ಭಾರತ ಸರ್ಕಾರದಿಂದ ನಿಶ್ಚಿತ ಬಂಡವಾಳಕ್ಕೆ ನಿಶ್ಚಿಂತೆಯ ಭದ್ರ ಬುನಾದಿ.
ಮೊದಲನೆಯದಾಗಿ ಇನ್ನು ಮುಂದೆ ಕೋ-ಆಪರೇಟಿವ್ ಬ್ಯಾಂಕುಗಳು ಕೂಡ ಜನಸಾಮಾನ್ಯರಿಂದ ಬಂಡವಾಳವನ್ನು ನಿಶ್ಚಿತ ಅವಧಿಗೆ Debentures ಡಿಬೆಂಚರ್ ಮುಖೇನ ಪಡೆದುಕೊಳ್ಳಬಹುದು.Fixed Deposit – ಫಿಕ್ಸೆಡ್ ಡಿಪಾಸಿಟ್ ಹಾಗೂ Debentures – ಡಿಬೆಂಚರುಗಳಿಗೆ ಇರುವ ಮೂಲ ವ್ಯತ್ಯಾಸವೇನೆಂದರೆ, ಫಿಕ್ಸೆಡ್ ಡಿಪಾಸಿಟ್-ನಲ್ಲಿ ಗ್ರಾಹಕ ಯಾವಾಗಬೇಕಾದರೂ ಡಿಪಾಸಿಟ್ ಹಣವನ್ನು ವಾಪಾಸು ಪಡೆದುಕೊಳ್ಳಬಹುದು, ಆದರೆ ಡಿಬೆಂಚರ್-ಗಳಲ್ಲಿ ನಿಶ್ಚಿತ ಮತ್ತು ಸೀಮಿತ ಅವಧಿಗೆ ಮುನ್ನ ಹಣವನ್ನ ವಾಪಸ್ ತೆಗೆದುಕೊಳ್ಳಲು ಬರುವುದಿಲ್ಲ. ಇದರಲ್ಲೂ ಕೂಡಾ Convertible Debentures – Non-Convertible Debentures ನಾನ್ ឥ Partly Convertible Debentures ಪಾರ್ಟಿ ಕನ್ವರ್ಟಿಬಲ್ ಡಿಬೆಂಚರ್ಸ್ ಎಂದು ನೀಡಲು ಅವಕಾಶವಿರುತ್ತದೆ.
- Convertible Debentures – ಡಿಬೆಂಚರ್ಸನಲ್ಲಿ ಹೂಡಿದ ಹೂಡಿಕೆಯ ಹಣ ನಿಯಮಿತ ಕಾಲಾವಧಿಯ ನಂತರ ಹಣವು ಷೇರುಗಳಾಗಿ ಪರಿವರ್ತಿತವಾಗುತ್ತದೆ.
- Non-Convertible Debentures ಕನ್ವರ್ಟಿಬಲ್ ಡಿಬೆಂಚರ್-ನಲ್ಲಿ ಹೂಡಿದ ಹೂಡಿಕೆಯ ಹಣ ಗ್ರಾಹಕನಿಗೆ ನಿಯಮಿತ ಮತ್ತು ಸೀಮಿತ ಅವಧಿಯ ನಂತರ ಪೂರ್ಣಪ್ರಮಾಣದಲ್ಲಿ ವಾಪಸ್ ಸಿಗುತ್ತದೆ.
- Partly Convertible Debentures ಪಾರ್ಟಿ ಕನ್ವರ್ಟಿಬಲ್ ಡಿಬೆಂಚರ್ಸನಲ್ಲಿ ಹೂಡಿದ ಹೂಡಿಕೆಯ ಹಣ ಗ್ರಾಹಕನಿಗೆ ನಿಯಮಿತ ಕಾಲಾವಧಿಯ ನಂತರ ಪೂರ್ವ ನಿಗದಿಯಾದ ಪ್ರಮಾಣದ ಅಂಶಗಳಲ್ಲಿ ಸ್ವಲ್ಪ ಹಣ ಷೇರುಗಳಾಗಿ ಮತ್ತು ಉಳಿದ ಅಂಶದ ಹೂಡಿಕೆಯ ಹಣ ಮೂಲ ಹಣವೆಂದು ಪರಿಗಣಿಸಿ ಅದನ್ನು ವಾಪಸ್ ಮಾಡುತ್ತಾರೆ.
