ಆಧುನಿಕ ತಂತ್ರಜ್ಞಾನವು ಇಂದು ವ್ಯವಹಾರ ಮತ್ತು ಗ್ರಾಹಕರ ಮಧ್ಯೆ ಇರುವ ಎಲ್ಲಾ ಸಾಂಪ್ರದಾಯಿಕ ಅಡೆತಡೆಗಳನ್ನು ನೀಗಿಸಿದೆ ಮತ್ತು ಇದು ಅಭೂತಪೂರ್ವ ವ್ಯವಹಾರಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಇಂದು ಸೃಷ್ಟಿಸುತ್ತಿದೆ. ಹೀಗಿರುವಾಗ ಇಂದು ಹಣಕಾಸು ಸಂಸ್ಥೆಗಳು ಎದುರಿಸುವ ಅತ್ಯಂತ ದೊಡ್ಡ ಸವಾಲೇನೆಂದರೆ, ಇಂದು ಹೆಚ್ಚುತ್ತಿರುವ ಹಣ-ಕಾಸು ವರ್ಗಾವಣೆ, ಭಯೋತ್ಪಾದನೆ ಮತ್ತು ಅಕ್ರಮ ಹಣಕಾಸು ಚಟುವಟಿಕೆಗಳಿಂದಾಗಿ ಸಂಸ್ಥೆಗಳು ಅವರು ಯಾರೊಂದಿಗೆ ವಯವಹಾರ ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಲು, ವಿಶ್ಲೇಷಿಸಲು ಮತ್ತು ನಿಖರವಾಗಿ ಅರ್ಥಮಾಡಿಕೊಳ್ಳಲು ಅದರಲ್ಲೂ ನಿರ್ದಿಷ್ಟವಾಗಿ ಭಯೋತ್ಪಾದನೆ ಮತ್ತು ಆರ್ಥಿಕ ಅಪರಾಧದ ಅಂತರಾಷ್ಟ್ರೀಯ ಬೆದರಿಕೆಯನ್ನು ತಗ್ಗಿಸುವ ಒತ್ತಡದಲ್ಲಿವೆ. ಈ ಒತ್ತಡವು ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ನಿಯಂತ್ರಣ, ಹಾಗೆಯೇ ವಿವಿಧ Anti-Money Laundering (AML) ನಿರ್ದೇಶನಗಳಾಗಿ ಪ್ರಕಟವಾಗುತ್ತಿದೆ ಮತ್ತು ಸಂಸ್ಥೆಗಳು ತಾವು ಯಾರೊಂದಿಗೆ ವ್ಯವಹಾರವನ್ನು ಮಾಡುತ್ತಿದ್ದೇವೆ ಎಂಬುದರ ಸ್ಪಷ್ಟ ಮಾಹಿತಿಯನ್ನು ಖಚಿತಪಡಿಸಿ ವ್ಯವಹರಿಸುವುದು ಈಗಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾದದ್ದು.
ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KNOW YOUR CUSTOMER/KYC) , ಸಂಸ್ಥೆಗಳು ತಮ್ಮ ಗ್ರಾಹಕರ ಗುರುತನ್ನು ಪರಿಶೀಲಿಸಲು ಮತ್ತು ಅವರಿಂದ ಎದುರಾಗಬಹುದಾದ ಅಪಾಯಗಳಿಂದ ಮುನ್ನಚರಿಕೆಯನ್ನು ವಹಿಸಿಕೊಳ್ಳಲು ಬಳಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ ಮತ್ತು ಅಂತಹಾ ಸವಾಲುಗಳನ್ನು ನಿಯಂತ್ರಣದಲ್ಲಿಡಲು ಈ ಪ್ರಕ್ರಿಯೆ ಸಹಕಾರಿಯಾಗಿದೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ 1990 ರ ದಶಕದ ಅಂತ್ಯದಲ್ಲಿ KYC ಮಾನದಂಡಗಳನ್ನು ಪರಿಚಯಿಸಲಾಯಿತು. ನಂತರ 9/11 ಭಯೋತ್ಪಾದಕರ ದಾಳಿಯ ನಂತರ US ಸರ್ಕಾರವು ತುಂಬಾ ಕಟ್ಟುನಿಟ್ಟಾಗಿ KYC ಪ್ರಕ್ರಿಯೆಗಳನ್ನು ಪಾಲಿಸತೊಡಗಿದೆ.
