ಸಹಕಾರ ಸಪ್ತಾಹದ ಆಚರಣೆ – ಧೈಯ ಆಶಯಗಳ ಔಚಿತ್ಯ.ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ.

 

 

ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ.

ವಿಶ್ವದ ಸಹಕಾರ ಚಳುವಳಿಗೆ 175 ವರ್ಷಗಳ ಇತಿಹಾಸ. ನಮ್ಮ ದೇಶದ ಸಹಕಾರ ಚಳುವಳಿಗೆ 105 ವರ್ಷಗಳ ಇತಿಹಾಸ. ಕಳೆದ 66 ವರ್ಷಗಳಿಂದ ರಾಷ್ಟ್ರೀಯ ಸಹಕಾರ ಯೂನಿಯನ್ ನವದೇಹಲಿಯಿವರ ಮಾರ್ಗದರ್ಶದಲ್ಲಿ ಸಹಕಾರ ಸಪ್ತಾಹವನ್ನು ಆಚರಿಸುತ್ತ, ಸಾರ್ವಜನಿಕರಿಗೆ, ಸಹಕಾರಿಗಳಿಗೆ ಮತ್ತು ಸರಕಾರಗಳಿಗೆ ಸಹಕಾರ ಕ್ಷೇತ್ರದ ಸಾಧನೆ, ಪ್ರಗತಿ, ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ತಿಳಿಯಪಡಿಸುವ ಕಾರ್ಯವನ್ನು ನಿರ್ವಹಿಸುತ್ತ ಬಂದಿದೆ. ಸಹಕಾರ ಸಂಸ್ಥೆಗಳು ಉತ್ತಮ ಆರ್ಥಿಕ ಸಂಘಟನೆಗಳಾಗಿ ಸಾಮಾಜಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಪ್ರಚುರಗೊಳಿಸುವುದು ಈ ಸಪ್ತಾಹದ ಅಚರಣೆಯ ಮಹತ್ವದ ಧೈಯ.

ಕಳೆದ ಹತ್ತು ವರ್ಷಗಳಲ್ಲಿ ಈ ಸಪ್ತಾಹ ಆಚರಣೆಯಲ್ಲಿ ಸಮಗ್ರ ಸಹಕಾರ ಕ್ಷೇತ್ರಕ್ಕೆ ಅನ್ವಯಿಸುವಂತೆ ಒಂದು ಧೈಯವಾಕ್ಯವನ್ನಾಗಿ ಘೋತಿಷಿ ತನ್ಮೂಲಕ ಸಹಕಾರಿ ಚಳುವಳಿಯ ಬಲಸಂವರ್ಧನೆ ಹಾಗೂ ದೇಶದ ಆರ್ಥಿಕ ಸುಸ್ಥಿರ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಷ್ಟು ಮಹತ್ವವನ್ನು ಪಡೆಯುತ್ತದೆ ಎಂದು ವಿಶ್ಲೇಷಿಸಬಹುದಾಗಿದೆ..

2010 ವೃತ್ತಿಪರ ರೈತ ಪ್ರಗತಿಪರ ದೇಶ progressive farmer and prosperous Nation

2011 ಸಹಕಾರಿ ಕ್ಷೇತ್ರದ ಮೂಲಕ ಸಮಗ್ರ ಅಭಿವೃದ್ಧಿ inclusive Development through cooperatives

2012 ಸಹಕಾರಿ ಉದ್ದಿಮೆಗಳು ಉತ್ತಮ ರಾಷ್ಟ್ರವನ್ನು ನಿರ್ಮಾಣ ಬಲ್ಲವು Cooperative enterprises build better Nation.

2013 ಸಹಕಾರಿ ಕ್ಷೇತ್ರದ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಗಳು, Socio economic resurgence through cooperatives in the changing time.

