ಪತ್ತಿನ  ಮತ್ತು  ವಿವಿದೋದ್ದೇಶ  ಸಹಕಾರ  ಸಂಘಗಳು   ಸಮರ್ಪಕ  ಬಂಡವಾಳ  ಹೊಂದುವ  ಅವಶ್ಯಕತೆಯ   ಪ್ರಾಮುಖ್ಯತೆ

ಪತ್ತಿನ  ಸಹಕಾರ ಸಂಘಗಳು  ಮತ್ತು   ವಿವಿದೋದ್ದೇಶ  ಸಹಕಾರ ಸಂಘಗಳು  ಸದಸ್ಯರಿಂದ  ಠೇವಣಿ  ಸಂಗ್ರಹಿಸುವುದು  ಮತ್ತು  ಸದಸ್ಯರಿಗೆ  ಸಾಲ ನೀಡುವ  ಮತ್ತು ಇತರೆಡೆ  ಹೂಡಿಕೆ ಮಾಡುವ   ಚಟುವಟಿಕೆಯಲ್ಲಿ  ಕೊಡಗಿನ ಕೊಂಡಿವೆ.  ಅಂದರೆ, ಇದೂ ಕೂಡ  ಸಂಘದೊಳಗಿನ  ಬ್ಯಾಂಕಿಂಗ್  ಚಟುವಟಿಕೆ. ಭ್ಯಾಂಕ್ ಗಳು  ರಿಸರ್ವ್ ಬ್ಯಾಂಕ್  ನಿಂದ  ಪರವನಾಗಿ ಪಡೆಯುವುದರಿಂದ  ಸಾರ್ವಜನಿಕರಿಂದ  ರೇವಣಿಸ್ವೀಕರಿಸಲು  ಮತ್ತು  ಸಾರ್ವಜನಿಕರಿಗೆ  ಸಾಲ  ನೀಡಲು   ಅರ್ಹತೆ   ಪಡೆದರುತ್ತವೆ.

ಪ್ರಾಥಮಿಕ  ಕೃಷಿ  ಪತ್ತಿನ  ಸಹಕಾರ  ಸಂಘಗಳು,  ಪ್ರಾಥಮಿಕ  ಸಹಕಾರ  ಕೃಷಿ ಮತ್ತು  ಗ್ರಾಮೀಣ  ಬ್ಯಾಂಕ್ ಗಳು, ಈ  ಚಟುವಟಿಕೆಯನ್ನು  ಸದಸ್ಯರೊಂದಿಗೆ  ಮಾತ್ರ  ನಡೆಸುತ್ತಿವೆ. ಈ ಸಂಸ್ಥೆಗಳಿಗೆ  ‘ನಬಾರ್ಡ್’  ‘ಸಮರ್ಪಕ  ಬಂಡವಾಳ ‘ಅಥವ  ‘ತೊಡಕು ತೂಕ  ಸಹಿತ  ಆಸ್ತಿಗೆ  ಬಂಡವಾಳದ  ಅನುಪಾತವನ್ನು  ನಿಗದಿ ಪಡಿಸಿದೆ. ಅದು  ಇಂಗ್ಲಿಷನಲ್ಲಿ ‘ಕ್ಯಾಪಿಟಲ್  ಟು  ರಿಸ್ಕ ವೈಟೆಡ್  ಅಸೆಟ್ ರೇಶಿಯೋ’ (ಸಿ. ಆರ್.ಎ.ಆರ್). ಅಲ್ಲದೆ  ಜಿ. ಕೇ . ಸ. ಬ್ಯಾಂಕ್, ರಾಜ್ಯ .ಸ. ಬ್ಯಾಂಕ್ ಗಳಿಗೂ  ನಿಗದಿ ಪಡಿಸಿದೆ.  ಇದು ಶೇ 9. ಹಾಗೂ ಶೇ 12 ರನ್ನು ಹೊಂದುವ  ನೀರಿಕ್ಷೆ ವ್ಯಕ್ತ ಪಡೆಸಲಾಗಿದೆ. ಇದು  ಸಂಸ್ಥೆಯ  ಆರ್ಥಿಕ  ಆರೋಗ್ಯದ  ಪರಿಸ್ಥಿತಿಯ  ಧ್ಯೋತಕವಾಗಿರುತ್ತದೆ.