ಭಾರತದಲ್ಲಿ, ಹಣ ಮತ್ತು ಲಾಂಡರಿಂಗ್ ತಡೆಗಟ್ಟಲು PMLA (Prevention of the Money Laundering Act) ಅನ್ನು 2002 ರಲ್ಲಿ ಅಂಗೀಕರಿಸಲಾಯಿತು ಮತ್ತು ಇದು 2009 ರಲ್ಲಿ FATF (Financial Action Task Force) ಹಣಕಾಸು ಕಾರ್ಯಪಡೆ ಶಿಫಾರಸು ಮಾಡಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ (RBI) 2002 ರಲ್ಲಿ ‘ಬ್ಯಾಂಕ್‌ಗಳನ್ನು ಉದ್ದೇಶಪೂರ್ವಕವಾಗಿ ಕ್ರಿಮಿನಲ್ ಚಟುವಟಿಕೆಗಳಾದಂತಹ ಮನಿ ಲಾಂಡರಿಂಗ್ ಅಥವಾ ಭಯೋತ್ಪಾದಕ ಹಣಕಾಸು ಚಟುವಟಿಕೆಗಳಿಗೆ ಬಳಸುವುದನ್ನು ತಡೆಯಲು USA ಮಾದರಿಯ KYC ಪ್ರಕ್ರಿಯೆ ಮತ್ತು ಅದರ ಮಾರ್ಗಸೂಚಿಗಳನ್ನು ಪರಿಚಯಿಸಿದರು. ಈ ಮಾರ್ಗಸೂಚಿಗಳನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಅಡಿಯಲ್ಲಿ ನೀಡಲಾಗಿದೆ. ಈ ಪ್ರಕ್ರಿಯೆಯು ಬ್ಯಾಂಕ್‌ಗಳಿಗೆ ತಮ್ಮ ಸೇವೆಗಳನ್ನು ಗ್ರಾಹಕರು ದುರುಪಯೋಗಪಡಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಭಾರತದಲ್ಲಿ, Electronic Know Your Customer or Client ಎನ್ನುವುದು ‘ಗ್ರಾಹಕರ ಗುರುತು ಮತ್ತು ವಿಳಾಸವನ್ನು ಅವರ ಆಧಾರ್ ಗುರುತಿನ ಕಾರ್ಡ್‌ಗಳ ಮೂಲಕ ಡಿಜಿಟಲ್ ಆಗಿ ಪರಿಶೀಲಿಸುವ ಪ್ರಕ್ರಿಯೆಯಾಗಿದೆ.
KYC ನೀತಿಯ ಉದ್ದೇಶವಾಗಿ, ಒಬ್ಬ ‘ಗ್ರಾಹಕ’ ನನ್ನು ಹೀಗೆ ವ್ಯಾಖ್ಯಾನಿಸಬಹುದು:
- ಖಾತೆಯನ್ನು ನಿರ್ವಹಿಸುವ ಮತ್ತು/ಅಥವಾ ಬ್ಯಾಂಕ್‌ನೊಂದಿಗೆ ವ್ಯವಹಾರ ಸಂಬಂಧವನ್ನು ಹೊಂದಿರುವ ವ್ಯಕ್ತಿ ಅಥವಾ ಘಟಕ;
- ಖಾತೆಯನ್ನು ನಿರ್ವಹಿಸುವವರ ಪರವಾಗಿ ಒಬ್ಬರು (ಅಂದರೆ ಲಾಭದಾಯಕ ಮಾಲೀಕರು)
- ಕಾನೂನಿನ ಅಡಿಯಲ್ಲಿ ಅನುಮತಿಸಲಾದ ವೃತ್ತಿಪರ ಮಧ್ಯವರ್ತಿಗಳು ನಡೆಸಿದ ವಹಿವಾಟಿನ ಫಲಾನುಭವಿಗಳು;
- ಬ್ಯಾಂಕಿನೊಂದಿಗೆ ವ್ಯವಹಾರ ನಡೆಸುವ ವ್ಯಕ್ತಿ ಅಥವಾ ಘಟಕ.
