ಬಂಗಾರ ಎಂದಾಗ ಹೆಣ್ಣಿನ ಸಿಂಗಾರ ನೆನಪಾಗುವುದು ಸಹಜ. ಆದರೆ ಬಂಗಾರ ಬರಿ ಸಿಂಗಾರದ ವಸ್ತುವಾಗದೆ, ಮನೆಯ ಆರ್ಥಿಕ ತುರ್ತಿನ ಸಂದರ್ಭದಲ್ಲಿ ನೆರವಾಗುವುದನ್ನು ನಾವು ನಮ್ಮ ಮನೆಗಳಲ್ಲಿ ಹಲವುಬಾರಿ ಕಂಡಿರುತ್ತೆವೆ. ಬಂಗಾರ ಸಿಂಗಾರದ ಮತ್ತು ಸಂಪತ್ತಿನ ಸಂಕೇತವಾಗುವುದರ ಜೊತೆಗೆ ಒಂದು ಕಾಲದಲ್ಲಿ ಸಮಾಜದ ಶೋಷಿತ ವರ್ಗದವರನ್ನು, ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ವೃಧ್ಧಿಸುವುದರಲ್ಲಿ (ಅಭಿವೃದ್ಧಿಗೊಳಿಸಲು) ಕಾರಣವಾದ ಉದಾ (?) ಟೈಟಾನ್ ಮತ್ತು ಮೈರಾಡಾ(MYRADA) ಕಂಪನಿಗಳು ಆರಂಭಿಸಿದ ಪ್ರಾಜೆಕ್ಟ್ ಮೆಡೋವು (Project Meadow)
1996 ರಲ್ಲಿ ದಶಕದಲ್ಲಿ, ‘ಪ್ಲಾನ್ ಇಂಡಿಯಾವು ಮಹಿಳೆಯರನ್ನು ಸಾಮಾಜಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಸಬಲೀಕರಣಗೊಳಿಸಲು ಭಾರತದ ತಮಿಳುನಾಡಿನಲ್ಲಿ ಉದ್ಯಮಗಳ ನಿರ್ವಹಣೆ ಮತ್ತು ಮಹಿಳೆಯರ ಅಭಿವೃದ್ಧಿ (Management of Enterprises and Development of Women) (MEADOW) ಯೋಜನೆಯನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ಗ್ರಾಮೀಣ ಯುವತಿಯರನ್ನು ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಿತು. ಪಾಲುದಾರರಾಗಿ ಮೈರಾಡಾ (MYRADA) ಮತ್ತು ಟೈಟಾನ್ ಕಂಪನಿ ಲಿಮಿಟೆಡ್, ಪ್ರಮುಖ ಗ್ರಾಹಕ ಸರಕು ಕಂಪನಿಗಳ ಸಹಯೋಗದೊಂದಿಗೆ ಮಹಿಳೆಯರ ಮತ್ತು ಅವರ ಮನೆಯ ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಮತ್ತು ನಿರಂತರ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ.MEADOW, ಟೈಟಾನ್ ಜ್ಯುವೆಲ್ಲರಿ ವಿಭಾಗದಲ್ಲಿ ಚಾಲನೆಯಲ್ಲಿರುವ, ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ, ಇದು ಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಗುಂಪುಗಳನ್ನು ರಚಿಸಿ ಕಾರ್ಯನಿರ್ವಹಿಸಲು ಅಗತ್ಯವಾದ ಬೆಂಬಲವನ್ನು ನೀಡುವ ಮೂಲಕ ಆಭರಣ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.ತಮಿಳು ನಾಡಿನ ‘ಕೃಷ್ಣಗಿರಿ’ ಜಿಲ್ಲೆಯಲ್ಲಿ ‘ಟೈಟಾನ್‌ನ ಗೋಲ್ಡ್ ಉತ್ಪಾದನಾ ಕೇಂದ್ರವು ಬಡ ಹೆಗ್ಗಳಿಗೆ ಹತ್ತಿರವಿರುವ ಕಾರಣದಿಂದ, ಈ ಜಿಲ್ಲೆಯ ಅನಕ್ಷರಸ್ತ ಯುವತಿಯರು, ವಿಧವೆಯರು ಮತ್ತು ತಾಯಂದಿರು ಯೋಜನೆಯ ಮೂದಲ ಆದ್ಯತೆ ಪಡೆದರು.
ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡಿದ ನಂತರ ಈ ಮಹಿಳೆಯರನ್ನು ‘ಹೊಸೂರಿಗೆ’ ಕರೆತಂದು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಯಿತು. ನುರಿತ ಕರಿಗಾರರಿಂದ ಸ್ಟೋನ್ ವಿಂಗಡಣೆ (Stone sorting)ಮತ್ತು ಬ್ಯಾಗಿಂಗ್(bagging), ವ್ಯಾಕ್ಸಿಂಗ್ (waxing), ಬೆಂಚ್‌ವರ್ಕ್, ಸ್ಟೋನ್ ಸೆಟ್ಟಿಂಗ್ ಮತ್ತು ಪಾಲಿಶ್‌ನಂತಹ ಆಭರಣ ತಯಾರಿಕೆಯ ಎಲ್ಲಾ ಅಂಶಗಳ ಕೌಶಲ್ಯದಲ್ಲಿ ಈ ಮಹಿಳೆಯರಿಗೆ 2 ವರ್ಷಗಳ ಕಾಲ ತರಬೇತಿ ನೀಡಲಾಯಿತು.ಮೆಡೋವು ಪಡೆದ ಅತ್ಯುತ್ತಮ ಮಾರಾಟಗಾರ ಪ್ರಶಸ್ತಿಯು ‘ಭಾರತದಲ್ಲಿನ ಅತ್ಯುತ್ತಮ ಮಾರಾಟಗಾರರೊಂದಿಗೆ ಸ್ಪರ್ಧಿಸಲು MEADOW ಅವರಿಗೆ ಅವಕಾಶ ಮಾಡಿಕೊಟ್ಟ ಸತ್ಯಕ್ಕೆ ಸಾಕ್ಷಿಯಾಗಿದೆ’. ಅವರ ಸ್ವ-ಸಹಾಯ ಗುಂಪುಗಳ ಬೆಂಬಲದೊಂದಿಗೆ ಇಂದು ಅವರೆ ಕಂಪನಿಯ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಸಂಪೂರ್ಣ ಕಾರ್ಯಗಳಾದ ಲಾಭ ಹಂಚಿಕೆ ಮತ್ತು ಹೊಸ ಸದಸ್ಯರ ನೇಮಕಾತಿಯ ಜವಾಬ್ದಾರಿಯನ್ನು ಸ್ವತ: ಮಹಿಳಾ ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ. ತಮಿಳುನಾಡಿನ ಗ್ರಾಮೀಣ ಭಾಗದ ಇನ್ನೂರು ಕುಟುಂಬಗಳು ಈ ಉಪಕ್ರಮದಿಂದ ಪ್ರಯೋಜನ ಪಡೆಯುತ್ತಿವೆ.
