಪಿತಾಮಹ” ಎಂದು ಪ್ರಸಿದ್ಧರಾದ ಡಾ. ವರ್ಗೀಸ್ ಕುರಿಯನ್, NDDB ಯ ಮೊದಲ ಅಧ್ಯಕ್ಷರಾಗಿ ತಮ್ಮ ತಂಡದೊಂದಿಗೆ ‘ಆನಂದ್ ಪ್ಯಾಟರ್ನ್’ ಯೋಜನೆಯನ್ನು ಪ್ರಾರಂಭಿಸಿದರು. ಇದು ದೇಶಾದ್ಯಂತ ಹಾಲಿನ ಶೆಡ್‌ಗಳಲ್ಲಿ ಆನಂದ್-ಮಾದರಿ ಸಹಕಾರಿ ಸಂಘಗಳ ಸಂಘಟನೆಯನ್ನು ಕಲ್ಪಿಸಿತು ಮತ್ತು ಅಲ್ಲಿಂದ ಹಾಲು ಸಹಕಾರಿ ಸಂಘಗಳು ಉತ್ಪಾದಿಸುವ ಮತ್ತು ಸಂಗ್ರಹಿಸುವ ದ್ರವ ಹಾಲನ್ನು ನಗರಗಳಿಗೆ ಸಾಗಿಸುತ್ತಿತ್ತು.

‘ಆನಂದ್ ಪ್ಯಾಟರ್ನ್’ ಗ್ರಾಮ ಮಟ್ಟದ ಡೈರಿ ಸಹಕಾರ ಸಂಘಗಳನ್ನು (DCSs) ಒಳಗೊಂಡಿರುವ ಸಹಕಾರಿ ರಚನೆಯಾಗಿದೆ. ಇದು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಮಾರುಕಟ್ಟೆ ಒಕ್ಕೂಟವನ್ನು ಉತ್ತೇಜಿಸುತ್ತದೆ. 1970 ರಲ್ಲಿ NDDB ಭಾರತದಾದ್ಯಂತ ಆಪರೇಷನ್ ಫ್ಲಡ್ ಕಾರ್ಯಕ್ರಮದ ಮೂಲಕ ಆನಂದ್ ಪ್ಯಾಟರ್ನ್ ಸಹಕಾರಿಗಳನ್ನು ಪುನರಾವರ್ತಿಸಿತು.

ಆಪರೇಷನ್ ಫ್ಲಡ್ ಅಡಿಯಲ್ಲಿ ಡೈರಿ ಅಭಿವೃದ್ಧಿಯು ಈ ಕೆಳಗಿನ ಹಂತಗಳಲ್ಲಿ ಅಳವಡಿಸಲಾಗಿದೆ.

  • ಮೊದಲನೆ ಹಂತ (1970–1980): ವಿಶ್ವ ಆಹಾರ ಕಾರ್ಯಕ್ರಮದ ಮೂಲಕ ಯುರೋಪಿಯನ್ ಯೂನಿಯನ್ (ಆಗ ಯುರೋಪಿಯನ್ ಆರ್ಥಿಕ ಸಮುದಾಯ) ದಾನ ಮಾಡಿದ ಹಣದೊಂದಿಗೆ ಕೆನೆರಹಿತ ಹಾಲಿನ ಪುಡಿ ಮತ್ತು ಬೆಣ್ಣೆ ಮಾರಾಟಮಾಡಿ ಹಣಕಾಸು ಒದಗಿಸಲಾಯಿತು.
  • ಎರಡನೆ  ಹಂತ (1981–1985): ಹಾಲಿನ ಶೆಡ್‌ಗಳ ಸಂಖ್ಯೆಯನ್ನು 18 ರಿಂದ 136 ಕ್ಕೆ ಹೆಚ್ಚಿಸಿತು ಮತ್ತು ನಗರ ಮಾರುಕಟ್ಟೆಗಳು ಹಾಲಿನ ಮಳಿಗೆಗಳನ್ನು 290 ಕ್ಕೆ ವಿಸ್ತರಿಸಿದವು. ಈ ಮೂಲಕ 1985 ರ ಅಂತ್ಯದ ವೇಳೆಗೆ, 42,50,000 ಹಾಲು ಉತ್ಪಾದಕರೊಂದಿಗೆ 43,000 ಗ್ರಾಮ ಸಹಕಾರಿಗಳ ಸ್ವಾವಲಂಬಿ ವ್ಯವಸ್ಥೆಯನ್ನು ಒಳಗೊಳ್ಳಲಾಯಿತು.
  • ಮೂರನೆ ಹಂತ (1985–1996) : ಡೈರಿ ಸಹಕಾರಿ ಸಂಸ್ಥೆಗಳು ಹೆಚ್ಚುತ್ತಿರುವ ಹಾಲಿನ ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಅಗತ್ಯವಾದ ಮೂಲಸೌಕರ್ಯವನ್ನು ವಿಸ್ತರಿಸಲು ಮತ್ತು ಬಲಪಡಿಸಲು ಅನುವು ಮಾಡಿಕೊಟ್ಟಿತು. ಈ ಹಂತವು 30,000 ಹೊಸ ಡೈರಿ ಸಹಕಾರಿಗಳನ್ನು ಸೇರಿಸಿತು, ಇದು ಒಟ್ಟು 73,000 ಗೆ ಡೈರಿಗಳ ಸ್ಥಾಪನೆಗೆ ಕಾರಣವಾಯಿತು.

