ಈ ಲೇಖನ ಬರೆಯಲು ಹಿನ್ನೆಲೆ,ತಮಗೆಲ್ಲರಿಗೂ (ಸಹಕಾರಿಗಳಿಗು) ಹಾಗೂ ಜನ ಸಾಮಾನ್ಯರೆಲ್ಲರಿಗು , ಜಗತ್ ಜಾಹೀರು ಆಗಿರುವ ವಿಷಯವೇನೆಂದರೆ, ಹೆಚ್ಚಿನ ಹಣವಂತರಿಗೆ ಮತ್ತು ಅಧಿಕಾರದ ಲ್ಲಿರುವ ವರಿಗೆ ಮಾತ್ರ ನ್ಯಾಯವು ತ್ವರಿತವಾಗಿ ಸಿಗಬಲ್ಲದು. ಇದು ವಾಸ್ಥವ ಹೊರತಾಗಿದೆ. ಮತ್ತೊಂದು, ನಮಗೆಲ್ಲರಿಗೂ ನಮ್ಮ ಹಿರಿಯರು ಹೇಳಿ ಹೋಗಿರುವ , ನಮ್ಮ ತಲೆಯಲ್ಲಿ ಕೂತಿರುವ ” ( Justice Delayed is Justice Denied ” ಹಳೆಯ ನಾನ್ನುಡಿ ” ಅತ್ಯಂತ ವಿಳಂಬವಾಗಿ ಕೊಟ್ಟ ನ್ಯಾಯವು , ನ್ಯಾಯವನ್ನು ಕೊಡದಂತೆಯೇ ” ) ಇದು ಕೂಡ ವಾಸ್ತವತೆಗೆ ಹೊರತಾಗಿದೆ. ಈಗ ನಮ್ಮ ನ್ಯಾಯಾಂಗ ವ್ಯವಸ್ಥೆಯ ಕೇಂದ್ರ ಮೂಲ ಸಿದ್ಧಾಂತಕ್ಕೆ ಬರೋಣ ಅಲ್ಲಿ ನ್ಯಾಯವನ್ನು ಕೇಳಿಕೊಂಡು ಬರುವ ಪ್ರತಿ ಅರ್ಜಿದಾರನಿಗೆ ( ಸಾಲ ಕೊಟ್ಟ ಸಹಕಾರಿ ಸಂಸ್ಥೆ ಅಥವ ಸುಸ್ತಿ ಆಗಿರುವ ಸಾಲ ಪಡೆದ ಸದಸ್ಯ ಆಗಿರಬಹುದು ) ತನ್ನ ವಾದವನ್ನು ಮಂಡಿಸಲು ” ಸಾಕಷ್ಟು ಸಮಯದ ಅವಕಾಶ ವನ್ನ ಕೊಡಬೇಕು” ಎಂಬ ಅನೇಕರ ಅಭಿಪ್ರಾಯ ನ್ಯಾಯಾಂಗದ ಮೂಲ ತತ್ವಕ್ಕೆ ದುರುಪಯೋಗವಾಗುತ್ತಿದೆ.
ಉದಾಹರಣೆಗೆ – ಸುಸ್ತಿದಾರನಿಗೆ , ಪ್ರಥಮವಾಗಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಧೀಶರು ಹೊರಡಿಸಿದ ಶೋ ಕಾಸ್ ನೊಟೀಸ್ ಸರ್ವ ಆಗಲು 6 ರಿಂದ 9 ತಿಂಗಳು ತೆಗೆದು ಕೊಂಡಿರುವುದು ಊರಲ್ಲೇ ಎಲ್ಲರ ಮುಂದೆ ಓಡಾಡಿ ಕೊಂಡಿರುವ ಸುಸ್ತಿ ದಾರನಿಗೆ ಕೋರ್ಟ್ ನಿಯೋಜಿಸಿದ ಅಧಿಕೃತ ವ್ಯಕ್ತಿ ಇಂದ ನೊಟೀಸ್ ತಲುಪಲು 6 ರಿಂದ 9 ತಿಂಗಳು ತೆಗೆದು ಕೊಳ್ಳುವುದು ನ್ಯಾಯವೇ?