ಪ್ರಾರಂಭದ ಅವಧಿ:
ತಮಿಳುನಾಡು ಸರ್ಕಾರದ ನೆರವಿನೊಂದಿಗೆ ಟೈಟಾನ್ ತನ್ನ ಉತ್ಪಾದನಾ ಸೆಟಪ್ ಅನ್ನು ಕರ್ನಾಟಕದ ಗಡಿಯಲ್ಲಿರುವ ಸಣ್ಣ ಹಳ್ಳಿಯಲ್ಲಿ ಪ್ರಾರಂಭಿಸಿತು. ಅಂದು ಗ್ರಾಮೀಣ ಭಾರತದ ಮಹಿಳೆಯರು ಹೆಣ್ಣು ಭ್ರೂಣ ಹತ್ಯೆ, ಶಿಕ್ಷಣಕ್ಕೆ ಸೀಮಿತ ಪ್ರವೇಶ ಮತ್ತು ಕಳಪೆ ಸಾಮಾಜಿಕ ಸ್ಥಾನಮಾನದಂತಹ ಸಾಮಾಜಿಕ ಕಳಂಕಗಳಿಂದ ನಿರಂತರ ಶೋಷಣೆಗೊಳಗಾಗಿದ್ದರು. ‘ಹೊಸೂರು, ಕೃಷ್ಣಗಿರಿಯಲ್ಲಿ ಇಂತಹದೆ ಪರಿಸ್ಥಿತಿ. ಸಾಂಪ್ರದಾಯಿಕವಾಗಿ, ಈ ಗ್ರಾಮಗಳಲ್ಲಿನ ಮಹಿಳೆಯರು ತಿಂಗಳಿಗೆ ಕೇವಲ 700 ರೂ ಗಳಿಸುವ ದೈನಂದಿನ ಕೂಲಿ ಕಾರ್ಮಿಕರಾಗಿ ಮತ್ತು ತಮ್ಮ ಕುಟುಂಬದ ದೈನಂದಿನ ಚಟುವಟಿಕೆಗಳಿಂದ ಸ್ವ ಅಭಿವೃದ್ಧಿ ಹೀನರಾಗಿದ್ದರು. ಸಾಂಪ್ರದಾಯಿಕ ಮತ್ತು ಸಾಮಾಜಿಕ ನೀತಿಗಳು ಅವರ ಪ್ರಜ್ಞೆ, ಆತ್ಮ ವಿಶ್ವಾಸವನ್ನು ಸುಧಾರಿಸಲು ಎಂದಿಗೂ ಅವಕಾಶ ನೀಡಲಿಲ್ಲ ಮತ್ತು ಅವರ ಪರಿಸ್ಥಿತಿ ಕರುಣಾಜನಕವಾಗಿ ಉಳಿಯಿತು. ಬಾಲ್ಯವಿವಾಹಗಳು, ಹೆಣ್ಣು ಭ್ರೂಣ ಹತ್ಯೆಗಳು, ಶಿಕ್ಷಣದ ಕೊರತೆ – ಇವೆಲ್ಲವೂ ಅವರ ಸಂಕಟಗಳಿಗೆ ಕಾರಣವಾಗಿತ್ತು.
ಪ್ರಾಸಂಗಿಕವಾಗಿ, ಟೈಟಾನ್‌ನ ವ್ಯವಹಾರವನ್ನು ಗಮನಿಸುವುದಾದರೆ ಸಾಂಪ್ರದಾಯಿಕವಾಗಿ, ಆಭರಣ ತಯಾರಿಕೆ ಕರಿಗಾರ ಕುಟುಂಬದ ವಂಶಾವಳಿಯೊಂದಿಗೆ ಆಭರಣಗಳನ್ನು ತಯಾರಿಸಲಾಗುತ್ತದೆ. ನುರಿತ ಕರಿಗಾರ ಕೊರತೆಯಿಂದ ಆಭರಣ ತಯಾರಿಕೆಯಲ್ಲಿ ನಿರಂತರ ಸಮಸ್ಯೆಯಾಯಿತು. ಉತ್ತಮ ಕಾರಿಗಾರರು ಇಲ್ಲದ್ದರಿಂದ ಕಂಪನಿಗೆ ದೊಡ್ಡ ನಷ್ಟವನ್ನು ಉಂಟುಮಾಡಿತು. ಇದಕ್ಕೆ ಪರ್ಯಾಯಗಳನ್ನು ಹುಡುಕುತ್ತಿದ್ದ ಟೈಟಾನ್ ಗೆ MEADOW ಯೋಜನೆಯು ಪರಸ್ಪರ ಪ್ರಯೋಜನಕ್ಕೆ ಅನುಕೂಲವಾಗಿಸಿತು, ಜೊತೆಗೆ ದುರ್ಬಲ ಮಹಿಳೆಯರಿಗೆ ಆಭರಣ ತಯಾರಿಕೆ ಕೌಶಲ್ಯ ಮತ್ತು ಜ್ಞಾನವನ್ನು ವರ್ಗಾಯಿಸುವ ಗುರಿಯೊಂದಿಗೆ ಅವರಿಗೆ ತರಬೇತಿಯನ್ನು ನೀಡುತು. ಅವರು ಸ್ವಾವಲಂಬಿಯಾಗಲು, ಅವರ ವೈಯಕ್ತಿಕ ಜೀವನದಲ್ಲಿ ಆತ್ಮವಿಶ್ವಾಸ ಮತ್ತು ಪ್ರಗತಿಯನ್ನು ಸಾಧಿಸಲು ಅನುವು ಮಾಡಿಕೊಟ್ಟಿತು.
ನಂಬಿಕೆಯೇ ಸಂಸ್ಥೆಯ ಅಡಿಪಾಯ!
MEADOW ಯಶೋಗಾಥೆ ಕೆಲವೇ ದಿನಗಳಲ್ಲಿ ರಚಿಸಿರುವುದಲ್ಲ. ಹಂತ ಹಂತವಾಗಿ block ನಿರ್ಮಿಸಿ ಇಂದು ಕೃಷ್ಣಗಿರಿ ಜಿಲ್ಲೆಯ ನೂರಾರು ಕುಟುಂಬಗಳಿಗೆ ಜೀವನಾಧಾರವಾಗಿ ಮಾರ್ಪಟ್ಟಿದೆ. ಪ್ರಾಥಮಿಕವಾಗಿ ವಿಧವೆಯರು, ಒಂಟಿ ತಾಯಂದಿರು ಮತ್ತು ಸಮುದಾಯದಿಂದ ಯಾವುದೇ ಬೆಂಬಲವಿಲ್ಲದ ಅನಕ್ಷರಸ್ತ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಿದ ಈ ಯೋಜನೆಯು ಮೊದಲ ಹಂತವಾಗಿ, ಮೈರಾಡಾ'(MYRADA) ಎಂಬ NGO ಸಹಾಯದೊಂದಿಗೆ ವಿಧವೆಯರು ಮತ್ತು ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನ ಗುರುತಿಸಿತು. ಸಾಮಾಜಿಕ ಪಿಡುಗುಗಳಿಂದ ಇವರು ತಮ್ಮ ಮನೆಗಳಿಗೆ ಸೀಮಿತರಾಗಿದ್ದರು, ಮತ್ತು ಹೊರಗೆ ಹೋಗಿ ಪ್ರಗತಿಗಾಗಿ ಅವಕಾಶಗಳನ್ನು ಹುಡುಕಲು ಇವರಿಗೆ ಅನುಮತಿಯಿರದ ಕಾರಣ ಜೀವನೋಪಾಯಕ್ಕಾಗಿ ಹೊಲಗಳಲ್ಲಿ ಅಥವಾ ಬೇರೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಸಂಘಟಿತವಾಗಿ ಕೆಲಸ ಮಾಡಲು ಮತ್ತು ತಮ್ಮ ಹಳ್ಳಿಗಳಿಂದ ಹೊರಗೆ ಹೋಗಲು ಹಿಂಜರಿಯುತ್ತಿದ್ದ ಮಹಿಳೆಯರಿಗೆ ‘ಟೈಟಾನ್ ಮೈರಾಡಾ ಸ್ವಯಂಸೇವಕರೊಂದಿಗೆ ಅವರ ಹಳ್ಳಿಗಳಿಗೆ ತೆರಳಿ ಈ ಮಹಿಳೆಯರ ಕುಟುಂಬ ಸದಸ್ಯರಿಗೆ ಮತ್ತು ಸಂಬಂಧಿಕರಿಗೆ ಸಲಹೆ ನೀಡಿ, ಅವರನ್ನು ಟೈಟಾನ್ ಕಾರ್ಖಾನೆಗೆ ಕರೆದೊಯ್ದು ಕೆಲಸದ ವಾತಾವರಣವನ್ನು ವಿವರಿಸಿದರು. ಎಲ್ಲಾ ಆರಂಭಿಕ ಖರ್ಚು ಮತ್ತು ವಾಸ್ತವ್ಯವನ್ನು ನೋಡಿಕೊಳ್ಳುವ ಭರವಸೆ ಕಂಪನಿ ಮಹಿಳಾ ಉದ್ಯೋಗಿಗಳಿಗೆ ನೀಡಲಾಯಿತು. ಮತ್ತು ಅವರ ಜೀವನಶೈಲಿಯನ್ನು ಬದಲಾಯಿಸುವ ಬದ್ಧತೆಯನ್ನು ರ್ನಿವಹಿಸಿತು.