KYCಯ ಅಗತ್ಯ ಅಂಶಗಳು:
1.ಗ್ರಾಹಕ ಸ್ವೀಕಾರ ನೀತಿ: ಸರಿಯಾದ ಮಾನದಂಡಗಳನ್ನು ಅಳವಡಿಸಿ ಗ್ರಾಹಕರು ಅವರ ನೈಜ ಹೆಸರನ್ನು ಬಳಸುತ್ತಿರುವ ಮತ್ತು ಯಾವುದೆ ಭಯೋತ್ಪಾದನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳುವ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು.
2.ಗ್ರಾಹಕರ ಗುರುತಿನ ಕಾರ್ಯವಿಧಾನಗಳು: ಬ್ಯಾಂಕಿಂಗ್ ವ್ಯವಹಾರ ಪ್ರತಿ ಹಂತದಲ್ಲೂ ಗ್ರಾಹಕರ ಗುರುತಿನ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಮತ್ತು ಹಾಜರು ಪಡಿಸಿದ ಗುರುತಿನ ದಾಖಲಾತಿಗಳನ್ನು ನೈಜ್ಯತೆಯನ್ನು ಪರಿಶೀಲಿಸುವುದು.
3.ವಹಿವಾಟುಗಳ ಮೇಲ್ವಿಚಾರಣೆ: ಗ್ರಾಹಕರ ಪ್ರತೀ ವ್ಯವಹಾರ ವೈಹಿವಾಟುಗಳನ್ನು ಸರಿಯಾಗಿ ಪರಿಶೀಲಿಸುವುದು ಮತ್ತು ಸಂಸ್ಥೆಯೊಂದಿಗಿನ ಅವರ ವ್ಯವಹಾರದಲ್ಲಿ ಅವರ ನಡೆತೆಯನ್ನು ಗಮನಿಸುವುದು.
4. ಅಪಾಯ ನಿರ್ವಹಣೆ : ಸಂಸ್ಥೆಯೂ ತಮ್ಮಲ್ಲಿ KYC ಪ್ರಕ್ರಿಯೆಯ ಪಾಲನೆಯಾಗುತ್ತಿದೆಯೇ ಎಂಬುದರ ಪರಿಶೀಲನೆಯನ್ನು ನಿರಂತರವಾಗಿ ಮಾಡುತ್ತಿರಬೇಕು ಮತ್ತು ಈ ನಿಟ್ಟಿನಲ್ಲಿ ತಮ್ಮ ಸಿಬ್ಬಂಧಿಗಳಿಗೆ ಬೇಕಾಗುವ ತರಬೇತಿ-ಕಾರ್ಯಗಾರಗಳನ್ನು ಅಯೋಗಿಸುತ್ತಿರಬೇಕು.
ಗ್ರಾಹಕರ ಖಾತೆಗಳನ್ನು ಆತರಿಕವಾಗಿ ಮೌಲ್ಯಮಾಪನವನ್ನು ಮಾಡಿ ಗುಣಮಟ್ಟದ ಆಧಾರದಲ್ಲಿ ವರ್ಗೀಕರಿಸಿ ಅವುಗಳ ಮೇಲೆ ನಿಗಾವಹಿಸುವುದು.
KYC ನಿಯಂತ್ರಣಗಳು ಸಾಮಾನ್ಯವಾಗಿ ಕೆಳಗಿನ ವಿವರಗಳನ್ನು ಒಳಗೊಂಡಿರುತ್ತವೆ:
ಜೊತೆಗೆ ಗ್ರಾಹಕರ ನಡವಳಿಕೆ ಮತ್ತು ದಾಖಲಾದ ಪ್ರೊಫೈಲ್ ಹಾಗೂ ವಹಿವಾಟುಗಳ ಬಗ್ಗೆ ಅವರ ಗೆಳೆಯರು/ಆತ್ಮೀಯರಲ್ಲಿ ಮೇಲ್ವಿಚಾರಣೆ ನೆಡೆಸುವುದು.
