ತಮಗೆಲ್ಲರಿಗೂ ತಿಳಿದಿರುವ ಹಾಗೆ R.B.I. ಸಂಸ್ಥೆ ಯ ಪ್ರಥಮ ಹಾಗೂ ಮೂಲ ಉದ್ದೇಶ ದೇಶದ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರ ಹಿತವನ್ನು ಕಾಪಾಡುವುದು ಆಗಿರುತ್ತದೆ.
ಆದಾಗ್ಯೂ R.B.I. ತನ್ನ sec 35 A ಅನ್ನೂ U.C.B. ಗಳ ಮೇಲೆ ಹೇರುತ್ತಿರುವ ರೀತಿ ಇoದಾಗಿ ಠೇವಣಿದಾರನಿಗೆ ತೊಂದರೆ NPA ಸುಸ್ತಿದಾರನಿಗೆ ಅನುಕೂಲ ಅನ್ನುವ ವಾತಾವರಣ ನಿರ್ಮಾಣ ವಾಗುತ್ತದೆ.ಇಲ್ಲಿ ಗಮನಿಸ ಬೇಕಾಗಿರುವ ಸಂಗತಿ sec 35A ಅನ್ನೂ ಹೇರುತ್ತಿರುವ ರೀತಿ ಬದಲಾಗ ಬೇಕಿದೆ.,
ಏಕೆಂದರೆ, U.C.B. ನ ವ್ಯವಹಾರವನ್ನು ಮೊಟಕುಗೊಳಿಸಿದ ತಕ್ಷಣವೇ ಅಮಾಯಕ ಠೇವಣಿದಾರ ಮಾನಸಿಕ ವಾಗಿ ಅತ್ಯಂತ ವಾಗಿ ಕುಗ್ಗಿ ಹೋಗುತ್ತಾನೆ, ಅವನಿಗೆ ಮುಂದೇನಾಗುತ್ತದೆ ಎಂಬ ಸ್ಪಷ್ಟ / official ಮಾಹಿತಿ ದೊರಕುವುದಿಲ್ಲ., ವಾಸ್ತವವಾಗಿ U.C.B. ಯ NPA account ಸುಸ್ತಿ ಸಾಲಗಾರರಿಗೆ ಸ್ವಲ್ಪ ನೆಮ್ಮದಿ ಸಿಕ್ಕ ಅನುಭವ, ಇದು ಕ್ರಮದ ಆರೋಗ್ಯಕರ ವಾದ ಪರಿಣಾಮ ಆಗಿರುವುದಿಲ್ಲ. ಹಾಗು ಕೆಲವು U.C.B., ಗಳಲ್ಲಿ , NPA ಕಡೆಗೆ ವಾಲುತ್ತಿರುವ ಸಾಲ ಗಾರರು ಹಣವನ್ನು ಪಾವತಿ ಸು ವುದನ್ನು ನಿಲ್ಲಿಸಿ ಬಿಟ್ಟಿರುವ ಉದಾಹರಣೆ ಗಳೇ ಹೆಚ್ಚು! ಏಕೆಂದರೆ ಇ ಲ್ಲಿಯೂ ಕೂಡ ಮುಂದೆ ಏನಾಗಬಹುದು ಎಂಬ ಸ್ಪಷ್ಟ ಮಾಹಿತಿಯ ಕೊರತೆ.
ಪರಿಹಾರ – R.B.I. sec 35 A ಗೆ ಯೋಗ್ಯ ವಾದ U. C. B. ಗಳ ವ್ಯವಹಾರವನ್ನು ಮೊಟಕುಗೊಳಿಸದೆ, 1. ಸಂಬಂಧ ಪಟ್ಟ ನಿರ್ದೇಶಕರ ಮೇಲೆ ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸುವ ಕ್ರಮವಿಟ್ಟು ತಕ್ಷಣವೇ ( ಅತಿ ಶೀಘ್ರ ) ನೂತನ ನಿರ್ದೇಶಕ ಮಂಡಳಿ ಅಧಿಕಾರಕ್ಕೆ ಬರುವ ಕಡೆ ಕ್ರಮ ತೆಗೆದು ಕೊಳ್ಳಬೇಕು.,
2. ತನ್ನ ವಿಶೇಷ ವಾದ ಅಧಿಕಾರವನ್ನು ಚಲಾಯಿಸಿ ತಕ್ಷಣವೇ NPA ಸಾಲಗಾರರ ಮೇಲೆ ಪರಿಣಾಮಕಾರಿ ಮತ್ತು ತೀವ್ರ ಗತಿಯ ಕ್ರಮ ಜಾರಿಗೊಳಿಸಲು ಹೇಗೆ ನೂತನ ನಿರ್ದೇಶಕ ಮಂಡಳಿಗೆ ಹೆಚ್ಚಿನ ಕಾನೂನಿನ ಬಲವನ್ನು ಕೊಡ ಬಹುದು ಅನ್ನುವ ರೀತಿಯ ಕಡೆ ಯೋಚಿಸ ಬೇಕು .
ಹೀಗಾದಾಗ ಮಾತ್ರ R.B.I. ತನ್ನ ಮೂಲ ಉದ್ದೇಶದoತೆ ಠೇವಣಿ ದಾರರ ಹಿತವನ್ನು ಕಾಪಾಡಿದಂತೆ ಆಗುತ್ತದೆ.,
– ಶ್ರೀಧರ ಎನ್ ರಾವ್.
ಅದ್ಯಕ್ಷರು. ಜ್ಞಾನ ಶಾಲೆ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮತ್ತು ಅದ್ಯಕ್ಷರು,
ಬೆಂಗಳೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ.