ಶೋಷಣೆಯಿಂದ ವಿಮುಕ್ತಿಗೊಳಿಸಿ ಸದಸ್ಯರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು. ಸಹಕಾರಿ ಪದ್ಧತಿಯ ಪ್ರಮುಖ ಗುರಿ. ಈ ಹಿನ್ನಲೆಯಲ್ಲಿ ಸಹಕಾರಿ ತತ್ವ, ಸಿದ್ಧಾಂತ, ವಿಚಾರಧಾರೆಗಳು ಪ್ರಥಮವಾಗಿ ಇಂಗ್ಲೆಂಡ್ ದೇಶದಲ್ಲಿ ಬೀಜಾಕುರವಾಗಿದ್ದು ಸರ್ವರಿಗೂ ತಿಳಿದಿರುವ ವಿಷಯ. ಈ ದೇಶದ ಇಬ್ಬರು ಸಾಮಾಜಿಕ ಕಳಕಳಿಯುಳ್ಳ ತತ್ವಜ್ಞಾನಿಗಳ ಹೆಸರುಗಳು ಅಗ್ರಸ್ಥಾನದಲ್ಲಿದೆ ಒಬ್ಬರು ರಾಬರ್ಟ್ ಓವೆನ್, ಮತ್ತೊಬ್ಬರು ಡಾ. ವಿಲಿಯಂ ಕಿಂಗ್.
ಪತ್ರಿಕೋದ್ಯಮದ ಉಗಮ :
ರಾಬರ್ಟ್ ಓವೆನ್‌ರು ಉತ್ತಮ ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಾಗೂ ನಿರ್ಗತಿಕರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಸುಧಾರಣೆಗಾಗಿ ಮಾಡಿದ ಪ್ರಯತ್ನ ಪ್ರಯೋಗಗಳು ವಿಫಲವಾದವು. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವತ್ತಿಯಿಂದ ಸಾಮಾಜಿಕ ಕಳಕಳಿವುಳ್ಳವರಾಗಿದ್ದರು. ಇವರು ಉತ್ತಮ ಪತ್ರಕರ್ತರು ಆಗಿದ್ದು, ಪ್ರಭಲಮಾದ್ಯಮವಾಗಿದ್ದ ಪತ್ರಿಕೊದ್ಯಮವನ್ನು ಪ್ರಭಲ ಅಸ್ತ್ರಗಳನಾಗಿ ಮಾಡಿಕೊಂಡು ತನ್ಮೂಲಕ ಸಹಕಾರಿ ಪ್ರಚಾರಕ್ಕೆ ‘ದಿ ಕೋ- ಆಪರೇಟರ್” ಎಂಬ ಮಾಸಿಕ ನಿಯತಕಾಲಿಕ ಪತ್ರಿಕೆಯ ಪ್ರಕಟಣೆ ಮಾಡಿದರು. 1828ರಲ್ಲಿ ಪ್ರಕಟಗೊಂಡ ‘ದಿ ಕೋ- ಅಪರೇಟರ್” ಜಗತ್ತಿನ ಪ್ರಥಮ ಸಹಕಾರಿ ಪತ್ರಿಕೆ ಎಂದು ಹೆಸರುವಾಸಿಯಾಯಿತು.
