ಬ್ಯಾಂಕುಗಳ ಕುಸ್ತಿ ಕಾಳಗದಲ್ಲಿ – ತಂತ್ರಜ್ಞಾನದ ಕಾಣದ ಪಟುಗಳು
ಈ ಪೇಮೆಂಟ್ ಬ್ಯಾಂಕುಗಳಿಗೂ ಮೀರಿ ಮತ್ತೊಂದು ವ್ಯವಸ್ಥೆಯು ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದೆ ಹಾಗೂ ಜನಸಾಮಾನ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ಫಿನ್ ಟೆಕ್ ಕಂಪೆನಿಗಳು ಅಥವಾ ಫೈನಾನ್ಸಿಯಲ್ ಟೆಕ್ನಾಲಜಜೀಸ್ ಎಂಬ ಕಂಪನಿಗಳ ಮುಖೇನ ಸೇವೆಯನ್ನಾಗಲಿ ಅಥವಾ ಕಾರ್ಯವನ್ನಾಗಲಿ ನಿರ್ವಹಿಸುತ್ತಾ ಸೇವೆಯನ್ನು ನೀಡುತ್ತಿದೆ.ಇವುಗಳನ್ನು ನಿಯೋ ಬ್ಯಾಂಕ್ – NEO Bank ಎಂದು ಕರೆಯುತ್ತಾರೆ.
ಈ ನಿಯೋ ಬ್ಯಾಂಕುಗಳು ಹಣಕಾಸು ಸೇವಾ ಕ್ಷೇತ್ರದ ವಹಿವಾಟು ಸಂಸ್ಥೆಗಳಾಗಿದ್ದು ಇವುಗಳು ಸೇವೆಗಳನ್ನು ಇಂಟರ್ನೆಟ್ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ರಿ ಮೊಬೈಲ್ ತಂತ್ರಜ್ಞಾನ, ಬ್ಲಾಕ್ ಚೈನ್ ತಂತ್ರಜ್ಞಾನಗಳನ್ನು ಕ್ರೋಡಿಕರಿಸಿಕೊಂಡು ಸಮರ್ಪಕವಾಗಿ ಬಳಸಿಕೊಂಡು ತನ್ನ ಗ್ರಾಹಕರಿಗೆ ಎಲ್ಲಾ ಸೇವೆಗಳನ್ನು ಆನ್ ಲೈನ್ನಲ್ಲಿ ನೀಡುವ ಸಂಸ್ಥೆಗಳಾಗಿರುತ್ತದೆ. ಈ ಸಂಸ್ಥೆಗಳು ತಮ್ಮ ಎಲ್ಲಾ ಗ್ರಾಹಕರಿಗೆ ಬ್ಯಾಂಕಿನ ಸಾಂಪ್ರದಾಯಿಕವಾದ ಎಲ್ಲಾ ತರಹದ ಸೇವೆಗಳನ್ನು ಇಂಟರ್ನೆಟ್ ವೆಬ್ ಪೇಜ್ ಅಥವಾ ಮೊಬೈಲ್ ಆಪ್ ಗಳ ಮುಖೇನ ಸೇವೆಗಳನ್ನು ಒದಗಿಸುತ್ತವೆ. ಇಲ್ಲಿ ಎಲ್ಲಾ ವ್ಯವಹಾರವೂ, ವಿನಿಮಯವು ಡಿಜಿಟಲ್ ತಂತ್ರಜ್ಞಾನ ಅಥವಾ ಇಂಟರ್ನೆಟ್ ಎಲ್ಲವು ಕೂಡ ತಮ್ಮ ಬ್ರಾಂಚುಗಳನ್ನು, ಕಛೇರಿಗಳನ್ನು ಅಸ್ತಿತ್ವದಲ್ಲಿ ಹೊಂದಿರುವುದಿಲ್ಲ. ಎಲ್ಲಾ ವ್ಯವಹಾರಗಳು ಬ್ರಾಂಚ್ ರಹಿತ, ಆನ್ಸೆನ್ ಮುಖೇನ ಆಗುತ್ತದೆ. ಈ ವ್ಯವಸ್ಥೆಯ ತಂತ್ರಜ್ಞಾನವನ್ನು ಗ್ರಾಹಕರು ಅಥವಾ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಹೆಚ್ಚಾಗಿ ತಮ್ಮ ದೈನಂದಿಕ ಜೀವನದಲ್ಲಿ ಬಳಸುತ್ತಾರೆ ಹಾಗು ಈ ವ್ಯವಸ್ಥೆಯಡಿಯಲ್ಲಿ ಸೇವೆಯನ್ನು ಪಡೆದುಕೊಳ್ಳುತ್ತಾರೆ. ನಿಯೋ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬೇಕಾದ ಸೇವೆಗಳು ಅಂದರೆ ಖಾತೆಯನ್ನು ತೆರೆಯುವುದು, ಕೆ.ವೈ.