ಈ ಡಿಬೆಂಚರ್ಸನ ಅವಕಾಶದ ನಿರ್ಧಾರವು ಕೋ-ಆಪರೇಟಿವ್ ಬ್ಯಾಂಕುಗಳಿಗೆ ದೀರ್ಘಕಾಲದ ನಿಶ್ಚಿತ ಬಂಡವಾಳಕ್ಕೆ ಅನುವು ಮಾಡಿಕೊಡುತ್ತದೆ.
ಮನೆಯೇ ಸೇವಾ ಆಲಯ
ಇನ್ನು D.B.T – Direct Benefit Transfer – ಡಿ.ಬಿ.ಟಿ.- ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಮತ್ತು D.S.B. – Door Step Banking ಇವು ಬ್ಯಾಂಕ್ಗಳ ಸೇವಾ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೆ ಮೂಡಿಸಿದೆ. ಆಗಲೇ ಕೆಲವು ಸಹಕಾರಿ ಕ್ಷೇತ್ರದ ಸೌಹಾರ್ದ ಬ್ಯಾಂಕುಗಳು ಕೆಲವು ತಂತ್ರಜ್ಞಾನಗಳ ನ್ನು ಮತು ತಂತ್ರಜ್ಞಾನಪೂರಕ ಸಾಧನಗಳನ್ನು ಬಳಸಿಕೊಂಡು ಬೆರಳಚ್ಚು ಸಾಧನ Finger Scanner Print ఛింగరా ಪ್ರಿಂಟ್ ಸ್ಕ್ಯಾನರ್ ಬಳಸಿ ನಿತ್ಯ ಪಿಗಿ – ಡೈಲಿ ಪಿಗ್ಗಿ ಕಲೆಕ್ಷನ್ ಮಾಡುತ್ತಿದ್ದಾರೆ. ಸಂಗ್ರಹ ಇನ್ನು ಕೆಲವು ಕಡೆ ಡೈಲಿ ಈ.ಎಮ್.ಐ. ನಿತ್ಯ ಈ.ಎಮ್.ಐ. ಗಳನ್ನು ವಸೂಲಿ ಮಾಡುತ್ತಿದ್ದಾರೆ, ಇನ್ನು ಕೆಲವು ಸಂಧರ್ಭಗಳಲ್ಲಿ ಮಾಸಿಕ ಈ.ಎಮ್.ಐ. ಗಳನ್ನು ಕೂಡ ಈ ತಂತ್ರಜ್ಞಾನಗಳ ಮೂಲಕ ಮಾಡಿ ಅಲ್ಲಿಯೇ ರಸೀದಿಯನ್ನು ಕೊಡುತ್ತಿದ್ದಾರೆ.