2014 ಆರ್ಥಿಕ ಸೇರ್ಪಡೆ ಹಾಗು ಸುಸ್ಥಿರ ಅಭಿವೃದ್ಧಿ ಸಾಧನೆಗಾಗು ಸಹಕಾರಿ ಸಂಸ್ಥೆಗಳು ಮಾದರಿ Cooperative model for sustainable and inclusive growth

2015 – ಸಹಕಾರ ಕ್ಷೇತ್ರ ಮೂಲಕ ಮೇಕ ಇನ್ ಇಂಡಿಯ Make in india through cooperatives

2016- ಸುಸ್ಥಿರ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ Role of cooperatives in sustainable Development and growth

2017 -ಸಹಕಾರ ಸಂಸ್ಥೆಗಳನ್ನು ಗಣಕೀಕರಣ ಹಾಗೂ ಡಿಜಿಟಲೈಜೇಶನ್ ಮಾಡುವ ಮೂಲಕ ಸಬಲೀಕರಣ ಮಾಡುವುದು  Empowering people through Digitalization of cooperatives

2018 – ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಹಾಗೂ ಗ್ರಾಮೀಣ ಅಭಿವೃದ್ಧಿ ಉತ್ತಮ ಬೆಳವಣಿಗೆಯ ಮೂಲಕ ಅಭಿವೃದ್ಧಿ Inclusive Growth and good governance for rural economy.

2019 -ನವ ಭಾರತ ನಿರ್ಮಾಣದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ Role of Cooperatives in New India ಸಹಕಾರ ಸಪ್ತಾಹಗಳ ಆಚರಣೆಯಿಂದಾಗಿ ಸಹಕಾರ ಚಳುವಳಿ ತನ್ನ ಬಲಸಂವರ್ಧನೆಯತ್ತ ಸಾಗಿದೆ. ದೇಶದ ಹಾಗೂ ವಿಶ್ವದ ಸುಸ್ಥಿರ ಅಭಿವೃದ್ಧಿಗೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಎಂಬುದನ್ನು ಸಹಕಾರ ಚಳುವಳಿಯ ಸಾಧನೆ ಹಾಗೂ ಪ್ರಗತಿಯ ಅವಲೋಕನೆಯಿಂದ ತಿಳಿಯಬಹುದಾಗಿದೆ.