ಸಿ. ಮಾಡುವುದು, ಹಣವನ್ನು ವರ್ಗಾವಣೆ ಮಾಡುವುದು, ಸಾಲ ಪಡೆದುಕೊಳ್ಳುವುದು, ಸಾಲದ ಕಂತುಗಳನ್ನು ಪಾವತಿಸುವುದು, ಸಾಲವನ್ನು ನೀಡುವುದು, ಡೆಬಿಟ್ ಕಾರ್ಡ್ ನೀಡುವುದು. ಕ್ರೆಡಿಟ್ ಕಾರ್ಡ್ ನೀಡುವುದು ಹೀಗೆ ಹಲವಾರು ಸೇವೆಗಳನ್ನು ನೂರಕ್ಕೆ ನೂರರಷ್ಟು ಆನ್ಸೆನ್ನಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಡುತ್ತಾರೆ.
ಇಲ್ಲಿ ಅತಿ ಮುಖ್ಯವಾದ ವಿಷಯವೆಂದರೆ ಭಾರತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಯಾವುದೇ ಬ್ಯಾಂಕು ನೂರಕ್ಕೆ ನೂರರಷ್ಟು ಸೇವೆಗಳನ್ನು ತಂತ್ರಜ್ಞಾನದ ಮುಖೇನವೇ ಒದಗಿಸಲು ಬರುವುದಿಲ್ಲ. ಆದ್ದರಿಂದ ಯಾವುದೇ ನಿಯೋ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ బ్యాంకింగా ಲೈಸೆನ್ಸ್ ಹೊಂದಿರುವುದಿಲ್ಲ, ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿಯಿಂದ ಬ್ಯಾಂಕುಗಳ ಸೇವೆಯನ್ನು, ಯಾವುದಾದರೂ ಬ್ಯಾಂಕುಗಳ ಸಹಭಾಗಿತ್ವ, ಪಾಲುದಾರಿಕೆ ಅಥವಾ ಒಡಂಬಡಿಕೆಯನ್ನು ಮಾಡಿಕೊಂಡು ಸೇವೆಯನ್ನು ಗ್ರಾಹಕರಿಗೆ ನೀಡಬಹುದು.
ಹೊಸ ಕ್ಷೇತ್ರಕ್ಕೆ – ಹಳೇ ಪೋಷಕರು
ಭಾರತದಲ್ಲಿ ಈಗಾಗಲೇ ಈ ತರಹದ ಸಂಸ್ಥೆಗಳು ಹಲವಾರು ವರ್ಷಗಳಿಂದ ತಮ್ಮ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ. PayTm – ಪೇಟಿಎಂ, Razor Pay – ರೇಜರ್ ಪೇ, Insta Pay – ಇನ್ಸಾ ಪೇ, Jio Payment Bank – ಜಿಯೋ ಪೇಮೆಂಟ್ ಬ್ಯಾಂಕು, ಇವುಗಳೆಲ್ಲವೂ ಕೂಡಾ ಇದೇ ಸಾಲಿಗೆ ಸೇರುತ್ತವೆ. Kotak 811 – Zero Balance A/c – ಕೋಟ್ಯಾಕ್ 811 ಝೀರೋ ಬ್ಯಾಲೆನ್ಸ್ ಅಕೌಂಟ್ ಸೇವೆಯು ಕೂಡ ಈ ಪರಿ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿ ವಿಶೇಷವೇನೆಂದರೆ Kotak 811 Zero Balance A/c – ಕೋಟ್ಯಾಕ್ 811 ಝೀರೋ ಬ್ಯಾಲೆನ್ಸ್ ಅಕೌಂಟ್ ಸೇವೆಯು ಕೊಟಾಕ್ ಬ್ಯಾಂಕಿನವರೇ ಆರಂಭಿಸಿದ ಸೇವೆಯಾಗಿರುತ್ತದೆ. ಇಲ್ಲಿ ನಿರ್ವಹಣಾ ವೆಚ್ಚವು ಕಡಿಮೆ ಇರುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿ ಕಂಡು ಬರುತ್ತಿದೆ.