KYC ಎರಡು ಘಟಕಗಳನ್ನು ಹೊಂದಿದೆ – ಗುರುತು ಮತ್ತು ವಿಳಾಸ. ಗುರುತು ಒಂದೇ ಆಗಿರುವಾಗ, ವಿಳಾಸ ಬದಲಾಗುವ ಸಾಧ್ಯತೆಗಳಿರುತ್ತದೆ . ಆದ್ದರಿಂದ ಬ್ಯಾಂಕುಗಳು ತಮ್ಮ ದಾಖಲೆಗಳನ್ನು ನಿಯತಕಾಲಿಕವಾಗಿ ನವೀಕರಿಸಬೇಕಾಗುತ್ತದೆ.
KYC ಪ್ರಕ್ರಿಯೆಗಾಗಿ ಹಣಕಾಸು ಸಂಸ್ಥೆಗಳು ಕೇಳಬಹುದಾದ ದಾಖಲೆಗಳ ವಿವರಗಳು:
KYC ಮತ್ತು ಅಗತ್ಯವಿರುವ ದಾಖಲೆಗಳ ಕುರಿತು ಕೆಲವು ಸ್ಪಷ್ಟೀಕರಣಗಳು:
- a) ವೈಯಕ್ತಿಕ ಖಾತೆದಾರರಾಗಿದ್ದಲ್ಲಿ: ಗ್ರಾಹಕರ ಹೆಸರು, ವಿಳಾಸ ಮತ್ತು ಇತರ ಮಾಹಿತಿಗಳನ್ನು ಖಚಿತಪಡಿಸುವ ದಾಖಲೆಗಳು ಮತ್ತು ಇತ್ತೀಚಿನ ಛಾಯಾಚಿತ್ರವನ್ನು ಪಡೆದುಕೊಳ್ಳತಕ್ಕದ್ದು.(ಜಂಟಿ ಖಾತೆಯನ್ನು ಹೊಂದಿರುವ ಗ್ರಾಹಕರಿಗೂ ಅನ್ವಯವಾಗುತ್ತದೆ)
- b) ವೈಯುಕ್ತಿಕವಲ್ಲದ ಖಾತೆಗಳಿಗೆ (Non-Individuals):
i) ಕಾನೂನುಬದ್ಧ ವ್ಯಕ್ತಿ/ಸಂಸ್ಥೆಯ ಕಾನೂನು ಸ್ಥಿತಿಯನ್ನು ಪರಿಶೀಲಿಸಬೇಕು.
ii) ಅಧಿಕೃತ ಸಹಿದಾರರ ಗುರುತನ್ನು ಪರಿಶೀಲಿಸಬೇಕು.
iii) ಖಾತೆಯ ಮಾಲೀಕರು/ನಿಯಂತ್ರಕರ ಗುರುತನ್ನು ಪರಿಶೀಲಿಸಬೇಕು. - ಯುಐಡಿಎಐ(UIDAI) ನೀಡಿದ ಪತ್ರವನ್ನು ಎಲ್ಲಾ ರೀತಿಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಅಧಿಕೃತವಾಗಿ ಮಾನ್ಯವಾದ ದಾಖಲೆಯಾಗಿ ಸ್ವೀಕರಿಸಲಾಗುತ್ತದೆ
- KYC ಅವಶ್ಯಕತೆಗಳನ್ನು ಅನುಸರಿಸಿ ಬ್ಯಾಂಕ್ ಖಾತೆಯನ್ನು ತೆರೆದಿದ್ದರೂ ಸಹ ಮುಂದೆ ಮತ್ತೆ KYC ಕುರಿತಾದ ದಾಖಲಾತಿಗಳನ್ನು ಮರು ಪರಿಶೀಲನೆಗಾಗಿ ಕೇಳಬಹುದು. ಏಕೆಂದರೆ ಖಾತೆಯಲ್ಲಿನ ವಹಿವಾಟುಗಳು ಮತ್ತು ನೀಡಿದ ಪ್ರೊಫೈಲ್‌ಗೆ ಅನುಗುಣವಾಗಿ, ಖಾತೆಯಲ್ಲಿನ ವ್ಯವಹಾರಗಳು ಕಂಡುಬಾರದಿದ್ದಲ್ಲಿ ಯಾವುದೇ ಮನಿ ಲಾಂಡರಿಂಗ್/ಭಯೋತ್ಪಾದಕ/ಅಪರಾಧಕ್ಕಾಗಿ ಈ ಖಾತೆಯನ್ನು ಬಳಸಲಾಗುತ್ತಿಲ್ಲ ಎಂದು ಖಚಿತಪಡಿಸಲು ಅಗತ್ಯವಿರುವ ಯಾವುದೇ ಹೆಚ್ಚುವರಿ ವಿವರಗಳು / ದಾಖಲೆಗಳನ್ನು ಬ್ಯಾಂಕ್ ಕೇಳಬಹುದು.