-: ಸಹಕಾರ ಚಳುವಳಿ ಹುಟ್ಟು :-

ಆರ್ಥಿಕ ಸ್ವಾತಂತ್ರಕ್ಕೆ ಸಹಕಾರವೇ ಹೆಬ್ಬಾಗಿಲು ಎಂದರು ಮಹಾತ್ಮ ಗಾಂಧೀಜಿ. ಸಹಕಾರ ಬಡವರ ಶೋಷಿತ ವರ್ಗದವರ ಆರ್ಥಿಕ ಸಂಘಟನೆಯಾಗಿ ಸಹಕಾರ ಚಳುವಳಿಯಾಗಿ ಬೆಳೆದು ಬಂದಿರುವುದಕ್ಕೆ ರೋಚಕ ಇತಿಹಾಸವಿದೆ. 18ನೇ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡನಲ್ಲಿ ಔದ್ಯೋಗಿಕ ಕ್ರಾಂತಿಯಾಗಿ ನಿರುದ್ಯೋಗ ಹಾಗೂ ಬಡತನ ಹೆಚ್ಚಾಯಿತು. ಈ ಸಂದರ್ಭದಲ್ಲಿ ರಾಬರ್ಟ ಓವನ್ ಎಂಬ ಸಮಾಜ ಸುಧಾರಕನ ಪ್ರಯತ್ನದಿಂದಾಗಿ 1844 ರಲ್ಲಿ ಇಂಗ್ಲೆಂಡನ ರಾಕಡೇಲ್ ಎಂಬಲ್ಲಿ 28 ಜನ ಯುವ ನೇಕಾರರು ವೇಳೆಗೆ ಈ ಸಹಕಾರ ಸಂಘ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆದು ವಿಶ್ವದ ಸಹಕಾರ ಚಳುವಳಿಯ ಬೆಳವಣಿಗೆಗೆ ನಾಂದಿಯಾಯಿತು. ಇವರುಗಳ ಅನುಭವವೆ ಸಹಕಾರ ತತ್ವಗಳಾಗಿವೆ. ವಿಶ್ವದ ಪ್ರತಿಯೊಂದು ಸಹಕಾರ ಸಂಘವು ಈ ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ನಂತರ 1962ರಲ್ಲಿ ಜರ್ಮನಿಯಲ್ಲಿ ರೈಫಿಜನ್ ಮಾದರಿಯ ಕೃಷಿ ಪತ್ತಿನ ಸಹಕಾರ ಸಂಘಗಳು, ಯುರೋಪ್‌ನಲ್ಲಿ ಕೃಷಿ, ಗ್ರಾಹಕ ಹಾಗೂ ಕ್ರೆಡಿಟ್ ಮತ್ತು ಬ್ಯಾಂಕಿಂಗ್ ಸಹಕಾರ ಸಂಘಗಳು, ಅಮೇರಿಕಾದಲ್ಲಿ ಪ್ರಾರಂಭವಾದವು. ಸ್ವಿಜರ್ಲೆಂಡನಲ್ಲಿ ಹಾಗೂ ಹಾಲಂಡಗಳಲ್ಲಿ ಹೈನುಗಾರಿಕಾ ಸಹಕಾರ ಸಂಘಗಳು ಹಾಗೂ ಆಫ್ರಿಕಾದಲ್ಲಿ ಕೃಷಿ, ಗ್ರಾಹಕ, ಗೃಹನಿರ್ಮಾಣ ಹಾಗೂ ಕ್ರೆಡಿಟ್ ವಿಶ್ವದ ವಿವಿಧ ದೇಶಗಳಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

-: ವಿಶ್ವದಲ್ಲಿ ಸಹಕಾರ ಚಳುವಳಿ :-

ವಿಶ್ವದಲ್ಲಿ 30 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳಿವೆ. ವಿಶ್ವದ ಜನಸಂಖ್ಯೆಯ ಶೆಕಡಾ 12% ಜನರು ಸದಸ್ಯತ್ವವನ್ನು ಹೊಂದಿದ್ದಾರೆ. ವಿಶ್ವ ಅತಿ ದೊಡ್ಡ 300 ಸಹಕಾರ ಸಂಸ್ಥೆಗಳು 2.1 ಟ್ರಿಲಿಯನ್ ವ್ಯವಹಾರ ನಡೆಸುತ್ತಿವೆ ಎಂಬುದು 2017ರ ವರ್ಡ ಕೋ-ಆಪರೇಟಿವ್ ಮಾನಿಟರ್ ವರದಿಯಾಗಿದೆ. ವಿಶ್ವದಲ್ಲಿ 28 ಕೋಟಿ ಜನರಿಗೆ ಉದ್ಯೋಗವನ್ನು ನೀಡಿದೆ. ಶೇಕಡಾ 10% ಜನರಿಗೆ ಉದ್ಯೋಗ ನೀಡಿದೆ ಈ ಕ್ಷೇತ್ರ, ಉತ್ತಮ ಆರ್ಥಿಕ ಸಂಘಟನೆಗಳಾಗಿ ಜನರ ಜೀವನ ಪದ್ಧತಿಯಾಗಿ ಈ ಕ್ಷೇತ್ರ ಕಾರ್ಯನಿರ್ವಹಿಸುತ್ತಿರುವ ಈ ಕ್ಷೇತ್ರದ ಸಾಧನೆಗಳನ್ನು ಗಮನಿಸಿದ ವಿಶ್ವ ಸಂಸ್ಥೆ ಸಹಕಾರ ಸಂಸ್ಥೆಗಳು ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡಬಲ್ಲವು ಎಂಬುದಾಗಿ ಹೇಳಿ 2012ನ್ನು ಸಹಕಾರಿ ವರ್ಷವನ್ನಾಗಿ ಆಚರಿಸಲು ಕರೆ ನೀಡಿತು. ಪರಿಣಾಮವಾಗಿ ಪ್ರಪಂಚದಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬಲವಾಗಿ ಬೆಳೆಯಲು ಸಾಧ್ಯವಾಯಿತು. ಈಕ್ಷೇತ್ರದ ಸುಸ್ಥಿರತೆಯನ್ನು ಗಮನಿಸಿದ ಅಂತರ ರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ “ಸಹಕಾರ ಸಂಸ್ಥೆಗಳು ದೇಶದ ಕಷ್ಟ ಕಾಲದಲ್ಲೂ ಆರ್ಥಿಕ ಸಂಕಷ್ಟದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲವು” ಎಂಬುದಾಗಿ ಹೇಳಿತು. ಇದರ ಜೊತೆಗೆ 2010 ರಿಂದ 2020ನ್ನು ವಿಶ್ವದ ಸಹಕಾರಿ ದಶಕವನ್ನಾಗಿ ಆಚರಿಸುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಕರೆ ನೀಡಿತು. ಪ್ರತಿ ವರ್ಷ ಜುಲೈ ಒಂದನೇ ಶನಿವಾರವನ್ನು ಅಂತರರಾಷ್ಟ್ರೀಯ ಸಹಕಾರ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತದಲ್ಲಿ ಸಹಕಾರ ಚಳುವಳಿ, ಹುಟ್ಟು ಸಾಧನೆ ಹಾಗೂ ಅವಕಾಶಗಳು.