ನೇರ ನೇರಾ – ಮುಖಾ ಮುಖಿ
ಇನ್ನು D.B.T Direct Benefit Transfer ಡಿ.ಬಿ.ಟಿ.- ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್-ನ ಖಾತೆದಾರರಿಗೆ ಅಂದರೆ, ಸಂಧ್ಯಾ ಸುರಕ್ಷ ಯೋಜನೆಯ ಫಲಾನುಭವಿಗಳು, ವಿಧವಾ ಪೆನ್ದನ್ ಯೋಜನೆಯ ಫಲಾನುಭವಿಗಳು, ವಯೋವೃದ್ಧರಿಗೆ ಸಿಗುವ ಮಾಸಿಕ ಗೌರವ ಧನದ ಯೋಜನೆಯ ಫಲಾನುಭವಿಗಳು, ಸರ್ಕಾರದ ಯೋಜನೆಗಳ ಫಲಾನುಭವಿಗಳು. ಸ್ಕಾಲರ್-ಶಿಪ್ ಯೋಜನೆಗಳ ವಿಧ್ಯಾರ್ಥಿಗಳು ಮತ್ತು ಫಲಾನುಭವಿಗಳು, ಪಿ. ಎಂ. ಕಿಸಾನ್ ಯೋಜನೆಯ ಫಲಾನುಭವಿಗಳು, ಮಹಿಳಾ ಮತು ಮಕ್ಕಳ ಕಲ್ಯಾಣ ಯೋಜನೆಗಳ ಫಲಾನುಭವಿಗಳು. ದಿವ್ಯಾಂಗರಿಗೆ ನೀಡುವ ಸಹಾಯ ಧನ ಯೋಜನೆಯ ಫಲಾನುಭವಿಗಳು. ಪಶು ಸಂಗೋಪನೆ ಫಲಾನುಭವಿಗಳಿಗೆ ಮತ್ತು ಹಾಲು ಉತ್ಪಾದಕರಿಗೆ ನೀಡುವ ಹಣ, ಬಿ.ಪಿ.ಎಲ್ ಕಾರ್ಡ್ ಯೋಜನೆಯ ಫಲಾನುಭವಿಗಳು ಹೀಗೆ ಸರ್ಕಾರದ ಹಲವು ಹತ್ತು ಯೋಜನೆಗಳ ಫಲಾನುಭವಿಗಳಿಗೆ, ಸಣ್ಣ ಮಟ್ಟದ ಹಣದ ಗ್ರಾಹಕರಾದರು ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ D.S.B. Door Step Banking, ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೇ ವರದಾನವಾಗಿದೆ
ಹಾಗು ಭಾರತ ಸರ್ಕಾರ ಡಿ. ಎಸ್. ಬಿ. – ಡೋರ್ ಸ್ಟೆಪ್ ಬ್ಯಾಂಕಿಂಗ್ ಮುಖೇನ ಅವರ ಮನೆಯ ಬಾಗಿಲಿಗೆ ಸೇವೆಯನ್ನು ನೀಡುವ ಅವಕಾಶವನ್ನು ಕೋ-ಆಪರೇಟಿವ್ ಬ್ಯಾಂಕುಗಳ ಮಡಿಲಿಗೆ ಹಾಕಲು ಯೋಜನೆಯನ್ನು ನಿರೂಪಿಸಿದೆ. ಇಲ್ಲಿ ಕೆಲವೊಂದು ಅಥವಾ ಎಲ್ಲಾ ಸೇವೆಗಳಿಗೆ ನಿರ್ದಿಷ್ಠ ಸೇವಾ ಶುಲ್ಕವನ್ನು ವಿಧಿಸಲು ಘನವೆತ್ತ ಭಾರತ ಸರ್ಕಾರವು ಅನುವು ಮಾಡಿಕೊಟ್ಟಿದೆ.