ಆದರೆ ಈ ಮಹಿಳೆಯರು ದೂರದ ಹಳ್ಳಿಗಳಿಂದ ಬಂದಿದ್ದರಿಂದ, ಅವರಿಗೆ ಆಭರಣ ತಯಾರಿಕೆಯ ಬಗ್ಗೆ ಸ್ವಲ್ಪವೂ ಜ್ಞಾನವಿರಲಿಲ್ಲ ಮತ್ತು ಅವರಿಗೆ ತರಬೇತಿ ನೀಡುವುದು ತುಂಬಾ ಕಷ್ಟಕರವಾಗಿತ್ತು. ಉದ್ಯೋಗವನ್ನು ಅರ್ಥಮಾಡಿಕೊಳ್ಳುವುದು, ಕೈ ಕೌಶಲ್ಯ ಮತ್ತು ಭಾಷೆಯ ಜ್ಞಾನವು ತರಬೇತಿಗೆ ಅಡ್ಡಿಯಾಗಿತ್ತು. ತರಬೇತಿಯು ಒಂದು ಹಂತದ ಕಾರ್ಯತಂತ್ರವನ್ನು ಒಳಗೊಂಡಿದ್ದು, ವಿಶೇಷವಾದ ಕರಿಗಾರಿಗಳನ್ನು ಒಂದು ವರ್ಷ ಪೂರ್ತಿ ಮೆಡೋದಲ್ಲಿ MEADOW ಇರಿಸಿ, ತಯಾರಿಕೆಯ ಎಲ್ಲಾ ಅಂಶಗಳಲ್ಲಿ ವ್ಯಾಪಕವಾದ ತರಬೇತಿಯನ್ನು ನೀಡಲಾಯಿತು. ಅವರಿಗೆ ಮೂಲಭೂತ ಫಿಲ್ಲಿಂಗ್ ಕೆಲಸದಿಂದ ಪ್ರಾರಂಭಿಸಿ, ನಿಧಾನವಾಗಿ ತಾಂತ್ರಿಕ ತರಬೇತಿಯನ್ನು ನೀಡಲಾಯಿತು. ಕಡಿಮೆ ಬೆಲೆಯ 9kt ಆಭರಣಗಳಿಂದ ಪ್ರಾರಂಭಿಸಿ, ನಂತರ ಕಡಿಮೆ ಬೆಲೆಯ ಕಲ್ಲುಗಳಿಂದ 14kt ಆಭರಣಗಳು ಮತ್ತು ಅಂತಿಮವಾಗಿ ವಜ್ರದ 18kt ಆಭರಣಗಳನ್ನು ತಯಾರಿಸುವ ಮೂಲಕ ದುಬಾರಿ ಮತ್ತು ಸೂಕ್ಷ್ಮವಾದ ವಸ್ತುಗಳೊಂದಿಗೆ ಕೆಲಸ ಮಾಡುವ ವಿಶ್ವಾಸವನ್ನು ಪಡೆದರು. ಒಂದು ಕಾಲದ ಈ ಅನಕ್ಷರಸ್ತ ಮಹಿಳೆಯರು ಇಂದು ವ್ಯಾಕ್ಸಿಂಗ್‌ನಿಂದ ಹಿಡಿದು ಒಟ್ಟು ಆಭರಣ ತಯಾರಿಕೆಯವರೆಗಿನ ಎಲ್ಲಾ ಆಭರಣ ಕಾರ್ಯಾಚರಣೆಗಳನ್ನು ಮಾಡುತ್ತಾರೆ. ಈಗ ಅವರ ಉತ್ಪನ್ನಗಳು ಯಾವುದೇ ಇತರ ಪ್ರಮುಖ ಮಾರಾಟಗಾರರ ಗುಣಮಟ್ಟಕ್ಕೆ ಹೊಂದಿಕೆಯಾಗುವ ಮಟ್ಟಕ್ಕೆ ತಲುಪಿದ್ದಾರೆ. ಮೆಡೋವ್‌ನ (MEADOW) ಅತ್ಯುತ್ತಮ ಮಾರಾಟಗಾರ ಪ್ರಶಸ್ತಿಯು ಈ ಸತ್ಯಕ್ಕೆ ಸಾಕ್ಷಿಯಾಗಿದೆ.
