ಹಿನ್ನೋಟ – ಮುನ್ನುಡಿ
ಸಹಕಾರ ಕ್ಷೇತ್ರದಲ್ಲಿ ಅರವತ್ತರ ದಶಕದ ಆರಂಭ ಒಂದು ಹೊಸ ಪರ್ವದ ಆರಂಭಕ್ಕೆ ನಾಂದಿಯಾಯಿತು. ಸಹಕಾರಿ ಕ್ಷೇತ್ರಕ್ಕೆ ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಕರಡು ನಿಯಮಗಳನ್ನು ಭಾರತೀಯತೆಗೆ ತಕ್ಕ ಹಾಗೆ ರೂಪಿಸಿ ಪರಿಪೂರ್ಣ ಬಲವನ್ನು ನೀಡಿದಂತಹ ಸಂದರ್ಭ. ಸಹಕಾರ ಕ್ಷೇತ್ರಕ್ಕೆ ಪೂರಕವಾದ ಕಾನೂನು ನಿಯಮಾವಳಿಗಳು ಭಾರತದ ಮಧ್ಯಮವರ್ಗದ ಜನರಿಗೆ ಮಕರ ಸಂಕ್ರಾಂತಿಯ ಸೂರ್ಯನು ತನ್ನ ಪಥವನ್ನು ಬದಲಿಸಿದಂತೆ ಅನಿಸಿದ ಕ್ಷಣ. ಅಲ್ಲಿಯವರೆಗೂ ಬ್ಯಾಂಕುಗಳು ಕೇವಲ ಶ್ರೀಮಂತರಿಗೆ ಮಾತ್ರ, ಮಧ್ಯಮವರ್ಗದವರಿಗೆ ಮತ್ತು ಬಡಜನರಿಗೆ ಅದು ಗಗನ ಕುಸುಮವಾಗಿಯೇ ಇತ್ತು ಹಾಗು ಆಗಸದಲ್ಲಿ ನೋಟಕ್ಕೂ ನಿಲುಕದ ನಿಲುಕದ ನಕ್ಷತ್ರದಂತೆ ಇತ್ತು. ಈ ಬದಲಾವಣೆಯು ಸ್ವಾತ್ಯಂತ್ರದ ನಂತರ ಭಾರತೀಯರ ಆಶಯಗಳಿಗೆ ಇಲ್ಲಿನ ಭಾವನೆಗಳಿಗೆ ಪೂರಕವಾಗಿ ಒಂದು ರೀತಿಯ ಸಂಚಲನೆಯನ್ನು ಮೂಡಿಸಿದ್ದು ವಾಸ್ತವಿಕವಾಗಿ ಸತ್ಯವೂ ಕೂಡ. ನಾಡಿನ ಉದ್ದಗಲಕ್ಕೂ ಹಾಗೂ ರಾಷ್ಟ್ರದ ನಾಲ್ಕು ದಿಕ್ಕುಗಳಲ್ಲೂ ಕೂಡ ಸಹಕಾರಿ ಭಾಷ್ಯದ ಸುವರ್ಣ ಸಂಪುಟದ ಆರಂಭಕ್ಕೆ ಅನುವು ಮಾಡಿಕೊಟ್ಟಂತಹ ಸುಸಂಧರ್ಭವೂ ಕೂಡ. ನಿಧಾನವಾಗಿ ಆದರೆ ಧೃಡವಾಗಿ ಸಹಕಾರಿ ಬ್ಯಾಂಕುಗಳ ಸ್ಥಾಪನೆ ಹಾಗು ಉಗಮವು ಆಗತೊಡಗಿತು.
ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸರಿಸುಮಾರು 45000ಕ್ಕೂ ಅಧಿಕ ಸಹಕಾರಿ ಬ್ಯಾಂಕುಗಳಿದ್ದು ಸುಮಾರು 6500 ಕ್ಕೂ ಹೆಚ್ಚಿನ ಸಹಕಾರಿ ಸೌಹಾರ್ದ ಬ್ಯಾಂಕುಗಳು ಇರುತ್ತದೆ ಮತ್ತು ಬ್ಯಾಂಕುಗಳು ಸೇವಾ ಕ್ಷೇತ್ರದಲ್ಲಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ದೇಶದ ಒಟ್ಟೂ ಜಿ.ಡಿ.ಪಿ.ಯ ಕೊಡುಗೆಯಲ್ಲಿ ಸೇವಾ ಕ್ಷೇತ್ರವು ಶೆಕಡ 60% ಗಿಂತ ಹೆಚ್ಚಿನ ಪಾಲನ್ನು ಹೊಂದಿದ್ದು ನಿರಂತರವಾಗಿ ತನ್ನ ಕೊಡುಗೆಯನ್ನು ದೇಶದ ಪ್ರಗತಿಗೆ ನೀಡುತ್ತಿದೆ.
ಶತಮಾನದ ಮಗ್ಗುಲು – ತಂತ್ರಜ್ಞಾನದ ಹೊದಿಕೆ.
21ನೆಯ ಶತಮಾನದ ಆರಂಭದಲ್ಲಿ ಆದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಕ್ರಾಂತೀಯ ಅವಿಷ್ಕಾರ ಮತ್ತು ಹೊಸ ಸಂಸ್ಥೆಗಳ ಆಗಮನ ಸೇವಾಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ನಾವುಗಳು ನೋಡುವಂತೆ ಮಾಡಿತು. ಇವುಗಳಲ್ಲಿ ಅತಿ ಮುಖ್ಯವಾಗಿ ಟೆಲಿಕಮ್ಯುನಿಕೇಶನ್ ಮತ್ತು ಇಂಟರ್ನೆಟ್ ತಂತ್ರಜ್ಞಾನಗಳ ಸರಿಯಾದ ಬಳಕೆ ಹಾಗು ಜನಸಾಮನ್ಯರ ಕೈಗೆಟುಕುವ ರೀತಿಯಲ್ಲಿ, ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಪೈಪೋಟಿಯ ಫಲವಾಗಿ ಸೇವಾಶುಲ್ಕದ ದರದಲ್ಲಿ ದರ ಕಡಿತ, ಟೆಲಿ ಮೀಡಿಯಾ. ಇಂಟರ್ನೆಟ್ ಮೀಡಿಯಾ, ಇಂಟರ್ನೆಟ್ ವೆಬ್ ಪೇಜ್, ಇಂಟರ್ನೆಟ್ ವೆಬ್ ಸೈಟ್ ಗಳು, ಇ-ಕಾಮರ್ನ್ ಗಳ ಜನನಕ್ಕೆ ಕಾರಣವಾಯಿತು. ಇದರೆಲ್ಲದರ ಫಲಶ್ರುತಿ, ಪರಿಣಾಮ ನೇರವಾಗಿ ಹಣಕಾಸು ಕ್ಷೇತ್ರದ ಸೇವಾ ಮತ್ತು ಹಣಕಾಸು ವಿನಿಮಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿತು, ಮತ್ತು ಹೆಚ್ಚು ಹೆಚ್ಚು ವಿನಿಮಯ, ಅಂದರೆ ಹಣ ಹಾಕುವಿಕೆ, ಹಣ ತೆಗೆಯುವಿಕೆ, ಹಣ ಮತ್ತು ಸರಕುಗಳ ವಿನಿಮಯ, ಹಣದ ವರ್ಗಾವಣೆ, ಹಣದ ಬದಲಾಗಿ ಡೆಬಿಟ್ ಕಾರ್ಡ್. ಕ್ರೆಡಿಟ್ ಕಾರ್ಡ್, ಮ್ಯಾನೇಜರ್ ಚೆಕ್, ಬ್ಯಾಂಕರ್ ಚೆಕ್, ಹೀಗೆ ಹತ್ತು ಹಲವು ಹೊಸ ಸೇವೆಗಳ ಆಗಮನ ಹಾಗು ಅದರ ಬಳಕೆ ಆಗತೊಡಗಿತು. ಇವುಗಳ ನಡುವೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI – Reserve Bank of India)ದ ಹೊರತಾಗಿ, ಸೆಕ್ಯೂರಿಟಿ ಎಕ್ಷ್ಸೀಂದ ಬೊರ್ಡ ಆಫ್ ಇಂಡಿಯಾ (SEBI – Securities & Exchange Board of India), ಇನ್ನೂರೆನ್ಸ್ ರೆಗ್ಯುಲೇಟರಿ ದೆವಲಪ್ಟೆಂಟ್ ಅಥಾರಿಟಿ ಆಫ್ ಇಂಡಿಯಾ (IRDA – Insurance Development Authority of India ) ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI – Telecom Regulatory Authority of India). ಈ ಮೂರು ಹೊಸ ಸಂವಿಧಾನ ಸ್ವಾಯುತ್ತ ಸಂಸ್ಥೆಗಳ ಉಗಮ 21ನೇ ಶತಮಾನದ ಆರಂಭದಲ್ಲಿ ಆಯಿತು ಹಾಗು ಅದರ ಒಟ್ಟೂ ಪರಿಣಾಮವು ಸೇವಾ ಕ್ಷೇತ್ರದಲ್ಲಿ ಅಂದರೆ ಷೇರು ಪೇಟೆ, ವಿಮಾ ಕ್ಷೇತ್ರ ಹಾಗು ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣೀಭೂತವಾಯಿತು. ಇವುಗಳ ಆಗಮನದಿಂದ ಹೊಸ ಗ್ರಾಹಕರು ಸೇವಾ ಕ್ಷೇತ್ರದ ಪರಿಮಿತಿಗೆ ಆಗಮಿಸಿದರು. ಆದರೆ ಇದೆಲ್ಲಾ ಕ್ಷೇತ್ರಗಳ ಒಟ್ಟೂ ಗ್ರಾಹಕರು ಒಂದಲ್ಲ ಮತ್ತೋಂದು ರೀತಿಯಲ್ಲಿ ಸೇವೆಯನ್ನು ಪಡೆದಿದ್ದು ಹಾಗು ಅಪರೋಕ್ಷವಾಗಿ ಗ್ರಾಹಕರಿಗೆ ಸೇವೆಯನ್ನು ಒದಗಿಸಿದ್ದು ಬ್ಯಾಂಕಿಂಗ್ ಕ್ಷೇತ್ರದಿಂದಲೇ. ಯಾವುದೇ ಸೇವಾ ಕ್ಷೇತ್ರದಲ್ಲಿ ಏನೇ ಸೇವೆಯ ವಿನಿಮಯ ಆಗಬೇಕು ಎಂದರೇ ಅದಕ್ಕೆ ಪೂರಕವಾಗಿ ಹಣಕಾಸು ಕ್ಷೇತ್ರವೇ ಸೇವೆಗೆ ಬದಲಾಗಿ ಹಣದ ವಿನಿಮಯದ ಸೇವೆಯನ್ನು ಒದಗಿಸಬೇಕು. ಅಂದರೇ ಒಟ್ಟೂ ಎಲ್ಲಾ ಕ್ಷೇತ್ರದ ಮೂಲ ಹಾಗು ಉಸಿರು ಎಂದರೆ ಹಣಕಾಸು ವಲಯ, ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರವೇ. ಹಾಗೆಯೇ ಈ – ಕಾಮರ್ಸ್ ಗಳ ಸರಕುಗಳ ವಿನಿಮಯದ ಸೇವೆಯು ಕೂಡ ಕೊನೆಗೆ ಬಂದು ನಿಲ್ಲುವುದು ಬ್ಯಾಂಕಿನ ಬಾಗಿಲ ಬಳಿಯಲ್ಲೇ. ಯಾವುದೇ ವೆಬ್ ಸೈಟ್ ನಿಂದ ಖರೀದಿಸಿದ ಯಾವುದೇ ಸರಕುಗಳಿರಲಿ ಅದು, ಸ್ಲಿಪ್ ಕಾರ್ಟ್ (www.flipkart.com) ವೆಬ್ ಸೈಟ್ ಇರಬಹುದು ಅಥವಾ ಅಮೆಜಾನ್ ಡಾಟ್ ಕಾಂ (www.amazon.com) ಇರಬಹುದು ಅಥವಾ ಇನ್ನಾವುದೇ ಈ-ಕಾಮರ್ಸ್ ಸೈಟಿನಿಂದ ಖರೀದಿಸಿದ ಉತ್ಪನ್ನಗಳು ಆಗಿರಬಹುದು, ಅಂದರೆ ಯಾವುದೇ ಸರಕುಗಳಿಗೆ, ಉತ್ಪನ್ನಗಳಿಗೆ ಅಥವಾ ಸೇವೆಗಳಿಗೆ ಅಂತಿಮವಾಗಿ ಹಣವನ್ನು ಸಂದಾಯ ಮಾಡಬೇಕಾದರೆ ಅದು ಬಂದು ನಿಲ್ಲುವುದು ಬ್ಯಾಂಕಿನ ಬಾಗಿಲ ಬಳಿಯಲ್ಲೇ, ಖರೀದಿಸಿದ ಉತ್ಪನ್ನಗಳಿಗೆ ಗ್ರಾಹಕರು ಅನ್ಸೆನ್ನಲ್ಲಿ ಪೇಮೆಂಟ್ ಸಲ್ಲಿಸಬಹುದು ಇಲ್ಲದಿದ್ದರೆ ಖರೀದಿಯ ನಂತರ ಕ್ಯಾಶ್ ಆನ್ ಡೆಲಿವರಿ ಅಂದರೆ ವಸ್ತು ತಲುಪಿದ ಬಳಿಕ ಹಣವನ್ನು ಸಂದಾಯ ಮಾಡುವುದು, ಇಲ್ಲಿ ಕ್ಯಾಶ್ ಅಂದರೆ ಕರೆನ್ಸಿ ನೋಟುಗಳು ಎಂದು ಅರ್ಥವಲ್ಲ ಅಂದರೆ ವಸ್ತುವನ್ನು ಡೆಲಿವರಿ ಪಡೆದ ಬಳಿಕ ಹಣವನ್ನು ಸಂದಾಯ ಮಾಡುವ ವಿಧಾನ. ಇಲ್ಲಿಯೂ ಕೂಡ ಜನರು ಸಾಧಾರಣವಾಗಿ ಬ್ಯಾಂಕಿನ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಆನಲೈನ್ ಮೂಲಕ ಬ್ಯಾಂಕಿನ ಸೇವೆಯನ್ನು ಬಳಸುತ್ತಾರೆ
ಅರ್ಥ ಶಾಸ್ತ್ರದ ಉಸಿರು – ಹಣಕಾಸು ಕ್ಷೇತ್ರ
ಭಾರತದಲ್ಲಿ ಇರುವ ವಿವಿಧ ರೀತಿಯ ಬ್ಯಾಂಕುಗಳನ್ನು ಅರಿತುಕೊಳ್ಳೋಣ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಸಾಂವಿಧಾನಿಕವಾಗಿ ಸ್ವಾಯತ್ತ ಸಂಸ್ಥೆಯಾಗಿದ್ದು ಹಣಕಾಸು ಕ್ಷೇತ್ರದ ರೆಗ್ಯುಲೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ರೀತಿಯ ಸಂಸ್ಥೆಗಳು ಹಣಕಾಸು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರೆ ಆ ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪಾಲಿಸಬೇಕು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನೋಂದಣಿಯನ್ನು, ಅನುಮತಿಯನ್ನು ಪಡೆದಿರಬೇಕು. ಈ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಮಾರುಕಟ್ಟೆ ನಿಯತ್ರಂಕರು ಅಂದರೆ ಮಾರ್ಕೆಟ್ ರೆಗ್ಯುಲೇಟರ್ ಎಂದು ಗುರುತಿಸುತ್ತಾರೆ. ಯಾವು ದೇ ನೊಂದಾಯಿತ ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿ, ನಿಯಮಗಳನ್ನು ಪಾಲಿಸದಿದ್ದರೆ ಆ ಸಂಸ್ಥೆಗೆ ದಂಡ ವಿಧಿಸುವ ಅಥವಾ ಸೇವೆಯನ್ನು ರದ್ದುಮಾಡುವ, ಅಥವಾ ಅವರ ನೋಂದಣಿಯನ್ನು ವಜಾ ಮಾಡುವ ಅಧಿಕಾರ ರಿಸರ್ವ್ ಬ್ಯಾಂಕ್ ಆಫ್ IRDA ಇಂಡಿಯಾಗೆ ಇರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎರಡು ರೀತಿಯ ಸಂಸ್ಥೆಗಳಿಗೆ ಜನರ ಅಥವಾ ಭಾರತೀಯ ಪ್ರಜೆಗಳಿಂದ ಹಣವನ್ನು ಡಿಪಾಸಿಟ್ ಪಡೆಯುವ, ಉಂಬಳಿ ಹಣವನ್ನು ಪಡೆಯುವ ಅಥವಾ ಸಾಲವನ್ನು ನೀಡಿ ಅದಕ್ಕೆ ಬಡ್ಡಿಯನ್ನು ಪಡೆಯುವ ಅಧಿಕಾರವನ್ನು ನೀಡುತ್ತದೆ. ಒಂದು ನೋಂದಾಯಿತ (N.B.F.C. – Non Banking Financial Corporations), Non Banking Financial Corporations), ಯಾವುದೇ ನೋಂದಾಯಿತ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಯಾವ ಮಾರ್ಗಸೂಚಿಯ ಅಡಿಯಲ್ಲಿ ಹಾಗು ಯಾವ ಕಾನೂನಿನ ಪ್ರಕಾರ ನೋಂದಣಿ ಮಾಡಿಕೊಂಡಿರುತ್ತದೆ ಮತ್ತು ಅದರ ಕಾರ್ಯವ್ಯಾಪ್ತಿ, ಕ್ಷೇತ್ರ, ಬಂಡವಾಳ, ಬಂಡವಾಳದ ಸಂಗ್ರಹದ ರೀತಿ, ಪಾಲುದಾರಿಕ ಸಂಸ್ಥೆಗಳು, ಇನ್ನು ಹಲವು ವಿಭಿನ್ನ ರೀತಿಯ ಮಾನದಂಡಗಳನ್ನು ಅವಲೋಕಿಸಿ ಅವುಗಳನ್ನು ಈ ಕೆಳಗಿನ ರೀತಿಯ ಬ್ಯಾಂಕುಗಳು ಎಂದು ಗುರುತಿಸುತ್ತಾರೆ.
ಬ್ಯಾಂಕುಗಳ ಗರಡಿ ಮನೆ
Central Bank – ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
Cooperative Banks – ಕೋ-ಆಪರೇಟಿವ್ ಬ್ಯಾಂಕ್
Commercial Banks – ಕಮರ್ಷಿಯಲ್ ಬ್ಯಾಂಕ್
Regional Rural Banks – ರೀಜನಲ್ ರೂರಲ್ ಬ್ಯಾಂಕ್
Local Area Banks – ಲೋಕಲ್ ಏರಿಯಾ ಬ್ಯಾಂಕ್
Specialised Banks – ಸ್ಪೆಷಲೈಸೆಡ್ ಬ್ಯಾಂಕ್
Small Finance Banks – ಸ್ಮಾಲ್ ಫೈನಾನ್ಸ್ ಬ್ಯಾಂಕ್ / ಮೈಕ್ರೋ ಫೈನಾನ್ಸ್ ಬ್ಯಾಂಕ್
Payment Banks – ಪೇಮೆಂಟ್ ಬ್ಯಾಂಕ್
Government Banks – ಗೌರ್ನಮೆಂಟ್ ಬ್ಯಾಂಕ್
NEO Bank – ನಿಯೋ ಬ್ಯಾಂಕ್
ಇಂದು ಭಾರತದಲ್ಲಿ ಕೋ-ಆಪರೇಟಿವ್ ಬ್ಯಾಂಕುಗಳಿಗೆ ಸತತವಾಗಿ ಸವಾಲು ಎಸಗುತ್ತಿರುವುದು ಹಾಗು ಪೈಪೋಟಿಯನ್ನು ನೀಡುತ್ತಿರುವುದು ಮೈಕ್ರೋ ಫೈನಾನ್ಸ್ ಬ್ಯಾಂಕುಗಳು / ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಎನ್. ಬಿ. ಎಫ್. ಸಿ. ಗಳು (N.B.F.C.)ಗಳು, ಪೇಮೆಂಟ್ ಬ್ಯಾಂಕುಗಳು ಮತ್ತು ನಿಯೋ ಬ್ಯಾಂಕುಗಳು.