ಗ್ರಾಮೋದ್ಯೋಗ – ಗ್ರಾಮೀಣ ಭಾರತ
ಇದಲ್ಲದೆ ಗ್ರಾಮೀಣ ಮಟ್ಟದಲ್ಲಿ PMG-Disha Pradhan Mantri Gramin Digital Saksharatha Abhiyan – ಪಿ. ಎಂ. ಜಿ. ದಿಶಾ – ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ – ಇದರ ಮುಖೇನ ಗ್ರಾಮಗಳಲ್ಲಿ ವಾಸವಾಗಿರುವ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ಡಿಜಿಟಲ್ ಸಾಕ್ಷರತೆಯನ್ನು ಕೌಶಲ್ಯ ಅಭಿವೃದ್ಧಿಯ ತರಬೇತಿಯ ಮುಖೇನ ಬ್ಯಾಂಕುಗಳ ವ್ಯವಹಾರದ ಅರಿವನ್ನು ಉಂಟು ಮಾಡುವ ಯೋಜನೆಯಾಗಿದೆ. ತರಬೇತಿ ಪಡೆದ ಪ್ರತಿ ಓರ್ವ ವ್ಯಕ್ತಿಗೂ ಸರ್ಕಾರದಿಂದ ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ನೀಡಿದ ಸಂಸ್ಥೆಗಳಿಗೆ ಆತನ ಅಥವಾ ಆ ವ್ಯಕ್ತಿಯ ಕೌಶಲ್ಯ ಅಭಿವೃದ್ಧಿಯ ತರಬೇತಿಯ ಸೇವಾ ಶುಲ್ಕವನ್ನು ಸರ್ಕಾರವು ತಾನೆ ಭರಿಸುತ್ತದೆ ಹಾಗು ಇದಕ್ಕಾಗಿ ಇಸವಿ 2032 ತನಕ ಬೇಕಾದ ಹಣವನ್ನು ಆಯ ವ್ಯಯ ಮಂಡನೆಯಲ್ಲಿ ಮಂಡಿಸಿ ಮೀಸಲು ಇಟ್ಟಿರುತ್ತದೆ.
ಇಲ್ಲಿ ಬಹಳ ಮುಖ್ಯವಾಗಿ ಮತ್ತು ಪ್ರಮುಖವಾಗಿ ಗಮನಿಸಬೇಕಾದ ಅಂಶವೆನೆಂದರೆ ಈ ಸಂಕೀರ್ಣ ವ್ಯವಸ್ಥೆಯಲ್ಲಿ ಕೋ-ಆಪರೇಟಿವ್ ಬ್ಯಾಂಕುಗಳು ಮೊತ್ತ ಮೊದಲು ತಮ್ಮ ಗ್ರಾಹಕರಿಗೆ ಈ ಡಿಜಿಟಲ್ ಸಾಕ್ಷರತಾ ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ನೀಡುತ್ತಾರೆ. ಅದರ ಫಲವಾಗಿ ಗ್ರಾಹಕರು ತರಬೆತಿಯನ್ನು ನೀಡಿದ ಕೋ-ಆಪರೇಟಿವ್ ಬ್ಯಾಂಕುಗಳ ಮೇಲೆ ಹೆಚ್ಚು ವಿಶ್ವಾಸವನ್ನು ಹೊಂದುತ್ತಾರೆ ಮತ್ತು ಹೆಚ್ಚು ವ್ಯವಹಾರಗಳನ್ನು ತಮಗೆ ತರಬೆತಿಯನ್ನು ನೀಡಿದ ಕೋ-ಆಪರೇಟಿವ್ ಬ್ಯಾಂಕುಗಳ ಜೊತೆಯಲ್ಲಿ ನಿರಂತರವಾಗಿ ಮಾಡುತ್ತಾ ಇರುತ್ತಾರೆ. ತದ ನಂತರ ಕೋ-ಆಪರೇಟಿವ್ ಬ್ಯಾಂಕುಗಳು ಈ ಡಿಜಿಟಲ್ ಸಾಕ್ಷರತಾ ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ತಮ್ಮ ಗ್ರಾಹಕರಲ್ಲದವರಿಗೆ ನೀಡುವಾಗ ಇದರ ಬಳಕೆಯನ್ನು ಪ್ರಾತ್ಯಕ್ಷಿಕವಾಗಿ ತೋರಿಸಲು ಗ್ರಾಹಕರಿಗೆ ತಮ್ಮ ಸಂಸ್ಥೆಯಲ್ಲೇ ಮತ್ತು ತಮ್ಮ ಶಾಖೆಯಲ್ಲೆ ಆತನ ಕೆ. ವೈ. ಸಿ ಮಾಡಿಸಿ ಆತನ ಅನುಕೂಲಕ್ಕೆ ತೆರೆಯುತ್ತಾರೆ. ತಕ್ಕಂತೆ ಖಾತೆಯನ್ನು