ಭಾರತ ಕೃಷಿ ಪ್ರಧಾನ ದೇಶ. ಶೇಕಡಾ 75% ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. 19ನೇ ಶತಮಾನದ ಅಂತ್ಯದಲ್ಲಿ ರೈತರ ಬಡತನ ಹಾಗು ಸಂಕಷ್ಟಗಳ ಬಹಳವಾಗಿದ್ದುದರ ಪರಿಣಾಮವಾಗಿ ಅದರ ನಿವಾರಣೆಗಾಗಿ ಅಂದಿನ ಬ್ರಿಟೀಷ ಸರಕಾರ ಶ್ರೀ ಫ್ರೆಡ್ರಿಕ್ ನಿಕೋಲ್ಸನ್ ಎಂಬವರನ್ನು ಜರ್ಮನಿ ಕಳುಹಿಸಿ ಅಲ್ಲಿಯ ಸಹಕಾರ ಕ್ಷೇತ್ರವನ್ನು ಅಧ್ಯಯನ ಮಾಡಿ ಭಾರತ ದೇಶದಲ್ಲಿ ಸಹಕಾರ ಚಳುವಳಿಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ವರದಿ ನೀಡಲು ಸೂಚಿಸಿದರು.

ಫ್ರೆಡ್ರಿಕ್ ನಿಕೋಲ್ಸನ್‌ರವರ ವರದಿ ಆಧಾರದ ಮೇಲೆ 1904 ಜನೇವರಿ 25ರಂದು ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟೀಸ್ ಕಾಯ್ದೆನ್ನು ಜಾರಿಗೊಳಿಸಲಾಯಿತು.