ಮತ್ತೊಂದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿನಿಯಮದ ಪ್ರಕಾರ ಪೇಮೆಂಟ್ ಬ್ಯಾಂಕುಗಳು ಕ್ರೆಡಿಟ್ ಕಾರ್ಡನ್ನು ಹಾಗು ಸಾಲ / ಲೋನ್ ನೀಡುವ ಸೇವೆಯನ್ನು ಮಾಡುವ ಹಾಗಿಲ್ಲ, ಆದರೆ ನಿಯೋ ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಸೇವೆಯನ್ನು ಮತ್ತು ಸಾಲ ನೀಡುವ ಸೇವೆಯನ್ನು ಕೂಡ ನೀಡಬಹುದು.
ಜಂಟಿ ಕಾರ್ಯಾಚರಣೆ – ಕೋ-ಆಪರೇಟಿವ್ ಕ್ಷೇತ್ರಕ್ಕೆ ವರದಾನ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮಿನಿಸ್ಟರಿ ಆಫ್ ಕೋ ಆಪರೇಷನ್ ಎರಡು ಸಾಂವಿಧಾನಿಕ ದಿಗ್ಗಜಗಳು ಒಟ್ಟಾಗಿ ಪೆಮೆಂಟ್ ಬ್ಯಾಂಕುಗಳು ಹಾ ಗೂ ನಿಯೋ ಬ್ಯಾಂಕುಗಳ ಸೇವೆಯನ್ನು ಮುಕ್ತವಾಗಿ ಕೋ-ಆಪರೇಟಿವ್ ಬ್ಯಾಂಕುಗಳು ಬಳಸಿಕೊಳ್ಳಲು ಅವಕಾಶವನ್ನು ಮಾಡಿಕೊಡಲು ಅದಕ್ಕೆ ಪೂರಕವಾದ ನಿಯಮಗಳನ್ನು ತರಲು ಮತ್ತು ಈಗ ಇರುವ ನಿಯಮಾವಳಿಗಳನ್ನು ಬದಲಾಯಿಸಲು ದೃಢವಾದ ಹೆಜ್ಜೆಯನ್ನು ಇಟ್ಟಿದೆ. ಅಂದರೆ ಎರಡು ಸೇವೆಗಳನ್ನು ಕೋ-ಆಪರೇಟಿವ್ ಬ್ಯಾಂಕುಗಳು ಈ ಸಂಸ್ಥೆಗಳ ಜೊತೆಯಲ್ಲಿ ಪಾಲುದಾರಿಕೆ ಅಥವಾ ಒಡಂಬಡಿಕೆ ಅಥವಾ ಸಹಭಾಗಿತ್ವದಲ್ಲಿ ತಮ್ಮ ಗ್ರಾಹಕರಿಗೆ ಸೇವೆಗಳನ್ನು ನೀಡುವ ಅವಕಾಶವನ್ನು ಮಾಡಿಕೊಡಲು ಪ್ರಯತ್ನವನ್ನು ಆರಂಭಿಸಿದೆ. ಈ ಕಾರ್ಯವು ಭಾರತ ಸರ್ಕಾರದ Financial Inclusion (F.I.) – ಫೈನಾನ್ಸಿಯಲ್ ಇನ್ಕ್ಲೂ ಷನ್ – ಪಾಲಿಸಿಯ ಅಂಗದ ಮುಂದುವರಿದ ಭಾಗವಾಗಿ ಈ ಸೇವೆಗಳನ್ನು ಕೋ-ಆಪರೇಟಿವ್ ಸಂಸ್ಥೆಗಳ ಮುಖೇನಾ ಭಾರತದ ಎಲ್ಲ ಮನೆಗಳಿಗೂ, ಗೃಹಗಳಿಗೂ, ಪ್ರಜೆಗಳಿಗೂ, ಗೃಹ ಕೈಗಾರಿಕೆಗಳಿಗೂ ತಲುಪಿಸುವ ಒಂದು ವಿಸ್ತ್ರತ ಯೋಜನೆಯ ಕಾರ್ಯವನ್ನು ಹಮ್ಮಿಕೊಂಡಿದೆ. ಇದು ಕೋ-ಆಪರೇಟಿವ್ ಬ್ಯಾಂಕುಗಳಿಗೆ ಒಂದು ಸುವರ್ಣ ಅವಕಾಶ. ಇದರಿಂದ ತಮ್ಮ ಸೇವಾ ರೀತಿಯನ್ನು, ಸೇವೆಯ ವಿಧಾನವನ್ನು, ಸೇವಾ ಕಾರ್ಯಕ್ಷಮತೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದು ತಮ್ಮ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಅವಕಾಶವನ್ನು ಒದಗಿಸುತ್ತದೆ. ಹೊಸ ಗ್ರಾಹಕರನ್ನು ಈ ಸೇವೆಗಳ ಮುಖೇನ ತನ್ನ ಒಡಲಿಗೆ ಬರಮಾಡಿಕೊಳ್ಳಲು ಅಥವಾ ಸೆಳೆದುಕೊಳ್ಳಲು, ತನ್ನ ಮಾರುಕಟ್ಟೆ ಕ್ಷೇತ್ರವನ್ನು ವಿಸ್ತರಿಸುವ ಅಥವಾ ವಿಸ್ತಾರ ಮಾಡಿಕೊಳ್ಳ ಬಯಸುವ ಕೋ-ಆಪರೇಟಿವ್ ಸಂಸ್ಥೆಗಳಿಗೆ ವರದಾನವಗಿದೆ. ಮಾರುಕಟ್ಟೆ ವಿಭಾಗವದ ಕಾರ್ಯ ಕ್ಷಮತೆಯನ್ನು ಪರಿಪೂರ್ಣವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಎರಡು ಸೇವೆಗಳ ಸಮಯೋಚಿತ ಸದ್ಬಳಕೆಯನ್ನು ಮಾಡಿಕೊಂಡರೆ, ಅಥವಾ ಮಾಡಿಕೊಂಡಂತಹ ಕೋ-ಆಪರೇಟಿವ್ ಬ್ಯಾಂಕುಗಳು ನಿಜವಾಗಲೂ ತಮ್ಮ ಗ್ರಾಹಕರನ್ನು ಹಾಗು ಬಂಡವಾಳವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಪೂರಕವಾದಂತಹ ಟ್ರೈನಿಂಗ್, ಮಾನವ ಸಂಪನ್ಮೂಲಗಳ ಕ್ರೋಢೀಕರಣ, ಮಾನವ ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಭಾರತ ಸರ್ಕಾರವು ಹಣಕಾಸಿನ ಸಹಾಯವನ್ನು ನೀಡಲು ನೂರಾರು ಕೋಟಿಗಳ ಹಣವನ್ನು ಈಗಾಗಲೆ ಮೀಸಲಾಗಿ ಇಟ್ಟಿರುತ್ತದೆ.
ಆರ್ಥಿಕತೆಗೆ ಸರ್ಕಾರದ ಸಹಕಾರ – ಎಲ್ಲರನ್ನೊಳಗೊಂಡಂತೆ.
ಭಾರತ ಸರ್ಕಾರವು ತನ್ನ ಎಲ್ಲಾ ಪ್ರಜೆಗಳಿಗೂ ಬ್ಯಾಂಕಿಂಗ್ ಸೌಲಭ್ಯವನ್ನು ನೀಡಲು ಮತ್ತು ಬ್ಯಾಂಕಿಂಗ್ ಸೌಲಭ್ಯವನ್ನು ವಿಸ್ತರಿಸಲು ಸಾಂಪ್ರದಾಯಿಕ ಬ್ಯಾಂಕುಗಳಿಗಿಂತ ಅತಿ ಹೆಚ್ಚಿನ ವಿಶ್ವಾಸವನ್ನು ಕೋ-ಆಪರೇಟಿವ್ ಬ್ಯಾಂಕುಗಳ ಮೇಲೆ ಇಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ
ಇಲ್ಲಿ ಇದರ ಬಳಕೆಯನ್ನು ಯಾರು ಎಷ್ಟರಮಟ್ಟಿಗೆ, ಎಷ್ಟು ಕಡಿಮೆ ಅವಧಿಯಲ್ಲಿ ಮತ್ತು ಅತ್ಯಂತ ವೇಗವಾಗಿ ಬಳಸಿಕೊಳ್ಳುತ್ತಾರೆ 151 ಎಂಬುದೇ ಗುಣಾತ್ಮಕವಾದಂತಹ ಅಂಶ.
ತಂತ್ರಜ್ಞಾನದ ಸೇವಾ ತಾಲೀಮಿನಲ್ಲಿ ಬ್ಯಾಂಕುಗಳ ಸೇವಾ ಕ್ಷೇತ್ರ
ಹಾಲಿ ತಂತ್ರಜ್ಞಾನ ಬಳಕೆಯ ಮತ್ತು ತಂತ್ರಜ್ಞಾನ ಸಹಭಾಗಿತ್ವದಲ್ಲಿ ಬ್ಯಾಂಕುಗಳ ನೀಡುತಿರುವ ಸೇವೆಗಳು ಈ ಕೆಳಗಿನಂತೆ ಇದೆ.
ರಾಷ್ಟ್ರೀಕ್ರುತ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರ ಯಾವುದೇ ಖಾತೆಯೊಂದಿಗೆ Debit Card – ಡೆಬಿಟ್ ಕಾರ್ಡ್ ಸೇವೆ, Rupay Card – ರೂಪೇ ಕಾರ್ಡ್ ಸೇವೆ, Gift Card – ಗಿಫ್ಟ್ , ಕಾರ್ಡ್ ಸೇವೆ Internet Banking ಇಂಟರ್ನೆಟ್ ಬ್ಯಾಂಕಿಂಗ್ ಸೇವೆ, Mobile Banking – ಮೊಬೈಲ್ ಬ್ಯಾಂಕಿಂಗ್ ಸೇವೆ, Net Banking – , ನೆಟ್ ಬ್ಯಾಂಕಿಂಗ್ ಸೇವೆ I.M.P.S. ಐ. ಎಮ್. ಪಿ ಎಸ್. ಸೇವೆ, NEFT – ಎನ್. ಈ ಎಫ್. ಟಿ – ನೆಫ್ಟ್ ಸೇವೆ, RTGS – ಆರ್. ಟಿ. ಎಸ್. ಸೇವೆ BHIM – ಭೀಮ್ ಸೇವೆ, NACH – ಎನ್. ಏ. ಸಿ. ಹೆಚ್. ಸೇವೆ, NETC FastTag – ಎನ್. ಈ .ಟಿ. 2., ಫಾಸ್ಟ್ ಟ್ಯಾಗ್ ಸೇವೆ*99# Mobile SMS Services *99# 2. 2. 2. ໖, CTS – ಸಿ. ಟಿ. ಎಸ್. ಸೇವೆ, NFS – ಎನ್. ಎಫ್. ಎಸ್. ಸೇವೆ, AePS – ಏ. ಈ. ಪಿ. ಎಸ್. ಸೇವೆ, BHIM Aadhar – ಭೀಮ್ ಆಧಾರ್ ಸೇವೆ, e – RUPY ಈ ರುಪಿ ಸೇವೆ, AutoPay – ಆಟೋ ಪೇ ಸೇವೆ, UPI Payment ಪೇಮೆಂಟ್ ಸೇವೆ, UPI Number … Payment ನಂಬರ್ ಪೇಮೆಂಟ್ ಸೇವೆ, Bharath Bill Pay – BBPS – ಭಾರತ್ ಬಿಲ್ಲ್ .ಬಿ.ಪಿ.