ಡಾ. ವಿಲಿಯಂ ಕಿಂಗ್ ರವರು 1971 ರಲ್ಲಿ ಇಂಗ್ಲೆಂಡ್‌ನ ಇಪ್ಪವಿಚ್ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ ಪ್ರಾರಂಭದಲ್ಲಿ ಆಧುನಿಕ ಇತಿಹಾಸ ಅಧ್ಯಯನ ಮಾಡಿ (FRCS) ಎಪ್. ಆರ್. ಸಿ.ಎಸ್ ವೈದ್ಯಕೀಯ ಪದವಿಯನ್ನು ಪಡೆದು ಇಂಗ್ಲೆಂಡ್‌ನ ಬ್ರಿಟಾನ್ ಎಂಬಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಪ್ರಾರಂಬಿಸಿದರು. ಉತ್ತಮ ವೈದ್ಯರಾಗಿ ಸಾಕಷ್ಟು ಸಂಪತ್ತು ಗಳಿಸಬಹುದಾಗಿದ್ದರೂ ಬಡವರ, ದೀನ ದಲಿತರ ವಿಶೇಷವಾಗಿ ಶೋಷಣೆಗೆ ಒಳಗಾಗಿದ್ದ ಕಾರ್ಮಿಕ ಸಮೂದಾಯದ ವೈದ್ಯರಾಗಿ “ಬಡವರ ವೈದ್ಯವೆಂಬ” ಹೆಸರು ಗಳಿಸಿದರು. ಅವರ ಸೇವೆಗಾಗಿಯೇ ತಮ್ಮ ಜೀವನವನ್ನು ಮೂಡಿಪಾಗಿಟ್ಟರು. ಅವರು ಸಹಕಾರಿ ಪತ್ರಿಕೊದ್ಯಮದ ಮೂಲಕ ಸಹಕಾರಿ ಪದ್ಧತಿಯನ್ನು ಪ್ರಚಾರಗೊಳಿಸುತ್ತ ಸಹಕಾರ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಿದರು. ಅಲ್ಲದೆ ಅವರ ಆರ್ಕಷಕ ಹಾಗೂ ಪರಿಣಾಮಕಾರಿ ಲೇಖನಗಳಿಂದ ಅನೇಕ ಸಹಕಾರ ಅಂಗಡಿಗಳು ಸ್ಥಾಪಿತಗೊಂಡುವು. ಡಾ. ವಿಲಿಯಂ ಕಿಂಗ್ ರವರು ಅಪ್ಪಟ ಪ್ರಜಾಪ್ರಭುತ್ವವಾದಿ ಯಾಗಿದ್ದು ಸ್ವ-ಇಚ್ಛೆಯ ಸದಸ್ಯತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತ ಬಂದರು. ಹೀಗಾಗಿ ರಾಕ್‌ಡೇಲ್ ಪಯೋನಿಯರ್ಸ್ ರೂಪಿಸಿಕೊಂಡ ಸಹಕಾರಿ ತತ್ವಗಳಲ್ಲಿ “ಸ್ವಯಂ ಪ್ರೇರಿತ ಮುಕ್ತ ಸದಸತ್ವಕ್ಕೆ” ಆದ್ಯತೆ ನೀಡಲಾಗಿದೆ.
ರಾಬರ್ಟ್ ಓವೆನ್‌ಅತ್ಯಂತ ನೈಜ ರೀತಿಯಿಂದ ತಮ್ಮ ವಿಚಾರ ಧಾರೆಯನ್ನು ಪ್ರಕಟಿಸುತ್ತಾ ಒಬ್ಬ ನೈಜ ಸಹಕಾರಿ(Practical Cooperator) ಎಂದು ಗುರುತಿಸಲ್ಪಟ್ಟಿರುವ. ಹೀಗೆ ರಾಬರ್ಟ್ ಓವೆನ್ ಮತ್ತು ಡಾ. ವಿಲಿಯಂ ಕಿಂಗ್ ಇವರುಗಳು ಪ್ರಪಂಚದ ಸಹಕಾರಿ ಪದ್ಧತಿಯ ಆದ್ಯ ಪ್ರವರ್ತಕರಾಗಿರುತ್ತಾರೆ.
ಭಾರತದಲ್ಲಿ ಸಹಕಾರಿ ಪತ್ರಿಕೋದ್ಯಮ:
ನಮ್ಮ ದೇಶದಲ್ಲಿ ಸಹಕಾರಿ ಚಳುವಳಿ 1905 ಪ್ರಾರಂಭಗೊಂಡಿದ್ದರೂ ಸಹಕಾರಿ ಪತ್ರಿಕೋದ್ಯಮಕ್ಕೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅಂತರರಾಷ್ಟ್ರೀಯ ಮೈತ್ರಿ ಸಂಸ್ಥೆಯು ಅಂಗೀಕರಿಸಿದ ಸಹಕಾರಿ ತತ್ವಗಳಲ್ಲಿ ಶಿಕ್ಷಣ ಮತ್ತು ಪ್ರಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. 1912ರಲ್ಲಿ ಸರ್.ಇ.ಡಿ. ಮ್ಯಾಕ್ಸಗನ್ ಸಮಿತಿಯು “ಶಿಕ್ಷಣವಿಲ್ಲದೆ ಸಹಕಾರವಿಲ್ಲ” ಎಂಬ ಅಭಿಪ್ರಯವನ್ನು ವ್ಯಕ್ತಪಡಿಸಿತ್ತು. ಭಾರತದ ಸಹಕಾರ ಚಳವಳಿಯ ಶೃಂಗ ಸಂಸ್ಥೆಯಾದ ಎನ್. ಸಿ.ಯು. ಐ ‘ದಿ ಕೋ- ಆಪರೇಟರ್” ಎಂಬ ಹೇಸರಿನ ಇಂಗ್ಲೀಷ್/ಹಿಂದಿ ಭಾಷೆಗಳಲ್ಲಿ ಪತ್ರಿಕೆಗಳ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿದ್ದು, ಸಹಕಾರಿ ಚಳುವಳಿಯ ಆಗಾಧ ಬೆಳವಣಿಗೆಯ ಜೋತೆಯಲ್ಲಿ ಸಹಕಾರಿ ಸಾಹಿತ್ಯ ಪ್ರಕಟಣೆ ಯಶಸ್ವಿಯಾಗಿ ಬೆಳೆಯಲ್ಲಿಲ್ಲ ಎಂಬುದು ಆನೇಕ ಸಹಕಾರಿಗಳ ಕೂಗು. . ಇತ್ತಿಚಿಗೆ ನಿಧನರಾದ ಅಂತರರಾಷ್ಟ್ರೀಯ ಸಹಕಾರಿ ಮುಖಂಡರಾಗಿದ್ದ ಬಿ.ಎಸ್ ವಿಶ್ವನಾಥ ರವರು ತಮ್ಮ ಅನೇಕ ಭಾಷಣಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಹಕಾರಿ ದೈನಿಕ ಪತ್ರಿಕೆಯ ಪ್ರಾರಂಭದ ಬಗ್ಗೆ ಕನಸನ್ನು ಕಂಡಿದ್ದರು ಆದರೆ ಅದು ಇನ್ನು ತನಕ ಸಾಕಾರಗೊಂಡಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕಳೆದ 50 ವರ್ಷಗಳಿಂದ ಸಹಕಾರ ಎಂಬ ವಾರ ಪತ್ರಿಕೆಯನ್ನು ಪ್ರಕಟಿಸುತ್ತಾ ಸಹಕಾರ ಸಧಾನೆಗಳ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಅಲ್ಲದೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ “ಸ್ವಾಭಿಮಾನಿ ಸಹಕಾರಿ” ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಾ ಸೌಹಾರ್ದ ಸಹಕಾರಿ ಕ್ಷೇತ್ರದ ಧ್ವನಿಯಾಗಿ ಹೊರಹೊಮ್ಮಿದೆ.ಅಲ್ಲದೆ ಸಿಂಚನ ಎಂಬ ಮಾಸಿಕ ಪಾತ್ರವನ್ನು ರಾಜ್ಯ ಸಹಕಾರಿ ದೃಶ್ಯಮಾಧ್ಯಮ ಮಹಾಮಂಡಲ ಪ್ರಕಟಿಸುತ್ತಿದೆ. ಆನೇಕ ಜಿಲ್ಲಾ ಸಹಕಾರಿ ಒಕೊಟ್ಟಗಳು ತಮ್ಮದೆಯಾದ ಪತ್ರಿಕೆಗಳನ್ನು ಪ್ರಕಟಿಸುತ್ತಿವೆ. ಆದಾಗಿಯೂ ಈ ಕ್ಷೇತ್ರದ ಆಗಾಧ ಬೆಳವಣಿಗೆಯ ಹಿನ್ನಲೆಯಲ್ಲಿ ಪತ್ರಿಕೋದ್ಯಮ ಇನ್ನು ಹೆಚ್ಚು ಬೆಳವಣಿಗೆ ಹೊಂದಿ ಬೇಕಾಗಿರುವುದು ಅನಿವರ್ಯಾವಾಗಿದೆ ಮತ್ತು ಅವಶ್ಯಕವಾಗಿದೆ.
ಉಪಸಂಹಾರ:
ಇಂಗ್ಲೆಂಡ್ ದೇಶದಲ್ಲಿ ಪ್ರಥಮವಾಗಿ ಪ್ರಾರಂಭಗೊಂಡ ಸಹಕಾರಿ ಪತ್ರಿಕೋದ್ಯಮ ಸಹಕಾರಿ ಚಳುವಳಿಯ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಆಗಿದೆ. ಸಹಕಾರಿ ಪತ್ರಿಕೋದ್ಯಮದ ಪಿತಾಮಹ ಡಾ. ವಿಲಿಯಂ ಕಿಂಗ್ ರವರನ್ನು ನಾವು ಸದಾ ಸ್ಮರಿಸಬೇಕು.
ಜೈ ಹಿಂದ್ ಜೈ ಸಹಕಾರ
ಶಂಕರ ಐ ಹೆಗಡೆ,
ಸಹಕಾರಿ ಸಲಹೆಗಾರರು ತುಮಕೂರು.
8095595512