ಖಾದಿ ಕ್ರಾಂತಿಗೆ, ಸಹಕಾರದ ಮಾದರಿ| ಕು.ಪೆನಜ ವಿ. ರೆಡ್ಡಿ

ಮಹಾತ್ಮಾ ಗಾಂಧಿಯವರ ಪರಂಪರೆಯ ‘ಗ್ರಾಮ ಸ್ವರಾಜ್’ ಪರಿಕಲ್ಪನೆಯು ಗ್ರಾಮೀಣ ಪುನರ್ನಿರ್ಮಾಣದ ಪರ್ಯಾಯ ಮಾದರಿಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಸ್ವದೇಶಿ ಮನೋಭಾವವನ್ನು ಪ್ರತಿನಿಧಿಸುವ ‘ಖಾದಿ’ ಚಳುವಳಿಯು ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಜೊತೆಗೆ ‘ಸ್ಥಳೀಯ ಸಮುದಾಯದಿಂದಲೇ ಜೀವನದ ಎಲ್ಲ ಅಗತ್ಯಗಳನ್ನು ಪಡೆಯುವ ದೃಢ ಸಂಕಲ್ಪವನ್ನು ಪ್ರತಿನಿಧಿಸುತ್ತದೆ. 1918 ರಲ್ಲಿ ಮಹಾತ್ಮಾ ಗಾಂಧಿಯವರು ಭಾರತದ ಹಳ್ಳಿಗಳಲ್ಲಿ ವಾಸಿಸುವ ಬಡ ಜನಸಾಮಾನ್ಯರಿಗೆ ಪರಿಹಾರ ಕಾರ್ಯಕ್ರಮವಾಗಿ ಖಾದಿ ಚಳುವಳಿಯನ್ನು ಪ್ರಾರಂಭಿಸಿದರು. ‘ನೂಲುವ ನೇಯ್ಗೆಯನ್ನು ಸ್ವರಾಜ್ಯ ಸಿದ್ಧಾಂತಕ್ಕೆ ಬ್ರ್ಯಾಂಡ್ ಮಾಡಲಾಯಿತು’. ಶ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಮಾದರಿಯು ಅನುಷ್ಠಾನಗೊಂಡು ಜಾರಿಗೆ ಬಂದಿರುವುದು, ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟಗಳಿಗೆ ಸಾಕ್ಷಿಯಾದ, ಖಾದಿ ಚಳವಳಿಯ ಕೇಂದ್ರವಾಗಿ ಮಾರ್ಪಟ್ಟ ಐತಿಹಾಸಿಕ ಗ್ರಾಮ, ಬೆಳಗಾವಿ ಜಿಲ್ಲೆಯ ಹುಡ್ಲಿ( ಹುಡಲಿ).