ಸಮಾಜದಿಂದ ಹಿಂದೆ ಸರಿದಿದ್ದ ಮಹಿಳೆಯರಿಗೆ ಕಳೆದುಹೋದ ತಮ್ಮ ಆತ್ಮಸ್ಥೈರ್ಯವನ್ನು ಪುನಃ ಕಂಡುಕೊಳ್ಳಲು ಮತ್ತು ಧೈರ್ಯವನ್ನು ತುಂಬಲು ಸಹಾಯ ಮಾಡಿದ ಹೆಮ್ಮೆ ಮತ್ತು ಗೌರವಕ್ಕೆ ಟೈಟಾನ್ ಪಾತ್ರವಾಗಿದೆ. ‘ಕೇವಲ ನಾಲ್ಕು ಮಹಿಳೆಯರೊಂದಿಗೆ ಪ್ರಾರಂಭವಾದ ಮೆಡೋವು 200 ಕ್ಕೂ ಹೆಚ್ಚು ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆಯರನ್ನು ಬೆಳೆಸಿದೆ. 200 ಕುಟುಂಬಗಳು ತಮ್ಮ ಮಾಸಿಕ ಆದಾಯವನ್ನು ದಿನಕ್ಕೆ 15ರೂ ರಿಂದ ತಿಂಗಳಿಗೆ 7,000 ರೂ ಕ್ಕೆ ಹೆಚ್ಚಿಸಿವೆ. ಇಂದು ಮಹಿಳೆಯರೇ ನಡೆಸುತ್ತಿರುವ ಮೆಡೋ ಎಂಬ ತಮ್ಮದೇ ಆದ ಸಂಸ್ಥೆಯು ಸ್ವ-ಸಹಾಯ ಗುಂಪುಗಳಾಗಿ ಕೆಲಸ ಮಾಡುತ್ತಾ ಮತ್ತು ಲಾಭ ಹಂಚಿಕೆ ಮತ್ತು ಹೆಚ್ಚಿನ ಹೂಡಿಕೆ ಸೇರಿದಂತೆ ತಮ್ಮ ಸಂಸ್ಥೆಗೆ ಸಂಬಂಧಿಸಿದ ನಿರ್ಧಾರಗಳನ್ನು ಅವರೇ ರಚಿಸಿದ ಬೋರ್ಡ್ ತೆಗೆದುಕೊಳ್ಳುತ್ತದೆ. ಈ ಬೋರ್ಡ್ ಎಂಟು ನಿರ್ದೇಶಕ ಸದಸ್ಯರು, ನಾಲ್ಕು ಕಾರ್ಯಾಚರಣೆ ವ್ಯವಸ್ಥಾಪಕರು ಮತ್ತು ಉದ್ಯೋಗಿಗಳನ್ನು ಒಳಗೊಂಡಿದೆ. ಪ್ರಸ್ತುತ, 200 ಮಹಿಳೆಯರು ಮೆಡೋದಲ್ಲಿ ಕೆಲಸ ಮಾಡುತ್ತಿದ್ದಾರೆ, ಆಭರಣ ತಯಾರಿಕೆಯ ಎಲ್ಲಾ ಚಟುವಟಿಕೆಗಳಾದ, ವ್ಯಾಕ್ಸಿಂಗ್, ವ್ಯಾಕ್ಸ್ ಸೆಟ್ಟಿಂಗ್, ಸ್ಟೋನ್ ವಿಂಗಡಣೆ ಮತ್ತು ಬ್ಯಾಗಿಂಗ್, ಬೆಂಚ್ ವರ್ಕ್, ಸ್ಟೋನ್ ಸೆಟ್ಟಿಂಗ್ ಮತ್ತು ಪಾಲಿಶಿಂಗ್, ಜೊತೆಗೆ ಎಲ್ಲಾ ವ್ಯವಸ್ಥಿತ ಅಮದು ಮತ್ತು ರವಾನೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಉತ್ಪಾದನೆ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ, ಅನುಗುಣವಾದ ಪಾವತಿಯನ್ನು ಸಂಸ್ಥೆಗೆ ನೀಡಲಾಗುತ್ತದೆ, ಹೀಗಾಗಿ ಅವರಿಗೆ ನಿಯಮಿತ ಆದಾಯವನ್ನು ಖಾತ್ರಿಪಡಿಸುತ್ತದೆ. ಅವರು ಎಲ್ಲಾ ಸರ್ಕಾರಿ ನಿಯಮಗಳು ಮತ್ತು ಶಾಸನಬದ್ಧ ಅವಶ್ಯಕತೆಗಳಿಗೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಇದು ಮಹಿಳೆಯರಿಗೆ ತಮ್ಮ ಸಮುದಾಯ ಮತ್ತು ಗ್ರಾಮದ ಉನ್ನತಿಗೆ ಪ್ರಮುಖ ಕೊಡುಗೆ ನೀಡಲು ಅವಕಾಶ ಮಾಡಿಕೊಟ್ಟಿದೆ, ಅವರ ಕುಟುಂಬಕ್ಕೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುತ್ತದೆ.ಹೆಚ್ಚುವರಿಯಾಗಿ, ಟೈಟಾನ್ ಜ್ಯುವೆಲ್ಲರಿ ವಿಭಾಗವು ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಉಚಿತ ವೈದ್ಯಕೀಯ ಶಿಬಿರಗಳು, ಕಣ್ಣಿನ ತಪಾಸಣೆ ಶಿಬಿರಗಳು ಮತ್ತು ಕುಟುಂಬ ಕೂಟಗಳಂತಹ ನಿಯಮಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಿಳೆಯರಿಗೆ ತಮ್ಮ ಭಾಷಾ ಕೌಶಲ್ಯ ಮತ್ತು ಸಂವಹನದಲ್ಲಿ ಪರಿಣಾಮಕಾರಿತ್ವವನ್ನು ಸುಧಾರಿಸಲು ಹಿಂದಿ ಮತ್ತು ಇಂಗ್ಲಿಷ್ ತರಗತಿಗಳನ್ನು ಆಯೋಜಿಸಲಾಗಿದೆ.
ಟೈಟಾನ್ ಸಮಾಜಕ್ಕೆ ಸೇವೆ ಸಲ್ಲಿಸುವದರಲ್ಲಿ ಮಾದರಿಯಾಗಿದೆ. ನವೆಂಬರ್ 2012 ರ ಹೊತ್ತಿಗೆ, MEADOW ತಂಡದ ಮೂಲಕ 213 ಕೋಟಿ ಮೌಲ್ಯದ ಉತ್ಪಾದನೆಯನ್ನು ಪೂರ್ಣಗೊಳಿಸಲಾಗಿದೆ, ಇದರ ಪರಿಣಾಮವಾಗಿ 400 ಲಕ್ಷ ವೆಚ್ಚ ಉಳಿತಾಯವಾಗಿದೆ. ಚಿನ್ನದ ನಷ್ಟವನ್ನು 3 ಪ್ರತಿಶತದಿಂದ 2 ಪ್ರತಿಶತಕ್ಕೆ ಇಳಿಸಲಾಗಿದೆ, ಇದರೊಂದಿಗೆ ಆಭರಣ ತಯಾರಿಕೆಯಲ್ಲಿ ಮೆಡೋವು ಎಲ್ಲಾ ಪರಿಸರ ಮತ್ತು ಶಾಸನಬದ್ಧ ಮಾನದಂಡಗಳನ್ನು ಅನುಸರಿಸುತ್ತಿದೆ. ಅವರು ತಮ್ಮ ಪ್ರಕ್ರಿಯೆಯಲ್ಲಿ ಯಾವುದೇ ಅಪಾಯಕಾರಿ ರಾಸಾಯನಿಕಗಳನ್ನು ಬಳಸದೆ, ತ್ಯಾಜ್ಯ ವಿಲೇವಾರಿಯನ್ನು ನಿಯಂತ್ರಿತ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಮಾಡುತ್ತಾರೆ; 2015 ರ ವೇಳೆಗೆ ಇದರ ಪ್ರಯೋಜನವನ್ನು ಜಿಲ್ಲೆಯ 500 ಕುಟುಂಬಗಳಿಗೆ ವಿಸ್ತರಿಸಲಾಯಿತು.