ಆಪರೇಷನ್ ಫ್ಲಡ್, ರಾಷ್ಟ್ರೀಯ ಮಿಲ್ಕ್ ಗ್ರಿಡ್ ಮೂಲಕ 700 ಪಟ್ಟಣಗಳ ​​ಮತ್ತು ನಗರಗಳಲ್ಲಿನ ಗ್ರಾಹಕರಿಗೆ ಗುಣಮಟ್ಟದ ಹಾಲು ತಲುಪಿಸಲು ಸಹಾಯ ಮಾಡಿತು ಮತ್ತು ಈ ಕಾರ್ಯಕ್ರಮವು ಮಧ್ಯವರ್ತಿಗಳ ಪಾತ್ರ ನಿಲ್ಲಿಸುವುದರ ಮೂಲಕ ಋತುಮಾನದ ಬೆಲೆ ವ್ಯತ್ಯಾಸಗಳನ್ನು ಕಡಿಮೆ ಮಾಡಿತು. ಸಹಕಾರಿ ರಚನೆಯಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ ಮತ್ತು ವಿತರಣೆಯ ಸಂಪೂರ್ಣ ಕಾರ್ಯವನ್ನು ರೈತರು ಸ್ವಂತವಾಗಿ ಕೈಗೊಳ್ಳುವುದು ಆರ್ಥಿಕವಾಗಿ ಲಾಭದಾಯಕವೆನಿಸಿತು. ಭಾರತ, ಹಾಲಿನ ಘನವಸ್ತುಗಳ ಅಮದಿನ ಮೇಲಿನ ಅವಲಂಬನೆಯನ್ನು ಕೂಡ ಕೊನೆಗೊಳಿಸಿತು. ದೇಶವು ತನ್ನ ಸ್ಥಳೀಯ ಡೈರಿ ಅಗತ್ಯಗಳನ್ನು ಪೂರೈಸಲು ಸಜ್ಜುಗೊಂಡಿದ್ದಲ್ಲದೆ, ಅನೇಕ ವಿದೇಶಗಳಿಗೆ ಹಾಲಿನ ಪುಡಿಯನ್ನು ರಫ್ತು ಮಾಡಲು ಪ್ರಾರಂಭಿಸಿತು. ಮಿಶ್ರ ತಳಿಯಿಂದಾಗಿ ಹಾಲುಕರೆಯುವ ಪ್ರಾಣಿಗಳ ಆನುವಂಶಿಕ ಸುಧಾರಣೆಯೂ ಹೆಚ್ಚಾಯಿತು.

ಡೈರಿ ಉದ್ಯಮವು ಆಧುನೀಕರಣಗೊಂಡಂತೆ ಮತ್ತು ವಿಸ್ತರಿಸುತ್ತಿದ್ದಂತೆ, ಸುಮಾರು 10 ಮಿಲಿಯನ್ ರೈತರು ಹೈನುಗಾರಿಕೆಯಿಂದ ತಮ್ಮ ಆದಾಯವನ್ನು ಗಳಿಸಲು ಪ್ರಾರಂಭಿಸಿದರು.

