ಜಗತ್ತಿನಾದ್ಯಂತ ಸಹಕಾರ ಚಳುವಳಿಯ ಬೆಳವಣಿಗೆ.

ಸಹಕಾರ ಚಳುವಳಿ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸುಧಾರಣೆಯೊಂದಿಗೆ ಪರಿಸರ ಮತ್ತು ರಾಜಕೀಯ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡಿದೆ. ಸಹಕಾರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಖ್ಯ ಭೂಮಿಕೆಯನ್ನು ನಿಭಾಯಿಸಿದೆ. ಸಹಕಾರಿ ಸಂಸ್ಥೆಗಳು ಜನಕೇಂದ್ರಿತವಾದವು. ಬಂಡವಾಳ ಕೇಂದ್ರಿತವಲ್ಲ, ಸಹಕಾರ ಕ್ಷೇತ್ರವು ಬಂಡವಾಳವನ್ನು ಶಾಶ್ವತಗೊಳಿಸುವಲ್ಲಿ ಅಥವಾ ತ್ವರಿತಗೊಳಿಸುವಲ್ಲಿ ಆಸಕ್ತಿ ವಹಿಸುವುದಿಲ್ಲ ಬದಲಾಗಿ ಸಂಪತ್ತನ್ನು ಹೆಚ್ಚು ನ್ಯಾಯಯುತ ರೀತಿಯಲ್ಲಿ ವಿತರಿಸುವ ಕ್ರಮ (ವನ್ನು)ಸಹಕಾರವು ಆರಂಭದಿಂದಲೂ ವಹಿಸಿದೆ. ಹಾಗೆಯೇ ಹೆಚ್ಚು ಪ್ರಜಾಸತ್ತಾತ್ಮಕ, ಸ್ಥಳೀಯವಾಗಿ ಸ್ವಾಯತ್ತ ಮತ್ತು ಸ್ವ-ಸಹಾಯ ಅಭ್ಯಾಸಗಳು ಸಹಕಾರಿ ಸಂಸ್ಥೆಗಳ ಮೂಲ ಅಂಶಗಳಾಗಿವೆ. ಬಡತನ ನಿರ್ಮೂಲನೆ, ಉದ್ಯೋಗ ಮತ್ತು ಆದಾಯ ಉತ್ಪಾದನೆ, ಸಾಮಾಜಿಕ ಒಳಗೊಳ್ಳುವಿಕೆ ಸಹಕಾರ ಚಳುವಳಿಯ ಪ್ರಮುಖ ಉದ್ದೇಶಗಳಾಗಿವೆ.