ಸ್ವಾತಂತ್ರ ಚಳುವಳಿಯ ಕಿಚ್ಚು ಹಬ್ಬಿಸುವುದರೊಂದಿಗೆ ಗ್ರಾಮೀಣ ಆರ್ಥಿಕತೆಗೆ ಮಹಾತ್ಮಾ ಗಾಂಧಿಯವರು ಅವರ ಸಮಕಾಲೀನ ಸ್ವಾತಂತ್ರ್ಯ ಹೋರಾಟಗಾರರಾದ ಗಂಗಾಧರ ದೇಶಪಾಂಡೆ ಅವರೊಂದಿಗೆ 1937 ರಲ್ಲಿ ಹುಡ್ಲಿ ಗ್ರಾಮದಲ್ಲಿ ಪ್ರಾರಂಭಿಸಿದ ‘ಖಾದಿ ಅಭಿಯಾನ’ ಸಹಕಾರಿ ಚಳುವಳಿಯಾಗಿ ಬದಲಾಯಿತು. 1954 ರಲ್ಲಿ ‘ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದನಾ ಸಂಘವು’ 500 ರೂ.ಗಳ ಷೇರು ಮೊತ್ತದಲ್ಲಿ 11 ಸದಸ್ಯರು ಮತ್ತು ಇಬ್ಬರು ಕಾರ್ಮಿಕರೊಂದಿಗೆ ಗ್ರಾಮದಲ್ಲಿ ಪ್ರಾರಂಭವಾಯಿತು. ಇಂದು ಸಾಂಪ್ರದಾಯಿಕ ನೂತ(spun) ನೂಲಿನಿಂದ ಹಿಡಿದು ನಗರ ವಿನ್ಯಾಸಗಳವರೆಗೆ, ಈ ಹಳ್ಳಿಯ ಉತ್ಪನ್ನಗಳು ದೇಶಾದ್ಯಂತ ಪ್ರಯಾಣಿಸುತ್ತವೆ. ‘ಕೈಮಗ್ಗ ‘ (handloom) ಘಟಕವು ನೂರಾರು ಉದ್ಯೋಗಗಳನ್ನು ಸೃಷ್ಟಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಖಾದಿ ಘಟಕಗಳ ಮೂಲಕ ಸ್ವಾವಲಂಬನೆಯ ಮಂತ್ರವನ್ನು ಪಸರಿಸಲು ದೇಶದಲ್ಲಿ ಆರು ಆಶ್ರಮಗಳನ್ನು ಆರಂಭಿಸಲಾಯಿತು. ಗಾಂಧಿವಾದಿ ಗಂಗಾಧರ ರಾವ್ ದೇಶಪಾಂಡೆ ಅವರು ಹುಡಲಿ ಸಮೀಪದ ʼಕುಮಾರಿ ಆಶ್ರಮದಲ್ಲಿ ಖಾದಿ ಘಟಕ ಆರಂಭಿಸಿದರು. ಇದು ಕರ್ನಾಟಕದ ಮೊದಲ ಖಾದಿ ಘಟಕವಾಯಿತು. ದೇಶಪಾಂಡೆ ಅವರಿಗೆ ‘ಕರ್ನಾಟಕದ ಖಾದಿ ಭಗೀರಥ’ ಎಂಬ ಬಿರುದು ನೀಡಲಾಯಿತು. ಗಾಂಧಿಯನ್ ಗಂಗಪ್ಪ ಮುದ್ದಪ್ಪ ಮಲಗಿ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದನಾ ಸಂಘವು ಪ್ರಾರಂಭದ ಅಧ್ಯಕ್ಷರು. ಸ್ವಾತಂತ್ರ್ಯದ ನಂತರ ಖಾದಿ ನಿಧಾನವಾಗಿ ಮರೆಯಾಯಿತು. ಪಾಲಿಯೆಸ್ಟರ್ ಮತ್ತು ಇತರ ಬಟ್ಟೆಗಳಿಂದ ತೀವ್ರ ಪೈಪೋಟಿ ಇತ್ತು. ಆದರೆ ಬದಲಾಗುತ್ತಿರುವ ಸಮಯದೊಂದಿಗೆ ಹೊಸ ತಂತ್ರಜ್ಞಾನದೊಂದಿಗೆ ಖಾದಿಯು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಇತರ ಬಟ್ಟೆ ರ್ಕಾಖಾನೆಗಳೊಂದಿಗೆ ಸ್ಪರ್ದಿಸುತ್ತಿದೆ.

ಯಶಸ್ವಿ ಉದ್ಯಮ

ಇಂದು ಈ ಸಹಕಾರ ಸಂಘದಲ್ಲಿ 640 ಸ್ಪಿನ್ನರ್‌ಗಳು ಮತ್ತು 220 ನೇಕಾರರು ಸೇರಿದಂತೆ 1,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ‘ಬಟ್ಟೆಗಳನ್ನು ಮುದ್ರಿಸಲು, ತಮಿಳುನಾಡಿನ ಈರೋಡ್ ಮತ್ತು ದಕ್ಷಿಣ ಕನ್ನಡದ ಪುತ್ತೂರಿಗೆ ಕೂಡಾ ಕಳುಹಿಸಲಾಗುತ್ತಿದೆ; ಮತ್ತು ಕರ್ನಾಟಕದ ಹೊರತಾಗಿ ಸೊಸೈಟಿಯ ಉತ್ಪನ್ನಗಳನ್ನು ಪಶ್ಚಿಮ ಬಂಗಾಳ, ಬಿಹಾರ, ಅಹಮದಾಬಾದ್, ಕೇರಳದ ತ್ರಿಚೂರ್ ಮತ್ತು ಇತರ ಸ್ಥಳಗಳಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ.