ಭಾರತದಲ್ಲಿ 2004ರಲ್ಲಿ ಸಹಕಾರ ಕಾಯ್ದೆಯನ್ನು ಜಾರಿಮಾಡುವುದರ ಮೂಲಕ ಸಹಕಾರ ಚಳುವಳಿ ಪ್ರಾರಂಭವಾಯಿತು. ಈ ಕಾಯ್ದೆಯನ್ನು 1912 ರಲ್ಲಿ ಮತ್ತೆ ತಿದ್ದುಪಡಿ ಮಾಡುವ ಮೂಲಕ ವಿವಿಧ ರೀತಿಯ ಸಹಕಾರ ಸಂಘಗಳು ಪ್ರಾರಂಭವಾಗಲಿಕ್ಕೆ ಅವಕಾಶವಾಯಿತು. 1920ರಲ್ಲಿ ಸಹಕಾರ ರಾಜ್ಯ ವಿಷಯವಾಯಿತು. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಸಹಕಾರ ಕಾನೂನು ಹಾಗೂ ಅದಕ್ಕೆ ಸಂಬಂದಿಸಿದ ನಿಯಮಗಳನ್ನು ರಚಿಸಿಕೊಳ್ಳಲು ಅವಕಾಶವಾಗಿದೆ..

ಸಹಕಾರ ಚಳುವಳಿಯು ದೇಶದ ಸಾಮಾನ್ಯ ಜನರ ವಿಶೇಷವಾಗಿ ರೈತರ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಕೇಂದ್ರ ಸರಕಾರ ಆಗಿಂದ್ದಾಗ್ಗೆ ಹಲವು ಸಮೀತಿಗಳನ್ನು ರಚಿಸಿ ಈ ಕ್ಷೇತ್ರದ ಸಾಧನೆಯನ್ನು ಪರಿಶೀಲಿಸಿದೆ. ಅದರಲ್ಲಿ 1952ರಲ್ಲಿ ರಿಸರ್ವ ಬ್ಯಾಂಕನ ಡೆಪ್ಯೂಟಿ ಗವರ್ನರ ಶ್ರೀ ಎ.ಡಿ.ಗೋರವಾಲಾ ರವರ ನೇತೃತ್ವದಲ್ಲಿ ನೇಮಕವಾದ ಸಮೀತಿಯ ವರದಿ “ಭಾರತದಲ್ಲಿ ಸಹಕಾರ ಚಳುವಳಿ ವಿಫಲವಾಗಿದೆ ಆದರೆ ಅದು ಯಶಸ್ಸು ಆಗಲೇಬೇಕು ಎಂದು ತಿಳಿಸಿದರು. ನಂತರದಲ್ಲಿ ಭಾಷಾವಾರು ಪ್ರಾಂತಗಳ ವಿಂಗಡಣೆ ನಂತರ ಪ್ರತಿಯೊಂದು ರಾಜ್ಯವು ತನ್ನದೇ ಆದ ಸಹಕಾರ ಕಾಯ್ದೆ ಹಾಗೂ ನಿಯಮಗಳ ರಚನೆ ಸರಕಾರದ ಪಾಲುಗಾರಿಕೆ ಆದ್ಯತೆ ಪಂಚ ವಾರ್ಷಿಕ ಯೋಜನೆಗಳಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಪರಿಣಾಮವಾಗಿ ದೇಶದ ಹಸಿರು ಕ್ರಾಂತಿ ಶೇತ ಕ್ರಾಂತಿಗಳ ಪರಿಣಾಮವಾಗಿ ದೇಶದ ರೈತರ ಆಥಿಘಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿದೆ. ನಂತರ ಮತ್ತೆ 1969 ರಲ್ಲಿ ಸಹಕಾರ ಚಳುವಳಿಯ ಅಧ್ಯಯನಕ್ಕಾಗಿ ರಿಸರ್ವ ಬ್ಯಾಂಕಿನ ಹಿರಿಯ ಡಾ. ವೆಂಕಪ್ಪಯ್ಯ ಸಮೀತಿ ರಚನೆ ಅವರ ಸಿಫಾರಸ್ಸುಗಳ ಅನುಷ್ಠಾನ ಅನೇಕ ಸಮೀತಿಗಳು ಅವುಗಳ ಸಿಫಾರಸ್ಸುಗಳು ಸಹಕಾರ ಚಳುವಳಿಯ ಬೆಳವಣಿಗೆ ಇವೆಲ್ಲವುಗಳನ್ನು ಸಾರ್ವಜನಿಕರಿಗೆ ಸಹಕಾರಿಗಳಿಗೆ ತಿಳಿಯ ಪಡಿಸುವುದು ನಂತರ ದೇಶದ ಹಾಗೂ ವಿಶ್ವದ ವಿವಿಧ ಸಹಕಾರಿ ಸಂಸ್ಥೆಗಳ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಸಾಧನೆಯ ವಿಷಯಗಳನ್ನು ಸಪ್ತಾಹದ ಸಂದರ್ಭಗಳಲ್ಲಿ ಪ್ರಚುರ ಪಡಿಸುವುದು ಈ ಸಹಕಾರ ಸಪ್ತಾಹಗಳ ಆಚರಣೆಯ ಮೂಲ ಉದ್ದೇಶವಾಗಿದೆ.