ಆರಂಭಿಕ ಸಹಕಾರ ಸಂಘವನ್ನು ನೇಕಾರರು ಮತ್ತು ಗುಡಿ ಕೈಗಾರಿಕೆಯ ಕೆಲಸಗಾರರು ಪ್ರಾರಂಭಿಸಿದರು’. ಸಹಕಾರಿಯ ಆರಂಭಿಕ ದಾಖಲಾತಿಗಳ ಆಧಾರದಲ್ಲಿ ಮಾರ್ಚ್ 14, 1761 ಸ್ಕಾಟ್ಲೆಂಡ್ನ ಫೆನ್ವಿಕ್ ನಲ್ಲಿ ಫೆನ್ವಿಕ್ ವೀವರ್ಸ್ ಸೊಸೈಟಿಯನ್ನು ಸ್ಥಾಪಿಸಿದರು.
ನಂತರದಲ್ಲಿ 1844 ( ಪರಿವರ್ತನೆಯ ಅವಧಿಯಲ್ಲಿ ನವೀಕರಿಸಿದ ಕೈಗಾರಿಕಾ ಕ್ರಾಂತಿ) ‘ರೋಚ್ಡೇಲ್’ ಪಟ್ಟಣದ ಹತ್ತಿ ಗಿರಣಿಗಳಲ್ಲಿ ಕೆಲಸ ಮಾಡುವ 28 ಕುಶಲಕರ್ಮಿಗಳ ಗುಂಪು ‘ಉತ್ತರ ಭಾಗದ ಇಂಗ್ಲೆಂಡ್ನಲ್ಲಿ’ ಮೊದಲ ಆಧುನಿಕ ಸಹಕಾರಿ ವ್ಯಾಪಾರವಾಗಿ ‘ಈಕ್ವಿಟಬಲ್ ಪಯೋನಿಯರ್ಸ್ ಸೊಸೈಟಿಯನ್ನು’ ಸ್ಥಾಪಿಸಿತು. ಅಂದು ನೇಕಾರರು ಕಡಿಮೆ ವೇತನ, ಮತ್ತು ಅವರು ಹೆಚ್ಚಿನ ಬೆಲೆಗಳ ಆಹಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪಡೆಯಲು ಸಾಧ್ಯವಾಗದಂತ ಶೋಚನೀಯ ಕೆಲಸದ ಪರಿಸ್ಥಿತಿಗಳನ್ನು ಎದುರಿಸಿದರು. ತಮ್ಮ ವಿರಳ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ ಮತ್ತು ಒಟ್ಟಿಗೆ ಕೆಲಸ ಮಾಡುವ ಮೂಲಕ ಮೂಲ ಸರಕುಗಳನ್ನು ಕಡಿಮೆ ಬೆಲೆಗೆ ಪಡೆಯಬಹುದೆಂದು ಊಹಿಸಿದರು. ಆರಂಭದಲ್ಲಿ, ಮಾರಾಟಕ್ಕೆ ಕೇವಲ ನಾಲ್ಕು ವಸ್ತುಗಳು ಇದ್ದವು: ಹಿಟ್ಟು, ಓಟ್ಮೀಲ್, ಸಕ್ಕರೆ ಮತ್ತು ಬೆಣ್ಣೆ.

ನಿಜವಾದ ಸಹಕಾರ ಚಳುವಳಿಯು ಆರಂಭವಾಗಿದ್ದು ಉತ್ತರ ಇಂಗ್ಲೆಂಡ್ನಲ್ಲಿ ಪ್ರವರ್ತಕರು ಸಹಕಾರಿ ಗ್ರಾಹಕ ಅಂಗಡಿಯನ್ನು ಸ್ಥಾಪಿಸುವುದರೊಂದಿಗೆ. ಇದು ಮೊದಲನೆ ಸಹಕಾರಿ ಗ್ರಾಹಕ ಚಳುವಳಿ ಎಂದು ಕರೆಯಲ್ಪಟ್ಟಿದೆ. ಆದ್ದರಿಂದ ನಿಜವಾದ ಸಹಕಾರ ಚಳುವಳಿಯ ಹೆಮ್ಮೆ ರೋಚ್ಡೇಲ್ ಈಕ್ವಿಟೇಬಲ್ಗೆ ಸಲ್ಲಬೇಕು. ರೋಚ್ಡೇಲ್ ಪಯೋನಿಯರ್ಗಳು ಉತ್ತರ ಇಂಗ್ಲೆಂಡ್ನಲ್ಲಿ ಸ್ಥಾಪಿಸಿದ ಮಾದರಿ ಆಧುನಿಕ ಕೋಅಪರೇಟಿವ್ ಸೊಸೈಟಿಯಿಂದಾಗಿ ಅವರನ್ನು ಜಗತ್ತಿನ ಸಹಕಾರ ಕ್ಷೇತ್ರದ ಪೀತಾಮಹರು ಎಂದು ಕರೆಯುತ್ತಾರೆ. ಇದು ಸಹಕಾರ ಕ್ಷೇತ್ರದ ಪ್ರಥಮ ಗ್ರಾಹಕ ಸಹಕಾರ ಸಂಸ್ಥೆಯಾಗಿರುತ್ತದೆ.