1950-51ರಲ್ಲಿ ಹಾಲಿನ ಉತ್ಪಾದನೆಯು ಕೇವಲ 17 ಮಿಲಿಯನ್ ಟನ್ (MT) ಇತ್ತು. 1968-69 ರಲ್ಲಿ, ಆಪರೇಷನ್ ಫ್ಲಡ್ ಪ್ರಾರಂಭವಾಗುವ ಮೊದಲು, ಹಾಲಿನ ಉತ್ಪಾದನೆಯು ಕೇವಲ 21.2 MT ಆಗಿತ್ತು, ಇದು 1979-80 ರ ವೇಳೆಗೆ 30.4 MT ಮತ್ತು 1989-90 ರ ವೇಳೆಗೆ 51.4 MT ಗೆ ಏರಿತು. ಈಗ 2020-21ರಲ್ಲಿ 210 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. ಮೂರು ದಶಕಗಳಲ್ಲಿ (1980,1990 ಮತ್ತು 2000 ರ) ದೇಶದಲ್ಲಿ ದೈನಂದಿನ ಹಾಲಿನ ಬಳಕೆಯು 1970 ರಲ್ಲಿ ಪ್ರತಿ ವ್ಯಕ್ತಿಗೆ ಕನಿಷ್ಠ 107 ಗ್ರಾಂ ಇದ್ದರೆ 2020-21 ರಲ್ಲಿ ಪ್ರತಿ ವ್ಯಕ್ತಿಗೆ 427 ಗ್ರಾಂಗೆ ಏರಿತು. 2021 ರಲ್ಲಿ ದಿನಕ್ಕೆ ಸರಾಸರಿ 322 ಗ್ರಾಂ ಬಳಕೆಯಾಗುತ್ತಿತ್ತು.

ಆಪರೇಷನ್ ಫ್ಲಡ್ ನಂತರ, ಭಾರತೀಯ ಹೈನುಗಾರಿಕೆ ಮತ್ತು ಪಶುಸಂಗೋಪನ ಕ್ಷೇತ್ರವು ಬೃಹತ್ ಸಂಖ್ಯೆಯ ಗ್ರಾಮೀಣ ಕುಟುಂಬಗಳಿಗೆ ಪ್ರಾಥಮಿಕ ಆದಾಯದ ಮೂಲವಾಗಿ ಹೊರಹೊಮ್ಮಿತು. ಭಾರತವು ಡೈರಿ ಕ್ಷೇತ್ರದ ವಿವಿಧ ಖಾತೆಗಳಲ್ಲಿ ಉದ್ಯಮ ಆರಂಭಿಸಿ ಇಂದು 80 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ನೀಡುತ್ತಿದೆ. ಅವರಲ್ಲಿ ಹೆಚ್ಚಿನವರು ಭೂರಹಿತರು, ಸಣ್ಣ ಅಥವಾ ಕನಿಷ್ಠ ರೈತರು. ಸಹಕಾರಿ ಸಂಘಗಳು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವುದು ಮಾತ್ರವಲ್ಲದೆ ಲಿಂಗ, ಜಾತಿ, ಧರ್ಮ ಮತ್ತು ಸಮುದಾಯದ ಸಂಕೋಲೆಗಳನ್ನು ಮುರಿದಿವೆ. ಡೈರಿ ಕ್ಷೇತ್ರವು ಪ್ರಮುಖ ಉದ್ಯೋಗ ಮತ್ತು ಉದ್ಯಮವನ್ನು  ಒದಗಿಸುವುದಾಗಿದ್ದು, ಗ್ರಾಮೀಣ ಮಹಿಳೆಯರನ್ನು ದೇಶದ ಈ ಕ್ಷೇತ್ರದ ಪ್ರಮುಖ ಉದ್ಯಮಿಗಳನ್ನಾಗಿ ರೂಪಿಸಿಸುವಲ್ಲಿ  ʻಶ್ವೇತ ಕ್ರಾಂತಿʼಯ ಪಾತ್ರ ಮಹತ್ತರವಾದದ್ದು.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (FAO) ಜಾಗತಿಕ ಆಹಾರವಾಗಿ ಹಾಲಿನ ಪ್ರಾಮುಖ್ಯತೆಯನ್ನು ಅಂಗೀಕರಿಸಿ 2001 ರಿಂದ ಪ್ರತಿ ವರ್ಷ ಜೂನ್ 1 ಅನ್ನು ವಿಶ್ವ ಹಾಲು ದಿನವನ್ನಾಗಿ (World Milk Day) ಆಚರಿಸಲಾಗುತ್ತಿದೆ. ಭಾರತದಲ್ಲಿ, ನವೆಂಬರ್ 26 ರಂದು ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನವನ್ನು ರಾಷ್ಟ್ರೀಯ ಹಾಲು ದಿನವಾಗಿ ಆಚರಿಸಲಾಗುತ್ತದೆ.