ಈ ತನ್ಮೂಲಕ ಡಿಜಿಟಲ್ ಸಾಕ್ಷರತಾ ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ನೀಡಿದ ಕೋ-ಆಪರೇಟಿವ್ ಬ್ಯಾಂಕುಗಳು ಓರ್ವ ಹೊಸ ಗ್ರಾಹಕನನ್ನು ಯಾವುದೇ ವೆಚ್ಚವಿಲ್ಲದೇ ಸರ್ಕಾರದ ವತಿಯಿಂದ ಸರ್ಕಾರದ ವೆಚ್ಚದಲ್ಲಿ ಆದಾಯದ ಮೂಲಕ ಪಡೆದುಕೊಳ್ಳುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಗ್ರಾಹಕರಿಗೆ ಫಸಲ್ ಬಿಮಾ ಯೋಜನೆಯ ಅಂತರ್ಗತದಲ್ಲಿ ಬರುವ ಬಿಮಾ ಕಂತುಗಳನ್ನು ಸ್ವೀಕರಿಸಿ ಅದಕ್ಕೆ ರಸೀದಿ ನೀಡುವುದು. ಅನ್ಯ ಬಿಮಾ ಯೋಜನೆಗಳ ಬಿಮಾ ಕಂತುಗಳನ್ನು ಸ್ವೀಕರಿಸಿ ಅದಕ್ಕೆ ರಸೀದಿ ನೀಡುವುದು ಕೂಡ ಒಂದು ಆದಾಯದಾಯಕವಾದ ವ್ಯವಹಾರವಾಗಿರುತ್ತದೆ. ಇದಲ್ಲದೆ ಗ್ರಾಹಕ ಸೇವಾ ಕೇಂದ್ರಗಳ ಸೇವೆಯನ್ನು ಅಂದರೆ (Citizen Service Centre / Common Service Centre) ಮಾಡಲು ಅಥವಾ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲು ಹೊರಟಿದೆ. ಗ್ರಾಹಕ ಸೇವಾ ಕೇಂದ್ರಗಳ ಸೇವೆಯ ಬಗ್ಗೆ ಹೇಳಲು ಆರಂಭಿಸಿದರೆ ಅದರ ಬಗ್ಗೆಯೇ ನೂರಾರು ಪುಟಗಳನ್ನು ಬರೆಯಬಹುದು.
ಅವಲೋಕನ
ಮೇಲೆ ಕಾಣಿಸಿದ ಎಲ್ಲಾ ಯೋಜನೆಗಳನ್ನು ಅವಲೋಕಿಸಿದರೆ / ಅವಗಾನಿಸಿದರೆ ಈ ಎಲ್ಲಾ ಸೇವೆಗಳು ಡಿಜಿಟಲ್ ತಂತ್ರಜ್ಞಾನದ ಒಂದಷ್ಟು ಭಾಗಷಹದ ಭಾಗ ಮಾತ್ರ. ಅಂದರೆ ಡಿಜಿಟಲ್ ತಂತ್ರಜ್ಞಾನದ ಹೊರ ಅವರಣದಲ್ಲಿ ಇಷ್ಟೇಲ್ಲ ಇದೆ ಅಂದರೆ ಅದರ ಒಳ ಆವರಣದಲ್ಲಿ ಇನ್ನೆಲ್ಲ ಮತ್ತು ಇನ್ನು ಎಷ್ಟು ಸೇವೆಗಳು ಇದೆ ಅಥವಾ ಇರಬಹುದು. ಸಹಕಾರಿ ವಲಯ ಸಹಕಾರಿ ಬ್ಯಾಂಕುಗಳು ತಂತ್ರಜ್ಞಾನದಿಂದ ದೂರ ಇದ್ದು ಏನೆಲ್ಲ ಮತ್ತು ಎಷ್ಟೆಲ್ಲಾ ಲಾಭಗಳನ್ನು, ಗ್ರಾಹಕರನ್ನು ಮತ್ತು ವ್ಯವಹಾರಗಳನ್ನು ಕಳೆದುಕೊಂಡಿದ್ದಾರೆ ಎಂದು ಊಹಿಸಿಕೊಂಡರೆ ಸಾಕು ಬಹಳಷ್ಟು ವ್ಯಥೆಯಾಗುತ್ತದೆ. ಈ ಸ್ಪರ್ಧಾತ್ಮಕವಾದ ಯುಗದಲ್ಲಿ ಈಗಲೂ ಸಹ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಮ್ಮ ಅಸ್ತಿತ್ವವನ್ನು, ಗ್ರಾಹಕ ಸೇವಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಮುಖೇನ, ಹೆಚ್ಚಿನ ಗ್ರಾಹಕರನ್ನು ಮತ್ತು ಹೆಚ್ಚು ಲಾಭವನ್ನು ಪಡೆಯಲು ಪರಿಪೂರ್ಣವಾದ ಅವಕಾಶ ಇರುತ್ತದೆ. ದೊಡ್ಡ ಮಟ್ಟದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೂರ್ಣವಾಗಿ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳಮಟ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ತಲು ಪಲು ಇಂದಿಗೂ ಕೂಡ ಸಾಧ್ಯವಾಗಿಲ್ಲ. ಅಂದರೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಹ ಸಮಾಜದ ಕೆಳಹಂತದಲ್ಲಿರುವ ಕುಟುಂಬಗಳಿಗೆ ತಲುಪಲು ಸಾಧ್ಯವಾಗಿಲ್ಲ ಮತ್ತು ತಲುಪುವ ಹರಸಾಹಸದಲ್ಲಿ ಸೂಕ್ತವಾದ ಮತ್ತು ನಿರೀಕ್ಷಿತವಾದಂತಹ ಬೆಳವಣಿಗೆ ಅಥವಾ ಫಲಶ್ರುತಿಗಳು ಕಂಡುಬಂದಿಲ್ಲ.
ವಾಸ್ತವ ಸ್ಥಿತಿ
ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾಮಾಜಿಕ ಹಂದರದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಲು ಸಾಧ್ಯವಾದರೆ ಅದು ಕೇವಲ ಸಹಕಾರಿ ಕ್ಷೇತ್ರದ ಕೋ-ಆಪರೇಟಿವ್ ಬ್ಯಾಂಕುಗಳು ಅಥವಾ ಸೌಹಾ ರ್ದ ಬ್ಯಾಂಕುಗಳಿಂದ ಮಾತ್ರ ಸಾದ್ಯ. ನಮ್ಮ ಕಣ್ಣ ಮುಂದೆ ಮುಟ್ಟಿ ಧಾನ್ ಅಂದರೆ ಮೃಷ್ಟಿಯಷ್ಟು ಧಾನ್ಯ ಎಂದು ಅರ್ಥ. ಕೂಲಿ ಕಾರ್ಮಿಕರುಗಳು ತಮ್ಮ ಠೇವಣಿಯಾಗಿ ವಾರಕ್ಕೊಮ್ಮೆ ಮೃಷ್ಟಿಯಷ್ಟು ಧಾನ್ಯ
ಜಮಾ ಮಾಡಿ ಆರಂಭಿಸಿದ ಮತ್ತು ಬೆಳೆಸಿದ ಮುಟ್ಟಿ ಧಾನ್ ಬ್ಯಾಂಕು ಇಂದು ಯಶಸ್ಸಿನ ಶಿಖರವನ್ನು ಮುಟ್ಟಿರುವುದನ್ನು ನಾನು ಜ್ವಲಂತವಾಗಿ ನೋಡುತ್ತಿದ್ದೇವೆ ಹಾಗೆ ಹಳ್ಳಿಗಾಡಿನ ಮತ್ತು ಗುಡ್ಡಗಾಡಿನ ಅಲ್ಪಮಟ್ಟದ ಅಕ್ಷರಸ್ಥರು, ಅನಕ್ಷರಸ್ಥರಾದ ಹೆಣ್ಣು ಮಕ್ಕಳು. ಮಾತೆಯರು, ಸಹೋದರಿಯರು ಸೇರಿ ಹುಮ್ಮಸ್ಸಿನಿಂದ ಆರಂಭಿಸಿದ ಬ್ಯಾಂ ಕು ಈಗ ಬಂಧನ್ ಬ್ಯಾಂಕ್ ಎಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದನ್ನು ನೋಡುತ್ತಿದ್ದೇವೆ. ಎಲ್ಲಿಯೋ ಒಂದು ಕಡೆ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಕುಂಠಿತ ಆಗಿದೆ ಎಂದರೆ ಅಥವಾ ಆಗುವುದಕ್ಕೆ ಕಾರಣ ಎಂದಾದರೆ ಅದರ ಚುಕ್ಕಾಣಿ ಹಿಡಿದ ಅಥವಾ ಲಗಾಮು ಹಿಡಿದಿರುವ ಆ ಕೋ-ಆಪರೇಟಿವ್ ಬ್ಯಾಂಕಿನ ಪ್ರಮುಖರ ಸಂಕುಚಿತ ಮಾನಸಿಕ ಸ್ಥಿತಿಯು ಕೂಡ ಕಾರಣವಾಗಿರಬಹುದು.