ರೋಚ್ಡೇಲ್ ಪಯೋನಿಯರ್ಸ್ಗಳ ವಾರ್ಷಿಕ ನಡಾವಳಿಗಳ ನಿಯಮ ಮತ್ತು ನಡತೆ ಸಂಹಿತೆಗಳು:

1. ಬಂಡವಾಳವು ಅವರದೇ ಸ್ವಂತದಾಗಿರಬೇಕು.
2. ಸದಸ್ಯರಿಗೆ ಶುದ್ದ ಆಹಾರ ಸಾಮಾಗ್ರಿ ಮತ್ತು ದಾಸ್ತಾನು ಮಾಡಬಹುದಾದ ಸಾಮಾಗ್ರಿ ಸರಬರಾಜು
ಮಾಡಬೇಕು.
3. ಪೂರ್ಣ ತೂಕ ಮತ್ತು ಅಳತೆಗಳನ್ನು ನೀಡಬೇಕು.
4. ಮಾರುಕಟ್ಟೆ ಬೆಲೆಯನ್ನೇ ವಿಧಿಸಬೇಕು
5. ಖದೀದಿಗೆ ಅನುಗುಣವಾಗಿ ಲಾಭಂಶದ ವಿಂಗಡನೆ.
6. ‘ಒಬ್ಬ ಸದಸ್ಯ ಒಂದು ಮತ’ ಎಂಬ ತತ್ವ.
7. ಅಧಿಕಾರಿಗಳು ಮತ್ತು ಸಮಿತಿಗಳು ಸಹಕಾರಿ ಸಂಘವು ನಿರ್ವಹಿಸಬೇಕು.
8. ಶಿಕ್ಷಣದ ಉದ್ದೇಶಕ್ಕಾಗಿ ಲಾಭಂಶದ ವಿನಿಯೋಗ.
9. ಸದಸ್ಯರಿಗೆ ಸಹಕಾರ ಸಂಘದ ಆರ್ಥಿಕ ತಖ್ತೆಗಳನ್ನು ನೀಡಬೇಕು.’

ಈ ಮೂಲಅಂಶದೊಂದಿಗೆ ಸದಸ್ಯರು ವಿವಿಧ ಮೌಲ್ಯಗಳಾದ ಪ್ರಾಮಾಣಿಕತೆ, ಮುಕ್ತತೆ, ಸಾಮಾಜಿಕ ಜವಾಬ್ದಾರಿ ಮತ್ತು ಇತರರ ಬಗೆಗಿನ ಕಾಳಜಿ ಹೊಂದಿರಬೇಕು. ಮತ್ತು ಪ್ರಮುಖ ಮೌಲ್ಯಗಳಾದ ಸ್ವ-ಸಹಾಯ, ಸ್ವ-ಜವಾಬ್ದಾರಿ, ಪ್ರಜಾಪ್ರಭುತ್ವ, ಸಮಾನತೆ, ಸಮಾನತೆ ಮತ್ತು ಐಕತ್ಯೆ, ಒಗ್ಗಟ್ಟಿನ ಬಗ್ಗೆ ನಂಬಿಕೆ ಹೊಂದಿರಬೇಕು.

ವಿಶ್ವಸಂಸ್ಥೆಯ ಆಚರಣೆ

1992 ರಲ್ಲಿ, ಇಂಟರ್ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್ (ICA) ಮತ್ತು ಸಹಕಾರಿ ಸದಸ್ಯರ ಪ್ರಚಾರ ಮತ್ತು ಪ್ರಗತಿ ಸಮಿತಿ (COPAC), ಮತ್ತು ವಿಶ್ವಸಂಸ್ಥೆಯ 16 ಡಿಸೆಂಬರ್ 1992 ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಸಂಖ್ಯೆ: resoultion 47/90 ರಂತೆ ಜುಲೈ ತಿಂಗಳ ಮೊದಲ ಶನಿವಾರವನ್ನು ಅಂತರಾಷ್ಟ್ರೀಯ ಸಹಕಾರಿ ದಿನವೆಂದು ಘೋಷಿಸಿತು . ಕಾಕತಾಳೀಯ ಎಂಬಂತೆ 1923ರಿಂದ ಇಂಟರ್ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್ (ICA) ಅದೇ ದಿನವನ್ನು ಸಹಕಾರಿ ದಿನವಾಗಿ ಆಚರಿಸಿಕೊಂಡು ಬರುತ್ತಿದೆ.

ವಿಶ್ವಸಂಸ್ಥೆಯಲ್ಲಿ ಜಾಗತಿಕ ಸಮುದಾಯವು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಸಹಕಾರಿಗಳ ದಿನ ಮತ್ತು ICA ಯ ಅಂತರರಾಷ್ಟ್ರೀಯ ಸಹಕಾರ ದಿನವನ್ನು ಜುಲೈ ತಿಂಗಳ ಮೊದಲ ಶನಿವಾರದಂದು ಆಚರಿಸುತ್ತದೆ . ಈ ದಿನದ ಆಚರಣೆಗಳನ್ನು ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ವಿಶ್ವದಾದ್ಯಂತ ಸ್ಥಳೀಯ ಮಟ್ಟದಲ್ಲಿ ನಡೆಸಲಾಗುತ್ತದೆ.

ಸಹಕಾರ ತತ್ವಗಳು ಸ್ವಯಂಪ್ರೇರಿತ ಮತ್ತು ಮುಕ್ತ ಸದಸ್ಯತ್ವ, ಪ್ರಜಾಪ್ರಭುತ್ವ ಸದಸ್ಯ ನಿಯಂತ್ರಣ, ಸದಸ್ಯ ಆರ್ಥಿಕ ಭಾಗವಹಿಸುವಿಕೆ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ, ಶಿಕ್ಷಣ, ತರಬೇತಿ ಮತ್ತು ಮಾಹಿತಿ, ಸಹಕಾರ ಸಂಸ್ಥೆಗಳ ನಡುವೆ ಸಹಕಾರ ಮತ್ತು ಸಮುದಾಯದ ಕಾಳಜಿಯನ್ನು ಆಧರಿಸಿವೆ.

 

2018 ರ ದ್ಯೇಯ ವಾಕ್ಯ (ಥೀಮ್): ಸಹಕಾರದ ಮೂಲಕ ಸುಸ್ಥಿರ ಸಮಾಜಗಳು.
ಪ್ರಪಂಚದಾದ್ಯಂತದ ಸಹಕಾರಿಗಳ ಸದಸ್ಯರು ಅಂತರಾಷ್ಟ್ರೀಯ ಸಹಕಾರಿ ದಿನವನ್ನು 7 ಜುಲೈ 2018 ರಂದು ಆಚರಿಸುತ್ತಾರೆ. ಸುಸ್ಥಿರ ಸಮಾಜದ ಘೋಷಣೆಯ ಮೂಲಕ ಸಹಕಾರಿ ಸಂಸ್ಥೆಗಳು ತಮ್ಮ ಮೂಲದಲ್ಲಿ ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ, ಸಮುದಾಯದ ಕಾಳಜಿಯನ್ನು ಏಳನೆ ಮಾರ್ಗದರ್ಶಿ ತತ್ವವಾಗಿ ಪರಿಗಣಿಸಿದ್ದಾರೆ.
ಸಹಕಾರ ಸಂಘಗಳು ಮೂರು ಪಾತ್ರವನ್ನು ವಹಿಸುತ್ತವೆ:

ಎ. ಉದ್ಯೋಗ ಅವಕಾಶ ಈ ಮೂಲಕ ಜೀವನೋಪಾಯ ಮತ್ತು ಆದಾಯ ಗಳಿಕೆ.
ಬಿ. ಜನ-ಕೇಂದ್ರಿತ ಉದ್ಯಮಗಳ ಮೂಲಕ ಸಾಮಾಜಿಕ ಸಮಾನತೆ ಮತ್ತು ನ್ಯಾಯ.
ಸಿ. ಸ್ಥಳೀಯ ಸಮುದಾಯಗಳಲ್ಲಿ ಪ್ರಮುಖ ಪಾತ್ರ ವಹಿಸುವುದು.