ಖಾದಿ ತಯಾರಿಕೆಯ ಹೊರತಾಗಿ, ಸಹಕಾರ ಸಂಘವು ʼಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಗ್ರಾಮದಲ್ಲಿ ‘ಆಹಾರ ಸಂಸ್ಕರಣಾ ಘಟಕ’ ವನ್ನು ಪ್ರಾರಂಭಿಸಿತು, ಈ ಸೊಸೈಟಿಯು ಹಣ್ಣು ಮತ್ತು ತರಕಾರಿ ಸಂಸ್ಕರಣಾ ವಿಭಾಗ ಮತ್ತು ಸಾಬೂನು ವಿಭಾಗವನ್ನು ರಚಿಸಿದೆ. 1992 ರಲ್ಲಿ ಅಗರ ಬತ್ತಿ ಘಟಕವನ್ನು ಸಹ ಪ್ರಾರಂಭಿಸಲಾಯಿತು. ಸೊಸೈಟಿಯಿಂದ ಧೂಪದ್ರವ್ಯವನ್ನು ಸಹಕಾರಿ ಎಂಬ ಹೆಸರಿನಿಂದಲೆ ಮಾರಾಟ ಮಾಡಲಾಗುತ್ತಿದೆ. 1970 ರಲ್ಲಿ ಗೋಬರ್ ಗ್ಯಾಸ್ ಪ್ಲಾಂಟ್ ಪ್ರಾರಂಭವಾಯಿತು. ಇಲ್ಲಿಯವರೆಗೆ ಈ ಸಹಕಾರ ಸಂಘವು ಜಿಲ್ಲೆಯಲ್ಲಿ 25,000 ಗೋಬರ್ ಗ್ಯಾಸ್ ಪ್ಲಾಂಟ್‌ಗಳನ್ನು ಸ್ಥಾಪಿಸಿದೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇಂದು ಸುಮಾರು 90% ಮಹಿಳಾ ಉದ್ಯೋಗಿಗಳನ್ನು ಈ ಸಹಕಾರಿ ಸಂಘವು ಹೊಂದಿ ಮಹಿಳಾ ಸಬಲೀಕರಣದಡೆಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕದಿಂದ ತಯಾರಿಸಿದ ಉಪ್ಪಿನಕಾಯಿ, ಮಾವಿನ ಪಲ್ಪ್, ಕುಂಬಳಕಾಯಿ ಮತ್ತು ಜಾಮ್ಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಸಾಬೂನುಗಳನ್ನು ತಯಾರಿಸಲಾಗುತ್ತದೆ. ‘ಕುಟೀರ್’ ಎಂದು ಕರೆಯಲ್ಪಡುವ ಈ ಸಾಬೂನುಗಳು ಬೇವಿನ ಎಣ್ಣೆ, ತೆಂಗಿನ ಎಣ್ಣೆ, ಶ್ರೀಗಂಧದ ಎಣ್ಣೆ ಮತ್ತು ಇತರ ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿವೆ.