ಇದರಿಂದ  ಸಂಸ್ಥೆಯು  ಮುಂದೆ  ಕಾಣಲಾರದ  ನಷ್ಟಗಳು ‘ತೊಡಕುಗಳು  ಬಂದಾಗ ಅದನ್ನು  ತಡೆದುಕೊಳ್ಳುವ  ಶಕ್ತಿಯನ್ನು  ಹೊಂದಿರುತ್ತದೆ. ಇದರಿಂದ  ಠೇವಣಿದಾರರ, ಸಾಲ ನೀಡುವವರ  ವಿಶ್ವಾಸಕ್ಕೆ ಪಾತ್ರರಾಗಬಹುದು. ಆದುದರಿಂದ  ಈ  ನೀತಿಯನ್ನು  ಪತ್ತಿನ  ಸಹಕಾರ ಸಂಘಗಳು  ಮತ್ತು ವಿವಿದೋದ್ದೇಶ  ಸಹಕಾರ  ಸಂಘಗಳು  ಅಳವಡಿಸಿಕೊಳ್ಳುವುದು  ತಮ್ಮ  ಉತ್ತಮ  ಕಾರ್ಯಾಚರಣೆ  ದೃಷ್ಟಿಯಿಂದ  ಅಗತ್ಯ. ಹಾಗಾದರೆ  ಸಮರ್ಪಕ  ಬಂಡವಾಳ  ಅಥವ ‘ಕ್ಯಾಪಿಟಲ್  ಅಡಿಕ್ವೆಸಿ ‘ಅಥವ  ಸಿ.ಆರ್.ಎ.ಆರ್. ಎಂದರೇನು? ಎಂಬ  ಪ್ರಶ್ನೆ  ಮೂಡುವುದು. ಸಹಜ. ಪ್ರಾ.ಕೃ.ಪ.ಸ.ಸಂ. ಗಳ, ಪ್ರಾ.ಸ. ಕ್ರ. ಮತ್ತು ಗ್ರಾ. ಅ. ಬ್ಯಾಂಕಗಳ  ಲೆಕ್ಕ  ಪರಿಶೋಧನ  ವರದಿಗಳಲ್ಲಿ  ಆಯ  ಆರ್ಥಿಕ  ವರ್ಷ  ದ  ಅಂತಿಮ  ಲೆಕ್ಕ  ಆಧರಿಸಿ. ಇದು  ಶೇ. ಎಷ್ಟಿದೆ  ಎಂದು  ನಮೂದಿಸಲಾಗುತ್ತದೆ.  ಅದರಂತೆ,  ಸಹಕಾರ ಬ್ಯಾಂಕ್ ಗಳ   ಲೆಕ್ಕ ಪರಿಶೋಧನಾವರದಿಗಳಲ್ಲಿ  ನಮೂದಿಸುವುದು  ಕಡ್ಡಾಯ  ವಾಗಿರುತ್ತದೆ.  ಆದುದರಿಂದ  ಇದರ  ಅರ್ಥ  ಅರಿಯುವುದು  ಅಷ್ಟೇ  ಮುಖ್ಯವಾಗಿರುತ್ತದೆ.