2019 ರ ಅಂತರರಾಷ್ಟ್ರೀಯ ಸಹಕಾರ ದಿನವನ್ನು 6 ಜುಲೈ 2019 ರಂದು ಆಚರಿಸಲಾಗುತ್ತದೆ. ಇದು 25 ನೇ ವಿಶ್ವಸಂಸ್ಥೆಯ ಸಹಕಾರಿಗಳ ಅಂತರರಾಷ್ಟ್ರೀಯ ದಿನ ಮತ್ತು 96 ನೇ ಅಂತರಾಷ್ಟ್ರೀಯ ಸಹಕಾರಿ ದಿನವಾಗಿರುತ್ತದೆ.
ಅಂತರಾಷ್ಟ್ರೀಯ ಸಹಕಾರ ದಿನಾಚರಣೆ ಇದು ಸಹಕಾರ ಕ್ಷೇತ್ರದ ವಾರ್ಷಿಕ ಸಂಭ್ರಮವಾಗಿದ್ದು 1923ರಿಂದ ಇಂಟರ್ನ್ಯಾಷನಲ್ ಕೋಆಪರೇಟಿವ್ ಅಲೈಯನ್ಸ್ (ICA) ಮತ್ತು 1995ರಿಂದ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಜುಲೈ ತಿಂಗಳ ಮೊದಲ ಶನಿವಾರದಂದು ಆಚರಿಸಲ್ಪಡುತ್ತಿದೆ. ಸಹಕಾರಿ ಸದಸ್ಯರ ಪ್ರಚಾರ ಮತ್ತು ಪ್ರಗತಿ ಸಮಿತಿ (COPAC),ಸಹಕಾರ ದಿನಾಚರಣೆಗೆ ದ್ಯೇಯ ವಾಕ್ಯವನ್ನು ನೀಡಿ ಸಹಕಾರ ಕ್ಷೇತ್ರವು ಜನ ಕೇಂದ್ರಿತವಾಗಿ ಸುಸ್ಥಿರ ಮತ್ತು ಸ್ವಾವಲಂಬಿಯಾಗಿ ಬೆಳೆದು ಸಮಥಱ ನಾಯಕತ್ವ ಗುಣವನ್ನು ಬೆಳೆಸುವಂತೆ ಮಾಡುತ್ತಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಸಹಕಾರಿ ಸಂಸ್ಥೆಗಳು.
ILO ಸಹ ಸಹಕಾರಿಗಳ ಮೂಲಕ ಜಾಗತಿಕವಾಗಿ ಮಹಿಳೆಯರು ಮತ್ತು ಪುರುಷರ ಕೆಲಸದ ಸ್ಥಿತಿಯನ್ನು ಸುಧಾರಿಸಲು ಕೆಲಸ ಮಾಡುವ ಪ್ರಮುಖ ಸಂಸ್ಥೆಯಾಗಿದೆ. ಮತ್ತು ಇದು ಕಾರ್ಮಿಕ ಹಕ್ಕುಗಳ ತತ್ವವನ್ನು ಉತ್ತೇಜಿಸಿ, ಸಂಘಟಿತ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುವ ಮೂಲಕ ಯೋಗ್ಯ ಉದ್ಯೋಗ ಮತ್ತು ಆದಾಯ, ಸಾಮಾಜಿಕ ರಕ್ಷಣೆಯನ್ನು ಸಾಮಾಜಿಕವಾಗಿ ಹೊರತುಪಡಿಸಿದ ಸೇವೆಗಳ ಮೂಲಕ ಒದಗಿಸುತ್ತದೆ, ಸಾಮಾಜಿಕ ಸಂವಾದವನ್ನು ಬಲಪಡಿಸುತ್ತದೆ, ತಾಂತ್ರಿಕ ಸಹಕಾರ, ಸಹಕಾರಿಗಳ ಮೌಲ್ಯಗಳು ಮತ್ತು ತತ್ವಗಳನ್ನು ಸಾರ್ವಜನಿಕ ಅರಿವನ್ನು ಉತ್ತೇಜಿಸುವುದು.

ವಿವಿಧ ದೇಶಗಳಲ್ಲಿ ಸಹಕಾರ ಚಳುವಳಿಗಳು.

ಈ ಕೆಳಗಿನ ವಿವಿಧ ಅವಧಿಯಲ್ಲಿ ನಾವು ಜಾಗತಿಕ ಸಹಕಾರ ಚಳುವಳಿಗಳನ್ನು ಕಾಣಬಹುದು.