1992ರಲ್ಲಿ ಬಹು ರಾಜ್ಯಗಳ ಸಹಕಾರ ಕಾಯ್ದೆಯನ್ನು ಜಾರಿಗೊಳಿಸಿ ಅಂತರರಾಜ್ಯಮಟ್ಟದ, ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವಾಗಿದೆ.

2012ರಲ್ಲಿ ಭಾರತದ ಸಂವಿಧಾನಕ್ಕೆ 97ನೇ ತಿದ್ದುಪಡಿಯನ್ನು ಮಾಡಿ ಸಹಕಾರ ಸಂಸ್ಥೆಗಳನ್ನು ಪ್ರಾರಂಭಿಸಲು ಸಾಂವಿಧಾನಿಕ ಹಕ್ಕನ್ನು ನೀಡುವುದರ ಜೊತೆಗೆ ಹಲವಾರು ವ್ಯವಹಾರಿಕ ಸ್ವಾತಂತ್ರವನ್ನು ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ

ಈ ಸಹಕಾರ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಒಂದು ಧೈಯವನ್ನು ಪ್ರಧಾನವಾಗಿಟ್ಟುಕೊಂಡು ಸಪ್ತಾಹದ 7 ದಿನಗಳಲ್ಲಿ ಸಹಕಾರ ಕ್ಷೇತ್ರದ ವಿವಿಧ ವಿಷಯಗಳಿಗೆ ಸಂಬಂದಿಸಿದಂತೆ ವಿಚಾರ ಸಂಕೀರ್ಣಗಳು ಸಭೆ ಸಮಾರಂಭಗಳು, ಯಶೋಗಾಥೆಗಳು ಸಹಕಾರಿ ಕ್ಷೇತ್ರದ ಹಿರಿಯರ ಸಾಧಕರ ಅವರುಗಳ ಆಶಯವನ್ನು ಜನಸಾಮಾನ್ಯರಿಗೆ ಪ್ರಚುರ ಪಡಿಸುವುದು ಅವರನ್ನು ಮತ್ತು ವಿಶೇಷವಾಗಿ ಯುವಕರನ್ನು ಸಹಕಾರ ಕ್ಷೇತ್ರಕ್ಕೆ ಹೆಚ್ಚು ಆಕರ್ಷಿತರನ್ನಾಗಿಸುವುದು ಈ ಸಹಕಾರ ಸಪ್ತಾಹಗಳ ಮುಖ್ಯ ಉದ್ದೇಶ.

ದೇಶದ ಸಹಕಾರ ಚಳುವಳಿಯ ಸಾಧನೆ.

