ದಶಕ ಗಳು ಕಳೆದಂತೆ ಆಧುನಿಕತೆಯ ಹೊಸ ಹೊಸ ವಿಚಾರ ಧಾರೆಗಳು ಹರಿದಂತೆ. ಮೂಲ ತತ್ವ ಗಳು., ಪ್ರಾರಂಭಿಸಿದ ಮೂಲ ಉದ್ದೇಶಗಳು ಮರೆ ಮಾಚಿ ಹೋಗುವುದು ಸಹಜ ಮತ್ತು ಪ್ರಕೃತಿಯ ನಿಯಮ ಕೂಡ . ಉದಾಹರಣೆಗೆ , ಧಾರ್ಮಿಕ ಕ್ಷೇತ್ರ ದಲ್ಲಿಯೂ , ಮೂಲ ಉದ್ದೇಶ ತತ್ವಗಳು ಹಿಂದೆ ಸರಿದು ಮೂಢ ನಂಬಿಕೆಯೇ ಮೂಲ ವಾಗುತ್ತಿದ್ದಂತೆಯೇ ಕಾಲ ಕಾಲಕ್ಕೆ ಅವತಾರ ಪುರುಷರು ಬಂದು ಮಾನವೀಯ ಮೌಲ್ಯಗಳನ್ನು ಮರು ಸ್ಥಾಪಿಸಿರುವುದು ಸತ್ಯ.
ಸಹಕಾರಿ ಕ್ಷೇತ್ರಕ್ಕೆ ಬಂದರೆ, ಅದೇ ಮಾನವೀಯ ಮೌಲ್ಯ ಗಳ ಅಡಿಯಲ್ಲಿ , ನಮ್ಮ ಸಮಾಜದ , ಪ್ರತಿ ಸಾಮಾನ್ಯ ಮತ್ತು ಕಟ್ಟಾ ಕಡೆಯ ವ್ಯಕ್ತಿಯ ಆರ್ಥಿಕ ಅವಶ್ಯಕತೆಯನ್ನು ಪೂರೈಸುತ್ತಾ ಆ ಸದಸ್ಯನ ಆರ್ಥಿಕ ಅಭಿವೃದ್ದಿಗೆ ವೈವಿಧ್ಯ ಯೋಜನೆ , ಚಟುವಟಿಕೆಗಳನ್ನು ಪೂರೈಸುವುದು ಸಹಕಾರಿ ಸಂಸ್ಥೆಯ ಮೂಲ ಉದ್ದೇಶವಾಗಬೇಕಾಗಿದೆ.
ಈಗ ವಾಸ್ತವವಾಗಿ ಇಂದಿನ ನಮ್ಮ ಸಹಕಾರಿ ಸಂಘಗಳು ಈ ಮೇಲೆ ಉಲ್ಲೇಖಿಸಿದ ಮೂಲ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು, ಅದಕ್ಕೇ ಪೂರಕವಾದ ಚಟುವಟಿಕೆಗಳನ್ನೂ ಎಷ್ಟರ ಮಟ್ಟಿಗೆ ಯೋಚಿಸಿ, ಯೋಜನೆ ಮಾಡುತ್ತಿವೆ ಎಂದು ಅವಲೋಕನ ಮಾಡಿಕೊಳ್ಳುವ ಸಂದರ್ಭ.
ಈ ಲೇಖನದ ಉದ್ದೇಶವೂ., ಪ್ರತಿ ಸಹಕಾರಿ ಸoಸ್ಥೆ ತಾನು ಈ ತಿಂಗಳು / ಈ ಮೂರು ತಿಂಗಳಲ್ಲಿ ತನ್ನ ಎಷ್ಟು ಸದಸ್ಯರ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಿದ್ದೆನೆ ಎಂದು ನೋಡಿಕೊಳ್ಳುವ ವ್ಯವಸ್ಥೆಯನ್ನು , ಸ್ಥಾಪಿಸಿ ಕೊಳ್ಳುವ, ರೂಢಿ ಮಾಡಿ ಕೊಳ್ಳುವ ಸಮಯ ಬಂದಿದೆ ಎಂದು ವಿಗ್ನಪಿಸುವ / ಜ್ಞಾಪಿಸುವ ಉದ್ದೇಶ ಹೊಂದಿದೆ.
ಪ್ರತಿ ವರ್ಷದ ಆಡಿಟ್ ನಲ್ಲಿ ಇದನ್ನು ಕೂ ಆಪರೇಟಿವ್ Responsibility index ಎಂದು ಪ್ರಾರಂಭಿಸುವ ಅವಶ್ಯ ಕತೆ ಬಂದಿದೆ, ತನ್ನ ಸದಸ್ಯರ ಹಿಂದಿನ ವರ್ಷದ ಆರ್ಥಿಕ ಮಟ್ಟ ಎಷ್ಟು ಇದ್ದಿತು , ಈಗ ಆ ಸದಸ್ಯರ ಆರ್ಥಿಕ ಮಟ್ಟ ಎಸ್ಟು ಪಟ್ಟು ಹೆಚ್ಚಾಗಿದೆ ಅನ್ನುವ ಅಕೌಂಟೆಬಿಲಿಟಿ ರೆಕಾರ್ಡ್ ಮಾಡುವ ಅವಶ್ಯಕತೆ , ಆದಾಗ ಮಾತ್ರ ಸಹಕಾರಿ ಕ್ಷೇತ್ರ ಸ್ಥಾಪಿಸಿದ ಮೂಲ ಉದ್ದೇಶವನ್ನು ಮರು ಸ್ಥಾಪಿಸಿದಂತೆ ಆಗುತ್ತದೆ., ಜೈ ಸಹಕಾರ್ ಘೋಷಣೆ ಗೆ ಅರ್ಥ ಬಂದಂತಾಗುತ್ತದೆ. –
ಶ್ರೀಧರ ನೀಲಕಂಠ ರಾವ್,
ಅದ್ಯಕ್ಷರು., ಬೆಂಗಳೂರು ಜಿಲ್ಲಾ ಸೌಹಾರ್ದ ಒಕ್ಕೂಟ, ಮತ್ತು ಜ್ಞಾನ ಶಾಲೆ ಸೌಹಾರ್ದ ಸಹಕಾರಿ ನಿಯಮಿತ.