ಸಿ.ಆರ್.ಎ.ಆರ್. ನ  ವಿಸ್ತ್ರತ  ರೂಪ  ವಿವರಿಸುವಂತೆ, ಸಂಸ್ಥೆಯ  ಆಸ್ತಿ  ಜವಾಬ್ದಾರಿ  ತಖ್ತೆ ( ಅಡಾವೆ  ಪತ್ರಿಕೆ )  ಯಲ್ಲಿನ  ಅಂಕಿ  ಅಂಶಗಳ ಆಧಾರವಾಗಿ,  ಅದರ  ‘ ತೊಡಕು  ತೂಕ ಆಸ್ತಿಗೆ  ಬಂಡವಾಳದ   ಅನುಪಾತ ‘. ಇಲ್ಲಿ  ಬಳಸಿರುವ  ಪದ  ಪುಂಜಗಳ  ಅರ್ಥವನ್ನು   ತಿಳಿಯಬೇಕು. ‘ತೊಡಕು  ತೂಕ  ಆಸ್ತಿ ‘  ಎಂದರೇನು ?  (ರಿಸ್ಕ  ವೈಟೆಡ್  ಅಸೆಟ್).  ಸಂಸ್ಥೆಯು  ನಡೆಸುವ  ಪ್ರತಿ ವ್ಯವಹಾರವೂ  ತೊಡಕು (ರಿಸ್ಕ್) ನಿಂದ  ಕೂಡಿರುತ್ತದೆ.
‘ತೊಡಕು’  ಎಂದರೆ  ಸಂಭವನೀಯ  ನಷ್ಟ. ತೊಡಕಿಲ್ಲದೇ  ಯಾವುದೇ  ವ್ಯವಹಾರವನ್ನು  ಮಾಡಲಾಗುವುದಲ್ಲ. ತೊಡಕು ಅನಿವಾರ್ಯ.  ಆದರೆ  ಎಷ್ಟು  ತೊಡಕನ್ನು  ತೆಗೆದುಕೊಳ್ಳಲಾಗಿದೆ, ಎಂಬುದನ್ನು  ಆಧರಿಸಿ  ಆ  ಆಸ್ತಿ ಗೆ ‘ ತೊಡಕು  ತೂಕ’ ವನ್ನು  ಸೇರಿಸಲಾಗುತ್ತದೆ. (ರಿಸ್ಕ  ವೈಟ್). ಆಸ್ತಿಯ  ಆರೋಗ್ಯ  ಗುಣಮಟ್ಟದ್ದಾಗಿದ್ದರೆ  ಕಡಿಮೆ  ತೊಡುಕು ತೂಕವಿರುತ್ತದೆ.  ಆಸ್ತಿಯ  ಆರೋಗ್ಯ  ಕಳಪೆ ಮಟ್ಟದಲ್ಲಿದ್ದರೆ  ಆಸ್ತಿಯ  ತೊಡಕು ತೂಕ  ಅಧಿಕವಾಗಿರುತ್ತದೆ.  ಅದು  ಕಾರ್ಯನಿರತ ವಲ್ಲದ  ಆಸ್ತಿ (ಎನ್. ಪಿ. ಎ-  ನಾನ್  ಪರ್ರ್ಫಾಮಿಂಗ್ ಅಸೆಟ್) ಆದಷ್ಟು ತೂಕ  ಅಧಿಕ  ಗೊಳ್ಳುತ್ತದೆ. ಭಾರತೀಯ  ರಿಸರ್ವ್ ಬ್ಯಾಂಕ್  ತೊಡಕು ತೂಕದ ಬಗ್ಗೆ  ಪ್ರತಿ ವರ್ಷ  ನಿಗದಿಪಡಿಸಿ  ಸುತ್ತೋಲೆ  ಹೊರಡಿಸುತ್ತದೆ. ಲೇಖನದ  ಜೊತೆ   ಆ  ಕೋಷ್ಟಕವನ್ನು  ಒದಗಿಸಿದೆ. ಅದರಂತೆ  ತೊಡಕು  ತೂಕ  ಸೇರಿಸಿದಾಗ  ಆಸ್ತಿಯ  ಒಟ್ಟು ಮೊತ್ತ ಏರಿಕೆಯಾಗುತ್ತದೆ. ಇಲ್ಲಿ ‘ ಬಂಡವಾಳ ‘  ವೆಂದರೇನು? ‘ಬಂಡವಾಳ ‘  ವೆಂದರೆ  ‘ಸ್ವಂತ  ಬಂಡವಾಳ’  (ಓನ್  ಕ್ಯಾಪಿಟಲ್ ), ಇದು  ಸಂಸ್ಥೆಯ  ಪಾವತಿಯಾದ  ಷೇರು ಬಂಡವಾಳ  ಮತ್ತು  ಸ್ವಂತ  ನಿಧಿಗಳನ್ನು
ಒಳಗೊಳ್ಳುತ್ತದೆ.

ಇದಕ್ಕೆ  ಟಯರ್ – 1, ಬಂಡವಾಳ ಎನ್ನಲಾಗುತದೆ.  ಪಾವತಿಯಾದ  ಷೇರು ಬಂಡವಾಳ  ನಮ್ಮದೇ  ಆಗಿರುತ್ತದೆ. ನಿಧಿಗಳು  ನಮ್ಮ  ಲಾಭದಿಂದ  ಭವಿಷ್ಯಕ್ಕೆ  ತೆಗೆದಿರ ಸಲಾದ  ನಿಧಿಗಳು,ಅದು ಮೀಸಲು ನಿಧಿ (ಆಪದ್ಧನ ನಿಧಿ,  ರಿಸರ್ವ್ ಫಂಡ್)  ಆಗಿರುತ್ತದೆ.  ಇದರ ಮೇಲೆ  ಯಾವುದೇ  ಋುಣ ಭಾರ  ವಿರ ಬಾರದು.”ಆನ್ ಎನ್ ಕಂಬರ್ಡ್  ರಿಸರ್ವ ‘ಇದನ್ನು  ಮಾತ್ರ ‘ಸ್ವಂತ  ಬಂಡವಾಳ’ ಎಂದು ಪರಿಗಣಿಸಲಾಗುತ್ತದೆ.  ಇದರ  ಅನುಪಾತ (ರೇಶಿಯೋ) ವನ್ನು  ಈ  ಕೆಳಕಂಡ ಕೋಷ್ಟಕದಂತೆ  ಲೆಕ್ಕ  ಹಾಕಲಾಗುವುದು.

ಸಮರ್ಪಕ  ಬಂಡವಾಳ= ಸ್ವಂತ ಬಂಡವಾಳ  ×100 (ಸಿ.ಆರ್.ಎ. ಆರ್) ತೂಕ ಸಹಿತ  ಆಸ್ತಿಯ  ಒಟ್ಟು  ಮೊತ್ತ ಸ್ವಂತ.

ಬಂಡವಾಳ=  ಪಾವತಿಯಾದ ಷೇರು ಬಂಡವಾಳ+ ಋುಣ ಭಾರ  ರಹಿತ  ನಿಧಿಗಳು-  ಕ್ರೋಡಿ ಕೃತ  ನಷ್ಟಗಳು.

ಸಹಕಾರ  ಸಂಸ್ಥೆಗಳು  ಸಮರ್ಪಕ ಬಂಡವಾಳ ಹೊಂದಲು  ಅಳವಡಿಸ ಕೊಳ್ಳಬೇಕಾದ  ಅವಶ್ಯ  ತಂತ್ರಗಾರಿಕೆ:

ಇದು  ಕನಿಷ್ಟ  ಶೇ 9.  ಎಂದು ನೀರೀಕ್ಷಿಸಲಾಗಿದೆ. ಈ  ಸಮರ್ಪಕ ಬಂಡವಾಳ  ಹೊಂದ ಬೇಕಾದರೆ  ಸಂಘದ  ಜವಾಬ್ದಾರಿ  ಕಡೆಯಲ್ಲಿ ನ   ಸಂಗತಿಗಳು ,ಸಂಪನ್ಮೂಲ ಗಳೂ  ಆದ  ಪಾವತಿಯಾದ  ಷೇರು  ಬಂಡವಾಳವು ಅಧಿಕವಾಗಿರಬೇಕಾಗುತ್ತದೆ. ಇದರ  ಹೆಚ್ಚಳಕ್ಕಾಗಿ ಸಂಘವು ಅವಶ್ಯ ತಂತ್ರಗಾರಿಕೆಯನ್ನು ಅನುಸರಿಸಬೇಕಾಗುತ್ತದೆ. ಮೂಲವಾಗಿ  ಷೇರು ಬಂಡಾಳದ  ಮೊತ್ತ  ಕಡಿಮೆ ಇದ್ದಲ್ಲಿ  ಉಪನಿಯಮ ತಿದ್ದು ಪಡೆಯೊಂದಿಗೆ ಅದನ್ನು  ಅಧಿಕ ಗೊಳಿಸುವುದು, ಸದಸ್ಯತ್ವವನ್ನು  ಹೆಚ್ಚಿಸುವುದು.

