ಈ ಹಿಂದೆ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯು ಜನಸಮುದಾಯದ ಚಳುವಳಿಯಾದಂತೆ ಸಹಕಾರಿ ಆಂದೋಲನವಾಗಿ ಗುರುತಿಸಿಕೊಂಡಿತು. ಸಣ್ಣ ಮತ್ತು ಅತಿಸಣ್ಣ ರೈತರು, ಭೂರಹಿತ ಕಾರ್ಮಿಕರು, ಮೀನುಗಾರರು. ಕುಶಲಕರ್ಮಿಗಳ ಒತ್ತಾಸೆ ಮತ್ತು ಆಕಾಂಕ್ಷೆಗಳೇ ಪ್ರಮುಖವಾಗಿ ಅಡಕವಾಗಿದ್ದವು. ಸಹಕಾರ ಚಳುವಳಿಯ ಬಗ್ಗೆ ನಾವು ತಿಳಿದು ಕೊಳ್ಳಬೇಕಾದರೆ ಸುಮಾರು 5 ಶತಾಬ್ಬಿಗಳ ಹಿಂದಕ್ಕೆ ಹೋಗಬೇಕಾಗುತ್ತದೆ. 1844ರಲ್ಲಿ ಇಂಗ್ಲೆಂಡಿನಲ್ಲಿ ಗ್ರಾಹಕ ಚಳುವಳಿಯ ಮೂಲಕ ಪ್ರಾರಂಭವಾದ ಸಹಕಾರಿ ಸಂಸ್ಥೆಗಳು ಭಾರತದಲ್ಲಿ ಸರ್ಕಾರದವರ ಕೃಪಾಪೋಷಿತವಾಗಿ 1905ರಲ್ಲಿ ಗದಗ್ ಜಿಲ್ಲೆಯ ಕಣಗಿನಹಾಳದಲ್ಲಿ ಮೊಟ್ಟಮೊದಲ ಸಹಕಾರಿ ಸಂಘ ಪ್ರಾರಂಭವಾಗಿದ್ದು ಒಂದು ಇತಿಹಾಸ, ಸಹಕಾರ ಸಂಸ್ಥೆಗಳು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಸ್ಥಾಪಿಸಲಾದ ಸಂಸ್ಥೆಗಳಾಗಿದ್ದು ಸಂಪೂರ್ಣ ನಿಯಂತ್ರಣ ಸಂಘದ ಸದಸ್ಯರುಗಳಿಗೆ ಒಳಪಟ್ಟಿರುತ್ತದೆ. ಸಂಘದ ಕಾರ್ಯನೀತಿಯನ್ನು ರೂಪಿಸುವಲ್ಲಿ ಮತ್ತು ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಭಾಗವಹಿಸುತ್ತಾರೆ. ಈ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸದಸ್ಯರುಗಳಿಗೆ ಜವಾಬ್ದಾರರಾಗಿರುತ್ತಾರೆ. ಮತ್ತು ಉತ್ತರದಾಯಿತ್ವವನ್ನು ಹೊಂದಿರುತ್ತಾರೆ.
ಸಹಕಾರಿ ಕ್ಷೇತ್ರದ ಮುಖ್ಯ ತಾಕತ್ತು ಎಂದರೆ ಅದರಲ್ಲಿಯ ಸಮುದ್ರ ಸದೃಶಗುಣ. ಸಮುದ್ರಕ್ಕೆ ನೀವು ಬಾಟಲಿ, ಪ್ಲಾಸ್ಟಿಕ್ ಕಪ್, ಬೀರು ಬಾಟಲಿ ಮುಂತಾದ ಕಸ ಎಸೆಯಿರಿ ಅದು ಕೆಲ ಸಮುದ್ರದಲ್ಲಿ ಹೊರತಳ್ಳಿಬಿಡುತ್ತದೆ. ಸಹಕಾರ ಕ್ಷೇತ್ರದ್ದೂ ಇದೇ ಕೆಲಸ. ಭ್ರಷ್ಟರು ಕೆಲಕಾಲ ಮೆರೆದಿರಬಹುದು. ಆದರೆ ಅವರು ಇಲ್ಲಿಯೂ ಸಹ ಸಮುದ್ರಕ್ಕೆ ಎಸೆಯುವ ಕಸವೇ. ಆದರೆ ಈ ಕ್ಷೇತ್ರದಲ್ಲಿ ಮಹಾತ್ಮರು ಮಾಡಿರುವ ಅನೇಕ ವರ್ಷಗಳ ಸಾಧನೆ ಒಮ್ಮೊಮ್ಮೆ ವ್ಯರ್ಥವಾಗಿ ಹೋಗುವುದು, ಮತ್ತೊಂದು ಆಘಾತಕಾರಿ ವಿಷಯವೆಂದರೆ ವಂಚನೆಯ ಜಾಲದಲ್ಲಿ ಸಂಸ್ಥೆಗಳು ಕೂಡ ಕಣ್ಮರೆಯಾಗುವುದು ಒಂದು ಆತಂಕಕಾರಿ ವಿಷಯ. ಇಂದಿನ ದಿನಮಾನದ ವಾಣಿಜ್ಯಕರಣ ಕಂಪನಿ ಲಾಭಿ ಖಾಸಗೀಕರಣ ವಾತಾವರಣದಲ್ಲಿ ಕೊನೆಗೂ ಸಹಕಾರ ಚಳುವಳಿಯೇ ಉತ್ತಮ ಉಪಾಯವಾಗಿರುತ್ತದೆ.
