ಯಾವುದೇ ಕೆಲಸದ ಯಶಸ್ಸಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಗುಣಗಳು ಮುಖ್ಯ. ನಮ್ಮ ವೈಯಕ್ತಿಕ ಗುಣಗಳು ಸಹೋದ್ಯೋಗಿಗಳೊಂದಿಗೆ ನಾವು ಹೇಗೆ ನ ಡೆದುಕೊಳ್ಳುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ರಚನಾತ್ಮಕ ಟೀಕೆಗಳನ್ನು ಒಪ್ಪಿಕೊಳ್ಳುವುದರಿಂದ ನಮ್ಮ ಕೆಲಸದ ಕಾರ್ಯಕ್ಷಮತೆ ಸುಧಾರಿಸಲು ಸಹಾಯವಾಗುತ್ತದೆ.
ಧನಾತ್ಮಕ ವರ್ತನೆ, ಸಮಯಪ್ರಜ್ಞೆ, ಪ್ರಾಮಾಣಿಕತೆ, ಸೌಜನ್ಯ, ಉತ್ತಮ ಗೋಚರತೆ ಇತ್ಯಾದಿ, ಮಾನವ ಜೀವನದ ಮೇಲಿನ ದೃಷ್ಟಿಕೋನಗಳಾಗಿವೆ. ಇದು ಇತರೊಂದಿಗೆ, ಇತರ ಸನ್ನಿವೇಶಗಳ ಬಗ್ಗೆ ನಾವು ಹೇಗೆ ಭಾವಿಸುತ್ತೇವೆ ಎಂಬುದು ತಿಳಿಯುತ್ತದೆ. ಸಕಾರಾತ್ಮಕ ಮನೋಭಾವ ಹೊಂದಿರುವ ಜನರು ಇತರ ಜನರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ ಮತ್ತು ಆನಂದಿಸುತ್ತಾರೆ: ಅವರ ಆಲೋಚನೆಗಳನ್ನು ಹಂಚಿಕೊಳ್ಳುವುದು ಮತ್ತು ಅವರು ಸಾಮಾನ್ಯವಾಗಿ ಹರ್ಷಚಿತ್ತದಿಂದ ಮತ್ತು ಸ್ನೇಹಪರರಾಗಿರುತ್ತಾರೆ. ಮತ್ತು ಇತರರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ‘ಸ್ವಾಭಿಮಾನ ಎಂದರೆ ನಮ್ಮಲ್ಲಿ ಆತ್ಮವಿಶ್ವಾಸ ಮತ್ತು ತೃಪ್ತಿಯನ್ನು ಹೊಂದುವುದು’.
ಉದ್ಯೋಗದಲ್ಲಿ ಅಗತ್ಯವಿರುವ ವೈಯಕ್ತಿಕ ಗುಣಗಳನ್ನು, ಕೆಲಸದಲ್ಲಿ ಯಶಸ್ವಿಯಾಗಲು ಉದ್ಯೋಗಿಗಳು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಉದ್ಯೋಗದಾತರು ನಿರೀಕ್ಷಿಸುತ್ತಾರೆ.
ಸಮಯಪಾಲನೆ: ಒಬ್ಬ ವ್ಯಕ್ತಿಯು ಗೈರುಹಾಜರಾದಾಗ, ಅದು ಇತರರಿಗೆ ಹೆಚ್ಚುವರಿ ಕೆಲಸವನ್ನು ಉಂಟುಮಾಡುತ್ತದೆ. ಕಳಪೆ ಹಾಜರಾತಿ ಕೆಲಸದ ಅನುಭವ ಮತ್ತು ಅಪೇಕ್ಷಿತ ಫಲಿತಾಂಶವನ್ನು ಕಡಿಮೆ ಮಾಡುತ್ತದೆ. ವೈಯಕ್ತಿಕ ಅಗತ್ಯಗಳಿಗಾಗಿ ಕೆಲಸದ ಸಮಯದ ಹೊರಗೆ ನಿರ್ವಹಿಸುವದು ಉತ್ತಮ. ನಿರಂತರವಾಗಿ ಕೆಲಸಕ್ಕೆ ತಡವಾಗಿ ಬರುವುದು ಉದ್ಯೋಗದಾತರನ್ನು ಉದ್ಯೋಗಿಗಳು ಕೆರಳಿಸುವ ಅಭ್ಯಾಸಗಳಲ್ಲಿ ಒಂದಾಗಿದೆ. ಈ ಆಲಸ್ಯವು “ಐ ಡೋಂಟ್ ಕೇರ್!” ವರ್ತನೆಯನ್ನು ಸೂಚಿಸುತ್ತದೆ.