ಎಸ್ ಸೇವೆ, I.P.O, A.S.B.A ಅಸ್ಬಾ ಸೇವೆ, ಕ್ಯೂ.ಆರ್. ಕೋಡ್, Mini ATM – 2, mPos M/с. ಎಂ. ಫೊಸ್ ಮೆಷಿನ್ ಸೇವೆ ಇವುಗಳು ಹಾಗು ಇನ್ನು ಹಲವಾರು ತಂತ್ರಜ್ಞಾನದ ಸೇವೆಗಳನ್ನು ಸಹಯೋಗದಿಂದ e-RUPI ಭಾರತ ಸರ್ಕಾರದ ಅತ್ಯಂತಹ ಮಹತ್ವದ ನಿರ್ದಿಷ್ಟವಾದ ಸರಕು ಅಥವಾ ಸೇವೆಗಳಿಗೆ ನಿರ್ದಿಷ್ಠವಾದ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಮಹತ್ವದ ಉನ್ನತೀಕೃತ ತಂತ್ರಾಂಶ ವ್ಯವಸ್ಥೆಯ ಪದ್ದತಿಯ ಅನುಷ್ಠಾನವು ಇದಾಗಿದೆ.
e-RUPI ಭಾರತ ಸರ್ಕಾರದ ಅತ್ಯಂತಹ ಮಹತ್ವದ ನಿರ್ದಿಷ್ಟವಾದ ಸರಕು ಅಥವಾ ಸೇವೆಗಳಿಗೆ ನಿರ್ದಿಷ್ಠವಾದ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಮಹತ್ವದ ಉನ್ನತೀಕೃತ ತಂತ್ರಾಂಶ ವ್ಯವಸ್ಥೆಯ ಪದ್ದತಿಯ ಅನುಷ್ಠಾನವು ಇದಾಗಿದೆ.
ಆಧಾರವೇ ಆಧಾರ
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಬ್ಯಾಂಕ್ ಮಿತ್ರ ಯೋಜನೆಯಡಿಯಲ್ಲಿ ಬ್ಯಾಂಕಿನ ಹಲವು ಸೇವೆಗಳನ್ನು ಬೆರಳಚ್ಚು ಹಾಗೂ ಆಧಾರ್ ನಂಬರ್ ಮುಖೇನ ಸೇವೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿತ್ತದೆ.ಇದನ್ನು AePS(Aadhar enabled Payment Services / System) – ۵. ಇ. ಪಿ. ಎಸ್. – ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಎಂದು ಗುರುತಿಸಬಹುದು. ಅತಿಹೆಚ್ಚಾಗಿ D.B.T Direct Benefit Transfer – ಡಿ.ಬಿ.ಟಿ. ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ ಮತ್ತು D.S.B. – Enquiry Prepaid Card Door Step Banking – ಡಿ. ಎಸ್. ಬಿ. – ಡೋರ್ ಸ್ಟೆಪ್ ಬ್ಯಾಂಕಿಂಗ್ ಇವುಗಳಲ್ಲಿ ಈ ಸೇವೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.
ಭಾರತ ಸರ್ಕಾರವು ಕೋ- ಆಪರೇಟಿವ್ ಬ್ಯಾಂಕುಗಳಿಗೆ ತಮ್ಮ ಕಾರ್ಯಕ್ಷೇತ್ರ ವಿಸ್ತಾರಕ್ಕೆ, ಆದಾಯ ವೃದ್ಧಿಗೆ ಮತ್ತು ಬಂಡವಾಳ ಹೂಡಿಕೆಗೆ ಹಲವು ಯೋಜನೆಗಳನ್ನು ತಂದಿದೆ.
ಮುಂದುವರೆಯುವುದು.
ಎಸ್.ಎಸ್.ಮೂರ್ತಿ
ಅರ್ಥ್ಂ ನಿರ್ದೇಶಕರು.