ಸಹಕಾರಿ ಕ್ಷೇತ್ರದಲ್ಲಿ ಸೂರ್ಯೋದಯ
ಇಂದಿನ ಸರ್ಕಾರದ ನೀತಿ ನಿಯಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಸಹಕಾರಿ ಕ್ಷೇತ್ರಕ್ಕೆ ಮೂಡಣ ದಿ ಕ್ಕಿನ ಭಾನಿನಲ್ಲಿ ಉದಯಿಸುತ್ತಿರುವ ರವಿತೇಜ, ಬೆಳ್ಳಿ ರೇಕುಗಳ ಮೋಡಗಳ ಮರೆಯಿಂದ ಹೊರಬಂದು ಕೆಂಬಾಳೆಯ ಕಿರಣಗಳಿಂದ ಹೊನ್ನಿನ ಉಜ್ವಲವಾಗಿ ಬೇಳಕನ್ನು ಚೆಲ್ಲುತ್ತಾ ಮೇಲೇರುತ್ತ ಇರುವ ಹಾಗೆ ಕಾಣುತ್ತಿರುವ ರೀತಿ ಸಹಕಾರಿ ಕ್ಷೇತ್ರಕ್ಕೆ ಅನಿಸುತಿದೆ. ಸಹಕಾರಿ ಕ್ಷೇತ್ರದಲ್ಲೂ ಕೂಡ ಹೊಸ ಆಶಾ ಭಾವನೆಗಳ ಅರಿವನ್ನು ಅರಿತು ಅದಕ್ಕೆ ಪೂರಕವಾಗಿ, ಚಿಂತನೆಗಳು, ಪ್ರಯೋಗಗಳು, ವಿಕಸನಕ್ಕೆ ಬೇಕಾದಂತಹ ನೀತಿ-ನಿಯಮಗಳನ್ನು ಇಂದಿನ ಸರ್ಕಾರವು ಮಾಡುತ್ತಿದ್ದು ಅದರೊಡನೆ ಸಹಾಯ ಧನದ ಅವಶ್ಯಕತೆಯನ್ನು, ಅವಶ್ಯಕತೆಗೆ ತಕ್ಕ ಹಾಗೆ ನೀಡುವ ಸ್ಪಷ್ಟ ನಿಲುವುಗಳನ್ನು ತೋರಿಸುತ್ತಿದೆ.