- ಪಾಸ್‌ಪೋರ್ಟ್/ಚಾಲನಾ ಪರವಾನಗಿ ಜೊತೆಗೆ ಗ್ರಾಹಕರ ಪ್ರಸ್ತುತ ವಿಳಾಸವನ್ನು ಖಚಿತಪಡಿಸಿಕೊಳ್ಳಲು ಮತದಾರರ ಐಡಿ / ಪ್ಯಾನ್ ಕಾರ್ಡ್, ದೂರವಾಣಿ / ವಿದ್ಯುತ್ ಬಿಲ್‌ನಂತಹ ಇತ್ತೀಚಿನ ಯುಟಿಲಿಟಿ ಬಿಲ್‌ಗಳನ್ನು ಬ್ಯಾಂಕ್ ಕೇಳಬಹುದು.
- ಒಬ್ಬ ವ್ಯಕ್ತಿಯು ಅವನ/ಅವಳ ಹೆಸರಿನಲ್ಲಿ ಯಾವುದೇ ವಿಳಾಸ ಪುರಾವೆಯನ್ನು ಹೊಂದಿಲ್ಲದಿದ್ದರೂ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಈ ಸಂದರ್ಭದಲ್ಲಿ ಗ್ರಾಹಕ ತನ್ನ ಹತ್ತಿರದ ಸಂಬಂಧಿಯ ಗುರುತಿನ ದಾಖಲೆ ಮತ್ತು ನಿರೀಕ್ಷಿತ ಯುಟಿಲಿಟಿ ಬಿಲ್, ಗ್ರಾಹಕನು ಹೇಳಿದ ಸಂಬಂಧಿಯ (ನಿರೀಕ್ಷಿತ) ಘೋಷಣೆಯೊಂದಿಗೆ ಖಾತೆಯನ್ನು ತೆರೆಯಬಹುದು.
- ಗ್ರಾಹಕನು ಕಡಿಮೆ ಆದಾಯವನ್ನು ಹೊಂದಿದ್ದು ಬ್ಯಾಂಕ್ ಖಾತೆಗೆ ಬೇಕಾದ ಗುರುತಿನ ದಾಖಲೆಗಳನ್ನು ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ. ಪೂರ್ಣ KYC ಕಾರ್ಯವಿಧಾನಕ್ಕೆ ಒಳಪಟ್ಟಿರುವ ಮತ್ತೊರ್ವ ಖಾತೆದಾರರ ಶಿಫಾರಸಿನ ಮೇರೆಗೆ ಖಾತೆಯನ್ನು ತೆರೆಯಬಹುದು. ಪೂರ್ಣ KYC ಕಾರ್ಯವಿಧಾನಕ್ಕೆ ಒಳಪಟ್ಟಿರುವ ಖಾತೆದಾರನ ಎಲ್ಲಾ ಖಾತೆಗಳಲ್ಲಿನ ಬಾಕಿ ಮೊತ್ತವು ಐವತ್ತು ಸಾವಿರ ರೂಪಾಯಿಗಳನ್ನು (ರೂ. 50,000/-) ಮೀರಕೂಡದು ಮತ್ತು ತೆಗೆದುಕೊಂಡ ಎಲ್ಲಾ ಖಾತೆಗಳಲ್ಲಿನ ಒಟ್ಟು ಕ್ರೆಡಿಟ್ ಒಂದು ಲಕ್ಷ ರೂಪಾಯಿಗಳನ್ನು ಮೀರಕೂಡದು. ಪರಿಚಯಿಸುವ ಖಾತೆದಾರನು ಖಾತೆಯನ್ನು ತೆರೆದು ಕನಿಷ್ಠ 6 ತಿಂಗಳಾದರೂ ಆಗಿರಬೇಕು. ಖಾತೆಯನ್ನು ತೆರೆಯಲು ಪ್ರಸ್ತಾಪಿಸುವ ಗ್ರಾಹಕರ ಭಾವಚಿತ್ರ ಮತ್ತು ಅವರ ವಿಳಾಸವೂ ಪರಿಚಯಿಸುವವರಿಂದ ಪ್ರಮಾಣೀಕರಿಸಲ್ಪಟ್ಟಿರಬೇಕು.