1. ಗ್ರೇಟ್ ಬ್ರಿಟನ್: ಗ್ರೇಟ್ ಬ್ರಿಟನ್ನಲ್ಲಿ, ರಾಬರ್ಟ್ ಓವನ್ (1771-1858) ಸ್ವಯಂ ನಿಯಂತ್ರಕ ಅರೆ-ಕೃಷಿ, ಅರೆ-ಕೈಗಾರಿಕಾ ಸಮುದಾಯಗಳನ್ನು ಸ್ಥಾಪಿಸಿದರು ಮತ್ತು ಡಾ. ವಿಲಿಯಂ ಕಿಂಗ್ (1757-1865) ಓವೆನ್ನ ಸಿದ್ಧಾಂತವನ್ನು(Owen doctraines) ಹರಡಲು ಸಹಾಯ ಮಾಡಿದರು; ಅವರ ಆಲೋಚನೆಗಳು ಹೆಚ್ಚು ಸಮಂಜಸವಾದವು, ಓವನ್ಗಿಂತ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸಿದೆ.

2. ಭಾರತ: ಭಾರತದಲ್ಲಿ ಸಹಕಾರ ಆಂದೋಲನವು ಇಪ್ಪತ್ತನೇಯ ಶತಮಾನದ ಆರಂಭದಲ್ಲಿ ಪ್ರಾರಂಭವಾಗಿದೆ ನಂತರ ಇದು ಇತರ ಏಷ್ಯನ್ ಮತ್ತು ಆಫ್ರಿಕನ್ ದೇಶಗಳಿಗೆ ಹರಡಿತು. ಇದು ಬಂಡವಾಳಶಾಹಿ ರಾಷ್ಟ್ರಗಳಾದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಕೆನಡಾ, ಇಸ್ರೇಲ್ ಮತ್ತು ಆಸ್ಟ್ರೇಲಿಯಾದಲ್ಲಿ ಕೂಡ ಹರಡಿತು .

3. ಜರ್ಮನಿ: ರಾಬರ್ಟ್ ಓವನ್ (1771-1858), “ಸಿದ್ಧಾಂತ ಸಂದರ್ಭಗಳು” (doctrines of circumstances) ಬೆಲ್ಲೆಸ್ನ ಕಾರ್ಮಿಕರೊಂದಿಗೆ ಆಧುನಿಕ ಸಹಕಾರ ಚಳುವಳಿ ಸ್ಥಾಪಕ ಎಂದು ಪರಿಗಣಿಸಲಾಗಿದೆ. ವಿಲಿಯಂ ಕಿಂಗ್ (1786-1865) ಸಹಕಾರಿ ಸಿದ್ಧಾಂತವನ್ನು ನಿರ್ಮಿಸುವಲ್ಲಿ ಬಹಳಷ್ಟು ಸಹಾಯ ಮಾಡಿದ ಇನ್ನೊಬ್ಬ ಪ್ರವರ್ತಕ; ಸಹಕಾರಿ ಸಿದ್ಧಾಂತವನ್ನು ಜನಪ್ರಿಯಗೊಳಿಸಲು ಅವರು ಸಹಕಾರ ಶಿಕ್ಷಣವನ್ನು ಪಸರಿಸಲು “ಸಹಕಾರ” ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದರು .

ಜರ್ಮನಿಯು ಸಹಕಾರಿ ಕೃಷಿ ಸಾಲ ಚಳುವಳಿಯ ಜನ್ಮಸ್ಥಳವಾಗಿದೆ. ಜರ್ಮನಿ ಭಾರತದಲ್ಲಿನ ಸಹಕಾರ ಚಳುವಳಿಗೆ ಸ್ಫೂರ್ತಿ. ಹೆರ್ ಎಫ್.ಡಬ್ಲ್ಯೂ ರೈಫಿಸೆನ್ ಮತ್ತು ಹೆರ್ ಫ್ರಾಂಜ್ ಶುಲ್ಜ್, ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯ ಮಾಡಿದರು ಮತ್ತು ಪರಿಹಾರದ ವಿವಿಧ ವಿಧಾನಗಳೊಂದಿಗೆ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿದರು. 1850 ರಲ್ಲಿ, ಶುಲ್ಜ್ ತನ್ನ ಮೊದಲ ಕ್ರೆಡಿಟ್ ಸೊಸೈಟಿಯನ್ನು ಅದರ ಸದಸ್ಯರಿಗೆ ಸಾಲ ನೀಡಲು ಹಣವನ್ನು ಸಂಗ್ರಹಿಸಲು ಸ್ಥಾಪಿಸಿದರು.