ಭಾರತದಲ್ಲಿ 8,33,256 ವಿವಿಧ ರೀತಿಯ ಸಹಕಾರ ಸಂಸ್ಥೆಗಳಿವೆ. ಅದರಲ್ಲಿ 1255 ಮಲ್ಟಿಸ್ಟೇಟ್ ಸಹಕಾರ ಸಂಸ್ಥೆಗಳಿವೆ. 30 ಕೋಟಿ ಸದಸ್ಯರಿದ್ದಾರೆ. 3.83.285 ಮಿಲಿಯನ್ ಪಾಲು ಬಂಡವಾಳವಿದೆ. 72.95,766 ಮಿಲಿಯನ್ ದುಡಿಯುವ ಬಂಡವಾಳವಿದೆ. ಸಹಕಾರ ಕ್ಷೇತ್ರದ ವ್ಯಾಪ್ತಿ 6,29,778 ಹಳ್ಳಿಗಳಿಗೆ ಅಂದರೆ ಶೇಕಡಾ 95% ಇದೆ. ಶೇಕಡಾ 13.5 % ಜನರಿಗೆ ಉದ್ಯೋಗ ಒದಗಿಸಲಾಗಿದೆ. ಈ ಕ್ಷೇತ್ರದಲ್ಲಿ ಇಷ್ಟೋ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಸಹಕಾರಿ ಸಂಸ್ಥೆ. ಹೈನುಗಾರಿಕೆಯಲ್ಲಿ ಗುಜರಾತಿನ ಅಮುಲ, ನಮ್ಮ ಹೆಮ್ಮೆಯ ಸಾಧನೆ. ಅದರಂತೆ ಅನೇಕ ರಾಜ್ಯ ಹಾಗೂ ಬಹು ರಾಜ್ಯ ಮಟ್ಟದ ಸಹಕಾರ ಸಂಸ್ಥೆಗಳಾದ ಕ್ಯಾಮ್ಮೋ, ಮಾಮ್ಮೋ ಪಟ್ಟಣ

ಸಹಕಾರ ಬ್ಯಾಂಕುಗಳ ಕ್ಷೇತ್ರದಲ್ಲಿ ಉತ್ತಮ ಸಾಧನೆಯಾಗಿ ಮಾಡಿವೆ. ಈ ದೇಶದಲ್ಲಿ ಹಸಿರು ಕ್ರಾಂತಿಯ, ಹಾಗು ಶ್ವೇತ ಕ್ರಾಂತಿಯ ಹರಿಕಾರ ನೆಂದು ಸಹಕಾರ ಕ್ಷೇತ್ರವನ್ನು ಗುರುತಿಸುತ್ತಾರೆ.

ಕರ್ನಾಟಕದಲ್ಲಿ ಸಹಕಾರ ಚಳುವಳಿ ಪ್ರಗತಿ :

1904 ರಲ್ಲಿ ಸಹಕಾರ ಕಾಯ್ದೆಯ ಮೂಲಕ ದೇಶದಲ್ಲಿ ಸಹಕಾರ ಚಳುವಳಿ ಪ್ರಾರಂಭವಾದ ಮೇಲೆ ಕರ್ನಾಟಕದಲ್ಲಿ 1905 ಮೇ 8 ರಂದು ಅಂದಿನ ಅಖಂಡ ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಕಣಗಿನಹಾಳದಲ್ಲಿ (ಇಂದಿನ ಗದಗ ಜಿಲ್ಲೆ) ದಿ. ಶಿದ್ದನಗೌಡ ಸಂಣರಾಮನಗೌಡ ಪಾಟೀಲ್ ಎಂಬ ಗ್ರಾಮದ ಹಿರಿಯರು ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಿದರು. ಇದು ದೇಶದ ಪ್ರಥಮ ಕೃಷಿ ಪತ್ತಿನ ಸಹಕಾರ ಸಂಘವೆಂದು ಪ್ರಸಿದ್ದಿ ಪಡೆದಿದೆ.