ಸಾಲ  ವಿತರಿಸುವಲ್ಲಿ  ತಪ್ಪದೇ  ಹೆಚ್ಚು ವರಿ  ಷೇರು  ಸಂಗ್ರಹಿಸುವುದು.  ನಿಧಿಗಳ   ಸೃಷ್ಠಿಗೆ  ಪ್ರಾಧಾನ್ಯತೆ  ನೀಡಬೇಕು. ಕಾಯ್ದೆ ಪ್ರಕಾರ  ಶೇ 25 ಕ್ಕೆ  ಕಡಿಮೆ ಇಲ್ಲದಂತೆ  ಮೀಸಲು ನಿಧಿಗೆ  ಲಾಭದಲ್ಲಿ  ತೆಗೆದಿರಿಸುವುದು ಎಂದಿದೆ.  ಇದು  ಸರ್ವ ಸದಸ್ಯರ ಸಭೆ ಅಧಿಕಾರರವಾಗಿದ್ದು, ಆಡಳಿತ ಮಂಡಳಿ ಯೂ ಶೇ 25 ಕ್ಕಿಂತ  ಹೆಚ್ಚಿಗೆ  ಮೀಸಲು  ನಿಧಿ ಸೃಜಿಸಲು  ಅವಕಾಶ  ವಿದ್ದು ಸರ್ವಸದಸ್ಯರ  ಅನುಮೋದನೆಗೆ  ಮಂಡಿಸಲು  ಆಲೋಚಿಸಿ ಕ್ರಮ  ವಿಡುವುದು  ಸಂಸ್ಥೆಯ  ಆರ್ಥಿಕ ಆರೋಗ್ಯದಷ್ಟಿಯಿಂದ  ಅಗತ್ಯ . ಈ ಕ್ರಮ  ನಿಧಿಗಳ  ಮೇಲಿನ  ವೆಚ್ಚವನ್ನು. ಕಡಿಮೆ ಗೊಳಿಸುತ್ತದೆ.

‘ಆಡಳಿತ ಆಸ್ತಿಯ  ತೊಡಕು  ತೂಕ  ಸಹಿತ ಮೊತ್ತ   ಕಡಿಮೆಗೊಳಿಸಿಕೊಳ್ಳಬೇಕು. ಎಂದರೆ ಆಸ್ತಿಯ  ಆರೋಗ್ಯದ  ಗುಣಮಟ್ಟ  ಉತ್ತಮ  ವಾಗಿರಬೇಕು.  ಹೂಡಿಕೆಗಳು ಗಳಿಕೆ ತರುವಂತಹ,  ತರುತ್ತಿರುವ  ಹೂಡಿಕೆಗಳಾಗ  ಬೇಕು. ಸಾಲ ಮತ್ತು  ಮುಂಗಡಗಳ  ವಲಯವು  ಪತ್ತಿನ  ಸಹಕಾರ ಸಂಘಗಳ, ಪತ್ತಿನ  ವ್ಯವಹಾರ  ನಡೆಸುತ್ತಿರುವ  ವಿವಿದೋದ್ದೇಶ ಸಹಕಾರ  ಸಂಘಗಳ  ಪ್ರಮುಖ  ಆಸ್ತಿಯಾಗಿರುವುದರಿಂದ  ಇದರ ಆರೋಗ್ಯ ಅತಿ ಮುಖ್ಯ. ಎಂದರೆ  ಸಾಲದ ಸೂಲಾತಿಅತ್ಯುತ್ತಮ  ವಾಗಿರಬೇಕು.  ಕಾರ್ಯ ನಿರ್ವದಲ್ಲದ  ಆಸ್ತಿ (ಎನ್.ಪಿ.ಎ) ಅತಿ ಕಡಿಮೆ  ಇರಬೇಕು.  ಅದಕ್ಕೆ  ಅಗತ್ಯದಷ್ಟು  ಅಕಾಶವನ್ನು  ಕಲ್ಪಿಸಿರ ಬೇಕು.  ಈ  ಕ್ರಮಗಳಿಂದ  ಸಂಘವು  ಸಮರ್ಪಕ  ಬಂಡವಾಳ  ಹೊಂದಿ ಯಶಸ್ವಿ ಕಾರ್ಯಾಚರಣೆ  ಸಾಧ್ಯವಾಗುತ್ತದೆ.

ತೊಡಕು  ತೂಕ  ಆಸ್ತಿ  ಕೋಷ್ಟಕ.

(ಲೇಖನಕ್ಕೆ  ಆಧಾರ:  ನಬಾರ್ಡನ   ಸಾಮರ್ಥ್ಯ ಭಿವೃದ್ಧಿ  ಕಾರ್ಯಕ್ರಮಗಳ  ಅಧ್ಯಯನ  ಸಾಮಗ್ರಿ

ಶಶಿಧರ.ಎಲೆ

ಸಹಕಾರ ಸಂಘಗಳ ಅಪರ ನಿಬಂಧಕರು (ನಿವ್ರೃತ್ತ). Additional Registrar of co-operative societies (RTD).

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More