- ಕ್ರೆಡಿಟ್ ಕಾರ್ಡ್‌ಗಳು/ಡೆಬಿಟ್ ಕಾರ್ಡ್‌ಗಳು/ಸ್ಮಾರ್ಟ್‌ಗಳನ್ನು ನೀಡುವ ಮೊದಲು ಪೂರ್ಣ KYC ಕಾರ್ಯವಿಧಾನವನ್ನು ಪೂರ್ಣಗೊಳಿಸಿರಬೇಕು.KYC ಅನ್ನು ಬ್ಯಾಂಕ್‌ನಲ್ಲಿ ಈ ಕೆಳಗಿನ ಹಂತಗಳಲ್ಲಿ ಕೈಗೊಳ್ಳಬಹುದು:
- ಹೊಸ ಖಾತೆ (ಉಳಿತಾಯ, ಕರೆಂಟ್, ಎಫ್‌ಡಿ, ಆರ್‌ಡಿ, ಪಿಂಚಣಿ ಎ/ಸಿ ಇತ್ಯಾದಿ) ತೆರೆಯುವ ಸಂದರ್ಭದಲ್ಲಿ.
- ಪ್ರಸ್ತುತ KYC ಮಾನದಂಡಗಳ ಪ್ರಕಾರ ಆರಂಭಿಕ ಖಾತೆಯನ್ನು ತೆರೆಯುವಾಗ ದಾಖಲೆಗಳು ಇಲ್ಲದಿದ್ದಲ್ಲಿ ನಂತರದ ಖಾತೆಯನ್ನು ತೆರೆಯುವಾಗ ಸಲ್ಲಿಸಬೇಕು.
- ಲಾಕರ್ ಸೌಲಭ್ಯವನ್ನು ಪಡೆದುಕೊಳ್ಳುವಾಗ.
- ಖಾತೆಯ ವ್ಯವಹಾರಗಳನ್ನು ಗಮನಿಸಿದ ಮೇಲೆ ಗ್ರಾಹಕರಿಂದ ಹೆಚ್ಚುವರಿ ಮಾಹಿತಿಯನ್ನು ಪಡೆಯುವುದು ಅಗತ್ಯವೆಂದು ಕಂಡಲ್ಲಿ.
- ಅಧಿಕೃತ ಸಹಿದಾರರು, ಮ್ಯಾಂಡೇಟ್ ಹೊಂದಿರುವವರು, ಲಾಭದಾಯಕ ಮಾಲೀಕರ ಇತ್ಯಾದಿಗಳಿಗೆ ಬದಲಾವಣೆಗಳು ಇದ್ದಾಗ.