ಸಹಕಾರ ಸಂಸ್ಥೆಯಲ್ಲಿ ಪಾರದರ್ಶಕತೆ ಇರಲೇಬೇಕು, ಪಾರದರ್ಶಕತೆ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಮೂಲಮಂತ್ರವಾಗಿರಬೇಕು. ಒಮ್ಮೊಮ್ಮೆ ವ್ಯಕ್ತಿಗಳ ಭ್ರಷ್ಟಾಚಾರ ಸರ್ಕಾರದ ಅಪರಿಮಿತ ಹಸ್ತಕ್ಷೇಪ ಅಧಿಕಾರಿಗಳ ಭ್ರಷ್ಟಾಚಾರದಿಂದ ಸಹಕಾರ ಸಂಸ್ಥೆಗಳು ನೆಲಕಚ್ಚಿಸಿಬಿಡುವುದು ಘೋರ ದುರಂತ. ಆದರೆ ಸಂಘದಲ್ಲಿ ನಿಷ್ಠವಂತ ಸಹಕಾರಿಗಳ ಮತ್ತು ಪ್ರಾಮಾಣಿಕ ಅಧಿಕಾರಿ ವರ್ಗದ ಬದ್ಧತೆಯುಳ್ಳ ಸಹಕಾರಿಗಳ ಬಲದೊಂದಿಗೆ ಸಹಕಾರ ಸಂಸ್ಥೆಗಳು ಜನಶ್ವೇತನ ಪಡೆಯಬಲ್ಲವು. ಎಲ್ಲಿಯವರೆಗೆ ಸಂಘಗಳು ಕಾರ್ಯಾುಣೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇರುತ್ತದೆಯೋ ಅಲ್ಲಿಯವರೆಗೆ ಸಂಘಗಳು ಉತ್ತಮ ರೀತಿಯಿಂದ ಅಭಿವೃದ್ಧಿ ಹೊಂದಬಲ್ಲವು. ಈ ಹಿನ್ನೆಲೆಯಲ್ಲಿ ಸಹಕಾರ ಶಿಕ್ಷಣ ಮತ್ತು ತರಭೇತಿ ಮಾರ್ಗದರ್ಶನ ಅತಿ ಅವಶ್ಯ ಒಟ್ಟಿನಲ್ಲಿ ಹೇಳಬೇಕಾದರೆ 1914 ರಲ್ಲಿ ರಚನೆಗೊಂಡ ಸರ್ ಎಡ್ವರ್ಡ್ ಮೆಕ್ಸಗಾನ್ ಸಮಿತಿ ಹೇಳಿದಂತೆ “ಶಿಕ್ಷಣವಿಲ್ಲದೇ ಸಹಕಾರವಿಲ್ಲ” ಎಂಬ ಹೇಳಿಕೆ ನಿರಂತರವೂ ಸಹಕಾರಿ ಚಳುವಳಿಯ ಮುನ್ನಡೆಯಲ್ಲಿ ಮಾರ್ಗದರ್ಶನವಾಗಿ ನಿಲ್ಲಬಲ್ಲದು.
ಜೈ ಹಿಂದ್ ಜೈ ಸಹಕಾರ
ಶ್ರೀ.ಶಂಕರ ಹೆಗಡೆ
ಸಹಕಾರ ಸಲಹೆಗಾರರು ತುಮಕೂರು