ನಮ್ಮ ಅಭಿಪ್ರಾಯ, ನ್ಯಾಯಾಲಯವು ಕೊಡುವ ಅಂತಿಮ ತೀರ್ಪು ಆದ ನಂತರ ಮತ್ತಷ್ಟು ಸಮಯ ಅವಕಾಶ ಕೊಡುವುದರಲ್ಲಿ ಸಹಕಾರಿ ಸoಸ್ಥೆಗೆ ಅಭ್ಯಂತರವಿಲ್ಲ, ಅದು ನ್ಯಾಯ ಕೊಟ್ಟಂತೆ ಆಗುವುದು ಆದರೆ ಈ ವಿಳಂಬ ವ್ಯವಸ್ಥೆಯನ್ನೂ ಸರಿಪಡಿಸಿದರೆ ಸಹಕಾರಿ ಸoಸ್ಥೆಗಳಿಗೂ ಮತ್ತು ಸಾರ್ವಜನಿಕರಿಗೋ ನ್ಯಾಯಾಂಗ ದ ಮೇಲೆ ವಿಶ್ವಾಸ ಹೆಚ್ಚಾಗುವುದು.,
ಪರಿಹಾರ –
ನಮ್ಮ Refuse to Receive , ಅನ್ನುವ ವ್ಯವಸ್ಥೆ ಗೆ ಹೆಚ್ಚು ಬಲ ಕೊಡುವ ವ್ಯವಸ್ಥೆ ಆಗಬೇಕಿದೆ.
ಉ. ದಾ. – 1. ಕೋರ್ಟು ನಿಯೋಜಿತ ಅಧಿಕೃತ ವ್ಯಕ್ತಿ ಇಂದ ಮಾಡಿದ ಫೋನ್ ಕರೆಯನ್ನು , ಮಾತನಾಡಿದ ಮಾತುಗಳನ್ನು ದಾಖಲೆ ಎಂದೂ ಪರಿಗಣಿಸುವುದು.
2) ವಿಡಿಯೋ call: ಸ್ಥಳ ದಲ್ಲಿ ಮಾಡಿದ ವಿಡಿಯೋ ಕರೆ, ಮತ್ತು ಸ್ವಂತ ಹೆಂಡತಿ ಮಕ್ಕಳಿಗೆ ನೊಟೀಸ್ ಸರ್ವ ಮಾಡುವುದು. ಅಧಿಕೃತ ದಾಖಲೆ ಎಂದು ಪರಿಗಣಿಸಿ ,Refuse to Receive ಆಗಿ ಪರಿಗಣಿಸುವುದು.
ಹಾಗೂ ಸಹಕಾರಿ ಸoಸ್ಥೆ ಇಂದ ಸರ್ವ ಆಗಬೇಕಿರುವ ನೊಟೀಸ್ ಗು ಕೂಡ ಈ ಮೇಲಿನ ಮಾದರಿಯನ್ನು ಸುಸ್ತಿದಾರನಿಗೆ ತಲುಪಿದ ದಾಖಲೆ ಎಂದು ಪರಿಗಣಿಸಲೂ ಕೋರ್ಟ್ ಮಾನ್ಯ ಮಾಡುವುದು, ಸಹಕಾರಿ ಸoಸ್ಥೆಗೆ ಮತ್ತು ಸಹಕಾರಿ ಕ್ಷೇತ್ರಕ್ಕೆ ಅತ್ಯಂತ ಬಲ ಕೊಡುವ ಸಂಗತಿ ಆಗಿರುತ್ತದೆ.
ಈ ಲೇಖನವನ್ನು ಬರೆಯುವಾಗ ನಾನು ಅತ್ಯಂತ ಸಣ್ಣ ಸಹಕಾರಿ ಸಂಘ ಸoಸ್ಥೆಗಳನ್ನು ಮತ್ತು ಜನ ಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಅವರು ಗಳಿಗೆ ನಾಡಿನ ನ್ಯಾಯಾಂಗ ವ್ಯವಸ್ಥೆ ಯ ಬಗೆಗೆ ವಿಶ್ವಾಸ, ಧೈರ್ಯ ಮತ್ತು ಗೌರವ ಹೆಚ್ಚಾಗ ಬೇಕೆಂದೂ ಕಳಕಳಿ ಧನ್ಯ ವಾದ ಗಳು.
– ಶ್ರೀಧರ ನೀಲಕಂಠ ರಾವ್.
ಅಧ್ಯಕ್ಷ , ಜ್ಞಾನ ಶಾಲೆ ಸೌಹಾರ್ದ ಕೊ ಆಪರೇಟಿವ್ ನಿಯಮಿತ, ಬೆಂಗಳೂರು.