ಕಾರ್ಯಕ್ಷಮತೆ: ಉದ್ಯೋಗದಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಹೆಚ್ಚು ಉತ್ಪಾದಕವಾಗುತ್ತದೆ. ಅಥವಾ ಒಬ್ಬ ಉದ್ಯೋಗಿ ಸ್ವ-ಜವಾಬ್ದಾರಿಂದ ವ್ಯವಹಾರ ನಿರ್ವಹಣೆ ಮತ್ತು ನಿರ್ಧಾರಗಳಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಇಚ್ಛೆಯನ್ನು ಹೊಂದಲು ನಿರೀಕ್ಷಿಸಲಾಗಿದೆ . ಉದ್ಯೋಗದಾತರು ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮುಂದಿಡಲು ನಿರೀಕ್ಷಿಸುತ್ತಾರೆ. ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ನಿಮ್ಮ ಕೆಲಸದ ಗುರಿಗಳಲ್ಲಿ ಒಂದಾಗಿರಬೇಕು.
ಸಾಂಸ್ಥಿಕ ಸಾಮರ್ಥ್ಯ: ನಿಮ್ಮ ಸಮಯ ಮತ್ತು ಕೆಲಸದ ಕಾರ್ಯಯೋಜನೆಗಳನ್ನು ಸಂಘಟಿಸುವ ಸಾಮರ್ಥ್ಯ ಮತ್ತೊಂದು ಪ್ರಮುಖ ಕೌಶಲ್ಯ. ನಿಮ್ಮ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ.”ಕಠಿಣ ಶ್ರಮದಿಂದ ಕೆಲಸ ಮಾಡುವದಕ್ಕಿಂತ, ಚುರುಕಾಗಿ ಕೆಲಸ ಮಾಡಿ!”
ಸಹಕಾರ: ನಿಮ್ಮ ಕೆಲಸದಲ್ಲಿ ಪರಿಣಾಮಕಾರಿಯಾಗಿರಲು, ನಿರ್ವಹಣೆ ಮತ್ತು ಸಹೋದ್ಯೋಗಿಗಳೊಂದಿಗೆ ನೀವು ಹೊಂದಿಕೊಂಡು ಹೋಗುವುದು ಮುಖ್ಯ. ಇದರಿಂದಾಗಿ ಜನರೊಂದಿಗೆ ಸಾಮಾಜಿಕತೆ, ಸಂವಹನ ಸುಲಭವಾಗುತ್ತದೆ. ಇಂದಿನ ಉದ್ಯೋಗಿಗಳಲ್ಲಿ ತಂಡದ ಭಾಗವಾಗಿ ಟೀಮ್‌ವರ್ಕ್ ಕೌಶಲ್ಯಗಳು ಬಹಳ ಮುಖ್ಯ.
ಸಹಯೋಗ: ಜನರು ಒಟ್ಟಿಗೆ ಕೆಲಸ ಮಾಡುವಾಗ ಪ್ರತ್ಯೇಕವಾಗಿ ಮಾಡುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಾರೆ. ನೀವು ಕೆಲಸದ ಬಗ್ಗೆ ಖಚಿತಪಡಿಸಿಕೊಳ್ಳುವಲ್ಲಿ ನಿರ್ವಹಣೆಯ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಅನೇಕ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವವುದು ಕಮ್ಮಿ ಆದ್ದರಿಂದ ನಿಯೋಜಿಸಲಾಗುತ್ತದೆ.
ಬದಲಾವಣೆಯ ಪ್ರತಿರೋಧವನ್ನು ಮೀರುವುದು (Overcoming the resistance to change): ಉದ್ಯೋಗಿಗಳು ಹೊಸದೆನಿಸುವ ಸಂಸ್ಥೆಯ ಬೆಳವಣಿಗೆಗೆ ಅಗತ್ಯವಾದ ಚಿಂತನಾ ಪ್ರಕ್ರಿಯೆ (thought process), ಕಾರ್ಯ ವಿಧಾನಗಳನ್ನು ಅಥವಾ ಲಭ್ಯ ಸೌಲಭ್ಯಗಳನ್ನು ಉದ್ಯೋಗದಲ್ಲಿ ಅಳವಡಿಸಿಕೊಳ್ಳಲು ಮಾನಸಿಕವಾಗಿ ಬಯಸದಿದ್ದಾಗ ಅದು ಉದ್ಯೋಗಿ ಮತ್ತು ಸಂಸ್ಥೆಯ ಬೆಳವಣಿಗೆಯನ್ನು ತಡೆಗಟ್ಟಬಹುದು.
ಸೌಜನ್ಯತೆ: ಇತರ ಜನರ ಬಗ್ಗೆ ಕಾಳಜಿಯನ್ನು ತೋರಿಸುವುದು. ಸಭ್ಯ ಮತ್ತು ಪರಿಗಣನೆಯಿಂದ ಇರುವುದು.
ವೈಯಕ್ತಿಕ ನೋಟ: ನಿಮ್ಮ ನೋಟವು ನಿಮ್ಮ ಪ್ರತಿಬಿಂಬವಾಗಿದೆ. ಉತ್ತಮ ಉಡುಪು, ನೈದ ಕೂದಲು, ಸ್ವಚ್ಛ ಕೈಗಳು, ಸ್ವಚ್ಛ ಬಟ್ಟೆ, ಉತ್ತಮ ಆರೋಗ್ಯ ಮತ್ತು ಫಿಟ್ನೆಸ್: ಪೌಷ್ಟಿಕ ಮತ್ತು ಸಮತೋಲಿತಲನ ಆಹಾರ ಅಭ್ಯಾಸ, ಸರಿಯಾದ ನಿದ್ರೆ ಮತ್ತು ವಿಶ್ರಾಂತಿ. ದೈಹಿಕವಾಗಿ ಸಕ್ರಿಯರಾಗಿರುವುದು ಮತ್ತು ವ್ಯಾಯಾಮ ಮಾಡಿ ನಿಯಮಿತವಾಗಿರಬೇಕು.
ಕೆಲಸದ ಸ್ಥಳದಲ್ಲಿ ನೈತಿಕತೆ: ನೈತಿಕತೆಯು ಉತ್ತಮ ಮೌಲ್ಯಗಳ ಮಾರ್ಗದರ್ಶಿ ಗುಂಪಾಗಿದೆ. ಸುಳ್ಳು ಹೇಳುವುದು ಮೋಸ, ಮತ್ತು ಕಳ್ಳತನ, ಇವು ಅನೈತಿಕ ನಡವಳಿಕೆಯ ಉದಾಹರಣೆಗಳಾಗಿವೆ. ದೃಢವಾಗಿ ಜನರು ನೈತಿಕ ಮೌಲ್ಯಗಳನ್ನು ಅನುಸರಿಸಿ ಸಮಗ್ರತೆ ಇರುತ್ತದೆ. ನಿಮಗೆ ನಿಯೋಜಿಸಲಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದು ಮತ್ತು ಸಮಯ ವ್ಯರ್ಥ ಮಾಡದರಿವುದು. ಕೆಲಸದ ಮೇಲೆ ಉದ್ಯೋಗಿಗಳು ಆಸಕ್ತಿ ವಹಿಸದಿದ್ದರೆ ಅವರು ವಾಸ್ತವವಾಗಿ ಉದ್ಯೋಗದಾತರಿಗೆ ಮೋಸ ಮಾಡುವರೆಂದರ್ಥ. ಉದ್ಯೋಗದಾತರು ತಮ್ಮ ಉದ್ಯೋಗಿಗಳ ಸಂಬಳಕ್ಕ ತಕ್ಕ ಉತ್ಪಾದನೆಯನ್ನು ನಿರೀಕ್ಷಿಸುತ್ತಾರೆ.
ಗೌಪ್ಯತೆ: ಕೆಲವೊಮ್ಮೆ ಉದ್ಯೋಗದಲ್ಲಿರುವ ಉದ್ಯೋಗಿಗಳು ವ್ಯವಹಾರದ ಗುಟ್ಟುಗಳನ್ನು ಖಾಸಗಿಯಾಗಿ ಇರಿಸಬೇಕು. ಎಲ್ಲಾ ಮಾಹಿತಿಯು ಸಾರ್ವಜನಿಕವಾಗಬೇಕಾಗಿಲ್ಲ.
ನಿಷ್ಠೆ: ನಿಮ್ಮ ಸಹೋದ್ಯೋಗಿಗಳು ಮತ್ತು ನಿಮ್ಮ ಸಂಸ್ಥೆಗೆ ನಿಷ್ಠರಾಗಿರಿ.
ಟೀಕೆಗಳನ್ನು ಸ್ವೀಕರಿಸುವುದು: ರಚನಾತ್ಮಕ ಟೀಕೆಗಳನ್ನು ನೀಡುವುದು ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಉತ್ಪಾದಕತೆಯನ್ನು ಹೆಚ್ಚಿಸಲು ಅದನ್ನು ವಿಶ್ಲೇಷಿಸಲು ಮತ್ತು ಸುಧಾರಣೆಗೆ ದೌರ್ಬಲ್ಯಗಳನ್ನು ತಿಳಿಮಾಡಬೇಕು.
ಸಾರಾಂಶ ನಿಮ್ಮ ಉದ್ಯೋಗದಾತರ ನಿರೀಕ್ಷೆಗಳನ್ನು ಪೂರೈಸುವುದು ನಿಮಗೆ ಉದ್ಯೋಗದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಕಾರ್ಯಯೋಜನೆ ಯಶಸ್ಸನ್ನು ನಿರೀಕ್ಷಿಸಲು ಗುಣಲಕ್ಷಣಗಳನ್ನು ಸುಧಾರಿಸಬೇಕಾಗಿದೆ.
ಕೃಪೆ: Glance at the Progress Indian cooperative movement
What You Are – What Your Employer Expects. (https://www.souharda.coop/)
ಪೆನಜ ವಿ. ರೆಡ್ಡಿ
ಸ್ನಾತಕೋತರ ವಿದ್ಯಾರ್ಥಿ
ಮಂಗಳೂರು ವಿಶ್ವವಿದ್ಯಾಲಯ