4. ಐರ್ಲೆಂಡ್: ಸಹಕಾರಿ ಚಳುವಳಿಯ ಮುಖ್ಯ ಫಲಾನುಭವಿಗಳು ಐರ್ಲೆಂಡ್ ರೈತರು

5. ಇಸ್ರೇಲ್: 1908ರ ಜೋರ್ಡಾನ್ನ ದಗಾನಿಯಾದಲ್ಲಿ ಮೊದಲ ಕೃಷಿ ಸಾಮೂಹಿಕ ವಸಾಹತು ಕಣಿವೆಯು ಮುಖ್ಯ ಸಹಕಾರ ಚಳುವಳಿಯಾಗಿದೆ.

6. ಇಟಲಿ: ಲುಯಿಗಿ ಲುಜ್ಜಾಟಿ ಮತ್ತು ಡಾ. ಲಿಯೋನ್ ವೊಲೆಂಬರ್ಗ್ 1880 ರ ಸಹಕಾರಿ ಚಳುವಳಿಯ ಪ್ರವರ್ತಕರು. ಈ ಚಳುವಳಿ ಬಡ ಜನರ ಪರಿಸ್ಥಿತಿಗಳನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸಿತು.

7. ಸ್ವೀಡನ್: 1870 ರ ಸಮಯದಲ್ಲಿ, ಸಹಕಾರಿ ಚಳುವಳಿ ಸ್ವೀಡನ್ನ ಕೈಗಾರಿಕೆ ವಲಯದ ಕಡೆಗೆ ಗಮನ ಹರಿಸಿದರು.

8. ಕೆನಡಾ: 1861 ರಲ್ಲಿ, ಕಲ್ಲಿದ್ದಲು ಗಣಿಗಾರರು ನೊವಾಸ್ಕೋಟಿಯಾದಲ್ಲಿ ಸಹಕಾರ ಮಳಿಗೆಯನ್ನು ಪ್ರಾರಂಭಿಸಿದರು, ಸರ್ಕಾರಕ್ಕೆ ಬೆಂಬಲವಾಗಿ 1911, ಸಾಸ್ಕಾಚೆವಾನ್ ಎಲಿವೇಟರ್ ಕಂ ಕೃಷಿ ರೈತರಿಗೆ ಗೋಧಿ ಮಂಡಳಿ ಸ್ಥಾಪಿಸಿದರು.

9. ಡೆನ್ಮಾರ್ಕ್: 1850 ರಲ್ಲಿ ಕ್ರೆಡಿಟ್ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಕಾನೂನಿನ ಮೂಲಕ ಕ್ರೆಡಿಟ್ ಸಂಘಗಳನ್ನು ಪ್ರಾರಂಭಿಸಲಾಯಿತು.

10. ರಷ್ಯಾ: 1864 ರ ಸಮಯದಲ್ಲಿ ರಷ್ಯಾದಲ್ಲಿ ಮೊದಲ ಪ್ರಯತ್ನಗಳನ್ನು ಸಹಕಾರಿ ಅಂಗಡಿಗಳು ಮತ್ತು ಸಾಲ ಸಂಘಗಳನ್ನು ಸಂಘಟಿಸುವ ಮೂಲಕ ಮಾಡಲಾಯಿತು.

11. ಜಪಾನ್: 1879 ರಲ್ಲಿ, ಹೆಚ್ಚುತ್ತಿರುವ ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಹಕಾರ ಚಳುವಳಿಯ ರೂಪದಲ್ಲಿ ಗ್ರಾಹಕರ ಸಹಕಾರ ಸಂಘಗಳು ಸ್ಥಾಪಿಸಲಾಯಿತು.

