‘ಮಧು’ ಶಬ್ದಕ್ಕಿಂತಲೂ ಮಧು ರುಚಿಯಾಗಿದೆ. ಇದರ ರುಚಿಯ ಅರಿವು ಕಾಡು ಅವಸ್ಥೆಯಲ್ಲಿದ್ದ ಮನುಷ್ಯನಿಗೂ ಇತ್ತು. ಅವನೂ ಅದನ್ನು ಸಂಗ್ರಹಿಸಿಡುತ್ತಿದ್ದ.ಆಗ ಕೂಡ ದೇವತೆಗಳ ತೃಪ್ತಿಗಾಗಿ ಜೇನುತುಪ್ಪವನ್ನು ಅರ್ಪಿಸುತ್ತಿದ್ದ ತನಗೆ ಪ್ರಿಯವಾದದ್ದು ದೇವರಿಗೂ ಪ್ರಿಯವೆಂದೇ ಅಂದಿನ ಕಾಡುಮಾನವನ ನಂಬುಗೆ,
ಈ ಹಿನ್ನಲೆಯಲ್ಲಿ ಜೇನು ವ್ಯವಸಾಯವನ್ನು ಸಹಕಾರಿ ಕ್ಷೇತ್ರದಲ್ಲಿ ತರಲು 1944ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಹೊನ್ನಾವರ ಮಧು ಎಂಬ ಹೆಸರಿನ ಜೇನು ಉತ್ಪನ್ನವನ್ನು ಹೊನ್ನಾವರ ಜೇನು ಸಾಕುವವರ ಸಹಕಾರ ಸಂಘದಿಂದ ಉತ್ಪಾದಿಸಲಾಯಿತು. ಖಾದಿ ಗ್ರಾಮೋದ್ಯೋಗ ಆಯೋಗದ ಹಿರಿಯ ಅಧಿಕಾರಿಗಳಾಗಿದ್ದ ಕೀರ್ತಿಶೇಷರಾದ ಸಂಜೀವರಾವ್ ಕಲ್ಲಾಪುರ ಇವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಅಸ್ತಿತ್ವಕ್ಕೆ ಬಂದಿತು. ಈ ಸಂಸ್ಥೆ ಪ್ರಾರಂಭದಿಂದಲೂ ಅನೇಕ ಏರು ಪೇರುಗಳನ್ನು ಎದುರಿಸಿಬೇಕಾಗಿ ಬಂದಿದ್ದರೂ ಸಹ ಉತ್ತಮ ಆಡಳಿತ ಮಂಡಳಿ ಮತ್ತು ನೌಕರ ವರ್ಗದ ದೂರದರ್ಶಿತ್ವದಿಂದ ಚೇತನಗೊಂಡಿತು. ನೌಕರರ ಪೈಕಿ 1985ರಲ್ಲಿ ದಿನಗೂಲಿ ನೌಕರರಾಗಿ ಸಂಘದಲ್ಲಿ ಸೇವೆ ಆರಂಭಿಸಿ 1988ರಲ್ಲಿ ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀ ಶ್ರೀಧರ ಹೆಗಡೆಯವರು ಸಂಘದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.
ಶ್ರೀಯುತರು ವಾಣಿಜ್ಯ ಪದವಿಧರರಾಗಿದ್ದು ಬೆಂಗಳೂರಿನ ಆರ್ ಐ ಸಿ ಎಂ ನಲ್ಲಿ ಸಹಕಾರದ ಕುರಿತು ಉನ್ನತ ಪದವಿಯನ್ನು ಗಳಿಸಿದ್ದಾರೆ. 1991-92ರಲ್ಲಿ ಕರ್ನಾಟಕದಲ್ಲಿ ರೈನಾಕ್ ಬ್ರೂಡ್ ಎಂಬ ವೈರಸ್ ಖಾಯಿಲೆಯಿಂದ ಜೇನು ಕುಟುಂಬಗಳ ನಾಶವಾದ ಸಂದರ್ಭದಲ್ಲಿ ಜೇನುಕೃಷಿಯ ಪುನರ್ ಅಭಿವೃದ್ಧಿಗಾಗಿ ರಾಜ್ಯಮಟ್ಟದ ಟಾಸ್ಕ್ ಫೋರ್ಸ ಕಮೀಟಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ಜೇನುಕೃಷಿಯ & ಸಂಘದ ಅಭಿವೃದ್ಧಿಗಾಗಿ ಹಲವಾರು ತರಬೇತಿ & ಕಾರ್ಯಾಗಾರಗಳನ್ನು ಗ್ರಾಮೀಣ ಮಟ್ಟದಲ್ಲಿ ಮತ್ತು ಹೊನ್ನಾವರ ತಾಲ್ಲೂಕು ಹಾಗೂ ಉತ್ತರಕನ್ನಡ ಜಿಲ್ಲೆ & ನೆರೆಹೊರೆಯ ಜಿಲ್ಲೆಗಳಲ್ಲಿ ಏರ್ಪಡಿಸಿ ಜೇನುಕೃಷಿ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು ಸಂಘದಲ್ಲಿ ನಿರಂತರವಾಗಿ ಜೇನುಕೃಷಿಗೆ ಸಂಬಂಧಿಸಿದ ಜೇನುಪೆಟ್ಟಿಗೆ ಹಾಗೂ ಎಲ್ಲಾ ಉಪಕರಣಗಳು ಲಭ್ಯವಾಗುವಂತೆ ಮಾಡಿದ್ದು 200ನೇ ಇಸ್ವಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಜರುಗಿದ ಅಂತರಾಷ್ಟ್ರೀಯ ಜೇನುಕೃಷಿ ಸಮ್ಮೇಳನದಲ್ಲಿ ಪ್ರತಿನಿಧಿಸಿದ್ದು 2000- 01ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನೆರವಿನಿಂದ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಂಘದಲ್ಲಿ ಆಧುನಿಕ ಜೇನು ಸಂಸ್ಕರಣಾ ಘಟಕ ಹಾಗೂ ಜೇನುತುಪ್ಪದ ಗುಣಮಟ್ಟ ಅಗ್ ಮಾರ್ಕ ಮಾನ್ಯತೆ ಪಡೆದ ಪ್ರಯೋಗಾಲಯ ಪ್ರಾರಂಭಿಸಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ವಸ್ತು ಪ್ರದರ್ಶನದಲ್ಲಿ ಮಾರಾಟ ಮಳಿಗೆ ಸ್ಥಾಪಿಸಿ ಸಂಘದ ಜೇನುತುಪ್ಪದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದು ಖಾದಿ & ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಪಂಚಾಯತ ಉತ್ತರಕನ್ನಡ ಹಾಗೂ ಸಹಕಾರ ಇಲಾಖೆಗಳಿಂದ ಹಲವಾರು ಯೋಜನೆಗಳನ್ನು ತಂದು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು ಖಾದಿ & ಗ್ರಾಮೋದ್ಯೋಗ ಆಯೋಗದಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಜೇನುಕೃಷಿಯ ಅಭಿವೃದ್ಧಿಗಾಗಿ ರೂ 99.00 ಲಕ್ಷಗಳ ಸ್ಫೂರ್ತಿ ಯೋಜನೆಯನ್ನು ಸಂಘಕ್ಕೆ ಮಂಜೂರು ಮಾಡಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ್ದು ನೆರೆಯ ಗೋವಾ ರಾಜ್ಯದಲ್ಲಿಯೂ ಜೇನುಕೃಷಿ ಅಭಿವೃದ್ಧಿ ಮಾಡಲು ತರಬೇತಿ ಹಾಗೂ ಮಾರ್ಗದರ್ಶನ ಮಾಡಲಾಯಿತು.
ಈ ಮೇಲ್ಕಂಡ ಎಲ್ಲಾ ಯೋಜನೆಗಳನ್ನು ಸಂಘದಲ್ಲಿ ಯಶ್ವಸಿಯಾಗಿ ಕಾರ್ಯಗತಗೊಳಿಸಿ ಸಂಘದ ಸರ್ವತೋಮುಖ ಏಳಿಗೆಗೆ ಸುಭದ್ರ ಬೂನಾದಿಯನ್ನು ಇಟ್ಟಿದ್ದಾರೆ. ಸತತವಾಗಿ 36 ವರ್ಷಗಳ ಸೇವೆ ಸಲ್ಲಿಸಿ ಮುಖ್ಯ ಕಾರ್ಯ ನಿರ್ವಹರ್ಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರೂ ಸಹ ಸದಾ ಸಂಘದ ಪ್ರಗತಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರ ಪ್ರಮಾಣಿಕ ಮತ್ತು ಕಾರ್ಯದಕ್ಷತೆ ಸಹಕಾರಿ ಕ್ಷೇತ್ರದ ಇತರ ನೌರರರುಗಳಿಗೆ ಅನುಕರಣಿಯವಾಗಿದೆ.
ಶ್ರೀ ಶ್ರೀಧರ ಹೆಗಡೆ
ಸಹಕಾರಿ ಸಲಹೆಗಾರರು
ಹೊನ್ನಾವರ.
<