ಕರ್ನಾಟಕದಲ್ಲಿ 46000ಕ್ಕೂ ಹೆಚ್ಚು ವಿವಿಧ ವರ್ಗದ 50 ವಿಧವಾದ ಸಹಕಾರ ಸಂಸ್ಥೆಗಳು, 2.18 ಕೋಟಿ ಸದಸ್ಯತ್ವ, ಶೇಕಡಾ % ರಷ್ಟು ಹಳ್ಳಿಗಳ ವ್ಯಾಪ್ತಿ, 28901 ಕೋಟಿ ಠೇವಣಿ, 28692 ಕೋಟಿ ರೂಗಳ ದುಡಿಯುವ ಬಂಡವಾಳ ಕ್ಯಾಮ್ಮೋ, ಮ್ಯಾ, ಬಮೂಲ, ಅಪೇಕ್ಷ ಬ್ಯಾಂಕ, ಮಾರಾಟ ಮಹಾಮಂಡಳ, 265 ಪಟ್ಟಣ ಸಹಕಾರ ಬ್ಯಾಂಕುಗಳು, 4,993 ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು 12,990 ಹಾಲು ಉತ್ಪಾದಕರ ಸಹಕಾರ ಸಂಸ್ಥೆಗಳು ಕ್ರೆಡಿಟ್ ಸಹಕಾರ ಸಂಸ್ಥೆಗಳು ಗೃಹ ನಿರ್ಮಾಣ ಸಹಕಾರ ಸಂಸ್ಥೆಗಳು 4750 ಸೌಹಾರ್ದ ಸಹಕಾರಿಗಳು, ಹೀಗೆ ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನೇಕ ಉತ್ತಮ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 21017 ಕ್ಕಿಂತ ಹೆಚ್ಚು ಸಹಕಾರ ಸಂಸ್ಥೆಗಳು ಲಾಭದಲ್ಲಿವೆ. 16451 ಸಹಕಾರಸಂಸ್ಥೆಗಳು ನಷ್ಟದಲ್ಲಿವೆ.

ರಾಜ್ಯದ ರೈತರ ಅನೇಕ ಕಷ್ಟ ನಷ್ಟಗಳ ನಿವಾರಣೆಗಾಗಿ ಸರಕಾರಗಳು ಕಾಲಕಾಲಕ್ಕೆ ಬಡ್ಡಿ ಮನ್ನಾ ಸಾಲ ಮನ್ನಾ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ ಮುಂತಾದ ಪ್ರಗತಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಉಪಸಂಹಾರ : ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸದಸ್ಯರ ಸಕ್ರೀಯ ಪಾಲುಗಾರಿಕೆ. ಕ್ರೀಯಾಶೀಲ ಆಡಳಿತ ಮಂಡಳಿ, ದಕ್ಷ ಸಿಬ್ಬಂದಿ ಇವು ತಳಹದಿ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆಲ್ಲ ಸಮಗ್ರ ಸಹಕಾರ ಕ್ಷೇತ್ರದ ಕಾರ್ಯಚಟುವಟಿಕೆಗಳ ಮಾಹಿತಿ ನೀಡುವುದು ಅವಶ್ಯಕ. ಉದಾರೀಕರಣ,ಖಾಸಗೀಕರಣ ಹಾಗೂ ಜಾಗತೀಕರಣದ ಪ್ರೈಪೂಟಿ ಅರ್ಥ ವ್ಯವಸ್ಥೆಯಲ್ಲಿ ಸಹಕಾರ ಸಂಸ್ಥೆಗಳು ಸಾರ್ವಜನಿಕರ ಹಾಗೂ ಸರಕಾರಗಳ ವಿಶ್ವಾಸಾರ್ಹತೆಯನ್ನು ಗಳಿಸುವುದರ ಜೊತೆಗೆ ಯಶಸ್ವಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಸಾಧನವಾಗಿ ಕಾರ್ಯನಿರ್ವಹಿಸುವುದು ಅವಶ್ಯಕ. ಅದಕ್ಕಾಗಿಯೇ ಸಪ್ತಾಹಗಳ ಆಚರಣೆ.

ಮರುಪ್ರಕಟಣೆ.

ಜೈ ಸಹಕಾರ – ಜೈ ಹಿಂದ – ಜೈ ಕರ್ನಾಟಕ

 

ಶರಣಗೌಡ.ಜಿ.ಪಾಟೀಲ್

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More