ಪ್ರಯಾಣ ಇಲ್ಲಿಗೆ ಮುಗಿಯುವುದಿಲ್ಲ. ಉತ್ತಮ ಮಾರ್ಗ ದೊಂದಿಗೆ ಸುಧಾರಣೆ ಟೈಟಾನ್‌ನ ನಿರಂತರ ಧ್ಯೇಯವಾಗಿದೆ. ಈ ಮಾದರಿಯನ್ನು ಇತರ ಕರಿಗಾರ ಪಾರ್ಕ್‌ಗಳಿಗೆ ಹೇಗೆ ವಿಸ್ತರಿಸಬಹುದು ಎಂಬುದರ ಕುರಿತು ಈಗಾಗಲೇ ಅಧ್ಯಯನಗಳು ಪ್ರಾರಂಭವಾಗಿವೆ. ಮತ್ತೊಂದು ಪ್ರಮುಖ ಹಂತವೆಂದರೆ MEADOW ನವೀಕರಿಸಬಹುದಾದ ಶಕ್ತಿಯೊಂದಿಗೆ ಸಜ್ಜುಗೊಳಿಸುವುದು, ಸೊಲರ್ ಮತ್ತು ವಿಂಡ್ ಎನರ್ಜಿಯ ಮೇಲೆ ಅವಲಂಬನೆಯನ್ನು ಹೆಚ್ಚಿಸುವುದು. ಸಂಕ್ಷಿಪ್ತವಾಗಿ ಹೇಳುವುದಾದರೆ, MEADOW ಯೋಜನೆಯು ಮಹಿಳೆಯರಿಗೆ ಹೊಲಗಳಿಂದ ಹೊರಬರಲು ಮತ್ತು ವಿಶ್ವ ದರ್ಜೆಯ ಆಭರಣಗಳನ್ನು ಉತ್ಪಾದಿಸಲು ಆಭರಣ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳಲು ಸಹಾಯ ಮಾಡಿದೆ. ಒಂದು ಕಂಪನಿ ಅಥವಾ ಸಂಸ್ಥೆಯ ಪರೋಪಕಾರಿ ಆಕಾಂಕ್ಷೆಗಳನ್ನು ಕೇವಲ ದೇಣಿಗೆಗಳ ಮೂಲಕ ಸಾಧಿಸುವುದಕ್ಕಿಂತ ಹೆಚ್ಚಾಗಿ ಕಾರ್ಯಾಚರಣೆಯ ಉದ್ದಕ್ಕೂ ಸಾಧಿಸಬಹುದು ಎಂದು ಮೆಡೋದ ಅನುಭವಗಳು ಸಾಬೀತುಪಡಿಸಿವೆ. MEADOW ಕೃಷ್ಣಗಿರಿಯ ನೂರಾರು ಜನರ ಜೀವನವನ್ನು ಮಾತ್ರವಲ್ಲದೆ, ಸಮುದಾಯ ಸೇವೆಯನ್ನು ಕಾರ್ಪೊರೇಟ್‌ಗಳು ನೋಡುವ ರೀತಿಯನ್ನೂ ಮಾರ್ಪಡಿಸಿದೆ.
ಕೃಪೆ: Project Meadow- Titan company http://xxxcheckmatexxx.blogspot.com/2013/09/project-meadow-titan-company.html?m=1
ಪೆನಜ ವಿ. ರೆಡ್ಡಿ
ಸ್ನಾತಕೋತರ ವಿದ್ಯಾರ್ಥಿ
ಮಂಗಳೂರು ವಿಶ್ವವಿದ್ಯಾಲಯ