ಕಾಣದ ಬ್ಯಾಂಕುಗಳು – ಸೇವೆಯ ಕೈಗಳು.
ಎಲ್ಲಾ ಬ್ಯಾಂಕುಗಳು ಕೂಡ ಒಂದು ಸ್ಥಳದಲ್ಲಿ ಅಥವಾ ಒಂದು ನಿರ್ದಿಷ್ಟವಾದ ಜಾಗದಲ್ಲಿ, ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ ಹಾಗೂ ಗ್ರಾಹಕರೊಡನೆ ನೇರವಾಗಿ ಅಂದರೆ ಮುಖಾಮುಖಿಯಾಗಿ ಮತ್ತು ವ್ಯಕ್ತಿಗತವಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆದರೆ ಈ ಪೇಮೆಂಟ್ ಬ್ಯಾಂಕುಗಳಲ್ಲಿ, ಇಲ್ಲಿನ ಗ್ರಾಹಕರುಗಳು ನಿರ್ದಿಷ್ಟವಾಗಿ ಯಾವುದೇ ಬ್ಯಾಂಕಿನ ಸಂಬಂಧವನ್ನು ಹೊಂದಿರುವುದಿಲ್ಲ ಅಥವಾ ಹೊಂದಬೇಕಾದ ಅವಶ್ಯಕತೆಗಳು ಇರುವುದಿಲ್ಲ,ಇಲ್ಲಿ ಗ್ರಾಹಕರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಸೇವೆಯನ್ನು ಪಡೆದು ಅದಕ್ಕೆ ಸೂಕ್ತ ಶುಲ್ಕವನ್ನು ಸಂದಾಯ ಮಾಡುತ್ತಾರೆ. ಇಲ್ಲಿ ಈ ಪೇಮೆಂಟ್ ಬ್ಯಾಂಕಿನ ಮೂಲ ಕಛೇರಿಯು ಒಂದು ಕಡೆ ಇದ್ದರೆ, ಬೇರೆ ಕಡೆ ಅವರ ಕಛೇರಿಗಳು ಅಥವಾ ಬ್ರಾಂಚುಗಳು ಇರುವುದಿಲ್ಲ. ಇಲ್ಲಿ ಎಲ್ಲವೂ ಕೂಡ ಪೇಮೆಂಟ್ ಬ್ಯಾಂಕಿನೊಂದಿಗೆ ನೋಂದಾಯಿಸಿಕೊಂಡ ಫ್ರಾಂಚೈಸಿಗಳು ಹಾಗು ಗ್ರಾಹಕ ಸೇವಾ ಕೇಂದ್ರಗಳೇ ಎಲ್ಲವನ್ನು ನಿಭಾಯಿಸುತ್ತಾರೆ. ಈ ಮಧ್ಯವರ್ತಿಗಳ ಅಥವಾ ಫ್ರಾಂಚೈಸಿಗಳ ಮುಖೇನ ಗ್ರಾಹಕರು ತಮಗೆ ಬೇಕಾದ ಅನುಕೂಲಕರವಾದ ಸೇವೆಯನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಎಲ್ಲವೂ ಕೂಡ ತಂತ್ರಜ್ಞಾನದ ಮುಖೇನ ನಡೆಯುತ್ತದೆ. peysella ಏರ್ಟೆಲ್ ಪೇಮೆಂಟ್ ಬ್ಯಾಂಕ್ (AIRTEL PAYMENT BANK) ಇದಕ್ಕೆ ಒಂದು ಉದಾಹರಣೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ಒಮ್ಮೆ ಮಾತ್ರ ಅಥವಾ ಹಲವು ಬಾರಿ ಒಂದೇ ಫ್ರಾಂಚೈಸಿ ಔಟೈಟ್ (Franchise Outlet) ಅಥವಾ ಬೇರೆ ಬೇರೆ ಫ್ರಾಂಚೈಸಿ ಔಟೈಟ್ (Franchise Outlet) ಗಳಲ್ಲಿ ತಮಗೆ ಬೇಕಾದ ಸೇವೆಯನ್ನು ಬಳಸಿಕೊಳ್ಳಬಹುದು ಅಥವಾ ಪಡೆದುಕೊಳ್ಳಬಹುದು. ಇಲ್ಲಿ ಗ್ರಾಹಕರು ತಮ್ಮ ವ್ಯವಹಾರಗಳನ್ನು ತಮ್ಮ ಬ್ಯಾಂಕಿನ ಮೂಲ ಖಾತೆಯೊಂದಿಗೆ ಜೋಡಿಸಿಕೊಂಡು ವ್ಯವಹಾರವನ್ನು ನಿರ್ವಹಿಸಿಬಹುದು ಅಥವಾ ಗ್ರಾಹಕರು ಯಾವುದೇ ಖಾತೆಯನ್ನು ಅಥವಾ ಬ್ಯಾಂಕಿನೊಂದಿಗೆ ಸಂಬಂಧವನ್ನು ಇಲ್ಲದಿದ್ದರೂ ಕೂಡ ಫ್ರಾಂಚೈಸಿ ಓನರ್ ಅಥವಾ ಫ್ರಾಂಚೈಸಿ ಮಾಲೀಕನ ನೆರವಿನೊಂದಿಗೆ ತಮಗೆ ಬೇಕಾದ ಸೇವೆಯನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ. ಇಲ್ಲಿ ಗ್ರಾಹಕರ ಕೆ.ವೈ.ಸಿ. ಬಗ್ಗೆ ಅಷ್ಟೇನು ಮಹತ್ವ ಇರುವುದಿಲ್ಲ. ಏಕೆಂದರೆ,ಇಲ್ಲಿ ಗ್ರಾಹಕ ನಿರಂತರ ಸೇವೆಗಳಿಗಾಗಿ ಈ ವ್ಯವಸ್ಥೆಯನ್ನು ಅವಲಂಬಿಸಿರುವುದಿಲ್ಲ, ಕೇವಲ ತಾತ್ಕಾಲಿಕವಾಗಿ ಹಾಗೂ ತಾತ್ಕಾಲಿಕ ಸೇವೆಗಳಿಗಾಗಿ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾನೆ. ಆದರೆ ಇದು ಕೂಡ ಒಂದು ಮುಖರಹಿತ ಅಥವಾ ಮುಖಾಮುಖಿ ಅಲ್ಲದ ಬ್ಯಾಂಕಿಂಗ ಸೇವೆಯಾಗಿರುತ್ತದೆ ಬ್ಯಾಂಕುಗಳ ಕುಸ್ತಿ ಕಾಳಗದಲ್ಲಿ – ತಂತ್ರಜ್ಞಾನದ ಕಾಣದ ಪಟು ಈ ಪೇಮೆಂಟ್ ಬ್ಯಾಂಕುಗಳಿಗೂ ಮೀರಿ ಮತ್ತೊಂದು ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದೆ ಹಾಗೂ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಫಿನ್ ಟೆಕ್ ಕಂಪನಿಗಳು ಅಥವಾ ಫೈನಾನ್ಸಿಯಲ್ ಟೆಕ್ನಾಲಜಜೀಸ್ ಎಂಬ ಕಂಪನಿಗಳ ಮುಖೇನ ನೆಡೆಯುತ್ತದೆ.
ಮುಂದುವರೆಯುವುದು..
ಶ್ರೀ.ಎಸ್.ಎಸ್ ಮೂರ್ತಿ
ಅರ್ಥ್ಂ ನಿರ್ದೇಶಕರು.