12. ಚೀನಾ : ಕ್ಷಾಮಗಳು, ಪ್ರವಾಹಗಳು, ಪರಸ್ಪರ ಜಗಳಗಳು ಮತ್ತು ಜಪಾನೀಸ್ ಯುದ್ಧವು ಚೀನಾದಲ್ಲಿ ಸಹಕಾರ ಚಳುವಳಿಯನ್ನು ಪ್ರಾರಂಭಿಸಲು ಪ್ರಮುಖವಾದ ಕಾರಣಗಳಾಗಿವೆ. 1912 ರಲ್ಲಿ, ಚೀನೀ ರಿಪಬ್ಲಿಕ್ ಸಂಸ್ಥಾಪಕ, ಡಾ. ಸನ್ ಯೆಟ್ ಸೇನ್, ಚೀನಾ ಸಹಕಾರಿ ಚಳುವಳಿಯ ಪ್ರವರ್ತಕ.

19 ನೇ ಶತಮಾನದಲ್ಲಿ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಇಂಗ್ಲೆಂಡ್ನಲ್ಲಿ ಆರಂಭಗೊಂಡ ಸಹಕಾರ ಚಳುವಳಿಯು ನಂತರದಲ್ಲಿ ಜಗತ್ತಿನಾದ್ಯಂತ ಹರಡಿಕೊಂಡಿತು. ಅಲ್ಲಿಂದ ಪ್ರಪಂಚದ ಎಲ್ಲಾ ಭಾಗಗಳಿಗೆ ಹರಡಿತು ಆದರೆ ಚಳವಳಿಯ ಉದ್ದೇಶಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂದರ್ಭಕ್ಕೆ ಅನುಸಾರವಾಗಿ ಭಿನ್ನವಾಗಿರುತ್ತದೆ. ಸಹಕಾರ ಕ್ಷೇತ್ರವು ಎಲ್ಲಾ ಕ್ಷೇತ್ರಗಳಾದ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳನ್ನು ಆವರಿಸಿದ್ದು, ಸದಸ್ಯರಿಗೆ ಸಂಬಂಳ, ಉದ್ಯೋಗ, ಉತ್ಪಾದಕತೆ, ಮಾರುಕಟ್ಟೆ ಸೌಲಭ್ಯವನ್ನು ನೀಡಿದೆ. ಸಹಕಾರ ಕ್ಷೇತ್ರವು ವಿಭಿನ್ನ ಕಲ್ಪನೆಗಳನ್ನು ಸಾಕಾರಗೊಳಿಸಿದೆ ಅವುಗಳೆಂದರೆ ಗ್ರಾಹಕ ಸಹಕಾರ ಸಂಘ(ಆಹಾರ ಮತ್ತು ಇತರ ಉತ್ಪಾದನೆಗಳು), ಗ್ರಾಹ ನಿರ್ಮಾಣ ಸಹಕಾರ ಸಂಘ(ವಸತಿ), ಕಾರ್ಮಿಕರ ಸಹಕಾರ ಸಂಘ(ಯೋಗ್ಯ ಕೆಲಸ), ಕ್ರೆಡಿಟ್ ಸಹಕಾರ ಸಂಘ(ಉಳಿತಾಯ ಮತ್ತು ಸಾಲ), ಕೃಷಿ ಸಹಕಾರ ಸಂಘಗಳು (ಕೃಷಿ ಉತ್ಪನ್ನ, ಬೆಲೆ ನಿಗದಿ ಮತ್ತು ಮಾರುಕಟ್ಟೆ) ಇತ್ಯಾದಿ. ಇಂದಿನ ಸಹಕಾರ ವ್ಯವಸ್ಥೆಯು ಸರ್ವಸ್ಫರ್ಶಿಯಾಗಿ ಎಲ್ಲಾ ಕ್ಷೇತ್ರಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿದೆ.

ಪೆನಜ ವಿ. ರೆಡ್ಡಿ

ಸ್ನಾತಕೋತರ ವಿದ್ಯಾರ್ಥಿ

ಮಂಗಳೂರು ವಿಶ್ವವಿದ್ಯಾಲಯ

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More