ಮರಳಿ ಅರಳು
ಸಹಕಾರಿ ಕ್ಷೇತ್ರವು ತನ್ನ ಅರವತ್ತರ, ದೀರ್ಘ ಅವಧಿಯ ಸಾಂಪ್ರಾದಾಯಿಕವಾದ, ನಿಧಾನವೇ ಪ್ರಧಾನ ಎಂಬ ಸುಧೀರ್ಘ ನಿದ್ರಾ ಸ್ಥಿತಿಯಿಂದ ಎದ್ದು ಹೊರ ಬಂದು ಮೈಕೊಡವಿ ಇದು ಅರವತ್ತರ ಆರಲು ಮರಳಲ್ಲ ಬದಲಿಗೆ – ಅರವತ್ತರಲ್ಲಿ ಮರಳಿ ಅರಳಿದ್ದೇನೆ ಎಂಬ ಸಂದೇಶದೊಂದಿಗೆ ಮತ್ತೆ ಹೊಸ ನವ ತಾರುಣ್ಯದ ಅಂಚಿಗೆ ಬಂದು ನಿಂತಿರುವ ಹಾಗೆ ಸಹಕಾರಿ ಕ್ಷೇತ್ರವನ್ನು ಮಿನಿಸ್ಟರಿ ಆಫ್ ಕೋ ಆಪರೇಷನ್ ರೂಪಿಸುತ್ತಿದೆ.
ಡಿಜಿಟಲ್ ತಾರುಣ್ಯ – ಡಿಜಿಟಲ್ ಭಾರತ
ಡಿಜಿಟಲ್ ತಂತ್ರಜ್ಞಾನ ಇಲ್ಲದ ಬದುಕು ಹಾಗು ಬ್ಯಾಂಕುಗಳ ಸೇವೆಯನ್ನು ಊಹಿಕೊಳ್ಳಲು ಕೂಡ ಕಷ್ಟಸಾಧ್ಯ. ನಮ್ಮ ಮುಂದಿನ ಪೀಳಿಗೆಗೆ ಇಂದಿನ ಚಲನ್ ತುಂಬುವುದು, ಕ್ಯಾಷ್ ಕೌಂಟರ್ ನಲ್ಲಿ ನಿಂತು ಹಣ ಜಮೆ ಮಾಡುವುದು, ಹಣ ತೆಗೆಯುವುದು ಒಂದು ದಂತ ಕಥೆಯಾಗಿಯೆ ಹೇಳಬಹುದಾದ ಕಾಲ ಬಹು ಸನ್ನಿಹದಲ್ಲೇ ಇದೆ.
ವಸಂತಕಾಲ
ಯಾರೆಲ್ಲರೂ ತಮ್ಮ ಮೈಕೊಡವಿ ಎದ್ದು ನಿಂತಿದ್ದಾರೆ. ಅವರೆಲ್ಲರೂ ತಮ್ಮ ಎರಡನೇ ತಾರುಣ್ಯದ ಸವಿಯನ್ನ ಸವಿಯಲು ಹಾಗೂ ಅವರಿಗೆ ಈ ಎರಡನೇ ತಾರುಣ್ಯದ ಸವಿಯನ್ನು ಉಣಬಡಿಸಲು ಸರ್ಕಾರವು ಸಜ್ಜಾಗಿ ನಿಂತಿದೆ. ಇಲ್ಲಿ ಮದುಮಗನಾಗಿ ಬಾಣಸಿಗವನ್ನು ಕಟ್ಟಿರುವುದು ಎಂದರೆ ಪೂರ್ವ ಸಾಂಪ್ರದಾಯಿಕ ಕಟ್ಟುಗಳಿಂದ ಹೊರಬಂದು ಸ್ಪರ್ಧಾತ್ಮಕವಾದ ಯುಗದ ಅಪ್ಪುಗೆಯನ್ನ ಮಾಡಿ ಹೊಸ ಚೈತನ್ಯದಿಂದ ಸಮಾಜದಲ್ಲಿ ಸ್ಪರ್ಧಿಸುವುದು ಮತ್ತು ಬೆರೆಯುವುದು. ಬದಲಾವಣೆಯ ಪರ್ವ ಆರಂಭವಾಗಿದೆ ಬದಲಾಗೋಣ – ಬದಲಾಯಿಸೋಣ.
ಎಸ್.ಎಸ್.ಮೂರ್ತಿ
ಅರ್ಥ್ಂ ನಿರ್ದೇಶಕರು