- ವಾಕ್-ಇನ್ ಗ್ರಾಹಕರಿಂದ (Walk -in customer ), ವಹಿವಾಟಿನ ಮೊತ್ತವು ರೂ.50,000/- ಕ್ಕೆ ಸಮನಾಗಿದ್ದರೆ ಅಥವಾ ಮೀರಿದರೆ, ಗ್ರಾಹಕರ ಗುರುತು ಮತ್ತು ವಿಳಾಸವನ್ನು ಧೃಢೀಕರಿಸಬೇಕು. ಗ್ರಾಹಕರು ಉದ್ದೇಶಪೂರ್ವಕವಾಗಿ ರೂ.50,000/- ಕೆಳಗಿನ ನಿರಂತರ ಸರಣಿ ವಹಿವಾಟುಗಳು ಕಂಡುಬಂದಲ್ಲಿ. ಬ್ಯಾಂಕ್ ಗ್ರಾಹಕರ ಗುರುತು ಮತ್ತು ವಿಳಾಸವನ್ನು ಪರಿಶೀಲಿಸಬೇಕು ಮತ್ತು ಅನುಮಾನಾಸ್ಪದ ವಹಿವಾಟಿನ ವರದಿಯನ್ನು ಸಲ್ಲಿಸಬೇಕು.
- ದೂರವಾಣಿ ಮತ್ತು ಎಲೆಕ್ಟ್ರಾನಿಕ್ ಬ್ಯಾಂಕಿಂಗ್‌ನ ತಂತ್ರಜ್ಞಾನದಿಂದಾಗಿ, ಬ್ಯಾಂಕ್ ಶಾಖೆಗೆ ಭೇಟಿಕೊಡದೆ ಗ್ರಾಹಕರು ಖಾತೆಯನ್ನು ತೆರೆಯಬಹುದು. ಮುಖಾ-ಮುಖಿ-ಅಲ್ಲದ ಗ್ರಾಹಕರ ಸಂದರ್ಭದಲ್ಲಿ, ಸಾಮಾನ್ಯವಾಗಿ ಗ್ರಾಹಕರ ಗುರುತಿನ ಕಾರ್ಯವಿಧಾನಗಳು ಅನ್ವಯಿಸುವುದನ್ನು ಹೊರತುಪಡಿಸಿ, ಹೆಚ್ಚುವರಿ ದಾಖಲೆಗಳನ್ನು ಅಗತ್ಯವಿದ್ದರೆ ಕೇಳಬಹುದು. ಅಂತಹ ಸಂದರ್ಭಗಳಲ್ಲಿ, ಬ್ಯಾಂಕ್‌ಗಳು ಗ್ರಾಹಕರ ಖಾತೆಯ ಮೂಲಕ ಮೊದಲ ಪಾವತಿಯನ್ನು ಮತ್ತೊಂದು ಬ್ಯಾಂಕ್ ಪ್ರತಿಯಾಗಿ KYC ಮಾನದಂಡಗಳಿಗೆ ಬದ್ಧವಾಗಿ ಮಾಡಬೇಕಾಗಬಹುದು.
ಇತರ ಸನ್ನಿವೇಶಗಳಲ್ಲಿ ಅನ್ವಯಿಸಲಾದ KYC ಮಾನದಂಡಗಳು:
- ಖಾತೆಯನ್ನು ತೆರೆಯುವ ಅಥವಾ ಅಸ್ತಿತ್ವದಲ್ಲಿರುವ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯನ್ನು ಮುಚ್ಚುವ ಸಂದರ್ಭದಲ್ಲಿ.
- ಯಾವುದೇ ಹಣಕಾಸು ಸಂಸ್ಥೆಯಿಂದ ಉಳಿತಾಯ ಪ್ರಮಾಣಪತ್ರಗಳ ಖರೀದಿ ಸಮಯದಲ್ಲಿ.
- (ಡಿಮ್ಯಾಟ್ ಎ/ಸಿ) ಅಂತಹ ಠೇವಣಿದಾರರೊಂದಿಗೆ ಖಾತೆ ತೆರೆಯುವಾಗ.
- ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ
- LPG ಸಂಪರ್ಕಗಳ ಬಹು ಪರಿಶೀಲನೆಗಾಗಿ
- 50,000 /-ರೂ ಗಿಂತ ಹೆಚ್ಚಿನ ಆಭರಣ ಖರೀದಿಸುವಾಗ.
ಕೃಪೆ: Official Website of Karnataka State Souharda Federal Cooperative Ltd
https://souharda.coop/index.html