ಕೃಷಿ ಲಾಭದಾಯಕವಲ್ಲವೆನಿಸಿ ಪಟ್ಟಣಗಳಿಗೆ ಉದ್ಯೋಗವನ್ನರಿಸಿ ವಲಸೆ ಹೋಗುವ ಜನರನ್ನು ತಡೆಯಲು ಸಹಕಾರ ಸಂಘದ ಯುವಕರ ತಂಡ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸ್ಥಿರತೆಯನ್ನು ಸೃಷ್ಟಿಸಲು ʼಕಾಟೇಜ್ ಕೈಗಾರಿಕೆಗಳ ಸುಸ್ಥಿರ ವ್ಯಗೆ ಕಾರ್ಯಯೋಜನೆಯನ್ನು ರೂಪಿಸಿದರು. ಉಪ್ಪಿನಕಾಯಿಗೆ ಹೆಚ್ಚಿನ ಬೇಡಿಕೆ ಹಾಗೂ ಅಲ್ಲಿ ಹೆಚ್ಚಿನ ಉದ್ಯೋಗಾವಕಾಶ ಮನಗಂಡು ಬ್ರಾಂಡ್ ಅನ್ನು ಜನಪ್ರಿಯಗೊಳಿಸುವುದು ಮುಖ್ಯವೆಂದು , ಪ್ರಚಾರದ ವೀಡಿಯೊಗಳು, ವೆಬ್‌ಸೈಟ್ ಮತ್ತು ವಿಶೇಷ ಮಾರುಕಟ್ಟೆ ತಂತ್ರಗಳೊಂದಿಗೆ, ಹುಡ್ಲಿಯ ಉಪ್ಪಿನಕಾಯಿ ಅಂತರರಾಷ್ಟ್ರೀಯ ಸಂವೇದನೆಯಾಯಿತು ಮತ್ತು ಈ ಕಥೆಯು ವಿಶ್ವಸಂಸ್ಥೆಯನ್ನು ತಲುಪಿತು. ಬೆಂಗಳೂರಿನಲ್ಲಿ 60,000 ಕ್ಕೂ ಹೆಚ್ಚು ಜನರು ಕೆಲವೇ ತಿಂಗಳುಗಳಲ್ಲಿ ಹುಡ್ಲಿ ಉಪ್ಪಿನಕಾಯಿಯ ಗ್ರಾಹಕರಾದರು. ಉತ್ಪನ್ನದ ಬ್ರಾಂಡ್ ಹೆಸರನ್ನು “ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಘೋಷಣೆಗೆ ಅನುಗುಣವಾಗಿ ‘ಜೈ ಜವಾನ್, ಜೈ ಕಿಸಾನ್’; ಎಂದಿರಿಸಲಾಯಿತು. ಈಗಾಗಲೇ ಬ್ರಾಂಡ್ ಜನಪ್ರಿಯವಾಗಿರುವುದರಿಂದ, ಹುಡ್ಲಿಯ ಸೊಸೈಟಿ ಯುವಕರು ಉಪ್ಪಿನಕಾಯಿಗೆ ಲೇಬಲ್ ಆಗಿ ‘ಜವಾನ್’ ಅನ್ನೊ ಹೆಸರಿನ ಹೊಸ ಬ್ರಾಂಡ್ ನೊಂದಿಗೆ ಪ್ರಖ್ಯಾತಿ ಗಳಿಸಿದರು. ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಈ ಯುವಕರ ನೆರವಿನಿಂದ ಆರಂಭಗೊಂಡ ಆಹಾರ ಸಂಸ್ಕರಣಾ ಉದ್ಯಮ ಮತ್ತು ಎಂದು ಇದರ ಉತ್ಪನ್ನಗಳು ಹೊಸ ಎತ್ತರಕ್ಕೆ ತಲುಪಿವೆ.

ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದನಾ ಸಂಘ ಆಹಾರ ಉತ್ಪನ್ನಗಳಲ್ಲಿ ಕಂಡಿರುವ ಯಶಸ್ಸನ್ನು ಖಾದಿಯ ಉದ್ಯಮ ಅಭಿವೃದ್ಧಿಗೊಳ್ಳಲಿಲ್ಲ. ಆದರೆ ಅತ್ಯಾಧುನಿಕ ಮಗ್ಗಗಳು ಮತ್ತು ಚರಕಗಳೂ ಅಳವಡಿಸಿರುವ ಮಾರ್ಗ ಗಾಂಧಿಯವರ ಗ್ರಾಮ ಸ್ವರಾಜ್ ಮತ್ತು ಖಾದಿಯ ಮಹಿಮೆಯನ್ನು ಜಗತ್ತಿಗೆ ಸಾರಿದ್ದಾರೆ. ಖಾದಿ ಘಟಕದ ಕೊಡುಗೆಯನ್ನು ಗುರುತಿಸಿದ ರಾಜ್ಯ ಸರ್ಕಾರವು ಸಂಘದ ʼಗಂಗಪ್ಪ ಮುದ್ದಪ್ಪʼ ಮಾಳಗಿ ಅವರಿಗೆ ಕಳೆದ ವರ್ಷ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಖಾದಿ ಕ್ರಾಂತಿಯ ಪ್ರಭಾವವು ಇತರ ರೀತಿಯಲ್ಲಿಯೂ ಕಂಡುಬಂದಿದೆ, ಅವುಗಳಲ್ಲಿ ಮುಖ್ಯವಾದ ಅಂಶವೆಂದರೆ ಗ್ರಾಮದಲ್ಲಿ ಒಂದೇ ಒಂದು ಅರಕ್ ಅಂಗಡಿಯಿಲ್ಲ, ಗಾಂಧಿ ಗ್ರಾಮವಾಗಿ ಮೆರೆದಿದೆ.

ಕೃಪೆ,

Spinning a revolution. (Deccan Herald) https://www.deccanherald.com/content/223152/spinning-revolution.html

ಕು.ಪೆನಜ ವಿ. ರೆಡ್ಡಿ
ಸ್ನಾತಕೋತರ ವಿದ್ಯಾರ್ಥಿ,
ಮಂಗಳೂರು ವಿಶ್ವವಿದ್ಯಾಲಯ.                                                                                                                                                                                                                                    

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More