ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಸ್ಥೂಲವಾಗಿ 3 ವಿಂಗಡನೆ ಮಾಡಿದರೆ. ಒಂದು ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್, ಎರಡು ಪ್ರೈವೇಟ್ ಬ್ಯಾಂಕ್ಸ್ ಮತ್ತು ಮೂರನೇ ಕೂ ಆಪರೇಟಿವ್ ಬ್ಯಾಂಕ್ಸ್.
ಮೂರು ಬ್ಯಾಂಕ್ ವ್ಯವಸ್ಥೆ ಗಳು RBI ನ ಅತ್ಯಂತ ಉನ್ನತ ಮಟ್ಟದ , ವೈಜ್ಞಾನಿಕ , ಆಧುನಿಕ , ಪ್ರೊಫೆಷನಲ್ Regulations ಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಆಗುತ್ತಿರುವಾಗ ಲೂ., ಹಲವಾರು ಕಾರಣ ಗಳಿಂದಾಗಿ…. Inclination towards Liquidation , ದಿವಾಳಿ ಆಗುವ ದಿಕ್ಕಿನ ಕಡೆ ವಾ ಲುವ ಲಕ್ಷಣ ಗಳು ..ಗೋಚರಿಸು ವ ಸಂದರ್ಭದಲ್ಲಿ…. ಮೇಲಿನ 3 ಬ್ಯಾಂಕಿನ ವ್ಯವಸ್ಥೆ ಗಳಿಗೆ ಈ ಸಂದರ್ಭ ದಿಂದ ಮೇಲ ಕ್ಕೆ ಬರಲು ಇರುವ ವಿವಿಧ ಅವಕಾಶ ಗಳ ಮೇಲೆ ಸ್ವಲ್ಪ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಮೂಲ ಉದ್ದೇಶ….
ಪಬ್ಲಿಕ್ ಸೆಕ್ಟರ್ ಬ್ಯಾಂಕ್ ನ ಗಳ ಆಡಳಿತ ಮಂಡಳಿ ಯು ತಕ್ಷಣವೇ , ಈ ಲಕ್ಷಣ ದಿಂದ ಮೇಲೆ ಬರಲು ಬ್ಯಾಂಕ್ ಗೆ ಅವಶ್ಯಕ ವಿರುವ ಬಂಡವಾ ಳ ದ ಮೊತ್ತವನ್ನು ಅಂದಾಜು ಮಾಡಿ , ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯಕ್ಕೆ , ಸಮರ್ಪಕ ವಾಗಿ ಅರ್ಪಿಸುತ್ತದೆ…ತದ ನಂತರ RBI ಯೊಡನೆ ಚರ್ಚಿಸಿ . ಅ, ಪಬ್ಲಿಕ್ ಸೆಕ್ಟರ್ ಬ್ಯಾಂಕಿನ ಶೇರು ಗಳನ್ನು ಖರೀದಿಸಲು ಸರ್ಕಾರವು ಮುಂದಾಗುತ್ತದೆ….ನಿಮ್ಮ ಮಾಹಿತಿಗೆ ಕಳೆದ 6 ವರ್ಷಗಳಲ್ಲಿ , ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳ 3 ಲಕ್ಷ ಕೋಟಿ ರೂಪಾಯಿಗೆ ಮೀರಿ, ಶೇರು ಗಳನ್ನು ಇಂದಿನ ಕೇಂದ್ರ ಸರ್ಕಾರವು ಖರೀದಿ ಮಾಡಿ , ಬ್ಯಾಂಕು ಗಳ ಜೀವ ಉಳಿಸುವ ಪ್ರಯತ್ನ ಮಾಡಿದೆ.!!!???.
ಇದೇ ದಿವಾಳಿಯ ರೀತಿಯ ಲಕ್ಷಣ ಗಳು ಗೋಚರಿ ಸುತ್ತಿದ್ದಂತೆ ಏ , ಪ್ರೈವೇಟ್ ಸೆಕ್ಟರ್ ಬ್ಯಾಂಕ್ ಗಳು ಅತ್ಯಂತ ಮುಂಜಾಗೃತ ರಾಗಿ, ಅತ್ಯಂತ ವೃತ್ತಿಪರತೆ ಇಂದ, ದೇಶದ ಜನರ ಮುಂದೆ ಬಂದು, ( ತೊಂದರೆ ಇಂದ ಹೊರ ಬರಲು ಬೇಕಾದ ಮೊತ್ತಕ್ಕೆ ಬೇಕಿರುವ ಬಂಡವಾಳ ವನ್ನು ದೇಶದ ಜನರಿಗೆ ಶೇರು ಗಳನ್ನ ಕೊಟ್ಟು…ಬಂಡವಾಳ ವನ್ನೂ ಸಂಗ್ರಹಿಸಿ ಆಗಬಹುದಾದ ಸಮಸ್ಯೆ ಇಂದ ಪಾರಾ ಗುತ್ತವೆ……
ಆದರೆ ಸಹಕಾರಿ ಬ್ಯಾಂಕ್ ಗಳ ವಿಷಯಕ್ಕೆ ಬಂದರೆ . ಇದೇ ಮಾದರಿಯ ಸಮಸ್ಯೆ ಗಳ ಲಕ್ಷಣ ಗಳು ಗೋಚರಿಸುವ ಸಂದರ್ಭ ದಲ್ಲಿ ಸಹಕಾರಿ ಬ್ಯಾಂಕ್ ಗಳಿಗೆ ಯಾವ ದೇ ರೀತಿಯಿಂದಲೂ…ಬಂಡವಾಳ ಹೆಚ್ಚಿಸಿ ಕೊಳ್ಳುವ ಸಲೀಸಾದ ವ್ಯವಸ್ಥೆ ಇ ರುವುದಿಲ್ಲ. , ಹಾಗಾಗಿ, ಮೇಲಿನ 2 ಬ್ಯಾಂಕಿನ ವ್ಯವಸ್ಥೆ ಗಳ ಗಿಂತಲೂ ಕಡಿಮೆ ಮೊತ್ತದ , ಅವಶ್ಯಕ ಬಂಡ ವಾಳ ಇದ್ದಾಗ್ಯೂ…UCB ಗಳು ಸರತಿ ಯಂತೆ ದೇಶದಾದ್ಯಂತ , ದಿವಾಳಿ ಆಗುತ್ತಿರುವ ದಕ್ಕೆ ಮೂಲ ಕಾರಣ ವಾಗಿದೆ.. ಈ ಸಂದರ್ಭ ದಲ್ಲಿ, ನಾಡಿನ ಹಿರಿಯ ಸಹಕಾರಿ ಧುರೀಣ ರೆಲ್ಲರು ಒಂದಾಗಿ ಬಂದು ವಿಚಾರ ಮಾಡಿ , ಅವಶ್ಯಕ ವ್ಯವಸ್ಥೆ ಯನ್ನು ಚರ್ಚಿಸಿ, ನಿರ್ಣಯಿಸಿ…ನೂತನ ಕೇಂದ್ರ ಸಹಕಾರಿ ಸಚಿವಾಲಯ ದ ಗಮನಕ್ಕೆ ತರುವುದು ಅತ್ಯವಶ್ಯಕ ವಾಗಿದೆ.
ಶ್ರೀಧರ ನೀಲಕಂಠ ರಾವ್.
ಅದ್ಯಕ್ಷರು, ಬೆಂಗಳೂರು ಮಹಾನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿ ಗಳ ಒಕ್ಕೂಟ ನಿಯಮಿತ.