ಸರ್ಕಾರವು ತೆಗೆದುಕೊಳ್ಳುತ್ತಿರುವ ಸರಣಿ ಕ್ರಮಗಳಿಂದ ಮತ್ತು ಖಾಸಗಿ ವಲಯದಲ್ಲಿ ಡೈರಿ ಅಭಿವೃದ್ಧಿಯೊಂದಿಗೆ ಮುಂಬರುವ ದಶಕಗಳಲ್ಲಿ ಭಾರತವು ಹಾಲು ಉತ್ಪಾದನೆ ಮತ್ತು ಹಾಲು ಸಂಸ್ಕರಣೆಯಲ್ಲಿ ತನ್ನ ಬೆಳವಣಿಗೆಯನ್ನು ದ್ವಿಗುಣಗೊಳಿಸುವ ನಿರೀಕ್ಷೆಯಿದೆ. ಇದಲ್ಲದೆ, ವೈಜ್ಞಾನಿಕ ರೀತಿಯಲ್ಲಿ ಸ್ಥಳೀಯ ತಳಿಗಳ ಹಾಲು ಉತ್ಪಾದಕತೆಯನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸಲು ಮತ್ತು ಸಹಕಾರಿ ಮತ್ತು ಹಾಲು ಉತ್ಪಾದಕ ಕಂಪನಿಗಳನ್ನು ಉತ್ತೇಜಿಸಲು, ಭಾರತ ಸರ್ಕಾರವು ರಾಷ್ಟ್ರೀಯ ಹಾಲು ದಿನದ ಸಂದರ್ಭದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ʻಗೋಪಾಲ ರತ್ನʼ ಪ್ರಶಸ್ತಿಯನ್ನು ನೀಡುತ್ತಿದೆ.

ಭಾರತದಲ್ಲಿ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಡೈರಿ ಕ್ಷೇತ್ರವು ಪ್ರಮುಖ ಕೊಡುಗೆಯನ್ನು ನೀಡಿದೆ.ಸರ್ಕಾರವು ಜನ್ ಧನ್ ಯೋಜನೆ ಮತ್ತು ಸ್ಟಾರ್ಟ್-ಅಪ್ ಇಂಡಿಯಾದಂತಹ  ಕ್ರಮಗಳು ಸಾಮಾನ್ಯ ಸಬಲೀಕರಣ ಯೋಜನೆಗಳೊಂದಿಗೆ ರಾಷ್ಟ್ರೀಯ ಡೈರಿ ಯೋಜನೆಯಿಂದ, ಸುಸ್ಥಿರ ಅಭಿವೃದ್ಧಿ ಮತ್ತು ಹೈನುಗಾರಿಕೆ ಬೇಕಾಗುವ  ಮೂಲಸೌಕರ್ಯವನ್ನು ಸುಗಮಗೊಳಿಸಿದೆ. ಕಳೆದ ಎಂಟು ವರ್ಷಗಳಲ್ಲಿ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರವು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ್’ ದೃಷ್ಟಿಯ ಅಡಿಯಲ್ಲಿ ಹೆಚ್ಚಿನ ಪ್ರಚೋದನೆಯನ್ನು ಪಡೆದಿದೆ ಮತ್ತು ಈ ಕ್ಷೇತ್ರದ ಪ್ರಯಾಣವು ಸ್ವಾವಲಂಬನೆಯ ಗಮನಾರ್ಹ ಪ್ರತಿಬಿಂಬವಾಗಿದೆ.


ಕು.ಪೆನಜಾ ವಿ ರೆಡ್ಡಿ
ಸ್ನಾತಕೋತರ ವಿದ್ಯಾರ್ಥಿ,
ಮಂಗಳೂರು ವಿಶ್ವವಿದ್ಯಾಲಯ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More